ಬುಡಕಟ್ಟು ವ್ಯವಹಾರಗಳ ಸಚಿವಾಲಯ

2018 ವರ್ಷಾಂತ್ಯದ ಅವಲೋಕನ: ಬುಡಕಟ್ಟು ವ್ಯವಹಾರಗಳ ಸಚಿವಾಲಯ

Posted On: 20 DEC 2018 11:33AM by PIB Bengaluru

2018 ವರ್ಷಾಂತ್ಯದ ಅವಲೋಕನಬುಡಕಟ್ಟು ವ್ಯವಹಾರಗಳ ಸಚಿವಾಲಯ

 

ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಎಲ್ಲ ಸಚಿವಾಲಯಗಳಿಂದ ಸೇರಿ ಒಟ್ಟು ಅನುದಾನದಲ್ಲಿ ಭಾರೀ ಏರಿಕೆ; 2017-18ರಲ್ಲಿ 31,920.00 ಕೋಟಿ ರೂಇದ್ದ ಅನುದಾನ 2018-19ರಲ್ಲಿ 37,802.94 ಕೋಟಿ ರೂ.ಗೆ ಹೆಚ್ಚಳ ಎಂ ಆರ್ ಎಸ್ ಗಳ ಸ್ಥಾಪನೆ ಮತ್ತುವಿಸ್ತರಣೆ ಕುರಿತ ಯೋಜನೆ ಪರಿಷ್ಕರಿಸಲು ಸರ್ಕಾರದಿಂದ ಪ್ರಮುಖ ಕ್ರಮಗಳ ಪ್ರಕಟಪ್ರಧಾನಮಂತ್ರಿ ಅವರಿಂದ ವನ ಧ್ಯಾನ ಯೋಜನೆ ಆರಂಭಕ್ಕೆ, 462 ಹೊಸ  ಎಂ ಆರ್ ಎಸ್ ಗಳ ರಚನೆ ಮಾಡುವುದಕ್ಕೆ ನಿರ್ಧಾರ ಮತ್ತು ಸುಮಾರು ಕೋಟಿಬುಡಕಟ್ಟು ಜನರ ಆದಾಯ ಮತ್ತು ಜೀವನೋಪಾಯ ವೃದ್ಧಿಸಲು  ಬುಡಕಟ್ಟು ಜನರ ಸ್ವಾತಂತ್ರ್ಯಕ್ಕಾಗಿ ನೆರವು ನೀಡಲು ಎರಡು ರಾಷ್ಟ್ರಮಟ್ಟದ ಹಾಗೂ ನಾಲ್ಕು ರಾಜ್ಯಮಟ್ಟದ ಮ್ಯೂಸಿಯಂಗಳ ಸ್ಥಾಪನೆ

ಬುಡಕಟ್ಟು ವ್ಯವಹಾರಗಳ ಸಚಿವಾಲಯ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ನೀತಿಯೋಜನೆ ಮತ್ತು ಕಾರ್ಯಕ್ರಮಗಳ ನಡುವೆ ಸಮನ್ವಯ ಸಾಧಿಸುವ ನೋಡೆಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.8.6ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.(2011ರ ಜನಗಣತಿ ಪ್ರಕಾರ)2018ರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಬುಡಕಟ್ಟು ಜನರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಲ್ಲದೆಬುಡಕಟ್ಟು ಜನರ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿರಿಸಿ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜೊತೆಗೆ ಬುಡಕಟ್ಟು ಜನರ ಸಂಸ್ಕೃತಿ ಹಾಗೂ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದನ್ನು ವೈಭವೀಕರಿಸುವ ಮ್ಯೂಸಿಯಂಗಳ ಸ್ಥಾಪನೆಗೆ ಒತ್ತು ನೀಡಲಾಯಿತುಈ ವರ್ಷದ ಪ್ರಮುಖ ಮತ್ತು ಅತ್ಯಂತ ಮಹತ್ವದ ಯೋಜನೆ ಎಂದರೆ ಬುಡಕಟ್ಟು ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ ಕುರಿತು ಕೈಗೊಂಡ ತೀರ್ಮಾನವಾಗಿದೆ.

2018ನೇ ವರ್ಷದಲ್ಲಿ ಕೈಗೊಂಡ ಚಟುವಟಿಕೆಗಳ ಪ್ರಮುಖಾಂಶ ಮತ್ತು ಸಾಧನೆಗಳ ವಿವರ

ಬುಡಕಟ್ಟು ವ್ಯವಹಾರಗಳ ಸಚಿವಾಲಯ ಪರಿಶಿಷ್ಟ ವರ್ಗದ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಬದ್ಧತೆಯಿಂದ ಮುಂದುವರಿಸಿದ್ದುಶಿಕ್ಷಣಮೂಲಸೌಕರ್ಯ ಮತ್ತು ಅವರ ಜೀವನೋಪಾಯ ವೃದ್ಧಿ ನಡುವಿನ ಕಂದಕವನ್ನು ತೆಗೆದುಹಾಕಿ ವಿಶೇಷ ಯೋಜನೆಗಳನ್ನು ರೂಪಿಸಲಾಯಿತುಸರ್ಕಾರದ ಕಲಾಪ ಹಂಚಿಕೆ ನಿಯಮಾವಳಿ(ಎಬಿಆರ್)  ಪ್ರಕಾರ ಬುಡಕಟ್ಟು ಉಪ ಯೋಜನೆ(ಇದೀಗ ಕರೆಯುತ್ತಿರುವ ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಧಿ)ಯನ್ನು ನಿಗಾವಹಿಸುವುದು ಈ ಸಚಿವಾಲಯದ ಕಡ್ಡಾಯ ಕೆಲಸವಾಗಿದ್ದುನೀತಿ ಆಯೋಗ ಸೂಚಿಸಿರುವಂತೆ ಎಲ್ಲ ಕೇಂದ್ರ ಸಚಿವಾಲಯಗಳು ತಮ್ಮ ಕಾರ್ಯ ಯೋಜನೆ ಹಾಗೂ ಕಾರ್ಯತಂತ್ರದ ಭಾಗವಾಗಿ ನಿಧಿ ಹಂಚಿಕೆ ಮಾಡಬೇಕುಸಾರ್ವಜನಿಕ ಸೇವೆ ವಿತರಣಾ ವ್ಯವಸ್ಥೆ ಸುಧಾರಿಸುವ ಕ್ರಮವಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಲವು ಯೋಜನೆಗಳ ಬಗ್ಗೆ ಸದಾ ಅವಲೋಕನ ನಡೆಸುತ್ತಿರುತ್ತದೆಅದರ ಇತ್ತೀಚಿನ ಒಂದು ಮಹತ್ವದ ನಿರ್ಧಾರವೆಂದರೆ ನೇರ ನಗದು ವರ್ಗಾವಣೆ(ಡಿಬಿಟಿಅಡಿಯಲ್ಲಿ ಎಲ್ಲ ವಿದ್ಯಾರ್ಥಿ ವೇತನ ಯೋಜನೆಗಳನ್ನು ಏಕೀಕೃತಗೊಳಿಸಿರುವುದು ಮತ್ತು ಎನ್ ಜಿ ಒಗಳಿಗೆ ನೀಡುತ್ತಿರುವ ಅನುದಾನದ ವಿವರಕ್ಕೆ ಆನ್ ಲೈನ್ ಪೋರ್ಟಲ್ ಜಾರಿಗೊಳಿಸಿರುವುದು.

ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಬಜೆಟ್ ನಲ್ಲಿ ನೀಡುತ್ತಿದ್ದ ಹಂಚಿಕೆ 2017-18 ಸಾಲಿನಲ್ಲಿ 5329.32 ಕೋಟಿ ರೂಇತ್ತು 2018-19ನೇ ಸಾಲಿನಲ್ಲಿ 5957.18 ಕೋಟಿ ರೂ.ಗೆ ಏರಿಕೆಯಾಗಿದೆಸಚಿವಾಲಯ ಈಗಾಗಲೇ ಪರಿಶಿಷ್ಟ ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಮೀಸಲಿರಿಸಿರುವ ಒಟ್ಟು ಅನುದಾನದಲ್ಲಿ ಶೇ.74.69ರಷ್ಟು ಬಳಕೆ ಮಾಡಿದೆಸಚಿವಾಲಯ ಎರಡು ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ(2018ರ ಡಿಸೆಂಬರ್ 9ರ ವೇಳೆಗೆಸಂವಿಧಾನದ ಕಲಂ 275(1) ರಂತೆ ಬುಡಕಟ್ಟು ವರ್ಗದ ಉಪಯೋಜನೆ ಮತ್ತು ಅನುದಾನಗಳಿಗೆ ಕೇಂದ್ರದ ವಿಶೇಷ ನೆರವಿನಿಂದ ಶಿಕ್ಷಣಆರೋಗ್ಯಜೀವನೋಪಾಯಆದಾಯ ವೃದ್ಧಿ ಚಟುವಟಿಕೆಗಳಿಗಾಗಿ 2385.90 ಕೋಟಿ ರೂಹಣ ಬಿಡುಗಡೆ ಮಾಡಲಾಗಿದೆಅದೇ ರೀತಿ ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಎಲ್ಲ ಸಚಿವಾಲಯಗಳಿಂದ ನೀಡುವ ಹಂಚಿಕೆ ಏರಿಕೆಯಾಗಿದ್ದು, 2017-18ನೇ ಸಾಲಿನಲ್ಲಿ 31,920 ಕೋಟಿ ರೂಇದ್ದ ಅನುದಾನ 2018-19ನೇ ಸಾಲಿನಲ್ಲಿ 37,802.94 ಕೋಟಿ ರೂ.ಗೆ ಹೆಚ್ಚಾಗಿದೆ.

ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್), ಜಾರಿಗೊಳಿಸಿರುವುದರಿಂದ ನಿಧಿ ಹಂಚಿಕೆ ಮತ್ತು ನಿಗಾ ವ್ಯವಸ್ಥೆ ಪರಿಣಾಮಕಾರಿಯಾಗಿದ್ದುಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸುಧಾರಿಸಿದೆಎಲ್ಲ ಸಚಿವಾಲಯಗಳಿಂದ ಬರುವ ಅನುದಾನಗಳನ್ನು ಕಂಪ್ಯೂಟರ್ ವ್ಯವಸ್ಥೆಯಲ್ಲಿ ನಮೂದಿಸಲಾಗುತ್ತಿದೆಇದರಿಂದಾಗಿ ಜಾರಿ ಸಂಸ್ಥೆಗಳಿಗೆ ನಿಧಿ ಹಂಚಿಕೆಯ ಮೇಲೆ ಕರಾರುವಕ್ಕು ನಿಗಾವಹಿಸಲು ಸಾಧ್ಯವಾಗಿದೆ.

ಬುಡಕಟ್ಟು ಅಭಿವೃದ್ಧಿ ನಿಧಿ ನಿಗಾ ವಹಿಸುವುದು

2017ರ ಜನವರಿಯಲ್ಲಿ ವ್ಯವಹಾರ ಕಲಾಪ ಹಂಚಿಕೆ(ಎಬಿಆರ್ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿದ್ದುಆ ಪ್ರಕಾರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಎಲ್ಲ ಕೇಂದ್ರ ಸಚಿವಾಲಯಗಳ ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಧಿಯ ನಿಗಾ ಮೇಲೆ ವಹಿಸಬಹುದಾಗಿದೆಇದಕ್ಕಾಗಿ ಆನ್ ಲೈನ್ ಮಾನಿಟರಿಂಗ್ ವ್ಯವಸ್ಥೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಜಾರಿಗೊಳಿಸಿದೆಅದರ ವೆಬ್ ವಿಳಾಸ http://stcmis.gov.in ಇದರ ಮೂಲಕ ಬುಡಕಟ್ಟು ಉಪಯೋಜನೆ(ಟಿ ಎಸ್ ಪಿ)/ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಧಿ(ಎಸ್ ಟಿಸಿಬಗ್ಗೆ ನಿಗಾ ವಹಿಸಬಹುದಾಗಿದೆಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್ಮೂಲಕ ನೇರವಾಗಿ ದತ್ತಾಂಶ ಪಡೆಯಬಹುದಾಗಿದ್ದುಅದರಲ್ಲಿ ಯಾವ್ಯಾವುದಕ್ಕೆ ಎಷ್ಟು ಹಂಚಿಕೆಯಾಗಿದೆ ಮತ್ತು ಎಷ್ಟು ಹಣ ಖರ್ಚಾಗಿದೆ ಎಂಬುದರ ಮಾಹಿತಿ ಒದಗಿಸುತ್ತದೆಈ ವ್ಯವಸ್ಥೆಯಲ್ಲಿ ಭೌತಿಕ ಸಾಧನೆಗಳು ಮತ್ತು ಅದರ ಫಲಿತಾಂಶವನ್ನೂ ಸಹ ಕಾಣುವಂತಹ ವ್ಯವಸ್ಥೆ ಪರಿಚಯಿಸಲಾಗಿದೆಯೋಜನೆ ಅನುಷ್ಠಾನಗೊಳ್ಳುತ್ತಿರುವ ಸ್ಥಳಗಳ ಚಿತ್ರ ಒದಗಿಸುವ ಮತ್ತು ಫಲಾನುಭವಿಗಳ ವಿವರ ನೀಡುವ ಎಂಐಎಸ್ ಗಳನ್ನು ಅಭಿವೃದ್ಧಿಗೊಳಿಸಲಾಗಿದೆಅಲ್ಲದೆಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಸಮನ್ವಯತೆ ಮತ್ತು ಮೇಲ್ವಿಚಾರಣೆ ನಡೆಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆನೋಡಲ್ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದ್ದುಅವರು ಮಾಹಿತಿ ಅಪ್ ಲೋಡ್ ಮಾಡುವುದನ್ನು ತಿಳಿಸಲಾಗಿದೆಪರಿಣಾಮಕಾರಿ ಮೇಲುಸ್ತುವಾರಿಗೆ ನಿರಂತರ ನಿಗಾವಹಿಸಲು ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತದೆ.

37 ಕೇಂದ್ರದ ಸಚಿವಾಲಯಗಳು ಮತ್ತು ಇಲಾಖೆಗಳು ಎಸ್ ಟಿ ಸಿ ನಿಧಿಗಳನ್ನು ಹೊಂದಿದ್ದುಅವುಗಳು 299 ನಾನಾ ಯೋಜನೆಗಳ ಮೂಲಕ ಬುಡಕಟ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. 2018-19ನೇ ಸಾಲಿನ ಬಜೆಟ್ ವೆಚ್ಚ ಸ್ಥೂಲ ನೋಟ ಹೇಳಿಕೆ 10ಬಿ ಯಲ್ಲಿ ಇದು ಪ್ರತಿಫಲನಗೊಂಡಿದೆ.

ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಎಲ್ಲ ಸಚಿವಾಲಯಗಳಿಂದ ಹಂಚಿಕೆಯಾಗುತ್ತಿರುವ ಅನುದಾನದಲ್ಲಿ ಭಾರೀ ಏರಿಕೆಯಾಗಿದೆ. 2016-17ನೇ ಹಣಕಾಸು ವರ್ಷದಲ್ಲಿ 24,005.00 ಕೋಟಿ ರೂಇದ್ದ ಅನುದಾನ 2017-18ನೇ ಸಾಲಿನಲ್ಲಿ 31,920.00ಕೋಟಿ ರೂ., 2018-19ನೇ ಸಾಲಿನಲ್ಲಿ 37,802.94 ಕೋಟಿ ರೂ.ಗೆ ಏರಿಕೆಯಾಗಿದೆಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಯತ್ನದಿಂದಾಗಿ ಎಸ್ ಟಿ ಸಿ ವೆಚ್ಚ 2016-17ನೇ ಸಾಲಿನಲ್ಲಿ ಪರಿಷ್ಕೃತ ಅಂದಾಜು ಹಂಚಿಕೆಯಲ್ಲಿ ಒಟ್ಟಾರೆ ಶೇ.85ರಷ್ಟು ಏರಿಕೆಯಾಗಿದೆ. 2017-18ರಲ್ಲಿ ಶೇ.96ಕ್ಕೆ ಹೆಚ್ಚಳವಾಗಿದೆ. 2018-19ರ ಅವಧಿಯಲ್ಲಿ ಒಟ್ಟಾರೆ ಅನುದಾನ 37,802.94 ಕೋಟಿ ರೂ.ಗಳ ಪೈಕಿ 2018ರ ಡಿಸೆಂಬರ್ 9ರ ವೇಳೆಗೆ 23,772.05 ಕೋಟಿ ರೂಅನುದಾನ ಬಿಡುಗಡೆಯಾಗಿದ್ದುಇದು ಒಟ್ಟಾರೆ ಅನುದಾನ ಶೇ.62.88ರಷ್ಟಾಗಿದೆ.

ರಾಜ್ಯಗಳ ಟಿ ಎಸ್ ಪಿ ನಿಧಿಯ ಬಗ್ಗೆ ಹೇಳುವುದಾದರೆಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸತತ ಪ್ರಯತ್ನಗಳಿಂದಾಗಿ ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಧಿಯಲ್ಲಿ ವರ್ಷಗಳಿಂದೀಚೆಗೆ ಶೇ.98ರಷ್ಟು ಅನುದಾನ ಹೆಚ್ಚಳವಾಗಿದೆ. 2010-13ವರ್ಷಗಳ ಅವಧಿಯಲ್ಲಿ(ಒಟ್ಟಾರೆ 1,65,691.00 ಕೋಟಿ ರೂ.ನಿಂದ) 2014-17ನೇ ಸಾಲಿನವರೆಗೆ (3,27,574.00 ಕೋಟಿ ರೂ.ಗೆ ಏರಿಕೆಯಾಗಿದೆ)

2018ರ ಡಿಸೆಂಬರ್ 9ರ ವೇಳೆಗೆ  ಕೇಂದ್ರ ಸರ್ಕಾರದ ನಾನಾ ಸಚಿವಾಲಯಗಳು ಮತ್ತು ಇಲಾಖೆಗಳು ಶಿಕ್ಷಣಆರೋಗ್ಯಕೃಷಿರಸ್ತೆವಸತಿವಿದ್ಯುದೀಕರಣಉದ್ಯೋಗಸೃಷ್ಟಿಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಒಟ್ಟಾರೆ ನಿಗದಿಪಡಿಸಿರುವ ಎಸ್ ಟಿ ಸಿ ಮೊತ್ತದಲ್ಲಿ ಶೇ.63ರಷ್ಟು ಬಿಡುಗಡೆ ಮಾಡಿವೆ.

ಏಕಲವ್ಯ ಮಾದರಿ ವಸತಿ ಶಾಲೆ ಯೋಜನೆ(ಇ ಎಂ ಆರ್ ಎಸ್)

ಪರಿಶಿಷ್ಟ ವರ್ಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದ ಏಕಲವ್ಯ ಮಾದರಿ ವಸತಿ ಶಾಲೆ ಯೋಜನೆ ಅತ್ಯುತ್ತಮ ಯೋಜನೆಯಾಗಿದೆಶಾಲಾ ಕಟ್ಟಡ ಮಾತ್ರವಲ್ಲದೆವಿದ್ಯಾರ್ಥಿನಿಲಯಸಿಬ್ಬಂದಿ ಕ್ವಾಟ್ರಸ್ಆಟದ ಮೈದಾನವಿದ್ಯಾರ್ಥಿಗಳ ಕಂಪ್ಯೂಟರ್ ಲ್ಯಾಬ್ಶಿಕ್ಷಕರ ಸಂಪನ್ಮೂಲ ಕೇಂದ್ರ ಮತ್ತಿತರವುಗಳಿಗೆ ಈ ಯೋಜನೆಯಲ್ಲಿ ಅವಕಾಶವಿದೆಸಾಮಾನ್ಯ ಜನಸಂಖ್ಯೆ ಮತ್ತು ಬುಡಕಟ್ಟು ಜನರ ನಡುವೆ ಇರುವ ಸಾಕ್ಷರತೆಯ ಅಂತರವನ್ನು ತಗ್ಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಇಲ್ಲಿಯವರೆಗೆ ಒಟ್ಟಾರೆ 284 ಇಎಂಆರ್ ಗಳಿಗೆ ಮಂಜೂರಾತಿ ನೀಡಲಾಗಿದ್ದುಅವುಗಳಲ್ಲಿ 219 ಶಾಲೆಗಳು ಆರಂಭವಾಗಿದ್ದುಈಗಾಗಲೇ 65,231 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

2018ರ ಡಿಸೆಂಬರ್ 17ರಂದು ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯಲ್ಲಿ 2022ರ ವೇಳೆಗೆ ಶೇ.50ಕ್ಕೂ ಅಧಿಕ ಎಸ್ ಟಿ ಜನಸಂಖ್ಯೆ ಇರುವ ಪ್ರತಿ ಬ್ಲಾಕ್ ಗಳಲ್ಲೂ ಮತ್ತು ಕನಿಷ್ಠ 20 ಸಾವಿರ ಬುಡಕಟ್ಟು ಜನರಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಯಿತುಈ ಏಕಲವ್ಯ ಶಾಲೆಗಳು ನವೋದಯ ವಿದ್ಯಾಲಯಗಳಿಗೆ ಸಮನಾಗಿದ್ದುಅವುಗಳಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ರಕ್ಷಣೆಗೆ ವಿಶೇಷ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಅವರಿಗೆ ಕ್ರೀಡೆ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೂ ಒತ್ತು ನೀಡಲಾಗುವುದು. 2022ರ ವೇಳೆಗೆ  ಒಟ್ಟು 462 ಉಪ ಜಿಲ್ಲೆಗಳಲ್ಲಿ ಹೊಸದಾಗಿ ಇ ಎಂ ಆರ್ ಎಸ್ ಗಳನ್ನು ಸ್ಥಾಪಿಸುವ ಪ್ರಸ್ತಾವವಿದೆಅದರ ಹಂತ ಹಾಗೂ ವಿವರಗಳು ಈ ಕೆಳಗಿನಂತಿವೆ.

