ಸಂಪುಟ

ತ್ರಿಪುರದ ಅಗರ್ತಲ ವಿಮಾನ ನಿಲ್ದಾಣಕ್ಕೆ ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ವಿಮಾನ ನಿಲ್ದಾಣ ಎಂದು ಹೆಸರಿಡಲು ಸಂಪುಟ ಸಮ್ಮತಿ

Posted On: 04 JUL 2018 2:30PM by PIB Bengaluru

ತ್ರಿಪುರದ ಅಗರ್ತಲ ವಿಮಾನ ನಿಲ್ದಾಣಕ್ಕೆ ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ವಿಮಾನ ನಿಲ್ದಾಣ ಎಂದು ಹೆಸರಿಡಲು ಸಂಪುಟ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತ್ರಿಪುರದ ಅಗರ್ತಲ ವಿಮಾನ ನಿಲ್ದಾಣಕ್ಕೆ "ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ವಿಮಾನ ನಿಲ್ದಾಣ' ಎಂದು ಹೆಸರಿಡಲು ಸಮ್ಮತಿ ನೀಡಲಾಗಿದೆ. ಈ ನಿರ್ಧಾರದಿಂದ ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ಅವರಿಗೆ ಗೌರವ ಸಲ್ಲಿಸಬೇಕೆಂಬ ತ್ರಿಪುರದ ಜನರು ಹಾಗೂ ತ್ರಿಪುರ ಸರ್ಕಾರದ ಬಹಳ ಕಾಲದ ಕೋರಿಕೆ ಮನ್ನಣೆ ಸಿಕ್ಕಿದಂತೆ ಆಗಿದೆ. 

ಹಿನ್ನೆಲೆ: 1923ರಲ್ಲಿ ಅಂದಿನ ತ್ರಿಪುರ ರಾಜ್ಯದ ರಾಜನಾಗಿ ಪಟ್ಟಕ್ಕೇರಿದ ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್, ಜನಪರ ಹಾಗೂ ಜ್ಞಾನಿ ಅರಸ. ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ದಾನವಾಗಿ ನೀಡಿದ ಭೂಮಿಯಲ್ಲಿ ಅಗರ್ತಲ ವಿಮಾನ ನಿಲ್ದಾಣವನ್ನು 1942ರಲ್ಲಿ ನಿರ್ಮಿಸಲಾಗಿತ್ತು. 

ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ, ಮುನ್ನೋಟವಿದ್ದ ಅರಸನಾಗಿದ್ದ ಅವರು ತ್ರಿಪುರದ ಸರ್ವತೋಮುಖ ಬೆಳವಣಿಗೆಗೆ ಹಲವು ಯೋಜನೆಗಳನ್ನು ರೂಪಿಸಿದರು. ಅವರ ಪ್ರೋತ್ಸಾಹದಿಂದ ಅಗರ್ತಲದಲ್ಲಿ ನಿರ್ಮಾಣಗೊ0ಡ ಈ ವಿಮಾನನಿಲ್ದಾಣವು ಈಶಾನ್ಯ ಭಾಗದ ಎರಡನೇ ಕಾರ್ಯಮಗ್ನ ಏರೋಡ್ರೋಮ್ ಆಗಿದ್ದು, ತ್ರಿಪುರಕ್ಕೆ ವಾಯು ಸಂಪರ್ಕವನ್ನು ಕಲ್ಪಿಸುತ್ತಿದೆ. ಆದ್ದರಿಂದ, ವಿಮಾನನಿಲ್ದಾಣಕ್ಕೆ ಮರುನಾಮಕರಣ ಮಾಡಿರುವುದು ಮಹಾರಾಜ ವೀರ್ ವಿಕ್ರಮ್ ಮಾಣಿಕ್ಯ ಕಿಶೋರ್ ಅವರಿಗೆ ಸಲ್ಲಿಸಿದ ಸೂಕ್ತ ಗೌರವವಾಗಿದೆ. 



(Release ID: 1537959) Visitor Counter : 90