ಪ್ರವಾಸೋದ್ಯಮ ಸಚಿವಾಲಯ

ವರ್ಷಾಂತ್ಯದ ಅವಲೋಕನ -2018: ಪ್ರವಾಸೋದ್ಯಮ ಸಚಿವಾಲಯ

Posted On: 26 DEC 2018 4:06PM by PIB Bengaluru

ವರ್ಷಾಂತ್ಯದ ಅವಲೋಕನ -2018: ಪ್ರವಾಸೋದ್ಯಮ ಸಚಿವಾಲಯ


ನವದೆಹಲಿಯ ಸಚಿವಾಲಯವು ಏರ್ಪಡಿಸಿದ್ದ ಇಂಡಿಯಾ  ಟೂರಿಸಂ ಮಾರ್ಟ್ ನ  ಮೊದಲ ಆವೃತ್ತಿಯ ಹೊಸ 'ಇನ್ಕ್ರೆಡಿಬಲ್ ಇಂಡಿಯಾ'  ಜಾಲತಾಣ ಮತ್ತು ಮೊಬೈಲ್ ಆ‍್ಯಪ್ ಗಳ 10 ಒಪ್ಪಂದ ಪತ್ರಗಳಿಗೆ ನೋಯ್ಡಾ ಮತ್ತು ತಿರುಪತಿಯಲ್ಲಿ ಉದ್ಘಾಟನೆಗೊಂಡ ಇಂಡಿಯನ್  ಕಲನರಿ ಇನ್ಸ್ಟಿಟ್ಯೂಟ್ ಕ್ಯಾಂಪಸ್ಗಳ ಅಡೋಪ್ಟ್ ಹೆರಿಟೇಜ್ ಪ್ರಾಜೆಕ್ಟ್ (ಪರಂಪರೆಯ ಯೋಜನೆಯೊಂದನ್ನು ದತ್ತು ತೆಗೆದುಕೊಳ್ಳುವಿಕೆ) ನ ಅಡಿಯಲ್ಲಿ ಸಹಿ ಮಾಡಲಾಗಿದೆ. 
 

ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ರಾಷ್ಟ್ರೀಯ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ನೋಡಲ್ ಸಂಸ್ಥೆಯಾಗಿದೆ, ಈ ಪ್ರಕ್ರಿಯೆಯಲ್ಲಿ, ಸಚಿವಾಲಯವು ವಿವಿಧ ಕೇಂದ್ರೀಯ ಸಚಿವಾಲಯಗಳು / ಏಜೆನ್ಸಿಗಳು, ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶ ಆಡಳಿತಗಳು ಮತ್ತು ಖಾಸಗಿ ಕ್ಷೇತ್ರದ ಪ್ರತಿನಿಧಿಗಳು ಸೇರಿದಂತೆ ಕ್ಚೇತ್ರದ ಇತರ ಸಂಬಂಧಿಸಿದವರೊಂದಿಗೆ ಸಮಾಲೋಚಿಸುತ್ತದೆ ಮತ್ತು ಸಹಯೋಗ ಹೊಂದುತ್ತದೆ. ಪ್ರವಾಸೋದ್ಯಮವು ಆರ್ಥಿಕ ಬೆಳವಣಿಗಾಗಿ ಇರುವ ಪ್ರಮುಖ ಉದ್ಯಮವಾಗಿದ್ದು, ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ವಿದೇಶಿ ವಿನಿಮಯ ಗಳಿಕೆಯ ಪ್ರಮುಖ ಮೂಲವಾಗಿದೆ. ಹೆಚ್ಚಿನ ಪ್ರಮಾಣದ ಉದ್ಯೋಗದ ಕೌಶಲ್ಯಗಳನ್ನು ಸೃಷ್ಟಿಸಲು ಇದು ಒಂದು ಉತ್ತಮ ಸಾಮರ್ಥ್ಯ ಹೊಂದಿದೆ -  ಇದು ಅತ್ಯಂತ ವಿಶೇಷವಾದ ಕೌಶಲ್ಯವಿರುವವರಿಂದ ಹಿಡಿದು ಕೌಶಲ್ಯವಿಲ್ಲದವರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿಗೆ ಪ್ರಮುಖ ಪಾತ್ರ ವಹಿಸುತ್ತದೆ.  ಸರ್ವರ ಸಮಾನ ಬೆಳವಣಿಗೆಯನ್ನು ಸಾಧಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾರತದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಮತ್ತು ಅನುಕೂಲ ಮಾಡುವ ಮುಖ್ಯ ಉದ್ದೇಶವನ್ನು ಹೊಂದಿದೆ. ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸುವುದು, ವೀಸಾ ನೀಡುವ ಕ್ರಮಗಳ ಸರಾಗಗೊಳಿಸುವಿಕೆ, ಪ್ರವಾಸೋದ್ಯಮ ಸೇವಾ ಪೂರೈಕೆದಾರರ ಸೇವೆಗಳಲ್ಲಿ ಗುಣಮಟ್ಟದ ಮಾನದಂಡಗಳ ಭರವಸೆ ಇತ್ಯಾದಿಗಳು ಸಚಿವಾಲಯದ ಕೆಲವು ಜವಾಬ್ದಾರಿಗಳಾಗಿವೆ.

 

ಪ್ರವಾಸೋದ್ಯಮ ಅಂಕಿಅಂಶಗಳು:

 

  • ಜನವರಿ - ನವೆಂಬರ್ 2018 ರ ಅವಧಿಯಲ್ಲಿನ 93,67,424 ವಿದೇಶಿ ಪ್ರವಾಸಿಗರ ಭೇಟಿಯನ್ನು (ಎಫ್.ಟಿ.ಎ) ಜನವರಿ - ನವೆಂಬರ್ 2017 ರ ಅವಧಿಯ 88, 67, 963 ಕ್ಕೆ ಹೋಲಿಸಿದಾಗ  5.6% ರಷ್ಟು ಬೆಳವಣಿಗೆಯು ದಾಖಲಾಗಿದೆ. 

 

  • ಜನವರಿ- ನವೆಂಬರ್ 2018 ರ ಅವಧಿಯಲ್ಲಿನ ಒಟ್ಟು 20,61,511 ಪ್ರವಾಸಿಗರು ಇ-ಪ್ರವಾಸಿ ವೀಸಾದ ಮೂಲಕ ಭೇಟಿಯನ್ನು 2017 ರ ಜನವರಿ-ನವೆಂಬರ್ ಅವಧಿಯ 14,56,615 ಕ್ಕೆ ಹೋಲಿಸಿದಾಗ   41.5% ನಷ್ಟು ಹೆಚ್ಚು ಬೆಳವಣಿಗೆಯು ದಾಖಲಾಗಿದೆ.

 

  • ಜನವರಿ - ಅಕ್ಟೋಬರ್ 2018 ರ ಅವಧಿಯಲ್ಲಿನ 1,58,846 ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಗಳಿಕೆಯನ್ನು (ಎಫ್.ಇ.ಇ.) ಜನವರಿ-ಅಕ್ಟೋಬರ್ 2017 ರ ಅವಧಿಯ 1,41,965 ಕೋಟಿ ರೂಪಾಯಿಗಳಗೆ ಹೋಲಿಸಿದಾಗ  11.9% ನಷ್ಟು ಬೆಳವಣಿಗೆಯು  ದಾಖಲಾಗಿದೆ.

 

  • 2017 ರಲ್ಲಿ ,  ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 1652.5 ದಶಲಕ್ಷದಷ್ಟು ಸ್ವದೇಶಿ ಪ್ರವಾಸಿಗಳು ಭೇಟಿ ನೀಡಿದ್ದರು ಇದನ್ನು 2016 ರ 1615.4 ದಶಲಕ್ಷದ ಭೇಟಿಗೆ ಹೋಲಿಸಿದಾಗ 2017ರಲ್ಲಿ  2.3% ರಷ್ಟು ಏರಿಕೆ ಕಂಡುಬರುತ್ತದೆ.