 

                 ವರ್ಷ

2018-19

2019-20

2020-21

2021-22

ಒಟ್ಟು

ಇ ಎಂ ಆರ್ ಎಸ್ ಗಳ ಸಂಖ್ಯೆ

50

100

150

162

462

ಈ ಇ ಎಂ ಆರ್ ಎಸ್ ಗಳನ್ನು ನಡೆಸಲು ನವೋದಯ ವಿದ್ಯಾಲಯ ಸಮಿತಿಗಳ ಮಾದರಿಯಲ್ಲೇ ಸ್ವಾಯತ್ತ ಸೊಸೈಟಿಗಳನ್ನು ರಚನೆ ಮಾಡಲು ಬುಡಕಟ್ಟು ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ.

ಹಾಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ವರ್ಷಕ್ಕೆ 61,500 ರೂವೆಚ್ಚ ನೀಡಲಾಗುತ್ತಿತ್ತುಇದನ್ನು 2019-20ರಿಂದ 1,09,000ರೂ.ಗೆ ಏರಿಸಲಾಗಿದೆ.

ಅಲ್ಲದೆಈ ಶಾಲೆಗಳಲ್ಲಿ ಶೇ.20ರಷ್ಟು ಕ್ರೀಡಾಕೂಟ ಮತ್ತು ಶೇ.10ರಷ್ಟು ಎಸ್ ಟಿ ವಿದ್ಯಾರ್ಥಿಗಳನ್ನು ಹೊರತುಪಡಿಸಿಇತರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಮೀಸಲು ಬಗ್ಗೆ ಸಿಸಿಇಎ ನಿರ್ಧಾರ ಕೈಗೊಂಡಿದೆ.

2018-19 ಮತ್ತು 2019-20ನೇ ಸಾಲಿಗೆ 2238.47 ಕೋಟಿರೂಹಣಕಾಸು ವೆಚ್ಚದ ಪ್ರಸ್ತಾವಿತ ಯೋಜನೆ ಜಾರಿಗೊಳಿಸಲಾಗುವುದು.

ಕೌಶಲ್ಯಾಭಿವೃದ್ಧಿ

          ಸಂವಿಧಾನದ ಕಲಂ 275(10)ರಡಿ ಮತ್ತು ಬುಡಕಟ್ಟು ಉಪಯೋಜನೆಯಿಂದ ವಿಶೇಷ ಕೇಂದ್ರದ ನೆರವು(ಎಸ್ ಸಿ ಎ ನಿಂತ ಟಿ ಎಸ್ ಎಸ್ನಾನಾ ಯೋಜನೆಗಳಡಿ ಹಲವು ರಾಜ್ಯಗಳು 118.65 ಕೋಟಿ ರೂ.ಗಳನ್ನು ಹಲವು ವಲಯಗಳಲ್ಲಿ 31ಸಾವಿರಕ್ಕೂ ಅಧಿಕ ಪುರುಷ ಹಾಗೂ ಮಹಿಳಾ ಬುಡಕಟ್ಟು ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿಗಾಗಿ ತೆಗೆದಿರಿಸಲಾಗಿದೆಕೌಶಲ್ಯಾಭಿವೃದ್ಧಿ ವಿಭಾಗಗಳೆಂದರೆ 1) ಯೋಜನೆ ಮತ್ತು ಕಚೇರಿ ನಿರ್ವಹಣೆ ಇತ್ಯಾದಿ 2) ಸೋಲಾರ್ ಟೆಕ್ನೀಶಿಯನ್/ಎಲೆಕ್ಟ್ರೀಶಿಯನ್  3) ಬ್ಯೂಟಿಷಿಯನ್ 4) ಕರಕುಶಲ ಕಲೆ 5) ಕಟ್ಟಡ ನಿರ್ಮಾಣ ಕಾರ್ಯಕ್ಕೆ ದಿನನಿತ್ಯ ಅಗತ್ಯ ಕೌಶಲ್ಯ(ಪ್ಲಂಬಿಂಗ್ಗಾರೆ ಕೆಲಸಎಲೆಕ್ಟ್ರಿಶಿಯನ್ಫಿಟ್ಟರ್ವೆಲ್ಡರ್ಕಾರ್ಪೆಂಟರ್ 6) ರೆಫ್ರಿಜಿರೇಟರ್ ಮತ್ತು ಎಸಿ ರಿಪೇರಿ 7) ಮೊಬೈಲ್ ರಿಪೇರಿ 8)ನ್ಯೂಟ್ರೀಶಿಯನ್ 9) ಆಯುರ್ವೇದ ಮತ್ತು ಬುಡಕಟ್ಟು ಔಷಧಿ 10) ಐಟಿ 11) ಡಾಟಾ ಎಂಟ್ರಿ 12)ಫ್ಯಾಬ್ರಿಕೇಶನ್ 13) ಪ್ಯಾರಾ ಮೆಡಿಕಲ್ ಮತ್ತು ಹೋಮ್ ನರ್ಸ್ ತರಬೇತಿ 14) ಆಟೋಮೊಬೈಲ್ ಡ್ರೈವಿಂಗ್ ಮತ್ತು ಮ್ಯಕಾನಿಕ್ 15) ಎಲೆಕ್ಟ್ರಿಕ್ ಮತ್ತು ಮೋಟಾರ್ ವೈಂಡಿಂಗ್ 16) ಸೆಕ್ಯುರಿಟಿ ಗಾರ್ಡ್ 17) ಹೌಸ್ ಕೀಪಿಂಗ್ ಮತ್ತು ನಿರ್ವಹಣೆ 18) ರಿಟೇಲ್ ಮ್ಯಾನೇಜ್ ಮೆಂಟ್ 19) ಆತಿಥ್ಯ 20) ಜೈವಿಕ ಪ್ರವಾಸೋದ್ಯಮ 21) ಸಾಹಸ ಪ್ರವಾಸೋದ್ಯಮ

ಬುಡಕಟ್ಟು ಸ್ವಾತಂತ್ರ ಯೋಧರಿಗಾಗಿ ಮ್ಯೂಸಿಯಂಗಳ ನಿರ್ಮಾಣ

ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಡಿತ್ಯಾಗ ಬಲಿದಾನ ಮಾಡಿದ್ದ ಬುಡಕಟ್ಟು ಜನರಿಗಾಗಿ ರಾಜ್ಯಗಳಲ್ಲಿ ಶಾಶ್ವತ ಮ್ಯೂಸಿಯಂಗಳನ್ನು ಸ್ಥಾಪನೆ ಮಾಡಲು ಸರ್ಕಾರ ಯೋಜನೆಯನ್ನು ರೂಪಿಸಿದೆಸಚಿವಾಲಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ಗೌರವಾರ್ಥ ಗುಜರಾತ್ ನಲ್ಲಿ 102.55 ಕೋಟಿ ರೂವೆಚ್ಚದಲ್ಲಿ ಅತ್ಯಾಧುನಿಕ ಮ್ಯೂಸಿಯಂ ನಿರ್ಮಿಸಲು ನಿರ್ಧರಿಸಿದೆಇದರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪಾಲು 50.00 ಕೋಟಿ ರೂ.ಗಳಾಗಿದೆಎರಡನೇ ರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಜಾರ್ಖಂಡ್ ನಲ್ಲಿ ಸ್ಥಾಪಿಸಲಾಗುವುದುಇದಕ್ಕೆ ಒಟ್ಟು 36.66 ಕೋಟಿ ರೂವೆಚ್ಚವಾಗಲಿದ್ದುಇದರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪಾಲು 25.00 ಕೋಟಿ ರೂ.ಗಳಾಗಿದೆಇದಲ್ಲದೆ ಸಚಿವಾಲಯ ಆಂಧ್ರಪ್ರದೇಶಛತ್ತೀಸಗಢ,ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ರಾಜ್ಯ ಮಟ್ಟದ ಮಟ್ಟದ ಮ್ಯೂಸಿಯಂಗಳನ್ನು ಸ್ಥಾಪಿಸಲು ಮುಂದಾಗಿದೆರಾಜ್ಯಗಳು ಮತ್ತು ಅವುಗಳಿಗೆ ನೀಡುತ್ತಿರುವ ಅನುದಾನದ ವಿವರ ಕೆಳಗಿನಂತಿದೆ.

