ಇಂಧನ ಸಚಿವಾಲಯ
2018ರ ವರ್ಷಾಂತ್ಯದ ಪರಾಮರ್ಶೆ -ಇಂಧನ ಸಚಿವಾಲಯ
Posted On:
12 DEC 2018 2:32PM by PIB Bengaluru
2018ರ ವರ್ಷಾಂತ್ಯದ ಪರಾಮರ್ಶೆ -ಇಂಧನ ಸಚಿವಾಲಯ
ಸೌಭಾಗ್ಯ ಯೋಜನೆಯಡಿ 9 ರಾಜ್ಯಗಳು 100 % ಮನೆಗಳ ವಿದ್ಯುದ್ದೀಕರಣವನ್ನು ಸಾಧಿಸಿವೆ; ಈಗ ಒಟ್ಟು 16 ರಾಜ್ಯಗಳು 100 % ಮನೆಗಳ ವಿದ್ಯುದ್ದೀಕರಣವನ್ನು ಸಾಧಿಸಿದಂತಾಗಿದ್ದು, ಸೌಭಾಗ್ಯ ಯೋಜನೆಯಡಿ 2 ಕೋಟಿಗೂ ಮಿಕ್ಕ ವಿದ್ಯುತ್ ಸಂಪರ್ಕವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಡಿ.ಡಿ.ಯು.ಜಿ.ಜೆ.ವೈ. ಅಡಿಯಲ್ಲಿ 100 % ಗ್ರಾಮೀಣ ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ, ಇಂಧನ ಕೊರತೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ ಮತ್ತು ಭಾರತವು ನೇಪಾಳ, ಬಾಂಗ್ಲಾದೇಶ, ಹಾಗು ಮ್ಯಾನ್ಮಾರ್ ಗಳಿಗೆ ವಿದ್ಯುತ್ ರಫ್ತು ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ, 31.68 ಕೋಟಿ ಎಲ್.ಇ.ಡಿ. ಬಲ್ಬುಗಳನ್ನು ಉಜಾಲಾ ಯೋಜನೆಯಡಿ ವಿತರಿಸಲಾಗಿದೆ ಮತ್ತು 74.79 ಲಕ್ಷ ಎಲ್.ಇ.ಡಿ. ಬೀದಿ ದೀಪಗಳನ್ನು ಅಳವಡಿಸಲಾಗಿದ್ದು , ವಿಶ್ವ ಬ್ಯಾಂಕಿನ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಇರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 2014 ರಲ್ಲಿ ಇದ್ದ 137 ನೇ ಶ್ರೇಯಾಂಕ 2018 ರಲ್ಲಿ “ವಿದ್ಯುತ್ ಪಡೆಯುವಿಕೆ”ಯಲ್ಲಿ 24 ಕ್ಕೇರಿದೆ.
ಯಾವುದೇ ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಜೀವನದ ಗುಣಮಟ್ಟ ವಿಶ್ವಾಸಾರ್ಹ ಮತ್ತು ಕೈಗೆಟಕುವ ದರದಲ್ಲಿ ಇಂಧನ ಪೂರೈಕೆಯನ್ನು ಪ್ರಮುಖವಾಗಿ ಅವಲಂಬಿಸಿರುತ್ತದೆ. ಆದುದರಿಂದ ಸರಕಾರವು 2019 ರ ಮಾರ್ಚ್ 31 ರ ವೇಳೆಗೆ ಎಲ್ಲರಿಗೂ 24*7 ವಿದ್ಯುತ್ ಪೂರೈಕೆಯನ್ನು ಮಾಡಲು ಬದ್ದವಾಗಿದೆ. ಈ ಗುರಿ ಸಾಧನೆಯ ನಿಟ್ಟಿನಲ್ಲಿ ಹಲವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ , ಮತ್ತು 2018 ರ ವರ್ಷದಲ್ಲಿ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿ.ಡಿ.ಯು. ಜಿ.ಜೆ. ವೈ.) 2018 ರ ಏಪ್ರಿಲ್ 28 ರಂದು ಪ್ರತೀ ಗ್ರಾಮಕ್ಕೂ ವಿದ್ಯುತ್ ತಲುಪಿರುವುದು ಚರಿತ್ರಾರ್ಹ ಘಟನೆಯಾಗಿದೆ. ಈಗ ಸೌಭಾಗ್ಯ ಯೋಜನೆಯಡಿ ಪ್ರತೀ ಮನೆಯನ್ನೂ ವಿದ್ಯುದ್ದೀಕರಣ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. 9 ರಾಜ್ಯಗಳು ಈಗಾಗಲೇ 100 % ಮನೆಗಳ ವಿದ್ಯುದ್ದೀಕರಣದ ಗುರಿ ಸಾಧನೆ ಮಾಡಿರುವುದರಿಂದ , ಮುಂದಿನ ಗುರಿ ನಿಗದಿ ಮಾಡಲಾದ ಕಾಲಾವಕಾಶಕ್ಕಿಂತ ಮೊದಲೇ ಸಾಧಿತವಾಗಲಿದೆ.
ವಿದ್ಯುತ್ ಉತ್ಪಾದನೆ, ವರ್ಗಾವಣೆ, ಮತ್ತು ವಿತರಣೆ ಸಹಿತ ಇಡೀಯ ವಿದ್ಯುತ್ ಕ್ಷೇತ್ರವನ್ನು ಸುಧಾರಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮರ್ಥ್ಯ ವರ್ಧನೆ ಮಾತ್ರವಲ್ಲದೆ ಇಂಧನ ದಕ್ಷತೆ ಹೆಚ್ಚಳ, ಮತ್ತು ಉತ್ತರದಾಯಿತ್ವ ಹಾಗು ಪಾರದರ್ಶಕತೆಯನ್ನು ಹೆಚ್ಚಿಸುವ ಪ್ರಮುಖ ಸುಧಾರಣೆಗಳನ್ನು ಪ್ರಾಪ್ತಿ (ಪಿ.ಆರ್.ಎ.ಎ. ಪಿ.ಟಿ.ಐ.), ಆಶ್ ಟ್ರಾಕ್ ಇತ್ಯಾದಿ ಮೊಬೈಲ್ ಅಪ್ಲಿಕೇಶನ್ ಗಳನ್ನು ಆರಂಭಿಸುವ ಮೂಲಕ ಜಾರಿಗೆ ತರಲಾಗಿದೆ.
ಇಂಧನ ಸಚಿವಾಲಯದ ವರ್ಷಾವಧಿಯ ಸಾಧನೆಯ ವಿವರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
1. . ಸೌಭಾಗ್ಯ
* ಸಾರ್ವತ್ರಿಕ ವಿದ್ಯುದ್ದೀಕರಣಕ್ಕಾಗಿ 2017 ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾಯಿತು.