 

ಪ್ರವಾಸೋದ್ಯಮದ ಮೂಲಸೌಕರ್ಯದ ಅಭಿವೃದ್ಧಿ

 

  • ಪ್ರವಾಸಿಗರಿಗೆ ಉತ್ತಮ ಪ್ರವಾಸೋದ್ಯಮ ಅನುಭವವನ್ನು ಒದಗಿಸಲು ಪ್ರವಾಸೋದ್ಯಮದ ಮೂಲಸೌಕರ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ವಿಷಯಾಧಾರಿತ ಸುತ್ತಾಡುವಿಕೆಯನ್ನು ದೇಶಾದ್ಯಂತ ಹರಡಿರುವ ಸ್ವದೇಶ್ ದರ್ಶನ್ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ,   2018-19ರಲ್ಲಿ ಒಟ್ಟು 7 ಯೋಜನೆಗಳನ್ನು ರೂ .384.67 ಕೋಟಿಗೆ ಮಂಜೂರಾತಿ ನೀಡಲಾಗಿದೆ . ಇದರೊಂದಿಗೆ , ದೇಶದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುವ ಈ ಯೋಜನೆಯಡಿಯಲ್ಲಿ ಒಟ್ಟು 5873.99 ಕೋಟಿ ರೂಪಾಯಿಗಳವರೆಗೆ ಒಟ್ಟು 73 ಯೋಜನೆಗಳನ್ನು ಮಂಜೂರು ಮಾಡಲಾಗಿದೆ .

 

  • ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಒಟ್ಟು ಒಂಬತ್ತು ಯೋಜನೆಗಳನ್ನು ಮಣಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ನಾಗಾಲ್ಯಾಂಡ್, ಛತ್ತೀಸ್ ಘಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಆಗಸ್ಟ್  ನಿಂದ ಡಿಸೆಂಬರ್ 2018 ರ ನಡುವೆ ಉದ್ಘಾಟಿಸಲಾಯಿತು. ಪ್ರವಾಸೋದ್ಯಮ ಸೌಕರ್ಯ ಕೇಂದ್ರಗಳು, ಪರಿಸರಸ್ನೇಹಿ ಮರದ ಮನೆಗಳು (ಇಕೋ ಲಾಗ್ ಹಟ್ಸ್), ಶಬ್ಧ ಮತ್ತು ಬೆಳಕಿನ ಪ್ರದರ್ಶನಗಳು, ಹೆಲಿಪ್ಯಾಡ್ ಗಳು, ಉಪಹಾರ ಗೃಹಗಳು, ದಾರಿಯ ಪಕ್ಕದ ಸೌಕರ್ಯಗಳು, ಚಾರಣ, ದೋಣಿಗಳು, ಬೋಟ್ ಕ್ಲಬ್   ಸಾಹಸ ವಲಯಗಳು, ಮಾಹಿತಿ ಕೇಂದ್ರಗಳು, ಜಲ ಕ್ರೀಡೆಗಳು, ಕುಶಲಕರ್ಮಿಗಳ ಹಳ್ಳಿಗಳು, ಬುಡಕಟ್ಟು ವಿಷಯಾಧಾರಿತ ಹಳ್ಳಿಗಳು, ದೀಪಾಲಂಕಾರ ಮುಂತಾದ ಸೌಲಭ್ಯಗಳನ್ನು ಮೇಲಿನ ಯೋಜನೆಗಳ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ.

 

  • ತೀರ್ಥಯಾತ್ರೆ ಪುನರ್ವಸತಿ ಮತ್ತು ಆಧ್ಯಾತ್ಮಿಕ ಮತ್ತು ಪರಂಪರೆಯ ಬೆಳವಣಿಗೆ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಮಿಷನ್ (PRASHAD) ಯೋಜನೆಯಡಿಯಲ್ಲಿ ಗುರುತಿಸಲಾದ ಯಾತ್ರಾ ಸ್ಥಳಗಳ ಸಂಯೋಜಿತ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. 2018-19ರಲ್ಲಿ ಒಟ್ಟು  39.24 ಕೋಟಿ ರೂಪಾಯಿಗಳಿಗೆ ಒಂದು ಯೋಜನೆಯನ್ನು ಮಂಜೂರು ಮಾಡಲಾಗಿದೆ. ಇಲ್ಲಿಯವರೆಗೆ, ಈ ಯೋಜನೆಯಡಿಯಲ್ಲಿ ಒಟ್ಟು 237.16 ಕೋಟಿ ರೂಪಾಯಿಗಳಿಗೆ 24 ಯೋಜನೆಗಳನ್ನು  ಮಂಜೂರು ಮಾಡಲಾಗಿದೆ. •   

 

  • ಪ್ರವಾಸೋದ್ಯಮ ಸಚಿವಾಲಯವು 2018-19ರಲ್ಲಿ ಕೊಚ್ಚಿನ್ ಪೋರ್ಟ್ ಟ್ರಸ್ಟ್ ಮತ್ತು ಮರ್ಮುಗಾಂವ್ ಪೋರ್ಟ್   ಟ್ರಸ್ಟ್ ನ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಕೇಂದ್ರ ಹಣಕಾಸು ನೆರವು ಒದಗಿಸಿದೆ .

 

‘ಪರಂಪರೆಯ ತಾಣವೊಂದನ್ನು ದತ್ತು ತೆಗೆದುಕೊಳ್ಳುವಿಕೆ’ ಯ ಯೋಜನೆ  (ಅಡಾಪ್ಟ್ ಎ ಹೆರಿಟೇಜ್ ಪ್ರೋಜೆಕ್ಟ್):

  • ವಿವಿಧ ನೈಸರ್ಗಿಕ / ಸಾಂಸ್ಕೃತಿಕ ಪರಂಪರೆಯ ತಾಣಗಳು, ಸ್ಮಾರಕಗಳು ಮತ್ತು ಇತರ ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಸೌಲಭ್ಯಗಳನ್ನು ಒದಗಿಸಲು ಪ್ರವಸೋದ್ಯಮ ಸಚಿವಾಲಯವು ಸಾಂಸ್ಕೃತಿಕ ಮತ್ತು ಪುರಾತತ್ತ್ವ ಶಾಸ್ತ್ರದ ಸಚಿವಾಲಯದ ಜೊತೆಗೂಡಿ “ಅಡಾಪ್ಟ್ ಎ ಹೆರಿಟೇಜ್ ಪ್ರೋಜೆಕ್ಟ್”  ಅನ್ನು ಪ್ರಾರಂಭಿಸಿತು. ಈ ಯೋಜನೆಯು ವಿವಿಧ ಪ್ರವಾಸಿ ಸೌಕರ್ಯಗಳ ಅಭಿವೃದ್ಧಿಗಾಗಿ ಖಾಸಗಿ ವಲಯದ ಕಂಪನಿಗಳು, ಸಾರ್ವಜನಿಕ ವಲಯದ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಪರಂಪರೆಯ ತಾಣಗಳನ್ನು / ಸ್ಮಾರಕಗಳನ್ನು ಮತ್ತು ಇತರ ಪ್ರವಾಸಿ ತಾಣಗಳನ್ನು ನಿಯೋಜಿಸಲು ಯೋಜಿಸಿದೆ. ಈ ಕೆಳಗಿನ ತಾಣಗಳಲ್ಲಿ ಪ್ರವಾಸಿ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಒಪ್ಪಂದದ ಪತ್ರಗಳಿಗೆ ಸಹಿ ಮಾಡಲಾಗಿದೆ:

