ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರಾದ್ಯಂತ ಇರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಫಲಾನುಭವಿಗಳೊಂದಿಗೆ ನಾಳೆ ನೇರ ಸಂವಾದ ನಡೆಸಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ

Posted On: 11 JUL 2018 5:50PM by PIB Bengaluru

ರಾಷ್ಟ್ರಾದ್ಯಂತ ಇರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಫಲಾನುಭವಿಗಳೊಂದಿಗೆ ನಾಳೆ ನೇರ ಸಂವಾದ ನಡೆಸಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂವಾದದ ಮೂಲಕ ನಾಳೆ ಅಂದರೆ ಜುಲೈ 12ರಂದು ಬೆಳಗ್ಗೆ 9.30ಕ್ಕೆ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿ.ಎ.ವೈ. 

ಎನ್ಆರ್.ಎಲ್.ಎಂ.) ಅಡಿಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಡಿಡಿಯು-ಜಿಕೆವೈ ಮತ್ತು ಆರ್.ಎಸ್.ಇ.ಟಿ.ಐ.ಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಡಿಎ.ವೈ – ಎನ್.ಆರ್.ಎಲ್.ಎಂ. ಅಡಿಯಲ್ಲಿ ಸ್ವಹಾಯ ಗುಂಪುಗಳು ಕೈಗೊಂಡಿರುವ ವಿವಿಧ ಚಟುವಟಿಕೆಗಳ ಬಗ್ಗೆ ಮತ್ತು ಅವು ಹೇಗೆ ಅವರ ಬದುಕಿನ ಮೇಲೆ ಪರಿಣಾಮ ಬೀರಿವೆ ಎಂಬ ಬಗ್ಗೆ ನೇರವಾಗಿ ಅದರ ಸದಸ್ಯರಿಂದಲೇ ತಿಳಿಯುವ ಅವಕಾಶ ಈ ಸಂವಾದದಿಂದ ಪ್ರಧಾನಮಂತ್ರಿಯವರಿಗೆ ದೊರಕುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ದೂರದರ್ಶನ ನೇರ ಪ್ರಸಾರ ಮಾಡಲಿದೆ ಮತ್ತು ಎನ್.ಐ.ಸಿ. ತನ್ನ ಜಾಲದಲ್ಲಿ ಇದನ್ನು ವೆಬ್ ಕಾಸ್ಟ್ ಮಾಡಲಿದೆ. 

ಆಯ್ದ ಫಲಾನುಭವಿಗಳಲ್ಲಿ ಬಿಹಾರದ ಮೆಕ್ಕೆಜೋಳ ಮೌಲ್ಯ ಸರಪಣಿ ಮತ್ತು ಮಾರುಕಟ್ಟೆ, ಛತ್ತೀಸಗಢದ ಟ್ಟಿಕೆ ತಯಾರಿಕಾ ಘಟಕ, ವಾಣಿಜ್ಯ ಪ್ರತಿನಿಧಿ ಸಖಿ ಮತ್ತು ಹುಣಸೆಹಣ್ಣಿನ ಮೌಲ್ಯ ಸರಪಳಿ ಮತ್ತು ಮಾರುಕಟ್ಟೆ ಹಾಗೂ ಮದ್ಯಪಾನ ವಿರೋಧಿ ಚಳವಳಿಯ ಮೇಲೆ ಕೆಲಸ ಮಾಡುತ್ತಿರುವ ಸ್ವ ಸಹಾಯ ಗುಂಪುಗಳ ಫಲಾನುಭವಿಗಳು ಮತ್ತು ಜಾರ್ಖಂಡ್ ನ ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದನೆ ಮತ್ತು ಮಾರುಕಟ್ಟೆ ಹಾಗೂ ಮಧ್ಯಪ್ರದೇಶದ ಡಿಡಿಯು –ಜಿಕೆವೈನ ಒಬ್ಬ ಫಲಾನುಭವಿ ಸೇರಿದ್ದಾರೆ. ರಾಜಾಸ್ಥಾನದ ಸೌರ ಫಲಕ ಹಾಗೂ ದೀಪ ಉತ್ಪಾದನೆ ಹಾಗೂ ಮಾರುಕಟ್ಟೆ, ಮಹಾರಾಷ್ಟ್ರದ ಪಶು ಸಖಿ ಮತ್ತು ಡಿಡಿಯು –ಜಿಕೆವೈ ಫಲಾನುಭವಿಗಳು ಸಹ ಈ ನೇರ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ತಮಿಳುನಾಡಿನ ದಿವ್ಯಾಂಗಿಗಳ ಕಲ್ಯಾಣ ಸಂಸ್ಥೆ, ತೆಲಂಗಾಣದ ಎಸ್.ಎಚ್.ಜಿ. ರೂಪಿಸುವ ಹೊರ ಸಮುದಾಯದ ಸಂಪನ್ಮೂಲ ವ್ಯಕ್ತಿ, ಜಮ್ಮು ಮತ್ತು ಕಾಶ್ಮೀರದ ಕ್ಷೀರ ಉತ್ಪಾದನಾ ಘಟಕ ಮತ್ತು ಗುಜರಾತ್ ನ ಬೇವಿನ ಬೀಜ ಸಂಗ್ರಹಣೆ ಮತ್ತು ಮಾರುಕಟ್ಟೆ ಸಂಸ್ಥೆಗಳೂ ಸಂವಾದದ ಭಾಗವಾಗಲಿವೆ. 

ಡಿ.ಎ.ವೈ –ಎನ್.ಆರ್.ಎಲ್.ಎಂ ಮಹಿಳಾ ಸಬಲೀಕರಣದಅತಿ ದೊಡ್ಡ ಸಾಂಸ್ಥಿಕ ವೇದಿಕೆಯಾಗಿ ಹೊರಹೊಮ್ಮಿದೆ. ಈ ಅಭಿಯಾನವು ಈಗ 29 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ 600 ಜಿಲ್ಲೆಗಳ 4884 ಬ್ಲಾಕ್ ಗಳಲ್ಲಿ ವ್ಯಾಪಿಸಿದ್ದು, ಅನುಷ್ಠಾನಗೊಳ್ಳುತ್ತಿವೆ. 2018ರ ಮೇವರೆಗೆ 5 ಕೋಟಿಗೂ ಹೆಚ್ಚು ಮಹಿಳೆಯರು 45 ಲಕ್ಷ ಸ್ವಸಹಾಯ ಗುಂಪುಗಳಾಗಿ ಒಗ್ಗೂಡಿದ್ದಾರೆ. ಇದರ ಜೊತೆಗೆ 2.48 ಲಕ್ಷ ಗ್ರಾಮ ಸಂಘಟನೆಗಳು ಮತ್ತು 20 ಸಾವಿರ ಕ್ಲಸ್ಟರ್ ಮಟ್ಟದ ಒಕ್ಕೂಟಗಳನ್ನು ಸಹ ಉತ್ತೇಜಿಸಲಾಗಿದೆ. 
 

***



(Release ID: 1538472) Visitor Counter : 109