* ಗ್ರಾಮ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಲಾಯಿತು, ದಾಖಲೆಗಳ ಆವಶ್ಯಕತೆ ಕನಿಷ್ಟ ಮಟ್ಟದಲ್ಲಿಡಲಾಗಿತ್ತು.
* ಆರ್ಥಿಕವಾಗಿ ದುರ್ಬಲ ವಲಯಗಳಿಗಾಗಿ ಗ್ರಾಮ ಸ್ವರಾಜ್ ಅಭಿಯಾನದಡಿಯಲ್ಲಿ ವಿಶೇಷ ಕಾರ್ಯಾಚರಣೆ.
* 2017 ರ ಅಕ್ಟೋಬರ್ 11 ರ ನಂತರ 2.1 ಕೋಟಿಗೂ ಅಧಿಕ ಮನೆಗಳ ವಿದ್ಯುದ್ದೀಕರಣ
* ಮಧ್ಯಪ್ರದೇಶ, ತ್ರಿಪುರಾ,ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಮಿಜೋರಾಂ, ಸಿಕ್ಕಿಂ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ-ಈ 9 ರಾಜ್ಯಗಳಲ್ಲಿ ಸೌಭಾಗ್ಯ ಯೋಜನೆಯಡಿ ಮನೆಗಳ ವಿದ್ಯುದ್ದೀಕರಣದಲ್ಲಿ 100 % ಸಾಧನೆ ದಾಖಲು.
· ಹೀಗೆ ದೇಶದಲ್ಲೀಗ ಒಟ್ಟು 16 ರಾಜ್ಯಗಳು ಶೇಖಡಾ 100 ಮನೆಗಳ ವಿದ್ಯುದ್ದೀಕರಣವನ್ನು ಸಾಧಿಸಿವೆ.
· ಮಹಾರಾಷ್ಟ್ರ, ಮಣಿಪುರ, ಅರುಣಾಚಲ ಪ್ರದೇಶ, ಛತ್ತೀಸ್ ಗಢ, ಇತ್ಯಾದಿ ರಾಜ್ಯಗಳು ಕನಿಷ್ಟ ಪ್ರಮಾಣದಲ್ಲಿ ಸಾರ್ವತ್ರಿಕ ಮನೆಗಳ ವಿದ್ಯುದ್ದೀಕರಣವನ್ನು ಬಾಕಿ ಉಳಿಸಿಕೊಂಡಿದ್ದು, ಸದ್ಯದಲ್ಲಿಯೇ ಯಾವ ಸಮಯದಲ್ಲಾದರೂ ಸರಿ, ಗುರಿಯನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸುವ ನಿರೀಕ್ಷೆ ಇದೆ.
· 2018 ರ ಡಿಸೆಂಬರ್ 31 ರೊಳಗೆ ದೇಶವು 100 % ಮನೆಗಳ ವಿದ್ಯುದ್ದೀಕರಣವನ್ನು ಸಾಧಿಸುವ ನಿರೀಕ್ಷೆ ಇದೆ.
2018 ರ ಜನವರಿಯಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಸೌಭಾಗ್ಯ ಯೋಜನೆಯಡಿ ಮಾಡಲಾದ ಸಾಧನೆ
* ವಿದ್ಯುದ್ದೀಕರಣ ಮಾಡಲಾದ ಮನೆಗಳ ಸಂಖ್ಯೆ- 2 ಕೋಟಿಗೂ ಅಧಿಕ.
2 .ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನಾ (ಡಿ.ಡಿ.ಯು.ಜಿ.ಕೆ.ವೈ.)
· 100 ಶೇಖಡಾ ಗ್ರಾಮೀಣ ವಿದ್ಯುದ್ದೀಕರಣ ಸಾಧಿಸಲಾಗಿದೆ.
· ಯೋಜನಾ ಗಾತ್ರ ರೂ. 75,893 ಕೋ.ರೂ.
· 2,58,870 ಕಿ.ಮೀ. ಎಚ್.ಟಿ. ಮತ್ತು ಎಲ್.ಟಿ. ಲೈನ್ ಗಳನ್ನು ಹಾಕಲಾಗಿದೆ.
* 4,10.146 ವಿತರಣಾ ಟ್ರಾನ್ಸ್ ಫಾರ್ಮರ್ ಗಳು.
3. ಉತ್ಪಾದನಾ ಸಾಮರ್ಥ್ಯ-
* 2014 ರ ಏಪ್ರಿಲ್ ತಿಂಗಳಿಂದ 2018 ರ ಅಕ್ಟೋಬರ್ ತಿಂಗಳವರೆಗೆ ಸುಮಾರು 1,07,000 ಮೆ.ವಾ. ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲಾಗಿದೆ.
* 31.3.2014 ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಇದ್ದ 2,48,554 ಮೆ.ವಾ. ಸ್ಥಾಪಿತ ಸಾಮರ್ಥ್ಯವನ್ನು 31-10-2018 ರಲ್ಲಿ 3,46,048 ಮೆ.ವಾ.ಕ್ಕೆ ಹೆಚ್ಚಿಸಲಾಗಿದ್ದು, 39.2 % ಹೆಚ್ಚಳ ದಾಖಲಿಸಿದಂತಾಗಿದೆ.
* ಭಾರತವು ಈಗ ವಿದ್ಯುತ್ತಿನ ನಿವ್ವಳ ರಫ್ತುದಾರನಾಗಿ ಮೂಡಿ ಬಂದಿದೆ. 2017-18 ರ ಆರ್ಥಿಕ ವರ್ಷದಲ್ಲಿ ನೇಪಾಳ,ಬಾಂಗ್ಲಾ ದೇಶ, ಮತ್ತು ಮ್ಯಾನ್ಮಾರ್ ಗಳಿಗೆ 7203 ಎಂ.ಯು. ವಿದ್ಯುತ್ತನ್ನು ಪೂರೈಸಿದೆ. ಮತ್ತು 2018-19 ರಲ್ಲಿ (2018 ರ ಅಕ್ಟೋಬರ್ ತಿಂಗಳವರೆಗೆ ) 4628 ಎಂ.ಯು. ವಿದ್ಯುತ್ ಪೂರೈಕೆ ಮಾಡಿದೆ.