 

i.        ಉತ್ತರಾಖಂಡ್ ನ ಗಂಗೋತ್ರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಹಾಗೂ ಗೋಮುಖ ದ ಹಾದಿ

ii.        ಮೌಂಟ್. ಸ್ಟೋಕ್ ಕಾಂಗ್ರಿ ಟ್ರೆಕ್, ಲಡಾಖ್ , ಜಮ್ಮು ಮತ್ತು ಕಾಶ್ಮೀರ

iii.       ಕೆಂಪು ಕೋಟೆ, ನವ ದೆಹಲಿ 

iv.       ಗಂಡಿಕೋಟಾ ಕೋಟೆ, ಆಂಧ್ರಪ್ರದೇಶ

v.        ಸೂರಜ್ ಕುಂಡ್ , ಹರಿಯಾಣ

vi.       ಜಂತರ್ ಮಂತರ್ , ದೆಹಲಿ

vii.      ಕುತುಬ್ ಮಿನಾರ್ , ದೆಹಲಿ

viii.      ಅಜಂತಾ ಗುಹೆಗಳು, ಮಹಾರಾಷ್ಟ್ರ

ix.       ಲೇಹ್ ಅರಮನೆ, ಜಮ್ಮು ಮತ್ತು ಕಾಶ್ಮೀರ

x.        ಹಂಪಿ ( ಹಜಾರ ರಾಮ ದೇವಾಲಯ), ಕರ್ನಾಟಕ

 

 

ಪ್ರಮುಖ ಪ್ರವಾಸಿ ಸ್ಥಳಗಳ ಅಭಿವೃದ್ಧಿ:

 

  • ಪ್ರವಾಸೋದ್ಯಮ ಸಚಿವಾಲಯವು  12 ಅಭಿವೃದ್ಧಿಗಾಗಿ ಗುರುತಿಸಿದ ವಲಯಗಳಲ್ಲಿ   17 ಸ್ಥಳಗಳನ್ನು  ಪ್ರಮುಖ ಪ್ರವಾಸಿ ತಾಣಗಳಾಗಿ ಗುರುತಿಸಿದೆ. ಸಾಂಪ್ರದಾಯಿಕ ಪ್ರಮುಖ ಪ್ರವಾಸಿ ತಾಣಗಳೆಂದು ಅಭಿವೃದ್ಧಿಗಾಗಿ ಗುರುತಿಸಲಾದ ಸ್ಥಳಗಳು ಯಾವುವೆಂದರೆ ತಾಜ್ ಮಹಲ್, ಫತೇಪುರ್ ಸಿಕ್ರಿ . ಅಜಂತಾ, ಎಲ್ಲೋರಾ , ಹುಮಾಯೂನ್ ಸಮಾಧಿ, ಕುತುಬ್ ಮಿನಾರ್,ಕೆಂಪುಕೋಟೆ, ಕೋಲ್ವಾ ಬೀಚ್, ಅಮೀರ್ ಕೋಟೆ, ಸೋಮನಾಥ್ , ಧೋಲಾವಿರಾ , ಖಜುರಾಹೋ , ಹಂಪಿ , ಮಹಾಬಲಿಪುರಮ್ , ಕಾಜಿರಂಗ, ಕುಮಾರಕೋಮ್ ಮತ್ತು ಮಹಾಬೋಧಿ ದೇವಾಲಯ. ಇವುಗಳ ಯೋಜನೆಗಳು  ತಯಾರಿಕೆಯ ಅಂತಿಮ ಹಂತಗಳಲ್ಲಿವೆ.

 

ಭಾರತ್ ಪರ್ವ್ (ಭಾರತ ಪರ್ವ) :

  • ಪ್ರವಾಸೋದ್ಯಮ ಸಚಿವಾಲಯವು ಗಣರಾಜ್ಯ ದಿನದ ಆಚರಣೆಯ ಭಾಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಭಾರತ್ ಪರ್ವ್ (ಭಾರತ ಪರ್ವ) ವನ್ನು  2018ರ ಜನವರಿ 26ರಿಂದ 31ರವರೆಗೆ ಆಯೋಜಿಸಿತು. ಈ ಘಟನೆಯನ್ನು ಆಯೋಜಿಸುವ ಪ್ರಮುಖ ಉದ್ದೇಶವೆಂದರೆ ದೇಶಭಕ್ತಿಯ ಮನಸ್ಥಿತಿ ಸೃಷ್ಟಿಸುವುದು, ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸುವುದು, ಸಾರ್ವಜನಿಕರ ವ್ಯಾಪಕ ಪಾಲ್ಗೊಳ್ಳುವಿಕೆ ಮತ್ತು ' ಏಕ್ ಭಾರತ್ ಶ್ರೇಷ್ಠ್ ಭಾರತ್ ' (ಏಕ ಭಾರತ ಶ್ರೇಷ್ಠ ಭಾರತ), ದೇಖೋ ಅಪ್ನಾ ದೇಶ್ ( ನಮ್ಮ ದೇಶವನ್ನು ನೋಡಿರಿ), ಟೂರಿಸಂ ಫಾರ್ ಆಲ್ (ಎಲ್ಲರಿಗಾಗಿ ಪ್ರವಾಸೋದ್ಯಮ) ಎಂಬ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶ. ಭಾರತ ಪರ್ವದಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನಗಳು, ಸಶಸ್ತ್ರ ಪಡೆಗಳ ಬ್ಯಾಂಡ್ ಗಳು, ಆಹಾರ ಮತ್ತು ಕುಶಲಕರ್ಮಿಗಳ ಮಳಿಗೆಗಳಾಗಿದ್ದವು.

 

ಪರ್ಯಟನ್ ಪರ್ವ್ (ಪರ್ಯಟನಾ ಪರ್ವ)   

  • ಕೇಂದ್ರೀಯ ಸಚಿವಾಲಯಗಳು, ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಸಹಯೋಗದಲ್ಲಿ ಪ್ರವಾಸೋದ್ಯಮ ಸಚಿವಾಲಯವು ಪರ್ಯಟನ್ ಪರ್ವ್ 2018 ಅನ್ನು  ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಿತು.  ಪರ್ವವನ್ನು 16 ರಿಂದ 27ನೇ ಸೆಪ್ಟೆಂಬ್ 2018 ರವರೆಗೆ ಆಚರಿಸಲಾಯಿತು  ಈ ಅವಧಿಯಲ್ಲಿ ಪ್ರವಾಸೋದ್ಯಮದ ಪ್ರಾಮುಖ್ಯತೆಯ  ಬಗ್ಗೆ ಜಾಗೃತಿ ಮೂಡಿಸಲು 32 ರಾಜ್ಯಗಳು / ಕೆಂದ್ರಾಡಳಿತ ಪ್ರದೇಶಗಳಲ್ಲಿ 3200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಲಾಯಿತು. ಪರ್ಯಟನ್ ಪರ್ವ್ 2018 ರ ಉದ್ದೇಶವು  ದೇಖೋ ಅಪ್ನಾ ದೇಶ್ ( ನಮ್ಮ ದೇಶವನ್ನು ನೋಡಿರಿ) ನ ಸಂದೇಶವನ್ನು  ಪ್ರಸಾರ ಮಾಡುವುದಾಗಿತ್ತು , ಇದರಿಂದ ಭಾರತೀಯರು ತಮ್ಮ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಮತ್ತು ಟೂರಿಸಂ ಫಾರ್ ಆಲ್ ( ಎಲ್ಲರಿಗೂ ಪ್ರವಾಸ) ಎನ್ನುವ ಸಂದೇಶವನ್ನು ಪಸರಿಸುವುದಾಗಿತ್ತು. ರಾಜ್ಯದ ಮಳಿಗೆಗಳು, ಕರಕುಶಲ ಸಾಮಾಗ್ರಿಗಳ ಮಳಿಗೆಗಳು, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು , ಪಾಕಶಾಸ್ತ್ರದ ಪ್ರದರ್ಶನಗಳು ಇತ್ಯಾದಿಗಳು ಪರ್ವದ ಸಮಯದಲ್ಲಿ ಭೇಟಿ ನೀಡುವವರಿಗೆ ಪ್ರಮುಖ ಆಕರ್ಷಣೆಯಾಗಿತ್ತು .

