ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
2018 ವರ್ಷಾಂತ್ಯದ ಪರಾಮರ್ಶೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
Posted On:
14 DEC 2018 2:20PM by PIB Bengaluru
2018 ವರ್ಷಾಂತ್ಯದ ಪರಾಮರ್ಶೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ
ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ 2018ರ ಅವಧಿಯಲ್ಲಿನ ಚಟುವಟಿಕೆಗಳ ಪ್ರಮುಖ ಮುಖ್ಯಾಂಶಗಳು ಕೆಳಕಂಡಂತಿವೆ:
1. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013 (ಎನ್.ಎಫ್.ಎಸ್.ಎ)ರ ಅನುಷ್ಠಾನ
i. ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್.ಎಫ್.ಎಸ್.ಎ.2013ರನ್ನು ಸಾರ್ವತ್ರಿಕವಾಗಿ ಅನುಷ್ಠಾನಗೊಳಿಸಲು ನಡೆಸಿದ ಸತತ ಪ್ರಯತ್ನದ ಫಲವಾಗಿ ದೇಶದ 80.72 ಕೋಟಿ ಜನರಿಗೆ ಪ್ರಯೋಜನವಾಗಿದ್ದು, ಅವರಿಗೆ ಒರಟು ಧಾನ್ಯಗಳು / ಗೋಧಿ / ಅಕ್ಕಿ ಅನುಕ್ರಮವಾಗಿ ಪ್ರತಿ ಕೆ.ಜಿ.ಗೆ 1/2/3ರೂ.ನಂತೆ ಅತ್ಯಂತ ಹೆಚ್ಚು ಸಬ್ಸಿಡಿ ದರದಲ್ಲಿ ದೊರಕುತ್ತಿದೆ.
ii. ಎನ್.ಎಫ್.ಎಸ್.ಎ. ಅಡಿಯಲ್ಲಿ ಸೂಚಿತವಾಗಿರುವ ಆಹಾರ ಧಾನ್ಯಗಳ ದರ – ಪ್ರತಿ ಕೆಜಿ ಅಕ್ಕಿಗೆ – 3 ರೂಪಾಯಿ, ಪ್ರತಿ ಕೆ.ಜಿ. ಗೋಧಿಗೆ – 2 ರೂಪಾಯಿ ಮತ್ತು ಒರಟು ಧಾನ್ಯಗಳಿಗೆ ಪ್ರತಿ ಕೆ.ಜಿ.ಗೆ 1 ರೂ. ಆಗಿದ್ದು, ಆರಂಭದಲ್ಲಿ ಎನ್.ಎಫ್.ಎಸ್.ಎ. ಜಾರಿಗೆ ಬಂದ ದಿನದಿಂದ ಮೂರು ವರ್ಷಗಳವರೆಗೆ ಚಾಲ್ತಿಯಲ್ಲಿತ್ತು. ಈ ದರಗಳನ್ನು ಕಾಲದಿಂದ ಕಾಲಕ್ಕೆ 2018ರರ ಜೂನ್ ವರೆಗೆ ವಿಸ್ತರಿಸಲಾಯಿತು. ಈಗ ಇದನ್ನು ಮತ್ತೆ 2019ರ ಜೂನ್ ವರೆಗೆ ವಿಸ್ತರಿಸಲಾಗಿದೆ.