* ಇಂಧನ ಕೊರತೆ ಹಣಕಾಸು ವರ್ಷ 2013-14 ರಲ್ಲಿ 4.2 % ಇದ್ದಿತು, ಪ್ರಸಕ್ತ ಹಣಕಾಸು ವರ್ಷ 2018-19 ರಲ್ಲಿ (2018 ರ ಅಕ್ಟೋಬರ್ ವರೆಗೆ ) ಇದು 0.6 % ಗೆ ಇಳಿಕೆಯಾಯಿತು. ಪರಮಾವಧಿ ಕೊರತೆ ಕೂಡಾ ಹಣಕಾಸು ವರ್ಷ 2013 -14ರಲ್ಲಿ 4.5 % ಇದ್ದದ್ದು, ಪ್ರಸಕ್ತ ಹಣಕಾಸು ವರ್ಷ 2018-19 ರಲ್ಲಿ (2018 ರ ಅಕ್ಟೋಬರ್ ವರೆಗೆ ) 0.8 % ಗೆ ಇಳಿಕೆಯಾಗಿದೆ.
* ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್ ತಿಂಗಳಿಂದ 2018 ರ ಅಕ್ಟೋಬರ್ ತಿಂಗಳವರೆಗೆ) ಪರಮಾವಧಿ ಬೇಡಿಕೆ ಈಡೇರಿಕೆ ಪ್ರಮಾಣ ಅಂದರೆ ಗರಿಷ್ಟ ಬೇಡಿಕೆಯ ಸಂಧರ್ಭದಲ್ಲಿ ಈಡೇರಿಕೆ ಪ್ರಮಾಣ 35.2 %ನಷ್ಟು ಹೆಚ್ಚಿದೆ. .ಅಂದರೆ 1,75,528 ಮೆ.ವಾ. ಗೇರಿದೆ. . 2013-14 ರ ಇದೇ ಅವಧಿಯಲ್ಲಿ ಇದು 1,29,815 ಮೆ.ವಾ . ಆಗಿತ್ತು.
* ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್-2018 ರ ಅಕ್ಟೋಬರ್ ತಿಂಗಳವರೆಗೆ) ಇಂಧನ ಲಭ್ಯತೆ 35.2 % ಹೆಚ್ಚಿದೆ, ಅಂದರೆ 764.624 ಬಿ.ಯು.ಗೇರಿದೆ. 2013-14 ರಲ್ಲಿ ಇದೇ ಅವಧಿಯಲ್ಲಿ ಈ ಪ್ರಮಾಣ 565.698 ಬಿ.ಯು. ಆಗಿತ್ತು.
4 . ಒಂದು ಜಾಲ ಒಂದು ರಾಷ್ಟ್ರ (2018 ರ ಅಕ್ಟೋಬರ್ ತಿಂಗಳವರೆಗಿನ ಸಾಧನೆಗಳು)
* 2014-15 ರಿಂದ 2018-19 ರ ನಡುವೆ ಸರಬರಾಜು ಜಾಲವನ್ನು 1,11,433 ಸಿ.ಕಿ.ಮೀ ವಿಸ್ತರಿಸಲಾಗಿದೆ. ( 2018-19 ರ ಹಣಕಾಸು ವರ್ಷದಲ್ಲಿ 11,799 ಸಿ.ಕಿ.ಮೀ. ಸೇರಿಸಲಾಗಿದೆ.)
* 2014-15 ರಿಂದ 2018-19 ರವರೆಗೆ 3,38,202 ಎಂ.ವಿ.ಎ. ಪರಿವರ್ತಕ ಸಾಮರ್ಥ್ಯವನ್ನು ಸೇರಿಸಲಾಗಿದೆ. (ಹಣಕಾಸು ವರ್ಷ 2018-19 ರಲ್ಲಿ 41,790 ಎಂ.ವಿ.ಎ. ಸೇರಿಸಲಾಗಿದೆ.)
* 2014-15 ರಿಂದ 2018-19 ರವರೆಗೆ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ 48,426 ಕೋ.ರೂ. ಮೌಲ್ಯದ 26 ಯೋಜನೆಗಳಿಗೆ ಗುತ್ತಿಗೆ ನೀಡಲಾಗಿದೆ.
* 2010-14 ಹಣಕಾಸು ವರ್ಷದಲ್ಲಿ 16,000 ಮೆ.ವಾ. ದಷ್ಟಿದ್ದ ಅಂತರ ಪ್ರಾದೇಶಿಕ ವರ್ಗಾವಣೆ ಸಾಮರ್ಥ್ಯವನ್ನು ಹಣಕಾಸು ವರ್ಷ 2014-15 ರಿಂದ 2018-19 ರ ಅವಧಿಯಲ್ಲಿ 54,700 ಮೆ.ವಾ. ಕ್ಕೆ ಮೂರು ಪಟ್ಟು ಹೆಚ್ಚಿಸಲಾಗಿದೆ. (ಹಣಕಾಸು ವರ್ಷ 2018-19 ರಲ್ಲಿ 4,200 ಮೆ.ವಾ. ಸೇರಿಸಲಾಗಿದೆ.)
5 . ಸಮಗ್ರ ಇಂಧನ ಅಭಿವೃದ್ಧಿ ಯೋಜನೆ (ಐ.ಪಿ.ಡಿ.ಎಸ್.)
* ಯೋಜನಾ ಗಾತ್ರ 65,424 ಕೋ.ರೂ.
* 1378 ಪಟ್ಟಣಗಳಿಗೆ ಐ.ಟಿ. ಸೌಲಭ್ಯ.
* ಹೆಚ್ಚುವರಿ 1900 ಪಟ್ಟಣಗಳಲ್ಲಿ ಪ್ರಗತಿಯಲ್ಲಿದೆ.
* ಗುತ್ತಿಗೆ ನೀಡಲಾದ ಒಟ್ಟು 1,30,348 ಕಿ.ಮೀ.ಯಲ್ಲಿ 43,449 ಕಿ.ಮೀ. ಎಚ್.ಟಿ ಮತ್ತು ಎಲ್.ಟಿ. ಲೈನ್ ಗಳ ಸ್ಥಾಪನೆ ಪೂರ್ಣಗೊಂಡಿದೆ.
* ಗುತ್ತಿಗೆ ನೀಡಲಾದ ಒಟ್ಟು 58,145 ವಿತರಣಾ ಪರಿವರ್ತಕಗಳಲ್ಲಿ 28,193 ವಿತರಣಾ ಪರಿವರ್ತಕಗಳ ಸ್ಥಾಪನೆ ಪೂರ್ಣಗೊಂಡಿದೆ.
6. ಉದಯ್ (ಯು.ಡಿಎ.ವೈ.)
* ಎರಡು ವರ್ಷಗಳ ಅವಧಿಯಲ್ಲಿ ಉದಯ್ ಯೋಜನೆಯಡಿ ಡಿಸ್ಕಾಂಗಳು 34,000 ಕೋ.ರೂ.ಗಳಿಗೂ ಅಧಿಕ ಬಡ್ಡಿ ವೆಚ್ಚವನ್ನು ಉಳಿತಾಯ ಮಾಡಿವೆ.
