ಪ್ರಧಾನ ಮಂತ್ರಿಯವರ ಕಛೇರಿ

ಅನುಕೂಲಕರ ವ್ಯಾಪಾರ ಮಾಡುವ ವ್ಯವಸ್ಥೆಯ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಸುಧಾರಣಾ ಕ್ರಮಗಳನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ 

Posted On: 13 DEC 2018 7:54PM by PIB Bengaluru

ಅನುಕೂಲಕರ ವ್ಯಾಪಾರ ಮಾಡುವ ವ್ಯವಸ್ಥೆಯ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಸುಧಾರಣಾ ಕ್ರಮಗಳನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ 
 

ಅನುಕೂಲಕರ ವ್ಯಾಪಾರ ಮಾಡುವ ವ್ಯವಸ್ಥೆಗಳ ( ಈಸ್ ಆಫ್ ಡುಯಿಂಗ್ ಬಿಸಿನೆಸ್ ) ಸುಧಾರಣೆ ನಿಟ್ಟಿನಲ್ಲಿ ಇಂದು ಜರುಗಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದರು. 

ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟ ಕೇಂದ್ರ ಸರಕಾರದ ಹಿರಿಯ ಸಚಿವರು, ಮಹಾರಾಷ್ಟರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್ ಹಾಗೂ ಕೇಂದ್ರ ಸರಕಾರ, ಮಹಾರಾಷ್ಟ್ರ ಸರಕಾರ ಮತ್ತು ದೆಹಲಿ ಸರಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಅನುಕೂಲಕರ ವ್ಯಾಪಾರ ಮಾಡುವ ವ್ಯವಸ್ಥೆ ( ಈಸ್ ಆಫ್ ಡುಯಿಂಗ್ ಬಿಸಿನೆಸ್ ) ಸಂಬಂಧಿತ ವಿವಿಧ ಮಾನದಂಡಗಳಲ್ಲಿ ಆಗಿರುವ ಪ್ರಗತಿಯ ಮಾಹಿತಿಯನ್ನು ಪ್ರಧಾನಮಂತ್ರಿ ಅವರಿಗೆ ನೀಡಲಾಯಿತು. ನಿರ್ಮಾಣ ಅನುಮತಿಗಳು, ಗುತ್ತಿಗೆಯ ಜಾರಿ, ಭೂಮಿ ನೋಂದಾವಣೆ, ವ್ಯಾಪಾರ ಪ್ರಾರಂಭಿಸುವುದು, ವಿದ್ಯುತ್ ಸಂಪರ್ಕ ಪಡೆಯುವುದು, ಸಾಲ ಪಡೆಯುವುದು ಮತ್ತು ದಿವಾಳಿತನ ನಿವಾರಣೆ ಮುಂತಾದ ವಿಷಯಗಳೂ ಸಂವಾದದ ಸಂದರ್ಭದಲ್ಲಿ ಉಲ್ಲೇಖಿತವಾದವು. 

ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವ ಬ್ಯಾಂಕಿನ ''ಡುಯಿಂಗ್ ಬಿಸಿನೆಸ್ಸ್'' ಶ್ರೇಯಾಂಕ ಶ್ರೇಣಿಯಲ್ಲಿ 142 ರಿಂದ 77ಕ್ಕೆ ಭಾರತ ಏರಿಕೆಯಾದುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಯಿತು. 

ವ್ಯಾಪಾರ ಸುಧಾರಣೆ ಮತ್ತು ಅನುಷ್ಠಾನದಲ್ಲಿ ಅಡೆತಡೆಗಳನ್ನು ಸರಿಪಡಿಸಲು ಮತ್ತು ಕುಂದುಕೊರತೆಗಳನ್ನು ನೀಗಿಸಲು ಇಟ್ಟಿರುವ ಹೆಜ್ಜೆಗಳ ಬಗ್ಗೆ ಅಧಿಕಾರಿಗಳು ವಿವರಿಸಿದರು. 

ಪ್ರಕ್ರಿಯೆಗಳನ್ನು ಸರಳಿಕರಿಸುವುದು ಮತ್ತು ಕೊನೆಯ ತನಕ ವಿತರಣೆ ಸಮರ್ಪಕವಾಗಿ ನಡೆಯುವಂತೆ ವ್ಯವಸ್ಥೆಯನ್ನು ಸುಧಾರಿಸಲು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದರಿಂದಾಗಿ ಕೇವಲ ಡುಯಿಂಗ್ ಬಿಸಿನೆಸ್ಸ್ ಶ್ರೇಯಾಂಕ ಶ್ರೇಣಿಯಲ್ಲಿ ಸುಧಾರಣೆ ಮಾತ್ರವಲ್ಲದೆ, ಸಾಮಾನ್ಯ ಜನರಿಗೆ ಮತ್ತು ಸಣ್ಣ ವ್ಯಾಪಾರಸ್ಥರ 'ಅನುಕೂಲಕರ ಜೀವನ' (ಈಸ್ ಆಫ್ ಲಿವಿಂಗ್) ವ್ಯವಸ್ಥೆಯಲ್ಲೂ ಸುಧಾರಣೆ ಆಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊರಹೊಮ್ಮುತ್ತಿರುವ ಮತ್ತು ಚಲನಶೀಲ ಆರ್ಥಿಕತೆಯಾದ ಭಾರತಕ್ಕೆ ಇದು ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಅವರು ಹೇಳಿದರು. ಡುಯಿಂಗ್ ಬಿಸಿನೆಸ್ಸ್ ಶ್ರೇಯಾಂಕ ಶ್ರೇಣಿಯಲ್ಲಿ ಭಾರತ ಏರಿಕೆಯಾದ ಬಗ್ಗೆ ಜಾಗತಿಕ ಮಟ್ಟದಲ್ಲಿ ಬಹಳಷ್ಟು ಆಸಕ್ತಿ ಮೂಡಿರುವ ಕುರಿತು ಅವರು ಮಾತನಾಡಿದರು. 
 

***



(Release ID: 1556136) Visitor Counter : 63