iii. 2018-19 ಆರ್ಥಿಕ ವರ್ಷದಲ್ಲಿ (05.12.2018ರವರೆಗೆ), ಅಂತಾ ರಾಜ್ಯಗಳ ನಡುವಿನ ಸಾಗಾಟ, ಆಹಾರ ಧಾನ್ಯ ನಿರ್ವಹಣೆ ಮತ್ತು ನ್ಯಾಯ ಬೆಲೆ ಅಂಗಡಿ ವಿತರಕರ ಲಾಭಾಂಶ ವೆಚ್ಚ ಭರಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರದ ನೆರವು 2575 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
iv. ಎನ್.ಎಫ್.ಎಸ್.ಎ. ಅಡಿಯಲ್ಲಿ ಇದೇ ಮೊದಲ ಬಾರಿಗೆ ಇಂಥ ಒಂದು ವ್ಯವಸ್ಥೆ ಮಾಡಲಾಗಿದೆ. ಹಿಂದಿನ ಟಿಪಿಡಿಎಸ್ ವ್ಯವಸ್ಥೆಯಡಿ, ರಾಜ್ಯ ಸರ್ಕಾರಗಳು ಈ ವೆಚ್ಚವನ್ನು ತಾವೇ ಭರಿಸಬೇಕಾಗಿತ್ತು ಅಥವಾ (ಎ.ಎ.ವೈ. ಫಲಾನುಭವಿಗಳನ್ನು ಹೊರತುಪಡಿಸಿ) ಫಲಾನುಭವಿಗಳಿಗೆ ವರ್ಗಾಯಿಸಬೇಕಾಗಿತ್ತು.
2. ಟಿಪಿಡಿಎಸ್ ಕಾರ್ಯಾಚರಣೆಯಲ್ಲಿ ಈ ತುದಿಯಿಂದ ಆ ತುದಿಯವರೆಗೆ ಕಂಪ್ಯೂಟರೀಕರಣ
i. ಪಡಿತರ ಚೀಟಿ / ಫಲಾನುಭವಿಯ ದಾಖಲೆಗಳ ಡಿಜಿಟಲೀಕರಣ, ಆಧಾರ್ ಜೋಡಣೆಯಿಂದ ನಕಲು ಪತ್ತೆ ಫಲಶ್ರುತಿಯಿಂದಾಗಿ,ವರ್ಗಾವಣೆ / ವಲಸೆ / ಮರಣ, ಫಲಾನುಭವಿಗಳ ಆರ್ಥಿಕ ಸ್ಥಿತಿಯಲ್ಲಿನ ಬದಲಾವಣೆ ಮತ್ತು ಎನ್ಎಫ್ಎಸ್ಎ ಅನುಷ್ಠಾನ ಮತ್ತು ಅದರ ಪ್ರಕ್ರಿಯೆ ಸಮಯದಲ್ಲಿ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು, 2013 ರಿಂದ 2017 ರವರೆಗೆ (ನವೆಂಬರ್ 2017 ರವರೆಗೆ) ಒಟ್ಟು 2.75 ಕೋಟಿ ಪಡಿತರ ಚೀಟಿಗಳನ್ನು ಕೈಬಿಟ್ಟಿವೆ / ರದ್ದುಗೊಳಿಸಿವೆ. ಇದರ ಆಧಾರದ ಮೇಲೆ ಸರಕಾರಕ್ಕೆ ಸುಮಾರು ವಾರ್ಷಿಕ ಅಂದಾಜು 17,500 ಕೋಟಿ ರೂ. ಮೌಲ್ಯದ 'ನ್ಯಾಯ ಸಮ್ಮತ ಆಹಾರ ಸಹಾಯಧನ ಗುರಿ' ಉಳಿತಾಯ ಸಾಧಿಸಲು ಸಾಧ್ಯವಾಗಿದೆ.
ii. ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಯ ಆಧುನೀಕರಣ ಮತ್ತು ಪಾರದರ್ಶಕತೆ ತರಲು ಇಲಾಖೆ, ಟಿಪಿಡಿಎಸ್ ಕಾರ್ಯಾಚರಣೆಗಳ ಈ ತುದಿಯಿಂದ ಆ ತುದಿವರೆಗಿನ ಗಣಕೀಕರಣವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೆ ಆಧಾರದ ಮೇಲೆ 884 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಪಡಿತರ ಚೀಟಿಗಳ ಮತ್ತು ಫಲಾನುಭವಿಗಳ ದಾಖಲೆಗಳ ಡಿಜಿಟಲೀಕರಣ, ವಿತರಣಾ ಸರಪಳಿಯ ನಿರ್ವಹಣೆಯ ಕಂಪ್ಯೂಟರೀಕರಣ, ಪಾರದರ್ಶಕತೆ ಪೋರ್ಟಲ್ ಗಳ ನಿರ್ಮಾಣ ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆ ರೂಪಿಸಲು ಅವಕಾಶ ನೀಡುತ್ತದೆ.