 

 

 

 

 

ಕ್ರಮಸಂಖ್ಯೆ

ರಾಜ್ಯ

ಸ್ಥಳ

ಯೋಜನಾ ವೆಚ್ಚ (ಕೋಟಿ ರೂ.ಗಳಲ್ಲಿ)

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅನುದಾನ

ಅನುದಾನ ಬಿಡುಗಡೆ(10.12.2018ರ ವೇಳೆಗೆ)

1

ಆಂಧ್ರಪ್ರದೇಶ

ಲಮ್ಮಸಿಂಗಿ

35.00

15.00

7.50

2

ಛತ್ತೀಸ್ ಗಢ

ನಯಾ ರಾಯ್ಪುರ್

25.66

15.00

4.65

3

ಕೇರಳ

ಕೋಝಿಕೋಡ್

16.16

15.00

7.50

4

ಮಧ್ಯಪ್ರದೇಶ

ಚಿಂದ್ವಾರ

38.26

15.00

6.93

 

 

 

ಒಟ್ಟು

135.00

60.96

 

ಅರಣ್ಯ ಅಭಿವೃದ್ಧಿ ಕಾಯ್ದೆ(ಎಫ್ ಆರ್ ಎಅಡಿ ಸಾಧನೆ 31.12.2017ರಿಂದ 10.12.2018ರ ಅವಧಿ

 

 

 

 

 

ಒಟ್ಟು ಹಕ್ಕು ಮಂಡನೆ(ವೈಯಕ್ತಿಕ ಹಾಗೂ ಸಮುದಾಯ)

ಒಟ್ಟು ಹಕ್ಕುಗಳನ್ನು ಗುರುತಿಸಿರುವುದು

ಹಕ್ಕು ನೀಡಲಾದ ಒಟ್ಟು ಅರಣ್ಯ ಭೂಮಿಯ ವಿಸ್ತೀರ್ಣ (ಎಕರೆಗಳಲ್ಲಿ)

10.12.2018ರ ಸ್ಥಿತಿ

42,19,741

18,89,835

1,78,48,733.00

31.12.2017ರ ಸ್ಥಿತಿ

41,88,966

18,34,108

1,46,07,791.25

2018ರಲ್ಲಿ ಸಾಧನೆ(10.12.2018ರಂತೆ)

30,775

55,727

32,40,941.75

 

ಸೂಕ್ಷ್ಮ ಬುಡಕಟ್ಟು ವರ್ಗಗಳ ವಿಶೇಷ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು(ಪಿವಿಟಿ ಜಿಎಸ್)

1.      ಪಿವಿಟಿಜಿಎಸ್ ಅಭಿವೃದ್ಧಿಗೆ ನಿಧಿ ಹಂಚಿಕೆಯನ್ನು ಸಚಿವಾಲಯ ಏರಿಕೆ ಮಾಡಿದ್ದು, 2017-18ರಲ್ಲಿ 240.00 ರೂಇತ್ತು. 2018-19ನೇ ಸಾಲಿಗೆ 260.00 ರೂಗೆ ಏರಿಕೆ ಮಾಡಲಾಗಿದೆ.  

2.     ರಾಜ್ಯ ಸರ್ಕಾರಗಳಿಗೆ ತಳಮಟ್ಟದ ಸಮೀಕ್ಷೆಗಳ ಮೂಲಕ ಈ ನಿಧಿಯ ಬಳಕೆಗೆ ಸರಳ ನಿಯಮಗಳನ್ನು ನೀಡಲಾಗಿದೆ.

3.     ಪಿವಿಟಿಜಿಎಸ್ ಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸಲು ಬುಡಕಟ್ಟು ವರ್ಗದವರನ್ನು ಗುರುತಿಸಲು ಜಿಐಎಸ್ ಮ್ಯಾಪಿಂಗ್ ಮಾಡಿಸೂಕ್ಷ್ಮ ಯೋಜನೆಗಳನ್ನು ರೂಪಿಸಲು ಒತ್ತು ನೀಡಲಾಗಿದೆ.

4.    ಪಿವಿಟಿಜಿಎಸ್ ಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಯ್ದುಕೊಳ್ಳುವ ಜೊತೆಗೆ ಅವರ ಸಾಂಪ್ರದಾಯಿಕ ಕಲೆಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳು ಮತ್ತು ಊಟೋಪಚಾರ ಪದ್ಧತಿಗಳನ್ನು ಸಂರಕ್ಷಿಸಲು ಸಮಗ್ರ ಅಭಿವೃದ್ಧಿ ಯೋಜನೆ(ಸಿಸಿಡಿಗಳಿಗೆ ಒತ್ತು ನೀಡಲಾಗಿದೆ.

ವಿದ್ಯಾರ್ಥಿವೇತನ ಯೋಜನೆಗಳು

 

1.      ಪ್ರಿ ಮೆಟ್ರಿಕ್ ಸ್ಕಾಲರ್ ಶಿಪ್

·        ಆನ್ ಲೈನ್ ಮೂಲಕ ಅರ್ಜಿಗಳ ಆಹ್ವಾನರಾಜ್ಯಗಳು ತಮ್ಮದೇ ಆದ ಪೋರ್ಟಲ್ ಗಳನ್ನು ಬಳಸಬಹುದು ಅಥವಾ ಸ್ಕಾಲರ್ ಶಿಪ್ ಪೋರ್ಟಲ್(ಎನ್ ಎಸ್ ಪಿಬಳಸಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಬಹುದು.

·        2017-18ನೇ ಸಾಲಿನಲ್ಲಿ 265.00 ಕೋಟಿ ರೂಆರ್ಥಿಕ ಸಹಾಯಧನ ನೀಡಲಾಗಿತ್ತು. 2018-19ರಲ್ಲಿ ಅದನ್ನು 350.00 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆಅದರಲ್ಲಿ 2018 ಡಿಸೆಂಬರ್ 6ರವರೆಗೆ ರಾಜ್ಯಗಳಿಗೆ 294.58 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.

 

2.      ಪೋಸ್ಟ್ ಮೆಟ್ರಿಕ್ಸ್ ಸ್ಕಾಲರ್ ಶಿಪ್

 

·        ಆನ್ ಲೈನ್ ಮೂಲಕ ಅರ್ಜಿಗಳ ಆಹ್ವಾನ – ರಾಜ್ಯಗಳು ತಮ್ಮದೇ ಆದ ಪೋರ್ಟಲ್ ಗಳನ್ನು ಬಳಸಬಹುದು ಅಥವಾ ಸ್ಕಾಲರ್ ಶಿಪ್ ಪೋರ್ಟಲ್(ಎನ್ ಎಸ್ ಪಿಬಳಸಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಬಹುದು.

