ಪ್ರಧಾನ ಮಂತ್ರಿಯವರ ಕಛೇರಿ

ಜನಪರ ಮತ್ತು ಬಡವರಪರ ಉಪಕ್ರಮಗಳ ಚೇತರಿಕೆಗೆ ಪ್ರೋತ್ಸಾಹ 

Posted On: 05 SEP 2018 9:34AM by PIB Bengaluru

ಜನಪರ ಮತ್ತು ಬಡವರಪರ ಉಪಕ್ರಮಗಳ ಚೇತರಿಕೆಗೆ ಪ್ರೋತ್ಸಾಹ 
 

ಪ್ರಧಾನಮಂತ್ರಿ ಜನ್ ಧನ್ ಯೋಜನಾ ಮುಂದುವರಿಸಲು ಸಂಪುಟ ಅಸ್ತು.

14-08-2018  ನಂತರವೂ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ - ಪಿ.ಎಮ್.ಜೆ.ಡಿ.ವೈ ಮುಂದುವರಿಕೆ

ಖಾತೆ ತೆರೆಯುವ ಲಕ್ಷ್ಯ “ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕ

ಓವರ್ ಡ್ರಾಫ್ಟ್ ಮಿತಿಯನ್ನು ರೂ. 5000 ರಿಂದ ರೂ 10000ಕ್ಕೆ ಏರಿಕೆ.

ರೂ. 2000 ತನಕದ ಓವರ್ ಡ್ರಾಫ್ಟ್ ಗಳಿಗೆ ಯಾವುದೇ ಷರತ್ತು ಇಲ್ಲ

ಓವರ್ ಡ್ರಾಫ್ಟ್ ಸೌಲಭ್ಯತೆಯ ಲಭ್ಯತೆಗಾಗಿ ವಯಸ್ಸಿನ ಮಿತಿಯನ್ನು 18-60 ವರ್ಷಗಳಿಂದ 18-65 ವರ್ಷಗಳಿಗೆ ಏರಿಕೆ.

28-08-2018 ನಂತರ ತೆರೆದಿರುವ ಪಿ.ಎಮ್.ಜೆ.ಡಿ.ವೈಜನ್ ಧನ್ ) ಖಾತೆದಾರರಿಗೆ ನೀಡುವ ಹೊಸ ರೂಪೇ ಕಾರ್ಡ್ ನಲ್ಲಿಅಪಘಾತವಿಮೆ ರೂ 1 ಲಕ್ಷದಿಂದ ರೂ 2 ಲಕ್ಷಕ್ಕೆ ಏರಿಕೆ

 

ಜನಪರ ಮತ್ತು ಬಡವರಪರ ಉಪಕ್ರಮಗಳ ಚೇತರಿಕೆಗೆ ಅತಿದೊಡ್ಡ ಪ್ರೋತ್ಸಾಹವಾಗಿ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 05-09-2018ರಂದು ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ  ಈ ಕೆಳಗಿನ ಬದಲಾವಣೆಗಳೊಂದಿಗೆ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ ನ - ಪ್ರಧಾನಮಂತ್ರಿ ಜನ್ ಧನ್ ಯೋಜನಾ ಮುಂದುವರಿಸಲು ಅಂಗೀಕಾರ:-

  •  ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ (ಪಿ.ಎಮ್.ಜೆ.ಡಿ.ವೈ) 12-08-2018ರ ನಂತರವೂ ಮುಂದುವರಿಯಲಿದೆ
  • ಪ್ರಸ್ತುತ ಇರುವ ಓವರ್ ಡ್ರಾಫ್ಟ್ (ಓಡಿ) ಮಿತಿ ರೂ 5000 ದಿಂದ ರೂ 10000ಕ್ಕೆ ಏರಿಕೆ
  • ರೂ 2000 ತನಕದ ಓಡಿಗಳಿಗೆ ಯಾವುದೇ ಷರತ್ತುಗಳಿಲ್ಲ.
  • ಓವರ್ ಡ್ರಾಫ್ಟ್ ಸೌಲಭ್ಯತೆಗಾಗಿ ವಯಸ್ಸಿನ ಮಿತಿಯನ್ನು 18-60 ವರ್ಷಗಳಿಂದ 18-65 ವರ್ಷಗಳಿಗೆ ಏರಿಕೆ.

  “ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕ” ಎಂಬ ಹೆಚ್ಚುವರಿ ವ್ಯಾಪ್ತಿಯಲ್ಲಿ 28-08-2018ರ ನಂತರ ಹೊಸ ರೂಪೇ ಕಾರ್ಡ್ ಖಾತೆದಾರರಿಗೆ ಅಪಘಾತವಿಮೆ ರೂ 1 ಲಕ್ಷದಿಂದ ರೂ 2 ಲಕ್ಷಕ್ಕೆ ಏರಿಕೆ. 

