ನೌಕಾ ಸಚಿವಾಲಯ
2018ನೇ ವರ್ಷದ ವಾರ್ಷಿಕ ಅವಲೋಕನ ನೌಕಾಯಾನ ಸಚಿವಾಲಯ
Posted On:
13 DEC 2018 7:27PM by PIB Bengaluru
2018ನೇ ವರ್ಷದ ವಾರ್ಷಿಕ ಅವಲೋಕನ
ನೌಕಾಯಾನ ಸಚಿವಾಲಯ
2018ರನೇ ವರ್ಷದಲ್ಲಿ ಪ್ರಗತಿಶೀಲ ನೀತಿಗಳ ಮಧ್ಯಪ್ರವೇಶದ ನೆರವಿನ ಪರಿಣಾಮದಿಂದಾಗಿ ಬೃಹತ್ ಬಂದರುಗಳ ಏಳಿಗೆಯು ಪರಿಣಾಮಕಾರಿಯಾಗಿ ಕಾರ್ಯ ಸಾಧುವಾಗಿದೆ. ಗಂಗಾ ನದಿಯಲ್ಲಿ ಮೊದಲ ಬಾರಿಗೆ ಬಹು ಉದ್ದೇಶಿತ ಟರ್ಮಿನಲ್ ಅನ್ನು ಚಾಲನೆಗೊಳಿಸಿದ ಪರಿಣಾಮದಿಂದಾಗಿ ಈ ವರ್ಷದಲ್ಲಿ ಒಳ ಜಲ ಸಾರಿಗೆ ವ್ಯವಸ್ಥೆಯು ಮಹತ್ತರವಾದ ಪ್ರಗತಿಯನ್ನು ಕಂಡುಕೊಂಡಿದ್ದು ಸುಲಭ ವ್ಯವಹಾರವನ್ನು ಮಾಡುವ ಕಡೆಗೆ ಹೆಚ್ಚು ಆಸಕ್ತಿಯನ್ನು ವಹಿಸಲಾಗಿದೆ. ಸರಕು ಸಾಗಣೆಯಲ್ಲಿ ಪ್ರಗತಿ ಕಂಡಿದ್ದಲ್ಲದೇ ಸಾಗರ್ ಮಾಲಾ ಯೋಜನೆಯ ಅಡಿಯಲ್ಲಿ ರೋ ರೋ ಸೇವೆಯನ್ನು ಕೈಗೊಂಡಿದ್ದು ಅದು ಮುಗಿಯುವ ಹಂತದಲ್ಲಿದೆ. 89 ಯೋಜನೆಗಳು ಮುಗಿಯುವ ಹಂತವನ್ನು ತಲುಪಿವೆ. 400ಕ್ಕೂ ಹೆಚ್ಚು ನೌಕಾ ಸಿಬ್ಬಂದಿಯನ್ನು ಇದಕ್ಕೆ ತೊಡಗಿಸಿಕೊಂಡಿದ್ದು ಶೇಕಡಾ 42.33ರಷ್ಟು ಅಭೂತ ಪೂರ್ವ ಬೆಳವಣಿಗೆಯನ್ನು ಕಂಡಿದೆ.
ನೌಕಾಯಾನ ಸಚಿವಾಲಯದಲ್ಲಿ 2018ನೇ ವರ್ಷವು ಒಂದು ಐತಿಹಾಸಿಕ ವರ್ಷ ಎನಿಸಿಕೊಂಡಿದೆ. ಪ್ರಗತಿದಾಯಕವಾದ ನೀತಿಗಳ ಒತ್ತಾಸೆಯಿಂದ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಾದರಿ ರಿಯಾಯಿತಿ ಒಪ್ಪಂದದ ತಿದ್ದುಪಡಿ, ದರ ಮಾರ್ಗಸೂಚಿಗಳಲ್ಲಿ ಪುನರ್ ಪರಿಷ್ಕರಣೆ ಮತ್ತು ಸಲಭ ವ್ಯವಹಾರವನ್ನು ನಡೆಸಲು ಹಲವು ಕ್ರಮಗಳನ್ನು ತಗೆದುಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಪ್ರಮುಖವಾದ ಬಂದರುಗಳು ಗಣನೀಯವಾದಂತಹ ಬೆಳವಣಿಗೆಯನ್ನು ದಾಖಲಿಸಿ ಸುಧಾರಣೆಯ ಹಂತವನ್ನು ತಲುಪಿವೆ. ಸಾಮರ್ಥ್ಯ ಹೆಚ್ಚಳ ಮತ್ತು ಕಾರ್ಯಕ್ಷಮತಾ ಮಾನದಂಡ ಅಥವಾ ನಿಯತಾಂಕಗಳ ಸುಧಾರಣೆಯನ್ನು ಕಂಡುಕೊಂಡಿವೆ.
ಸಾಗರ್ ಮಾಲಾ ಯೋಜನೆಯ 89 ಯೋಜನೆಗಳು ಮುಗಿಯುವ ಹಂತದಲ್ಲಿವೆ. 4.32 ಲಕ್ಷ ಕೋಟಿ ರೂಪಾಯಿಗಳ ಅಂದಾಜು ಮೊತ್ತದ 443 ಯೋಜನೆಗಳು ಅನುಷ್ಠಾನ ಮತ್ತು ಪೂರ್ಣಗೊಳ್ಳುವ ಹಂತದಲ್ಲಿವೆ.
ಒಳನಾಡು ಜಲ ಸಾರಿಗೆ ವಲಯದಲ್ಲಿ 2018ನೇ ವರ್ಷವು ವಿಶೇಷವಾಗಿ ದಾಖಲಾರ್ಹವಾದ ಅಭಿವೃದ್ಧಿಯನ್ನು ಕಂಡುಕೊಂಡಿದೆ. ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಾರಾಣಸಿಯಲ್ಲಿ ಗಂಗಾ ನದಿಯಲ್ಲಿ ಬಹು ಮಾದರಿಯ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದರು. ಗಂಗಾ ನದಿಯಲ್ಲಿ ಸ್ವಾತಂತ್ರ್ಯಾ ನಂತರ ದೇಶದಲ್ಲೇ ಮೊದಲ ಬಾರಿಗೆ ಕೋಲ್ಕತ್ತಾದಿಂದ ವಾರಾಣಸಿಯವರೆಗೆ ಬೃಹತ್ ಗಾತ್ರದ ಸರಕು ಹಡಗನ್ನು(ಕಾರ್ಗೋ) ಸಂಚರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಇಂಡೋ ಬಾಂಗ್ಲಾ ದೇಶದ ಪ್ರೋಟೋಕಾಲ್ ರೂಟ್ ನ ಮೂರು ಮಾರ್ಗಗಳಲ್ಲಿ ಬಿಹಾರದ ಕಹಲ್ ಗಾವ್ ಮತ್ತು ಅಸ್ಸಾಂನ ಪಾಂಡುವರೆಗೆ ಸರಕು ಕಾರ್ಗೋದ ಸಮಗ್ರ ಚಲನೆಯನ್ನು ಸಾಧಿಸಲಾಗಿದೆ. ಒಳ ಜಲ ಸಾರಿಗೆಯನ್ನು ಇನ್ನಷ್ಟು ಅಗ್ಗ ಮತ್ತು ಪರಿಸರ ಸ್ನೇಹಿ ಸಾರಿಗೆಯಾಗಿ ತ್ವರಿತಗತಿಯಲ್ಲಿ ಸ್ಥಾಪನೆಗೊಳಿಸುವುದು ಸಾಧ್ಯವಾಗಿದೆ.
ಕ್ರೂಸ್ ಪ್ರವಾಸೋದ್ಯಮ ಮತ್ತೊಂದು ಮಹತ್ತರವಾದ ಅಭಿವೃದ್ಧಿಯಾಗಿದೆ. ಚೆನ್ನೈ ಬಂದರಿನಲ್ಲಿ ಸುಧಾರಿತವಾದ ಅಂತಾರಾಷ್ಟ್ರೀಯ ಆಧುನಿಕವಾದ ಕ್ರ್ಯೂಸ್(ವಿಹಾರ ನೌಕಾಯಾನ),ಮುಂಬೈ ಹಾಗೂ ಗೋವಾ ವಿಹಾರಿ ನೌಕಾಯಾನ(ಕ್ರ್ಯೂಸ್) ಸೇವೆಯನ್ನು ಉದ್ಘಾಟಿಸಲಾಗಿದೆ ವಿಶಾಖಪಟ್ಟಣ ಮತ್ತು ಮುಂಬೈನಲ್ಲಿ ಸಮುದ್ರಯಾನ ಮತ್ತು ಹಡಗು ನಿರ್ಮಾಣ(ಸಿಇಎಂಎಸ್) ಶ್ರೇಷ್ಠತಾ ಕೌಶಲ್ಯ ಕೇಂದ್ರವನ್ನು ತೆರೆಯಲಾಗಿದೆ. ಬಂದರುಗಳು, ಜಲ ಮಾರ್ಗಗಳು ಮತ್ತು ಕರಾವಳಿ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರ(ಎನ್ ಟಿ ಸಿ ಪಿ ಡಬ್ಲ್ಯು ಸಿ)ವನ್ನು ಚೆನ್ನೈನ ಮದ್ರಾಸ್ ಐಐಟಿಯಲ್ಲಿ ತೆರೆಯಲಾಗಿದೆ. ಸಾಗರ್ ಮಾಲಾ ಯೋಜನೆಯ ಅಡಿಯಲ್ಲಿ ಎಲ್ಲಾ ಬೃಹತ್ ಬಂದರುಗಳಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ(ಎಂ ಎಸ್ ಡಿಸಿ)ಗಳನ್ನು ತೆರೆಯುವ ನಿರ್ಧಾರವನ್ನು ಮಾಡಲಾಗಿದೆ.
ಈ ವರ್ಷದಲ್ಲಿ ಬಂದರು ಇಲಾಖೆಯ ವತಿಯಿಂದ ಕೈಗೊಳ್ಳಲಾದ ಬಹುದೊಡ್ಡ ಯೋಜನೆಗಳ ಕ್ಷೇತ್ರವಾರು ವಿಸ್ತೃತವಾದ ವಿವರಗಳು ಈ ಕೆಳಗಿನ ಪ್ಯಾರಾಗಳಲ್ಲಿ ಇವೆ:
- ಬಂದರುಗಳು:
1.1 ಭಾರತದಲ್ಲಿರುವ ಬಂದರುಗಳು ಭಾರತದ ಹೊರ ವ್ಯವಹಾರದಲ್ಲಿ ಶೇಕಡಾ 90ರಷ್ಟು ವಿಸ್ತಾರ ಮತ್ತು ಶೇಕಡಾ 70ರಷ್ಟು ಮೌಲ್ಯಗಳನ್ನು ನಿಭಾಯಿಸಲಿವೆ.
1.2 ಸಾಮರ್ಥ್ಯ ಮತ್ತು ಸಂಚಾರ
ದೇಶದಲ್ಲಿ ಮೊದಲ ಬಾರಿಗೆ ಏರಿಕೆಯಾದ ವ್ಯಾಪಾರ ಅಗತ್ಯಗಳನ್ನು ಸಾಧಿಸಲು, ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ಹೆಚ್ಚಳವನ್ನು ಮಾಡಲು ಗಮನವನ್ನು ಹರಿಸಲಾಗಿದೆ. ದೊಡ್ಡ ದೊಡ್ಡ ಬಂದರುಗಳಲ್ಲಿ ಸರಕು ಸಾಗಣೆ ಹಡಗಿನ ಸಾಮರ್ಥ್ಯವನ್ನು ಹೆಚ್ಚಿಸಲು ಇತ್ತೀಚಿನ ವರ್ಷಗಳಲ್ಲಿ ಕ್ರಮಗಳನ್ನು ಕೈಗೊಂಡಿದ್ದು ಈ ಕೆಳಗಿನಂತೆ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ:
(ಎಂಟಿಪಿಎಯಲ್ಲಿ)
ವರ್ಷ
|
ಸಾಮರ್ಥ್ಯ
|
2012-13
|
744.91
|
2013-14
|
800.52
|
2014-15
|
871.52
|
2015-16
|
965.36
|
2016-17
|
1359.00*
|
2017-18
|
1451.19
|
* ಮರು ಸಾಮರ್ಥ್ಯದ ಧಾರಣೆ- ಅಂತಾರಾಷ್ಟ್ರೀಯ ನಿಯಮಾವಳಿಗಳ ಅನ್ವಯ ಸುಧಾರಿತ ನೀತಿಗಳನ್ನು ರೂಪಿಸುವ ಮೂಲಕ ಬಂದರುಗಳ ಸಾಮರ್ಥ್ಯದ ಧಾರಣೆಯನ್ನು ಹೆಚ್ಚಿಸಲಾಗಿದೆ.
1.3 ಈ ಕೆಳಗಿನ ಪಟ್ಟಿಯಲ್ಲಿ ತೋರಿಸಿರುವಂತೆ ಪ್ರಮುಖ ಬಂದರುಗಳಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ವಿಧಾನವು ಗಣನೀಯ ಪ್ರಮಾಣದಲ್ಲಿ ಸುಧಾರಣೆಯನ್ನು ಕಂಡುಕೊಂಡಿದೆ:
(ಎಂಟಿ ಯಲ್ಲಿ)
ವರ್ಷ
|
ಸಂಚಾರ
|
2012-13
|
545.79
|
2013-14
|
555.49
|
2014-15
|
581.34
|
2015-16
|
606.47
|
2016-17
|
648.40
|
2017-18
|
679.37
|
2018-19 (ಅಕ್ಟೋಬರ್ 2018ವರೆಗೆ)
|
403.39
|
ಜವಾಹರ ಲಾಲ್ ನೆಹರು ಬಂದರು ಟ್ರಸ್ಟ್
1.4 ಯೋಜನೆಗಳು ಮತ್ತು ಅಂದಾಜು ಹೂಡಿಕೆಯ ಜಾರಿ
10000 ಕೋಟಿ ರೂಪಾಯಿಗಳ ಹೂಡಿಕೆಯ ಅಡಿಯಲ್ಲಿ 50ಕ್ಕೂ ಹೆಚ್ಚು ಯೋಜನೆಗಳನ್ನು ಆರಂಭಿಸಲಾಗಿದೆ. 2018-19ನೇ ಸಾಲಿನಲ್ಲಿ 90 ಎಂಟಿಪಿಎ ಹೆಚ್ಚುವರಿ ಸಾಮರ್ಥ್ಯವನ್ನು ಒಳಗೊಂಡಂತೆ ಅನುಷ್ಠಾನಕ್ಕೆ ತರಲು ಆದೇಶಿಸಲಾಗಿರುತ್ತದೆ. 2017-18ರಲ್ಲಿ ಇಂತಹ 27 ಯೋಜನೆಗಳಿಗೆ ಮಂಜೂರಾತಿಯನ್ನು ನೀಡಲಾಗಿತ್ತು. ಇವುಗಳನ್ನು 4146.73 ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಇವುಗಳನ್ನು ಜಾರಿಗೆ ತರಲಾಗಿತ್ತು. ಇವುಗಳಲ್ಲಿ 21.93 ಎಂಟಿಪಿಎ ಹೆಚ್ಚುವರಿ ಸಾಮರ್ಥ್ಯವನ್ನು ಇವು ನಿರ್ಮಾಣ ಮಾಡಿವೆ.
1.5 ದಕ್ಷತೆಯ ನಿಯತಾಂಕ(ಮಾನದಂಡ)ಗಳಲ್ಲಿ ಪ್ರಗತಿ:
ಪ್ರಮುಖ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀತಿಗಳ ಮಧ್ಯಸ್ಥಿಕೆ, ಕಾರ್ಯವಿಧಾನಗಳ ಬದಲಾವಣೆ ಮತ್ತು ಯಾಂತ್ರಿಕೀಕರಣೆಯನ್ನು ತರುವ ಮೂಲಕ ಕಾರ್ಯಾಚರಣಾ ದಕ್ಷತೆಯನ್ನು ಸಾಧಿಸುವುದನ್ನು ಹೆಚ್ಚಿಸಲು ಬಂದರು ಇಲಾಖೆಯು ಕಾತರವಾಗಿದೆ. ಇತರ ಪರಿಣಾಮವಾಗಿ ದಕ್ಷತಾ ನಿಯತಾಂಕಗಳು ಅಂದರೆ ಕಾಲಕಾಲಕ್ಕೆ ನಿರ್ವಹಣೆ ಮತ್ತು ಹಡಗು ನಿಲ್ಲುವ ರೇವುಗಳು ಈ ಕೆಳಕಂಡಂತೆ ಗಮನಾರ್ಹವಾಗಿ ಸುಧಾರಣೆಯನ್ನು ಕಂಡಿವೆ.
ವರ್ಷ
|
ಸರಾಸರಿ ತಿರುಗುವ ಸಮಯ( ಗಂಟೆಗಳಲ್ಲಿ)
|
ಪ್ರತಿ ಹಡುಗು ರೇವು(ನಿಲ್ಲುವ ಸ್ಥಳ)ದ ಸರಾಸರಿ (ಟನ್ ಗಳಲ್ಲಿ)
|
2016-17
|
82.32
|
14576
|
2017-18
|
64.32
|
15333
|
2018-19 ( 31.10.2018ರವರೆಗೆ)
|
60.48
|
16166
|
1.6 ಪಾಲಿಸಿ ಉಪಕ್ರಮಗಳು
ದೊಡ್ಡ ಬಂದರುಗಳ ಸಾಮರ್ಥ್ಯ ವೃದ್ಧಿಯಲ್ಲಿ ಗಣನೀಯ ಸಾಧನೆ, ಕಾರ್ಯಾಚರಣೆಯ ದಕ್ಷತೆಯ ಸುಧಾರಣೆ ಮತ್ತು ನೌಕಾಯಾನ ಸಚಿವಾಲಯವು ಕೈಗೊಂಡಂತಹ ಹಲವು ಚಲನಶೀಲತೆಗೆ ಪೂರಕವಾದಂತಹ ನೀತಿ ಉಪಕ್ರಮಗಳ ಫಲವಾಗಿ ಗರಿಷ್ಠ ಕಾರ್ಯ ಪ್ರಗತಿ ಹೆಚ್ಚಳವು ಸಾಧ್ಯವಾಗಿದೆ. ಈ ಕಾರ್ಯಪ್ರಗತಿಯು ಈ ಕೆಳಗಿನಂತಿದೆ.
- ಹಾಲಿ ಇರುವಂತಹ ಮಾದರಿ ರಿಯಾಯಿತಿ ಒಪ್ಪಂದಗಳಲ್ಲಿ ಇರುವಂತಹ ಅವಕಾಶಗಳ ಅಡಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಕಾರ್ಯಾನುಷ್ಠಾನವನ್ನು ಮಾಡಲು ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಬೇಕಿರುವಂತ ತಿದ್ದುಪಡಿಗಳನ್ನು ಮಾದರಿ ರಿಯಾಯಿತಿ ಒಪ್ಪಂದದಲ್ಲಿ ತರಲಾಗಿರುತ್ತದೆ.
- ಬಂದರು ಆಪರೇಟರ್ ಗಳಿಗೆ ಅನುವಾಗುವಂತೆ ಸುಂಕ ದರಸೂಚಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಕೆಲವು ಕಾರ್ಯಕ್ಷಮತೆಯ ಮಾನದಂಡಗಳನ್ನು ಸಾಧನೆ ಮಾಡುವ ನಿಟ್ಟಿನಲ್ಲಿ ಮಾರುಕಟ್ಟೆ ಸುಂಕ ದರಸೂಚಿಯನ್ನು ಜೋಡಣೆ ಮಾಡಲಾಗಿದೆ.
- ಬಂದರು ವಲಯದಲ್ಲಿ ಶೇಕಡಾ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶಗಳನ್ನು ಮಾಡಿಕೊಡಲಾಗಿದೆ.
- ಹಾಲಿ ಇರುವಂತಹ ಬೃಹತ್ ಬಂದರು ಟ್ರಸ್ಟ್ ಗಳ ಕಾಯ್ದೆ- 1963ಕ್ಕೆ ಬದಲಾಗಿ ಒಂದು ಹೊಸ ಬೃಹತ್ ಬಂದರು ಪ್ರಾಧಿಕಾರ ಕಾಯ್ದೆಯನ್ನು ತರುವ ಮೂಲಕ ಇನ್ನಷ್ಟು ಸ್ವಾಯತ್ತತೆಯನ್ನು ಮತ್ತು ಸಾಂಸ್ಥಿಕ ರಚನೆಯ ಆಧುನೀಕರಣವನ್ನು ಮಾಡುವ ಕೆಲಸವು ಪರಿಗಣನೆಯಲ್ಲಿದೆ. 2016ರ ಡಿಸೆಂಬರ್ 16ರಂದು ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಲೋಕಸಭೆಯಲ್ಲಿ ಈ ಕಾಯ್ದೆಯು ಪರಿಗಣನೆ ಮತ್ತು ಅನುಮೋದನೆಗೆ ಕಾಯುತ್ತಿದೆ.
- ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಎಲ್ಲ ಬೃಹತ್ ಬಂದರುಗಳು ತಮ್ಮ ಮಿಗಿತ ಅಥವಾ ಉಳಿತಾಯ ನಿಧಿಯನ್ನು ಇಡಲು ಅನುಕೂಲವಾಗುವಂತಹ ಪರಿಷ್ಕೃತ ಮಾರ್ಗಸೂಚಿಗಳನ್ನು ಈಗಾಗಲೇ ಎಲ್ಲಾ ಬೃಹತ್ ಬಂದರುಗಳಿಗೆ ನೀಡಲಾಗಿದೆ ಮತ್ತು ಅವುಗಳ ಪಿಂಚಣಿ/ಭವಿಷ್ಯ ನಿಧಿ/ಗ್ರ್ಯಾಚುಟಿ ನಿಧಿಗಳನ್ನು ಇಡಲು ಇದರಿಂದ ಅನುಕೂಲಗಳಾಗಲಿವೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಸಾರ್ವಜನಿಕ ಸಂಸ್ಥೆಗಳ ಸಚಿವಾಲಯಗಳ ಮಾರ್ಗಸೂಚಿಗಳ ಅನ್ವಯದಂತೆ ಉಳಿತಾಯ ನಿಧಿಗಳನ್ನು ಬಳಸಿಕೊಳ್ಳಲು ಬೃಹತ್ ಬಂದರು ಟ್ರಸ್ಟ್ ಕಾಯ್ದೆ-1963ರ ಅವಕಾಶದಂತೆ ರೂಪಿಸಲಾಗಿರುತ್ತದೆ.
1.7 ಸುಲಭ ವ್ಯವಹಾರ ವ್ಯವಸ್ಥೆ
2019ರ ವಿಶ್ವ ಬ್ಯಾಂಕ್ ನ ವರದಿಯಂತೆ ಸುಲಭವಾಗಿ ವ್ಯವಹಾರವನ್ನು ನಡೆಸುವ ರ್ಯಾಂಕಿಂಗ್ ನಲ್ಲಿ ಭಾರತವು 2017-18ರಲ್ಲಿ 100 ರ್ಯಾಂಕ್ ಗಳಲ್ಲಿ 23 ರ್ಯಾಂಕ್ ಗಳಷ್ಟು ಜಿಗಿತವನ್ನು ಕಂಡುಕೊಂಡಿದೆ. 2018-19ರಲ್ಲಿ ಭಾರತವು 77ನೇ ರ್ಯಾಂಕ್ ಗೆ ಬಂದಿದೆ. ಇದು ಜಾಗತಿಕ ದರ್ಜೆಗೆ ಸಾಗುವ ನಿರಂತರ ನಡೆಯ ಸೂಚನೆ ಎನಿಸಿದೆ. ವ್ಯವಹಾರವನ್ನು ಸುಲಭವಾಗಿ ನಡೆಸುವ (ಇಒ ಡಿಬಿ) ನಿಟ್ಟಿನಲ್ಲಿ ನೌಕಾಯಾನ ಸಚಿವಾಲಯವು ಬೃಹತ್ ಬಂದರುಗಳ ನಿಷ್ಕ್ರಿಯ ಅವಧಿ ಮತ್ತು ವ್ಯವಹಾರ ವೆಚ್ಚವನ್ನು ತಗ್ಗಿಸುವತ್ತ ಸುಧಾರಣೆಗಳನ್ನು ತಂದಿದೆ.
ಮಾನವ ಬಳಕೆಯ ಕಾರ್ಯಗಳನ್ನು ನಿಧಾನವಾಗಿ ತಗ್ಗಿಸುವುದು ಪಾಲ್ಗೊಳ್ಳುವ ಸರ್ಕಾರಿ ಸಂಸ್ಥೆಗಳ(ಪಿಜಿಎಗಳು) ಪಾಲ್ಗೊಳ್ಳುವಿಕೆಯನ್ನು ಸಾಧಿಸಲು ಪ್ರಯೋಗಾಲಯಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬಂದರಿಗೆ ನೇರವಾಗಿ ಪೂರೈಕೆ, ಕಂಟೈನರ್ ಸ್ಕ್ಯಾನರ್ ಗಳ ಅಳವಡಿಕೆ, ಇ-ಡೆಲಿವರಿ ಆದೇಶಗಳು, ಆರ್ ಎಫ್ ಐಡಿ ಆಧಾರಿತವಾದ ಸ್ವಯಂಚಾಲಿತ ದ್ವಾರಗಳ ವ್ಯವಸ್ಥೆ ಮತ್ತಿತರೆ ಸುಧಾರಣೆಗಳನ್ನು ತರಲಾಗಿದೆ. ಈ ಉಪಕ್ರಮಗಳನ್ನು ಈಗಾಗಲೇ ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್( ಜೆ ಎನ್ ಬಂದರು)ನಲ್ಲಿ ಈಗಾಗಲೇ ಅನುಷ್ಠಾನಕ್ಕೆ ತರಲಾಗಿದ್ದು ಮತ್ತು ಉಳಿದ ಬೃಹತ್ ಬಂದರುಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಮಾನವ ಕೈಯಿಂದ ಮಾಡುವ ಕೆಲಸಗಳನ್ನು ಕಡಿಮೆ ಮಾಡಿ ತಾಂತ್ರಿಕತೆಗೆ ಒತ್ತು ನೀಡಿದ್ದರಿಂದ ಸಾಲು ನಿಲ್ಲುವುದು ನಿಂತಿದೆ ಮತ್ತು ಬಂದರುಗಳ ಗೇಟುಗಳಲ್ಲಿ ಕಂಟೇನರ್ ಗಳು ಕಾಯುವ ಸಮಯವನ್ನು ಮತ್ತು ಎಕ್ಸಿಂ (ಇ ಎಕ್ಸ್ ಐಎಂ ಕಾರ್ಗೋ) ಎಲ್ಲ ಬೃಹತ್ ಬಂದರುಗಳಲ್ಲಿ ಸುರಕ್ಷೆತಯನ್ನು ಇನ್ನಷ್ಟು ಹೆಚ್ಚು ಮಾಡಲು ಆರ್ ಎಫ್ ಐಡಿ ಪರಿಹಾರವನ್ನು ಜಾರಿಗೆ ತರಲಾಗಿದೆ. ಈ ಮೂಲಕ ಬಂದರುಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಿದೆ. ಬಂದರು ದ್ವಾರಗಳಲ್ಲಿ ಸಂಚಾರದ ತಡೆರಹಿದ ಚಲನೆಗೆ ಇರುವ ಸಮಸ್ಯೆಗಳನ್ನು ಇನ್ನಷ್ಟು ತ್ವರಿತವಾಗಿ ಪರಿಹಾರ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಟ್ರ್ಯಾಕಿಂಗ್ ಖಚಿತಪಡಿಸುವಿಕೆ ಮತ್ತು ಮಾನವ ಗುರುತಿಸುವಿಕೆ, ಸಲಕರಣೆಗಳು, ವಾಹನಗಳು, ಯಂತ್ರೋಪಕರಣಗಳು ಮತ್ತು ಇತರೆ ಆಸ್ತಿ-ಪಾಸ್ತಿಗಳನ್ನು ಮತ್ತು ನೋಂದಾಯಿತ ದರಗಳಲ್ಲಿ ಕಂದಾಯವನ್ನು ಸಂಗ್ರಹ ಮಾಡುವುದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲಾಗಿದೆ.