 

 

ಇಂಡಿಯಾ ಟೂರಿಸಂ ಮಾರ್ಟ್ 2018 (ಭಾರತ ಪ್ರವಾಸೋದ್ಯಮದ ಮಾರುಕಟ್ಟೆ -  2018) :

 

  • ಇಂಡಿಯನ್ ಟೂರಿಸಮ್ ಮಾರ್ಟ್ ತನ್ನ 2018 ರ ಮೊದಲ ಆವೃತ್ತಿಯನ್ನು ಫೆಡರೇಶನ್ ಆಫ್ ಆಸೋಸಿಯೇಶನ್ಸ್ ಇನ್ ಇಂಡಿಯನ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ (FAITH) (ಭಾರತದ ಪ್ರವಾಸೋದ್ಯಮ ಮತ್ತು ಸತ್ಕಾರದ ಸಂಘಗಳ ಒಕ್ಕೂಟ) ಯು  ಪ್ರವಾಸೋದ್ಯಮ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶದ ಆಡಳಿತದ ನೆರವಿನಿಂದ 16ರಿಂದ 18 ಸೆಪ್ಟೆಂಬರ್ 2018 ರವರೆಗೆ  ಹೋಟೆಲ್ ಅಶೋಕ್, ಚಾಣಕ್ಯಪುರಿ, ದೆಹಲಿ ಯಲ್ಲಿ ಆಯೋಜಿಸಿತುಇಂಡಿಯಾ ಟೂರಿಸಂ ಮಾರ್ಟ್ ವಿದೇಶಿ ಖರೀದಿದಾರರೊಂದಿಗೆ ವ್ಯವಹರಿಸಲು ಮತ್ತು ವ್ಯವಹಾರ ನಡೆಸಲು ವಿವಿಧ ಪ್ರವಾಸೋದ್ಯಮದ ಪಾಲುದಾರರಿಗೆ ವೇದಿಕೆ ಒದಗಿಸಿತು.

 

 

 

ಇನ್ಕ್ರೆಡಿಬಲ್ ಇಂಡಿಯಾ ಜಾಲತಾಣ :

  • ಪ್ರವಾಸೋದ್ಯಮ ಸಚಿವಾಲಯವು 14ನೇ ಜೂನ್ 2018 ರಂದು ಹೊಸ ಇನ್ಕ್ರೆಡಿಬಲ್ ಇಂಡಿಯಾ ಜಾಲತಾಣವನ್ನು  ಪ್ರಾರಂಭಿಸಿತುಈ ಜಾಲತಾಣವು ಆಧ್ಯಾತ್ಮ, ಪರಂಪರೆ, ಸಾಹಸ, ಸಂಸ್ಕೃತಿ, ಯೋಗ, ಯೋಗಕ್ಷೇಮ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಅನುಭವಗಳ ಹೊಂದಿರುವ ಆಧ್ಯಾತ್ಮಿಕ ತಾಣವಾಗಿ  ಭಾರತವನ್ನು ಪ್ರದರ್ಶಿಸುತ್ತದೆಅಂತರರಾಷ್ಟ್ರೀಯ ಮಾನದಂಡಗಳ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳನ್ನು ಅನುಸರಿಸಿ ಭಾರತವು ಒಂದು "ಭೇಟಿ ನೀಡಲೇಬೇಕಾದ" ತಾಣ ಎಂದು ತೋರಿಸುವ ಗುರಿಯನ್ನು ಹೊಂದಿದೆ.   ಜಾಲತಾಣವು  ಹೆಚ್ಚು ಸಂವಾದಾತ್ಮಕವಾಗಲು ಮತ್ತು ಜಾಲತಾಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚಿನ ವಿವರಗಳನ್ನು ಒದಗಿಸಲು ಹಲವು ಉಪಯುಕ್ತ ವೈಶಿಷ್ಟ್ಯಗಳನ್ನು ಈ ಜಾಲತಾಣ ಹೊಂದಿದೆ.

ಆನ್ ಲೈನ್  ಕಲಿಕಾ ನಿರ್ವಹಣಾ ವ್ಯವಸ್ಥೆ

  • ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ಸೌಕರ್ಯಗಾರರಾಗಿ ಕಾರ್ಯನಿರ್ವಹಿಸಲು ನುರಿತ ಮಾನವಸಂಪನ್ಮೂಲವನ್ನು  ರಚಿಸಲು  ಆನ್ ಲೈನ್  ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು ಪ್ರಾರಂಭಿಸಿತು. ಈ ಉಪಕ್ರಮವು ಯುವಕರನ್ನು ದೇಶದ ದೂರದ ಭಾಗದಲ್ಲಿ ತಾವೇ ಕಲಿಯಲು ಮತ್ತು ಸಂಪೂರ್ಣ ಭಾರತದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುತ್ತದೆ. ಆನ್ ಲೈನ್  ಕಲಿಕಾ ಕಾರ್ಯಕ್ರಮವು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಪ್ರವಾಸಿಗರಿಗೆ ನ್ಯಾಯವಾದ ಬೆಲೆಯಲ್ಲಿ ಅನುಕೂಲ ಕಲ್ಪಿಸುತ್ತದೆ. ಇನ್ಕ್ರೆಡಿಬಲ್ ಇಂಡಿಯಾ ಟೂರಿಸ್ಟ್ ಫೆಚಿಲಿಟೇಟರ್ ಸರ್ಟಿಫಿಕೇಶನ್ ಪ್ರಸ್ತುತ ದೇಶಾದ್ಯಂತ  3800+ ದಾಖಲಾತಿ ಹೊಂದಿದೆ.

 

 

 

 ಇನ್ಕ್ರೆಡಿಬಲ್ ಇಂಡಿಯಾ ಮೊಬೈಲ್ ಆ್ಯಪ್ :

  • ಪ್ರವಾಸೋದ್ಯಮ ಸಚಿವಾಲಯ 27  ಸೆಪ್ಟೆಂಬರ್, 2018ರಂದು ಇನ್ಕ್ರೆಡಿಬಲ್ ಇಂಡಿಯಾ ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಿತು. ಇನ್ಕ್ರೆಡಿಬಲ್ ಇಂಡಿಯಾ ಮೊಬೈಲ್  ಆ್ಯಪ್ ಆಧ್ಯಾತ್ಮ, ಪರಂಪರೆ, ಸಾಹಸ, ಸಂಸ್ಕೃತಿ, ಯೋಗ, ಯೋಗಕ್ಷೇಮ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಅನುಭವಗಳ ಹೊಂದಿರುವ ಆಧ್ಯಾತ್ಮಿಕ ತಾಣವಾಗಿ  ಭಾರತನ್ನು ಪ್ರದರ್ಶಿಸುತ್ತದೆ.  ಆಧುನಿಕ ಪ್ರಯಾಣಿಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್  ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳನ್ನು ಅನುಸರಿಸುತ್ತದೆ. ಈ ಆ್ಯಪ್ ಭಾರತದಲ್ಲಿ ತಮ್ಮ ಪ್ರಯಾಣದ ಪ್ರತಿ ಹಂತದಲ್ಲಿ ಪ್ರಯಾಣಿಕರಿಗೆ ಸಹಾಯಕರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

 

ಅಂತಾರಾಷ್ಟ್ರೀಯ ಬೌದ್ಧ ಸಮಾವೇಶ – 2018 :

