ಸಂಪುಟ

ಸಾಗರೋತ್ತರ ರಾಷ್ಟ್ರೀಯ ತೈಲ ಕಂಪನಿಗಳಿಂದ ಕರ್ನಾಟಕದ ಪಡೂರಿನಲ್ಲಿರುವ ಪಡೂರು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಭರ್ತಿಗೆ ಸಂಪುಟ ಅನುಮೋದನೆ

Posted On: 08 NOV 2018 8:37PM by PIB Bengaluru

ಸಾಗರೋತ್ತರ ರಾಷ್ಟ್ರೀಯ ತೈಲ ಕಂಪನಿಗಳಿಂದ ಕರ್ನಾಟಕದ ಪಡೂರಿನಲ್ಲಿರುವ ಪಡೂರು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಭರ್ತಿಗೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ  ಕೇಂದ್ರ ಸಚಿವ ಸಂಪುಟ ಸಭೆ, ಸಾಗರೋತ್ತರ ರಾಷ್ಟ್ರೀಯ ತೈಲ ಕಂಪನಿ(ಎನ್ಒಸಿಎಸ್) ಗಳಿಂದ ಕರ್ನಾಟಕದ ಪಡೂರಿನಲ್ಲಿರುವ ಪಡೂರು ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್(ಎಸ್ ಪಿ ಆರ್) ಭರ್ತಿಗೆ ಅನುಮೋದನೆ ನೀಡಿದೆ. ಪಡೂರಿನ ಎಸ್ ಪಿ ಆರ್ ಸೌಕರ್ಯದಲ್ಲಿ ಭೂಗರ್ಭದಲ್ಲಿ ಕಲ್ಲಿನ ಕ್ಯಾವರಾನ್ ಹೊಂದಿದ್ದು, ಒಟ್ಟಾರೆ 2.5 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ಸಾಮರ್ಥ್ಯದ 4 ವಿಭಾಗಗಳಿದ್ದು, ಪ್ರತಿಯೊಂದು 0.625 ಎಂಎಂಟಿ ಸಾಮರ್ಥ್ಯ ಹೊಂದಿವೆ. ಈ ಎಸ್ ಪಿ ಆರ್ ಭರ್ತಿಮಾಡುವ ಕೆಲಸವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಡಿ ಕೈಗೊಳ್ಳಲಾಗಿದ್ದು, ಇದರಿಂದ ಭಾರತ ಸರ್ಕಾರದ ಬಜೆಟ್ ಬೆಂಬಲವನ್ನು ತಗ್ಗಿಸುವ ಉದ್ದೇಶವಿದೆ.

 

ಭಾರತೀಯ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್(ಐ ಎಸ್ ಪಿ ಆರ್ ಎಲ್)ಅನ್ನು ಮೂರು ಕಡೆ ನಿರ್ಮಿಸಲಾಗಿದ್ದು, ಅವುಗಳು ನೆಲದಾಳದಲ್ಲಿ ಇದ್ದು, ಅವುಗಳ ಒಟ್ಟು ಸಾಮರ್ಥ್ಯ 5.33 ಎಂಎಂಟಿ ಕಚ್ಚಾತೈಲದ್ದಾಗಿದೆ. ಆ ಮೂರು ಸ್ಥಳಗಳೆಂದರೆ ವಿಶಾಖಪಟ್ಟಣಂ(1.33ಎಂಎಂಟಿ), ಮಂಗಳೂರು(1.5ಎಂಎಂಟಿ) ಮತ್ತು ಪಡೂರು(2.5ಎಂಎಂಟಿ). ಒಟ್ಟು 5.33 ಎಂಎಂಟಿ ಸಾಮರ್ಥ್ಯದ ಮೊದಲನೇ ಹಂತದ   ಎಸ್ ಪಿ ಆರ್ ಕಾರ್ಯಕ್ರಮದಲ್ಲಿ ಪ್ರಸ್ತುತ 2017-18ನೇ ಹಣಕಾಸು ವರ್ಷದ ಬಳಕೆ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಭಾರತಕ್ಕೆ ಸುಮಾರು ಅಂದಾಜು 95 ದಿನಗಳ ಕಾಲ ಕಚ್ಚಾ ತೈಲವನ್ನು ಪೂರೈಸಬಹುದಾಗಿದೆ. ಕೇಂದ್ರ ಸರ್ಕಾರ ಕಳೆದ ಜೂನ್ ನಲ್ಲೇ ಕರ್ನಾಟಕದ ಪಡೂರು ಮತ್ತು ಒಡಿಶಾದ ಚಾಂದಿಖೋಲ್ ನಲ್ಲಿ ಹೆಚ್ಚುವರಿಯಾಗಿ 6.5 ಎಂಎಂಟಿ  ಎಸ್ ಪಿ ಆರ್ ಸೌಕರ್ಯಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿತ್ತು. ಇದರಿಂದ 2017-18ನೇ ಹಣಕಾಸು ವರ್ಷದ ಬಳಕೆ ಅಂಕಿ-ಅಂಶಗಳ ಪ್ರಕಾರ, ಭಾರತಕ್ಕೆ ಸುಮಾರು 11.5 ದಿನಗಳ ಕಾಲ ಇಂಧನ ಭದ್ರತೆಯನ್ನು ಒದಗಿಸುವ ಸಾಧ್ಯತೆ ಇದೆ. 

 

****** 



(Release ID: 1552224) Visitor Counter : 104