ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾ ಮತ್ತು ಛತ್ತೀಸ್ ಗಡ್ ಗಳಿಗೆ ಸೆಪ್ಟೆಂಬರ್ 22 ರಂದು ಪ್ರಧಾನಮಂತ್ರಿ ಭೇಟಿ 

Posted On: 21 SEP 2018 5:00PM by PIB Bengaluru

ಒಡಿಶಾ ಮತ್ತು ಛತ್ತೀಸ್ ಗಡ್ ಗಳಿಗೆ ಸೆಪ್ಟೆಂಬರ್ 22 ರಂದು ಪ್ರಧಾನಮಂತ್ರಿ ಭೇಟಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಛತ್ತೀಸ್ ಗಡ್ ಗಳಿಗೆ ಸೆಪ್ಟೆಂಬರ್ 22, 2018ರಂದು ಭೇಟಿ ನೀಡಲಿದ್ದಾರೆ. 

ಒಡಿಶಾದ ತಲ್ಚೇರ್ ನಲ್ಲಿ ತಲ್ಚೇರ್ ರಸಗೊಬ್ಬರ ಘಟಕ ಪುನಶ್ಚೇತನ ಕೆಲಸ ಪ್ರಾರಂಭದ ಸಂಕೇತವಾಗಿ ಫಲಕವನ್ನು ಪ್ರಧಾನಮಂತ್ರಿ ಅವರು ಅನಾವರಣ ಮಾಡಲಿದ್ದಾರೆ. ರಸಗೊಬ್ಬರ ಘಟಕದ ಆಧಾರದಲ್ಲಿ ಕಲ್ಲಿದ್ದಲ್ಲು ಅನಿಲೀಕರಣಗೊಳ್ಳುವ ಭಾರತದ ಮೊತ್ತಮೊದಲ ಘಟಕ ಇದಾಗಿದೆ. ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ ಈ ಘಟಕವು ನೈಸರ್ಗಿಕ ಅನಿಲವನ್ನೂ ಉತ್ಪಾದಿಸಲಿವೆ, ಹಾಗೂ ಆ ಮೂಲಕ ದೇಶದ ಇಂಧನ ಆವಶ್ಯಕತೆಗಳಿಗೆ ಕೊಡುಗೆ ನೀಡಲಿದೆ. 

ಪ್ರಧಾನಮಂತ್ರಿ ಅವರು ಆನಂತರ ಝಾರ್ಸುಗುಡಕ್ಕೆ ತೆರಳಿ ವಿಮಾನನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ವಿಮಾನನಿಲ್ದಾಣ ಪಶ್ಚಿಮ ಒಡಿಶಾವನ್ನು ಭಾರತದ ವಿಮಾನಯಾನ ಭೂಪಟದಲ್ಲಿ ಸೇರಿಸಲಿದೆ ಮತ್ತು ಉಡಾನ್ ಯೋಜನೆ ಮೂಲಕ ಈ ವಲಯಕ್ಕೆ ವಾಯುಯಾನ ಸಂಪರ್ಕವನ್ನು ಏರ್ಪಡಿಸಲಿದೆ. 

ಪ್ರಧಾನಮಂತ್ರಿ ಅವರು ಗರ್ಜಾನ್ಬಾಹಾಲ್ ಕಲ್ಲಿದ್ದಲ್ಲು ಗಣಿಯನ್ನು ಮತ್ತು ಝಾರ್ಸುಗುಡ – ಬಾರಾಪಾಲಿ – ಸರ್ದೇಗಾ ರೈಲ್ ಲಿಂಕ್ ಗಳನ್ನು ಲೋಕಾರ್ಪಣೆ lಮಾಡಲಿದ್ದಾರೆ. ದುಲಂಗಾ ಕಲ್ಲಿದ್ದಲ್ಲು ಗಣಿಗಳಲ್ಲಿ ಕಲ್ಲಿದ್ದಲ್ಲು ಉತ್ಪಾದನೆ ಮತ್ತು ಸಾಗಾಟ ಪ್ರಾರಂಭದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಲಿದ್ದಾರೆ. 

ಆನಂತರ ಪ್ರಧಾನಮಂತ್ರಿ ಅವರು ಜಂಜ್ಗಿರ್ ಚಂಪಾಗೆ ಆಗಮಿಸುವರು. ಸಾಂಪ್ರದಾಯಿಕ ಕೈಮಗ್ಗ ಮತ್ತು ಕೃಷಿ ಕುರಿತಾದ ವಸ್ತುಪ್ರದರ್ಶನಕ್ಕೆ ಅವರು ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು ಪೆಂಡ್ರಾ-ಅನುಪ್ಪುರ್ 3ನೇ ರೈಲ್ವೇ ಹಳಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲಿ ಅವರು ನೆರೆದ ಸಭಿಕರನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ. 



(Release ID: 1547176) Visitor Counter : 65