ವಿವಿಧ ಪಾಲುದಾರರು ಮತ್ತು ಬಂದರುಗಳ ನಡುವೆ ನೇರವಾದ ಮತ್ತು ತಡೆ ರಹಿತವಾದ ದತ್ತಾಂಶ ಅಥವಾ ಅಂಕಿಅಂಶಗಳನ್ನು ಕಾರ್ಯಾಚರಣೆಯನ್ನುಗೊಳಿಸಲು ಕೇಂದ್ರೀಕೃತ ವೆಬ್ ಆಧಾರಿತ ಬಂದರು ಸಮೂಹ ವ್ಯವಸ್ಥೆ(ಪಿಸಿಎಸ್) ಯನ್ನು ರೂಪಿಸಲಾಗಿದೆ. ಹಾಗೆಂದರೆ, ಅಬಕಾರಿ(ಅಬಕಾರಿ), ಸಿಎಫ್ ಎಸ್, ನೌಕಾಯಾನ ಲೈನ್ ಗಳು ಮತ್ತು ಐಸಿಡಿಗಳು, ಮಾರ್ಗಗಳು/ ಏಜೆಂಟ್ ಗಳು, ಸಮೀಕ್ಷೆದಾರರು(ಸರ್ವೇಯರ್), ಹಡಗಿನಿಂದ ಲೋಡ್-ಅನ್ ಲೋಡ್ ಮಾಡುವ ಕೆಲಸಗಾರರು, ಬ್ಯಾಂಕ್ ಗಳು, ಕಂಟೈನರ್ ಗಳ ಸರಕು ಠಾಣೆಗಳು, ಸರ್ಕಾರಿ ನೋಂದಾಯಿತ ಏಜೆನ್ಸಿಗಳು, ಕಸ್ಟಮ್ಸ್ ಹೌಸ್ ಏಜೆಂಟ್ ಗಳು, ಆಮದುದಾರರು, ರಫ್ತುದಾರರು, ಕಾಂಕರ್/ರೈಲ್ವೆ ಇತ್ಯಾದಿಗಳನ್ನು ಇದರ ಸಾಧನಗಳನ್ನಾಗಿಸಿಕೊಳ್ಳುವ ಮೂಲಕ ಸಾಮಾನ್ಯ ಮೇಲ್ಮೈ ಸಂಪರ್ಕವನ್ನು ಕಲ್ಪಿಸಲಾಗಿದೆ. ಸದ್ಯ ಇರುವಂತಹ ಕೇಂದ್ರೀಯ ವೆಬ್ ಆಧಾರಿತ ಬಂದರು ಸಮೂಹ ವ್ಯವಸ್ಥೆ 1.0 ಅನ್ನು ಪಿಸಿಎಸ್ 1xಗೆ ಮೇಲ್ದರ್ಜೆಗೇರಿಸಲಾಗಿದೆ.
ಇ-ಸರಕುಪಟ್ಟಿ,ಇ-ಪಾವತಿ/ಬಟವಾಡೆ ಮತ್ತು ಇ-ವಿತರಣೆಯನ್ನು ಎಲ್ಲಾ ಬೃಹತ್ ಬಂದರುಗಳಲ್ಲಿ ಜೋಡಣೆಯಾಗಿರುವ ಪಾಲುದಾರರ ಜತೆ ಮಾಡಿಕೊಳ್ಳುವಂತೆ ನೌಕಾಯಾನ ಸಚಿವಾಲಯವು 2018ರ ಮಾರ್ಚ್ 27ರಂದು ಆದೇಶವನ್ನು ಜಾರಿಗೆ ತಂದಿದೆ. ಬೃಹತ್ ಬಂದರುಗಳಲ್ಲಿರುವ ಎಲ್ಲ ಟರ್ಮಿನಲ್ ಗಳು, ಖಾಸಗಿ ಬಂದರುಗಳು, ಖಾಸಗಿ ಟರ್ಮಿನಲ್ ಗಳು ಮತ್ತು ಸಿಎಫ್ ಎಸ್ ಗಳೂ/ಐಸಿಡಿ ಗಳಲ್ಲಿ ಇದನ್ನು ಅನ್ವಯ ಮಾಡಿಕೊಳ್ಳಲು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚನೆಯನ್ನು ನೀಡಲಾಗಿರುತ್ತದೆ.
ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಸರಕು(ಲಾಜಿಸ್ಟಿಕ್) ದತ್ತಾಂಶ(ಅಂಕಿಅಂಶ) ಬ್ಯಾಂಕ್ ಸೇವೆಯನ್ನು ಆರಂಭಿಸಲಾಗಿದೆ. ಇಎಕ್ಸ್ ಐಎಂ ಕಂಟೇನರ್ ಗಳ ಜಾಡು ಗುರುತಿಸುವಿಕೆ ಮತ್ತು ಪತ್ತೆ ಹಚ್ಚುವಿಕೆಯನ್ನು ಜವಾಹರ ಲಾಲ್ ನೆಹರು ಬಂದರು ಟ್ರಸ್ಟ್ ನಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಅಲ್ಲದೇ ದೇಶದ ಇತರೆ ಪ್ರಮುಖ ಬಂದರುಗಳಲ್ಲೂ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ನೇರ ಬಂದರು ಹಂಚಿಕೆ(ಡಿಪಿಡಿ) ಮತ್ತು ನೇರ ಬಂದರು ಪ್ರವೇಶ(ಡಿಪಿಇ)ಯನ್ನು ಆರಂಭಿಸಿದಂತಹ ದೇಶದ ಮೊದಲ ಬಂದರು ಎನಿಸಿಕೊಂಡಿದೆ ಜವಾಹರ್ ಲಾಲ್ ನೆಹರು ಬಂದರು. 2016ರ ಮಾರ್ಚ್ ನಲ್ಲಿ ಶೇಕಡಾ 5.42ರಷ್ಟಿದ್ದ ನೇರ ಬಂದರು ಹಂಚಿಕೆಯ(ಡಿಪಿಡಿ) ಪ್ರಮಾಣವು 2018ರ ಆಗಸ್ಟ್ ವೇಳೆಗೆ ಶೇಕಡಾ 41.92ರಷ್ಟಾಗಿದೆ. ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ನಲ್ಲಿ ರಫ್ತು ಕಂಟೇನರ್ ಗಳ ನೇರ ಬಂದರು ಪ್ರವೇಶ ಪ್ರಮಾಣವು 2018ರ ಆಗಸ್ಟ್ ನಲ್ಲಿ ಶೇ60ರಿಂದ ಶೇಕಡಾ 76.98ಕ್ಕೆ ಏರಿಕೆಯನ್ನು ಕಂಡುಕೊಂಡಿದೆ. ರಫ್ತು ಪ್ರಮಾಣವನ್ನು ಸುಧಾರಿಸಿದ ಪರಿಣಾಮದಿಂದಾಗಿ ಸದ್ಯದ ಮಟ್ಟಿಗೆ ರಫ್ತುದಾರರು ಪ್ರತಿ ಟಿಯುಇಗೆ 2000 ಸಾವಿರ ರೂಪಾಯಿಗಳ ಉಳಿತಾಯ ಅನುಕೂಲವನ್ನು ಪಡೆದುಕೊಂಡಿದ್ದಾರೆ ಮತ್ತು ಒಂದು ಅಥವಾ ಎರಡು ದಿನಗಳ ಅವಧಿಯಲ್ಲೇ ನೇರ ಬಂದರು ಪ್ರವೇಶದ ಆಶ್ರಯದ ಮೂಲಕ ಸಾಧಿಸಿಕೊಳ್ಳುತ್ತಿದೆ. ಜವಾಹರ್ ಲಾಲ್ ನೆಹರು ಬಂದರು ಟರ್ಮಿನಲ್ ನಲ್ಲಿ ಆಮದು ಕಂಟೇನರ್ ಗಳ ನಿಲ್ಲುವ ಸಮಯವು 2016-17ರಲ್ಲಿ 58.08 ಗಂಟೆಗಳ ಅವಧಿಯಷ್ಟಿತ್ತು.2017-18ರಲ್ಲಿ ಆಮದು ಕಂಟೇನರ್ ಗಳ ನಿಲ್ಲುವ ಅವಧಿಯು 50.82 ಗಂಟೆಗಳಷ್ಟಾಗಿದೆ. 2016-17ರಲ್ಲಿ 88.35 ಗಂಟೆಗಳಷ್ಟಿದ್ದ ರಫ್ತು ಕಂಟೇನರ್ ಗಳ ನಿಲ್ಲುವ ಅವಧಿಯು 2017-18ರಲ್ಲಿ 83.71 ಗಂಟೆಗಳಿಗೆ ಕಡಿಮೆಯಾಗಿದೆ.
8 ಮೊಬೈಲ್ ಕಂಟೇನರ್ ಗಳ ಸಂಗ್ರಹಣಾ ಮೇಲ್ವಿಚಾರಣೆಯ ಸ್ಕ್ಯಾನರ್ ಗಳ ಕಾರ್ಯಾದೇಶವನ್ನು ಜಾರಿಗೆ ತರಲಾಗಿದೆ. ಬಂದರುಗಳಲ್ಲಿ ಸೈಟ್ ಪ್ರಿಪರೇಷನ್(ಕಾರ್ಯಜಾಲ ತಯಾರಿ) ಪ್ರಗತಿಯಲ್ಲಿದೆ. ಕಾರ್ಖಾನೆಯ ಸ್ವೀಕೃತಿ ಪರೀಕ್ಷೆ(ಎಫ್ ಎಟಿ)ಯ ಕಂಟೇನರ್ ಸ್ಕ್ಯಾನರ್ ಗಳ ಕಾರ್ಯಾಚರಣೆಯನ್ನು ಪರದೀಪ್, ವಿಶಾಖಪಟ್ಟಣಂ, ನವ ಮಂಗಳೂರು, ಮರ್ಮಗಾವ್, ಕಾಂಡ್ಲಾ, ಕಮ್ರಜಾರ್ ಮತ್ತು ಕೋಲ್ಕತ್ತಾ ಬಂದರುಗಳಲ್ಲಿ ಮಾಡಲಾಗಿರುತ್ತದೆ. ಸಂಗ್ರಹಣಾ ವ್ಯವಸ್ಥೆಯನ್ನು(ರಸ್ತೆ) ಸ್ಕ್ಯಾನರ್ ಮೂಲಕ ಸಾಧಿಸುವುದು(ನಂ-4) ಪ್ರಗತಿಯಲ್ಲಿದೆ, ಚಾಲನೆಗೊಳಿಸಲು ಸ್ಥಾನದ ಆಯ್ಕೆ(ರೈಲ್) ಸ್ಕ್ಯಾನರ್ ವ್ಯವಸ್ಥೆಯೂ ಕೂಡಾ ಪ್ರಗತಿಯಲ್ಲಿದೆ.
ಜವಾಹರ ಲಾಲ್ ನೆಹರೂ ಬಂದರು ಟ್ರಸ್ಟ್ ನೌಕಾಯಾನ ಸಚಿವಾಲಯದ ವತಿಯಿಂದ ಕೈಗೊಳ್ಳಲಾದ ಸುಧಾರಣಾ ಕ್ರಮಗಳ ಅನುಷ್ಠಾನದ ಪ್ರಾಯೋಗಿಕ ಬಂದರಾಗಿದೆ. ಕಾರ್ಗೋ(ಸರಕು) ಇ ಎಕ್ಸ್ ಐಎಂಗಳ ನಿಲ್ಲುವ ಸಮಯವನ್ನು ಸುಧಾರಿಸುವ ಮತ್ತು ವ್ಯಾಪಾರಕ್ಕೆ ಇನ್ನಷ್ಟು ಅನುಕೂಲಗಳನ್ನು ಕಲ್ಪಿಸಿಕೊಡುವಂತಹ ಆಸಕ್ತಿದಾಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ತ್ವರಿತ ಗತಿಯಲ್ಲಿ ಕಾರ್ಗೋಗಳ ತೆರವು ಕಾರ್ಯವನ್ನು ಸಾಧಿಸಿಕೊಳ್ಳಲು ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ನಲ್ಲಿ ಕಸ್ಟಮ್ ಸಂಸ್ಕರಣಾ ವಲಯ, ಕೇಂದ್ರೀಕೃತ ಪಾರ್ಕಿಂಗ್ ಸಮುಚ್ಚಯ ಮತ್ತು ಬಂದರುಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳನ್ನು ವಿಸ್ತರಣೆ ಮಾಡುವಂತಹ ಕಾರ್ಯಗಳನ್ನು ಕೈಗೆತ್ತಿಕೊಂಡು ತ್ವರಿತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಸಹಜವಾಗಿಯೇ ಸಾಮಾನ್ಯ ರೈಲ್ವೆ ಯಾರ್ಡ್ ಗಳ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಸಿದೆ. ಯಾರ್ಡ್ ಉತ್ಪಾದನೆಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ಸ್ವಯಂ ಚಾಲಿತ ಎಲೆಕ್ಟ್ರಾನಿಕ್ ಆರ್ ಟಿಜಿಸಿಗಳನ್ನು ಅಭಿವೃದ್ಧಿ ಪಡಿಸಿದೆ. ಜವಾಹರ್ ನೆಹರು ಬಂದರು ಟ್ರಸ್ಟ್ ನಲ್ಲಿ ಕೈಗೊಂಡಿರುವಂತಹ ಮಹತ್ವದಾಯಕವಾದ ಪರಿಣಾಮಕಾರಿ ಉಪಕ್ರಮಗಳು ನೇರ ಬಂದರು ಹಂಚಿಕೆ ಮತ್ತು ನೇರ ಬಂದರು ಪ್ರವೇಶಗಳನ್ನು ಹೆಚ್ಚಿಸುವ ಮೂಲಕ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸಿದೆ.
ಈ ಎಲ್ಲಾ ಸುಧಾರಣೆಗಳನ್ನು ನಿಯಮಿತವಾಗಿ ವೆಬ್ ಸೈಟ್ ಮೂಲಕವಾಗಿ ಎಲ್ಲಾ ಪಾಲುದಾರರಿಗೆ ಸಂವಹನ ಮಾಡಿಕೊಡಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಮತ್ತು ನಿಯಮಿತವಾದ ಪಾಲುದಾರರ ಸಭೆಗಳನ್ನು ನಡೆಸುವ ಮೂಲಕ ಸಂವಹನವನ್ನು ಇನ್ನಷ್ಟು ವೃದ್ಧಿ ಮಾಡಲಾಗುತ್ತಿದೆ.
1.8 2018ರಲ್ಲಿ ಕೈಗೊಳ್ಳಲಾದ ಮಹತ್ತರವಾದ ಉಪಕ್ರಮಗಳು/ ಸಾಧನೆಗಳು
- ಜೆಎನ್ ಪಿಟಿ
ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್(ಹಂತ-1)ರಲ್ಲಿ ನಾಲ್ಕನೇ ಕಂಟೇನರ್ ಟರ್ಮಿನಲ್ (ಎಫ್ ಸಿಟಿ)ಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು. ಬಂದರು ಕ್ಷೇತ್ರದಲ್ಲಿ ಇದು ಭಾರತದ ಬಹುದೊಡ್ಡ ವಿದೇಶ ನೇರ ಬಂಡವಾಳ ಹೂಡಿಕೆ ಆಧಾರಿತ ಯೋಜನೆಯಾಗಿದೆ. ಒಟ್ಟಾರೆ 7953 ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೊಂದಿದಂತಹ ಯೋಜನೆ ಬಂದರು ಕ್ಷೇತ್ರದಲ್ಲಿ ಮೊದಲ ಬಾರಿ ಸಾಧ್ಯವಾಗಿದೆ. ಈ ಕಂಟೇನಲ್ ನಿರ್ವಹಣೆಯ ಮೂಲಕವಾಗಿ ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ಸಂಗ್ರಹಣಾ ಸಾಮರ್ಥ್ಯವು 5.15 ದಶಲಕ್ಷ ಟಿಇಯುಗಳಿಂದ 7.55 ದಶಲಕ್ಷ ಟಿಯುಇಗಳಿಗೆ ಹೆಚ್ಚಳವಾಗಿದೆ.
- ಪರದೀಪ್ ಬಂದರು ಟ್ರಸ್ಟ್
- 2017-18ನೇ ಸಾಲಿನಲ್ಲಿ ದೀನ್ ದಯಾಳ್ ಬಂದರು(ಕಾಂಡ್ಲಾ) ನಂತರ ಪರದೀಪ್ ಬಂದರು ಟ್ರಸ್ಟ್ 100 ಮೆಟ್ರಿಕ್ ಟನ್ ಸರಗು ಸಾಗಣೆ ಸಾಧನೆಯನ್ನು ಸಾಧಿಸಿದಂತಹ ಎರಡನೇ ಬೃಹತ್ ಬಂದರು ಎನಿಸಿಕೊಂಡಿದೆ.
- ಕೇವಲ 20 ಗಂಟೆಗಳ ಅವಧಿಯಲ್ಲಿ 27 ಹಡಗುಗಳ ಸಂಚಾರವನ್ನು ಯಶಸವಿಯಾಗಿ ಮುಗಿಸುವ ಮೂಲಕವಾಗಿ ಸಾರ್ವಕಾಲಿಕ ದಾಖಲೆಯನ್ನು ಮಾಡಲಾಗಿದೆ. 2018ರ 13ನೇ ಅಕ್ಟೋಬರ್ ನ 0600 ಗಂಟೆಯಿಂದ 2018ರ ಅಕ್ಟೋಬರ್ 14ರ 0200ಗಂಟೆಯವರೆಗೆ ಈ ದಾಖಲೆಯ ಸಂಚಾರವನ್ನು ಮಾಡಲಾಗಿದೆ.
- 2018ರ ಅಕ್ಟೋಬರ್ 29ರಂದು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮೆಡಿಟರೇನಿಯನ್ ಮೋರಿಂಗ್ ಮೆಥೆಡ್ ಅನ್ನು ಖಾದ್ಯ ತೈಲವನ್ನು ‘ ಎಂಟಿ ಡೆಲ್ ಫೈನ್’ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಹಡಗು ರೇವನ್ನು ಬಳಕೆ ಮಾಡದೇ ತರಲಾಗಿದೆ.
- ವಿಒಸಿಪಿಟಿ
ವಿಒಸಿಪಿಟಿಯ ಆಳವಿಲ್ಲದ ನೀರಿನ ರೇವಿ(ಹಡಗು ನಿಲ್ಲುವ ಸ್ಥಳ)ನಲ್ಲಿ ರಾತ್ರಿ ನೌಕಾಯಾನ(ಜಲಸಂಚಾರ) ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಹಾಲಿ ಇರುವಂತಹ ಆಳದಲ್ಲಿ ಅಡಚಣೆಗಳೇ ಹೆಚ್ಚಾಗಿವೆ. ಸಮುದ್ರ/ಸಾಗರದ ದಂಡೆಯಲ್ಲಿ ಹೂಳು ತೆಗೆಯುವ ಮೂಲಕ ಮತ್ತು ಕರಾವಳಿ ದಂಡೆಯನ್ನು ನಿರ್ಮಾಣ ಮಾಡುವ ಮೂಲಕ ನೀರಿನ ಆಳ ಹೆಚ್ಚಿಸುವ ಕಾರ್ಯವನ್ನು ಮಾಡಲಾಗಿದೆ. 2018ರ ಏಪ್ರಿಲ್ ತಿಂಗಳಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ದಂಡೆಯ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ, ಆಳವಿಲ್ಲದ ನೀರಿನ ಪ್ರದೇಶದಲ್ಲಿ ನೌಕಾಯಾ/ಜಲಯಾನಕ್ಕೆ ಅವಕಾಶ ಮಾಡಿಕೊಟ್ಟು 2018ರ ಜೂನ್ ನಿಂದ ಹಡಗು ನಿಲ್ಲುವಿಕೆ/ನಿಲ್ಲದಿರುವಿಕೆಗೆ ಅವಕಾಶಗಳನ್ನು ಮಾಡಿಕೊಡಲಾಗಿದೆ.
ಚಿತ್ರ: ಎಸ್ಸಾರ್ ವೈಜಾಗ್ ಟರ್ಮಿನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾದ ಸಂಪೂರ್ಣ ಯಾಂತ್ರೀಕೃತ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುವ ವಿಪಿಟಿ.
iv. ವಿಶಾಖಪಟ್ಟಣಂ
2018ರ ಜುಲೈ 13ರಂದು ವಿಶಾಖಪಟ್ಟಣಂನಲ್ಲಿ 1062 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರೂಪಿಸಲಾದ ಬಂದರು ಯೋಜನೆಯನ್ನು ಉದ್ಘಾಟನೆ ಮಾಡಲಾಯ್ತು ಮತ್ತು 679 ಕೋಟಿ ರೂಪಾಯಿಗಳ ವೆಚ್ಚದ ಬಂದರು ಸಂಪರ್ಕ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯವನ್ನು ಮಾಡಲಾಯಿತು. ವಿಶಾಖ ಪಟ್ಟಣ ಬಂದರಿನ ಹೊರಗೆ ಕಬ್ಬಿಣದ ಅದಿರನ್ನು ನಿರ್ವಹಣೆ ಮಾಡುವಂತಹ ನಿಲುಗಡೆ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ. ಬಂದರು ಸಂಪರ್ಕ ಕಲ್ಪಿಸುವಂತಹ ರಸ್ತೆಯಿಂದ ಹೆದ್ದಾರಿ-7ರವರೆಗೆ ಗ್ರೇಡ್ ಸಪರೇಟರ್ ಅನ್ನು ನಿರ್ಮಾಣ ಮಾಡುವ ಕಾಮಗಾರಿ, ಸಾಗರ್ ಮಾಲಾ ಯೋಜನೆಯ ಅಡಿಯಲ್ಲಿ ಕಾನ್ವೆಂಟ್ ಜಂಕ್ಷನ್ ಕಾಮಗಾರಿ, ಅನಕಪಲ್ಲಿ-ಆನಂದಪುರಂ ರಸ್ತೆ(ಎನ್ ಹೆಚ್ 16)ರ ಶ್ರೀಲನಗರ ಜಂಕ್ಷನ್ ವರೆಗಿನ 12.7 ಕಿಲೋ ಮೀಟರ್ ವರೆಗಿನ ಬೈಪಾಸ್ ರಸ್ತೆ ನಿರ್ಮಾಣ.
- ಕೋಲ್ಕತ್ತಾ
ಮೊಟ್ಟ ಮೊದಲ ಬಾರಿಗೆ ಕೋಲ್ಕತ್ತಾ ಬಂದರು ಟ್ರಸ್ಟ್ ನಲ್ಲಿ 2018ರ ಅಕ್ಟೋಬರ್ 17ರಂದು ಸ್ಯಾಂಡ್ ಹೆಡ್ ರೇವಿನಲ್ಲಿ 1,64,928 ಮೆಟ್ರಿಕ್ ಟನ್ ತೂಕದ ಒಣ ಬೃಹತ್ ಸಾಂಧ್ರ(ಅದಿರು)ವನ್ನು ಹೊತ್ತ ಬೃಹತ್ತಾದ ಹಡಗು ಎಂವಿ ಸ್ಯಾಮ್ ಜಾನ್ ಸ್ಯಾಲಿಡಾರಿಟಿಯು ಯಶಸ್ವಿಯಾಗಿ ಬಂದು ನಿಂತುಕೊಂಡಿತು. ಎರಡು ತೂಗು ಕ್ರೇನ್ ಗಳ ಮೂಲಕ ಈ ಹಡುಗು 1 ಲಕ್ಷ ಮೆಟ್ರಿಕ್ ಟನ್ ತೂಕದ ಅದಿರನ್ನು ದೋಣಿಗಳ ಮೂಲಕ ಕೆಳಗಿಳಿಸಿತು. ಇಡೀ ಸರಕನ್ನು ತೇಲುವುದರ ಮೂಲಕ ಹಾಲ್ಡಿಯಾದ ದಂಡೆಗೆ ತಂದು ಹಾಕಲಾಯಿತು.
vi ಶೇಖರಣಾ ಶುಲ್ಕಗಳು:
- ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಗಳ ಪರಿಣಾಮದಿಂದಾಗಿ ಬೃಹತ್ ಬಂದರುಗಳಲ್ಲಿ ಬೃಹತ್ ಆದ ಶೇಖರಣಾ ಶುಲ್ಕದ ವ್ಯಾಪ್ತಿಗೆ ಬಂದವು. ಈ ವಿಚಾರವನ್ನು ಭಾರತೀಯ ಬಂದರು ಅಸೋಸಿಯೇಷನ್ (ಐಪಿಎ) ಅಧ್ಯಕ್ಷರ ನೇತೃತ್ವದ ಸಮಿತಿಯ ಅಡಿಯಲ್ಲಿ ತರಲಾಯಿತು. ಮೇಲಿನ ಸಮಿತಿಯ ನೀಡಲಾದ ಶಿಫಾರಸುಗಳ ಅನ್ವಯದಂತೆ ಅಸಹಜವಾದ ಸಂಗ್ರಹ ಶುಲ್ಕಗಳ ವಿಚಾರದಲ್ಲಿ ಪರಿಹಾರಾತ್ಮಕವಾದ ಪದ್ಧತಿಯೊಂದನ್ನು ಕಂಡುಕೊಳ್ಳಲಾಯಿತು. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದಂತಹ ಯೋಜನೆಗಳನ್ನು ಸರಿಯಾದಂತಹ ಪಥಕ್ಕೆ ತರುವಂತಹ ಕೆಲಸವನ್ನೂ ಈ ಪರಿಹಾರಾತ್ಮಕ ಶಿಫಾರಸುಗಳ ಮೂಲಕ ಮಾಡಿಕೊಳ್ಳಲಾಯಿತು. 2018ರ ಜುಲೈ 11ರಂದು ಎಲ್ಲಾ ಪ್ರಮುಖ ಬಂದರುಗಳಿಗೂ ಈ ಪರಿಹಾರಾತ್ಮಕ ಮಾರ್ಗಸೂಚಿಗಳನ್ನು ರವಾನೆ ಮಾಡಲಾಯಿತು.
