ಪ್ರಧಾನ ಮಂತ್ರಿಯವರ ಕಛೇರಿ
ದೇಶಭೃಷ್ಟ ಆರ್ಥಿಕ ಅಪರಾಧಗಳು ಮತ್ತು ಆಸ್ತಿ ಮರು ಸ್ವಾಧೀನ ಕ್ರಮಗಳಿಗೆ ಸಂಬಂಧಿಸಿ ಜಿ- 20ಕ್ಕೆ ಭಾರತ ಸಲಹೆ ಮಾಡಿರುವ ಒಂಭತ್ತು ಅಂಶಗಳ ಕಾರ್ಯ ಪಟ್ಟಿ.
प्रविष्टि तिथि:
30 NOV 2018 11:55PM by PIB Bengaluru
ದೇಶಭೃಷ್ಟ ಆರ್ಥಿಕ ಅಪರಾಧಗಳು ಮತ್ತು ಆಸ್ತಿ ಮರು ಸ್ವಾಧೀನ ಕ್ರಮಗಳಿಗೆ ಸಂಬಂಧಿಸಿ ಜಿ- 20ಕ್ಕೆ ಭಾರತ ಸಲಹೆ ಮಾಡಿರುವ ಒಂಭತ್ತು ಅಂಶಗಳ ಕಾರ್ಯ ಪಟ್ಟಿ.
· ದೇಶಭೃಷ್ಟ ಆರ್ಥಿಕ ಅಪರಾಧಿಗಳ ಹಾವಳಿಯನ್ನು ಸಮಗ್ರವಾಗಿ ಮತ್ತು ಕ್ರಿಯಾಶೀಲವಾಗಿ ತಡೆಯಲು ಜಿ-20 ದೇಶಗಳ ನಡುವೆ ಬಲಿಷ್ಟ ಮತ್ತು ಸಕ್ರಿಯ ಸಹಕಾರ.
· ಅಪರಾಧಗಳ ಆಸ್ತಿಯನ್ನು ಕ್ರಿಯಾಶೀಲವಾಗಿ ಮುಟ್ಟುಗೋಲು ಹಾಕಿಕೊಳ್ಳುವಿಕೆ; ಅಪರಾಧಿಗಳ ತ್ವರಿತ ಹಸ್ತಾಂತರ ಮತ್ತು ಅಪರಾಧಗಳ ಆಸ್ತಿಯನ್ನು ಸಮರ್ಪಕವಾಗಿ ಹಸ್ತಾಂತರಿಸುವಿಕೆಯನ್ನು ತ್ವರಿತಗೊಳಿಸುವ ಮತ್ತು ವ್ಯವಸ್ಥಿತಗೊಳಿಸುವುದೂ ಸೇರಿದಂತೆ ಕಾನೂನು ಪ್ರಕ್ರಿಯೆಗಳಲ್ಲಿ ಸಹಕಾರ.
· ಎಲ್ಲಾ ಆರ್ಥಿಕ ಅಪರಾಧಿಗಳಿಗೆ ಪ್ರವೇಶ ತಡೆಯುವ ಮತ್ತು ಸುರಕ್ಷಿತ ಆಶ್ರಯತಾಣವೊದಗಿಸುವುದನ್ನುತಡೆಯುವ ವ್ಯವಸ್ಥೆಯೊಂದನ್ನು ರೂಪಿಸಲು ಜಿ-20 ರಾಷ್ಟ್ರಗಳಿಂದ ಸಂಯುಕ್ತ ಪ್ರಯತ್ನ.
· ಭ್ರಷ್ಟಾಚಾರ ವಿರುದ್ದದ ವಿಶ್ವಸಂಸ್ಥೆ ಸಮಾವೇಶದ (ಯು.ಎನ್.ಸಿ.ಎ.ಸಿ. ) ತತ್ವಗಳು , ವಿಶ್ವಸಂಸ್ಥೆಯ ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ದದ ಸಮಾವೇಶದ (ಯು.ಎನ್.ಒ.ಟಿ.ಸಿ.) ತತ್ವಗಳು , ವಿಶೇಷವಾಗಿ “ಅಂತಾರಾಷ್ಟ್ರೀಯ ಸಹಕಾರ” ಕ್ಕೆ ಸಂಬಂದಿಸಿದ ಅಂಶವನ್ನು ಪೂರ್ಣವಾಗಿ ಮತ್ತು ದಕ್ಷತೆಯಿಂದ ಜಾರಿಗೆ ತರಬೇಕು.