·        2017-18ನೇ ಸಾಲಿನಲ್ಲಿ 1347.07 ಕೋಟಿ ರೂಆರ್ಥಿಕ ಸಹಾಯ ಧನ ನೀಡಲಾಗಿತ್ತು. 2018-19ರಲ್ಲಿ ಅದನ್ನು 1586.00 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆಅದರಲ್ಲಿ 2018 ಡಿಸೆಂಬರ್ 6ರ ವರೆಗೆ ರಾಜ್ಯಗಳಿಗೆ 1308.77 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.

3.      ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ರಾಷ್ಟ್ರೀಯ ಫೆಲೋಶಿಪ್ ಮತ್ತು ವಿದ್ಯಾರ್ಥಿವೇತನ ಯೋಜನೆಗಳು

2018-19ನೇ ಸಾಲಿನಲ್ಲಿ ಈ ಯೋಜನೆಗಾಗಿ 100.00 ಕೋಟಿ ರೂಆರ್ಥಿಕ ಸಹಾಯ ಧನ ಒದಗಿಸಲಾಗಿದೆ.

ಟಾಪ್ ಕ್ಲಾಸ್ ಸ್ಕಾಲರ್ ಶಿಪ್ ಯೋಜನೆ

·        ಆನ್ ಲೈನ್ ಮೂಲಕ ಅರ್ಜಿಗಳ ಆಹ್ವಾನ – ಗುರುತಿಸಲ್ಪಟ್ಟ ಅಗ್ರ ದರ್ಜೆಯ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಎನ್ ಎಸ್ ಪಿ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.

·        ಈ ಶಿಕ್ಷಣ ಸಂಸ್ಥೆಗಳಿಗೆ ಟ್ಯೂಷನ್ ಫಿಯನ್ನು ನೇರವಾಗಿ ವಿತರಿಸಲಾಗುವುದುಆದರೆನಿರ್ವಹಣಾ ಭತ್ಯೆಯನ್ನು ವಿದ್ಯಾರ್ಥಿಗಳ ವೈಯಕ್ತಿಕ ಖಾತೆಗೆ ಪಿಎಫ್ಎಂಎಸ್ ಮೂಲಕ ವರ್ಗಾಯಿಸಲಾಗುವುದು.

·        2018ನೇ ಸಾಲಿನಲ್ಲಿ 87ನ ಹೊಸ ಶಿಕ್ಷಣ ಸಂಸ್ಥೆಗಳನ್ನು ಈ ಯೋಜನೆಗೆ ಸೇರ್ಪಡೆ ಮಾಡಲಾಗಿದೆ.

 

ಬಿಫೆಲೋಶಿಪ್ ಯೋಜನೆ

·        2017-18ನೇ ಸಾಲಿನಿಂದ ಈ ಯೋಜನೆಯ ಅನುಷ್ಠಾನವನ್ನು ಸಚಿವಾಲಯ ಯುಜಿಸಿಯಿಂದ ತಾನೇ ವಹಿಸಿಕೊಂಡಿತು.

·        ಆನ್ ಲೈನ್ ಮೂಲಕ ಅರ್ಜಿಗಳ ಆಹ್ವಾನ – ಆನ್ ಲೈನ್ ಮೂಲಕ ಹೊಸದಾಗಿ ಅರ್ಜಿಗಳನ್ನು ಎನ್ ಎಫ್ ಎಸ್ ಟಿ ಪೋರ್ಟಲ್ ಗಳ ಮೂಲಕ ಕಾರ್ಯಾಚರಣೆಗೊಳಿಸಲಾಗುವುದು ಮತ್ತು 2018-19ನೇ ಸಾಲಿನಲ್ಲಿ 2302 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

·        ಪಿಎಫ್ಎಂಎಸ್ ಮತ್ತು ಬ್ಯಾಂಕುಗಳ ಸಮನ್ವಯದ ಮೂಲಕ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಬಗೆಹರಿಸಲಾಗುವುದು.

·        ವಿಕಲಚೇತನರುಪಿವಿಟಿಜಿಎಸ್ಬಿಪಿಎಲ್ ಮತ್ತು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಸಿಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ಸ್ಕಾಲರ್ ಶಿಪ್ ಯೋಜನೆ

·        ಸಚಿವಾಲಯ ಇದರ ಪೋರ್ಟಲ್ ಅನ್ನು ಕಾರ್ಯಾಚರಣೆಗೊಳಿಸಿದ್ದುಸಚಿವಾಲಯದ ಎನ್ ಐ ಸಿ ಸರ್ವರ್ ನೊಂದಿಗೆ ಕೆಲಸ ಮಾಡುತ್ತಿದೆ.

·        ವಿದ್ಯಾರ್ಥಿಗಳು ಕಲಿಯಬೇಕಾದ ಕೋರ್ಸ್ ಗಳ ಆಯ್ಕೆಯಲ್ಲಿ ಸರಳೀಕರಣ ಪರಿಚಯಿಸಲಾಗಿದೆ.

·        2018-19ನೇ ಸಾಲಿನಲ್ಲಿ 138 ಅರ್ಜಿಗಳು ಸ್ವೀಕಾರವಾಗಿದ್ದುಅವುಗಳ ಪ್ರಕ್ರಿಯೆ ನಡೆಯುತ್ತಿದೆ.

 

ಡಿಡಿಬಿಟಿ

·        ಪ್ರತಿ ತಿಂಗಳು ಸಂಗ್ರಹಿಸುವ ದತ್ತಾಂಶವನ್ನು ಡಿಬಿಟಿ ಭಾರತ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗುವುದು.

ವನ ಧಾನ್ ಯೋಜನೆ

     ಬುಡಕಟ್ಟು ಜನರ ಸ್ಥಿತಿಗತಿಯಲ್ಲಿ ಮಹತ್ವದ ಬದಲಾವಣೆ ತರುವ – ವನ ಧಾನ್ ಯೋಜನೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆರಂಭಿಸಿದೆ. 2018ರ ಏಪ್ರಿಲ್ 14ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೊದಲ ವನ ಧಾನ್ ವಿಕಾಸ ಕೇಂದ್ರವನ್ನು ಬಿಜಾಪುರದಲ್ಲಿ ಉದ್ಘಾಟಿಸಿದರುಇದು ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಸಾಮರ್ಥ್ಯವೃದ್ಧಿ ಹಾಗೂ ಮೌಲ್ಯವರ್ಧಿತ ಸೌಕರ್ಯಗಳನ್ನು ಹೊಂದುವ ಗುರಿ ಹೊಂದಿದೆ.