iii. ಈ ಯೋಜನೆ ಅಡಿಯಲ್ಲಿನ ಪ್ರಮುಖ ಸಾಧನೆಗಳು ಈ ಕೆಳಕಂಡಂತಿವೆ:-
ಕ್ರ.ಸಂ.
|
ಚಟುವಟಿಕೆಯ ರೂಪುರೇಷೆ
|
ಸಾಧನೆ
|
1
|
ಪಡಿತರ ಚೀಟಿಗಳ/ಫಲಾನುಭವಿಗಳ ದತ್ತಾಂಶದ ಡಿಜಿಟಲೀಕರಣ
|
ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದೆ.
|
2
|
ಆಹಾರ ಧಾನ್ಯಗಳ ಆನ್ ಲೈನ್ ಹಂಚಿಕೆ
|
ಡಿಬಿಟಿ/ನಗದು ವರ್ಗಾವಣೆ ಯೋಜನೆ ಅಳವಡಿಸಿಕೊಂಡಿರುವ ಚಂಡೀಗರ್ ಮತ್ತು ಪುದುಚೇರಿ ಕೇಂದ್ರಾಂಡಳಿತ ಪ್ರದೇಶ ಹೊರತು ಪಡಿಸಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದೆ.
|
3
|
ವಿತರಣಾ ವ್ಯವಸ್ಥೆ ಸರಣಿಯ ಕಂಪ್ಯೂಟರೀಕರಣ
|
25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದ್ದು, ಇಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯ ಪ್ರಗತಿಯಲ್ಲಿದೆ.
|
4
|
ಪಾರದರ್ಶಕತೆ ಪೋರ್ಟಲ್ ಗಳು
|
ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.
|
5
|
ಕುಂದುಕೊರತೆ ನಿವಾರಣೆ ಸೌಲಭ್ಯ
|
ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಚಿತ ಕರೆ ಸಹಾಯವಾಣಿ/ಆನ್ ಲೈನ್ ನೋಂದಣಿ ವ್ಯವಸ್ಥೆ ಲಭ್ಯವಿದೆ.
|
iv. ನಕಲು / ಅನರ್ಹವಾದ ಫಲಾನುಭವಿಗಳನ್ನು ಗುರುತಿಸಿ ಮತ್ತು ತೆಗೆದುಹಾಕುವ ಮತ್ತು ನ್ಯಾಯೋಚಿತ ಆಹಾರ ಸಹಾಯಧನ ಸಕ್ರಿಯಗೊಳಿಸುವ, ಫಲಾನುಭವಿಗಳ ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡುತ್ತಿವೆ. ಪ್ರಸ್ತುತ, ಎಲ್ಲಾ ಪಡಿತರ ಚೀಟಿಗಳಲ್ಲಿ ಶೇ. 85.61 ರಷ್ಟು ಜೋಡಣೆಯಾಗಿದೆ.
