ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಭಾರತ ಮತ್ತು ಮಾಲ್ದೀವ್ಸ್ ನಡುವೆ ಅಂಕಿತ ಹಾಕಲಾದ ವೀಸಾ ವ್ಯವಸ್ಥೆಯ ಅನುಕೂಲತೆ ಕುರಿತ ಒಪ್ಪಂದಕ್ಕೆ ಪೂರ್ವಾನ್ವಯಗೊಂಡಂತೆ ಸಂಪುಟದ ಅನುಮೋದನೆ.

Posted On: 16 JAN 2019 3:59PM by PIB Bengaluru

ಭಾರತ ಮತ್ತು ಮಾಲ್ದೀವ್ಸ್ ನಡುವೆ ಅಂಕಿತ ಹಾಕಲಾದ ವೀಸಾ ವ್ಯವಸ್ಥೆಯ ಅನುಕೂಲತೆ ಕುರಿತ ಒಪ್ಪಂದಕ್ಕೆ ಪೂರ್ವಾನ್ವಯಗೊಂಡಂತೆ ಸಂಪುಟದ ಅನುಮೋದನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಮಾಲ್ದೀವ್ಸ್ ನಡುವೆ 2018 ರ ಡಿಸೆಂಬರ್  ತಿಂಗಳಲ್ಲಿ ಅಂಕಿತ ಹಾಕಲಾದ ವೀಸಾ ವ್ಯವಸ್ಥೆಯ ಅನುಕೂಲತೆ ಕುರಿತ ಒಪ್ಪಂದಕ್ಕೆ ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿತು. 

ವೀಸಾ ಸೌಲಭ್ಯ ಒಪ್ಪಂದಕ್ಕೆ ಮಾಲ್ದೀವ್ಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಅಂಕಿತ ಹಾಕಲಾಗಿತ್ತು. ಮಾಲ್ದೀವ್ಸ್ ರಾಷ್ಟೀಯರು ಮತ್ತು ಭಾರತದ ಪ್ರಜೆಗಳು ಪರಸ್ಪರ ಉಭಯ ದೇಶಗಳಲ್ಲಿ ಪ್ರವಾಸೋದ್ಯಮ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ವ್ಯಾಪಾರೋದ್ಯಮ ಹಾಗು ಉದ್ಯೋಗಕ್ಕಾಗಿ ಸಂಚರಿಸುವುದನ್ನು ಸುಲಭ ಮಾಡುವುದಕ್ಕಾಗಿ ಮತ್ತು ಉಭಯ ದೇಶಗಳ ಜನರ ನಡುವೆ ನಿಕಟ ಬಾಂಧವ್ಯ ಬೆಳೆಸಲು ಹಾಗು ವಿನಿಮಯದ ನಿಟ್ಟಿನಲ್ಲಿ ಈ ಒಪ್ಪಂದ ಸಹಕಾರಿಯಾಗಲಿದೆ. ಈ ಒಪ್ಪಂದ ಪ್ರವಾಸೋದ್ಯಮ, ವೈದ್ಯಕೀಯ, ಮತ್ತು ಸೀಮಿತ ವ್ಯಾಪಾರೋದ್ಯಮದ ಉದ್ದೇಶಕ್ಕಾಗಿ 90  ದಿನಗಳ ವೀಸಾ ಮುಕ್ತ ಸಂಚಾರಕ್ಕೆ ಅವಕಾಶ ನೀಡುತ್ತದೆ ಮತ್ತು ಇಂತಹ  ವೀಸಾ ಮುಕ್ತ ಪ್ರವೇಶವನ್ನು ಸುಲಭದಲ್ಲಿ ವೈದ್ಯಕೀಯ ವೀಸಾ ಆಗಿ ಪರಿವರ್ತಿಸಲು ಜೊತೆಗೆ ಪರಸ್ಪರ ಭೂಪ್ರದೇಶಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಅವಲಂಬಿತರಿಗೆ ವೀಸಾ ಮತ್ತು ಉದ್ಯೋಗ ಅರಸುವವರಿಗೆ ವೀಸಾಗಳನ್ನು ಒದಗಿಸುತ್ತದೆ.

ಹಿನ್ನೆಲೆ:

ಭಾರತ ಮತ್ತು ಮಾಲ್ದೀವ್ಸ್ ಗಳು ಪರಸ್ಪರ ಅನಾದಿ ಕಾಲದಿಂದ ಮತ್ತು ಪರಂಪರೆಯಿಂದ ನಿಕಟ ಸೌಹಾರ್ದ ಸಂಬಂಧವನ್ನು ಹೊಂದಿವೆ. ಭಾರತ ಮತ್ತು ಮಾಲ್ದೀವ್ಸ್ ನಡುವೆ ವಿಶೇಷ ದ್ವಿಪಕ್ಷೀಯ ಸಂಬಂಧಗಳು ಜನತೆ ಮತ್ತು ಜನತೆಯ ನಡುವಿನ ನಿಕಟ ಸಂಪರ್ಕದ ಕಾರಣದಿಂದಾಗಿ ಬೆಳೆದು ಬಂದಿವೆ. 2018ರ ನವೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಲ್ದೀವ್ಸ್ ನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಅಧಿಕಾರಗ್ರಹಣ ಸಮಾರಂಭಕ್ಕೆ  ಮಾಲೆಗೆ ಭೇಟಿ ನೀಡಿದ ಬಳಿಕ ಮತ್ತು ಇದನ್ನು ಅನುಸರಿಸಿ ಮಾಲ್ದೀವ್ ಅಧ್ಯಕ್ಷರು 2018 ರ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ಬಳಿಕ ಇವುಗಳಿಗೆ ಇನ್ನಷ್ಟು ಧನಾತ್ಮಕ ವೇಗ ದೊರಕಿತು.



(Release ID: 1560273) Visitor Counter : 55


Read this release in: English , Tamil , Telugu