ಸಂಪುಟ

ಸುಸ್ಥಿರ ನಗರಾಭಿವೃದ್ಧಿಗಾಗಿ ಭಾರತ-ಯುನೈಟೆಡ್ ಕಿಂಗ್‍ಡಮ್ ನಡುವಿನ ತಾಂತ್ರಿಕ ಸಹಕಾರ ಒಡಂಬಡಿಕೆಗೆಕೇಂದ್ರ ಸಂಪುಟ ಅಸ್ತು.

Posted On: 06 JUN 2018 3:25PM by PIB Bengaluru

ಸುಸ್ಥಿರ ನಗರಾಭಿವೃದ್ಧಿಗಾಗಿ ಭಾರತ-ಯುನೈಟೆಡ್ ಕಿಂಗ್‍ಡಮ್ ನಡುವಿನ ತಾಂತ್ರಿಕ ಸಹಕಾರ ಒಡಂಬಡಿಕೆಗೆಕೇಂದ್ರ ಸಂಪುಟ ಅಸ್ತು. 
 

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸುಸ್ಥಿರನಗರಾಭಿವೃದ್ಧಿಗಾಗಿ ಅಗತ್ಯವಿರುವ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಯುನೈಟೆಡ್ ಕಿಂಗ್‍ಡಮ್ ಮಾಡಿಕೊಂಡಿರುವಒಡಂಬಡಿಕೆಯನ್ನು ಕುರಿತು ಚರ್ಚಿಸಿ, ಇದಕ್ಕೆ ಒಪ್ಪಿಗೆ ನೀಡಲಾಯಿತು. 

ವಿವರಗಳು: 

ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‍ಡಮ್ ನಡುವೆ ಸಾಂಸ್ಥಿಕ ಸಹಕಾರವನ್ನು ಬಲಪಡಿಸುವುದು ಈಒಡಂಬಡಿಕೆಯ ಉದ್ದೇಶವಾಗಿದೆ. ಇದು ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣೆ, ಕೈಗೆಟುಕುವ ದರದಲ್ಲಿ ಪರಿಸರಸ್ನೇಹಿವಸತಿ ಸೌಲಭ್ಯ, ತ್ಯಾಜ್ಯ ನೀರಿನ ನಿರ್ವಹಣೆ, ನಗರ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಳ, ನಗರ ಪ್ರದೇಶಗಳಲ್ಲಿ ಕೌಶಲ್ಯಾಭಿವೃದ್ಧಿ, ನಗರಸಾರಿಗೆ, ದಕ್ಷ ಮತ್ತು ಸುಗಮ ಸಾರಿಗೆ ವ್ಯವಸ್ಥೆ ಯನ್ನು ಆಧರಿಸಿದ ಅಭಿವೃದ್ಧಿ, ಹಣಕಾಸು ಮತ್ತು ಇದಕ್ಕೆ ಸಂಬಂಧಿಸಿದ ಇನ್ನಿತರಅಂಶಗಳೊಂದಿಗೆ ಹೊಸ ಬಗೆಯ ಸಂಪರ್ಕ/ಸಂಬಂಧ ಸ್ಥಾಪನೆಗಳನ್ನು ಒಳಗೊಂಡಿದೆ. 

ಜಾರಿ ವಿಧಾನ: 

ಈ ಒಡಂಬಡಿಕೆಯನ್ನು ಜಾರಿಗೆ ತರಲು ಅಗತ್ಯವಾದ ವಿಧಿವಿಧಾನಗಳನ್ನು ರೂಪಿಸಲು ಭಾರತ-ಯುಕೆ ಜಂಟಿ ಕಾರ್ಯ ಸಮಿತಿಯನ್ನುರಚಿಸಲಾಗುವುದು. ನಗರಾಭಿವೃದ್ಧಿಗೆ ಸಂಬಂಧಿಸಿದ ಈ ಜಂಟಿ ಕಾರ್ಯ ಸಮಿತಿಯು ವರ್ಷಕ್ಕೊಂದು ಸಲ ಸಭೆ ಸೇರುವ ಸಂಭವವಿದೆ. ಈಸಭೆಯು ಒಂದು ವರ್ಷ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ನಡೆದರೆ, ಇನ್ನೊಂದು ವರ್ಷ ಭಾರತದಲ್ಲಿ ನಡೆಯಲಿದೆ. 

ಮಹತ್ವದ ಪರಿಣಾಮ: 

ಈ ಒಡಂಬಡಿಕೆಯು ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ಶಕ್ತಿಯುತವಾದ, ಗಹನವಾದ ಮತ್ತು ದೀರ್ಘಕಾಲದದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲಿದೆ. 

ಫಲಾನುಭವಿಗಳು: 

ಈ ಒಡಂಬಡಿಕೆಯು ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣೆ, ಕೈಗೆಟುಕುವ ದರದಲ್ಲಿ ಪರಿಸರಸ್ನೇಹಿ ವಸತಿ ನಿರ್ಮಾಣ,ತ್ಯಾಜ್ಯ ನೀರು ನಿರ್ವಹಣೆ, ನಗರ ಪ್ರದೇಶಗಳಲ್ಲಿ ಕೌಶಲಾಭಿವೃದ್ಧಿ, ನಗರ ಸಂಚಾರ, ದಕ್ಷ ಮತ್ತು ಸುಗಮ ಸಾರಿಗೆ ವ್ಯವಸ್ಥೆಯನ್ನುಆಧರಿಸಿದ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ. 
 

***


(Release ID: 1535132)