v. ಯೋಜನೆಯ ಭಾಗವಾಗಿ, ಆಹಾರ ಧಾನ್ಯ ವಿತರಣೆಯ ದೃಢೀಕರಣ ಮತ್ತು ವಹಿವಾಟಿನ ವಿದ್ಯುನ್ಮಾನ ದಸ್ತಾವೇಜು ಕಾಪಿಡಲು ವಿದ್ಯುನ್ಮಾನ ಪಾಯಿಂಟ್ ಆಫ್ ಸೇಲ್ (ಇಪಿಓಎಸ್) ಸಾಧನಗಳನ್ನು ನ್ಯಾಯಬೆಲೆ ಅಂಗಡಿ (ಎಫ್.ಪಿ.ಎಸ್.ಗಳಲ್ಲಿ) ಅಳವಡಿಸಲಾಗಿದೆ. ಈ ದಿನಾಂಕದವರೆಗೆ 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 5.34 ಲಕ್ಷ ಎಫ್.ಪಿ.ಎಸ್.ಗಳ ಪೈಕಿ 3.61 ಲಕ್ಷ ಎಫ್.ಪಿಎಸ್.ಗಳಲ್ಲಿ ಇ.ಪಿ.ಓ. ಸಾಧನ ಅಳವಡಿಸಲಾಗಿದೆ.
vi. ಪಡಿತರ ಚೀಟಿಗಳ ಅಂತರ ರಾಜ್ಯ ವರ್ಗಾವಣೆ: ರಾಜ್ಯದಲ್ಲಿನ ಯಾವುದೇ ನ್ಯಾಯ ಬೆಲೆ ಅಂಗಡಿಗಳಿಂದ ತಮ್ಮ ಅರ್ಹ ಆಹಾರ ಧಾನ್ಯಗಳನ್ನು ಪಡೆಯಲು ಪಿಡಿಎಸ್ ಫಲಾನುಭವಿಗಳಿಗೆ ಅನುವು ಮಾಡಿಕೊಡುವ ಸೌಲಭ್ಯವನ್ನು ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ,ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತ್ರಿಪುರ, ಕೇರಳದಲ್ಲಿ ಸಂಪೂರ್ಣವಾಗಿ ಮತ್ತು ಮಧ್ಯಪ್ರದೇಶದ ಭಾಗಶಃ ಪ್ರಾರಂಭಿಸಲಾಗಿದೆ.
vii. ‘ಪಿಡಿಎಸ್ ನ ಸಮಗ್ರ ನಿರ್ವಹಣೆ’ (ಐಎಂ-ಪಿಡಿಎಸ್): ರಾಷ್ಟ್ರೀಯ ಮಟ್ಟದ ವರ್ಗಾವಣೆ, ಕೇಂದ್ರೀಯ ದತ್ತಾಂಶ ಕೋಶ ಮತ್ತು ಪಿಡಿಎಸ್ ಕಾರ್ಯಾಚರಣೆಗಳ ಕೇಂದ್ರೀಯ ನಿಗಾ ವ್ಯವಸ್ಥೆಯನ್ನು ಜಾರಿಗೆ ತರಲು ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾಲ (ಪಿಡಿಎಸ್ಎನ್) ಸ್ಥಾಪನೆಗಾಗಿ2018-19 ಮತ್ತು 2019-20ರ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಲು ಒಂದು ಹೊಸ ಕೇಂದ್ರೀಯ ವಲಯದ ಯೋಜನೆಗೆ ಅನುಮೋದನೆ ನೀಡಲಾಗಿದೆ.
viii. ಇಪಿಓಎಸ್ ಗಳ ವಹಿವಾಟಿನ ಪೋರ್ಟಲ್: ಇಪಿಓಎಸ್ ಸಾಧನಗಳ ಮೂಲಕ ಫಲಾನುಭವಿಗಳಿಗೆ ವಿತರಿಸಲಾದ ಸಬ್ಸಿಡಿ ಸಹಿತ ಆಹಾರಧಾನ್ಯದ ವಿದ್ಯುನ್ಮಾನ ವಹಿವಾಟಿನ ಪ್ರದರ್ಶನ ಮಾಡಲು ಅನ್ನ ವಿತರಣ್ ಪೋರ್ಟಲ್ (www.annavitran.nic.in) ಅನ್ನು ಜಾರಿ ಮಾಡಲಾಗಿದೆ. ಈ ಪೋರ್ಟಲ್ ಜಿಲ್ಲಾ ಮಟ್ಟಕ್ಕೆ ಆಹಾರ ಧಾನ್ಯಗಳ ಹಂಚಿಕೆ ಪ್ರಮಾಣ ಮತ್ತು ವಿತರಣೆಯ ಜೊತೆಗೆ ಆಧಾರ್ ದೃಢೀಕೃತ ಫಲಾನುಭವಿಗಳ ಅಖಿಲ ಭಾರತ ಚಿತ್ರಣವನ್ನೂ ಮುಂದಿಡುತ್ತದೆ.