  • ಪ್ರವಾಸೋದ್ಯಮ ಸಚಿವಾಲಯವು ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳೊಂದಿಗೆ ಸಹಯೋಗದೊಂದಿಗೆ   "ಬುದ್ಧ ಪಾತ್ – ದಿ ಲಿವಿಂಗ್ ಹೆರಿಟೇಜ್"  ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಬೌದ್ಧ ಸಮಾವೇಶ - 2018 (ಐಬಿಸಿ-2018) ವನ್ನು  ಆಯೋಜಿಸಿತ್ತು.  ಆಯೋಜಿಸಿತು.   ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು  ಅಂತರರಾಷ್ಟ್ರೀಯ ಬೌದ್ಧ ಸಮಾವೇಶ - 2018 (ಐಬಿಸಿ-2018) ಅನ್ನು ಆಗಸ್ಟ್ 23, 2018 ರಂದು ನವ ದೆಹಲಿಯ ವಿಗ್ಯಾನ್ ಭವನದಲ್ಲಿ ಉದ್ಘಾಟಿಸಿದರು. ತದನಂತರ ಅಜಂತಾ (ಮಹಾರಾಷ್ಟ್ರ), ರಾಜಗೀರ್, ನಳಂದ ಮತ್ತು ಬೋಧಗಯಾ (ಬಿಹಾರ) ಮತ್ತು ಸಾರನಾಥ್ (ಉತ್ತರ ಪ್ರದೇಶ) ಸ್ಥಳಗಳಿಗೆ ಭೇಟಿ ನೀಡಿದರು.  ಜಪಾನ್ ಐಬಿಸಿ-2018 ರಲ್ಲಿ ಪಾಲುದಾರ ರಾಷ್ಟ್ರವಾಗಿತ್ತು. 'ಸಮಕಾಲೀನ ಸಮಾಜದಲ್ಲಿ ನೆಲೆಸಿರುವ ಬೌದ್ಧ ಪರಂಪರೆಯ ಪಾತ್ರ' ದ ಬಗ್ಗೆ ಚರ್ಚೆ, ವಿದೇಶಿ ಮತ್ತು ಭಾರತೀಯ ಪ್ರವಾಸೋದ್ಯಮ ಕಂಪನಿಗಳ ವ್ಯಾವಹಾರಿಕ ಸಭೆಗಳು, ಪ್ರವಾಸೋದ್ಯಮ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಏರ್ಪಡಿಸಿದ್ದ ಹೂಡಿಕೆದಾರರ ಶೃಂಗಸಭೆ ಮತ್ತು ಪ್ರಸ್ತುತಿಗಳು ಕಾರ್ಯಕ್ರಮದ ಭಾಗವಾಗಿದ್ದವು. ಬೌದ್ಧ ಸಮಾಲೋಚನೆಯ ಉದ್ಘಾಟನಾ ಸಮಾರಂಭದಲ್ಲಿ, ಪ್ರವಾಸೋದ್ಯಮ ಸಚಿವಾಲಯ www.landofbuddha.in  ಜಾಲತಾಣವನ್ನು ಮತ್ತು ದೇಶದಲ್ಲಿ ಬೌದ್ಧ ಸ್ಥಳಗಳನ್ನು ಪ್ರದರ್ಶಿಸುವ ಒಂದು ಹೊಸ 60 ಸೆಕೆಂಡುಗಳ ಚಲನಚಿತ್ರವನ್ನು ಪ್ರಾರಂಭಿಸಿತು.

 

ಪ್ರಚಾರ  ಮತ್ತು ಜಾಹಿರಾತು :