* 22 ರಾಜ್ಯಗಳಲ್ಲಿ ಎರಡು ವರ್ಷಗಳ ಅವಧಿಯ ಕಾರ್ಯಾಚರಣೆಯಲ್ಲಿ ಎ.ಟಿ. ಮತ್ತು ಸಿ ನಷ್ಟ ಕಡಿಮೆಯಾಗಿದೆ. ಹಣಕಾಸು ವರ್ಷ 16 ರಲ್ಲಿ ಇದ್ದ 20.77 % ಎ.ಟಿ. ಮತ್ತು ಸಿ. ನಷ್ಟ ಪ್ರಮಾಣ ಹಣಕಾಸು ವರ್ಷ 18 ರಲ್ಲಿ 18.76 %ಗೆ ಇಳಿದಿದೆ. ಉದಯ್ ಕಾರ್ಯಾಚರಣೆಯ ಎರಡು ವರ್ಷಗಳಲ್ಲಿ ಆದಾಯ ಅಂತರ 72 ಶೇಖಡಾದಷ್ಟು ಸುಧಾರಿಸಿದೆ. ಹಣಕಾಸು ವರ್ಷ 18 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎ.ಸಿ.ಎಸ್. –ಎ.ಆರ್.ಆರ್. ಅಂತರ ಯೂನಿಟ್ ಒಂದರ ೧೭ ಪೈಸೆಯಷ್ಟಿತ್ತು, ಹಣಕಾಸು ವರ್ಷ 16 ರಲ್ಲಿ ಇದು ಯೂನಿಟ್ ಒಂದರ 60 ಪೈಸೆಯಷ್ಟಿತ್ತು.
* ವಿಶ್ವಬ್ಯಾಂಕಿನ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣದಲ್ಲಿ “ವಿದ್ಯುತ್ ಪಡೆಯುವ” ಶ್ರೇಯಾಂಕದಲ್ಲಿ ಭಾರತದ ಸ್ಥಾನ 2014 ರಲ್ಲಿ 137ರಲ್ಲಿತ್ತು, 2018 ರಲ್ಲಿ ಅದು 24 ಕ್ಕೆ ಏರಿದೆ.
7. ಈಶಾನ್ಯ ವಲಯಕ್ಕೆ ಗಮನ-
* ಎನ್.ಇ.ಆರ್. (ಸಿಕ್ಕಿಂ ಸಹಿತ ) ನಲ್ಲಿ ರಾಜ್ಯದೊಳಗಿನ ಸರಬರಾಜು ಮತ್ತು ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು/ ಅಬಿವೃದ್ಧಿಪಡಿಸಲು 9865.75 ಕೋ.ರೂ.ಗಳ ಯೋಜನೆಗಳು ಪ್ರಗತಿಯಲ್ಲಿವೆ.
· 6379 ಗ್ರಾಮಗಳ ವಿದ್ಯುದ್ದೀಕರಣ ಮತ್ತು 9822 ಗ್ರಾಮಗಳ ತ್ವರಿತ ವಿದ್ಯುದ್ದೀಕರಣ ಪೂರ್ಣಗೊಂದಿದೆ.
· 130 ಪಟ್ಟಣಗಳಿಗೆ ಐ.ಟಿ. ಸೌಲಭ್ಯ.
· ಉಜಾಲಾ ಯೋಜನೆಯಡಿಯಲ್ಲಿ 68.76 ಲಕ್ಷ ಎಲ್.ಇ.ಡಿ. ಬಲ್ಬುಗಳ ವಿತರಣೆ.
· ಎಸ್.ಎಲ್.ಎನ್.ಪಿ. ಯೋಜನೆಯಡಿ 99,895 ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆ.
· ರಾಜ್ಯದೊಳಗೆ ಸರಬರಾಜು ವ್ಯವಸ್ಥೆಯನ್ನು ಬಲಪಡಿಸಲು/ಅಭಿವೃದ್ಧಿಪಡಿಸಲು 9866 ಕೋ.ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
8. 4376 ಮೆ.ವಾ. ಜಲ ವಿದ್ಯುತ್ ಸಾಮರ್ಥ್ಯದ ಸೇರ್ಪಡೆ (ಹಣಕಾಸು ವರ್ಷ 2014-18ರ ಅವಧಿಯಲ್ಲಿ )
9. ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣೆ.
i. ಎಲ್ಲರಿಗೂ ಕೈಗೆಟಕುವ ದರದಲ್ಲಿ ಎಲ್.ಇ.ಡಿ.ಗಳ ಉನ್ನತ್ ಜ್ಯೋತಿ (ಉಜಾಲಾ)
· ಉಜಾಲಾ ಯೋಜನೆಯಡಿ 31.68 ಕೋಟಿ ಎಲ್.ಇ.ಡಿ. ಬಲ್ಬುಗಳನ್ನು ವಿತರಿಸಲಾಗಿದ್ದು, ಇದರಿಂದ ವರ್ಷಕ್ಕೆ ಅಂದಾಜು 16,457 ಕೋ.ರೂ. ವೆಚ್ಚ ಉಳಿಕೆಯಾಗಿದೆ ಮತ್ತು ಅಂದಾಜು 41.14 ಬಿಲಿಯನ್ ಕಿ.ಡಬ್ಲ್ಯು.ಎಚ್. ಇಂಧನ ಉಳಿಕೆಯಾಗಿದೆ, ಪರಮಾವಧಿ ಬೇಡಿಕೆ 8,232 ಮೆ.ವಾ. ನಿಭಾವಣೆಯಾಗಿದೆ ಮತ್ತು ಜಿ.ಎಚ್.ಜಿ.ಹೊರಸೂಸುವಿಕೆ ವರ್ಷಕ್ಕೆ 33.32 ಮಿಲಿಯನ್ ಟನ್ ನಷ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಇಳಿಕೆಯಾಗಿದೆ.
· ಬೇಡಿಕೆ ಸಮಷ್ಟಿಗೊಳಿಸಿದುದರಿಂದ ಎಲ್.ಇ.ಡಿ.ಬಲ್ಬ್ ಖರೀದಿ ವೆಚ್ಚದಲ್ಲಿ 88 ಪ್ರತಿಶತ ಇಳಿಕೆಯಾಗಿದೆ.
ii. ಬೀದಿ ದೀಪಗಳ ರಾಷ್ಟ್ರೀಯ ಕಾರ್ಯಕ್ರಮ (ಎಸ್.ಎಲ್.ಎನ್.ಪಿ.)
· 1.34 ಕೋಟಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ 2019 ರ ಮಾರ್ಚ್ ತಿಂಗಳೊಳಗೆ ಸ್ಮಾರ್ಟ್ ಮತ್ತು ಇಂಧನ ದಕ್ಷ ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆ.