3. ರೈತರಿಗೆ ಬೆಂಬಲ 2017-18ರ ಸಾಲಿನ ಕೆ.ಎಂ.ಎಸ್. ವೇಳೆ ದಾಖಲೆಯ ಪ್ರಮಾಣದ ಅಂದರೆ 381.84 ಲಕ್ಷ ಮೆಟ್ರಿಕ್ ಟನ್ ಭತ್ತ (ಅಕ್ಕಿ ರೂಪದಲ್ಲಿ) ಉತ್ಪಾದನೆಯಾಗಿದೆ. 2016-17ರ ಕೆ.ಎಂ.ಎಸ್.ನಲ್ಲಿ ಅದು 381.07 ಎಲ್.ಎಂ.ಟಿ.ಯಾಗಿತ್ತು. 2018-19ರ ಆರ್.ಎಂ.ಎಸ್. ಅವಧಿಯಲ್ಲಿ 357.95 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಬೆಳೆಯಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಅತಿ ಹೆಚ್ಚಾಗಿದೆ. 2017-18ರ ಆರ್.ಎಂ.ಎಸ್.ನಲ್ಲಿ ಅದು 308.24 ಎಲ್.ಎಂ.ಟಿ.ಯಾಗಿತ್ತು.
4. ಆಹಾರಧಾನ್ಯ ನಿರ್ವಹಣೆಯ ಸುಧಾರಣೆ
ಎಫ್.ಸಿ.ಐ. ಒಂದು ವರ್ಷದಲ್ಲಿ ದೇಶದಾದ್ಯಂತ 40 ದಶಲಕ್ಷ ಟನ್ ಆಹಾರ ಧಾನ್ಯ ಸಾಗಣೆ ಮಾಡುತ್ತದೆ. ಆಹಾರಧಾನ್ಯ ಸಾಗಣೆಯನ್ನು ರೈಲು, ರಸ್ತೆ ಮತ್ತು ಸಮುದ್ರ, ಕರಾವಳಿ ಮತ್ತು ನದಿ ಮಾರ್ಗದ ವ್ಯವಸ್ಥೆ ಮೂಲಕ ಕೈಗೊಳ್ಳುತ್ತದೆ. 2017-18ರಲ್ಲಿ ಎಫ್.ಸಿ.ಐ. 100ರ ಗುರಿಗೆ ಪ್ರತಿಯಾಗಿ 134 ಕಂಟೈನರ್ ರೇಕ್ಸ್ ಸಾಗಾಟ ಮಾಡಿದ್ದು, ಅಂದಾಜು 662 ಲಕ್ಷ ರೂಪಾಯಿ ಸಾಗಣೆ ಉಳಿತಾಯ ಮಾಡಿದೆ. 2018-19ರ ಅವಧಿಯಲ್ಲಿ (15.10.2018ರವರೆಗೆ) 77 ರೇಕ್ಸ್ ಸಾಗಾಟ ಮಾಡಲಾಗಿತ್ತು, ಇದು ಅಂದಾಜು 352 ಲಕ್ಷ ರೂಪಾಯಿ ಉಳಿತಾಯಕ್ಕೆ ಕಾರಣವಾಗಿತ್ತು.
5. ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಡಬ್ಲ್ಯುಡಿಆರ್.ಎ)
i. ಡಬ್ಲ್ಯುಡಿಆರ್.ಎ.ಯೊಂದಿಗೆ ಗೋದಾಮುಗಳ ನಿಯಂತ್ರಣ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಹೊಸ ನಿಯಮಗಳು ಡಬ್ಲ್ಯುಡಿಆರ್.ಎ.ಯಲ್ಲಿ ನೋಂದಣೆಯಾಗುವ ಗೋದಾಮುಗಳ ಸಂಖ್ಯೆಯ ಹೆಚ್ಚಳವನ್ನು ಉತ್ತೇಜಿಸುತ್ತದೆ. ಇದು ರೈತರಿಗೆ ಬದಲಾವಣೆಗೆ ಅವಕಾಶವಿರುವ (ನೆಗೋಷಿಯಬಲ್) ಗೋದಾಮುಗಳ ರಶೀದಿ (ಎನ್.ಡಬ್ಲ್ಯು.ಆರ್) ವ್ಯವಸ್ಥೆಯ ಮೂಲಕ ರೈತರಿಗೆ ಅಡಮಾನ ಹಣಕಾಸು ಸೌಲಭ್ಯವನ್ನು ಹೆಚ್ಚಿಸುತ್ತದೆ. 31.10.2018 ವರೆಗೆ ಎನ್.ಡಬ್ಲ್ಯು.ಆರ್.ಗಳ ವಿರುದ್ಧ ರೂ.51.45 ಕೋಟಿ ಸಾಲ ಪಡೆಯಲಾಗಿದೆ.
ii. ಗೋದಾಮುಗಳನ್ನು ಆನ್ ಲೈನ್ ನಲ್ಲಿ ನೋಂದಾಯಿಸುವ ಪ್ರಕ್ರಿಯೆಯ ರೂಪಾಂತರಕ್ಕಾಗಿ ಮತ್ತು ಕಾಗದದ ಎನ್.ಡಬ್ಲ್ಯು.ಆರ್. ಬದಲು ಇನ್ನೂ ಹೆಚ್ಚು ವಿಶ್ವಾಸಾರ್ಹ ಹಣಕಾಸು ಸಾಧನವಾದ ಇ-ಎನ್.ಡಬ್ಲ್ಯು.ಆರ್. ನೀಡಲು ವಿದ್ಯುನ್ಮಾನ ನೆಗೋಷಿಯಬಲ್ ಗೋದಾಮು ರಸೀದಿ (ಇಎನ್.ಡಬ್ಲ್ಯು.ಆರ್.) ವ್ಯವಸ್ಥೆ ಮತ್ತು ಡಬ್ಲ್ಯು.ಡಿ.ಆರ್.ಎ. ಪೋರ್ಟಲ್ ಅನ್ನು ಆರಂಭಿಸಲಾಗಿದೆ.
6. ಸಕ್ಕರೆ ವಲಯ
ಹೆಚ್ಚು ಸಕ್ಕರೆ ಉತ್ಪಾದನೆ ಮತ್ತು ಒತ್ತಡಕ್ಕೆ ಸಿಲುಕಿದ ಗಿರಣಿಯ (ಎಕ್ಸ್ -ಮಿಲ್ ಸಕ್ಕರೆಯ ದರದ ಪರಿಣಾಮ, ಸಕ್ಕರೆ ಗಿರಣಿಗಳ ಹಣಕಾಸು ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕಬ್ಬಿನ ದರ ಬಾಕಿಗೆ ಕಾರಣವಾಗಿದೆ, 2018ರ ಮೇ ತಿಂಗಳ ಕೊನೆಯ ವಾರದಲ್ಲಿ ಇದು ಅಪಾಯಕಾರಿ ಮಟ್ಟವಾದ ಸುಮಾರು ರೂ. 23,232 ಕೋಟಿ ತಲುಪಿತ್ತು. ರೈತರಿಗೆ ಕಬ್ಬಿನ ಬಾಕಿ ಚುಕ್ತಾ ಮಾಡಲು ಅವಕಾಶ ಮಾಡಿಕೊಡಲು ಸಕ್ಕರೆ ಗಿರಣಿಗಳ ಹಣಕಾಸು ಸ್ಥಿತಿ ಸುಧಾರಣೆಯ ದೃಷ್ಟಿಯಿಂದ, ಸರ್ಕಾರ ಕಳೆದ ಕೆಲವು ತಿಂಗಳುಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ:-