ಯೋಜನೆಯಂತೆ ಟಿ ಆರ್ ಐ ಎಫ್ ಇ ಡಿ ಸಂಸ್ಥೆಎಂ ಎಫ್ ಪಿ ನೇತೃತ್ವದಲ್ಲಿ  ಬಹು ಉಪಯೋಗ ವನ ಧಾನ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡಲಿದೆಬುಡಕಟ್ಟು ಜನರು ವಾಸಿಸುವ 30 ಎಂ ಎಫ್ ಪಿ ಕೇಂದ್ರಗಳನ್ನು ಒಳಗೊಂಡ ಹತ್ತು ಸ್ವಸಹಾಯ ಗುಂಪುಗಳು ಸೇರಿವನ ಧಾನ ವಿಕಾಸ ಕೇಂದ್ರ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗುವುದುಈ ಯೋಜನೆಯಡಿ ಬುಡಕಟ್ಟು ಸಮುದಾಯದವರಿಗೆ ಪ್ರಾಥಮಿಕ ಹಂತದ ಮೌಲ್ಯವರ್ಧನೆ ಮತ್ತು ತಳಹಂತದಲ್ಲಿ ಎಂ ಎಫ್ ಪಿ ಗೆ ಉತ್ತೇಜಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಗುರಿ ಹೊಂದಲಾಗಿದೆಈ ಕಾರ್ಯಕ್ರಮದ ಮೂಲಕ ಮರ ಹೊರತುಪಡಿಸಿದರೆಉಳಿದ ಅರಣ್ಯ ಉತ್ಪನ್ನಗಳ ಉತ್ಪಾದನೆಯಲ್ಲಿ ಬುಡಕಟ್ಟು ಜನರ ಪಾಲು ಈಗಿರುವ ಶೇ.20ರಿಂದ 60ಕ್ಕೆ ಏರಿಕೆಯಾಗಲಿದೆದೇಶಾದ್ಯಂತ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಅರಣ್ಯ ಪ್ರದೇಶ ಜಿಲ್ಲೆಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಮೂರು ಸಾವಿರ ವನ ಧಾನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆಆರಂಭಿಕವಾಗಿ ಶೇ.50ಕ್ಕೂ ಅಧಿಕ ಬುಡಕಟ್ಟು ಜನಸಂಖ್ಯೆ ಇರುವ 39 ಜಿಲ್ಲೆಗಳಲ್ಲಿ ಈ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆನಂತರ ಕ್ರಮೇಣ ಭಾರತದ ಇತರ ಬುಡಕಟ್ಟು ಜಿಲ್ಲೆಗಳಿಗೆ ಅದನ್ನು ವಿಸ್ತರಿಸಲಾಗುವುದುಇದರ ಮೂಲಕ ಎಂ ಎಫ್ ಪಿಗಳ ಕೇಂದ್ರಿತ ಜೀವನೋಪಾಯ ಅಭಿವೃದ್ಧಿ ಜೊತೆಗೆ ಬುಡಕಟ್ಟು ಜನರ ಮತ್ತು ಕುಶಲಕರ್ಮಿಗಳನ್ನು ಉತ್ತೇಜಿಸುವುದಾಗಿದೆಅರಣ್ಯೇತರ ಉತ್ಪನ್ನಗಳು ಬುಡಕಟ್ಟು ಜನರ ಪ್ರಾಥಮಿಕ ಆದಾಯ ಮೂಲವಾಗಿದ್ದುದೇಶದ ಸುಮಾರು 5ಕೋಟಿ ಬುಡಕಟ್ಟು ಜನರಿಗೆ ಅದೇ ಜೀವನೋಪಾಯವಾಗಿದೆ.

ಆದಿ ಮಹೋತ್ಸವ

          ಬುಡಕಟ್ಟು ವ್ಯವಹಾರಗಳ ಸಚಿವಾಲಯ ಟ್ರಿಫೆಡ್ ನೆರವಿನೊಂದಿಗೆ ಬುಡಕಟ್ಟು ಜನರ ಕರಕುಶಲ ಕಲೆಸಂಸ್ಕೃತಿಆಹಾರ ಪದ್ಧತಿ ಮತ್ತು ವ್ಯಾಪಾರವನ್ನು ಉತ್ತೇಜಿಸಲು ದೆಹಲಿಯ ಹಾತ್ ನಲ್ಲಿ 2018ರ ನವೆಂಬರ್ 16 ರಿಂದ 30ರ ವರೆಗೆ ರಾಷ್ಟ್ರೀಯ ಬುಡಕಟ್ಟು ಉತ್ಸವವನ್ನು ಆದಿ ಮಹೋತ್ಸವ’ ಹೆಸರಿನಲ್ಲಿ ಆಯೋಜಿಸಿತ್ತುಈ ಉತ್ಸವವನ್ನು ಬುಡಕಟ್ಟು ವ್ಯವಹಾರಗಳ ಸಚಿವರಾದ ಗೌರವಾನ್ವಿತ .ಜೆಓರಮ್ ಅವರು ಉದ್ಘಾಟಿಸಿದರು.

          ಈ ಮಹೋತ್ಸವದಲ್ಲಿ 20 ರಾಜ್ಯಗಳ ಒಂದು ಸಾವಿರ ಕುಶಲಕರ್ಮಿಗಳು, 80 ಬುಡಕಟ್ಟು ಅಡುಗೆ ನಿಪುಣರು ಮತ್ತು 14 ನೃತ್ಯ ತಂಡಗಳು ಸೇರಿ 250 ಕಲಾವಿದರು ಭಾಗವಹಿಸಿದ್ದರುಈ ಮಹೋತ್ಸವದ ಪ್ರಮುಖಾಂಶಗಳೆಂದರೆಬುಡಕಟ್ಟು ಜನಗಳ ಆಹಾರ ಮತ್ತು ಪಾನೀಯಗಳ ಪ್ರತ್ಯಕ್ಷ ಪ್ರಾತ್ಯಕ್ಷಿಕೆಬಳೆಗಳುನಾಲ್ಕು ನಾನಾ ಶಾಲೆಯ ಪೈಂಟಿಂಗ್ ಗಳು – ವರ್ಲಿಪಿತೋರಾಗೋಂಡ್ ಮತ್ತು ಸೌರ ಪ್ರಾತ್ಯಕ್ಷಿಕೆಬುಡಕಟ್ಟು  ಉಡುಪುಗಳ ಫ್ಯಾಷನ್ ಷೋ ಮತ್ತಿತರವುಮಹೋತ್ಸವದಲ್ಲಿ ಪ್ರದರ್ಶಿಸಲಾದ ಬುಡಕಟ್ಟು ಉತ್ಪನ್ನಗಳಲ್ಲಿ ಪಾರಂಪರಿಕ ಸೀರೆಗಳ ಸಂಗ್ರಹಮಧ್ಯಪ್ರದೇಶಜಾರ್ಖಂಡ್ ಮತ್ತು ರಾಜಸ್ತಾನದಲ್ಲಿ ಪುರುಷರು ಬಳಸುವ ಹತ್ತಿವುಲ್ಲನ್ ಮತ್ತು ಸಿಲ್ಕ್ ಜಾಕೆಟ್ ಗಳು ಹಾಗೂ ಕುರ್ತಾಗಳುಛತ್ತೀಸ್ ಗಢಒಡಿಶಾ,ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಬೆಲ್ ಮೆಟಲ್ಗುಜರಾತ್ಮಹಾರಾಷ್ಟ್ರಒಡಿಶಾ ಮತ್ತು ಮಧ್ಯಪ್ರದೇಶದ ಪೇಂಟಿಂಗ್ ಗಳುಹಿಮಾಚಲಪ್ರದೇಶಉತ್ತರಾಂಚಲ ಮತ್ತು ಜಮ್ಮುಕಾಶ್ಮೀರದ ವುಲ್ಲನ್ನಾನಾ ರಾಜ್ಯಗಳ ಜೇನುತುಪ್ಪಮಸಾಲೆ ಪದಾರ್ಥಗಳು ಮತ್ತು ಒಣ ಹಣ್ಣುಗಳುಹಿಮಾಚಲಪ್ರದೇಶಒಡಿಶಾಈಶಾನ್ಯ ರಾಜ್ಯಗಳುಮಧ್ಯಪ್ರದೇಶತೆಲಂಗಾಣ ರಾಜ್ಯಗಳ ಬುಡಕಟ್ಟು ಮಹಿಳೆಯರು ಧರಿಸುವ ಆಭರಣಗಳುರಾಜಸ್ತಾನ ಮತ್ತು ಮಣಿಪುರದ ಅಲಂಕಾರಿಕ ಮಡಕೆಗಳು;ರಾಜಸ್ತಾನಈಶಾನ್ಯ ರಾಜ್ಯಗಳುಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗೃಹೋಪಯೋಗಿ ಪೀಠೋಪಕರಣುಗುಜರಾತ್ತೆಲಂಗಾಣಜಾರ್ಖಂಡ್ ನ ಬ್ಯಾಗುಗಳ ಸಂಗ್ರಹಪಶ್ಚಿಮ ಬಂಗಾಳಜಾರ್ಖಂಡ್ ಮತ್ತು ಕೇರಳದ ನಾರಿನ ಮತ್ತು ಹುಲ್ಲಿನ ನಾನಾ ಬಗೆಯ ವಸ್ತುಗಳು.

