ಪ್ರಧಾನ ಮಂತ್ರಿಯವರ ಕಛೇರಿ

ಮುಂಬಯಿಯಲ್ಲಿ ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಹೊಸ ಕಟ್ಟಡ ನಾಳೆ ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ. 

Posted On: 18 JAN 2019 7:12PM by PIB Bengaluru

ಮುಂಬಯಿಯಲ್ಲಿ ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಹೊಸ ಕಟ್ಟಡ ನಾಳೆ ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ,  2019 ರ ಜನವರಿ 19  ರಂದು  ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಹೊಸ ಕಟ್ಟಡವನ್ನು  ಉದ್ಘಾಟಿಸುವರು.ಅವರು ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ , ಸಭೆಯನ್ನುದ್ದೇಶಿಸಿ ಮಾತನಾಡುವರು.

ಭಾರತೀಯ ಸಿನೆಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಭಾರತದ ಸಿನೆಮಾ ಚರಿತ್ರೆಯ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುವುದಕ್ಕಾಗಿ ಮತ್ತು ಭಾರತದ ಸಮಾಜೋ-ಸಾಂಸ್ಕೃತಿಕ ಚರಿತ್ರೆಯನ್ನು ಸಿನೆಮಾ ಉಗಮದ ಮೂಲಕ ದಾಖಲಿಸುವುದಕ್ಕಾಗಿ ಸ್ಥಾಪಿಸಲಾಗಿದೆ.ದೃಶ್ಯಗಳು ಮತ್ತು ಗ್ರಾಫಿಕ್ಸ್ ಮೂಲಕ , ಚಲನ ಚಿತ್ರ ತುಣುಕುಗಳು, ಕಲಾಕೃತಿಗಳು, ಪ್ರಚಾರ ಸಾಮಗ್ರಿಗಳು, ಸಂವಾದದ ಸಾಮಗ್ರಿಗಳು ಮತ್ತು ಇತ್ಯಾದಿ ವಸ್ತುಗಳ ಸಹಾಯದ ಮೂಲಕ  ಭಾರತೀಯ ಸಿನೆಮಾದ ಒಂದು ಶತಮಾನಕ್ಕೂ ಅಧಿಕ ಅವಧಿಯ ಪ್ರಯಾಣವನ್ನು ಸಂದರ್ಶಕರಿಗೆ ಕಥೆ ಹೇಳುವ ಮಾದರಿಯಲ್ಲಿ ಇಲ್ಲಿ ತಿಳಿಸಲಾಗುತ್ತದೆ.

ದಕ್ಷಿಣ ಮುಂಬಯಿಯ ಚಲನ ಚಿತ್ರ ವಿಭಾಗ ಸಂಕೀರ್ಣದಲ್ಲಿರುವ ಇದು ಚಾರಿತ್ರಿಕ ಗುಲ್ಶನ್ ಮಹಲ್ ಮತ್ತು ಹೊಸ ಮ್ಯೂಸಿಯಂ ಕಟ್ಟಡ ಎಂಬ ಎರಡು ಕಟ್ಟಡಗಳಲ್ಲಿ ಹರಡಿಕೊಂಡಿದೆ.

ಹೊಸ ಮ್ಯೂಸಿಯಂ ಕಟ್ಟಡ ನಾಲ್ಕು ಹಂತಗಳನ್ನು ಹೊಂದಿದೆ. ಹಂತ -1 ರಲ್ಲಿ ಗಾಂಧಿ ಮತ್ತು ಸಿನೆಮಾ, ಹಂತ -2 ರಲ್ಲಿ ಮಕ್ಕಳ ಚಲಚಿತ್ರ ಸ್ಟುಡಿಯೋ, ಹಂತ -3 ರಲ್ಲಿ ತಂತ್ರಜ್ಞಾನ, ಸೃಜನಶೀಲತೆ ಮತ್ತು ಭಾರತೀಯ ಸಿನೆಮಾ ಹಾಗು  ಹಂತ -4 ರಲ್ಲಿ ಭಾರತದಾದ್ಯಂತದ ಸಿನೆಮಾಗಳನ್ನು ಇದು ಒಳಗೊಂಡಿದೆ.  ಅತ್ಯಾಧುನಿಕ ಡಿಜಿಟಲ್ ಸಿನೆಮಾ ಪ್ರೊಜೆಕ್ಟರ್ ಗಳು ಮತ್ತು 7.1 ಸುತ್ತಲಿನ ಧ್ವನಿ ವ್ಯವಸ್ಥೆಗಳನ್ನು ಒಳಗೊಂಡ ಎರಡು ಸಭಾಂಗಣಗಳು ಈ ಕಟ್ಟಡದಲ್ಲಿವೆ.



(Release ID: 1560684) Visitor Counter : 72


Read this release in: English , Marathi , Assamese , Tamil