  • ಪ್ರವಾಸೋದ್ಯಮ ಸಚಿವಾಲಯವು ಭಾರತದ ಪ್ರವಾಸದ ಜಾಗತಿಕ ಮಾಧ್ಯಮ  ಪ್ರಚಾರಕಾರ್ಯವನ್ನು ಸಾಗರೋತ್ತರ ಮಾರುಕಟ್ಟೆಗಳಲ್ಲಿರುವ   ಪ್ರಮುಖ ಮತ್ತು ಸಂಭಾವ್ಯ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿತು. ವಿದ್ಯುನ್ಮಾನ, ಆನ್ ಲೈನ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಯಿತು, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ  ಹೆಚ್ಚಿನ ಗಮನ ನೀಡಲಾಯಿತು ಮತ್ತು ವಿವಿಧ ಗ್ರಾಹಕ ಆದ್ಯತೆಗಳಿಗೆ ಅನುಗುಣವಾಗಿ  ವಿಷಯಾಧಾರಿತ ಕ್ರಿಯಾತ್ಮಕತೆಯನ್ನು ಬಳಸಲಾಯಿತು
  • ಯೋಗ, ಆರೋಗ್ಯ, ವನ್ಯಜೀವಿ, ಐಷಾರಾಮಿ ಮತ್ತು ಆಹಾರ ತಿನಿಸು ಗಳ ವಿಷಯಗಳಲ್ಲಿ  5 ವಿಷಯಾಧಾರಿತ ಪ್ರಚಾರದ ಚಲನಚಿತ್ರಗಳನ್ನು ತಯಾರಿಸಲಾಯಿತು ಮತ್ತು ಅವುಗಳನ್ನು ದೂರದರ್ಶನ, ಸಾಮಾಜಿಕ ಜಾಲತಾಣ ಮತ್ತು ಆನ್ ಲೈನ್ ಪೋರ್ಟಲ್ ಗಳಲ್ಲಿ  ಜಾಗತಿಕವಾಗಿ ಪ್ರಸಾರ ಮಾಡಲಾಯಿತು.   ಪ್ರಚಾರದ ಚಲನಚಿತ್ರಗಳು ದೆಹಲಿ, ಮುಂಬೈ ಮತ್ತು ಚೆನ್ನೈಗಳಲ್ಲಿ ಸಹ ನಿರ್ಮಾಣಗೊಂಡಿವೆ.
  •  5 ಚಲನಚಿತ್ರಗಳು ಮತ್ತು ಲ್ಯಾಂಡ್ ಆಫ್ ಬುದ್ಧ  ಎನ್ನುವ ಚಲನಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ 189 ದಶಲಕ್ಷ ವೀಕ್ಷಣೆಗಳನ್ನು ಪಡೆಯಿತು.  ಎಲ್ಲಾ ಚಲನಚಿತ್ರಗಳನ್ನು (5 ಚಲನಚಿತ್ರಗಳು - ಯೋಗ, ತಿನಿಸು, ಸ್ವಾಸ್ಥ್ಯ, ಐಷಾರಾಮಿ ಮತ್ತು ವನ್ಯಜೀವಿ) ಇಂಗ್ಲೀಷಿನಲ್ಲಿ ಮತ್ತು 9 ಅಂತರರಾಷ್ಟ್ರೀಯ ಭಾಷೆಗಳ ಹಿನ್ನೆಲೆ ಧ್ವನಿಯಲ್ಲಿ (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ರಷ್ಯನ್, ಚೀನೀ, ಜಪಾನೀಸ್, ಕೊರಿಯನ್ ಮತ್ತು ಅರೇಬಿಕ್)  ತಯಾರಿಸಲಾಯಿತು. ಈ ಚಲನಚಿತ್ರಗಳನ್ನು  ವಿಶ್ವದಾದ್ಯಂತದ ಜಾಗತಿಕ ದೂರದರ್ಶನಗಳಲ್ಲಿ / ಭಾರತದೆಲ್ಲೆಡೆಯಿರುವ ಚಾನಲ್ ಗಳಲ್ಲಿ  ಪ್ರಸಾರ ಮಾಡಲಾಗಿದೆ.
  •  ಈಶಾನ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಯೋಗ (ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಹೊಂದಿಕೆಯಾಗುವಂತೆ), 'ಏಕತಾ ಪ್ರತಿಮೆ' , ಸಾಂಪ್ರದಾಯಿಕ ಪ್ರಮುಖ ತಾಣಗಳು, ಮತ್ತು  ಸಚಿವಾಲಯವು ಆಯೋಜಿಸಿರುವ ಭಾರತ್ ಪರ್ವ್  ಮತ್ತು ಪರ್ಯಟನ್ ಪರ್ವ್  ಕಾರ್ಯಕ್ರಮಗಳ ಪ್ರಚಾರಕ್ಕಾಗಿ ದೇಶೀಯ ಪ್ರಚಾರ ಕಾರ್ಯವನ್ನು ವಿವಿಧ ಮಾಧ್ಯಮಗಳ ಮೂಲಕ ಅಂದರೆ ಟೆಲಿವಿಷನ್, ಆನ್ ಲೈನೆ ಪೋರ್ಟಲ್ ಗಳು ಮತ್ತು ಜಾಲತಾಣಗಳು , ಹೊರಾಂಗಣ ಡಿಜಿಟಲ್, ಸಿನಿಮಾ ಮಂದಿರಗಳು, ರೇಡಿಯೋ ರೇಡಿಯೋ, ವಿಮಾನ ಬೋರ್ಡಿಂಗ್ ಪಾಸುಗಳು, ರೈಲ್ವೆ ಟಿಕೆಟ್ ಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ದೇಶೀಯ ಪ್ರಚಾರ ಕಾರ್ಯಗಳನ್ನು ಬಿಡುಗಡೆ ಮಾಡಲಾಯಿತು.
  •  ಪ್ರವಾಸೋದ್ಯಮ ಸಚಿವಾಲಯದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಕ್ರಿಯ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇದಲ್ಲದೆ, ನಿಖರಸ್ಥಾನದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗಿಗಾಗಿ ಪರಿಣಾಮಕಾರಿ ಸಾಧನವಾಗಿ ಸಾಮಾಜಿಕ ಮಾಧ್ಯಮದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸಚಿವಾಲಯವು ಫೆಬ್ರವರಿ 2018 ರಲ್ಲಿ ವಿಶ್ವದಾದ್ಯಂತದ ಬ್ಲಾಗಿಗರನ್ನು ಒಳಗೊಂಡ “ ದಿ ಗ್ರೇಟ್ ಇಂಡಿಯನ್ ಬ್ಲಾಗ್ ಟ್ರೈನ್"  ಎನ್ನುವ ಸಾಮಾಜಿಕ ಮಾಧ್ಯಮದ ಪ್ರಮುಖ ಪ್ರಭಾವಶಾಲಿಗಳ ಪ್ರಚಾರಕಾರ್ಯವನ್ನು ಆಯೋಜಿಸಿತು, ಇದರಲ್ಲಿ ಪ್ರಪಂಚದಾದ್ಯಂತ ಇರುವ ಬ್ಲಾಗಿಗರನ್ನು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಐಷಾರಾಮಿ ರೈಲುಗಳ ಮೇಲೆ ದೇಶದಲ್ಲಿ ಸ್ಥಳಗಳಿಗೆ ಪ್ರಯಾಣಿಸಲು ಆಹ್ವಾನಿಸಲಾಯಿತು.   ಭಾರತವೂ ಸೇರಿದಂತೆ 23 ರಾಷ್ಟ್ರಗಳಿಂದ ಒಟ್ಟು 57 ಬ್ಲಾಗಿಗರು ನಾಲ್ಕು ವಾರಗಳವರೆಗೆ ನಾಲ್ಕು ಐಷಾರಾಮಿ ರೈಲುಗಳಲ್ಲಿ ಪ್ರಯಾಣಿಸಿದರು, ಅವುಗಳ್ಯಾವುವೆಂದರೆ ಪ್ಯಾಲೇಸ್ ಆನ್ ವೀಲ್ಸ್, ಮಹಾರಾಜಾ ಎಕ್ಸ್ ಪ್ರೆಸ್,   ಡೆಕ್ಕನ್ ಒಡಿಸ್ಸಿ ಮತ್ತು ಗೋಲ್ಡನ್ ಚಾರಿಯೆಟ್. ಬ್ಲಾಗಿಗರು ತಾವು ಭೇಟಿ ನೀಡಿದ್ದ ತಾಣದ ಬಗ್ಗೆ ಮತ್ತು  ಪ್ರಯಾಣದ ಅನುಭವಗಳನ್ನು ಬ್ಲಾಗ್ ಗಳು, ವೀಡಿಯೊಗಳು ಮತ್ತು ಫೋಟೋಗಳ ಮೂಲಕ ಪ್ರಕಟಿಸಿದ್ದರಿಂದ ಈ ಪ್ರಚಾರಕಾರ್ಯವು ಐಷಾರಾಮಿ ರೈಲುಗಳಿಗೆ ಮತ್ತು ಭೇಟಿಯಾದ ತಾಣಗಳಿಗೆ ವ್ಯಾಪಕ ಪ್ರಚಾರವನ್ನು ನೀಡಿತು

 

ಇ-ವೀಸಾ :

  • ಇ-ವೀಸಾವು 5 ಉಪ ವಿಭಾಗಗಳು ಅಂದರೆ ಇ-ಟೂರಿಸ್ಟ್ ವೀಸಾ, ಇ-ಬಿಸಿನೆಸ್ ವೀಸಾ, ಇ-ಮೆಡಿಕಲ್ ವೀಸಾ, ಇ-ಮೆಡಿಕಲ್ ಅಟೆಂಡೆಂಟ್ ವೀಸಾ ಮತ್ತು ಇ-ಕಾನ್ಫರೆನ್ಸ್ ವೀಸಾವನ್ನು ಹೊಂದಿದೆ.
  • ಇ-ವೀಸಾವು 26 ಗೊತ್ತುಪಡಿಸಿದ ವಿಮಾನ ನಿಲ್ದಾಣಗಳು (ಅಹಮದಾಬಾದ್, ಅಮೃತಸರ್, ಬಾಗ್ದೊಗ್ರಾ, ಬೆಂಗಳೂರು, ಕ್ಯಾಲಿಕಟ್, ಚೆನ್ನೈ, ಚಂಡೀಘಢ, ಕೊಚ್ಚಿನ್, ಕೊಯಮತ್ತೂರು, ದೆಹಲಿ, ಗಯಾ, ಗೋವಾ, ಗುವಾಹಟಿ, ಹೈದರಾಬಾದ್, ಜೈಪುರ, ಕೊಲ್ಕತ್ತಾ, ಲಕ್ನೋ, ಮಧುರೈ, ಮಂಗಳೂರು, ಮುಂಬೈ, ನಾಗಪುರ, ಪುಣೆ, ತಿರುಚಿರಾಪಳ್ಳಿ, ತಿರುವನಂತಪುರ, ವಾರಣಾಸಿ ಮತ್ತು ವಿಶಾಖಪಟ್ಟಣಂ) ಮತ್ತು 5 ಗೊತ್ತುಪಡಿಸಿದ ಬಂದರುಗಳು (ಅಂದರೆ ಕೊಚ್ಚಿನ್, ಗೋವಾ, ಮಂಗಳೂರು, ಮುಂಬೈ, ಚೆನ್ನೈ) ಇವುಗಳ ಪ್ರವೇಶಕ್ಕಾಗಿ ಮಾನ್ಯ ಮಾಡಲ್ಪಟ್ಟಿದೆ.
  • ಪ್ರಸ್ತುತ 166 ದೇಶಗಳ ಪ್ರಜೆಗಳಿಗೆ ಇ-ವೀಸಾ ಯೋಜನೆ ಲಭ್ಯವಿದೆ.

