ಪ್ರಧಾನ ಮಂತ್ರಿಯವರ ಕಛೇರಿ

ಐ.ಎನ್.ಎಸ್.ವಿ. ತಾರಿಣಿ ಸಿಬ್ಬಂದಿಗಳನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ

Posted On: 23 MAY 2018 2:19PM by PIB Bengaluru

ಐ.ಎನ್.ಎಸ್.ವಿ. ತಾರಿಣಿ ಸಿಬ್ಬಂದಿಗಳನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ 
 

ಐ.ಎನ್.ಎಸ್.ವಿ. ತಾರಿಣಿ ಹಡಗಿನಲ್ಲಿ ಯಶಸ್ವಿಯಾಗಿ ಭೂ ಪರ್ಯಟನೆ ಮಾಡಿದ ಭಾರತೀಯ ನೌಕಾಪಡೆಯ ಆರು ಮಂದಿ ಮಹಿಳಾ ಸಿಬ್ಬಂದಿಗಳು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ನಾವಿಕ ಸಾಗರ ಪರಿಕ್ರಮ ಹೆಸರಿನ ಈ ಸಾಹಸ ಯಾತ್ರೆ, ಸರ್ವ ಮಹಿಳಾ ಸಿಬ್ಬಂದಿಗಳ ಸಾರಥ್ಯದಲ್ಲಿ ನಡೆದ ಮೊದಲ ಭಾರತೀಯ ವಿಶ್ವ ಪರ್ಯಟನೆಯಾಗಿದೆ. 

ಸಂವಾದದಲ್ಲಿ ಸಿಬ್ಬಂದಿಗಳು ಈ ಸಾಹಸ ಯಾತ್ರೆಯ ವಿವಿಧ ಅಂಶಗಳ ಬಗ್ಗೆ ಪ್ರದರ್ಶಿಕೆಯನ್ನು ತೋರಿಸಿದರು, ತಮ್ಮ ತಯಾರಿ, ತರಬೇತಿ, ಮತ್ತು ಪ್ರಯಾಣದ ಅವಧಿಯ ಅನುಭವಗಳನ್ನು ಹಂಚಿಕೊಂಡರು.

ಪ್ರಧಾನ ಮಂತ್ರಿಗಳು ಸಾಹಸ ಯಾತ್ರೆಯ ಯಶಸ್ಸಿಗಾಗಿ ಮಹಿಳಾ ಸಿಬ್ಬಂದಿಗಳನ್ನು ಅಭಿನಂದಿಸಿದರು. ಪ್ರವಾಸದ ಅವಧಿಯಲ್ಲಿಯ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುವಂತೆ ಮತ್ತು ದಾಖಲಿಸುವಂತೆ ಅವರನ್ನು ಪ್ರೋತ್ಸಾಹಿಸಿದರು. ನೌಕಾದಳದ ವರಿಷ್ಟ ಅಡ್ಮಿರಲ್ ಸುನಿಲ್ ಲಾಂಬಾ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಈ ಹಡಗನ್ನು ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಷಿ ನೇತೃತ್ವದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಗಳಾದ ಪ್ರತಿಭಾ ಜಮ್ವಾಲ್, ಪಿ.ಸ್ವಾತಿ, ಮತ್ತು ಲೆಫ್ಟಿನೆಂಟ್ ಗಳಾದ ಎಸ್. ವಿಜಯ ದೇವಿ, ಬಿ.ಐಶ್ವರ್ಯಾ ಮತ್ತು ಪಾಯಲ್ ಗುಪ್ತಾ ಅವರನ್ನೊಳಗೊಂಡ ಸಿಬಂದಿಗಳ ತಂಡ ಮುನ್ನಡೆಸಿತ್ತು.
 

****



(Release ID: 1533463) Visitor Counter : 42