ಪ್ರಧಾನ ಮಂತ್ರಿಯವರ ಕಛೇರಿ

ಸಂವಿಧಾನದ ನೂರ ಇಪ್ಪತ್ತನಾಲ್ಕನೆಯ ತಿದ್ದುಪಡಿ ವಿಧೇಯಕ 2019 ಲೋಕಸಭೆಯಲ್ಲಿ ಅನುಮೋದನೆಗೊಂಡದ್ದಕ್ಕಾಗಿ ಪ್ರಧಾನಮಂತ್ರಿ ಶ್ಲಾಘನೆ

Posted On: 08 JAN 2019 11:00PM by PIB Bengaluru

ಸಂವಿಧಾನದ ನೂರ ಇಪ್ಪತ್ತನಾಲ್ಕನೆಯ ತಿದ್ದುಪಡಿ ವಿಧೇಯಕ 2019 ಲೋಕಸಭೆಯಲ್ಲಿ ಅನುಮೋದನೆಗೊಂಡದ್ದಕ್ಕಾಗಿ ಪ್ರಧಾನಮಂತ್ರಿ ಶ್ಲಾಘನೆ



ಸಂವಿಧಾನ (ನೂರ ಇಪ್ಪತ್ತನಾಲ್ಕನೆಯ ತಿದ್ದುಪಡಿ )ವಿಧೇಯಕ 2019, ಲೋಕಸಭೆಯಲ್ಲಿ ಅನುಮೋದನೆಗೊಂಡದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

“ಸಂವಿಧಾನ (ನೂರ ಇಪ್ಪತ್ತನಾಲ್ಕನೆಯ ತಿದ್ದಪಡಿ )ವಿಧೇಯಕ 2019, ಲೋಕಸಭೆಯಲ್ಲಿ ಅನುಮೋದನೆಗೊಂಡಿರುವುದು ದೇಶದ ಇತಿಹಾಸದಲ್ಲೊಂದು ಮೈಲುಗಲ್ಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಮಾನದಂಡಗಳ ಅನುಷ್ಠಾನ ಸಾಧ್ಯವಾಗುವ ಪ್ರಕ್ರಿಯೆಯನ್ನು ಇದು ಚಾಲನೆ ಮಾಡಿದೆ.” ಎಂದು ಪ್ರಧಾನಮಂತ್ರಿ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
 

***



(Release ID: 1559333) Visitor Counter : 87


Read this release in: Marathi , English , Tamil