- ಉಳಿತಾಯ(ಮಿಗಿತ) ನಿಧಿಯ ಬಳಕೆಗಳು:
- 2009ನೇ ಸಾಲಿನ ಫೆಬ್ರುವರಿಯಲ್ಲಿ ನೌಕಾಯಾನ ಸಚಿವಾಲಯವು ಹೊರಡಿಸಿದ ಸೂಚನೆಗಳಂತೆ ಬೃಹತ್ ಬಂದರುಗಳಲ್ಲಿ ಮಿಗಿತವಾದ ಅಥವಾ ಉಳಿತಾಯ ಮಾಡಲಾದ ನಿಧಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್(ಪಿಎಸ್ ಬಿ)ಗಳಲ್ಲಿ ಇಡಲು ಅನುಮತಿಯನ್ನು ಒದಗಿಸಿಕೊಡಲಾಯಿತು. ತಮ್ಮ ುಳಿತಾಯದ ಹಣವನ್ನು ಒಂದೆಡೆ ಸಂಗ್ರಹ ಅಥವಾ ತೆಗೆದಿಡುವ ಅಭ್ಯಾಸದ ಫಲವಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಈ ನಿಧಿಯನ್ನು ಏಕಾಂಗಿಯಾಗಿ ಸ್ಥಿರ ಠೇವಣಿ(ಫಿಕ್ಸಡ್ ಡೆಪಾಸಿಟ್)ಯ ರೂಪದಲ್ಲಿ ಇಡಲು ಅವಕಾಶಗಳನ್ನು ಮಾಡಿಕೊಡುವ ವಿಚಾರವನ್ನು ಸದ್ಯದ ಆರ್ಥಿಕ ಪರಿಷ್ಕರಣಾ ಸಂದರ್ಭದಲ್ಲಿ ವಿಮರ್ಶೆಗೆ ತರಲಾಗುತ್ತಿದೆ ಈ ವೇಳೆ ಭವಿಷ್ಯ ನಿಧಿ/ ಪಿಂಚಣಿ ನಿಧಿ/ ಉಳಿತಾಯ ನಿಧಿಯನ್ನು ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಗಳ ಹೂಡಿಕೆಯ ಮಾರ್ಗಸೂಚಿಗಳ ಅನ್ವಯ ತೊಡಗಿಸಿಕೊಳ್ಳಲೂ ಈ ಅವಲೋಕನಾ ಸಭೆಯ ಸಂದರ್ಭದಲ್ಲಿ ನಿರ್ಧರಿಸಲಾಗಿದೆ. ಈ ಹಿಂದಿನ ಮಾರ್ಗಸೂಚಿಗಳನ್ನು ಹಿಂಪಡೆಯುವ, ಪುನರ್ ರೂಪಿಸಲಾದ ಮಾರ್ಗಸೂಚಿಗಳನ್ನು 2018ರ ಜುಲೈ 27ರಂದು ಎಲ್ಲ ಪ್ರಮುಖ ಬಂದರುಗಳಿಗೆ ಬಂದರು ಇಲಾಖೆಯು ತಲುಪಿಸಿದೆ. ಅವುಗಳ ಪಿಂಚಣಿ ನಿಧಿ, ಭವಿಷ್ಯ ನಿಧಿ ಮತ್ತು ಗ್ರ್ಯಾಚುಟಿಯನ್ನು ಹೂಡಿಕೆ ಮಾಡುವ ವಿಚಾರವನ್ನು ಗಮನಕ್ಕೆ ತರಲಾಗಿದೆ.
viii ಎರ್ನಾಕುಲಂ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ನೆರವು:
- ಕೇರಳದಲ್ಲಿ ಇತ್ತೀಚೆಗೆ ಸುರಿದ ಅನಿರೀಕ್ಷಿತ ಭಾರಿ ಮಳೆಯ ಮತ್ತು ಅದರಿಂದ ಉಂಟಾದ ಪ್ರವಾಹದ ಪರಿಣಾಮದಿಂದಾಗಿ ಆರಂಭಿಕ ದಿನಗಳಿಂದಲೇ ಪರಿಹಾರ ಸಾಮಗ್ರಿಗಳನ್ನು ತರುವಲ್ಲಿ ಕೊಚಿನ್ ಬಂದರು ಸಾಕಷ್ಟು ಸಹಾಯವನ್ನು ಮಾಡಿದೆ. ಎರ್ನಾಕುಲಂ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹ ಪೀಡಿತ ಸ್ಥಳಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊಚ್ಇನ್ ಬಂದರು ಕೂಡಾ ತನ್ನದೇ ಆದ ನೆರವಿನ ಸಹಾಯ ಹಸ್ತವನ್ನು ಚಾಚಿದೆ. ಪರಿಹಾರ ಶಿಬಿರಗಳನ್ನು ಏರ್ಪಾಡು ಮಾಡುವುದು, ವೈದ್ಯಕೀಯ ಔಷಧಿ ಪರಿಕರಗಳ ನೆರವು, ಆಹಾರ ವಿತರಣೆ, ಪ್ರವಾಹ ಪರಿಹಾರ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ ನಿಲುಗಡೆಗೆ ರೇವುಗಳನ್ನು ತ್ವರಿತ ಮತ್ತು ಸೂಕ್ತ ಸಂದರ್ಭಕ್ಕೆ ತೆರವು ಮಾಡಿಕೊಡುವುದು ಹೀಗೆ ನಾನಾ ರೀತಿಯ ಪರಿಹಾರ ಕಾರ್ಯಗಳನ್ನು ಕೊಚಿನ್ ಬಂದರು ಮಾಡಿದೆ. ಐಎನ್ ಎನ್ ದೀಪಕ್ ನೌಕಾ ಹಡಗು ಹೊತ್ತು ತಂದ ಪರಿಹಾರ ಸಾಮಗ್ರಿ, ಐಎನ್ ಎಸ್ ಮೈಸೂರು, ಐಎನ್ ಎಸ್ ಮುಂಬೈ, ಐಎನ್ ಎಸ್ ಶಾರದಾ ಮತ್ತು ನೌಕಾ ಪಡೆಯ ಹಡಗುಗಳಾದ ಐಸಿಜಿಎಸ್ ವಿಕ್ರಮ್ ತಂದ ಪರಿಹಾರ ಸಾಮಗ್ರಿಗಳನ್ನು ಬಂದರಿನಲ್ಲಿ ಆದ್ಯತೆಯ ಅಡಿಯಲ್ಲಿ ನಿರ್ವಹಣೆ ಮಾಡಲಾಯಿತು. ಕೊಚಿನ್ ಬಂದರು ಟ್ರಸ್ಟ್ ತನ್ನ ನೌಕರರ ಒಂದು ದಿನದ ವೇತನ 31 ಲಕ್ಷ ರೂಪಾಯಿಗಳೂ ಸೇರಿದಂತೆ 62 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೆರವಿನ ರೂಪದಲ್ಲಿ ನೀಡಿದೆ. ಅಷ್ಟೇ ಪ್ರಮಾಣದ ಹಣವನ್ನು ಸಿಒಪಿಟಿ ನಿಧಿಯಿಂದಲು ಒದಗಿಸಲಾಗಿದೆ. ಅದೇ ರೀತಿ ಕೋಲ್ಕತ್ತಾ ಬಂದರು ಟ್ರಸ್ಟ್ ನೌಕರರ ಒಂದು ದಿನದ ವೇತನ(83 ಲಕ್ಷ ರೂಪಾಯಿಗಳು)ವನ್ನು ಕೇರಳ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ(ಕೆಸಿಎಂಡಿಆರ್ ಎಫ್)ಗೆ ಒದಗಿಸಲಾಗಿದೆ ಮತ್ತು ಕೋಲ್ಕತ್ತಾದಿಂದ ಕೊಚಿನ್ ಬಂದರಿಗೆ ಉಚಿತವಾಗಿ ಪರಿಹಾರ ಸಾಮಗ್ರಿಗಳನ್ನು ಕಂಟೇನರ್ ಗಳ ಮೂಲಕ ಹೊತ್ತು ತಂದು ಒದಗಿಸಲಾಗಿದೆ..
- ಖಾಯಂ ಮಧ್ಯಸ್ಥಿಕಾ ಕೋರ್ಟ್ ನಿಂದ ಆದೇಶ:
ಖಾಯಂ ಮಧ್ಯಸ್ಥಿಕಾ ಕೋರ್ಟ್ ನ ಮೂಲಕವಾಗಿ ಕೋಲ್ಕತ್ತಾ ಬಂದರು ಮತ್ತು ಲೂಯಿಸ್ ಡ್ರೈಫ್ಯೂಸ್ ಆರ್ಮೆಟೀರ್ಸ್ (ಎಲ್ ಡಿಎ) ನಡುವೆ ನಿರ್ಧರಿಸಲಾಗಿದ್ದ ಯೋಜನೆಯೊಂದರ ಸಂಬಂಧ ಇದ್ದ ವ್ಯಾಜ್ಯಕ್ಕೆ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ದ್ವಿಪಕ್ಷೀಯ ಹೂಡಿಕೆಯ ಸಂರಕ್ಷಣಾ ಒಪ್ಪಂದವನ್ನು ಆಹ್ವಾನಿಸಲಾಗಿದೆ. ಭಾರತದ ಸರ್ಕಾರವು ಖಾಯಂ ಮಧ್ಯಸ್ಥಿಕಾ ಕೋರ್ಟ್ ಅನ್ನು ತೆರೆಯುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ಅವಕಾಶಗಳನ್ನು ತೆರೆದಿದೆ. 2018ರ ಸೆಪ್ಟೆಂಬರ್ 11ರಂದು ನೀಡಿದ ತನ್ನ ಆದೇಶದಲ್ಲಿ ಖಾಯಂ ಮಧ್ಯಸ್ಥಿಕಾ ನ್ಯಾಯಾಲಯವು ಎನ್ ಡಿಎಯು ಭಾರತ(ಎ)ಗೆ 540,885.30 ಅಮೆರಿಕನ್ ಡಾಲರ್ ಅನ್ನು ಟ್ರಿಬ್ಯುನಲ್ ನಲ್ಲಿ ಭಾರತದ ಪಾಲಿನ ರೂಪದಲ್ಲಿ ಪಾವತಿ ಮಾಡಲು ತಿಳಿಸಿದೆ. ಮಧ್ಯಸ್ಥಿಕೆಯ ಪಿಸಿಎ ಮೊತ್ತವನ್ನು ಸೇರಿಸಿಕೊಂಡಿದ್ದು ಮತ್ತು (ಬಿ)6,626,971.85 ಅಮೆರಿಕನ್ ಡಾಲರ್ ಅನ್ನು ಕಾನೂನು ಪ್ರತಿನಿಧಿತ್ವ ಮತ್ತು ನ್ಯಾಯದಾನದ ನೆರವಿನ ಮೊತ್ತದ ರೂಪದಲ್ಲಿ ಪಾವತಿ ಮಾಡಲು ಸೂಚಿಸಿರುತ್ತದೆ.
- ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ ಗುತ್ತಿಗೆದಾರರ ಸುರಕ್ಷಾ ಪರವಾನಗಿ
ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ ಭಾಗಿಯಾಗಿರುವಂತಹ ಪಾಲದಾರರು ಮತ್ತು ಕಂಪನಿಗಳ ಹಿತವನ್ನು ಕಾಯುವ ದೃಷ್ಟಿಯಿಂದ ಸುರಕ್ಷತಾ ಪರವಾನಗಿಯ ಪರಿಷ್ಕರಿಸಲಾದ ಮಾರ್ಗಸೂಚಿಗಳನ್ನು 2018ರ ಜನವರಿ 31ರಂದು ಜಾರಿಗೆ ತಂದು ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಬೃಹತ್ ಬಂದರುಗಳಲ್ಲಿ ನೆನೆಗುದಿಗೆ ಬಿದ್ದಿರುವಂತಹ ಯೋಜನೆಗಳನ್ನು 3 ವರ್ಷದ ಪರವಾನಗಿ ಅವಧಿಯಿಂದ 5 ವರ್ಷದ ಅವಧಿಗೆ ಏರಿಕೆ ಮಾಡಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದಿಂದ ಈ ಮಾನ್ಯತಾ ಅವಧಿಯನ್ನು ಪಾಲಿಸಲಾಗುತ್ತಿದೆ.
1.9 ಚಾಬಾಹಾರ್ ಬಂದರು ಯೋಜನೆ:
2018ರ ಜನವರಿಯಲ್ಲಿ ಇರಾನಿಯನ್ ನಿಯೋಗವು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಬಹಾರ್ ಫ್ರೀ ಟ್ರೇಡ್ ಝೋನ್ ನಲ್ಲಿ ತಮ್ಮ ಘಟಕಗಳನ್ನು ತೆರೆಯುವಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುವಂತಹ ಆಸಕ್ತಿ ದಾಯಕ ಉದ್ದಿಮೆದಾರರ ಜತೆ ಸಭೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸಾಕಷ್ಟು ಮಂದಿ ಉದ್ಯಮಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಚಬಾಹಾರ್ ಬಂದರನ್ನು ಅಭಿವೃದ್ಧಿ ಪಡಿಸುವಂತಹ ವಿಚಾರಗಳೂ ಕೂಡ ಪ್ರಮುಖವಾಗಿ ಚರ್ಚೆಗೆ ಬಂದವು. ಈ ಕಾರ್ಯದಲ್ಲಿ ಹೂಡಿಕೆ ಮಾಡುವ ಸಂಗತಿಗಳನ್ನು ಸಭೆಯಲ್ಲಿ ಸಮಾಲೋಚಿಸಲಾಯಿತು. 2018ರ ಫೆಬ್ರುವರಿ 17ರಂದು ಚಾಬಾಹಾರ್ ಬಂದರಿಗೆ ಮಧ್ಯಂತರ ಕಾರ್ಯಾಚರಣಾ ಒಪ್ಪಂದಕ್ಕೆ ಈ ಸಂದರ್ಬದಲ್ಲಿ ಎರಡೂ ಕಡೆಯವರು ಸಹಿಯನ್ನು ಮಾಡಿಕೊಂಡರು. ಅಲ್ಲದೇ 10-10-2018ರಲ್ಲಿ ಚಾಬಾಹಾರ್ ಬಂದರು ಯೋಜನೆಯ ವಿವಿಧ ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆಗಳೂ ಕೂಡಾ ನಡೆದವು. ಈ ದ್ವಿಪಕ್ಷೀಯ ಮಾತುಕತೆಯನ್ನು ಭಾರತದ ಕಾರ್ಯದರ್ಶಿ(ನೌಕಾಯಾನ ಸಚಿವಾಲಯ) ಮತ್ತು ಉಪ ಸಚಿವ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಇರಾನ್ ನ ಬಂದರು ಮತ್ತು ಜಲಸಾರಿಗೆ ಸಂಸ್ಥೆ(ಪಿಎಂಒ)ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಮ್ಮದ್ ರಸ್ತಾದ್ ಅವರ ನೇತೃತ್ವದ ನಿಯೋಗದ ಸಮ್ಮುಖದಲ್ಲಿ ನಡೆಸಲಾಯಿತು. ಇರಾನಿಯನ್ ನಿಯೋಗವು ಇಂಡಿಯನ್ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ ವ್ಯವಸ್ಥಾಪ ನಿರ್ದೇಶಕರು ಮತ್ತು ಬಂದರು ಇಲಾಖೆ ಪ್ರತಿನಿಧಿಗಳು ಜವಾಹರ್ ಲಾಲ್ ನೆಹರು ಬಂದರಿನ ಕಾರ್ಯಾಚರಣೆಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಿದ್ದವು.
- ಸಾಗರಮಾಲಾ (SAGARMALA)
2.1 ಸಾಗರಮಾಲಾ ಯೋಜನೆ:
ಸಾಗರ ಮಾಲಾ ಯೋಜನೆಯ ಅಡಿಯಲ್ಲಿ 8.8 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು 605 ಯೋಜನೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 89 ಯೋಜನೆಗಳನ್ನು 0.14 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರ್ಣ ಮಾಡಲಾಗಿದೆ. 443 ಯೋಜನೆಗಳಿಗೆ 4.32 ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದ್ದು ವಿವಿಧ ಹಂತಗಳಲ್ಲಿ ಈ ಯೋಜನೆಗಳು ಅನುಷ್ಠಾನ ಮತ್ತು ಅಭಿವೃದ್ಧಿಯ ಪ್ರಗತಿಯಲ್ಲಿವೆ. ಸಾಗರಮಾಲಾ ಯೋಜನೆಯು ಬಂದರು ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇಎಕ್ಸ್ ಐಎಂ ಮತ್ತು ಪ್ರಾದೇಶಿಕ ವ್ಯಾಪಾರದ ಸರಕು ಸಾಗಣೆಯ ವೆಚ್ಚವನ್ನು ತಗ್ಗಿಸುತ್ತದೆ.
2.2 ಬಂದರು ಸಾಮರ್ಥ್ಯ ಗುರಿ:
ನೌಕಾಯಾನ ಸಚಿವಾಲಯವು ಆಯಾ ರಾಜ್ಯ ಸರ್ಕಾರಗಳ ಜತೆಯಲ್ಲಿ ಸೇರಿಕೊಂಡು ಪ್ರತಿ ವರ್ಷಕ್ಕೆ ಎಲ್ಲಾ ಬಂದರುಗಳ ಸಾಮರ್ಥ್ಯವನ್ನು 3500ಕ್ಕೂ ಹೆಚ್ಚಿನ ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿಪಿಎ)ಗಳಿಗೆ ವೃದ್ಧಿಸಲು ಕಾತರವಾಗಿದೆ. ಅದರಂತೆ ತ್ವರಿತವಾಗಿ ಕಾರ್ಯಾನುಷ್ಠಾನಗಳನ್ನೂ ಮಾಡುತ್ತಿದೆ. ಈಗಿರುವ 2500 ಎಂಎಂಟಿಪಿಎಯನ್ನು 2025ರ ವೇಳೆಗೆ 3500 ದಶಲಕ್ಷ ಮೆಟ್ರಿಕ್ ಟನ್ ಗಳಿಗೂ ಅಧಿಕವಾಗಿ ವೃದ್ಧಿಸುವ ಗುರಿಯನ್ನು ಹೊಂದಿ ಅದರಂತೆ ಉತ್ಕರ್ಷಕ ಕ್ರಮಗಳನ್ನು ಕೈಗೊಂಡಿದೆ. ಇದರ ನಿಟ್ಟಿನಲ್ಲಿ 249 ಬಂದರು ಆಧುನೀಕರಣ ಯೋಜನೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಇದರಲ್ಲಿ 107 ಬಂದರುಗಳ ಸಾಮರ್ಥ್ಯವನ್ನು ವಿಸ್ತರಣೆ ಮಾಡುವ ಉದ್ದೇಶವಿದ್ದು(ಅಂದಾಜು ಮೊತ್ತ 67,962 ಕೋಟಿ) 12 ಬಂದರು ಮಾಸ್ಟರ್ ಪ್ಲಾನ್ ಬೃಹತ್ ಯೋಜನೆಗಳಲ್ಲಿ ಇವುಗಳನ್ನು ಸೇರಿಸಿಕೊಳ್ಳಲಾಗಿದೆ. ಮುಂದಿನ 20 ವರ್ಷಗಳಲ್ಲಿ ಬೃಹತ್ ಬಂದರುಗಳಲ್ಲಿ 794 ಎಂಎಂಟಿಪಿಎಯ ಸಾಮರ್ಥ್ಯವನ್ನು ಸೇರಿಸುವ ಗುರಿಯನ್ನು ಬಂದರು ಇಲಾಖೆಯು ಹೊಂದಿದೆ.
2.3. ಬೃಹತ್ ಬಂದರುಗಳ ಸಾಮರ್ಥ್ಯ ಮರು ನಿಗದೀಕರಣ:
2.3 ಬೃಹತ್ ಬಂದರುಗಳ ಸಾಮರ್ಥ್ಯ ಹೆಚ್ಚಳ
ಬೃಹತ್ ಬಂದರುಗಳ ಪುನಶ್ಚೇತನ ನೀತಿ-2016 ಅನ್ನು ನೌಕಾಯಾನ ಸಚಿವಾಲಯವು ಮಂಜೂರು ಮಾಡಿದ್ದು ಇದರಂತೆ ಬೃಹತ್ ಒಣ ಹಡಗು ನಿಲ್ಲುವ ರೇವುಗಳನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಗರಿಷ್ಠ ಗುಣ ಮಟ್ಟದ ವಿಧಾನವನ್ನು ಅನುಸರಿಸಲಾಗಿದೆ. ಬರ್ತಿಂಗ್ ನೀತಿಯ ಮೂಲಕ ಜಾಗತಿಕ ದರ್ಜೆಗೆ ತಕ್ಕಂತೆ ಬೃಹತ್ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ದೃಷ್ಟಿಯಲ್ಲಿ ಐತಿಹಾಸಿಕವಾದ ನಿರ್ಧಾರಗಳನ್ನು ಮಾಡಲಾಗಿದೆ. ಬೃಹತ್ ಬಂದರುಗಳ ಘೋಷಿತ ಸಾಮರ್ಥ್ಯವು 2017ರ ಮಾರ್ಚ್ 31ರವರೆಗೆ 1066 ಎಂಟಿಪಿಎಗಳಷ್ಟಿದ್ದು, ಮರು ನಿಗದೀಕರಣವನ್ನು ಮಾಡಿದ ನಂತರ ಪರಿಣಾಮಕಾರಿ ಮರು ನಿಗದೀಕರಣ ಪ್ರಯೋಗವನ್ನು ಮಾಡಲಾಗಿದೆ. ಪರಿಣಾಮಕಾರಿ ನಿಗದಿತ ಸಾಮರ್ಥ್ಯ ಮತ್ತು ಉದ್ದೇಶಿತ ಬೃಹತ್ ಬಂದರುಗಳ ಸಾಮರ್ಥ್ಯವು 2017ರ ಮಾರ್ಚ್ 31ಕ್ಕೆ ಕ್ರಮವಾಗಿ 1359 ಎಂಟಿಪಿಎ ಮತ್ತು 989 ಎಂಟಿಪಿಎಗಳಷ್ಟಾಗಿದೆ.
2.4 ಬಂದರು ಆಧುನೀಕರಣ
ಉನ್ನತಿ ಯೋಜನೆಯ ಅಡಿಯಲ್ಲಿ 12 ಬೃಹತ್ ಬಂದರುಗಳ ಸುಧಾರಿತ ಕಾರ್ಯಕ್ಷಮತೆ ಮತ್ತು ಉತ್ಪಾದನೆಯ ಕ್ರಿಯಾಶೀಲ ಪ್ರದರ್ಶನದ ಸೂಚಕ(ಕೆಪಿಐ)ಗಳನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಸುಧಾರಿಸಲಾಗಿದೆ. 12 ಬೃಹತ್ ಬಂದರುಗಳಲ್ಲಿ 116 ಉಪಕ್ರಮಗಳನ್ನು ಗುರುತಿಸಲಾಗಿದೆ. 100 ಎಂಟಿಪಿಎ ಸಾಮರ್ಥ್ಯಕ್ಕಿಂತಲೂ ಹೆಚ್ಚು ಸಾಧನೆಯನ್ನು ಮಾಡಲು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 91 ಉಪಕ್ರಮಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರುವ ಮೂಲಕವಾಗಿ 80 ಎಂಟಿಪಿಎ ಸಾಮರ್ಥ್ಯವನ್ನು ಮುಟ್ಟುವ ಪ್ರಯತ್ನಗಳನ್ನು ಮಾಡಲಾಗಿದೆ.
2.5 ಹೊಸ ಬಂದರುಗಳ ಅಭಿವೃದ್ಧಿ:
ಬೃಹತ್ ಬಂದರುಗಳನ್ನು ವಿಸ್ತರಣೆ ಮಾಡುವ ಯೋಜನೆಗಳ ಜತೆಗೆ 6 ಹೊಸ ಬಂದರುಗಳ ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ –ವಧಮಾನ್ (ಮಹಾರಾಷ್ಟ್ರ) ಎನಾಯಂ(ತಮಿಳುನಾಡು), ತೇಜ್ ಪುರ್ (ಪಶ್ಚಿಮ ಬಂಗಾಳ), ಪರದೀಪ್ ಹೊರ ಹಡಗು ತಾಣ(ಒಡಿಶಾ), ಸಿರ್ಕಝೈ(ತಮಿಳುನಾಡು) ಬೇಲೇಕೇರಿ(ಕರ್ನಾಟಕ)ಗಳನ್ನು ಗುರುತಿಸಲಾಗಿದೆ. ಒಟ್ಟಾರೆ ಹಡಗು ಸರಕು ಸಾಮರ್ಥ್ಯವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ಇವುಗಳನ್ನು ಗುರುತಿಸಲಾಗಿದೆ.
