ಪ್ರಧಾನ ಮಂತ್ರಿಯವರ ಕಛೇರಿ

ಯು.ಎಸ್. ರಾಜ್ಯ ಕಾರ್ಯದರ್ಶಿ ಮತ್ತು ಯು.ಎಸ್. ರಕ್ಷಣಾ ಕಾರ್ಯದರ್ಶಿಗಳಿಂದ ಪ್ರಧಾನಮಂತ್ರಿ ಭೇಟಿ. 

Posted On: 06 SEP 2018 7:50PM by PIB Bengaluru

ಯು.ಎಸ್. ರಾಜ್ಯ ಕಾರ್ಯದರ್ಶಿ ಮತ್ತು ಯು.ಎಸ್. ರಕ್ಷಣಾ ಕಾರ್ಯದರ್ಶಿಗಳಿಂದ ಪ್ರಧಾನಮಂತ್ರಿ ಭೇಟಿ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಯು.ಎಸ್. ರಾಜ್ಯ ಕಾರ್ಯದರ್ಶಿ ಶ್ರೀ ಮೈಖಲ್ ಆರ್ ಪೊಂಪೆ ಮತ್ತು ಯು.ಎಸ್. ರಕ್ಷಣಾ ಕಾರ್ಯದರ್ಶಿ ಶ್ರೀ ಜೇಮ್ಸ್ ಮಟ್ಟಿಸ್ ನವದೆಹಲಿಯಲ್ಲಿಂದು ಭೇಟಿಯಾದರು. 

ಅವರು ಅಧ್ಯಕ್ಷ ಶ್ರೀ ಟ್ರಂಪ್ ಅವರ ಶುಭಾಶಯಗಳನ್ನು ಪ್ರಧಾನಮಂತ್ರಿ ಅವರಿಗೆ ತಿಳಿಸಿದರು. ಪ್ರಧಾನಮಂತ್ರಿ ಅವರು ಅಧ್ಯಕ್ಷ ಶ್ರೀ ಟ್ರಂಪ್ ಅವರೊಂದಿಗೆ ನಡೆಸಿದ ಭೇಟಿ-ಮಾತುಕತೆಗಳನ್ನು ನೆನಪಿಸಿಕೊಂಡರು ಮತ್ತು ಅಧ್ಯಕ್ಷ ಶ್ರೀ ಟ್ರಂಪ್ ಅವರಿಗೆ ತಮ್ಮ ಶುಭಾಶಯವನ್ನು ಹೇಳಲು ಕಾರ್ಯದರ್ಶಿಗಳಿಗೆ ವಿನಂತಿಸಿದರು. 

ಇಂದು ನಡೆದ ಫಲವತ್ತ ಮತ್ತು ಉತ್ಪಾದನಾಶೀಲ 2+2 ಮಾತುಕತೆ ಬಗ್ಗೆ ಮಾಹಿತಿಗಳನ್ನು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು. ಎರಡೂ ದೇಶಗಳ ನಡುವಣ ಮೊದಲ 2+2 ಮಾತುಕತೆ ಏರ್ಪಡಿಸಿದ್ದಕ್ಕಾಗಿ ಇಬ್ಬರೂ ಕಾರ್ಯದರ್ಶಿಗಳನ್ನು ,ಅವರ ಸಹವರ್ತಿ ಭಾರತೀಯ ಕಾರ್ಯದರ್ಶಿಗಳನ್ನು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರನ್ನು ಮತ್ತು ರಕ್ಷಣಾ ಸಚಿವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. 



(Release ID: 1545460) Visitor Counter : 63