ಹಣಕಾಸು ಸಚಿವಾಲಯ

ಭಾರತ ತೈಪೈ ಅಸೋಸಿಯೇಶನ್ ಮತ್ತು ತೈಪೈ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ನಡುವಣ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಅಂಕಿತಕ್ಕೆ ಸಂಪುಟ ಅನುಮೋದನೆ

Posted On: 24 OCT 2018 1:09PM by PIB Bengaluru

ಭಾರತ ತೈಪೈ ಅಸೋಸಿಯೇಶನ್ ಮತ್ತು ತೈಪೈ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ನಡುವಣ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಅಂಕಿತಕ್ಕೆ ಸಂಪುಟ ಅನುಮೋದನೆ

 

 ಇಂಡಿಯಾ ತೈಪೈ ಅಸೋಸಿಯೇಷನ್ (ಐಟಿಎ)  ಹಾಗೂ ಭಾರತದಲ್ಲಿರುವ ತೈಪೈ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ (ಟಿಇಸಿಸಿ) ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಎ)ಕ್ಕೆ ಸಹಿ ಹಾಕಲು ಪ್ರಧಾನ ಮಂತ್ರಿ ಶ್ರೀನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

 

ದ್ವಿಪಕ್ಷೀಯ ಹೂಡಿಕೆ ಒಪ್ಪಂದ  ಎರಡೂ ಸಂಸ್ಥೆಗಳ ನಡುವೆ ಹೂಡಿಕೆಯ ಹರಿವನ್ನು ಹೆಚ್ಚಿಸಲಿದೆ. ಐಟಿಎ ಮತ್ತು ಟಿಇಸಿಸಿ ನಡುವೆ ಪರಸ್ಪರ ಆಧಾರದ ಮೇಲೆ ಹೂಡಿಕೆಗೆ ಸೂಕ್ತ ರಕ್ಷಣೆಯನ್ನು ಒಪ್ಪಂದ ನೀಡಲಿದೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದವು  ತಾರತಮ್ಯರಹಿತ ಮತ್ತು ಸಮಾನ ಅವಕಾಶಗಳ ಭರವಸೆ ನೀಡುವ ಮೂಲಕ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಲಿದೆ ಹಾಗೂ ಆ ಮೂಲಕ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಕಲ್ಪಿಸಲಿದೆ. ಇದು ಭಾರತವನ್ನು ವಿದೇಶೀ ನೇರ ಹೂಡಿಕೆಯ ಯೋಗ್ಯ ತಾಣವಾಗಿ ಬಿಂಬಿಸಲಿದೆ.  



(Release ID: 1550736) Visitor Counter : 63


Read this release in: English , Urdu , Tamil , Telugu