2.6 ಬಂದರು ಸಂಪರ್ಕ ವರ್ಧಕ:
ಬಂದರು ಸಂಪರ್ಕವನ್ನು ಇನ್ನಷ್ಟು ಸುಧಾರಿಸಲು ಒಳನಾಡುಗಳಿಗೆ ರಸ್ತೆ ಮತ್ತು ರೈಲು ಮಾರ್ಗಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ರೈಲು:
ಭಾರತೀಯ ಬಂದರು ರೈಲು ಕಾರ್ಪೊರೇಷನ್ ಲಿಮಿಟೆಡ್ (ಐಪಿಆರ್ ಸಿಎಲ್) 32 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು (ಅಂದಾಜು ಮೊತ್ತ 18,253 ಕೋಟಿ) ಒಂಭತ್ತು ಬೃಹತ್ ಬಂದರುಗಳಲ್ಲಿ ಈ ಯೋಜನೆಗಳನ್ನು ಮಾಡಲಾಗುತ್ತಿದೆ. ಎಂಟು ಯೋಜನೆಗಳನ್ನು175 ಕೋಟಿ ರೂಪಾಯಿ) ಪೂರ್ಣಗೊಳಿಸಲಾಗಿದೆ. ಇದರ ಜತೆಗೆ 23 ರೈಲು ಸಂಪರ್ಕ ಯೋಜನೆಗಳನ್ನು (24,877 ಕೋಟಿ ರೂಪಾಯಿಗಳು) ಸಾಗರಮಾಲಾ ಯೋಜನೆಯಡಿ ಗುರುತಿಸಿ ರೈಲ್ವೆ ಇಲಾಖೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 7 ಯೋಜನೆಗಳು(2491 ಕೋಟಿ ರೂಪಾಯಿಗಳು) ಪೂರ್ಣಗೊಂಡಿವೆ. ಅಲ್ಲದೇ 15 ರೈಲು ಸಂಪರ್ಕ ಯೋಜನೆಗಳನ್ನು( 4,193 ಕೋಟಿ ರೂಪಾಯಿಗಳು) ಕೈಗೆತ್ತಿಕೊಂಡಿದ್ದು, ರೈಲು-ಬಂದರು ಇಲಾಖೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಮತ್ತು 3 ಯೋಜನೆಗಳಲ್ಲಿ (52 ಕೋಟಿ ರೂಪಾಯಿ) ಇತರೆ ಆಪರೇಟರ್ ಗಳು ಮುಗಿಸಿದ್ದಾರೆ. ಒಟ್ಟಾರೆ 52 ಯೋಜನೆಗಳು (44,605 ಕೋಟಿ ರೂಪಾಯಿ) ಪ್ರಗತಿಯ ವಿವಿಧ ಹಂತಗಳಲ್ಲಿ ಇವೆ. ಈ ಸಂಸ್ಥೆಗಳು ಇವೆಲ್ಲವೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇಂದೋರ್-ಮನ್ಮಾದ್ ರೈಲು ಮಾರ್ಗ:
ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ಮತ್ತು ಕೇಂದ್ರ ರೈಲ್ವೆ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಮಧ್ಯಪ್ರದೇಶ ಸರ್ಕಾರಗಳ ಜತೆ 362 ಕಿಲೋ ಮೀಟರ್ ದೂರದ ಇಂಧೋರ್- ಮನ್ಮಾದ್ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ತಿಳಿವಳಿಕೆ ಪತ್ರವನ್ನು ಮಾಡಿಕೊಳ್ಳಲಾಗಿದೆ. ಈ ಹೊಸ ಯೋಜನೆಯು ಮಧ್ಯ ಭಾರತದ ಮುಂಬೈ/ಪುಣೆ ಪ್ರದೇಶಗಳ ಅಂತರವನ್ನು 171 ಕಿಲೋ ಮೀಟರ್ ಗಳಷ್ಟು ಕಡಿಮೆ ಮಾಡಲಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಲಿದೆ. ಹೊಸ ರೈಲು ಮಾರ್ಗವು ದೆಹಲಿ –ಮುಂಬೈ ಕೈಗಾರಿಕಾ ಕಾರಿಡಾರ್ ಮೂಲಕ ಹಾದುಹೋಗಲಿದೆ. ಇಗಾತ್ ಪುರಿ, ನಾಸಿಕ್ ಮತ್ತು ಸಿನ್ನಾರ್, ಪುಣೆ ಮತ್ತು ಖೇದ್, ಧುಲೆ ಮತ್ತು ನರ್ದನಾಗಳ ಮೂಲಕ ಸಾಗಿ ಹೋಗಲಿದೆ.
ರಸ್ತೆ:
ವಿವಿಧ ೇಜೆನ್ಸಿಗಳ ಮೂಲಕ 112 ರಸ್ತೆ ಸಂಪರ್ಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ 112 ರಸ್ತೆ ಯೋಜನೆಗಳಲ್ಲಿ 54 ರಸ್ತೆ ಯೋಜನೆಗಳು( 22,258 ಕೋಟಿ ರೂಪಾಯಿಗಳು) ಭಾರತಮಾಲಾ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಂಡಂತಹವುಗಳಾಗಿವೆ. 102 ಯೋಜನೆಗಳನ್ನು ರಸ್ತೆ ಭೂಸಾರಿಗೆ ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಖಾರ(ಎನ್ ಹೆಚ್ ಎಐ) ಮತ್ತು ಉಳಿದ 10 ರಸ್ತೆ ಯೋಜನೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ, ಬಂದರು ಪ್ರಾಧಿಕಾರಗಳು ಮತ್ತು ಸಾಗರ್ ಮಾಲಾ ಅಭಿವೃದ್ಧಿ ಯೋಜನೆ(ಎಸ್ ಡಿಸಿ)ಗಳನ್ನು ರಸ್ತೆ, ಭೂಸಾರಿಗೆ ಮತ್ತು ಹೆದ್ದಾರಿ/ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(ಎನ್ ಹೆಚ್ ಎಐ) ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಒಟ್ಟಾರೆ 5 ಯೋಜನೆಗಳು( 268 ಕೋಟಿ ರೂಪಾಯಿಗಳು) ಪೂರ್ಣಗೊಂಡಿವೆ ಹಾಗೂ 97 ಯೋಜನೆಗಳು(1,80,347 ಕೋಟಿ ರೂಪಾಯಿಗಳು) ಅನುಷ್ಠಾನದ ಹಂತದಲ್ಲಿವೆ.
2.7 ಬಂದರು ಕೇಂದ್ರಿತ ಕೈಗಾರಿಕೀಕರಣ:
ಕಡಲತೀರದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14 ಕರಾವಳಿ ಆರ್ಥಿಕ ವಲಯ(ಸಿಇಝಡ್)ಗಳನ್ನು ಗುರುತಿಸಲಾಗಿದೆ. ಸಿಇಝಡ್ ಗಳ ದೂರದೃಷ್ಟಿ ಪ್ಲಾನ್ ಅನ್ನು ತಯಾರಿ ಮಾಡಲಾಗಿದೆ ಮತ್ತು 4 ಪ್ರಾಯೋಗಿಕ ಕರಾವಳಿ ಆರ್ಥಿಕ ವಲಯಗಳಿಗೆ ವಿಸ್ತೃತ ಮಾಸ್ಟರ್ ಪ್ಲಾನ್ ಗಳನ್ನು ರೂಪಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಯೋಜಿಸಲಾಗಿದೆ. ಅಭಿವೃದ್ಧಿಯ ಮೊದಲ ಹಂತದಲ್ಲಿ ಇವುಗಳನ್ನು ಗುರುತಿಸಲಾಗಿದೆ. ಸಿಇಝಡ್ ಗಳ ಅಭಿವೃದ್ಧಿ ಯನ್ನು ಸಿಇಒ,ನೀತಿ ಆಯೋಗಗಳ ಸಲಹೆಯಂತೆ ಸಿಇಝಡ್ ಗಳ ಅಭಿವೃದ್ಧಿಯ ನೀತಿ ಕಾರ್ಯಸೂಚಿಯನ್ನು ಅಂತರ ಸಚಿವಾಲಯಗಳ ಸಮಿತಿ(ಐಎಂಸಿ)ಯ ಶಿಫಾರಸುಗಳ ಅನ್ವಯ ಅಂತಿಮಗೊಳಿಸಲಾಗಿದೆ.
ಇದಲ್ಲದೇ 38 ಸಂಭವನೀಯ ಬಂದರುಗಳನ್ನು ಕೈಗಾರಿಕಾ ಕ್ಲಸ್ಟರ್ ಗಳಿಗೆ ಸಂಪರ್ಕಿಸಲಾಗುತ್ತಿದೆ. ವಿದ್ಯುತ್, ಸಲಕರಣೆಗಳು, ಪ್ರತ್ಯೇಕ ತಯಾರಿಕಾ ಮತ್ತು ಕಡಲ ತೀರದ ವಲಯಗಳನ್ನು ಗುರುತಿಸಲಾಗಿದೆ. ಈ ಕೈಗಾರಿಕಾ ಪಾರ್ಕ್ ಗಳಲ್ಲಿ, ಮಹಾರಾಷ್ಟ್ರದ ಸತಾರಾದಲ್ಲಿ (139 ಕೋಟಿ ರೂಪಾಯಿಗಳ) ಆಹಾರ ಸಂಸ್ಕರಣಾ ಮೆಗಾ ಪಾರ್ಕ್ ಅನ್ನು ಪೂರ್ಣಗೊಳಿಸಲಾಗಿದೆ. ಮತ್ತು 3 ವಿದ್ಯುತ್ ಕ್ಲಸ್ಟರ್ ಗಳನ್ನು (76547 ಕೋಟಿ ರೂಪಾಯಿಗಳು) ಕೃಷ್ಣ ಪಟ್ಟಣಂನಲ್ಲಿ (ಆಂಧ್ರಪ್ರದೇಶ), ಎಣ್ಣೂರ್( ತಮಿಳುನಾಡು) ಮತ್ತು ಟ್ಯುಟಿಕೋರಿನ್ (ತಮಿಳುನಾಡು)ಗಳಲ್ಲಿ ಪೂರ್ಣ ಮಾಡಲಾಗಿದೆ. 8 ಎಲೆಕ್ಟ್ರಾನಿಕ್ ತಯಾರಿಕಾ ಕ್ಲಸ್ಟರ್ ಗಳು(1704 ಕೋಟಿ ರೂಪಾಯಿಗಳು) ಆಂಧ್ರಪ್ರದೇಶದಲ್ಲಿ, ಗುಜರಾತ್, ಒಡಿಶಾ, ಕೇರಳ, ಪಶ್ಚಿಮ ಬಂಗಾಳ ಮತ್ತು 3 ಆಹಾರ ಸಂಸ್ಕರಣಾ ಪಾರ್ಕ್ ಗಳನ್ನು (1.348 ಕೋಟಿ ರೂಪಾಯಿಗಳು) ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಕೈಗೆತ್ತಿಕೊಂಡಿದ್ದು ಅವುಗಳು ಅನುಷ್ಠಾನದ ಹಂತದಲ್ಲಿವೆ. ಇದಲ್ಲದೇ ಅಭಿವೃದ್ಧಿಯ ಹಂತದಲ್ಲಿರುವ ಯೋಜನೆಗಳೆಂದರೆ- ಜವಾಹರ ಲಾಲ್ ನೆಹರು ಬಂದರು ಟ್ರಸ್ಟ್ ನಲ್ಲಿ ಎಸ್ ಇಝಡ್(12,624 ಕೋಟಿ ರೂಪಾಯಿಗಳು), ಸ್ಮಾರ್ಟ್ ಇಂಡಸ್ಟ್ರಿಯಲ್ ಪೋರ್ಟ್ ಸಿಟಿ(ಎಸ್ ಐಪಿಸಿ)ಯನ್ನು ಪರದೀಪ್ ನಲ್ಲಿ(3,350 ಕೋಟಿ ರೂಪಾಯಿಗಳಲ್ಲಿ) ಮತ್ತು ಕಾಂಡ್ಲಾ (11,147 ಕೋಟಿ ರೂಪಾಯಿಗಳು) ಮತ್ತು ಕರಾವಳಿ ಉದ್ಯೋಗ ಘಟಕ(ಸಿಇಯು)ಗಳನ್ನು ಸಿಪಿಟಿಯಲ್ಲಿ ಮತ್ತು ಕೆಪಿಎಲ್ ನಲ್ಲಿ ಜಾರಿಗೊಳಿಸಲಾಗುತ್ತಿದೆ.
2.8 ಕರಾವಳಿ ನೌಕಾಯಾನ
ಕರಾವಳಿ ವ್ಯಾಪಾರ ಸಡಿಲಿಕೆ:
ವ್ಯಾಪಾರ, ವ್ಯವಹಾರವನ್ನು ಸುಲಭವಾಗಿ ನಡೆಸುವುದು ಮತ್ತು ಕರಾವಳಿ ನೌಕಾಯಾನಯನ್ನು ದೇಶದಲ್ಲಿ ಸಾಗರ್ ಮಾಲಾ ಯೋಜನೆಯ ಲಕ್ಷಣಗಳ ಆಧಾರದ ಮೇಲೆ ಉತ್ತೇಜಿಸುವ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮರ್ಚೆಂಟ್ ಶಿಪ್ಪಿಂಗ್ ಆಕ್ಟ್-1958 406 ಮತ್ತು 407ನೇ ಸೆಕ್ಷನ್ ಗಳ ಅಡಿಯಲ್ಲಿ ಸಡಿಲಿಕೆಯನ್ನು ತಂದು ಕಡಲತೀರದ ಕರಾವಳಿ ವ್ಯಾಪಾರವನ್ನು ಉತ್ತೇಜಿಸಲಾಗುತ್ತಿದೆ. ರಸಗೊಬ್ಬರ, ಕೃಷಿ ಉತ್ಪನ್ನಗಳು, ಮೀನುಗಾರಿಕೆ, ತೋಟಗಾರಿಕೆ ಮತ್ತು ಪಶು ಉತ್ಪಾದಕ ವಸ್ತುಗಳು ಮತ್ತು ಕಂಟೇನರ್ ಗಳನ್ನು ಇದರ ಅಡಿಯಲ್ಲಿ ನೋಂದಾಯಿತಗೊಳಿಸಲಾಗುತ್ತಿದೆ. ಈ ಸಡಿಲಿಕೆಯ ನಂತರದ ಕೈಗಾರಿಕಾ ಪರಿಣಾಮಗಳನ್ನು ಆಧರಿಸಿ 2018ರ ಸೆಪ್ಟೆಂಬರ್ ನಲ್ಲಿ ಸ್ಪಷ್ಟೀಕರಣವನ್ನೂ ಹೊರಡಿಸಲಾಗಿದೆ. ರಸಗೊಬ್ಬರಗಳ ಕನಿಷ್ಟ ಚಲನೆಯು ಶೇಕಡಾ 50ರಷ್ಟು ವಿಸ್ತರಣೆಯಾಗಿದೆ. ಇದು ಒಟ್ಟಾರೆ ಹಡಗು ಸರಕು ಸಾಗಣೆಯ ಅರ್ಧದಷ್ಟಿದೆ. ಯಾವುದೇ ಭಾರತೀಯ ಬಂದರುಗಳನ್ನು ಪರಿಗಣನೆಗೆ ತಗೆದುಕೊಂಡರೂ ಒಟ್ಟಾರೆ ಸರಕು ಸಾಗಣೆಯಲ್ಲಿ ರಸಗೊಬ್ಬರ ಸರಕು ದೊಡ್ಡ ಪ್ರಮಾಣದಲ್ಲಿದೆ.
ದೂರದೃಷ್ಟಿ ಯಜನೆ ಮತ್ತು ಕರಾವಳಿ ನೌಕಾಯಾನ:
ಕರಾವಳಿ ಮತ್ತು ಸಘು ಸಮುದ್ರ ನೌಕಾಯಾನಯ ಉತ್ತೇಜನದ ದೃಷ್ಟಿಯಿಂದ ಕಾರ್ಯಾತ್ಮಕ ಶಿಫಾರಸುಗಳನ್ನು ಮಾಡುವಂತಹ ಅಧ್ಯಯನವನ್ನು ನಡೆಸಿ ದೃಢವಾದ ದೂರದೃಷ್ಟಿ ಯೋಜನೆಯನ್ನು ಯೋಜಿಸಲಾಗಿದೆ. ಐ ಡಬ್ಲ್ಯು ಟಿಯನ್ನು ಮನಬಂದಂತೆ ಸಂಯೋಜಿಸುವ ಬಹು ಮಾದರಿ ಸಂಪರ್ಕಗಳ ಮೂಲಕ ಸಂಪನ್ಮೂಲಗಳನ್ನು ರಸ್ತೆ ಮತ್ತು ರೈಲು ಮೂಲಕ ಸಾಗಣೆ ಮಾಡುವಂತಹ ಕಾರ್ಯವು ಪ್ರಗತಿಯಲ್ಲಿದೆ. ಈ ಅಧ್ಯಯನದ ಭಾಗವು ಏಷಿಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಜತೆಗೂಡಿ ನಡೆಸುವಂತಹದ್ದಾಗಿದೆ. 2018 ಜೂನ್ ಮತ್ತು ಅಕ್ಟೋಬರ್ 2018ರಲ್ಲಿ ಎರಡು ಬಾರಿ ಈ ಅಧ್ಯಯನದ ಭಾಗವಾಗಿ ಪಾಲುದಾರರ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಕರಾವಳಿ ನೌಕಾಯಾನ ಮತ್ತು ಬಂದರುಗಳಿಗೆ ಸಂಭಾವ್ಯ ಮೂಲ ಗಮ್ಯ ಸ್ಥಾನಗಳ ಜೋಡಿಯನ್ನು ಒದಗಿಸುವ ಮೂಲಕವಾಗಿ, ಹಡಗು ಮಾರ್ಗಗಳನ್ನು ನಿರ್ಮಾಣ ಮಾಡುವ ಮೂಲಕ ಸರಕುಗಳನ್ನು ತಲುಪಿಸುವ ವಿಶ್ಲೇಷಣೆ ನಡೆದಿದೆ ಹಾಗೂ ಕೈಗಾರಿಕೆಗಳು ಈ ಕರಾವಳಿ ನೌಕಾಯಾನಯನ್ನು ಬಳಸಬಹುದಾಗಿದೆ..
ಕರಾವಳಿ ರೇವು(ಹಡಗು ನಿಲ್ಲುವ ಸ್ಥಳ) ಯೋಜನೆ:
ಕರಾವಳಿ ರೇವು(ಹಡಗು ನಿಲ್ಲುವ ಸ್ಥಳ)ಯೋಜನೆಯ ಮೂಲಕ 41 ಪ್ರಾಜೆಕ್ಟ್ ಗಳನ್ನು (1,535 ಕೋಟಿ ರೂಪಾಯಿಗಳು) ಮಂಜೂರಿ ಮಾಡಲಾಗಿದೆ. ಇದಕ್ಕೆ ಈಗಾಗಲೇ 633 ಕೋಟಿ ರೂಪಾಯಿಗಳ ಹಣಕಾಸು ನೆರವನ್ನು ನೀಡಲಾಗುತ್ತದೆ. ಇದರಲ್ಲಿ ಈಗಾಗಲೇ 334 ಕೋಟಿ ರೂಪಾಯಿಗಳನ್ನು ಬೃಹತ್ ಬಂದರು/ ರಾಜ್ಯ ಸಮುದ್ರ ಮಾರ್ಗ ಮಂಡಳಿ/ ರಾಜ್ಯ ಸರ್ಕಾರಗಳಿಗೆ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕರಾವಳಿ ರೇವು ಯೋಜನೆಯನ್ನು ಸರಕು ಸಾಗಣೆ, ಸಮದ್ರದ ಮೂಲಕ ಸಾಗುವ ಪ್ರಯಾಣಿಕರ ಹೆಚ್ಚಳ/ ರಾಷ್ಟ್ರೀಯ ಜಲಸಾರಿಗೆಗಳನ್ನು 2020 ಮಾರ್ಚ್ ವರೆಗೆ ಇವುಗಳನ್ನು ವಿಸ್ತರಣೆ ಮಾಡುವ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಡಿಪಿಆರ್ ತಯಾರಿಗೆ ವೆಚ್ಚವನ್ನು ಒದಗಿಸುವವರೆಗೆ ಇದರ ಪ್ರಾಮುಖ್ಯತೆಯು ವಿಸ್ತರಣೆಯಾಗಿದೆ. ಬೃಹತ್ ಬಂದರುಗಳಲ್ಲಿ ಸಾಧ್ಯವಾದಷ್ಟು ಹೂಳುತೆಗೆಯುವುದನ್ನು ಇದರ ಮೂಲಕ ಸಾಧಿಸಲಾಗುತ್ತಿದೆ.
2.9 ಕೌಶಲ್ಯ ಅಭಿವೃದ್ಧಿ:
21 ಕರಾವಳಿ ಜಿಲ್ಲೆಗಳಲ್ಲಿ ಬಂದರು ಇಲಾಖೆಯು ಕರಾವಳಿ ಸಮೂಹಕ್ಕೆ ಕೌಶಲ್ಯ ಅಂತರ ವಿಶ್ಲೇಷಣೆಯನ್ನು ಮಾಡುವ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಸಹಾಯಕ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ತಮ್ಮ ಭಾಗದ ಆಕ್ಷನ್ ಪ್ಲಾನ್ ಗಳನ್ನು ಜಾರಿಗೊಳಿಸಲು ಆಸಕ್ತಿಯನ್ನು ತೋರುತ್ತಿವೆ ಇದರ ಫಲವಾಗಿ 1917 ಜನರು ತರಬೇತಿ ಪಡೆದಿದ್ದಾರೆ ಮತ್ತು 1123 ಜನರು ಉದ್ಯೋಗಗಳನ್ನೂ ಪಡೆದುಕೊಂಡಿದ್ದಾರೆ.
ಮೀನುಗಾರಿಕೆ ಸಮುದಾಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹವನ್ನು ನೀಡಲು ಬಂದರು ಇಲಾಖೆಯು ಮೀನುಗಾರಿಕೆಯ ಆಯ್ದ ಬಂದರು ಹಡುಗುಗಾರಿಕೆ ಯೋಜನೆಗಳಿಗೆ ಅನುದಾನವನ್ನು ಒದಗಿಸಿದೆ. ಪಶು ಸಂಗೋಪನಾ ಇಲಾಖೆ, ಡೈರಿ ಮತ್ತು ಮೀನುಗಾರಿಕೆ(ಡಿಎಡಿಎಫ್) ಇಲಾಖೆಗಳ ಜತೆ ಸಮಾಲೋಚಿಸಿ ಮೀನುಗಾರಿಕೆಯನ್ನೇ ಅವಲಂಬನೆ ಮಾಡಿಕೊಂಡಿರುವವ ಮೀನುಗಾರರ ಜೀವನವನ್ನು ಸುಧಾರಣೆ ಮಾಡುವ ಕೆಲಸವನ್ನು ಮಾಡುತ್ತಿದೆ. ಇದೇ ಉದ್ದೇಶಕ್ಕೆಂದು 323 ಕೋಟಿ ರೂಪಾಯಿಗಳನ್ನು 13 ಯೋಜನೆಗಳಿಗೆ (1189 ಕೋಟಿ ರೂಪಾಯಿಗಳು)ಬಿಡುಗಡೆ ಮಾಡಲಾಗಿದೆ. ಈ ಯೋಜನೆಗಳು ಅಂದಾಜು 1.5 ಲಕ್ಷ ಮೀನುಗಾರರಿಗೆ ಅನುಕೂಲ ಕಲ್ಪಿಸುವಂತಹ ಸಾಧ್ಯತೆಗಳಿವೆ. 2.3 ಲಕ್ಷ ಟನ್ ಮೀನುಗಳನ್ನು ನಿಭಾಯಿಸುವಂತಹ ಸಾಮರ್ಥ್ಯವನ್ನು ಇದರಿಂದ ನಿರ್ವಹಣೆ ಮಾಡುವುದು ಸಾಧ್ಯವಾಗಲಿದೆ.
2.10 ಸಮುದ್ರಯಾನ ಮತ್ತು ಹಡಗು ನಿರ್ಮಾಣ ವಿಶೇಷತಾ ಕೇಂದ್ರ:
ವೈಜಾಗ್ ಮತ್ತು ಮುಂಬೈಗಳಲ್ಲಿ ಐಆರ್ ಎಸ್ ಮತ್ತು ಸಿಯಾಮೆನ್ಸ್ ಗಳ ಸಹಯೋಗದಲ್ಲಿ 766 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಅಡಿಯಲ್ಲಿ ಸಮುದ್ರಾಯಾನ ಮತ್ತು ಹಡಗು ನಿರ್ಮಾಣ ವಿಶೇಷತಾ ಕೇಂದ್ರವನ್ನು (ಸಿಇಎಂಎಸ್) ರಚನೆ ಮಾಡಲಾಗಿದೆ. ಈ ಕೇಂದ್ರದ ವಿಶೇಷತೆಗಳು ಏನೆಂದರೆ ಹಡಗು ವಿನ್ಯಾಸ, ತಯಾರಿಕೆ, ಕಾರ್ಯಾಚರಣೆ ಮತ್ತು ನಿರ್ವಹಣೆ, ದುರಸ್ತಿ ಮತ್ತು ಇತರೆ ಎಲ್ಲಾ ವಿಚಾರಗಳನ್ನು (ಎಂಆರ್ ಒ) ನಿಭಾಯಿಸುವಂತಹ ಸ್ಥಳೀಯ ಪ್ರತಿಭಾ ಕೌಶಲ್ಯಗಳನ್ನು ಈಡೇರಿಸುವುದೇ ಆಗಿದೆ. ಇದರ ದೀರ್ಘಕಾಲದ ಉದ್ದೇಶ ಏನೆಂದರೆ ದಕ್ಷಿಣ ಏಷ್ಯಾದಲ್ಲಿ ಅಂತಾರಾಷ್ಟ್ರೀಯ ನೋಡಲ್ ಕೇಂದ್ರ ಆಗಬೇಕು ಎನ್ನುವುದೇ ಆಗಿದೆ. ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾ ದೇಶ, ಥೈಲ್ಯಾಂಡ್, ಮಲೇಷ್ಯಾ ಮತ್ತು ಇಂಡೋನೇಷಿಯಾದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮತ್ತು ಬಂದರು ಹಾಗೂ ಸಮುದ್ರಯಾನ ಕ್ಷೇತ್ರದಲ್ಲಿ ಕೌಶಲ್ಯ ವೃದ್ಧಿಸುವುದು ಇದರ ಗುರಿಯಾಗಿದೆ. 2018ರಲ್ಲಿ ವೈಜಾಗ್ ಮತ್ತು ಮುಂಬೈ ಕ್ಯಾಂಪಸ್ ಗಳಲ್ಲಿ ಈ ಸಿಇಎಂಎಸ್ ಗಳನ್ನು ಜಾರಿಗೆ ತರುವಂತಹ ಪ್ರಯತ್ನಗಳು ಯಶಸ್ಸು ಕಂಡಿವೆ. ಎರಡೂ ಕೇಂದ್ರಗಳಲ್ಲಿ ಪಾಲುದಾರರಿಗೆ ಪ್ರಾತ್ಯಕ್ಷಿಕೆ ತರಬೇತಿ ಶಿಬಿರಗಳನ್ನು ನಡೆಸಲಾಗಿದೆ. ಸಿಇಓ, ಸಿಒಒ ಮತ್ತು ಇತರೆ ತಂಡದ ಸದಸ್ಯರುಗಳನ್ನು ಇದಕ್ಕಾಗಿ ಪಡೆದುಕೊಳ್ಳಲಾಗಿತ್ತು. ಎರಡೂ ಕ್ಯಾಂಪಸ್ ಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಎರಡೂ ಕ್ಯಾಂಪಸ್ ಗಳಲ್ಲಿ ಈಗಾಗಲೇ ತರಬೇತಿಯನ್ನು ಆರಂಭ ಮಾಡಲಾಗಿದೆ.
