ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು 

Posted On: 04 SEP 2018 5:58PM by PIB Bengaluru

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು 
 

ಲೋಕ್ ಕಲ್ಯಾಣ ಮಾರ್ಗ್ ನಲ್ಲಿ ಜರುಗಿದ ಶಿಕ್ಷಕರ ದಿನದ ಮುನ್ನಾದಿನದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2017 ರ ವಿಜೇತರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ಜಾವಡೇಕರ್ ಅವರೂ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ದೇಶದಲ್ಲಿನ ವಿದ್ಯಾಭ್ಯಾಸದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಶಸ್ತಿ ವಿಜೇತರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. ವಿದ್ಯಾಭ್ಯಾಸಕ್ಕಾಗಿ ಸಮರ್ಪಣೆ ಮತ್ತು ಅವುಗಳನ್ನು ತಮ್ಮ ಜೀವಿತದ ಮಂತ್ರವನ್ನಾಗಿಸಿಕೊಂಡ ಶಿಕ್ಷಕರನ್ನು ಶ್ಲಾಘಿಸಿದರು. ಒಬ್ಬ ಶಿಕ್ಷಕ, ಅವರ ಜೀವನ ಪರ್ಯಂತ ಶಿಕ್ಷಕರಾಗಿಯೇ ಇರುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. 

ಸಮುದಾಯವನ್ನು ಜೊತೆಗೂಡಿಸಿ ಶಾಲಾ ಅಭಿವೃದ್ಧಿಯ ಮುಖ್ಯ ಭಾಗವಾಗಿ ಸೇರಿಸಿಕೊಳ್ಳಿ ಎಂದು ಪ್ರಧಾನಮಂತ್ರಿ ಅವರು ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ಸಂವಾದದ ವೇಳೆ ತಿಳಿಸಿದರು. ವಿದ್ಯಾರ್ಥಿಗಳ , ಅದರಲ್ಲೂ ಬಡ ಮತ್ತು ಗ್ರಾಮೀಣ ಹಿನ್ನಲೆಯ ವಿದ್ಯಾರ್ಥಿಗಳ, ಒಳಗಿರುವ ಅದಮ್ಯ ಚೇತನ (ಶಕ್ತಿ/ಸಾಮರ್ಥ್ಯ)ವನ್ನು ಹೊರತರುವ ಕಾರ್ಯ ಶಿಕ್ಷಕರಿಂದಾಗಬೇಕು. 

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಪರ್ಕ ಕಡಿತವನ್ನು ನೀಗಲು ಶಿಕ್ಷಣನೀಡುವವರು ಪ್ರಯತ್ನಿಸಬೇಕು. ಆ ಮೂಲಕ ಶಿಕ್ಷಕರನ್ನು ವಿದ್ಯಾರ್ಥಿಗಳು ತಮ್ಮ ಜೀವನ ಪರ್ಯಂತ ನೆನೆಪಿಸುವಂತಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ, ಡಿಜಿಟಲ್ ಮೂಲಕ ಶಾಲೆ ಮತ್ತು ಪರಿಸರದ (ಸುತ್ತುಮುತ್ತಲ ) ಪ್ರದೇಶಗಳನ್ನು ಕೂಡಾ ಪರಿವರ್ತಿಸಬೇಕು ಎಂದು ಅವರು ಶಿಕ್ಷಕರನ್ನು ಪ್ರೇರೇಪಿಸಿದರು. 

ಶಾಲೆಗಳನ್ನು ಕಲಿಕೆ ಮತ್ತು ಉತ್ಕೃಷ್ಟತೆಯ ಕೇಂದ್ರವಾಗಿ ಮಾರ್ಪಡಿಸಿದ ಸ್ಪೂರ್ತಿದಾಯಕ ತಮ್ಮ ಕತೆಗಳನ್ನು ಪ್ರಧಾನಮಂತ್ರಿ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರು ವಿವರಿಸಿದರು. ದೇಶದಾದ್ಯಂತ ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ಬೃಹತ್ ಬದಲಾವಣೆಯನ್ನು ತರುವ ಡಿಜಿಟಲ್ ಇಂಡಿಯಾದಂತಹ ಯೋಜನೆಗಳನ್ನು ಮತ್ತು ಅಂತರ್ಜಾಲ ಮೂಲಕ ನಾಮನಿರ್ದೇಶನ ನೀಡುವ ನೂತನ ಪ್ರಕ್ರಿಯೆಯ ಯೋಜನೆಯನ್ನು ಅನುಷ್ಠಾಗೊಳಿಸಿದ್ದಕ್ಕಾಗಿ ಪ್ರಶಸ್ತಿ ವಿಜೇತರು ಪ್ರಧಾನಮಂತ್ರಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು. 

ಈ ವರ್ಷ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಷ್ಟ್ರೀಯ ಪ್ರಶಸ್ತಿಗಾಗಿ ಶಿಕ್ಷಕರ ಆಯ್ಕೆಯ ಮಾನದಂಡವನ್ನು ನವೀಕರಿಸಿದೆ. ಸ್ವ-ನಾಮನಿರ್ದೇಶನ ಮತ್ತು ರಾಷ್ಟ್ರೀಯ ಬೃಹತ್ ಪ್ರಶಸ್ತಿಗಳ ನಾವಿನ್ಯತೆಯಿಂದ ಪ್ರೇರಿತವಾಗಿ ನೂತನ ಆವಿಷ್ಕಾರದ ಯೋಜನೆ ಅನುಷ್ಠಾನಗೊಳಿಸಿದೆ. ಅತ್ಯಂತ ಪಾರದರ್ಶಕ, ನ್ಯಾಯಯುತ, ಉತ್ಕೃಷ್ಠತೆ ಮತ್ತು ಅತ್ಯುತ್ತಮ ಪ್ರದರ್ಶನವನ್ನು ಈ ಯೋಜನೆಯ ಮಾನದಂಡ ಬಿಂಬಿಸುತ್ತದೆ. 



(Release ID: 1545525) Visitor Counter : 75