ಬಾಹ್ಯಾಕಾಶ ವಿಭಾಗ

ಕಡಲ ಸಂಬಂಧ ಅರಿವು ನಿಯೋಗದಲ್ಲಿ ಸಹಕಾರ ಕುರಿತ ಫ್ರಾನ್ಸ್ ಮತ್ತು ಭಾರತದ ನಡುವಿನ ಒಪ್ಪಂದದ ಅನುಷ್ಠಾನ ಕುರಿತು ಸಂಪುಟಕ್ಕೆ ಮಾಹಿತಿ 

प्रविष्टि तिथि: 27 JUN 2018 3:47PM by PIB Bengaluru

ಕಡಲ ಸಂಬಂಧ ಅರಿವು ನಿಯೋಗದಲ್ಲಿ ಸಹಕಾರ ಕುರಿತ ಫ್ರಾನ್ಸ್ ಮತ್ತು ಭಾರತದ ನಡುವಿನ ಒಪ್ಪಂದದ ಅನುಷ್ಠಾನ ಕುರಿತು ಸಂಪುಟಕ್ಕೆ ಮಾಹಿತಿ 
 

ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಗೆ ಮಾರ್ಚ್ 10, 2018ರಲ್ಲಿ ಸಹಿ ಹಾಕಲ್ಪಟ್ಟ ಕಡಲ ಸಂಬಂಧಿತ ಕಾರ್ಯಕ್ಷೇತ್ರ(ಡೊಮೇನ್)ದ ಅರಿವು ನಿಯೋಗದ ಸೂತ್ರೀಕರಣದ ಮೊದಲಿನ ಅಧ್ಯಯನದ ಅನುಷ್ಠಾನ ಒಪ್ಪಂದ(ಐಎ) ಕುರಿತು ತಿಳಿಸಿ ಕೊಡಲಾಯಿತು. 

ಉದ್ದೇಶಿತ ಜಂಟಿ ನಿಯೋಗವು ಕಡಲ ಸಂಬಂಧಿತ ಕಾರ್ಯಕ್ಷೇತ್ರದ ಅರಿವು ಮೂಡಿಸಲು ನಿಯುಕ್ತವಾಗಿದ್ದು, ಎರಡೂ ದೇಶಗಳಿಗೆ ಅಗತ್ಯವಾದ ಸೇವೆಗಳು ಹಾಗೂ ಮಾಹಿತಿಯನ್ನು ಒದಗಿಸುವ ಉದ್ದೇಶವನ್ನು ಇಟ್ಟುಕೊಂಡಿದೆ. ಕಡಲಿನಲ್ಲಿ ಸಂಚರಿಸುವ ಹಡಗುಗಳ ಪರಾಮರ್ಶನ ಹಾಗೂ ಒಪ್ಪಂದವನ್ನು ಉಲ್ಲಂಘಿಸಿ ಸಂಚರಿಸುವ ಹಡಗುಗಳನ್ನು ಗುರುತಿಸುವುದು ಇದರ ಉದ್ದೇಶ. ಭಾರತ ಮತ್ತು ಫ್ರಾನ್ಸ್‍ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಈ ಪ್ರಾಂತ್ಯದಲ್ಲಿ ಸಂಚರಿಸುವ ಹಡಗುಗಳನ್ನು ಪತ್ತೆ ಹಚ್ಚುವುದು, ಗುರುತಿಸುವುದು ಮತ್ತು ಮೇಲುಸ್ತುವಾರಿ ನಡೆಸುವುದು ಈ ಪರಾಮರ್ಶನ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. 

ಐಎ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಹಾಗೂ ಫ್ರಾನ್ಸ್‍ನ ಸೆಂಟರ್ ನೇಷನಲ್ ಡೆಟ್ಯೂಡ್ಸ್ ಸ್ಪೇಷಿಯಲ್ಸ್(ಸಿಎನ್‍ಇಎಸ್) ಜಂಟಿಯಾಗಿ ಸೂತ್ರೀಕರಣದ ಮೊದಲಿನ ಅಧ್ಯಯನಗಳಡಿ ನಾನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದು, ಒಪ್ಪಂದಕ್ಕೆ ಸಹಿ ಹಾಕಿದ ಒಂದು ವರ್ಷದೊಳಗೆ ಅಧ್ಯಯನದ ಫಲಿತಾಂಶವನ್ನು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಲಿವೆ. 


(रिलीज़ आईडी: 1536950) आगंतुक पटल : 141
इस विज्ञप्ति को इन भाषाओं में पढ़ें: English , Tamil , Telugu