2.11 ಬಂದರು, ಜಲ ಮಾರ್ಗ ಮತ್ತು ಕರಾವಳಿಗಳಿಗೆ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರ ( ಎನ್ ಟಿಸಿಪಿಡಬ್ಲ್ಯುಸಿ)
ನೌಕಾಯಾನ ಸಚಿವಾಲಯವು ಬಂದರು, ಜಲ ಮಾರ್ಗ ಮತ್ತು ಕರಾವಳಿಗಳಿಗೆ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರ(ಎನ್ ಟಿ ಸಿ ಪಿ ಡಬ್ಲ್ಯುಸಿ)ಗಳಲ್ಲಿ ಆರಂಭಿಸಿದೆ. ಚೆನ್ನೈನ ಮದ್ರಾಸ್ ಐಐಟಿಯಲ್ಲಿ ಬಂದರು, ಜಲಮಾರ್ಗ, ಕರಾವಳಿಯನ್ನು ದೇಶದಲ್ಲಿ ಅಭಿವೃದ್ಧಿ ಪಡಿಸುವುದೂ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ತಾಂತ್ರಿಕತೆ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಇಸಾಧ್ಯವಾಗಿಸುತ್ತದೆ. ಎನ್ ಟಿ ಸಿಪಿ ಡಬ್ಲ್ಯುಸಿಯು ಬಂದರು ಇಲಾಖೆಯ ತಾಂತ್ರಿಕ ಸಾಧನವಾಗಲಿದೆ. ಬಂದರು, ಭಾರತೀಯ ಒಳ ಜಲ ಸಾರಿಗೆ ಪ್ರಾಧಿಕಾರ(ಐ ಡಬ್ಲ್ಯು ಎಐ) ಮತ್ತು ಇತರೆ ಸಂಬಂಧಿಸಿದ ಸಂಸ್ಥೆಗಳಿಗೆ ಇದು ತಾಂತ್ರಿಕ ಸಹಕಾರ ಸಾಧನವಾಗಲಿದೆ. ನೌಕಾಯಾನ ಸಚಿವಾಲಯ, ಭಾರತೀಯ ಒಳ ಜಲಸಾರಿಗೆ ಪ್ರಾಧಿಕಾರ ಮತ್ತು ಬೃಹತ್ ಬಂದರುಗಳು ಈ ಯೋಜನೆಯ ವೆಚ್ಚ 70.53 ಕೋಟಿ ರೂಪಾಯಿಗಳನ್ನು ಹಂಚಿಕೊಂಡಿವೆ. ಎನ್ ಟಿಸಿಪಿಡಬ್ಲ್ಯುಸಿಯು ದೇಶೀಯ ಜನ್ಯವಾದಂತಹ ಸಾಫ್ಟ್ ವೇರ್ (ತಂತ್ರಾಂಶ) ಮತ್ತು ತಾಂತ್ರಿಕತೆ, ತಾಂತ್ರಿಕ ಮಾರ್ಗಸೂಚಿಗಳು, ಗುಣಮಟ್ಟ, ಮತ್ತು ಬಂದರು ಹಾಗೂ ಸಮುದ್ರಯಾನ ಸಮಸ್ಯೆಗಳನ್ನು ಮಾದರಿ ಮತ್ತು ಪ್ರಾತ್ಯಕ್ಷಿಕೆಗಳಾಗಿ ಪರಿಹರಿಸುತ್ತವೆ. ಎನ್ ಟಿ ಸಿಪಿ ಡಬ್ಲ್ಯುಸಿಯ ಅನ್ವಯಿಕ ಅನ್ವೇಷಣೆಗಳೆಂದರೆ ಸಾಗರಗಳ 2ಡಿ ಮತ್ತು 3ಡಿ ಮಾದರಿಗಳು, ಕರಾವಳಿ ಮತ್ತು ಈಸ್ಟಾರೈನ್ ಫ್ಲೋ ಮತ್ತು ನಿಕ್ಷೇಪ ಸಾಗಣೆ, ಮಾರ್ಫೋ ಡೈನಮಿಕ್, ಸಾಗರಯಾನ ಮತ್ತು ತಾಂತ್ರಿಕತೆ, ಹೂಳೆತ್ತುವಿಕೆ ಮತ್ತು ಹೂಳು ತುಂಬುವಿಕೆ, ಬಂದರು ಮತ್ತು ಕರಾವಳಿ ಎಂಜಿನಿಯರಿಂಗ್, ಸಂರಚನೆ ಮತ್ತು ಅಣೆಕಟ್ಟೆಗಳು, ಸ್ವಾಯತ್ತ ಪ್ಲಾಟ್ ಫಾರ್ಮ್ ಗಳು ಮತ್ತು ವಾಹನಗಳು, ಪ್ರಯೋಗಾತ್ಮಕ ಸಿಎಫ್ ಡಿ ಮಾದರಿಗಳ ಹರಿಯುವಿಕೆ ಮತ್ತು ಕವಚ ಸಂವಹನ, ಬಹು ಕವಚಗಳ ಹೈಡ್ರೋನಾಮಿಕ್ಸ್ ಮತ್ತು ಸಾಗರ ಪುನರ್ ನವೀಕರಿಸಬಹುದಾದ ಇಂಧನಗಳಲ್ಲಿ ಸಂಶೋದನೆಗಳಲ್ಲಿ ಕೆಲಸ ಮಾಡಲಿದೆ.
ಎನ್ ಟಿಸಿ ದಬ್ಲ್ಯುಸಿಯು 2018ರ ಏಪ್ರಿಲ್ ನಿಂದ ಕೆಲಸ ಮಾಡುವುದನ್ನು ಆರಂಭ ಮಾಡಿದೆ. ಮದ್ರಾಸ್ ಐಐಟಿಯ ಹೊಸ ಕಟ್ಟಡದಲ್ಲಿ ಅದು ಕಾರ್ಯಾರಂಭವನ್ನು ಮಾಡಿದೆ. ಈ ಕೇಂದ್ರಕ್ಕೆ ಸಿಬ್ಬಂದಿಯನ್ನು ಎರವಲು ಪಡೆಯಲಾಗಿದ್ದು ಮತ್ತು ಇದೀಗ ಈ ಕೇಂದ್ರದಲ್ಲಿ 10 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಲಕರಣೆಗಳು- ಅಗತ್ಯಗಳು ಮತ್ತು ಎಫ್ ಆರ್ ಎಲ್ ಗಳನ್ನು ನೀಡಲಾಗಿದೆ. ಹಾಗೂ ಹೊಸ ಕ್ಯಾಂಪಸ್ ಅನ್ನು ನಿರ್ಮಾಣ ಮಾಡುವಂತಹ ಪ್ರಸ್ತಾವವು ಐಐಟಿ ಮದ್ರಾಸ್ ನ ಆಡಳಿತ ಮಂಡಳಿಯ ಸಮ್ಮತಿ ಪ್ರಕ್ರಿಯೆಗಳ ಹಂತದಲ್ಲಿದೆ. ಸಂಸ್ಥೆಗಳಲ್ಲಿ ನಾಮ ನಿರ್ದೇಶನದ ಆಧಾರದ ಮೇಲೆ ಕೆಲಸಗಳನ್ನು ಅನುಮತೀಕರಣಗೊಳಿಸುವುದನ್ನು ನೌಕಾಯಾನ ಸಚಿವಾಲಯವು ಪರೀಕ್ಷಿಸುತ್ತಿದೆ. ಇದರ ನಿಟ್ಟಿನಲ್ಲಿ ಸದ್ಯದಲ್ಲೇ ತೀರ್ಮಾನಗಳೂ ಹೊರಬರಲಿವೆ. 2018ರ ಜುಲೈನಲ್ಲಿ ಮೊಟ್ಟ ಮೊದಲ ನಿಗಾ ಸಮಿತಿ ಸಭೆಯು ನಡೆದಿರುತ್ತದೆ. ಮುಂದಿನ ನಿಗಾ ಸಮಿತಿ ಸಭೆಯನ್ನು ಎನ್ ಟಿಸಿಪಿಡಬ್ಲ್ಯುಸಿ ಮತ್ತು ಮದ್ರಾಸ್ ಐಐಟಿಯ ಜತೆಯಲ್ಲೇ ಯೋಜಿಸಿ ನಡೆಸುವ ಉದ್ದೇಶವನ್ನು ಹೊಂದಲಾಗಿದೆ.
2.12 ಸಾಗರಯಾನ ಸರಕು ಸಾಗಣೆಗೆ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ
ಬಂದರುಗಳಲ್ಲಿ ಶತ ಪ್ರತಿಶತ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಸಾಧಿಸುವಂತಹ ದೃಷ್ಟಿಕೋನದಿಂದ ಮತ್ತು ಬಂದರು ಮತ್ತು ಸಮುದ್ರಯಾನ ಕ್ಷೇತ್ರದಲ್ಲಿ ಇರುವಂತಹ ಸಿಬ್ಬಂದಿಯಲ್ಲಿ ಕೌಶಲ್ಯಗಳನ್ನು ತುಂಬುವಂತಹ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾಗರ್ ಮಾಲಾ ಯೋಜನೆಯ ಅಡಿಯಲ್ಲಿ ಎಲ್ಲಾ ಪ್ರಮುಖ ಬಂದರುಗಳಲ್ಲೂ ಸಾಗರಯಾನ ಸರಕು ಸಾಗಣೆಗೆ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ(ಎಂ ಎಸ್ ಡಿಸಿ)ವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್ ಎಂಎಸ್ ಡಿಸಿಯು ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಖಾಸಗಿ ಕಾರ್ಯಾಚರಣಾ ಪಾಲುದಾರರಾಗಿ ಆಲ್ ಕಾರ್ಗೋವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಿಳಿವಳಿಕೆ ಅಂದರೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಲಾಗಿದೆ. ಇದೇ ಪ್ರಕ್ರಿಯೆಯು ಚೆನ್ನೈ, ವಿಶಾಖಪಟ್ಟಣಂ ಮತ್ತು ಕೊಚಿನ್ ಬಂದರುಗಳಲ್ಲಿ ಚಾಲನೆಯಲ್ಲಿದೆ.
2.13 ರವಾನೆ ಬಂದರು:
ಬಂದರು ಇಲಾಖೆಯು ಇಎಕ್ಸ್ ಐ ಎಂ ಕರಾವಳಿ ಚಲನತೆ ಬಂದರು ರವಾನೆ ಕಂಟೇನರ್ ಗಳು ಮತ್ತು ಖಾಲಿ ಕಂಟೇನರ್ ಗಳ ವ್ಯಾಪಾರಿ ಹಡಗುಯಾನ ಕಾಯ್ದೆ-1958ರ 406 ಮತ್ತು 407ನೇ ಸೆಕ್ಷನ್ ಗಳ ಅನ್ವಯ ರಿಯಾಯಿತಿಗಳನ್ನು ನೀಡಿ ಅಧಿಸೂಚನೆ ಮತ್ತು ಸಾಮಾನ್ಯ ಆದೇಶಗಳನ್ನು ಜಾರಿಗೊಳಿಸಿರುತ್ತದೆ. ಈ ವಿನಾಯಿತಿಯು ಭಾರತದ ಸಂಸ್ಥೆಗಳು ವಿದೇಶಿ ವ್ಯವಹಾರವನ್ನು ನಿಭಾಯಿಸುವ ಅಕಾಶಗಳನ್ನು ಕಲ್ಪಿಸುತ್ತದೆ. ಷರತ್ತುಗಳ ಅನ್ವಯದ ಪರವಾನಗಿಗಳ ಅಗತ್ಯ ಇಲ್ಲದೆಯೂ ಕರಾವಳಿ ಮಾರ್ಗಗಳಲ್ಲಿ ಹಡಗು ಮಾರ್ಗಗಳನ್ನು ನಡೆಸಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇ ಎಕ್ಸ್ ಐಎಂ ಬಂದರು ಸಾರಿಗೆ ಕಂಟೇನರ್ ಗಳು ಮತ್ತು ಖಾಲಿ ಕಂಟೇನರ್ ಗಳು (i)ವಿದೇಶಿ ಬಂದರುಗಳಿಂದ ಭಾರತದ ಬಂದರುಗಳಿಗೆ ಕಾರ್ಗೋಗಳನ್ನುಬಂದರು ಸಾರಿಗೆಯನ್ನು ಉತ್ತೇಜಿಸುವ ಕೆಲಸ ಆಗಿದ್ದು, ಕಂಟೇನರ್ ಗಳನ್ನು ಒಳಗೊಂಡ ಭಾರತದ ಬಂದರುಗಳು ಲಾಭವನ್ನು ತಂದುಕೊಡುತ್ತದೆ ಇದರಿಂದ ಸಾಧ್ಯವಾಗಿಸಿದೆ. ಹಾಗೂ ಉದ್ಯೋಗ ಅವಕಾಶಗಳನ್ನೂ ಇಲ್ಲಿ ವೃದ್ಧಿಸಲಾಗಿದೆ. (ii) ಹಡಗು ಮಾರ್ಗಗಳಲ್ಲಿ ಪೈಪೋಟಿಯನ್ನು ಸೃಷ್ಟಿ ಮಾಡಲಾಗಿದ್ದು, ಭಾರತದ ವ್ಯವಹಾರವನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿ ಮಾಡಲು ಸರಕು ಸಾಗಣೆ ದರವನ್ನು ಕಡಿಮೆ ಮಾಡಲಾಗಿದೆ. (iii) ಭಾರತದ ಇ ಎಕ್ಸ್ ಐಎಂ ವ್ಯಾಪಾರ ಪೈಪೋಟಿಯನ್ನು ಹೆಚ್ಚಿಸುವ ಮೂಲಕ ಸರಕು ಸಾಗಣೆ ಕಾರ್ಯ ದಕ್ಷತೆಯನ್ನು ವೃದ್ಧಿಸಲಾಗಿದೆ (iv) ಕಂಟೇನರ್ ಗಳ ಕರಾವಳಿ ಸರಕು ಸಾರಿಗೆಯನ್ನು ಉತ್ತೇಜಿಸಲಾಗಿದೆ. (v) ಭಾರತದಲ್ಲಿ ಪರಿಸರ ವ್ಯವಸ್ಥೆಯಂತೆ ಭಾರತದ ಬಂದರುಗಳು ಕಾರ್ಗೋ ಉದ್ದೇಶಿತ ಗುರಿಯನ್ನು ಸಾಧಿಸಿಕೊಳ್ಳಬಲ್ಲವು. ಮತ್ತು ವಿದೇಶಿ ಬಂದರುಗಳನ್ನು ಬಳಸಿಕೊಂಡು ಭಾರತದ ಬಂದರುಗಳು ಗಟ್ಟಿಗೊಳ್ಳುವ ಮೂಲಕ ಇದು ಸಾಧ್ಯವಾಗಲಿದೆ. (vi) ಭಾರತದಲ್ಲಿ ವಿದೇಶ ಹಣ ವಿನಿಮಯದ ಧಾರಣ ಶಕ್ತಿ
ಒಳ ಜಲ ಸಾರಿಗೆ (ಐಡಬ್ಲ್ಯುಟಿ)
3.1 ಜಲ ಮಾರ್ಗ ವಿಕಾಸ ಯೋಜನೆ( ಜೆಎಂವಿಪಿ)
ವಿಶ್ವ ಬ್ಯಾಂಕ್ ನ ತಾಂತ್ರಿಕ ಮತ್ತು ಹಣಕಾಸು ನೆರವಿನ ಅಡಿಯಲ್ಲಿ 5369 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಜಲ ಮಾರ್ಗ ವಿಕಾಸ ಯೋಜನೆ (ಜೆಎಂವಿಪಿ)ಯ ಅನುಷ್ಠಾನವನ್ನು ಮಾಡಲು 2018ರ ಜನವರಿ 3ರಂದು ನಡೆದ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ)ಯು ತನ್ನ ಒಪ್ಪಿಗೆಯನ್ನು ಸೂಚಿಸಿದೆ. ಜಲ ಮಾರ್ಗ ವಿಕಾಸ ಯೋಜನೆ(ಜೆಎಂವಿಪಿ) ಉದ್ದೇಶಗಳು ಏನೆಂದರೆ ನ್ಯಾಷನಲ್ ವಾಟರ್ ವೇ-1(ಎನ್ ಡಬ್ಲ್ಯು-1)ಯನ್ನು 2000 ಡೆಡ್ ವೇಯ್ಟ್ ಟನ್ನೇಜ್ (ಡಿಡಬ್ಲ್ಯು ಟಿ)ಗೆ ಹಡಗನ್ನಾಗಿಸುವುದಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರಮುಖ ನಿರ್ಮಾಣ ಕಾರ್ಯಗಳು ಯಾವುವು ಎಂದರೆ ಬಹು ಉದ್ದೇಶಿತ ಮಾದರಿ ಟರ್ಮಿನಲ್ ಗಳು, ಹಡಗು ಕಟ್ಟೆಗಳು, ನದಿ ಮಾಹಿತಿ ವ್ಯವಸ್ಥೆ, ಕಣಿವೆಗಳ ಗುರುತಿಸುವಿಕೆ,ನೌಕಾಯಾನದ ಬಂಧ, ನದಿ ತರಬೇತಿ ಮತ್ತು ಸಂರಕ್ಷಣಾ ಕೆಲಸಗಳಾಗಿವೆ. 2023ರ ಮಾರ್ಚ್ ವೇಳೆಗೆ ಇವುಗಳೆಲ್ಲವನ್ನೂ ಪೂರ್ಣಗೊಳಿಸುವ ಉದ್ದೇಶವನ್ನು ಬಂದರು ಇಲಾಖೆಯು ಹೊಂದಿದೆ. ಸಾಲದ ಒಪ್ಪಂದ ಮತ್ತು ಯೋಜನಾ ಒಪ್ಪಂದವು ಮುಗಿದಿದ್ದು, ಐಬಿಆರ್ ಡಿ ಸಾಲವಾದ 375 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಪಡೆದುಕೊಳ್ಳಲು 2018ರ ಫೆಬ್ರುವರಿ 2ರಂದು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. 2018ರ ಮಾರ್ಚ್ 23ರಿಂದ ಇವು ಚಾಲನೆಗೆ ಬರಲಿವೆ. ಜೆಎಂವಿಪಿಯ ವಿವಿಧ ಹಂತದ ಅನುಷ್ಠಾನ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ:
(a) ನೌಕಾ ನಾಲೆ ಅಭಿವೃದ್ಧಿ:
ಫರಕ್ಕಾ ಮತ್ತು ಕಹಾಲ್ಗಾವ್ ನಡುವಿನ (146 ಕಿಲೋ ಮೀಟರ್) ಪ್ರದೇಶದ ಸಾಧ್ಯತಾ ಆಳವನ್ನು ಒದಗಿಸುವಂತಹ ಕಾರ್ಯವು ಈಗಾಗಲೇ ಆರಂಭಗೊಂಡಿರುತ್ತದೆ. ಅದೇ ರೀತಿ ಸುಲ್ತಾಜ್ ಗಂಜ್ ಮತ್ತು ಮಹೇಂದ್ರಪುರ್ ಮಾರ್ಗದ (74 ಕಿಲೋ ಮೀಟರ್) ಮತ್ತು ಮಹೇಂದ್ರಪುರ್ – ಬರ್ಹ ಪ್ರದೇಶದ (71 ಕಿಲೋ ಮೀಟರ್ ) ಟೆಂಡರ್ ಮೌಲ್ಯ ಮಾಡುವ ಕಾರ್ಯವು ಪ್ರಗತಿಯಲ್ಲಿ ಇದೆ..
(b) ವಾರಾಣಸಿಯ ಬಹು ಮಾದರಿ ಟರ್ಮಿನಲ್:
ವಾರಾಣಸಿಯಲ್ಲಿ 206 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಒಂದು ದಿನಕ್ಕೆ 1.26 ಮೆಟ್ರಿಕ್ ಟನ್ ಸಾಮರ್ಥ್ಯದ ಬಹು ಉದ್ದೇಶಿತ ಟರ್ಮಿನಲ್ ಅನ್ನು 2018ರ ನವೆಂಬರ್ 12ರಂದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು. ಗಂಗಾ ನದಿಯ ಮೇಲೆ ನಿರ್ಮಿಸಲಾದ ಇದೇ ಮೊಟ್ಟ ಮೊದಲ ಬಹು ಉದ್ದೇಶಿತ ಟರ್ಮಿನಲ್ ಎನಿಸಿಕೊಂಡಿದೆ. ಇದು ನೇರವಾಗಿ 500 ಮಂದಿ ಉದ್ಯೋಗದ ಅವಕಾಶಗಳನ್ನು ಮತ್ತು 2000 ಮಂದಿಗೆ ಪರೋಕ್ಷವಾಗಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.
(c) ಸಾಹಿಬ್ ಗಂಜ್ ಬಹು ಉದ್ದೇಶಿದ ಟರ್ಮಿನಲ್
280.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಟರ್ಮಿನಲ್ ನಿರ್ಮಾಣ ಮಾಡುವ ಆದೇಶವನ್ನು ಜಾರಿಗೊಳಿಸಲಾಗಿತ್ತು. 2019ರ ಜೂನ್ ವೇಳೆಗೆ ಈ ಟರ್ಮಿನಲ್ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ ಶೇಕಡಾ 54.81ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ.
(d) ಹಾಲ್ಡಿಯಾದ ಬಹು ಉದ್ದೇಶಿತ ಟರ್ಮಿನಲ್:
2017ರ ಜೂನ್ 30ರಂದು 517.36 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಟರ್ಮಿನಲ್ ನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. 2019ರ ಡಿಸೆಂಬರ್ ಹೊತ್ತಿಗೆ ಈ ಟರ್ಮಿನಲ್ ಅನ್ನು ಪೂರ್ಣಗೊಳಿಸುವ ಅವಧಿಯು ಮುಗಿಯಲಿದೆ. ಈಗಾಗಲೇ ಟರ್ಮಿನಲ್ ನ ಶೇಕಡಾ 22.43 ರಷ್ಟು ಕಾಮಗಾರಿಯು ಪೂರ್ಣಗೊಂಡಿರುತ್ತದೆ.
(e) ಫರಕ್ಕಾದಲ್ಲಿ ಹೊಸ ನೌಕಾಯಾನ ಲಾಕ್:
2016ರ ನವೆಂಬರ್ 24ರಂದು 359.19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಫರಕ್ಕಾದ ಹೊಸ ನೌಕಾಯಾನ ಲಾಕ್ ನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. 2019ರ ಏಪ್ರಿಲ್ ವೇಳೆಗೆ ಈ ಕಾಮಗಾರಿಯುವ ಮುಗಿಯಲಿದೆ. ಈಗಾಗಲೇ ಲಾಕ್ ನ ಶೇ27.97ರಷ್ಟು ಕಾಮಗಾರಿಯುವ ಮುಗಿದಿರುತ್ತದೆ.
3.2 ವಾರಾಣಸಿಯಲ್ಲಿ ಸರಕು ಗ್ರಾಮ ಮತ್ತು ಸಾಗಣಾ ಹಬ್
ಸರಕು ಸಾಗಣೆ ಕಾರ್ಯಕ್ಷಮತೆ ಹೆಚ್ಚಳ, ಕಾರ್ಗೋ ಒಗ್ಗೂಡುವಿಕೆ, ದಾಸ್ತಾನು(ಉಗ್ರಾಣ) ಸೌಲಭ್ಯಗಳು ಮತ್ತು ಬಹು ಮಾದರಿಯ ಸಾರಿಗೆ ವ್ಯವಸ್ಥೆಯನ್ನು ಕಾರ್ಯ ಸಾಧ್ಯ ಮಾಡಲು ಸರಕು ಗ್ರಾಮ ಮತ್ತು ಸಾಗಣಾ ಹಬ್ ಅನ್ನು ವಾರಾಣಸಿಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಜೆಎಂವಿಪಿಯ ಒಂದು ಭಾಗವಾಗಿ ಬಹು ಮಾದರಿ ಟರ್ಮಿನಲ್ ಅನ್ನು ಆರಂಭ ಮಾಡಿ ಕಾರ್ಯಾಚರಣೆಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ಸ್ಥಾಪನೆ ಮಾಡಲು ಹೂಡಿಕೆಯ ಪೂರ್ವಭಾವಿ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿಕೊಳ್ಳಲಾಗಿದೆ. 165 ಕೋಟಿಯ ಅಂದಾಜನ್ನು ಈ ಯೋಜನೆಗೆ ಪ್ರಾತಿನಿಧಿಕ ಹೂಡಿಕೆ ಮಂಡಳಿ(ಡಿಐಬಿ)ಯು ನಿರ್ಣಯಿಸಿದೆ. ಅಲ್ಲದೇ ಅಂಥದ್ದೇ ಸಮರ್ಥ ಪ್ರಾಧಿಕಾರವೂ ಇದಕ್ಕೆ ತನ್ನ ಸಮ್ಮತಿಯನ್ನು ಸೂಚಿಸಿರುತ್ತದೆ.
3.3 ಎನ್ ಡಬ್ಲ್ಯು-4ರ ಅಭಿವೃದ್ಧಿ:
ಮುಕ್ತಿಯಾಲಾದಿಂದ ವಿಜಯವಾಡಾವರೆಗೆ ಎನ್ ಡಬ್ಲ್ಯು-4ರ ಮೊದಲ ಹಂತವನ್ನು ಅಭಿವೃದ್ಧಿ ಪಡಿಸಲು ಆಂಧ್ರ ಪ್ರದೇಶದ ಮುಂಬರುವ ರಾಜಧಾನಿ ಅಮರಾವತಿಗೆ ನಿರ್ಮಾಣ ಸಲಕರಣೆಗಳನ್ನು ಒದಗಿಸಲು ಇದೊಂದು ಸೌಕರ್ಯಯುಕ್ತ ಚಳವಳಿಯಾಗಲಿದೆ. 2018ರ ಅಕ್ಟೋಬರ್ ನಿಂದ ರೋ ರೋ ಚಲನೆಯು ಆರಂಭವಾಗಿದೆ. 2018ರ ಅಕ್ಟೋಬರ್ ಒಟ್ಟಾರೆ ಸರಕು ಸಾಗಣೆಯ ಪ್ರಮಾಣವು 2.35 ಲಕ್ಷ ಮೆಟ್ರಿಕ್ ಟನ್ ನಷ್ಟಾಗಿದೆ.