 

ಪರಿಣಾಮ: 

ಈ ಮಿಷನ್ ನ ( ಸಂಕಲ್ಪ ಯೋಜನೆಯ ) ಮುಂದುವರಿಕೆಯು ದೇಶದ ಎಲ್ಲ ವಯಸ್ಕ /ಕುಟುಂಬ ಕನಿಷ್ಟ ಇತರ  ಹಣಕಾಸು ಸೇವೆಗಳಿಗೆ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮತ್ತು ರೂ. 10000 ತನಕದ ಓವರ್ ಡ್ರಾಫ್ಟ್ಗಳ ಲಭ್ಯತೆಗಾಗಿ ಸಾಮಾನ್ಯ ಬ್ಯಾಂಕ್ ಖಾತೆ ತೆರೆಯಲು ಅನುಕೂಲ ಮಾಡುತ್ತದೆ. ಇದು ಅವರುಗಳನ್ನು ಹಣಕಾಸಿನ ಮುಖ್ಯ ಸೇವಾದಾರಿಯಲ್ಲಿ ತರುತ್ತದೆ ಮತ್ತು ಸರಕಾರದ ವಿವಿಧ ಯೋಜನೆಗಳ ಅನುದಾನಗಳ ಪ್ರಯೋಜನಗಳ ನೇರ ವರ್ಗಾವಣೆ ಸಾಧ್ಯವಾಗುತ್ತದೆ.

ಪಿ.ಎಮ್.ಜೆ.ಡಿ.ವೈ ಯಡಿ ಸಾಧನೆಗಳು:

  • ರೂ 81,200 ಕೋಟಿ ಠೇವಣಿ ನಿಕ್ಷೇಪದೊಂದಿಗೆ, ಸರಿಸುಮಾರು 32.41ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. 

 

  • ಜನ್ ಧನ್ ಖಾತೆ ಹೊಂದಿರುವವರಲ್ಲಿ 53%ರಷ್ಟು ಮಹಿಳೆಯರು ಮತ್ತು 59%ರಷ್ಟು ಖಾತೆಗಳು ಗ್ರಾಮೀಣ ಮತ್ತು ಅರೆ ನಗರ (ನಗರ /ಉಪನಗರಗಳ ಹೊರವಲಯ) ಗಳಲ್ಲಿವೆ. 83%ಕ್ಕೂ ಅಧಿಕ ಚಲಾವಣೆಯಲ್ಲಿರುವ ಜನ್ ಧನ್ ಖಾತೆಗಳು (ಅಸ್ಸಾಂ, ಮೇಘಾಲಯ, ಜಮ್ಮು & ಕಾಶ್ಮೀರ್ ಗಳನ್ನು ಹೊರತಾಗಿ ) ಆಧಾರ್ ಆಧಾರದಲ್ಲಿ ತೆರೆಯಲ್ಪಟ್ಟಿದ್ದು, ಸರಿಸುಮಾರು 24.4 ಕೋಟಿ ರೂಪೇ ಕಾರ್ಡ್ ಗಳನ್ನು ನೀಡಲಾಗಿದೆ.
  • 7.7 ಕೋಟಿಗೂ ಅಧಿಕ ಜನ್ ಧನ್ ಖಾತೆಗಳು ನೇರ ವರ್ಗಾವಣೆ (ಡಿ.ಬಿ.ಟಿ.)ಯನ್ನು ಪಡೆಯುತ್ತಿದ್ದಾರೆ.

 

  • 1.26 ಉಪ ಸೇವಾ ಪ್ರದೇಶಗಳಲ್ಲಿ (ಗ್ರಾಮೀಣ), ಬ್ಯಾಂಕ್ ಪ್ರತಿನಿಧಿಗಳು (ಬ್ಯಾಂಕಿಂಗ್ ಕರೆಸ್ಪೊಂಡೆನ್ಟ್) ನಿಯುಕ್ತಿಗೊಳಿಸಲಾಗಿದ್ದು, ಇವರು ಪ್ರತಿಯೊಬ್ಬರೂ 1000-1500 ಕುಟುಂಬಗಳ ಸೇವೆ ಪೂರೈಸುತ್ತಿದ್ದಾರೆ. 13.16 ಲಕ್ಷ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ( ಎ.ಇ.ಪಿ.ಎಸ್) ವ್ಯವಹಾರಗಳು ಬ್ಯಾಂಕ್ ಪ್ರತಿನಿಧಿಗಳ(ಬ್ಯಾಂಕಿಂಗ್ ಕರೆಸ್ಪೊಂಡೆನ್ಟ್) ಮೂಲಕ ಜುಲೈ 2018 ರ ತಿಂಗಳಲ್ಲಿ ನಡೆದಿದೆ.

 

  • 13.98 ಕೋಟಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನಾ ( ಪಿ.ಎಮ್.ಎಸ್.ಬಿ.ವೈ) ಚಂದದಾರರು 19436 ಕ್ಲೈಮ್ ಮೂಲಕ ರೂ 388.72 ಕೋಟಿ ವಿಮಾ ಪರಿಹಾರ ಪಡೆದಿದ್ದಾರೆ.