· 74.79 ಲಕ್ಷ ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆಯಿಂದಾಗಿ ವರ್ಷಕ್ಕೆ ಅಂದಾಜು 5.02 ಬಿಲಿಯನ್ ಕೆ.ಡಬ್ಲ್ಯು.ಎಚ್. ಇಂಧನ ಉಳಿತಾಯವಾಗಿದೆ. ಪರಮಾವಧಿ ಬೇಡಿಕೆ 837 ಮೆ.ವಾ. ನಿಭಾವಣೆಯಾಗಿದೆ ಮತ್ತು ಜಿ.ಎಚ್.ಜಿ. ವಿಸರ್ಜನೆಯಲ್ಲಿ ವರ್ಷಕ್ಕೆ 3.46 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗಿದೆ.
2015 ರ ಜನವರಿ 5 ರಂದು ಆರಂಭಿಸಲಾದ ರಾಷ್ಟ್ರೀಯ ಎಲ್.ಇ.ಡಿ. ಕಾರ್ಯಕ್ರಮ ಅನುಷ್ಟಾನದ ಇದುವರೆಗಿನ ಪ್ರಗತಿ ಈ ಕೆಳಗಿನಂತಿದೆ.
ಮಾನದಂಡಗಳು
|
ಉಜಾಲಾ
|
ಎಸ್.ಎಲ್.ಎನ್.ಪಿ.
|
ಒಟ್ಟು ವಿತರಣೆ ಮಾಡಲಾದ / ಬೀದಿ ದೀಪಗಳಲ್ಲಿ ಅಳವಡಿಕೆ ಮಾಡಲಾದ ಎಲ್.ಇ.ಡಿ. ಬಲ್ಬುಗಳ
|
31.68 ಕೋಟಿ
|
74.79 ಲಕ್ಷ
|
ವರ್ಷವೊಂದರಲ್ಲಿ ಉಳಿತಾಯ ಮಾಡಲಾದ ಇಂಧನದ ಅಂದಾಜು ಪ್ರಮಾಣ
|
41,142 ಮಿಲಿಯನ್ ಕೆ.ಡಬ್ಲ್ಯು.ಎಚ್.
|
5,023 ಮಿಲಿಯನ್ ಕೆ.ಡಬ್ಲ್ಯು.ಎಚ್.
|
ಗರಿಷ್ಟ ವಿದ್ಯುತ್ ಬೇಡಿಕೆ ಸಂದರ್ಭದಲ್ಲಿ ಗರಿಷ್ಟ ಬೇಡಿಕೆ /ಗರಿಷ್ಟ ಸಾಮರ್ಥ್ಯದ ನಿಭಾವಣೆ
|
8,237 ಮೆವಾ
|
837 ಮೆವಾ
|
ವರ್ಷವೊಂದರಲ್ಲಿ ಜಿ.ಎಚ್.ಜಿ. ಕಾರ್ಬನ್ ಡೈಆಕ್ಸೈಡ್ ವಿಸರ್ಜನಾ ಪ್ರಮಾಣದಲ್ಲಾದ ಇಳಿಕೆ
|
33.32 ಮಿಲಿಯನ್ ಟಿ CO2
|
3.46 ಮಿಲಿಯನ್ ಟಿ CO2
|
iii. ಸಾರಿಗೆ ವಲಯ
ರಾಷ್ಟ್ರೀಯ ಇ-ಸಂಚಾರ ಕಾರ್ಯಕ್ರಮವನ್ನು ಇ-ಸಂಚಾರ ಪರಿಸರ ವ್ಯವಸ್ಥೆ ಗೆ ವೇಗ ಒದಗಿಸಲು ಆರಂಭಿಸಲಾಗಿದೆ. ಇದರಲ್ಲಿ ವಾಹನಗಳ ಉತ್ಪಾದಕರು, ವಿದ್ಯುತ್ ಮರುಪೂರಣ ಮೂಲಸೌಕರ್ಯ ಕಂಪೆನಿಗಳು, ಸಾರಿಗೆ ಆಪರೇಟರುಗಳು, ಸೇವಾ ಪೂರೈಕೆದಾರರು ಮತ್ತಿತರರು ಒಳಗೊಂಡಿದ್ದಾರೆ.
* ವಿದ್ಯುತ್ ಮರುಪೂರಣ ಕೇಂದ್ರಗಳಿಗೆ ಪರವಾನಗಿ ಬೇಕಿಲ್ಲ.
· ಸರಕಾರಿ ಸಂಸ್ಥೆಗಳಿಗೆ 10,000 ಇ-ಕಾರುಗಳನ್ನು ಖರೀದಿಸುವ ಪ್ರಕ್ರಿಯೆ ಪೂರ್ಣ
· 902 ಇ-ಕಾರುಗಳನ್ನು ರಸ್ತೆಗಿಳಿಸಲಾಗುತ್ತಿದೆ/ನೋಂದಣಿ ಹಂತದಲ್ಲಿವೆ.
iv ಬಿ.ಇ.ಇ. ನಕ್ಷತ್ರ ಲೇಬಲಿಂಗ್
· ಇಂಧನ ದಕ್ಷ ಶೀತಲ ವ್ಯವಸ್ಥೆಗಳ ಅಬಿವೃದ್ದಿಯನ್ನು ಉತ್ತೇಜಿಸಲು ಶೀತಲ ಯಂತ್ರಗಳಿಗೆ ನಕ್ಷತ್ರ ಲೇಬಲಿಂಗ್ ಕಾರ್ಯಕ್ರಮವನ್ನು ಇಂಧನ ದಕ್ಷತೆ ಬ್ಯೂರೋ (ಬಿ.ಇ.ಇ.) ಆರಂಭಿಸಿದೆ. ಈ ಕಾರ್ಯಕ್ರಮವು ಅದರ ಇಂಧನ ಸಾಧನೆಯನ್ನು ಅವಲಂಬಿಸಿ ನಕ್ಷತ್ರ ಶ್ರೇಯಾಂಕವನ್ನು ನೀಡಲಿದೆ. ಆರಂಭಿಕವಾಗಿ , ಈ ಕಾರ್ಯಕ್ರಮವನ್ನು ಸ್ವಯಂಸೇವಾ ಆಧಾರದಲ್ಲಿ ಆರಂಭಿಸಲಾಗಿದ್ದು, ಅದು 2020 ರ ಡಿಸೆಂಬರ್ 31 ರ ವರೆಗೆ ಜಾರಿಯಲ್ಲಿರುತ್ತದೆ.