3.4 ಹೊಸ 8 ಸಾಗರಯಾನ ಮಾರ್ಗಗಳ ಅಭಿವೃದ್ಧಿ
ಮಾಂಡೋವಿ(ಎನ್ ಡಬ್ಲ್ಯು-68), ಝುವಾರಿ Zuari (ಎನ್ ಡಬ್ಲ್ಯು-111),ಕುಂಬಾರ್ಜುನ (ಎನ್ ಡಬ್ಲ್ಯು-27) ಬಾರಕ್ (ಎನ್ ಡಬ್ಲ್ಯು-16) ಗಾಂಡಕ್ (ಎನ್ ಡಬ್ಲ್ಯು-37) ರೂಪ್ ನಾರಾಯಣ್ (ಎನ್ ಡಬ್ಲ್ಯು-86) ಅಲಪ್ಪುಝಾ-ಕೊಟ್ಟಾಯಂ-ಅತ್ತಿರಾಂಪುಝಾ ನಾಲೆ(ಎನ್ ಡಬ್ಲ್ಯು-9) ಮತ್ತು ಸುಂದರ್ ಬನ್ಸ್ (ಎನ್ ಡಬ್ಲ್ಯು-97) ಗಳನ್ನು 2017-18ರಲ್ಲಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ಮತ್ತು ಇದರ ಪ್ರಗತಿಯ ವಿವರಗಳು ಈ ಕೆಳಗಿನಂತೆ ಇವೆ.:-
- 2018ರ ಮೇ 3ರಂದು ಐ ಡಬ್ಲ್ಯುಎಐ, ಮರ್ಮಗಾವ್ ಬಂದರು ಟ್ರಸ್ಟ್ (ಎಂಪಿಟಿ) ಮತ್ತು ಬಂದರುಗಳ ಕ್ಯಾಪ್ಟನ್, ಗೋವಾ ಸರ್ಕಾರಗಳ ನಡುವೆ ತ್ರಿಪಕ್ಷಿಯ ಒಡಂಬಡಿಕೆ ಆಗಿರುತ್ತದೆ. ಈ ಒಪ್ಪಂದದ ಪ್ರಕಾರ ಗೋವಾದ ಮೂರು ಸಾಗರ ಮಾರ್ಗ (27,68 &111)ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಎಂಪಿಟಿಯಿಂದ ಹೂಳೇತ್ತುವ ಕಾರ್ಯ ಮತ್ತು ನೌಕಾಯಾನಯನ್ನು ಮಾಡುವ ಸುಧಾರಣಾ ಹಂತದ ಟೆಂಡರ್ ಕಾರ್ಯಗಳು ಪ್ರಗತಿಯಲ್ಲಿವೆ.
- ಬಾಂದ್ ಜೋಡಣೆ ಮತ್ತು ನಾಲೆಗಳ ಗುರುತಿಸುವಿಕೆಯು ಗಾಂಡಕ್ ನದಿಯ(ಎನ್ ಡಬ್ಲ್ಯು-37)ಲ್ಲಿ ಈಗಾಗಲೇ ಕೈಗೆತ್ತಿಕೊಂಡಿದ್ದು 2018-19ರಲ್ಲಿ ಇದು ಪ್ರಗತಿಯಲ್ಲಿ ಇರುತ್ತದೆ..
- ಬಾರಕ್ ನದಿ( ಎನ್ ಡಬ್ಲ್ಯು-16)ರ ನೌಕಾ ಮಾರ್ಗವನ್ನು ನಿರ್ಮಾಣ ಮಾಡಲು ಹೂಳೆತ್ತುವ ನಿರ್ವಹಣಾ ಕಾರ್ಯ ಸಿಲ್ಚಾರ್-ಭಾಂಗಾ ಪ್ರದೇಶದಲ್ಲಿ ಈಗಾಗಲೇ ಆರಂಭಗೊಂದಿದೆ.
- ಸುಂದರ್ ಬನ್ ಜಲ ಮಾರ್ಗ(ಎನ್ ಡಬ್ಲ್ಯು-97)ರಲ್ಲಿ ಹೂಳೆತ್ತುವ ಕಾರ್ಯವು ಈಗಾಗಲೇ ಆರಂಭಗೊಂಡಿದ್ದು, 2018ರ ಮೇನಲ್ಲಿ ಕಾರ್ಯಾದೇಶವನ್ನು ನೀಡಲಾಗಿರುತ್ತದೆ. ತೆಪ್ಪದ ಸೇತುವೆಯ ಟರ್ಮಿನಲ್ ಅನ್ನು ನಿರ್ಮಾಣ ಮಾಡುವಂತಹ ಕಾರ್ಯದ ಟೆಂಡರ್ ಅನ್ನು ಆಹ್ವಾನ ಮಾಡಲಾಗಿರುತ್ತದೆ..
- ರೂಪ್ ನಾರಾಯಣ್ ನದಿಯಲ್ಲಿ (ಎನ್ ಡಬ್ಲ್ಯು-86) ತೇಲುವ ಟರ್ಮಿನಲ್ ಅನ್ನು ನಿರ್ಮಾಣ ಮಾಡುವಂತಹ ಕಾಮಗಾರಿಗೆ ಕಾರ್ಯಾದೇಶವನ್ನು ಮಾಡಲಾಗಿದೆ. ಹೂಳೆತ್ತುವ ಕಾರ್ಯದ ಟೆಂಡರ್ ಕರೆಯುವ ಪ್ರಕ್ರಿಯೆಯು ಪ್ರಗತಿಯಲ್ಲಿ ಇದೆ.
- ಅಲಫುಝಾ-ಕೊಟ್ಟಾಯಂ-ಅಥಿರಂಫುಝಾ ನಾಲೆ( ಎನ್ ಡಬ್ಲ್ಯು-9)ರಲ್ಲಿ ರಾತ್ರಿ ನೌಕಾಯಾನ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪೂರೈಕೆ ಆದೇಶವನ್ನು ನೀಡಲಾಗಿದೆ. 2018ರ ಸೆಪ್ಟೆಂಬರ್ ನಲ್ಲಿ ಈ ಎಲ್ಲವೂ ಮುಗಿದಿರುತ್ತದೆ. ಹೂಳೆತ್ತುವ ಕಾರ್ಯವನ್ನು ಇಲಾಖವಾರು ಆಹ್ವಾನ ಮಾಡಲಾಗುತ್ತದೆ.
3.5 ಹೊಸ ರೋ-ರೋ ಸೇವೆ
- ಇಬ್ರಾಹಿಂ ಪಟ್ಟಣ ಮತ್ತು ಲಿಂಗಾಯನ ಪಾಳ್ಯಂವರೆಗೆ ಎನ್ ಡಬ್ಲ್ಯು-4ರಲ್ಲಿ ರೋ ರೋ ಸೇವೆಯನ್ನು ಆರಂಭ ಮಾಡಲಾಗಿರುತ್ತದೆ. ಇದು ರಸ್ತೆ ಮಾರ್ಗದ ಅಂತರವನ್ನು ಸುಮಾರು 70 ಕಿಲೋ ಮೀಟರ್ ನಷ್ಟು ಕಡಿಮೆ ಮಾಡಲಿದೆ..
- ಐಡಬ್ಲ್ಯು ಎಐಯು ಅಸ್ಸಾಂ ರಾಜ್ಯದ ಸಹಭಾಗಿತ್ವದಲ್ಲಿ 2018 ಅಕ್ಟೋಬರ್ 12ರಂದು ನೇಮತಿ-ಮಾಜುಲಿ ದ್ವೀಪ ಪ್ರದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸಲು ರೋ ರೋ ಸೇವೆಯನ್ನು ಆರಂಭಿಸಲಾಯಿತು. ಈ ಸೌಲಭ್ಯವನ್ನು ಭಾರತೀಯ ಸಾಗರಯಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇದಕ್ಕೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದ್ದು, 8 ಟ್ರಕ್ ಗಳು ಮತ್ತು 100 ಮಂದಿ ಪ್ರಯಾಣಿಕರನ್ನು ಒಮ್ಮಿಂದೊಮ್ಮೆಲೇ ಸಾಗಿಸುವಂತಹ ಸಾಮರ್ಥ್ಯವನ್ನು ಹೊಂದಿರುವ ಭೂಪೇನ್ ಹಝಾರಿಕಾ ಹೆಸರಿನ ಬೃಹತ್ ಹಡಗು(ವೆಸೆಲ್) ಅನ್ನಯ ಐಡಬ್ಲ್ಯುಎಐ ನೀಡಿದೆ. ಈ ರೋರೋ ವ್ಯವಸ್ಥೆಯು ಒಟ್ಟಾರೆ 12. 5 ಕಿಲೋ ಮೀಟರ್ ಗಳಷ್ಟು ದೂರದ್ದಾಗಿದೆ. ಇದರಿಂದ ಎರಡೂ ದ್ವೀಪ ಪ್ರದೇಶಗಳಿಗೆ ರಸ್ತೆ ಮಾರ್ಗವಾಗಿ ಇದ್ದಂತಹ ಸುತ್ತಿ-ಬಳಸುವ ದೂರವನ್ನು 423 ಕಿಲೋ ಮೀಟರ್ ಗಳಷ್ಟು ಕಡಿಮೆ ಮಾಡಿದೆ. ತೇಜ್ ಪುರ್ ಸೇತುವೆ ಮೂಲಕ ಟ್ರಕ್ ಗಳು ನೇಮತಿ-ಮಾಜುಲಿ ದ್ವೀಪ ಪ್ರದೇಶಗಳನ್ನು ತಲುಪಲು ಇಷ್ಟೊಂದು ದೂರದ ಮಾರ್ಗವನ್ನು ಕ್ರಮಿಸಬೇಕಾಗುತ್ತಿತ್ತು.
- 3.6 ರೋ-ರೋ ವೆಸೆಲ್(ಹಡಗು)ಗಳ ಖರೀದಿ:
ಭಾರತೀಯ ಸಾಗರಯಾನ ಅಭಿವೃದ್ಧಿ ಪ್ರಾಧಿಕಾರವು ಕೊಚಿನ್ ಶಿಪ್ ಯಾರ್ಡ್ ಲಿಮಿಟಿಡ್ ನ ಜತೆಯಲ್ಲಿ 110 ಕೋಟಿ ರೂಪಾಯಿಗಳ ವೆಚ್ಚದಲ್ಲಿ 100 ರೋ-ರೋ-ಪಾಕ್ಸ್ ವೆಸೆಲ್ ಗಳನ್ನು ನಿರ್ಮಿಸಲು ಮತ್ತು ಪೂರೈಕೆ ಮಾಡಿಕೊಡುವಂತೆ 2018ರ ಜುಲೈ 11ರಂದು ಒಪ್ಪಂದವನ್ನು ಮಾಡಿಕೊಂಡಿದೆ. ಈ ವೆಸೆಲ್ ಗಳು 2019ರ ಜೂನ್ ನಿಂದ 2019ರ ಡಿಸೆಂಬರ್ ಮಧ್ಯ ಭಾಗದಲ್ಲಿ ಪೂರೈಕೆ ಆಗಲಿವೆ. ಇವುಗಳನ್ನು ರಾಷ್ಟ್ರೀಯ ಜಲ ಮಾರ್ಗ-1, 2 ಮತ್ತು 3ರಲ್ಲಿ ನಿಯೋಜನೆ ಮಾಡಲಾಗುತ್ತದೆ..
ಚಿತ್ರ: ಘೋಘಾ ದಹೇಜ್ ಫೆರಿ ಸೇವೆ:
3.7 ರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಕಾರ್ಗೋ ಸಂಚರಣೆ:
ಭಾರತೀಯ ಜಲ(ಸಾಗರ)ಸಾರಿಗೆ ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಸರಕು ಸಾಗಣೆ ಕಾರ್ಗೋಗಳ ಸಂಚಾರವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸುವ ಕ್ರಮಗಳನ್ನು ಕೈಗೆತ್ತಿಕೊಂಡಿದೆ. 2018-19ರ ಮೊದಲಾರ್ಧ ವರ್ಷದಲ್ಲಿ ಕಾರ್ಗೋ ಸಂಚಾರವು ಶೇಕಡಾ 102ರಷ್ಟು ವೃದ್ಧಿಯನ್ನು ಕಂಡುಕೊಂಡಿದೆ. ಅಂದರೆ 33.8 ಮಿಲಿಯನ್ ಮೆಟ್ರಿಕ್ ಟನ್ ಗೆ ಬಂದಿದೆ. ಈ ಹಿಂದೆ 2017-18ರ ವರ್ಷದಲ್ಲಿ ಇದರ ಪ್ರಮಾಣವು 16.7 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿತ್ತು. ಇದಕ್ಕೆ ಹೋಲಿದರೆ 2018-19 ಮೊದಲಾರ್ಧ ವರ್ಷದ ಸಾಧನೆ ಗಣನೀಯವಾಗಿ ಹೆಚ್ಚಳವಾಗಿದೆ. ಇದಕ್ಕೆ ಕೈಗೊಂಡಂತಹ ಒಂದಷ್ಟು ಗಮನೀಯವಾದಂತಹ ಕ್ರಮಗಳು ಈ ಕೆಳಗಿನಂತಿವೆ.:-
- ಕಹಲ್ ಗಾವ್(ಬಿಹಾರ) ರಾಷ್ಟ್ರೀಯ ಜಲ ಮಾರ್ಗ-1ರಿಂದ ಧೂಬ್ರಿ(ಅಸ್ಸಾಂ) ರಾಷ್ಟ್ರೀಯ ಜಲಮಾರ್ಗ-2ರ ಮೂಲಕ ಭಾರತ-ಬಾಂಗ್ಲಾದೇಶ ಶಿಷ್ಟಾಚಾರ ಮಾರ್ಗದಲ್ಲಿ 2018ರ ಅಕ್ಟೋಬರ್ ಗೆ ಆರಂಭಿಸಲಾದ 2085 ಕಿಲೋ ಮೀಟರ್ ಗಳ ದೂರದ ಭಾರತೀಯ ಜಲಮಾರ್ಗ ಪ್ರಾಧಿಕಾರದ ಕಾರ್ಗೋ ಪ್ರಾಯೋಗಿಕ ಅತೀ ಉದ್ದದ ಸಂಚಾರವನ್ನು ಯಶಸ್ಸುಗೊಳಿಸಲಾಗಿದೆ. ಈ ಕಾರ್ಗೋ(ಸರಕು ಹೊತ್ತ ಹಡಗು)1235 ಮೆಟ್ರಿಕ್ ಟನ್ ತೂಕದ ಬೂದಿ ಧೂಳನ್ನು ಭಾರತೀಯ ಜಲ ಮಾರ್ಗ ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಲಘು ನೌಕಾ ವಾಹನಗಳಾದ ತ್ರಿಶೂಲ್ ಮತ್ತು ಕೆಳ ಹಂತದ ದೋಣಿಗಳಾದ ಅಜಯ್ ಮತ್ತು ದಿಖು ಮೂಲಕ ತಲುಪಿಸಲಾಗಿದೆ.
- ರಾಷ್ಟ್ರೀಯ ಜಲಮಾರ್ಗ-1ರ ಹಾಲ್ಡಿಯಾ ಬಂದರು ಸಂಕೀರ್ಣದಿಂದ ರಾಷ್ಟ್ರೀಯ ಜಲಮಾರ್ಗ-2 ಭಾರತ-ಬಾಂಗ್ಲಾದೇಶದ ಶಿಷ್ಠಾಚಾರಿ ಮಾರ್ಗವನ್ನು ಬಳಸಿಕೊಂಡು 1205 ಕಿಲೋ ಮೀಅರ್ ಗಳ ದೂರವನ್ನು ಕ್ರಮಿಸಿ 925 ಮೆಟ್ರಿಕ್ ಟನ್ ಕಲ್ಲಿದ್ದಲು ಅದಿರನ್ನು ಸಾಗಣೆ ಮಾಡಲಾಗಿದೆ.
- 2018ರ ನವೆಂಬರ್ ನಲ್ಲಿ ಕೊಲ್ಕತ್ತಾದಿಂದ ವಾರಾಣಸಿ(1280 ಕಿಲೋ ಮೀಟರ್)ಗೆ 16 ಕಂಟೇನರ್ ಗಳಲ್ಲಿ ಪೆಪ್ಸಿಕೋ ಕಂಪನಿಯ ಉತ್ಪನ್ನಗಳನ್ನು ಕೇವಲ 12 ದಿನಗಳಲ್ಲಿ ಸಾಗಿಸಿದ್ದು ಮೊದಲ ರಾಷ್ಟ್ರೀಯ ಜಲ ಸಾರಿಗೆಯ ಮೊದಲ ಕಾರ್ಗೋ(ಸರಕು ಹಡಗು)ಸಂಚಾರವಾಗಿದೆ. ವಾರಾಣಸಿಯಿಂದ ಕೋಲ್ಕತ್ತಾಗೆ ಹಿಂತಿರುಗಿ ಸಾಗುವ ಪ್ರಯಾಣದಲ್ಲಿ ಫುಲ್ಪುರ್, ದಾಬುರ್ ಗಳ ಇಫ್ಕೋ(ಐ ಎಫ್ ಎಫ್ ಸಿಒ) ಮತ್ತು ಪೆಪ್ಸಿಕೋ ಉತ್ಪನ್ನಗಳನ್ನು ಸಾಗಿಸುವುದೇ ಆಗಿತ್ತು.
ಚಿತ್ರ ಭಾರತೀಯ ಜಲ ಸಾರಿಗೆ ಅಭಿವೃದ್ಧಿ ಪ್ರಾಧಿಕಾರದ ವೆಸೆಲ್ ಪಿಪ್ಸಿಕೋ ಉತ್ಪನ್ನಗಳನ್ನು ಹೊತ್ತು ಫರಕ್ಕಾ ಸಂಧಿ ಪ್ರದೇಶವನ್ನು ದಾಟಿ ಗಂಗಾ ನದಿಯಲ್ಲಿ ಸಾಗುತ್ತಿರುವುದು.
3.8 ಕಾರ್ಗೋ ಮಾಲಿಕರು ಮತ್ತು ಹಡಗುದಾರರನ್ನು ಸಂಪರ್ಕಿಸುವುದು:
ವೆಸೆಲ್ ಗಳ ಲಭ್ಯತೆಯನ್ನು ಸರಿಯಾದ ಸಮಯಕ್ಕೆ ಅಂಕಿ ಅಂಶ ಸಮೇತ ಸಮೇತ ತಿಳಿಸಲು ಭಾರತೀಯ ಜಲ ಸಾರಿಗೆ ಅಭಿವೃದ್ಧಿ ಪ್ರಾಧಿಕಾರವು ಮಾಡಿದಂತಹ ಮತ್ತೊಂದು ಗಮನಾರ್ಹವಾದ ಕಾರ್ಯವೇನೆಂದರೆ ಕಾರ್ಗೋ ಮಾಲೀಕರು ಮತ್ತು ಹಡಗುದಾರರನ್ನು ಸಂಪರ್ಕಿಸಿದ್ದು. ಅದಕ್ಕಾಗಿ ಒಂದು ಪೋರ್ಟಲ್ ಅನ್ನು ನೀಡಿದ್ದು. ಇ-ಕನೆಕ್ಟ ಮಾನದಂಡಗಳನ್ನು ಅನುಸರಿಸಿದ ಪರಿಣಾಮವಾಗಿ ಕಾರ್ಗೋ ಮಾಲಿಕರು, ಹಡಗುದಾರರು ಮತ್ತು ವೆಸೆಲ್ ಆಪರೇಟರ್ ಗಳ ನಡುವೆ ಸಂವಹನವನ್ನು ಸಾಧಿಸಲು ಸಾಧ್ಯವಾಯಿತು.ಈವರೆಗೆ ಮಾಹಿತಿಗಳನ್ನು ಹಂಚಿಕೊಳ್ಳಲು, ವಿನಿಮಯ ಮಾಡಿಕೊಳ್ಳಲು ಇದುವರೆಗೆ ವೆಸೆಲ್ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಸುಧಾರಿತವಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗಿರಲಿಲ್ಲ. ಭಾರತೀಯ ಜಲ ಸಾರಿಗೆ ಅಭಿವೃದ್ಧಿ ಪ್ರಾಧಿಕಾರದ ಒಳಗಿರುವಂತಹ ಮಾಹಿತಿ ತಂತ್ರಜ್ಞಾನ ವಿಭಾಗ ಮತ್ತು ಸಂಚಾರಿ ವಿಭಾಗವು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿ ಪಡಿಸಿದೆ. ಕಾರ್ಗೋ ಮಾಲೀಕರು ಮತ್ತು ಸರಕು ಸಾಗಣೆದಾರರ ಫೋರಂ(ಎಫ್ ಒಸಿಎಎಲ್) ಎಂದು ಇದಕ್ಕೆ ಹೆಸರನ್ನು ಇಟ್ಟು ಅದರ ಮೂಲಕ ಸಂವಹನವನ್ನು ಮಾಡಲು ವೇದಿಕೆಯನ್ನು ಕಲ್ಪಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಜಲ ಮಾರ್ಗಗಳ ಮೂಲಕ ಎಷ್ಟು ಪ್ರಮಾಣದ ಸರಕನ್ನು ಸಾಗಣೆ ಮಾಡಲು ಅವಕಾಶಗಳಿವೆ ಎಂಬುದರ ಸಿದ್ಧಗೊಳಿಸಿದ ಮಾಹಿತಿಯನ್ನು ಒದಗಿಸಲಾಗಿರುತ್ತದೆ. ಈ ಪೋರ್ಟಲ್ ನ ಲಿಂಕ್ ಭಾರತೀಯ ಜಲ ಮಾರ್ಗ ಅಭಿವೃದ್ಧಿ ಪ್ರಾಧಿಕಾರದ ವೆಬ್ ಸೈಟ್ www.iwai.nic.inನಲ್ಲಿ ಲಭ್ಯ ಇರುತ್ತದೆ.
3.9 ಗಂಗಾ ನದಿಗಾಗಿಯೇ ಆಧುನಿಕ ಹಡಗುಗಳ ವಿನ್ಯಾಸ:
ಗಂಗಾ ನದಿಯಲ್ಲಿ ಕಾರ್ಗೋ ಸೇವೆ( ಎನ್ ಡಬ್ಲ್ಯು-1)ಯನ್ನು ನೀಡಲು 13 ಸುಧಾರಿತ ವ್ಯವಸ್ಥೆಯ ಹಡಗುಗಳ ವಿನ್ಯಾಸವನ್ನು ಮಾಡುವ ಮೂಲಕ ಆಳ ಕಡಿಮೆ ಇರುವ ಸ್ಥಳಗಳಲ್ಲೂ ಅನುಕೂಲವಾಗುವಂತೆ ಉದ್ದನೆಯ ಬಾರ್ಜ್ ಗಳನ್ನು ಬಳಕೆ ಮಾಡಲಾಗುತ್ತಿದೆ. 2018ರ ಆಗಸ್ಟ್ 31ರಂದು ಭಾರತೀಯ ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರದಿಂದ ಇದನ್ನು ಪ್ರಕಟ ಮಾಡಲಾಗಿದೆ. ಗಂಗಾ ನದಿಯ ಸಂಕೀರ್ಣ ಮಾರ್ಫೋಲಜಿ(ಸಂರಚನೆ) ಹೈಡ್ರಾಲಿಕ್, ಅತ್ಯಂ ಸಂಕೀರ್ಣ ತಿರುವುಗಳು, ಬದಲಾಗುವಂತಹ ಕಣಿವೆಗಳು, ಅಂಕುಡೊಂಕುಗಳು ಮತ್ತು ಹರಿವು ಇದೆಲ್ಲವನ್ನೂ ನಿವಾರಿಸಿಕೊಂಡು ಜಲ ಯಾನವನ್ನು ಸಾಧಿಸುವಂತಹ ಒಂದು ಸಮಗ್ರ ಮತ್ತು ಸುಧಾರಿತ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಒಳನಾಡು ವೆಸೆಲ್/ಹಡುಗುಗಳನ್ನು ನಿರ್ಮಾಣ ಮಾಡುವವರಿದೂ ಅನುಕೂಲಗಳನ್ನು ಕಲ್ಪಿಸಿ ಪ್ರಾದೇಶಿಕ ಹಡಗು ನಿರ್ಮಾಣ ಕೈಗಾರಿಕೆಯನ್ನು ಉತ್ತೇಜಿಸಿ ಅಭಿವೃದ್ಧಿ ಪಡಿಸುತ್ತದೆ. ಅಲ್ಲದೇ ಈ ಪ್ರಯತ್ನವು ರಾಷ್ಟ್ರೀಯ ಜಲ ಮಾರ್ಗ-1 ರಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರವನ್ನು ಇನ್ನಷ್ಟು ಸಾಧ್ಯವಾಗಿಸುವ ಬಹುದೊಡ್ಡ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಐ ಡಬ್ಲ್ಯು ಎಐ ವೆಬ್ ಸೈಟ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದ್ದು,ವಿದೇಶಿ ಹಡಗು ವಿನ್ಯಾಸದ ಮೇಲೆ ನಿರ್ಭವಾಗಿದ್ದಂತಹ ಹಡಗು ಮಾಲಿಕರಿಗೆ ರಾಷ್ಟ್ರೀಯ ಜಲಸಾರಿಗೆ ಅಭಿವೃದ್ಧಿ ಪ್ರಾಧಿಕಾರದ ಹೊಸ ವಿನ್ಯಾಸಗಳು ಅವಕಾಶಗಳನ್ನು ತೆರೆದುಕೊಟ್ಟಿವೆ. ಇದರಿಂದ ಒಂದು ವೆಸೆಲ್ ನಿರ್ಮಾಣಕ್ಕೆ ತಗಲುತ್ತಿದ್ದ30ರಿಂದ 50 ಲಕ್ಷ ರೂಪಾಯಿಗಳವರೆಗಿನ ಖರ್ಚನ್ನು ಉಳಿತಾಯವನ್ನು ಮಾಡಲು ಸಾಧ್ಯವಾಗಿಸುತ್ತದೆ.
4 ನೌಕಾಯಾನ:
4.1 ನೌಕಾಯಾನಯ ಜಾರಿ ನಿರ್ದೇಶನಾಲಯ:
ಹಡಗುಗಳ ಸಂಖ್ಯೆ ಮತ್ತು ಕಡಲ ತೀರಗಳು
- ಭಾರತದಲ್ಲಿ 2017ರ ಡಿಸೆಂಬರ್ 12ರವರೆಗಿನ ಮಾಹಿತಿಯಿಂದ 1347 ಹಡಗುಗಳು ಇದ್ದವು. 2018ರ ಅಕ್ಟೋಬರ್ 31ರವೇಳೆಗೆ ಈ ಸಂಖ್ಯೆಯನ್ನು 1399ಕ್ಕೆ (12.79 ಮಿಲಿಯನ್ ಟನ್ )ಏರಿಕೆ ಮಾಡಲಾಗಿದೆ. ಕಳೆದ 10 ತಿಂಗಳುಗಳಲ್ಲಿ ಹಡಗುಗಳ ಸಂಖ್ಯೆಯನ್ನು 25 ಹಡಗುಗಳಷ್ಟು ಹೆಚ್ಚಿಗೆ ಮಾಡಲಾಗಿದೆ.
- ಕಡಲ ತೀರಗಳ ಸಂಖ್ಯೆಯಲ್ಲಿ ಅನಿರೀಕ್ಷಿತವಾದಂತಹ ಬೆಳವಣಿಗೆಯನ್ನು ನಾವು ಕಂಡುಕೊಂಡಿದ್ದೇವೆ. ಭಾರತದಲ್ಲಿ ಈ ಬೆಳವಣಿಗೆಯು ಶೇಕಡಾ 42.ರಷ್ಟು ಬೆಳವಣಿಗೆಯನ್ನು ಕಂಡುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಭಾರತ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಬಂದರು ಇಲಾಖೆಗೆ ಸಂಬಂಧಿಸಿದಂತೆ ತಂದಂತಹ ಹಲವು ಸುಧಾರಣಾ ಕ್ರಮಗಳೇ ಕಾರಣವಾಗಿವೆ. ಕಳೆದ ಡಿಸೆಂಬರ್ ನಲ್ಲಿ ಇದ್ದಂತಹ ಕಡಲ ತೀರಗಳ ಸಂಖ್ಯೆಯು 1,54,349 ಗಳಾಗಿತ್ತು. ಇದೀಗ ಈ ಸಂಖ್ಯೆಯು 1,79,599ಕ್ಕೆ ಏರಿಕೆಯನ್ನು ಕಂಡಿದೆ..