 

ಲೆಗಸಿ ವಿಂಟೇಜ್ ಹೋಟೆಲ್ (ಪ್ರಾಚೀನ ನಿರ್ಮಾಣದ ಪರಂಪರಾಗತ ಹೋಟೆಲ್) :  

  • ಪ್ರವಾಸೋದ್ಯಮ ಸಚಿವಾಲಯವು ಪ್ರಾಚೀನ ನಿರ್ಮಾಣದ ಕಟ್ಟಡ ಸಾಮಾಗ್ರಿಗಳಿಂದ ನಿರ್ಮಿತವಾದ ಪರಂಪರಾಗತ ಆಸ್ತಿಗಳು / ಕಟ್ಟಡಗಳಿಂದ ಆಗಿರುವ ಹೋಟೆಲ್ ಗಳನ್ನು (ಅಂದರೆ 1950 ರ ಮೊದಲು ನಿರ್ಮಿಸಲಾದ ಸ್ವತ್ತುಗಳು ಅಥವಾ ಕಟ್ಟಡಗಳು) ಆದರೆ ಕನಿಷ್ಠ 50% ಸಾಮಾಗ್ರಿಗಳನ್ನು ಪರಂಪರಾಗತ ಸ್ವತ್ತು ಅಥವಾ ಕಟ್ಟಡಗಳಿಂದ ಪಡೆದಿರಬೇಕು,  ಇಂತಹ ಹೋಟೆಲ್ಲುಗಳನ್ನು  ಲೆಗಸಿ ವಿಂಟೇಜ್ ಹೋಟೆಲ್ ಪರಿಕಲ್ಪನೆಯ  ಅಡಿಯಲ್ಲಿ ಇರಿಸಿಕೊಳ್ಳಲು ಪರಿಚಯಿಸಿತು. ಈ ರೀತಿಯ ಹೋಟೆಲ್ಲುಗಳು ಹಿಂದಿನ ಕಾಲದ ಪರಿಸರ ಮತ್ತು ವಾತಾವರಣವನ್ನು ಮರುಸೃಷ್ಟಿಸಲು ಸಹಾಯ ಮಾಡುತ್ತದೆ. ಇವುಗಳನ್ನು 3 ಉಪ-ವರ್ಗಗಳಾಗಿ ವರ್ಗೀಕರಿಸಲಾಗುತ್ತದೆ ಅವುಗಳೆಂದರೆ ಲೆಗಸಿ ವಿಂಟೇಜ್ (ಬೇಸಿಕ್), ಲೆಗಸಿ ವಿಂಟೇಜ್ (ಕ್ಲಾಸಿಕ್) ಮತ್ತು ಲೆಗಸಿ ವಿಂಟೇಜ್ (ಗ್ರಾಂಡ್ )

 

ನ್ಯಾಶನಲ್ ಕೌನ್ಸಿಲ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ & ಕೇಟರಿಂಗ್ ಟೆಕ್ನಾಲಜಿ (NCHMCT) (ರಾಷ್ಟ್ರೀಯ ಹೋಟೆಲ್ ನಿರ್ವಹಣೆ ಮತ್ತು ಕೇಟರಿಂಗ್ ತಂತ್ರಜ್ಙಾನ ಮಂಡಳಿ):

  • 2018-19 ರಲ್ಲಿ, ಬಿ.ಎಸ್.ಸಿ. ಕಾರ್ಯಕ್ರಮದ ಒಟ್ಟು 5,759 ವಿದ್ಯಾರ್ಥಿಗಳು, ಎಂ.ಎಸ್.ಸಿ ಕಾರ್ಯಕ್ರಮದ 121 ವಿದ್ಯಾರ್ಥಿಗಳು ಮತ್ತು ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಅಡ್ಮಿನಿಸ್ಟ್ರೇಶನ್ ನಲ್ಲಿ ಡಿಪ್ಲೊಮಾ ಮತ್ತು ಕರಕುಶಲ ಕೋರ್ಸ್ ಗಳ 3,735 ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್  ಎನ್.ಸಿ.ಎಚ್.ಎಂ.ಸಿ.ಟಿ ಗೆ ಸಂಬಂಧಪಟ್ಟ ಹೋಟೆಲ್ ಮ್ಯಾನೇಜ್ ಮೆಂಟ್ ಮತ್ತು ಫುಡ್ ಕ್ರಾಫ್ಟ್   ಇನ್ಸ್ಟಿಟ್ಯೂಟ್ ಗಳಿಂದ ತೇರ್ಗಡೆಯಾದರು .

 

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾವಲ್ ಅಂಡ್ ಟೂರಿಸಂ ಮ್ಯಾನೇಜ್ ಮೆಂಟ್ (ಐಐಟಿಟಿಎಂ) (ಭಾರತೀಯ ಪ್ರಯಾಣ ಮತ್ತು ಪ್ರವಾಸೋದ್ಯಮ ನಿರ್ವಹಣೆಯ ಸಂಸ್ಥೆ):

  • 2018-19ರ ಅವಧಿಯಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮ ನಿರ್ವಹಣೆಯಲ್ಲಿ ಎಂ.ಬಿ.ಎ ನ ಒಟ್ಟು 330 ವಿದ್ಯಾರ್ಥಿಗಳು  ಭಾರತೀಯ ಪ್ರಯಾಣ ಮತ್ತು ಪ್ರವಾಸೋದ್ಯಮ ನಿರ್ವಹಣೆಯ ಸಂಸ್ಥೆ (ಐಐಟಿಟಿಎಂ ಸಂಸ್ಥೆ)ಯಿಂದ ತೇರ್ಗಡೆಯಾಗಿ ಹೊರಬಂದರು.

 

ಇಂಡಿಯನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್  (ಐಸಿಐ) (ಭಾರತೀಯ ಪಾಕಶಾಸ್ತ್ರ ಸಂಸ್ಥೆ), ನೋಯ್ಡಾ ಕ್ಯಾಂಪಸ್:

  •  ಪಾಕಶಾಸ್ತ್ರದ ಶಿಕ್ಷಣವನ್ನು ಪ್ರಾರಂಭಿಸಲು 2018 ರ ಏಪ್ರಿಲ್ 27 ರಂದು   ಇಂಡಿಯನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್  (ಐಸಿಐ) ನೋಯ್ಡಾ ಕ್ಯಾಂಪಸ್ ಅನ್ನು ಉದ್ಘಾಟಿಸಲಾಯಿತುಇದು ಆತಿಥ್ಯ ಕ್ಷೇತ್ರದ ವಿಶೇಷ ಕೌಶಲ್ಯದ ಮಾನವಶಕ್ತಿಯನ್ನು ರಚಿಸುವ ಮತ್ತು ಪಾಕಶಾಸ್ತ್ರದ ಕಲೆಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿರುವ ಬದ್ಧತೆಯ ಅನುಸಾರವಾಗಿ ಪ್ರಾರಂಭಿಸಲಾಯಿತು.   ಐ ಸಿ ಐ ನೋಯ್ಡಾ ಕ್ಯಾಂಪಸ್ ಕೂಡಾ "ಭಾರತೀಯ ಪಾಕಶಾಲೆಯ ವಸ್ತುಸಂಗ್ರಹಾಲಯ" ವನ್ನು ಹೊಂದಿದ್ದು, ಶ್ರೀಮಂತ ಐತಿಹಾಸಿಕ ಮತ್ತು ವೈವಿಧ್ಯಮಯ ಪಾಕಶಾಲೆಯ ವಸ್ತುಗಳು ಮತ್ತು ಇತರ ಸಾಹಿತ್ಯವನ್ನು ಪ್ರದರ್ಶಿಸಲಾಗುತ್ತದೆ. ಭಾರತೀಯ ಪಾಕಶಾಲೆಯ ಪರಂಪರೆಯನ್ನು ಸಂರಕ್ಷಿಸಲು ಇದು ಒಂದು ಅನನ್ಯವಾದ ವೇದಿಕೆಯನ್ನು ಒದಗಿಸುತ್ತದೆ. 2,31,308 ಚದುರ ಅಡಿಗಳಷ್ಟು ಪ್ರದೇಶವನ್ನು ಹೊಂದಿರುವ ಐಸಿಐ, ನೋಯ್ಡಾ ಕಟ್ಟಡವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಯಿತು ಮತ್ತು ಇದು ವಿಶ್ವ ಮಟ್ಟದ ಮೂಲಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಲು 2 ವರ್ಷಗಳಷ್ಟು ಕಾಲವನ್ನು ತೆಗೆದುಕೊಂಡಿತು.