· ಎಲ್.ಇ.ಡಿ. ಮತ್ತು ಇನ್ ವರ್ಟರ್ ಎ.ಸಿ. , ಗಳನ್ನು ಕಡ್ಡಾಯ ವ್ಯವಸ್ಥೆಯಡಿ ಅಧಿಸೂಚಿಸಲಾಗಿದೆ. ನಕ್ಷತ್ರ ಲೇಬಲಿಂಗ್ ಕಾರ್ಯಕ್ರಮವನ್ನು ವೇಗವನ್ನು ಬದಲಾಯಿಸುವ ವ್ಯವಸ್ಥೆಯುಳ್ಳ ಹವಾ ನಿಯಂತ್ರಕಗಳಿಗೆ ಮತ್ತು ಎಲ್.ಇ.ಡಿ. ದೀಪಗಳಿಗೆ 2017 ರಲ್ಲಿಯೇ ಕಡ್ದಾಯ ಮಾಡಿ ಅಧಿಸೂಚಿಸಲಾಗಿದೆ. ಇದರ ಅನುಷ್ಟಾನ 2018 ರ ಜನವರಿ 1 ರಿಂದ ಜಾರಿಗೆ ಬಂದಿದೆ.
· ನಕ್ಷತ್ರ ಲೇಬಲಿಂಗ್ ಕಾರ್ಯಕ್ರಮ 2017-18 ರ ಅವಧಿಯಲ್ಲಿ 22,500 ಕೋ.ರೂ.ಗಳ ಮೌಲ್ಯದ ಇಂಧನವನ್ನು ಉಳಿತಾಯ ಮಾಡಿದೆ.
v .ಕೈಗಾರಿಕಾ ಇಂಧನ ದಕ್ಷತೆ
· ಬೃಹತ್ ಕೈಗಾರಿಕೆಗಳ ಇಂಧನ ದಕ್ಷತೆಯನ್ನು ಪಿ.ಎ.ಟಿ. ಮೂಲಕ ಅನುಷ್ಟಾನಿಸಲಾಗುತ್ತಿದ್ದು, ವಾರ್ಷಿಕ 9500 ಕೋ.ರೂ. ಮೌಲ್ಯದ ಇಂಧನ ಉಳಿತಾಯ ಮಾಡಲಾಗಿದೆ.
· 13 ವಲಯಗಳ 846 ಡಿ.ಸಿ.ಗಳಿಗೆ ಪಿ.ಎ.ಟಿ. ವರ್ತುಲ IV ನ್ನು ಅಧಿಸೂಚಿಸಲಾಗಿದೆ.
vi . ಇಂಧನ ದಕ್ಷತೆ ನಿರ್ಮಾಣ.
· ಬೃಹತ್ ಪ್ರಮಾಣದ ಕೈಗಾರಿಕೆಗಳಲ್ಲಿ ಇಂಧನ ಬಳಸುವ ವಿವಿಧ ಉಪಕರಣಗಳ ಇಂಧನ ದಕ್ಷತೆ ಉತ್ತೇಜಿಸಲು ಇಂಧನ ಸಂರಕ್ಷಣೆ ಮಾರ್ಗದರ್ಶಿಗಳನ್ನು ಹೊರಡಿಸಲಾಗಿದೆ. ವಿವಿಧ ಇಂಧನ ಬಳಕೆ ಉಪಕರಣಗಳು ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಕಾರ್ಯಾಚರಿಸುವ ವ್ಯವಸ್ಥೆಯ ಇಂಧನ ಸಾಧನೆ ಮೌಲ್ಯಗಳ ಪ್ರಮಾಣ ನಿಷ್ಕರ್ಷೆ ಮಾಡಿ ಅದರ ಸಹಾಯದಿಂದ ಇಂಧನ ಬಳಕೆಯನ್ನು ಕಡಿಮೆ ಮಾಡಿ ಯಂತ್ರೋಪಕರಣ ದಕ್ಷತೆಯನ್ನು ಉತ್ತೇಜಿಸುವುದು ಇದರ ಉದ್ದೇಶ.
10..ಡಿಜಿಟಲ್ ಉಪಕ್ರಮಗಳು-
· ಭೀಮ್ (ಬಿ.ಎಚ್.ಐ.ಎಂ.) ಬಿ.ಬಿ.ಪಿ.ಎಸ್., ಭಾರತ್ ಕ್ಯೂ ಆರ್ ಇತ್ಯಾದಿ ಎನ್.ಪಿ.ಸಿ.ಐ. ವೇದಿಕೆಗಳ ಮೂಲಕ ಪಾವತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 2017-18 ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬಿಲ್ ಪಾವತಿಯಲ್ಲಿ 24 ಕೋಟಿಗೂ ಅಧಿಕ ಡಿಜಿಟಲ್ ವರ್ಗಾವಣೆಗಳು ನಡೆದಿವೆ.
· ಪಾರದರ್ಶಕತೆಯನ್ನು ತರಲು ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲು ಇಂಧನ ಸಚಿವಾಲಯವು ಈ ಕೆಳಗಿನ ಆಪ್ ಗಳನ್ನು ಆರಂಭಿಸಿದೆ.
· ಪ್ರಾಪ್ತಿ (ಪಿ.ಆರ್.ಎ.ಎ.ಪಿ.ಟಿ.ಐ.) : ಜಾಲ ತಾಣ ಮತ್ತು ಆಪ್ ಆಗಿರುವ ಪಿ.ಆರ್.ಎ.ಎ.ಪಿ.ಟಿ.ಐ.( ಪಾವತಿ ದೃಢೀಕರಣ ಮತ್ತು ಇಂಧನ ಖರೀದಿಯಲ್ಲಿ ವಿಶ್ಲೇಷಣೆ ) ಯನ್ನು ಉತ್ಪಾದನೆಯನ್ನು ಉತ್ಪಾದಕರಿಂದ ಖರೀದಿಸುವಾಗ ಪಾರದರ್ಶಕತೆಯನ್ನು ತರುವುದಕ್ಕಾಗಿ ಆರಂಭಿಸಲಾಗಿದೆ. www.praapti.in, ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.