i. ನಗದು ನಷ್ಟವನ್ನು ತಡೆಗಟ್ಟುವ ಸಲುವಾಗಿ ಮತ್ತು ಸಕ್ಕರೆ ಗಿರಣಿಗಳು ಸಕಾಲದಲ್ಲಿ ರೈತರ ಕಬ್ಬಿನ ಬಾಕಿ ಚುಕ್ತಾ ಮಾಡಲು ಅನುಕೂಲವಾಗುವಂತೆ, ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟದ ಬೆಲೆಯನ್ನು ದೇಶೀಯ ಮಾರುಕಟ್ಟೆಯಲ್ಲಿ ಕಾರ್ಖಾನೆಯ ದ್ವಾರದಲ್ಲಿ ಪ್ರತಿ ಕೆ.ಜಿ.ಗೆ ರೂ .29ಕ್ಕೆ ನಿಗದಿಪಡಿಸಿದೆ, ಇದಕ್ಕಿಂತ ಕಡಿಮೆ ದರದಲ್ಲಿ ಯಾವುದೇ ಸಕ್ಕರೆ ಗಿರಣಿ ಸಕ್ಕರೆ ಮಾರಾಟ ಮಾಡುವಂತಿಲ್ಲ.
ii. 1540 ಕೋಟಿ ರೂಪಾಯಿಯಷ್ಟಾಗುವ ಕಬ್ಬಿನ ದರದ ಮೊತ್ತವನ್ನು ಸರಿದೂಗಿಸಲು 2017-18ರ ಸಕ್ಕರೆ ಋತುವಿನಲ್ಲಿ ಅರೆದ ಪ್ರತಿ ಕ್ವಿಂಟಾಲ್ ಕಬ್ಬಿಗೆ @ ರೂ .5.50ರಂತೆ ಸಕ್ಕರೆ ಗಿರಣಿಗಳಿಗೆ ನೆರವು ನೀಡಲಾಗುತ್ತಿದೆ;
iii. 2017-18ನೇ ಸಕ್ಕರೆ ಋತುವಿನಲ್ಲಿ 30 ಎಲ್.ಎಂ.ಟಿ. ಕಾಪು ದಾಸ್ತಾನು ರೂಪಿಸಲಾಗಿದ್ದು, ಸರ್ಕಾರ ಕಾಪು ದಾಸ್ತಾನು ನಿರ್ವಹಣೆಯ ಸಲುವಾದ ಸಾಗಣೆ ವೆಚ್ಚ 1175 ಕೋಟಿ ರೂ. ಗಳನ್ನು ಮರು ಪಾವತಿಸುತ್ತದೆ;
iv. ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಬಟ್ಟಿಕರಣ ಮತ್ತು ಭಸ್ಮೀಕರಣ ಬಾಯ್ಲರ್ ಗಳ ಸ್ಥಾಪನೆಗಾಗಿ ಗಿರಣಿಗಳಿಗೆ 6139 ಕೋಟಿ ರೂಪಾಯಿ ಮೃದು ಸಾಲವನ್ನು ಬ್ಯಾಂಕ್ ಗಳ ಮೂಲಕ ಒದಗಿಸಲಾಗುತ್ತಿದೆ, ಇದಕ್ಕಾಗಿ ಸರ್ಕಾರ ಬಡ್ಡಿ ರಿಯಾಯಿತಿಗಾಗಿ 1332 ಕೋಟಿ ರೂಪಾಯಿ ಭರಿಸುತ್ತಿದೆ;