 

  • ಇದೇ ರೀತಿ 5.47 ಕೋಟಿ ಜನರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ( ಪಿ.ಎಮ್.ಜೆ.ಜೆ.ಬಿ.ವೈ) ಚಂದದಾರರಾಗಿದ್ದಾರೆ ಮತ್ತು ರೂ 2206.28 ಕೋಟಿ ಮೊತ್ತದ 1.10 ಲಕ್ಷ ಕ್ಲೈಮ್ಸ್ ಗಳು ಈ ತನಕ ವಿಲೇವಾರಿಯಾಗಿವೆ.
  • 1.11 ಕೋಟಿ ಜನರು ಅಟಲ್ ಪಿಂಚಣಿ ಯೋಜನಾ ( ಎ.ಪಿ.ವೈ) ಚಂದದಾರರಾಗಿದ್ದಾರೆ.
  • ಪಿ.ಎಮ್.ಜೆ.ಡಿ.ವೈ. ಮೂಲಕ ಆಧಾರ್ ಆಧಾರಿಸಿದ ಜನ್ ಧನ್ ಖಾತೆ ಮತ್ತು ಮೊಬೈಲ್ ಬ್ಯಾಂಕಿಂಗ್ ( ಜೆ.ಎ.ಎಮ್) ಅನುಷ್ಠಾನಕ್ಕಾಗಿ ಯೋಜನೆಗಳ ರೂಪುರೇಷೆಗಳ ತಯಾರಿ ಮಾಡಲಾಯಿತು. ಈ ರೂಪುರೇಷೆಗಳು ಕೇವಲ ಉಳಿತಾಯ ಸೌಲಭ್ಯಗಳನ್ನಷ್ಟೇ ಅಲ್ಲದೆ, ಸಾಲ ವಿತರಣೆ, ಸಾಮಾಜಿ ಭದ್ರತೆ ಮುಂತಾದವುಗಳ ಲಭ್ಯತೆಗೆ ಮತ್ತು ಬಹಳ ಮುಖ್ಯವಾಗಿ ದೇಶದ ಬಡಜನರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ನೇರ ವರ್ಗಾವಣೆ ಮೂಲಕ ತಲಪುವಂತೆ ಮಾಡುವ ಡಿಬಿಟಿ ವ್ಯವಸ್ಥೆ ಕೂಡಾ ರೂಪುರೇಷೆಯಲ್ಲಿತ್ತು.

 

ಅತಿ ಮಹತ್ವಪೂರ್ಣ ಪಿ.ಎಮ್.ಜೆ.ಡಿ.ವೈ. ಯ ಮುಂದುವರಿಕೆಗೆ ನಿರ್ಧಾರ ಮಾಡಿದ್ದು, ಇದರಲ್ಲಿ ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕನ ವರೆಗೆ ಖಾತೆಗಳನ್ನು ತೆರೆಯುವ ಲಕ್ಷ್ಯ ಎಂಬ ಬದಲಾವಣೆ ಮಾಡಲಾಗಿದೆ.

ಈ ರೀತಿಯ ಚಟುವಟಿಕೆಗಳಿಗೆ ಜನ್ ಧನ್- ಆಧಾರ್- ಮೊಬೈಲ್ ( ಜೆ.ಎ.ಎಮ್) ಬೆನ್ನೆಲುಬಾಗಿ ( ಆಧಾರ ಸ್ಥಂಬವಾಗಿ ) ಕಾರ್ಯನಿರ್ವಹಿಸಿ, ಆಮೂಲಕ ಡಿಜಿಟಲ್ ಘಟ್ಟದ ಆರ್ಥಿಕ ಸೇರ್ಪಡೆಯ & ಸುರಕ್ಷಿತ ( ವಿಮಾಭದ್ರತೆ)ಯ ಸಮಾಜವನ್ನು ನಿರ್ಮಿಸಲಿದೆ. 

 

ಹಿನ್ನಲೆ:

ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿಕೊಳ್ಳುವುದು ಸಾಂದ್ರತೆಯಲ್ಲಿ ಹೆಚ್ಚಳಗೊಳಿಸುವುದು, ಹಣಕಾಸು ಸೇರ್ಪಡೆಯ ಪ್ರಚಾರ,ದೇಶದಾದ್ಯಂತ ಪ್ರತಿಯೊಂದೂ ಕುಟುಂಬ ಕನಿಷ್ಟ ಒಂದು ಖಾತೆಯನ್ನು ಹೊಂದಿರುವುದು  ಮುಂತಾದ ವಿಷಯಗಳಿಗಾಗಿ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ ( ಪಿ.ಎಮ್.ಜೆ.ಡಿ.ವೈ.) ಯನ್ನು 15ನೇ ಆಗಸ್ಟ್ 2014ರಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಹಾಗೂ ಯೋಜನೆಯು 2ನೇ ಆಗಸ್ಟ್ 2014ರಂದು ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.     

 

  

(Release ID :183288)



(Release ID: 1545528) Visitor Counter : 76