· ಆಶ್ ಟ್ರ್ಯಾಕ್ –ಬೂದಿ ಬಳಕೆಯನ್ನು ಉತ್ತಮಪಡಿಸಲು ಹಾರು ಬೂದಿ ಬಳಕೆದಾರರು ಮತ್ತು ಇಂಧನ ಸ್ಥಾವರಗಳನ್ನು ಸಂಪರ್ಕಿಸುವ ವ್ಯವಸ್ಥೆ. ಆಶ್ ಟ್ರ್ಯಾಕ್- ವೆಬ್ ಆಧಾರಿತ ಮೇಲುಸ್ತುವಾರಿ ವ್ಯವಸ್ಥೆಯಾಗಿದೆ ಮತ್ತು ಹಾರು ಬೂದಿ ಮೊಬೈಲ್ ಅಪ್ಲಿಕೇಶನ್ ಆಗಿದೆ. ಈ ವೇದಿಕೆಗಳು ಹಾರು ಬೂದಿ ತಯಾರಕರು (ಉಷ್ಣ ವಿದ್ಯುತ್ ಸ್ಥಾವರಗಳು) ಮತ್ತು ಹಾರು ಬೂದಿ ಬಳಕೆದಾರರಾದ ರಸ್ತೆ ಗುತ್ತಿಗೆದಾರರು, ಸಿಮೆಂಟ್ ಸ್ಥಾವರಗಳು ಇತ್ಯಾದಿಗಳ ನಡುವೆ ಮಧ್ಯಂತರ ವ್ಯವಸ್ಥೆಯನ್ನು ರೂಪಿಸಿ ಉಷ್ಣ ವಿದ್ಯುತ್ ಸ್ಥಾವರಗಳು ಉತ್ಪಾದಿಸುವ ಬೂದಿಯ ಉತ್ತಮ ನಿರ್ವಹಣೆಗೆ ಸಹಕಾರಿಯಾಗಲಿವೆ.
11. ಮಾಲಿನ್ಯ ವಿರುದ್ದ ಹೋರಾಟ:
· ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವಾಗ ಕಲ್ಲಿದ್ದಲಿನ ಜೊತೆ 5-10 % ಬಯೋಮಾಸ್ ಪೆಲೆಟ್ ಗಳನ್ನು ಬಳಸಲು ಇಂಧನ ಸಚಿವಾಲಯವು ನೀತಿಯೊಂದನ್ನು ಜಾರಿಗೆ ತಂದಿದೆ.
· ಬಯೋ ಮಾಸ್ ಗುಳಿಗೆಗಳನ್ನು ಉತ್ತೇಜಿಸಲು ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರ (ಸಿ.ಇ.ಎ.) ಯು ಎಲ್ಲಾ ಕೇಂದ್ರ/ರಾಜ್ಯ ಸೌಕರ್ಯ ವ್ಯವಸ್ಥೆಗಳಿಗೆ , ರಾಜ್ಯ ಸರಕಾರಗಳಿಗೆ, ಇಂಧನ ಯಂತ್ರೋಪಕರಣ ಉತ್ಪಾದಕರು/ ಸಮಗ್ರ ವಿದ್ಯುತ್ ಉತ್ಪಾದಕರು / ಉತ್ಪಾದನಾ ಕಂಪೆನಿಗಳಿಗೆ ಪತ್ರ ಬರೆದು ಚೆಂಡು ಮತ್ತು ಕೊಳವೆ ಸ್ಥಾವರಗಳನ್ನು ಹೊರತುಪಡಿಸಿ, ದ್ರವೀಕೃತ ನೆಲಹಾಸು ಮತ್ತು ಕಲ್ಲಿದ್ದಲು ಹುಡಿಯಿಂದ ವಿದ್ಯುತ್ ಉತ್ಪಾದಿಸುವ ಸೌಕರ್ಯಗಳು (ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳು) ಸುರಕ್ಷೆ ಮತ್ತು ಇತರ ತಾಂತ್ರಿಕ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಕೃಷಿ ತ್ಯಾಜ್ಯದಿಂದ ತಯಾರಿಸಲಾದ ಬಯೋಮಾಸ್ ಗುಳಿಗೆಗಳನ್ನು 5-10 % ನಷ್ಟು ಪ್ರಮಾಣದಲ್ಲಿ ಕಲ್ಲಿದ್ದಲಿನೊಂದಿಗೆ ಬಳಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ತಿಳಿಸಿದೆ.
12.ಸುಧಾರಣೆಗಳು
· ಪುನರ್ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಇಂಧನ ಸಚಿವಾಲಯವು ಸೌರ ಹಾಗು ಗಾಳಿ ಆಧಾರಿತ ಯೋಜನೆಗಳಿಗೆ 2022 ರ ಮಾರ್ಚ್ ವರೆಗೆ ಐ.ಎಸ್.ಟಿ.ಎಸ್. ಸರಬರಾಜು ದರಗಳು ಮತ್ತು ನಷ್ಟವನ್ನು ಮನ್ನಾ ಮಾಡಲು ಅವಧಿ ವಿಸ್ತರಣೆ ಮಾಡಿದೆ.
· * 2022 ರ ವೇಳೆಗೆ 1,75,000 ಮೆವಾ. ಪುನರ್ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಗುರಿ ಸಾಧನೆಗಾಗಿ ಎಂ.ಒ.ಪಿ.ಯು ಸೌರ ಹಾಗು ಸೌರೇತರ ಇಂಧನ ಖರೀದಿಗಾಗಿ 2022ರವರೆಗೆ ಧೀರ್ಘಾವಧಿ ಬೆಳವಣಿಗೆ ಪಥವನ್ನೊಳಗೊಂಡ ಪುನರ್ನವೀಕರಿಸಬಹುದಾದ ಇಂಧನ ಖರೀದಿ ನಿಬಂಧನೆಯನ್ನು (ಆರ್.ಪಿ.ಒ.) ಜಾರಿ ಮಾಡಿದೆ.
· ಪುನರ್ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮತ್ತು ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎಂ.ಒ.ಪಿ.ಯು ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆಯಲ್ಲಿ ಮತ್ತು ಕಾಲಮಿತಿಯಲ್ಲಿ ಹೊಂದಾಣಿಕೆ ಮಾಡುವ ಯೋಜನೆಯನ್ನು ರೂಪಿಸಿದೆ.
· ಎಂ.ಒ.ಪಿ.ಯು 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 107ರಡಿಯಲ್ಲಿ ಸಿ.ಇ.ಆರ್.ಸಿ.ಗೆ 2018 ರ ಮೇ 30 ರಂದು ನಿರ್ದೇಶನ ನೀಡಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಎಂ.ಒ.ಇ.ಎಫ್. ಮತ್ತು ಸಿ.ಸಿ. ಸಲಹೆ ಮಾಡಿದ ಪರಿಸರ ಮಾನದಂಡಗಳನ್ನು ಅನುಷ್ಟಾನಿಸುವಂತೆ ಸೂಚಿಸಿದೆ.
