ಪ್ರಧಾನ ಮಂತ್ರಿಯವರ ಕಛೇರಿ

ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.

Posted On: 11 NOV 2018 9:51AM by PIB Bengaluru

ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.

 

ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರದ್ದಾಂಜಲಿ ಸಲ್ಲಿಸಿದರು.

 

“ಭಯಾನಕ  ಪ್ರಥಮ ಮಹಾಯುದ್ಧ ಕೊನೆಗೊಂಡು ಇಂದಿಗೆ ನೂರು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ನಮ್ಮ ಬದ್ಧತೆಗಳನ್ನು ನಾವು ಪುನರುಚ್ಛರಿಸುತ್ತೇವೆ. ಸಾಮರಸ್ಯ ಮತ್ತು ಸಹೋದರಭಾವದ ವಾತಾವರಣ ಮುಂದುವರಿಸಲು ನಾವು ಪ್ರತಿಜ್ಞೆ ಮಾಡುವ ಮೂಲಕ ಯುದ್ಧಗಳಿಂದಾಗುವ ಸರಣಿ ಮರಣಗಳು ಮತ್ತು ವಿನಾಶಗಳು ಪುನಃ ಸಂಭವಿಸದಂತೆ ತಡೆಯೋಣ”

“ಮೊದಲ ವಿಶ್ವ ಮಹಾಯುದ್ದದಲ್ಲಿ (ಡಬ್ಲೂ.ಡಬ್ಲೂ -1) ಹೋರಾಡಿದ ನಮ್ಮ ಧೀರ ಸೈನಿಕರನ್ನು  ಭಾರತ ಸ್ಮರಿಸುತ್ತದೆ. ಈ ಯುದ್ದದಲ್ಲಿ ಭಾರತ ನೇರವಾಗಿ ಭಾಗವಹಿಸಲಿಲ್ಲವಾದರೂ, ಕೇವಲ ಶಾಂತಿಯ ಕಾರಣಕ್ಕಾಗಿ, ನಮ್ಮ ಸೈನಿಕರು ವಿಶ್ವದಾದ್ಯಂತ ಹೋರಾಟ ನಡೆಸಿದ್ದರು.” 

 

“ಪ್ರಥಮ ಮಹಾಯುದ್ಧದಲ್ಲಿ ಭಾರತದ ಪಾತ್ರಗಳಿಗೆ ಸಂಬಂಧಿಸಿದ ಸ್ಥಳಗಳಾದ ಇಸ್ರೈಲಿನ ಹೈಫಾ ಸ್ಮಾರಕ ಮತ್ತು ಫ್ರಾನ್ಸಿನ ನ್ಯೂವೆ–ಚಪೆಲ್ಲೆ ಸ್ಮಾರಕಗಳಲ್ಲಿ ಶ್ರದ್ದಾಂಜಲಿ ಅರ್ಪಿಸುವ ಭಾಗ್ಯ ನನಗೆ ಲಭಿಸಿದೆ. ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ತೀನ್ ಮೂರ್ತಿ – ಹೈಫಾ ಚೌಕ್ ನಲ್ಲಿ ನಾವು ಶ್ರದ್ಧಾಂಜಲಿ ಅರ್ಪಿಸಿದ್ದೆವು” ಎಂದು ಪ್ರಧಾನಮಂತ್ರಿ ಹೇಳಿದರು.



(Release ID: 1552418) Visitor Counter : 90