 

 

 

ಇಂಡಿಯನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್  (ಐಸಿಐ) ತಿರುಪತಿ :

  • ಇಂಡಿಯನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್  (ಐಸಿಐ) ತಿರುಪತಿ ಕ್ಯಾಂಪಸ್  24 ಸೆಪ್ಟೆಂಬರ್ 2018 ರಂದು ಉದ್ಘಾಟಿಸಲಾಯಿತು. ತಿರುಪತಿಯ  ಕ್ಯೂಲಿನರಿ ಇನ್ಸ್ಟಿಟ್ಯೂಟ್ 14 ಎಕರೆ ಭೂಮಿಯಲ್ಲಿದೆ ಮತ್ತು ಯೋಜನೆಯು ರೂ.97.92 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿತು. ಐಸಿಐ ತಿರುಪತಿ ಕ್ಯಾಂಪಸ್ ರಾಜ್ಯದ ಅತ್ಯಾಧುನಿಕ ಅಡುಗೆಕೋಣೆಗಳು, ಪ್ರಯೋಗಾಲಯಗಳು ಮತ್ತು ತರಗತಿ ಕೊಠಡಿಗಳ ಶೈಕ್ಷಣಿಕ ವಿಭಾಗವನ್ನು ಒಳಗೊಂಡಿದೆ; ಒಂದು ಆಡಳಿತಾತ್ಮಕ ವಿಭಾಗ; ವಾಣಿಜ್ಯ ರೆಸ್ಟೋರೆಂಟ್; ಪಾಕಶಾಲೆಯ ವಸ್ತುಸಂಗ್ರಹಾಲಯ, ಕಾರ್ಯನಿರ್ವಾಹಕ ಅತಿಥಿಗೃಹ, ವಿಐಪಿ ಕುಟೀರಗಳು, ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು ಮತ್ತು ಸಿಬ್ಬಂದಿ ನಿವಾಸಗಳು. ಇಂಡಿಯನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್ ನ (ಐಸಿಐ) ಸ್ಥಾಪನೆಯ ಮುಖ್ಯ ಉದ್ದೇಶವು ಭಾರತೀಯ ಪಾಕಪದ್ಧತಿಯ ಬಗ್ಗೆ ಮಾಹಿತಿ, ಸಂರಕ್ಷಣೆ, ದಾಖಲೆ, ಪ್ರಚಾರ ಮತ್ತು ಪ್ರಸಾರ ಮಾಡಲು ಉದ್ದೇಶಿತ ಪ್ರಯತ್ನಗಳನ್ನು ಬೆಂಬಲಿಸುವ ಒಂದು ವ್ಯವಸ್ಥೆಯನ್ನು ಸ್ಥಾಪಿಸುವುದು, ಭಾರತೀಯ ಪಾಕಪದ್ಧತಿಗೆ ನಿರ್ದಿಷ್ಟವಾದ ತಜ್ಞರ ಅಗತ್ಯತೆಗಳನ್ನು ಪೂರೈಸುವುದು, ಹಾಗೂ 'ತಿನಿಸನ್ನು’  ಪ್ರವಾಸೋದ್ಯಮ ಒಂದು ಮುಖ್ಯ ಉತ್ಪನ್ನವಾಗಿ ಒತ್ತಾಸೆ ನೀಡುವುದು

ಸ್ವಚ್ಛ ಭಾರತ ಅಭಿಯಾನ :

  • ಪ್ರವಾಸೋದ್ಯಮ ಸಚಿವಾಲಯವು ಸೆಪ್ಟೆಂಬರ್ 15, 2018 ರಿಂದ 2 ನೇ ಅಕ್ಟೋಬರ್, 2018 ರವರೆಗೆ 'ಸ್ವಚ್ಛತೆಯೇ ಸೇವೆ' ಎನ್ನುವ ಅಭಿಯಾನವನ್ನು ಆಚರಿಸಿತು.  ಸ್ಥಳೀಯ ಸಮುದಾಯಗಳು, ಸಂಬಂಧ ಪಟ್ಟವರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಪ್ರವಾಸೋದ್ಯಮ ಸಚಿವಾಲಯ ಅಡಿಯಲ್ಲಿರುವ ಇಂಡಿಯಾ ಟೂರಿಸಂನ ಪ್ರಾದೇಶಿಕ ಕಚೇರಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ದೇಶದಾದ್ಯಂತ ವಿವಿಧ ಪ್ರವಾಸೋದ್ಯಮ ತಾಣಗಳಲ್ಲಿ ಸ್ವಚ್ಛತೆಯ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.   ಪ್ರವಾಸೋದ್ಯಮ ಸಚಿವಾಲಯವು 16 ರಿಂದ 30 ಸೆಪ್ಟೆಂಬರ್ 2018 ರ ವರೆಗೆ ' ಸ್ವಚ್ಚತಾ ಪಕ್ವಾಡ' (ಸ್ವಚ್ಚತಾ ಪಕ್ಷ) ವನ್ನೂ ಆಚರಿಸಲಾಯಿತು. ಇದರ ಭಾಗವಾಗಿ, ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಮತ್ತು ಇನ್ಸ್ಟಿಟ್ಯೂಟ್ಸ್ ಆಫ್ ಟ್ರಾವಲ್ ಅಂಡ್ ಟೂರಿಸಂ ಮ್ಯಾನೇಜ್ ಮೆಂಟ್ ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆಯ ಚಟುವಟಿಕೆಗಳನ್ನು ಕೈಗೊಂಡರು. ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಮತ್ತು 'ಸ್ವಚ್ಛತೆ'ಯ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು ಮತ್ತು ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. 2018-19ರಲ್ಲಿ ಪ್ರವಾಸೋದ್ಯಮ ಸಚಿವಾಲಯವು ದೇಶದಾದ್ಯಂತ ಆಯ್ಕೆಯಾದ 29 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 180 ಸ್ಥಳಗಳಲ್ಲಿ (540 ಚಟುವಟಿಕೆಗಳು) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾವಲ್ ಅಂಡ್ ಟೂರಿಸಂ ಮ್ಯಾನೇಜ್ ಮೆಂಟ್ (ಐಐಟಿಟಿಎಂ)   ಜಾರಿಗೆ ತಂದ   ಸ್ವಚ್ಚಾ ಆಕ್ಷನ್ ಪ್ಲಾನ್ (ಎಸ್ಎಪಿ) ಅನ್ನು ಕೈಗೊಂಡಿದೆ.  ಎಸ್ಎಪಿ  ಚಟುವಟಿಕೆಗಳು ಪ್ರವಾಸಿಗರು, ಶಾಲಾ / ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರವಾಸೋದ್ಯಮದವರ ನಡುವೆ ಶುಚಿತ್ವದ ಕುರಿತು ಜಾಗೃತಿ ಮೂಡಿಸಿರುವುದಾಗಿದೆ. ಎಸ್ಎಪಿಯ ಅಡಿಯಲ್ಲಿನ ಈ ಚಟುವಟಿಕೆಗಳನ್ನು ದೇಶದಾದ್ಯಂತ ಸಹ ಕೇಂದ್ರ ಮತ್ತು ರಾಜ್ಯ ಐ ಹೆಚ್ ಎಂ ಗಳಿಂದ ಕೈಗೊಳ್ಳಲಾಗುತ್ತದೆ.

(Release ID: 1558188) Visitor Counter : 208


Read this release in: English , Bengali , Tamil