· . ಉತ್ಪಾದನೆಯ ಒಟ್ಟು ವೆಚ್ಚ ಕಡಿಮೆ ಮಾಡುವ ಮತ್ತು ಮತ್ತು ಬಳಕೆದಾರರ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ (ಕಂಪೆನಿ ಮಟ್ಟದ ಮೆರಿಟ್ ಶ್ರೇಣಿ ಕಾರ್ಯಾಚರಣೆ), ಎಂ.ಒ.ಪಿ.ಯು ಉತ್ಪಾದನೆಯಲ್ಲಿ ಹೊಂದಾಣಿಕೆ ಹಾಗು ಉಷ್ಣ ವಿದ್ಯುತ್ ಸ್ಥಾವರಗಳನ್ನು ಬಳಕೆದಾರರ ವಿದ್ಯುತ್ ಖರ್ಚನ್ನು ಕಡಿಮೆ ಮಾಡುವಂತೆ ವ್ಯವಸ್ಥೆಗೊಳಿಸುವ ಯೋಜನೆಯನ್ನು ರೂಪಿಸಿದೆ.
· ಒತ್ತಡದಲ್ಲಿರುವ ಆಸ್ತಿಗಳ ಪುನಃಶ್ಚೇತನಕ್ಕೆ ಸಂಬಂಧಿಸಿ ನಮ್ಮ ಯತ್ನವಾಗಿ , ಈಗಾಗಲೇ ವಿದ್ಯುತ್ ಖರೀದಿ ಒಪ್ಪಂದ ಇಲ್ಲದೆ ಕಾರ್ಯಾಚರಿಸುತ್ತಿರುವ, ಬಿಡ್ಡರ್ ಬಿಡ್ ಮಾಡಲು ಇಚ್ಚಿಸುವ ವಿದ್ಯುತ್ತಿನ ಪ್ರಮಾಣಕ್ಕನುಗುಣವಾಗಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಂದ ಮೂರು ವರ್ಷಗಳ ಅವಧಿಗೆ (ಮಧ್ಯಮ ಅವಧಿಯ ವ್ಯಾಪ್ತಿಯಲ್ಲಿ ) ಸರಾಸರಿ 2500 ಮೆ.ವಾ. ವಿದ್ಯುತ್ತನ್ನು ಖರೀದಿಸಲು ಎಂ.ಒ.ಪಿ.ಯು 2018 ರ ಏಪ್ರಿಲ್ ತಿಂಗಳಲ್ಲಿ ಪೈಲೆಟ್ ಯೋಜನೆಯೊಂದನ್ನು ಆರಂಭಿಸಿದೆ.
· ವಿದ್ಯುತ್ ವಲಯ ಎದುರಿಸುತ್ತಿರುವ ವಿವಿಧ ವಿಷಯ, ಸಮಸ್ಯೆಗಳನ್ನು ಪರಿಹರಿಸಲು ಇಂಧನ ಸಚಿವಾಲಯವು 2003 ರ ವಿದ್ಯುತ್ ಕಾಯ್ದೆ ಮತ್ತು 2016 ರ ದರ ನೀತಿಯಲ್ಲಿ ಕರಡು ತಿದ್ದುಪಡಿಗಳನ್ನು ಪ್ರಸ್ತಾವಿಸುವ ಮೂಲಕ ಪ್ರಮುಖ ಸುಧಾರಣಾ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದ್ಯುತ್ ಕಾಯ್ದೆಗೆ ಸಂಬಂಧಿಸಿ ಕರಡು ತಿದ್ದುಪಡಿಗಳನ್ನು ಭಾಗೀದಾರರ ಅಭಿಪ್ರಾಯಕ್ಕಾಗಿ 7-9-2018 ರಂದು ವಿತರಿಸಲಾಗಿದೆ ಮತ್ತು ದರ ನೀತಿಗೆ ಸಂಬಂಧಿಸಿದ ಕರಡು ತಿದ್ದುಪಡಿಗಳನ್ನು 30-5-2018 ರಂದು ಭಾಗೀದಾರರಿಗೆ ವಿತರಿಸಲಾಗಿದೆ.
· ಒತ್ತಡದಲ್ಲಿರುವ ಆಸ್ತಿಗಳ ಪುನಃಶ್ಚೇತನಕ್ಕೆ ಸಂಬಂಧಿಸಿ ನಮ್ಮ ಯತ್ನವಾಗಿ ಎಂ.ಒ.ಪಿ.ಯು ಈಗಾಗಲೇ ವಿದ್ಯುತ್ ಖರೀದಿ ಒಪ್ಪಂದ ಇಲ್ಲದೆ ಕಾರ್ಯಾಚರಿಸುತ್ತಿರುವ, ಬಿಡ್ಡರ್ ಬಿಡ್ ಮಾಡಲು ಇಚ್ಚಿಸುವ ವಿದ್ಯುತ್ತಿನ ಪ್ರಮಾಣಕ್ಕನುಗುಣವಾಗಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಂದ ಮೂರು ವರ್ಷಗಳ ಅವಧಿಗೆ (ಮಧ್ಯಮ ಅವಧಿಯ ವ್ಯಾಪ್ತಿಯಲ್ಲಿ ) ಸರಾಸರಿ 2500 ಮೆ.ವಾ. ವಿದ್ಯುತ್ತನ್ನು ಖರೀದಿಸಲು 2018 ರ ಏಪ್ರಿಲ್ ತಿಂಗಳಲ್ಲಿ ಪೈಲೆಟ್ ಯೋಜನೆಯೊಂದನ್ನು ಆರಂಭಿಸಿದೆ.
· ವಿದ್ಯುತ್ ವಲಯ ಎದುರಿಸುತ್ತಿರುವ ವಿವಿಧ ವಿಷಯ, ಸಮಸ್ಯೆಗಳನ್ನು ಪರಿಹರಿಸಲು ಇಂಧನ ಸಚಿವಾಲಯವು 2003 ರ ವಿದ್ಯುತ್ ಕಾಯ್ದೆ ಮತ್ತು 2016 ರ ದರ ನೀತಿಯಲ್ಲಿ ಕರಡು ತಿದ್ದುಪಡಿಗಳನ್ನು ಪ್ರಸ್ತಾವಿಸುವ ಮೂಲಕ ಪ್ರಮುಖ ಸುಧಾರಣಾ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದ್ಯುತ್ ಕಾಯ್ದೆಗೆ ಸಂಬಂಧಿಸಿ ಕರಡು ತಿದ್ದುಪಡಿಗಳನ್ನು ಭಾಗೀದಾರರ ಅಭಿಪ್ರಾಯಕ್ಕಾಗಿ 7-9-2018 ರಂದು ವಿತರಿಸಲಾಗಿದೆ ಮತ್ತು ದರ ನೀತಿಗೆ ಸಂಬಂಧಿಸಿದ ಕರಡು ತಿದ್ದುಪಡಿಗಳನ್ನು 30-5-2018 ರಂದು ಭಾಗೀದಾರರಿಗೆ ವಿತರಿಸಲಾಗಿದೆ.
(Release ID: 1556944)
Visitor Counter : 199