ಸಂಪುಟ

ಎ.ಎ.ಐ.ಯ ನಿರ್ದಿಷ್ಟ ಕಾರ್ಯಾಚರಣಾ ವರ್ಗದ ಸಿಬ್ಬಂದಿಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಡಿ.ಪಿ.ಇ ನಿಗದಿ ಮಾಡಿದ 50 % ( ಪರಿಷ್ಕರಣಾ ಪೂರ್ವ ) ಮತ್ತು ಅದಕ್ಕೂ ಮೀರಿದ ಮಿತಿಯನ್ನು ದಾಟಿ ಪಾವತಿಸಿದ ನಿರ್ದಿಷ್ಟ ಭತ್ಯೆಗಳನ್ನು ಸಕ್ರಮಗೊಳಿಸಲು ಸಂಪುಟ ಅನುಮೋದನೆ.

Posted On: 06 FEB 2019 9:47PM by PIB Bengaluru

ಎ.ಎ.ಐ.ಯ ನಿರ್ದಿಷ್ಟ ಕಾರ್ಯಾಚರಣಾ ವರ್ಗದ ಸಿಬ್ಬಂದಿಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಡಿ.ಪಿ.ಇ ನಿಗದಿ ಮಾಡಿದ 50 % ( ಪರಿಷ್ಕರಣಾ ಪೂರ್ವ ) ಮತ್ತು ಅದಕ್ಕೂ ಮೀರಿದ ಮಿತಿಯನ್ನು ದಾಟಿ ಪಾವತಿಸಿದ ನಿರ್ದಿಷ್ಟ ಭತ್ಯೆಗಳನ್ನು ಸಕ್ರಮಗೊಳಿಸಲು ಸಂಪುಟ ಅನುಮೋದನೆ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಸಾರ್ವಜನಿಕ ಉದ್ಯಮಗಳ ಇಲಾಖೆಯು (ಡಿ.ಪಿ.ಇ.) ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಿರ್ದಿಷ್ಟ ಭತ್ಯೆಗಳನ್ನು (ರೇಟಿಂಗ್ ಭತ್ಯೆ, ಒತ್ತಡ ಭತ್ಯೆ, ದಕ್ಷತಾ ಭತ್ಯೆ, ಹಾರಾಟ ಭತ್ಯೆ ಮತ್ತು ಕಲಿಸುವ ಭತ್ಯೆ) ವಾಯು ಸಂಚಾರ ನಿಯಂತ್ರಕರು, ಸಂವಹನ ಅಧಿಕಾರಿಗಳು, ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎ.ಎ.ಐ.) ದ ಪೈಲೆಟ್ ಗಳಿಗೆ ಪರಿಷ್ಕೃತ ಪೂರ್ವದಲ್ಲಿ 50 % ಮತ್ತು ಪರಿಷ್ಕೃತ 25 % ಮಿತಿಯನ್ನು ದಾಟಿ ಪಾವತಿ ಮಾಡಿರುವುದನ್ನು ಸಕ್ರಮಗೊಳಿಸುವುದಕ್ಕೆ ಮತ್ತು ಈ ಭತ್ಯೆಗಳನ್ನು ಪರಿಷ್ಕೃತ 35 % ಮಿತಿಯಿಂದ ಹೊರಗಿಡುವುದಕ್ಕೆ ತನ್ನ ಅನುಮೋದನೆ ನೀಡಿತು. ಅವರ ಕೆಲಸಗಳು ಉನ್ನತ ಮಟ್ಟದ ಜ್ಞಾನ ಮತ್ತು ಅನುಭವ, ತಜ್ಞತೆಯನ್ನು ಅಪೇಕ್ಷಿಸುವ ಸಂಕೀರ್ಣ ಕೆಲಸಗಳಾಗಿರುತ್ತವೆ ಹಾಗು ಆ ನಿರ್ದಿಷ್ಟ ಕೌಶಲ್ಯಗಳನ್ನು ಕಾರ್ಯತಹ ಅನ್ವಯಿಸಬೇಕಾಗುತ್ತದೆ (ಉದಾ. ಅವಕಾಶದ ಗ್ರಹಿಸುವಿಕೆ, ಲೆಕ್ಕಾಚಾರ, ಮಾಹಿತಿ ಸಂಸ್ಕರಣೆ, ತರ್ಕ ಬದ್ದತೆ, ನಿರ್ಧಾರ ಕೈಗೊಳ್ಳುವಿಕೆ) ಸಂವಹನ ಅಂಶಗಳು ಮತ್ತು ಮಾನವ ಸಂಬಂಧಗಳನ್ನು ಇವು ಒಳಗೊಂಡಿರುತ್ತವೆ.

ವಾಯು ಸಂಚಾರ ಹಲವು ಪಟ್ಟು ಏರಿಕೆಯಾಗಿರುವುದರಿಂದಾಗಿ ಮತ್ತು ಈ ತಾಂತ್ರಿಕ ಸಿಬ್ಬಂದಿಗಳು ಆಕಾಶದಲ್ಲಿ ನಮ್ಮ ವಾಯು ಯಾನ ಕಾರ್ಯ ಚಟುವಟಿಕೆಯನ್ನು ಸುರಕ್ಷಿತವಾಗಿಟ್ಟಿರುವುದರಿಂದ ; ಮತ್ತು ವಾಯು ಯಾನಿಗಳಿಗೆ ಅತ್ಯುತ್ತಮ ವಿಶ್ವ ದರ್ಜೆಯ ಸವಲತ್ತುಗಳನ್ನು ಒದಗಿಸಲು, ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಶಿಸುವ ಮತ್ತು , ಈಗಿರುವ ತರಬೇತಾದ ಮಾನವ ಸಂಪನ್ಮೂಲವನ್ನು ಉಳಿಸಿಕೊಳ್ಳುವುದಕ್ಕಾಗಿ, ಈ ವೃತ್ತಿಪರರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕೊಡುವುದು ಅವಶ್ಯವಿದೆ.



(Release ID: 1563057) Visitor Counter : 86