ಪ್ರಧಾನ ಮಂತ್ರಿಯವರ ಕಛೇರಿ

“ಸ್ವಚ್ಛತೆಯೇ ಸೇವೆ”ಯಲ್ಲಿ ಪಾಲ್ಗೊಂಡು, ದೆಹಲಿಯ ಶಾಲೆಯಲ್ಲಿ ಶ್ರಮದಾನ ಮಾಡಿದ ಪ್ರಧಾನಮಂತ್ರಿ 

Posted On: 15 SEP 2018 2:15PM by PIB Bengaluru

“ಸ್ವಚ್ಛತೆಯೇ ಸೇವೆ”ಯಲ್ಲಿ ಪಾಲ್ಗೊಂಡು, ದೆಹಲಿಯ ಶಾಲೆಯಲ್ಲಿ ಶ್ರಮದಾನ ಮಾಡಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಪಾಲ್ಗೊಂಡು, ದೆಹಲಿಯ ಶಾಲೆಯಲ್ಲಿ ಶ್ರಮದಾನ ಮಾಡಿದರು.

ದೇಶದ 17 ಸ್ಥಳಗಳಿಂದ ವಿವಿಧ ಜನವರ್ಗದೊಂದಿಗೆ ವಿಡಿಯೋ ಸಂವಾದ ನಡೆಸಿ, ಆಂದೋಲನಕ್ಕೆ ಚಾಲನೆ ನೀಡಿದ ಕೆಲವೇ ಕ್ಷಣದಲ್ಲಿ ಪ್ರಧಾನಮಂತ್ರಿಯವರು, ಕೇಂದ್ರ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಹಿರಿಯ ಪ್ರೌಢ ಶಾಲೆಗೆ ಪ್ರಯಾಣ ಬೆಳೆಸಿದರು. ಅಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಅವರು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದವನ್ನೂ ನಡೆಸಿ, ಸ್ವಚ್ಛತೆಯ ಉದ್ದೇಶಕ್ಕಾಗಿ ಅವರನ್ನು ಪ್ರೇರೇಪಿಸಿದರು.

ಪ್ರಧಾನಮಂತ್ರಿಯವರು ಶಾಲೆಗೆ ಹೋಗಿ ಬರುವಾಗ ಸಾಂಪ್ರದಾಯಿಕ ಶಿಷ್ಟಾಚಾರಗಳಿಲ್ಲದೆ ಸಾಮಾನ್ಯ ಸಂಚಾರ ವ್ಯವಸ್ಥೆಯಲ್ಲೇ ಪ್ರಯಾಣಿಸಿದರು. ಈ ಭೇಟಿಗೆ ಯಾವುದೇ ವಿಶೇಷ ಸಂಚಾರದ ವ್ಯವಸ್ಥೆ ಮಾಡಲಾಗಿರಲಿಲ್ಲ.

ಪರಿಶಿಷ್ಟ ಜಾತಿಯವರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಯೋಗಕ್ಷೇಮದ ಮುನ್ನಡೆಯ ಉದ್ದೇಶದಿಂದ ಡಾ. ಅಂಬೇಡ್ಕರ್ ಅವರು 1946 ರಲ್ಲಿ ಸ್ವತಃ ಈ ಶಾಲಾ ಸಮುಚ್ಛಯವನ್ನು ಖರೀದಿಸಿದ್ದರು.

*****



(Release ID: 1546359) Visitor Counter : 47