ಸಮುದ್ರ ಸಾರಿಗೆ ಸಮಾವೇಶ-2006
- 2006ರ ಸಾಗರಯಾನ ಕಾರ್ಮಿಕ ಸಮಾವೇಶದ ಅವಕಾಶಗಳನ್ನುಇಲ್ಲಿ ಅನ್ವಯಿಸಿಕೊಳ್ಳುವವ ಅವಕಾಶಗಳಿವೆ. 500 ಗ್ರಾಸ್ ಟನೇಜ್ ಗಿಂತಲೂ ಕಡಿಮೆ ಇರುವಂತಹ ಮರ್ಚೆಂಟ್ ವೆಸೆಲ್ ಗಳಿಗೆ ಇದು ವಿಸ್ತರಣೆ ಮಾಡುವಂತಹದ್ದಾಗಿದೆ. ಈ ಸಮ್ಮೆಳನದ ಅಡಿಯಲ್ಲಿ ಕಲ್ಯಾಣ ಮಾನದಂಡಗಳನ್ನು ಸಣ್ಣ ಶಿಪ್ ಗಳನ್ನು ನಡೆಸುವವರಿಗೂ ಅನ್ವಯ ಆಗುವಂತೆ ದರ ನಿಗದಿಯನ್ನು ಮಾಡಲು ಅನುವು ಮಾಡಿಕೊಟ್ಟಿದೆ.
ವ್ಯವಹಾರವನ್ನು ಮಾಡಲು ಸುಲಭ ಅವಕಾಶ:
- ನೇಮಕ ಮತ್ತು ಸ್ಥಳ ನಿಯೋಜನೆಯ ಏಜೆನ್ಸಿ(ಆರ್ ಪಿಎಸ್)ಗಳಿಗೆ ಮ್ಯಾಡ್ಯೂಲ್ ಒಂದನ್ನು ಅಭಿವೃದ್ಧಿ ಮತ್ತು ಜಾರಿಗೆ ತರುವ ಅವಕಾಶವನ್ನು ತೆರೆದುಕೊಡಲಾಗಿದೆ. ಹೊಸ ಅರ್ಜಿಗಳನ್ನು ಭರ್ತಿ ಮಾಡುವ, ವಾರ್ಷಿಕ ತಪಾಸಣೆಗಳನ್ನು ಮಾಡುವ ಮತ್ತುಆನ್ ಲೈನ್ ಮೂಲಕ ಪರೀಕ್ಷಾ ಪರಿಶೀಲನೆಯನ್ನು ನಡೆಸುವುದನ್ನು ಇದರಿಂದ ಮಾಡಬಹುದಾಗಿದೆ. ಅಲ್ಲದೇ ಇದು ಆರ್ ಪಿಎಸ್ ಏಜೆನ್ಸಿಗಳ ಸುಲಭ ಅನುಮೋದನೆ ಮತ್ತು ನಿರ್ವಹಣೆ ಮಾಡುವಂತಹುದಕ್ಕೆ ಅವಕಾಶಗಳನ್ನು ಮಾಡಿಕೊಡುತ್ತದೆ.
- ಹೊಸ ಸಿಡಿಸಿ ನಿಯಮಗಳು-2017ರ ಮೂಲಕ ಸಿಸಿಡಿ ಆಧಾರಿತವಾದ ಐದು ಎಸ್ ಟಿಸಿ ಡಬ್ಲ್ಯು ಕೋರ್ಸ್ ಗಳನ್ನು ನೀಡುವ ಪ್ರಕ್ರಿಯೆಯು ಬಿರುಸಿನ ಚಾಲನೆಯಲ್ಲಿದೆ. ಆದ್ದರಿಂದ 14-01-2018ರಲ್ಲಿ ಸುಲಭ ಸಾಗರ ತೀರಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸಿಡಿಸಿಯನ್ನು ನೀಡುವಂತಹ ಕಾರ್ಯವು ಸಂಪೂರ್ಣವಾಗಿ ಆನ್ ಲೈನ್ ವ್ಯವಸ್ಥೆಯಲ್ಲಿದೆ. ಕಡಲ ತೀರಗಳಿಂದ ಸಿಡಿಸಿಗಳನ್ನು ಪಡೆದುಕೊಳ್ಳಲು ಮೊದಲಿನಂತೆ ಸುದೀರ್ಘವಾದ ಸಮಯವನ್ನು ನೀಡಿ ಪೂರ್ವ ಸಮುದ್ರ ಕೋರ್ಸ್ ಗಳನ್ನು ನಡೆಸುವ ಅಗತ್ಯವು ಒದಗಿ ಬರುತ್ತಿಲ್ಲ.
ನೌಕಾಧಿಪತ್ಯ ಕಾನೂನು ಮತ್ತು ನಿಯಮಗಳು:
- ನೌಕಾಧಿಪತ್ಯ (ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಮತ್ತು ಸಮುದ್ರಯಾನ ಕ್ಲೈಮುಗಳ ಇತ್ಯರ್ಥ ಪಡಿಸಿಕೊಳ್ಳುವಿಕೆ) ಕಾಯ್ದೆ-2017 ಅನ್ನು ಜಾರಿಗೆ ತರಲಾಗಿರುತ್ತದೆ. 2018ರ ಏಪ್ರಿಲ್ 1ರಿಂದ ಈ ಕಾಯ್ದೆಯು ಅನುಷ್ಠಾನಕ್ಕೆ ಬಂದಿರುತ್ತದೆ. ಈ ಹೊಸ ಕಾಯ್ದೆಯು ಅನುವು ಮಾಡಿಕೊಟ್ಟಿರುವಂತೆ ಎಲ್ಲಾ ಕರಾವಳಿ ರಾಜ್ಯಗಳ ಹೈಕೋರ್ಟ್ ಗಳು ಕಡಲಯಾನದ ಕ್ಲೈಮುಗಳನ್ನು ಇತ್ಯರ್ಥ ಮಾಡುವಂತಹ ಅಧಿಕಾರ ವ್ಯಾಪ್ತಿಯನ್ನು ಪಡೆದುಕೊಂಡಿರುತ್ತವೆ. ಕೇವಲ ಈ ಹಿಂದೆ ಇದ್ದಂತೆ ಕೇವಲ ಸರಕು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಮುದ್ರ ಕೆಲಸಗಾರರ ದಿನಗೂಲಿಯ ವೇತನಗಳು, ಜೀವ ಹಾನಿ, ಉಳಿತಾಯಗಳು, ಅಡಮಾನಗಳು, ನಷ್ಟ ಅಥವಾ ಹಾನಿ, ಸೇವೆ ಮತ್ತು ದುರಸ್ಥಿ, ವಿಮೆಗಳು, ಮಾಲೀಕತ್ವ ಮತ್ತು ಭೋಗ್ಯದ ಒಡೆತನ, ಪರಿಸರಕ್ಕೆ ಹಾನಿ ಮಾಡುವಂತಹ ವಿಚಾರಗಳು ಹೀಗೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಆಯಾ ಕರಾವಳಿ ಒಳಗೊಂಡ ರಾಜ್ಯಗಳ ಹೈಕೋರ್ಟ್ ಗಳು ಕ್ಲೈಮುಗಳನ್ನು ಇತ್ಯರ್ಥ ಮಾಡಬಹುದಾಗಿರುತ್ತದೆ. ಸಮುದ್ರ ಕೆಲಸಗಾರರ ದಿನಗೂಲಿ ವೇತನವನ್ನು ಕೊಡಿಸುವುದಕ್ಕೆ ಈ ಕಾಯ್ದೆಯು ಹೆಚ್ಚು ಆದ್ಯತೆಯನ್ನು ನೀಡುತ್ತದೆ. ಯಾವುದೇ ಕಾನೂನು ಬಾಹಿರ ಮತ್ತು ಅಕ್ರಮ ಬಂಧನಗಳನ್ನೂ ಈ ಕಾಯ್ದೆಯು ತಡೆಯುವಂತಹ ಅವಕಾಶಗಳನ್ನು ಹೊಂದಿರುತ್ತದೆ. ಒಂದು ಹೈ ಕೋರ್ಟ್ ನಿಂದ ಮತ್ತೊಂದು ಹೈಕೋರ್ಟ್ ಗೆ ಕೇಸ್ ಗಳನ್ನು ವರ್ಗಾವಣೆ ಮಾಡುವಂತಹ ದಾರಿಗಳನ್ನು ಈ ಕಾಯ್ದೆಯ ತೆರೆದುಕೊಡಲಾಗಿರುತ್ತದೆ.
- ನೌಕಾಧಿಪತ್ಯ ನಿಯಮ(ಮೌಲ್ಯಮಾಪಕ)ಗಳು ನೌಕಾಧಿಪತ್ಯದ(ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಮತ್ತು ಸಮುದ್ರಯಾನ ಕ್ಲೈಮುಗಳ ಇತ್ಯರ್ಥ ಪಡಿಸಿಕೊಳ್ಳುವಿಕೆ) ಕಾಯ್ದೆ-2017ರ ಅನುಸಾರ ಸಂರಚನೆ ಮಾಡಿದಂತಹದ್ದಾಗಿರುತ್ತದೆ. ಇದು ನೌಕಾಧಿಪತ್ಯದ ಸಂಬಂಧಿಸಿದ ಕೋರ್ಟ್ ಗಳಿಗೆ ಮೌಲ್ಯಮಾಪಕರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ನೌಕಾಧಿಪತ್ಯದ ಮೌಲ್ಯಮಾಪನೆಯ ಸಂದರ್ಭದಲ್ಲಿ ಈ ಮೌಲ್ಯಮಾಪಕರ ಅಗತ್ಯವು ಕಂಡು ಬರುತ್ತದೆ.
ಐಎಂಓಗೆ ಭಾರತದ ಮರು ಆಯ್ಕೆ:
- ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ(ಐಎಂಓ) ಮಂಡಳಿಗೆ ಭಾರತವು ಮರು ಆಯ್ಕೆಯಾಗಿದೆ. ಬಿ ವರ್ಗೀಕರಣದಲ್ಲಿ ಪ್ರತಿನಿಧಿಸುತ್ತಿರುವ ರಾಜ್ಯಗಳು ಅಂತಾರಾಷ್ಟ್ರೀಯ ಸಮುದ್ರ ಆಧಾರಿತ ವ್ಯಾಪಾರದ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತವೆ. 2018-19ರ ದ್ವೈ ವಾರ್ಷಿಕ ಅವಧಿಯಲ್ಲಿ ಇದರ ಮೇಲೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲಾಗಿದೆ. 2017ರ ಡಿಸೆಂಬರ್ 1ರಂದು ಲಂಡನ್ ನಲ್ಲಿ ನಡೆದಂತಹ ಐಎಂಓನ ಅಸೆಂಬ್ಲಿಯ 30ನೇ ಸೆಷನ್ ನಲ್ಲಿ ಈ ವರ್ಗಕ್ಕೆ ಎರಡನೇ ಅತೀ ಹೆಚ್ಚು ಮತಗಳು ಬಿದ್ದಿರುತ್ತವೆ.
4.2 ಸಮುದ್ರ ಪ್ರಯಾಣದ ಹಡಗುಗಳು:
i. 2018ರ ಅಕ್ಟೋಬರ್ 12ರಂದು ಚೆನ್ನೈ ಬಂದರಿನಲ್ಲಿ ಆಧುನಿಕ ಅಂತಾರಾಷ್ಟ್ರೀಯ ಸಮುದ್ರ ಪ್ರಯಾಣ ಹಡಗುಗಳ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಲಾಯ್ತು..
ii. 2018ರ ಅಕ್ಟೋಬರ್ 20ರಂದು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮುಂಬೈ-ಗೋವಾ ಸಮುದ್ರಯಾನ ಕ್ರ್ಯೂಸ್ ಸೇವೆಯನ್ನು ಆರಂಭ ಮಾಡಲಾಯಿತು.
4.3 ಹಡಗು ನಿರ್ಮಾಣ:
ಪ್ರಾದೇಶಿಕ ಹಡಗು ನಿರ್ಮಾಣವನ್ನು ಉತ್ತೇಜನ ಮಾಡುವಂತಹ ಉದ್ದೇಶದಿಂದ ಭಾರತ ಸರ್ಕಾರವು ಮುಂದಿನ ಹತ್ತು ವರ್ಷಗಳಿಗೆ (2016-2026) 4000 ಕೋಟಿ ರೂಪಾಯಿಗಳ ನಿಧಿಯನ್ನು ಒಳಗೊಂಡಂತಹ ಹಡಗು ನಿರ್ಮಾಣ ಹಣಕಾಸು ನೆರವಿನ ನೀತಿಯನ್ನು ರೂಪಿಸಿದೆ. ಈ ಪಾಲಿಸಿಯ ಅಡಿಯಲ್ಲಿ ಭಾರತೀಯ ಶಿಪ್ ಯಾರ್ಡ್ ಗಳಿಗೆ ಹಣಕಾಸು ನೆರವನ್ನು ಒದಗಿಸಿಕೊಡುತ್ತದೆ. ಅಂದರೆ ಒಪ್ಪಂದದ ಮೊತ್ತಕ್ಕಿಂತ ಶೇಕಡಾ 20ರಷ್ಟು ಅಥವಾ ಫೇರ್ ಪ್ರೈಸ್(ನೈಜ ಬೆಲೆ) ಅಥವಾ ಖಚಿತ ರಸೀದಿಯ ಶೇಕಡಾ 20ರಷ್ಟನ್ನು ಅವರು ನಿರ್ಮಾಣ ಮಾಡುವಂತಹ ಪ್ರತಿ ವೆಸೆಲ್ ಗೆ ನೀಡಲಾಗುವುದು. ಪ್ರತಿ ಮೂರು ವರ್ಷಕ್ಕೆ ಹಣಕಾಸು ನೆರವಿನ ಪ್ರಮಾಣವನ್ನು ಶೇಕಡಾ 3ರಷ್ಟನ್ನು ಕಡಿಮೆ ಮಾಡುತ್ತಾ ನಿರ್ಧಾರವನ್ನು ಈ ಪಾಲಿಸಿಯಲ್ಲಿ ಮಾಡಲಾಗಿದೆ.
ಅರ್ಜಿಗಳನ್ನು ನಿರ್ವಹಣೆಯನ್ನು ಮಾಡುವಂತಹ ಚಟುವಟಿಕೆಗಳ ಪ್ರಕ್ರಿಯೆಯನ್ನು ನಡೆಸಲು ಬಂದರು ಇಲಾಖೆಯ ಸುಧಾರಿತ ವೆಬ್ ಸೈಟ್ ಸೇವೆಯನ್ನು ನೀಡುತ್ತಿದ್ದು ಇದನ್ನು ಬಂದರು ಇಲಾಖೆಯ ಜಾರಿ ನಿರ್ದೇಶನಾಲಯವು ನೋಡಿಕೊಳ್ಳುತ್ತದೆ..
ಜಾರಿನಿರ್ದೇಶನಾಲಯ(ಬಂದರು)ವು ಪ್ರಧಾನ ಸಮ್ಮಿಗೆ ಸ್ವೀಕೃತಿ ಮಾಡಿಕೊಳ್ಳಲಿದೆ. ಇದು 30 ವೆಸೆಲ್ ಗಳಿಗೆ ಈಗಾಗಲೇ ಹಣಕಾಸು ನೆರವನ್ನು ನೀಡುವ ಅರ್ಜಿಗಳನ್ನು ರೂಪಿಸಿದೆ. ಹಡಗು(ಶಿಪ್ಪಿಂಗ್) ಇಲಾಖೆಯು ಇದಕ್ಕಾಗಿ 11.89 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಭಾರತದ ಮೂರು ಶಿಪ್ ಯಾರ್ಡ್ ಗಳಿಗೆ 4 ವೆಸೆಲ್ಸ್ ಗಳನ್ನು ನೀಡಲು ಈ ಮೊತ್ತವನ್ನು ನೀಡಲಾಗಿರುತ್ತದೆ.
4.4 ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್(ಸಿಎಸ್ ಎಲ್)
- ಸಿಎಸ್ ಎಲ್ ಅಂಡಮಾನ್ ಮತ್ತು ನಿಕೋಬಾರ್ ಗೆ ಎರಡು 500 ಪ್ಯಾಕ್ಸ್ ವೆಸೆಲ್ ಗಳನ್ನು ಚಾಲನೆಗೊಳಿಸಲಾಗಿದೆ. ಅಂತರ ಒಳನಾಡು ಸಾರಿಗೆಯನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಇವುಗಳನ್ನು 2018ರ ಅಕ್ಟೋಬರ್ 30ರಂದು ಆರಂಭಿಸಲಾಗಿದೆ.
- ಸಿಎಸ್ ಎಲ್ ಎರಡು ರೋ ರೋ ಮತ್ತು 8 ರೊ-ಪ್ಯಾಕ್ಸ ವೆಸೆಲ್ ಗಳನ್ನು 2018ರ ಜುಲೈ 11ರಂದು ಮಾಡಿಕೊಂಡ ಒಪ್ಪಂದದಂತೆ ಭಾರತೀಯ ಸಾಗರಯಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ಮಿಸಿ ಮತ್ತು ಒದಗಿಸಿಕೊಡಲು ಸ್ಥಾಪನೆ ಮಾಡಲಾಗಿರುತ್ತದೆ. ಈ ವೆಸೆಲ್ಸ್ ಗಳು 2019ರ ಜೂನ್ ನಿಂದ 2019ರ ಡಿಸೆಂಬರ್ ಮಧ್ಯೆ ಎನ್ ಡಬ್ಲ್ಯು-1, ಎನ್ ಡಬ್ಲ್ಯು-2, ಮತ್ತು ಎನ್ ಡಬ್ಲ್ಯು-3ರಲ್ಲಿ ಇಳಿಯಲಿವೆ.
- ಕೊಚಿನ್ ಶಿಪ್ ಯಾರ್ಡ್ ನಲ್ಲಿ 1799 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದ ಬಹುದೊಡ್ಡ ಡ್ರೈ ಡಾಕ್ ಅನ್ನು ಸ್ಥಾಪನೆ ಮಾಡಲು 2018ರ ಅಕ್ಟೋಬರ್ 30ರಂದು ಅಡಿಗಲ್ಲನ್ನು ಹಾಕಲಾಗಿದೆ. ಸಿಎಸ್ ಎಲ್ ನ ಆವರಣದಲ್ಲಿ ಹೊಸ ಬೃಹತ್ ಪ್ರಮಾಣದ ಡಾಕ್ ಅನ್ನು 310 ಮೀಟರ್ ಉದ್ದದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಅಗಲವು 75/60 ಮೀಟರ್ ಮತ್ತು ಡ್ರಾಫ್ಟ್ 9.5 ಮೀಟರ್ ವರೆಗೂ ಇರಲಿದೆ.
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಓ) ಜತೆ ಸಿಎಸ್ ಎಲ್ 2018ರ ಜನವರಿ 18ರಂದು ಒಂದು ತಿಳಿವಳಿಕೆ ಪತ್ರಕ್ಕೆ ಸಹಿಯನ್ನು ಮಾಡಲಾಗಿದೆ. ಈ ಒಪ್ಪಂದದಂತೆ ಸಿಎಸ್ ಎಲ್ ನಿರ್ಮಾಣ ಮಾಡಿಕೊಟ್ಟಂತಹ ವೆಸೆಲ್ ಗಳು ಡಿಆರ್ ಡಿಓ ತಯಾರಿ ಮಾಡಿದಂತಹ ರಕ್ಷಣಾ ಸಂಬಂಧಿಸಿದ ಸಲಕರಣೆಗಳನ್ನು ರಫ್ತು ಮಾಡಲು ಅವಕಾಶ ವಾಗುಂತಹ ರಕ್ಷಣಾತ್ಮಕವಾದ ವ್ಯವಸ್ಥೆಗಳನ್ನು ಒಳಗೊಂಡ ವೆಸೆಲ್ಸ್ ಗಳನ್ನು ತಯಾರಿ ಮಾಡಿಕೊಡಲಿದೆ.
ಅಲ್ಲದೇ ಭಾರತೀಯ ಒಇಎಂಗಳು ತಯಾರಿ ಮಾಡಿದಂತಹ ವಸ್ತುಗಳನ್ನು ಸಾಗಿಸಲು ಈ ವೆಸೆಲ್ಸ್ಗಳು ನೆರವಿಗೆ ಬರಲಿವೆ.
- 2018ರ ಜನವರಿ 29ರಲ್ಲಿ ಸಿಎಸ್ ಎಲ್ 16 ನಿರ್ಮಾಣದ ಒಪ್ಪಂದಗಳಿಗೆ ಸಹಿಯನ್ನು ಮಾಡಿದೆ. ತುನಾ ಲಾಂಗ್ ಲೈನಿಂಗ್ ಮತ್ತು ಗಿಲ್ ನೆಟ್ಟಿಂಗ್ ಮೀನುಗಾರಿಕೆ ವೆಸೆಲ್ಸ್ ಗಳನ್ನು ಪ್ರಯಾಣಿಕರ ದೋಣಿಗಳಿಗೆ ಪರ್ಯಾಯವಾಗಿ ನಿರ್ಮಾಣ ಮಾಡುವ ಒಪ್ಪಂದ ಇದಾಗಿರುತ್ತದೆ. ಭಾರತ ಸರ್ಕಾರದಿಂದ ಹಣಕಾಸು ನೆರವನ್ನು ಪಡೆದುಕೊಂಡಂತಹ ನೀಲಿ ಕ್ರಾಂತಿಯಯೋಜನೆಗಳ ಅಡಿಯಲ್ಲಿ ಪಾಲ್ಕ್ ಬೇಯಿಂದ ಆಳ ಸಮುದ್ರಕ್ಕೆ ಇಳಿಯುವ ದೋಣಿಗಳನ್ನು ಇಳಿಸಲು ತಮಿಳುನಾಡು ಸರ್ಕಾರದೊಂದಿಗೆ ಸೇರಿ ಹಣಕಾಸು ನೆರವನ್ನು ಮಾಡಿಕೊಡಲಾಗಿರುತ್ತದೆ.
.
ಚಿತ್ರ ಕೊಚಿನ್ ಬಂದರಿಗೆ ಪರಿಹಾರ ಸಾಮಗ್ರಿಗಳ ತಲುಪಿಸುವಿಕೆ:
4.4 ಹಡಗು ರಿಪೇರಿ ಸೌಲಭ್ಯಗಳು:
- ಇಂದಿರಾ ಡಾಕ್ ಗೆ (ಹಡಗು ನೆಲೆ) ಹಡಗು ದುರಸ್ಥಿ ಸೌಲಭ್ಯ ಮತ್ತು ಸಂಬಂಧಿಸಿದ ಸೇವೆಗಳ ಕಾರ್ಯಾಚರಣೆ ಮತ್ತು ವ್ಯವಸ್ಥಾಪನೆಯನ್ನು ಮಾಡಲು ಸಿಎಸ್ ಎಲ್ ಮತ್ತು ಮುಂಬೈ ಬಂದರು ಟ್ರಸ್ಟ್ ಜತೆ 2018ರ ಜನವರಿ 11ರಂದು ಒಂದು ತಿಳಿವಳಿಕೆಯ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ..
- ನೇತಾಜಿ ಸುಭಾಷ್ ಹಡಗು ನೆಲೆ(ಡಾಕ್) ನಲ್ಲಿ ಹಡಗು ರಿಪೇರಿ ವ್ಯವಸ್ಥೆ ಮತ್ತು ಸಂಬಂಧಿಸಿದ ಸೌಲಭ್ಯಗಳನ್ನು ಕಾರ್ಯಾಚರಣೆ ಮಾಡಲು ಮತ್ತು ವ್ಯವಸ್ಥಾಪನೆಯನ್ನು ಮಾಡಲು 2018ರ ಮಾರ್ಚ್ 17ರಂದು ಕೋಲ್ಕತ್ತಾ ಬಂದರು ಟ್ರಸ್ಟ್ ಜತೆ ತಿಳಿವಳಿಕೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.
4.5 ಭಾರತೀಯ ನೌಕಾಯಾನ ಕಾರ್ಪೊರೇಷನ್
ಎಸ್ ಸಿಐನ ಮಾನ್ಯತೆಯ ಅಡಿಯಲ್ಲಿ ಲಿಂಗ ವೈವಿಧ್ಯತೆ ಮತ್ತು ಸಮಾನತೆನ್ನು ಕಾರ್ಯ ಸ್ಥಳದಲ್ಲಿ ಕಾರ್ಯ ಸಾಧ್ಯ ಮಾಡಲು ಬದ್ಧವಾಗಿದ್ದು ಮಹಿಳಾ ಕ್ರಮಾನುಗತವಾದ ದರ್ಜೆಗಳನ್ನು ನೀಡುವಂತಹ ಮೂಲ ತತ್ವಗಳ ಎಸ್ ಸಿಐ ಮಂಡಳಿಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಹಿಳಾ ಸಿಬ್ಬಂದಿಗೆ ಹೆಚ್ಚು ಅವಕಾಶಗಳನ್ನು ನೀಡುವ ವಿಭಾಗದಲ್ಲಿ ಎಸ್ ಸಿಐ ಪ್ರಶಸ್ತಿಯನ್ನು ಪಡೆದುಕೊಂಡಿದೆ.