· ಸಮರ್ಪಕ ಪ್ರಾಧಿಕಾರಿಗಳು ಮತ್ತು ಎಫ್.ಐ.ಯು.ಗಳ ನಡುವೆ ಸಕಾಲದಲ್ಲಿ ಸಮಗ್ರ ಮಾಹಿತಿ ವಿನಿಮಯಕ್ಕೆ ಅವಕಾಶವಾಗುವಂತೆ ಅಂತಾರಾಷ್ಟ್ರೀಯ ಸಹಕಾರವನ್ನು ಸ್ಥಾಪಿಸಲು ಆದ್ಯತೆ ನೀಡಿ ಗಮನ ಕೇಂದ್ರೀಕರಿಸುವಂತೆ ಎಫ್.ಎ.ಟಿ.ಎಫ್. ಗೆ ಸೂಚಿಸುವುದು.
· ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ವ್ಯಾಖ್ಯಾನಿಸಲು ಸಾಮಾನ್ಯ ವ್ಯಾಖ್ಯೆಯನ್ನು ರೂಪಿಸುವ ಕೆಲಸವನ್ನು ಎಫ್.ಎ.ಟಿ.ಎಫ್. ಗೆ ವಹಿಸುವುದು.
· ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಗುರುತಿಸಲು, ಉಚ್ಚಾಟಿಸಿ ಅವರ ತವರು ದೇಶಕ್ಕೆ ಹಸ್ತಾಂತರಿಸಲು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿ ಸಾಮಾನ್ಯವಾಗಿ ಒಪ್ಪಿಗೆಯಾಗುವ ಮತ್ತು ಮಾನದಂಡಗಳನ್ನು ಒಳಗೊಂಡ ಪ್ರಕ್ರಿಯೆಗಳನ್ನು ಎಫ್.ಎ.ಟಿ.ಎಫ್. ಅಭಿವೃದ್ದಿಪಡಿಸಬೇಕು. ಇದು ಜಿ-20 ರಾಷ್ಟ್ರಗಳಿಗೆ ತಮ್ಮ ದೇಶೀಯ ಕಾನೂನುಗಳಿಗೆ ಅನುಗುಣವಾಗಿ ಮಾರ್ಗದರ್ಶನ ಮತ್ತು ಸಹಾಯ ಒದಗಿಸುವಂತೆ ರೂಪಿಸಲ್ಪಟ್ಟಿರಬೇಕು.
· ತನ್ನ ದೇಶದಿಂದ ತಪ್ಪಿಸಿಕೊಂಡು ಇನ್ನೊಂದು ದೇಶದಲ್ಲಿ ನೆಲೆಸಿರುವ ಆರ್ಥಿಕ ಅಪರಾಧಿಯನ್ನು ಯಶಸ್ವಿಯಾಗಿ ಉಚ್ಚಾಟಿಸಿ ಆತನ ದೇಶದ ಕೈಗೆ ಒಪ್ಪಿಸುವುದಕ್ಕೆ ಸಂಬಂಧಿಸಿದ ಉತ್ತಮ ಪದ್ದತಿಗಳು ಹಾಗು ಅದರ ಪರಿಣತಿಯನ್ನು ಹಂಚಿಕೊಳ್ಳುವುದು, ಈಗಿರುವ ವ್ಯವಸ್ಥೆಗಳಲ್ಲಿ ಇದಕ್ಕೆ ಸಂಬಂಧಿಸಿ ಇರುವ ನ್ಯೂನತೆಗಳನ್ನು , ಕಾನೂನು ಸಹಾಯ ಇತ್ಯಾದಿಗಳನ್ನು ನಿಭಾಯಿಸಲು ಸಾಮಾನ್ಯ ವೇದಿಕೆಯ ಸ್ಥಾಪನೆ.
· ಆರ್ಥಿಕ ಅಪರಾಧಿಗಳು ತಮ್ಮ ನಿವಾಸಿ/ತವರು ದೇಶದಲ್ಲಿ ತೆರಿಗೆ ಬಾಕಿಯನ್ನು ಹೊಂದಿದ್ದಲ್ಲಿ ಅದನ್ನು ವಸೂಲಿ ಮಾಡಲು ಅನುಕೂಲವಾಗುವಂತೆ ಅವರ ಆಸ್ತಿಗಳನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದರ ಬಗ್ಗೆ ಜಿ-20 ವೇದಿಕೆಯು ಪರಿಗಣಿಸಬೇಕು.
(रिलीज़ आईडी: 1554453)
आगंतुक पटल : 121