          ಈ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವರಾದ ಗೌರವಾನ್ವಿತ ಜೆಓರಮ್ ಅವರುಬುಡಕಟ್ಟು ಕ್ರೀಡಾ ಸಾಧಕಿ ಮೇರಿಕೋಮ್ ಅವರನ್ನು ಆರನೇ ಬಾರಿ ವಿಶ್ವ ಬಾಂಕ್ಸಿಂಗ್ ಚಾಂಪಿಯನ್ ಆಗಿ ಮಹತ್ವದ ಸಾಧನೆ ಮಾಡಿದ್ದಕ್ಕಾಗಿ 2018ರ ನವೆಂಬರ್ 30ರಂದು ದಿಲ್ಲಿ ಹಾತ್ ನಲ್ಲಿ ಅಭಿನಂದಿಸಿದರುಮೇರಿಕೋಮ್ ಭಾರತೀಯ ಬುಡಕಟ್ಟು ಜನರ ರಾಯಭಾರಿಯಾಗಿರುವುದಲ್ಲದೆಪುಂಚತಂತ್ರ ಉತ್ಪನ್ನಗಳ ರಾಯಭಾರಿಯೂ ಆಗಿದ್ದಾರೆ.

          ಮಾರ್ಚ್ 2019ರೊಳಗಾಗಿ ಭಾರತದಾದ್ಯಂತ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಬುಡಕಟ್ಟು ಉತ್ಸವಗಳನ್ನು ನಡೆಸಲು ಉದ್ದೇಶಿಸಲಾಗಿದೆಆ ಮೂಲಕ ಬುಡಕಟ್ಟು ಜನರ ಸಂಸ್ಕೃತಿ ಬಿಂಬಿಸಲು ವೇದಿಕೆ ದೊರಕಿಸಿ ಕೊಡುವ ಉದ್ದೇಶವಿದೆ.

ಎನ್ ಜಿ ಒ ಗಳಿಗೆ ಅನುದಾನ

          ಆನ್ ಲೈನ್ ಅರ್ಜಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದ್ದು, ‘ಎನ್ ಜಿ ಒ’ ಅನುದಾನ ಆನ್ ಲೈನ್ ಅಪ್ಲಿಕೇಶನ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ www.ngograntsmota.gov.in ಅನ್ನು ಕ್ರಿಯಾಶೀಲಗೊಳಿಸಲಾಗಿದೆಈ ಯೋಜನೆಯಡಿ ಎನ್ ಜಿ ಒಗಳ ಅರ್ಜಿಗಳನ್ನು ಪರಿಶೀಲಿಸಲಾಗುವುದುಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ದುಡಿಯುತ್ತಿರುವ ಸ್ವಯಂ ಸೇವಾ ಸಂಘಟನೆಗಳಿಗೆ ವೇತನ ಅನುದಾನ ನೀಡಲಾಗುವುದುಇದರಲ್ಲಿ ಎಲ್ಲ ಬಗೆಯ ಮಾಹಿತಿಯನ್ನು ಕ್ಷಿಪ್ರವಾಗಿ ಪಡೆಯಬಹುದಲ್ಲದೆ,ಯೋಜನೆಯನ್ನು ಸುಲಭವಾಗಿ ಜಾರಿಗೊಳಿಸಬಹುದಾಗಿದೆಹಾಗಾಗಿ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ.

ಸಣ್ಣ ಪ್ರಮಾಣದ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ

          ಸಣ್ಣ ಪ್ರಮಾಣದ ಅರಣ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಾರ್ಯತಂತ್ರ(ಎಂ ಎಫ್ ಪಿಯೋಜನೆ ಮೂಲಕ ಕನಿಷ್ಠ  ಬೆಂಬಲ ಬೆಲೆ ಎಂ ಎಸ್ ಪಿ ಮತ್ತು ಎಂ ಎಫ್ ಪಿ ಗೆ ಮೌಲ್ಯ ಸರಣಿ ಅಭಿವೃದ್ಧಿ(ಎಂ ಎಫ್ ಪಿ ಗೆ ಎಂ ಎಸ್ ಪಿ ಎಂದು ಕರೆಯಲಾಗುವುದು) ಯೋಜನೆಯನ್ನು 2013-14ರಲ್ಲಿ ಆರಂಭಿಸಲಾಯಿತುಆಗ ಕೇವಲ ಹತ್ತು ಎಂ ಎಫ್ ಪಿ ಉತ್ಪನ್ನಗಳಿಗೆ ಮತ್ತು ಶೆಡ್ಯೂಲ್ಡ್ ಐದು ರಾಜ್ಯಗಳಿಗೆ ಮಾತ್ರ ಅನ್ವಯವಾಗುತ್ತಿತ್ತುಕ್ರಮೇಣ 2016ರ ಅಕ್ಟೋಬರ್ ನಲ್ಲಿ ಈ ಯೋಜನೆ ವ್ಯಾಪ್ತಿಗೆ ಹೆಚ್ಚಿನ ಎಂ ಎಫ್ ಪಿ ಉತ್ಪನ್ನಗಳನ್ನು ತಂದಿದ್ದಲ್ಲದೆಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಯಿತುಮೂಲತಃ ಹತ್ತು ಉತ್ಪನ್ನಗಳಿಗೆ ಇದ್ದ ಎಂ ಎಸ್ ಪಿಯನ್ನು 2017ರ ನವೆಂಬರ್ ನಲ್ಲಿ ಮತ್ತೆ ವಿಸ್ತರಣೆ ಮಾಡಿಹೆಚ್ಚಿನ ಉತ್ಪನ್ನಗಳನ್ನು ಸೇರಿಸಲಾಯಿತುಆನಂತರ ಎಂ ಎಫ್ ಪಿ ಉತ್ಪನ್ನಗಳ ಪಟ್ಟಿ ಮತ್ತೆ ವಿಸ್ತರಣೆಗೊಂಡಿದ್ದಲ್ಲದೆಎಂ ಎಸ್ ಪಿಯನ್ನೂ ಸಹ ಪರಿಷ್ಕರಿಸಲಾಯಿತುಹಾಲಿ ಇರುವ ಎಂ ಎಫ್ ಪಿ ಉತ್ಪನ್ನಗಳ ವಿಸ್ತರಣೆ ಬಗ್ಗೆಯೂ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.

***************


(Release ID: 1557107) Visitor Counter : 240


Read this release in: English , Bengali , Tamil