4.6 ಅಂಡಮಾನ್ ಲಕ್ಷ ದ್ವೀಪ ರೇವು/ಬಂದರು ಕಾಮಗಾರಿ:
ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ ದ್ವೀಪ ಪ್ರದೇಶಗಳಲ್ಲಿ ಬಂದರು ಮತ್ತು ರೇವುಗಳ ಸಂರಚನಾ ಸೌಲಭ್ಯಗಳನ್ನು, ಮೂಲ ಸೌಕರ್ಯಗಳನ್ನು ನೀಡುವಂತಹ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮತ್ತು ರೂಪಿಸುವ ಜವಾಬ್ದಾರಿಗೆ ಅಂಡಮಾನ್ ಲಕ್ಷದ್ವೀಪ ರೇವು ನಿರ್ಮಾಣ ಕೆಲಸ(ಎಎಲ್ ಹೆಚ್ ಡಬ್ಲ್ಯು)ವನ್ನು ಕೈಗೆತ್ತಿಕೊಳ್ಳಲಾಗಿದೆ.ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷ ದ್ವೀಪ ದ್ವೀಪ ಪ್ರದೇಶಗಳಲ್ಲಿ ಈ ಕೆಳಗಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮತ್ತು ಜಾರಿಗೆ ತರುವ ಕೆಲಸವು 2018ರಲ್ಲಿ ಆಗಿದೆ.:-
- ಹಟ್ ಬೇ ನಲ್ಲಿ ಹಾನಿಗೆ ಒಳಗಾದ ಹಿನ್ನೀರಿನ ಪುನಃಸ್ಥಾಪನೆ: 1 ಮೀಟರ್ x 1 ಮೀಟರ್x 1 ಮೀಟರ್ ಅಳತೆಯ 8 ಟಿ ಟೆಟ್ರಾ ಪಾಡ್ಸ್್ಗಳನ್ನು 800 ಮೀಟರ್ ನಿಂದ 1200 ಮೀಟರ್ ಸರಪಳಿಯವರೆಗೆ ಸಮದ್ರದ ಅಂಚುಗಳಲ್ಲಿ ಸಿಸಿ ಬ್ಲಾಕ್ ಗಳನ್ನು ಅಳವಡಿಸುವ ಕಾರ್ಯವು ಆಗುತ್ತಿದೆ. ಲಿಟಲ್ ಅಂಡಮಾನ್ ನಲ್ಲಿ ಹಟ್ ಬೇಯನ್ನು ನಿರ್ಮಾಣ ಮಾಡುವಂತಹ ಕಾರ್ಯವನ್ನು 2019ರ ಆಗಸ್ಟ್ ಒಳಗೆ 14.66 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುತ್ತಿದೆ..
- ಲಕ್ಷ ದ್ವೀಪದ ಕಲ್ಪಾನಿ ದ್ವೀಪ ಪ್ರದೇಶದಲ್ಲಿ ಹಾನಿಗೆ ಒಳಗಾದ ಹಿನ್ನೀರಿನ ಪ್ರದೇಶವನ್ನು ಪುನಃಸ್ಥಾಪನೆ ಮಾಡುವ ಕೆಲಸವು ಆರಂಭವಾಗಿದೆ. 34.56 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಮತ್ತು 2020ರ ಜೂನ್ ನಲ್ಲಿ ಈ ಯೋಜನೆಯು ಪೂರ್ಣಗೊಳ್ಳಲಿದೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ 49.19 ಕೋಟಿ ರೂಪಾಯಿಗಳ ಮೊತ್ತದಲ್ಲಿ ಕಾರ್ ನಿಕೋಬಾರ್ ನ ಮುಸ್ ನಲ್ಲಿ ಸಮುದ್ರ ಗೋಡೆ ಮತ್ತು ದಂಡೆಯ ಸುರಕ್ಷಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 2020ರ ಡಿಸೆಂಬರ್ ನ ಒಳಗೆ ಪೂರ್ಣಗೊಳ್ಳಲಿದೆ,
.
4.7 ಭಾರತೀಯ ಸಮುದ್ರಯಾನ ವಿಶ್ವ ವಿದ್ಯಾಲಯ
ಬಂದರು ವ್ಯವಸ್ಥಾಪನೆ, ಸಮುದ್ರ ಎಂಜಿನಿಯರಿಂಗ್ ಮತ್ತು ಸಾಗರ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಯ ಕಾರ್ಯಕ್ರಮವಾದ ಅಂತಾರಾಷ್ಟ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ(ಐಟಿಇಸಿ)ದ ಕುರಿತಾಗಿ ಆಫ್ರಿಕನ್ ಅಧಿಕಾರಿಗಳಿಗೆ ತರಬೇತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
- 2018ರ ನವೆಂಬರ್ 26ರಂದು ಕೋಲ್ಕತ್ತಾ ಕ್ಯಾಂಪಸ್ ನಲ್ಲಿ ಕಾರ್ಯಾಗಾರವನ್ನು ಐ ಎಂಯು ವತಿಯಿಂದ ನಡೆಸಲಾಯಿತು. ಇದನ್ನು ಜರ್ಮನಿಯ ಫ್ರಾಂಕ್ ಫರ್ಟ್ ಮೂಲದ ಸಿಐಎಂಎಸಿ( ಕೌನ್ಸಿಲ್ ಇಂಟರ್ ನ್ಯಾಷನಲ್ ಡೆಸ್ ಮೆಷಿನ್ಸ್ ಎ ಕಂಬಾಸ್ಟಿನ್)-ಯ ಅಂತರ್ ದಹನಕಾರಿ ಎಂಜಿನ್ ಗಳ ವಿಚಾರವಾಗಿ ಈ ಕಾರ್ಯಾಗಾರವು ನಡೆಯಿತು..
- ಐಎಂಯು ಪರೀಕ್ಷೆಯ ಆಟೋಮೇಷನ್ ಪೂರ್ಣಗೊಳಿಸುವ ಹಂತದಲ್ಲಿ ಇದ್ದು, ಉತ್ತರ ಪ್ರತಿಗಳ ಪರದೆ ಮೇಲಿನ ಮೌಲ್ಯಮಾಪನದ ವ್ಯವಸ್ಥೆಯನ್ನು ಹೊಂದಿದಂತಹ ಪ್ರಕ್ರಿಯೆಯನ್ನು ಪರಿಚಯಿಸುವ ಪ್ರಯತ್ನವನ್ನು ನಡೆಸಿದೆ.
4.8 ಲೈಟ್ ಹೌಸ್ ಮತ್ತು ಲೈಟ್ ಶಿಪ್ ಗಳ ಜಾರಿ ನಿರ್ದೇಶಾನಲಾಯ:
- ಡಿಜಿ ಎಲ್ ಎಲ್ 2018 ಜುಲೈ 23ರಿಂದ 2018ರ ಆಗಸ್ಟ್ 17ರವರೆಗೆ ಸಾಗರಯಾನ ನಿರ್ವಹಣಾ ಕೋರ್ಸ್ ನ ಲೆವೆಲ್-1ಕ್ಕೆ ನೆರವನ್ನು ಕಲ್ಪಿಸುವಂತಹದ್ದನ್ನು ಆಯೋಜಿಸಿದೆ. ಕೋಲ್ಕತ್ತಾ ಎನ್ ಟಿಐ ನಲ್ಲಿ ಇದನ್ನು ಆಯೋಜಿಸಲಾಗಿದೆ. ಭಾರತ ಮತ್ತು ಇತರೆ ದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು. ಸೂಡಾನ್, ಥೈಲ್ಯಾಂಡ್, ಶ್ರೀಲಂಕಾ, ಮಲೇಷ್ಯಾ, ಸೊಮಾಲಿಯಾ, ಸಿಂಗಾಪೂರ್, ಬಾಂಗ್ಲಾದೇಶ, ಚೈನಾ, ಮಾಯನ್ಮಾರ್, ಇಂಡೋನೇಷ್ಯಾ ಮತ್ತು ಫಿಜಿ ದೇಶಗಳು ಇದರಲ್ಲಿ ಭಾಗಿಯಾಗಿದ್ದವು.
- ಡಿಜಿಪಿಎಸ್ (ವೈವಿಧ್ಯಮಯವಾದ ಜಿಪಿಎಸ್) ವ್ಯವಸ್ಥೆಯು ಜಿಪಿಎಸ್ ಸಿಗ್ನಲ್ ಗಳಿಗೆ ಸ್ಥಾನಿಕ ತಿದ್ದುಪಡಿಗಳನ್ನು ಒದಗಿಸುವಂತಹ ಕಾರ್ಯವನ್ನು ಮಾಡುತ್ತವೆ. ಡಿಜಿಪಿಎಸ್ ಗಳನ್ನು ಅಳವಡಿಸಲು, ಸ್ಯೂಡೋರೇಂಜ್ ತಪ್ಪುಗಳನ್ನು ಸರಿಮಾಡುವಂತಹ ಅಥವಾ ತಗೆದು ಹಾಕುವಂತಹ ವ್ಯವಸ್ಥೆಯನ್ನು ಈ ಜಿಪಿಎಸ್ ಗಳು ಹೊಂದಿವೆ. ಪರಿವರ್ತಿಸಿ ಮತ್ತೆ ಬಳಸುವಂತಹ ಅಂದರೆ ಮರು ಪರಿಶೀಲನೆ ಮಾಡುವಂತಹ ( ಸಲಕರಣೆಗಳ ಮರು ಜೋಡಣೆ)ಯನ್ನು ವಿವಿಧ ಜಾಗತಿಕ ಪೊಸಿಷನಿಂಗ್ ವ್ಯವಸ್ಥೆಯ (ಡಿಜಿಪಿಎಸ್) ಹಂತ-1ರ ಮೂಲಕ 13 ಡಿಜಿಪಿಎಸ್ ಕೇಂದ್ರಗಳನ್ನು ಈಗಾಗಲೇ ಮೇಲ್ದರ್ಜೆಗೆ ಏರಿಸಲಾಗಿದೆ. ವಿವಿಧ ಜಾಗತಿಕ ಸಾಗರಯಾನ ಉಪಗ್ರಹ ವ್ಯವಸ್ಥೆ(ಡಿಜಿಎನ್ ಎಸ್ ಎಸ್)ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.ಭಾರತೀಯ ಸಮೂಹ ದ್ವೀಪಗಳ ಸಾಗರಯಾನಕ್ಕೆ ಪ್ರತಿಕ್ರಿಯಿಸುವಂತಹ ಸುಧಾರಿತ ವ್ಯವಸ್ಥೆಯ ಸಾಮರ್ಥ್ಯವನ್ನು (ಎನ್ ಎವಿ ಐಸಿ))/ಭಾರತೀಯ ಪ್ರಾದೇಶಿಕ ಸಾಗರಯಾನ ಉಪಗ್ರಹ ವ್ಯವಸ್ಥೆ(ಐಆರ್ ಎನ್ ಎಸ್ ಎಸ್)ಸಿಗ್ನಲ್ ಗೆ ಸ್ಪಂದಿಸುವಂತೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ..
5. ಅಂತಾರಾಷ್ಟ್ರೀಯ ಸಹಕಾರ:
ಬಾಂಗ್ಲಾದೇಶ:
ಭಾರತ-ಬಾಂಗ್ಲಾ ಶಿಷ್ಟಾಚಾರ ಮಾರ್ಗದ ಅಶುಗಂಜ್-ಝಾಕಿಗಂಜ್ ಮತ್ತು ಸಿರಾಜ್ ಗಂಜ್-ಡೈಕ್ ಹವಾ ಭಾಗಗಳ ನೌಕಾ ಮಾರ್ಗವನ್ನು ಅಭಿವೃದ್ಧಿ ಪಡಿಸುವಂತಹ ಕಾರ್ಯ ಸಂಬಂಧ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿಯನ್ನು ಮಾಡಲಾಗಿರುತ್ತದೆ. ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ಬಾಂಗ್ಲಾ ದೇಶ ಒಳ ಜಲ ಸಾರಿಗೆ ಪ್ರಾಧಿಕಾರ(ಬಿಐಡಬ್ಲ್ಯು ಟಿಎ)ಯು 80:20ರ ಪಾಲಿನಲ್ಲಿ ಕೈಗೆತ್ತಿಕೊಳ್ಳಲು ಕಾರ್ಯಾದೇಶವನ್ನು ನೀಡಲಾಗಿದೆ. ಈ ಮಾರ್ಗಗಳು ಮತ್ತು ಅದರ ಕಾಮಗಾರಿಯು ಶೀಘ್ರದಲ್ಲೇ ಆರಂಭವಾಗಲಿದೆ..
ಹಡಗು ಇಲಾಖೆಯ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಮತ್ತು ಒಳ ಜಲ ಮಾರ್ಗಗಳ ಸಂಚಾರ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯ 19ನೇ ಸಭೆಯನ್ನು ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ 2018ರ ಅಕ್ಟೋಬರ್ 24 ಮತ್ತು 25ರಂದು ನವದೆಹಲಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಶಿಷ್ಠಾಚಾರ ಮಾರ್ಗಗಳನ್ನು ವಿಸ್ತರಣೆ ಮಾಡಲು ಎರಡೂ ಕಡೆಯವರು ಒಪ್ಪಿಗೆಯನ್ನು ಸೂಚಿಸಿದರು. ಅಲ್ಲದೇ ಎರಡು ಹೊಸ ಬಂದರುಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲೂ ತೀರ್ಮಾನವನ್ನು ಮಾಡಲಾಯಿತು. ವಿಶೇಷವಾಗಿ, ರೂಪ್ ನಾರಾಯಣ್ ನದಿ(ರಾಷ್ಟ್ರೀಯ ಜಲಮಾರ್ಗ-86) ಪ್ರದೇಶವನ್ನು ಇದು ಹೊಂದಿದೆ. ಶಿಷ್ಟಾಚಾರ ಮಾರ್ಗದಲ್ಲೇ ಇದೂ ಕೂಡ ಬಂದಿದೆ. ಪಶ್ಚಿಮ ಬಂಗಾಳದ ಕೋಲಘಾಟ್ ಮತ್ತು ಬಾಂಗ್ಲಾದೇಶದ ಚಿಲ್ಮಾರಿ ಹೊಸ ಬಂದರುಗಳನ್ನು ಘೋಷಣೆ ಮಾಡಲಾಗಿದೆ. ಅಲ್ಲದೇ ಬಾರಕ್ ನದಿ ಮೇಲಿನ ಬದ್ರಾಪುರ್ ಅನ್ನು (ಎನ್ ಡಬ್ಲ್ಯು-16) ಅಸ್ಸಾಂನ ಕರಿಂಗಂಜ್ ಬಂದರು ಎಂದು ಗುರುತಿಸಲಾಗಿದೆ. ಪರಸ್ಪರ ಅನುಷ್ಠಾನದ ರೂಪದಲ್ಲಿ ಬಾಂಗ್ಲಾದೇಶದ ಅಶುಗಂಜ್ ನ ಘೋರ್ಸಾಲ್ ಅನ್ನು ಘೋಷಣೆ ಮಾಡಲಾಗುತ್ತಿದೆ. ಸದ್ಯ ಶಿಷ್ಟಾಚಾರದ ಜಲ ಸಾರಿಗೆ ಮಾರ್ಗದಲ್ಲಿ 3.5 ಮಿಲಿಯನ್ ಮೆಟ್ರಿಕ್ ಟನ್ ಸರಕನ್ನು ಸಾಗಣೆ ಮಾಡಲಾಗುತ್ತಿದೆ. ಇದನ್ನು ಗಣನೀಯವಾಗಿ ಹೆಚ್ಚಳ ಮಾಡುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹೆಚ್ಚುವರಿ ಬಂದರುಗಳ ಸಾಮಾನ್ಯ ಘೋಷಣೆಯ ಮೂಲಕ ಬಂದರು ಮತ್ತು ಶಿಷ್ಟಾಚಾರ ಮಾರ್ಗಗಳನ್ನು ವಿಸ್ತರಣೆ ಮಾಡುವಂತಹ ಕೆಲಸವನ್ನು ಮಾಡಲಾಗಿದೆ.
ಅರ್ಚಿಹಾವರೆಗೆ ಇರುವಂತಹ ಧುಲಿಯಾನ್-ರಾಜಶಾನಿ ಶಿಷ್ಟಾಚಾರ ಮಾರ್ಗದ ಕಾರ್ಯಾಚರಣೆಯ ಅವಕಾಶಗಳನ್ನು ತಾಂತ್ರಿಕವಾಗಿ ಸಾಧ್ಯವಾಗಿಸುವಂತಹ ಜಂಟಿ ತಾಂತ್ರಿಕ ಸಮಿತಿಯ ವಿವರಣಾತ್ಮಕ ಕಾರ್ಯವನ್ನು ಭಾರತ ಮತ್ತು ಬಾಂಗ್ಲಾದೇಶಗಳು ಒ್ಪಪಿ ಕೊಂಡಿರುತ್ತವೆ. ಭಾಗಿರತಿ ನದಿಯ ಮೇಲಿರುವಂತಹ ಜಾಂಗೈಪುರ್ ಸಾಗರಯಾನ ಲಾಕ್ ಅನ್ನು ಪುನರ್ ನಿರ್ಮಾಣ ಮಾಡುವಂತಹ ಮತ್ತು ಆರಂಭಮಾಡುವಂತಹ ವಿಚಾರವನ್ನು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಆದಂತಹ ಒಪ್ಪಂದದಲ್ಲಿ ಒಳಗೊಳಿಸಿಕೊಳ್ಳಲಾಗಿದೆ. ಗಂಗಾ ನೀರನ್ನು ಫರಕ್ಕಾದಲ್ಲಿ ಹಂಚಿಕೊಳ್ಳುವಂತಹ 1996ರ ಒಪ್ಪಂದವು ಇದಾಗಿದೆ. ಈ ಹೆಜ್ಜೆಯು ಅಸ್ಸಾಂ ನಡುವಿನ ದೂರವನ್ನು ಸುಮಾರು 450 ಕಿಲೋ ಮೀಟರ್ ದೂರಗಳಷ್ಟು ಕಡಿಮೆ ಮಾಡಲಿದೆ. ಇದು ಶಿಷ್ಟಾಚಾರ ಮಾರ್ಗದ ಮೂಲಕ ಸಾಧ್ಯವಾಗಲಿದೆ.
ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವಂತಹ ಮತ್ತು ಬಾಂಗ್ಲಾದೇಶ ರಫ್ತು ಕಾರ್ಗೋ ಡೆಲಿವೆರಿಯನ್ನು ಸಾಧ್ಯವಾಗಿಸಲಿದೆ. ಭಾರತದ ಕಡೆಯ ಪ್ರತಿನಿಧಿಗಳು ಮೂರನೇ ದೇಶಕ್ಕೆ ಅನುಮತಿಯನ್ನು ನೀಡುವಂತಹ ಇಎಕ್ಸ್ ಐಎಂ ವ್ಯಾಪಾರವನ್ನು ಕರವಾಳಿ ನೌಕಾಯಾನಯ ಒಪ್ಪಂದದ ಮೂಲಕ ಇದನ್ನು ಸಾಧ್ಯವಾಗಿಸಲಾಗುತ್ತಿದೆ. ಪಿಐಡಬ್ಲ್ಯುಟಿಟಿವನ್ನು ಬಂದರುಗಳ ಮೂಲಕ ಪೂರ್ವ ಕರಾವಳಿಯ ಮೂಲಕ ಸಾರಿಗೆಯನ್ನು ಸಾಧ್ಯವಾಗಿಸುವಂತಹ ಪ್ರಯತ್ನವನ್ನು ನಡೆಸಲು ಪ್ರಸ್ತಾಪಿಸಲಾಯಿತು. ಈ ವೇಳೆ ಬಾಂಗ್ಲಾ ದೇಶವು ಈ ವಿಚಾರದಲ್ಲಿ ಪಾಲುದಾರರ ಸಮಾಲೋಚನೆಗಳನ್ನು ಮತ್ತು ವಿಚಾರದ ಮೇಲೆ ಹಿಂತಿರುಗುವ ನಿರ್ಧಾರಕ್ಕೆ ಬರಲಾಯಿತು.
ಈ ಕೆಳಗಿನ ಒಪ್ಪಂದಗಳು/ ಗುಣ ಮಟ್ಟದ ಕಾರ್ಯಾಚರಣಾ ಪ್ರಕ್ರಿಯೆ(ಎಸ್ ಓಪಿ)ಗಳಿಗೆ ಎರಡೂ ದೇಶಗಳು 2018ರ ಅಕ್ಟೋಬರ್ 25ರಂದು ಸಹಿಯನ್ನು ಮಾಡಿದವು:-
- ಕೋಲ್ಕತ್ತಾ ಮತ್ತು ಹಾಲ್ಡಿಯಾ ಬಂದರುಗಳ ಮೂಲಕ ಈಶಾನ್ಯ ಭಾರತಕ್ಕೆ ಸಂಪರ್ಕವನ್ನು ಕಲ್ಪಿಸುವಂತಹ ಕಾರ್ಯವು ಆಗುತ್ತಿದೆ. ಎಕ್ಸಿಮ್ ಕಾರ್ಗೋಗಳ ಸಂಚಾರವನ್ನು ಮತ್ತು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವುದು, ಛತ್ತೋಗ್ರಾಮ್ ಮತ್ತು ಮೊಂಗಲಾ ಬಂದರುಗಳನ್ನು ಭಾರತ ಮತ್ತು ಬಾಂಗ್ಲಾದೇಶ ಪ್ರಜಾ ಪ್ರಭುತ್ವ ರಾಷ್ಟ್ರಕ್ಕೆ ಮತ್ತು ರಿಪಬ್ಲಿಕ್ ಆಂಪ್ ಇಂಡಿಯಾ ಮೂಲಕ ಸರಕು ಸಾಗಣೆ ಮಾಡುವ ಉದ್ದೇಶಕ್ಕೆ ಬಳಸಲು ಒಪ್ಪಂದವನ್ನು ಮಾಡಿಕೊಳ್ಳಲಾಯಿತು..
- ಭಾರತ-ಬಾಂಗ್ಲಾದೇಶದ ಶಿಷ್ಟಾಚಾರದ ಮಾರ್ಗದಲ್ಲಿ ಎರಡೂ ದೇಶದ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಕಲ್ಪಿಸಲು ಸಂಪರ್ಕವನ್ನು ಕಲ್ಪಿಸಲಾಗಿದೆ. ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ಪ್ರಯಾಣಿಕರು ಮತ್ತು ಸರಕು ಸೇವೆಯನ್ನು ಕರಾವಳಿ ಮತ್ತು ಶಿಷ್ಟಾಚಾರ ಜಲ ಮಾರ್ಗದ ಮೂಲಕ ಸಾಧಿಸುವ ಗುಣಮಟ್ಟದ ಕಾರ್ಯಾಚರಣಾ ಪ್ರಕ್ರಿಯೆ(ಎಸ್ ಓಪಿ)ಯ ತಿಳಿವಳಿಕೆ ಪತ್ರಕ್ಕೆ ಭಾರತ ಮತ್ತು ಬಾಂಗ್ಲಾ ದೇಶಗಳು ಸಹಿ ಹಾಕಿವೆ.
- ಬಾಂಗ್ಲಾದೇಶಕ್ಕೆ ಪಾಂಗಾವ್ ಮತ್ತು ಅಸ್ಸಾಂಗೆ ಧುಬ್ರಿಗೆ ಎರಡು ಹೊಸ ಬಂದರುಗಳನ್ನು ಆರಂಭಿಸಲು ನಿರ್ಧಾರ ಆಗಿದೆ. ಒಳಜಲ ಸಾರಿಗೆ ಸಂಚಾರ ಮತ್ತು ವ್ಯಾಪಾರ(ಪಿಐಡಬ್ಲ್ಯುಟಿಟಿ) ಶಿಷ್ಟಾಚಾರವನ್ನು ಸೇರಿಸುವ ಪ್ರಯತ್ನಗಳು ಆಗಿವೆ..
ನೇಪಾಳ:
ಎರಡೂ ದೇಶಗಳ ನಡುವೆ ಒಳ ಜಲ ಸಾರಿಗೆಯನ್ನು ಸಂಪರ್ಕಿಸುವಂತಹ ನಿಟ್ಟಿನಲ್ಲಿ 2018ರ ಏಪ್ರಿಲ್ ನಲ್ಲಿ ಭಾರತ ಮತ್ತು ಬಾಂಗ್ಲಾ ದೇಶದ ಸನ್ಮಾನ್ಯ ಪ್ರಧಾನಮಂತ್ರಿಗಳು ನಿರ್ಧಾರವನ್ನು ಮಾಡಿದರು. ಎರಡೂ ದೇಶಗಳಿಗೆ ತಾಂತ್ರಿಕ ಸೌಕರ್ಯಗಳನ್ನು ಕಾರ್ಯಸಾಧ್ಯವಾಗಿಸುವಂತಹ ತಾಂತ್ರಿಕ ವ್ಯಾಪ್ತಿಯ ಮಿಷನ್ ತಂಡವು ಭೇಟಿ ನೀಡಿತು. ಎರಡೂ ಕಡೆಯವರು ಅನುಕೂಲಗಳನ್ನು ಮತ್ತು ಸೌಕರ್ಯಗಳನ್ನು ನೀಡುವಂತಹ ಅಧ್ಯಯನದ ತಂಡವು ಭೇಟಿ ನೀಡಿದವು. 2018ರ ಸೆಪ್ಟೆಂಬರ್ ಮತ್ತು ಮೇನಲ್ಲಿ ಕಠ್ಮಂಡು ಮತ್ತು ಕೋಲ್ಕತ್ತಾದಲ್ಲಿ ಈ ಸಂಬಂಧ ಸಭೆಗಳೂ ನಡೆದಿವೆ. ಅದೇ ರೀತಿ, ನೇಪಾಳದ ಐಡಬ್ಲ್ಯುಟಿ ವಲಯದ ತರಭೇತಿ ಮತ್ತು ಅಭೀವೃದ್ಧಿ ಅಗತ್ಯಗಳನ್ನು ಈಡೇರಿಸುವ, ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ, ಸಾಹಿಬ್ ಗಂಜ್ (ಜಾರ್ಖಂಡ್) ಮತ್ತು ಕಲೌಘಾಟ್ (ಪಾಟ್ನಾ)ನಿಂದ ನೇಪಾಳ ಮತ್ತು ನೇಪಾಳದಿಂದ ಕೋಲ್ಕತ್ತಾವರೆಗೂ ಎಲ್ಲವನ್ನೂ ಚರ್ಚೆ ಮಾಡಲಾಯಿತು.
ತಿಳಿವಳಿಕೆಯ ಪತ್ರ:
- ಸಮುದ್ರ ಪಯಣಿಗರ ಮಾನ್ಯತಾ ಪತ್ರವನ್ನು ಪಡೆಯುವ ನಿಟ್ಟಿನಲ್ಲಿ ಕೊರಿಯಾ ರಿಪಬ್ಲಿಕ್ ದೇಶದ ಜತೆ ಪರಸ್ಪರ ಗುರುತಿಸುವಿಕೆಯ ಪ್ರಮಾಣಪತ್ರದ ತಿಳಿವಳಿಕೆ ಪತ್ರಕ್ಕೆ ಸಹಿಯನ್ನು ಮಾಡಿಕೊಳ್ಳಲಾಯಿತು. ಇದು ಕೊರಿಯನ್ ಹಡಗುಗಳಲ್ಲಿ ಭಾರತದ ಹಡಗು ನಡೆಸುವ 1.5 ಲಕ್ಷ ಮಂದಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ.
- ಸಂಶೋಧನಾ ಕ್ಷೇತ್ರ ಮತ್ತು ಐಎಂಒಗೆ ಸಂಬಂಧಿಸಿದಂತೆ ಅನ್ವೇಷಣೆಯನ್ನು ನಡೆಸಲು ಮಾಲ್ಟಾ ಸಾಗರಯಾನ ಸಂಸ್ಥೆಯೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿಯನ್ನು ಮಾಡಿಕೊಳ್ಳಲಾಗಿದೆ.
(Release ID: 1558036)
Visitor Counter : 504