v. 4163 ಕೋಟಿ ರೂಪಾಯಿಯಟ್ಟಾಗುವ ಕಬ್ಬಿನ ದರದ ಮೊತ್ತವನ್ನು ಸರಿದೂಗಿಸಲು 2018-19ರ ಸಕ್ಕರೆ ಋತುವಿನಲ್ಲಿ ಅರೆದ ಪ್ರತಿ ಕ್ವಿಂಟಾಲ್ ಕಬ್ಬಿಗೆ @ ರೂ 13.88ರಂತೆ ಸಕ್ಕರೆ ಗಿರಣಿಗಳಿಗೆ ನೆರವು ನೀಡಲಾಗುತ್ತದೆ;
vi. 2018-19ರ ಸಕ್ಕರೆ ಋತುವಿನಲ್ಲಿ ದೇಶದಿಂದ ಸಕ್ಕರೆ ರಫ್ತು ಮಾಡಲು ಅನುಕೂಲವಾಗುವಂತೆ ಆಂತರಿಕ ಸಾರಿಗೆ, ಸರಕು ನಿರ್ವಹಣೆ ಮತ್ತು ಇತರ ಶುಲ್ಕಗಳಿಗೆ ವೆಚ್ಚವಾಗುವ ಸುಮಾರು 1375 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಸರಿದೂಗಿಸಲು ಸಕ್ಕರೆ ಗಿರಣಿಗಳಿಗೆ ನೆರವು ನೀಡಲಾಗುತ್ತದೆ;
vii. ಜೈವಿಕ – ಇಂಧನ ಕುರಿತ ಹೊಸ ರಾಷ್ಟ್ರೀಯ ನೀತಿ 2018ನ್ನು ಸರ್ಕಾರ ಅಧಿಸೂಚಿಸಿದ್ದು, ಇದರಡಿ, ಕಬ್ಬಿನಹಾಲಿನಿಂದ ಎಥನಾಲ್ ಉತ್ಪಾದಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಸರ್ಕಾರ, 2018-19ನೇ ಎಥನಾಲ್ ಋತುವಿನಲ್ಲಿ ಪೂರೈಸಲು ಇಬಿಪಿ ಅಡಿ ಸಿ-ಭಾರದ ಕಾಕಂಬಿ ಮತ್ತು ಬಿ- ಭಾರತ ಕಾಕಂಬಿ/ಕಬ್ಬಿನ ಹಾಲುಯಿಂದ ಪ್ರತ್ಯೇಕವಾಗಿ ಉತ್ಪಾದನೆ ಮಾಡಲಾದ ಎಥನಾಲ್ ಗೆ ಲಾಭದಾಯಕ ದರ ನಿಗದಿ ಮಾಡಿದೆ.
ಮೇಲಿನ ಕ್ರಮಗಳ ಫಲವಾಗಿ, ಭಾರತದಾದ್ಯಂತ ರೈತರಿಗೆ ಬರಬೇಕಿರುವ ಕಬ್ಬಿನ ದರ ಬಾಕಿ ಸಹ ರಾಜ್ಯ ಸಲಹಾ ದರ (ಎಸ್.ಎ.ಪಿ.) ಆಧಾರದಲ್ಲಿ 2017-18ರ ಸಕ್ಕರೆ ಋತುವಿನಲ್ಲಿ 23232 ಕೋಟಿ ರೂಪಾಯಿಗಳಿಂದ 5465 ಕೋಟಿ ರೂಪಾಯಿಗಳಿಗೆ ಇಳಿದಿದೆ. ಎಫ್.ಆರ್.ಪಿ. ಆಧಾರದಲ್ಲಿ ರೈತರಿಗೆ ಅಖಿಲ ಭಾರತ ಕಬ್ಬಿನ ದರದ ಬಾಕಿ ಉತ್ತುಂಗದ ಸುಮಾರು 14538 ಕೋಟಿ ರೂಪಾಯಿಗಳಿಂದ 1924 ಕೋಟಿ ರೂಪಾಯಿಗೆ ಇಳಿದಿದೆ.
*****
(Release ID: 1557110)
Visitor Counter : 282