ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಭಾರತ ಮತ್ತು ಇಟಲಿ ನಡುವೆ ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತರಬೇತಿ ಮತ್ತು ಶಿಕ್ಷಣ ಮುಂದುವರಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 08 NOV 2018 8:44PM by PIB Bengaluru

ಭಾರತ ಮತ್ತು ಇಟಲಿ ನಡುವೆ ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತರಬೇತಿ ಮತ್ತು ಶಿಕ್ಷಣ ಮುಂದುವರಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ಇಟಲಿ ನಡುವೆ ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತರಬೇತಿ ಮತ್ತು ಶಿಕ್ಷಣ ಮುಂದುವರಿಸುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.

 

 

ಪ್ರಯೋಜನಗಳು:

 

ಈ ತಿಳಿವಳಿಕೆ ಒಪ್ಪಂದವು,  ಕಾರ್ಯ ಜಗತ್ತಿನಲ್ಲಿ ಯೋಗ್ಯವಾದ ಕೆಲಸವನ್ನು ಉತ್ತೇಜಿಸಲು ತರಬೇತಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗೆ ಈ ಕೆಳಗಿನವುಗಳ ಮೂಲಕ ಅವಕಾಶ ನೀಡುತ್ತದೆ:

 

ತರಬೇತಿ ವಿಧಾನಗಳು ಮತ್ತು ತಂತ್ರಗಾರಿಕೆಯ ಕುರಿತಂತೆ ಜಂಟಿ ತರಬೇತಿ ಏರ್ಪಡಿಸುವುದು;

ವಿಭಿನ್ನ ಸಾಮಾಜಿಕ ಪಾಲುದಾರರಿಗಾಗಿ ಹೊಸ ತರಬೇತಿ ವಿಧಾನ ಅಭಿವೃದ್ಧಿಪಡಿಸುವುದು;

ಕಾರ್ಮಿಕ ಮತ್ತು ಉದ್ಯೋಗ ಕುರಿತ ವಿವಿಧ ವಿಷಯಗಳ ಮೇಲೆ ಸಮಗ್ರ ತರಬೇತಿ ಕಾರ್ಯಕ್ರಮ ಆಯೋಜಿಸುವುದು;

ತರಬೇತಿ ವಿಧಾನಗಳ ಮೌಲ್ಯಮಾಪನ ಮಾಡುವುದು;

ತರಬೇತಿ ಕಾರ್ಯಕ್ರಮಗಳಲ್ಲಿ ಅದರಲ್ಲೂ ಕಾರ್ಮಿಕ ಆಡಳಿತದಲ್ಲಿ ಉತ್ತಮ ರೂಢಿಗಳ ವಿನಿಮಯ; ಅಧ್ಯಯನ ಪ್ರವಾಸ ಏರ್ಪಡಿಸಲು ಮತ್ತು ತರಬೇತಿ ವಿಧಾನಗಳನ್ನು ಒದಗಿಸಲು ಪರಸ್ಪರರಿಗೆ ನೆರವು ನೀಡುವುದು;  ಮತ್ತು

ಜ್ಞಾನ ಮತ್ತು ಮಾಹಿತಿಯ ಹಂಚಿಕೆಗಾಗಿ ತರಬೇತಿದಾರರ ವಿನಿಮಯ.

 ಪ್ರಮುಖ ಪರಿಣಾಮಗಳು:

 

ಕಾರ್ಯ ಪ್ರಪಂಚದಲ್ಲಿನ ರೂಪಾಂತರಗಳಿಂದ ಹೊರಬರುವ ಸವಾಲುಗಳಿಗೆ ಪ್ರತಿಯಾಗಿ, ಎರಡೂ ಸಂಸ್ಥೆಗಳ ತಾಂತ್ರಿಕ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸುವುದು ಈ ತಿಳಿವಳಿಕೆ ಒಪ್ಪಂದದ ಪ್ರಮುಖ ಪರಿಣಾಮವಾಗಿದೆ. ಇದು ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳ ಆಯೋಜನೆ ಮತ್ತು ಅಭಿವೃದ್ಧಿಯ  ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವಿ.ವಿ. ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ವಿವಿಜಿಎನ್ಎಲ್ಐ)ಯನ್ನು ಏಷ್ಯಾ ಫೆಸಿಫಿಕ್ ವಲಯದ ಪ್ರಮುಖ ತರಬೇತಿ ಸಂಸ್ಥೆಯಾಗಿ ವಿಕಾಸನಗೊಳಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಸಂಪೂರ್ಣ ಏಷ್ಯಾ ಪೆಸಿಫಿಕ್ ವಲಯದ ತನ್ನ ವ್ಯಾಪ್ತಿಯನ್ನು ವಿಸ್ತಾರವಾದ ಸಾಮಾಜಿಕ ಪಾಲುದಾರರಿಗೆ ವಿಸ್ತರಿಸಲಿದೆ. 

 

 

ಹಿನ್ನೆಲೆ:            

 

     i.            ನೋಯಿಡಾದ ವಿ.ವಿ.ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ವಿವಿಜಿಎನ್ಎಲ್ಐ), ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ  ಒಂದು ಸ್ವಾಯತ್ತ ಸಂಸ್ಥೆಯಾಗಿದೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಟಿಸಿ –ಐಎಲ್.ಓ)ಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರವಾಗಿದೆ, ಟುರಿನ್ 2012ರಲ್ಲಿ ಒಂದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದೆ ಮತ್ತು ಪರಸ್ಪರ ಜ್ಞಾನ ಮತ್ತು ಅನುಭವ ವಿನಿಮಯದ ಹಲವು ಚಟುವಟಿಕೆಗಳಿಗೆ ಸಹಯೋಗ ನೀಡಿವೆ. ಈ ತಿಳಿವಳಿಕೆ ಒಪ್ಪಂದ ವೃತ್ತಿಪರ ಸಹಭಾಗಿತ್ವವನ್ನು ಮುಂದುವರೆಸಲು ಸಂಸ್ಥೆಗಳ ನಡುವಿನ ಸಹಯೋಗವನ್ನು ರೂಪಿಸುವ ಗುರಿ ಹೊಂದಿದೆ.

 

     ii.    ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್.ಓ)ಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರ (ಐಟಿಸಿ)ವನ್ನು 1964ರಲ್ಲಿ ಟುರಿನ್ ನಲ್ಲಿ ಸ್ಥಾಪಿಸಲಾಯಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಕುರಿತ ವಿವಿಧ ಆಯಾಮಗಳ ಮೇಲೆ ತರಬೇತಿಯನ್ನು ನೀಡುವ ಪ್ರಮುಖ ಕೇಂದ್ರವಾಗಿ ವಿಕಸನಗೊಂಡಿತು. ಐಟಿಸಿ ಉದ್ಯೋಗ, ಕಾರ್ಮಿಕ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ ಕುರಿತಂತೆ ಅಂತಾರಾಷ್ಟ್ರೀಯ ಪ್ರಾವಿಣ್ಯತೆ ಹೊಂದಿದೆ ವಿಶಾಲ ಆಕರವಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಗಳೊಂದಿಗೆ ತರಬೇತಿ ಚಟುವಟಿಕೆ ನಡೆಸುವುದು ಐಟಿಸಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

 

*****



(Release ID: 1552253) Visitor Counter : 67


Read this release in: English , Tamil , Telugu