ಸಂಪುಟ

ಭಾರತ ಮತ್ತು ಅಂಗೋಲಾ ನಡುವೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿದ ಸಂಪುಟ

Posted On: 23 MAY 2018 3:57PM by PIB Bengaluru

ಭಾರತ ಮತ್ತು ಅಂಗೋಲಾ ನಡುವೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿದ ಸಂಪುಟ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಅಂಗೋಲಾ ನಡುವೆ ಏರ್ಪಟ್ಟ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಉತ್ತೇಜಿಸುವ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು.

ಈ ತಿಳುವಳಿಕಾ ಒಡಂಬಡಿಕೆಯು ಇ-ಆಡಳಿತ, ಮಾಹಿತಿ ತಂತ್ರಜ್ಞಾನ ಶಿಕ್ಷಣಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ಭದ್ರತೆ, ಇಲೆಕ್ಟ್ರಾನಿಕ್ಸ್ ಹಾರ್ಡ್ ವೇರ್ ಉತ್ಪಾದನೆ , ಮಾಹಿತಿ ತಂತ್ರಜ್ಞಾನ ಆಧಾರಿತ ಸಾಫ್ಟ್ ವೇರ್ ಉದ್ಯಮ, ಟೆಲಿ ಮೆಡಿಸಿನ್ ಇತ್ಯಾದಿ ಕ್ಷೇತ್ರದಲ್ಲಿ ಹೆಚ್ಚು ನಿಕಟ ಸಹಕಾರವನ್ನು ಸಾಧಿಸುವ ಉದ್ದೇಶ ಹೊಂದಿದೆ.

ಹಿನ್ನೆಲೆ:

ಈ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರದ ಚೌಕಟ್ಟಿನಲ್ಲಿ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (ಎಂ.ಇ.ಐ.ಟಿ, ವೈ ) ಗೆ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ (ಐ.ಸಿ.ಟಿ.)ಯ ಉದಯಿಸುತ್ತಿರುವ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ಉತ್ತೇಜಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಎಂ.ಇ.ಐ.ಟಿ, ವೈ. ಯು ವಿವಿಧ ದೇಶಗಳ ತನ್ನ ಸ್ತರದ ಸಂಘಟನೆಗಳು/ಏಜೆನ್ಸಿಗಳ ಜೊತೆಯಲ್ಲಿ ಐ.ಸಿ.ಟಿ. ಕ್ಷೇತ್ರದಲ್ಲಿ ಮಾಹಿತಿ ವಿನಿಮಯ ಮತ್ತು ನಿಕಟ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ /ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಇದಲ್ಲದೆ ಭಾರತ ಸರಕಾರ ಕೈಗೆತ್ತಿಕೊಂಡಿರುವ ಹೊಸ ಉಪಕ್ರಮಗಳಾದ  “ಡಿಜಿಟಲ್ ಇಂಡಿಯಾ” , “ಮೇಕ್ ಇನ್ ಇಂಡಿಯಾ” ಇತ್ಯಾದಿಗಳ ಹಿನ್ನೆಲೆಯಲ್ಲಿ   ವಿವಿಧ ದೇಶಗಳ ಜೊತೆಯಲ್ಲಿ ಸಹಕಾರ ವರ್ಧನೆಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಾರೋದ್ಯಮ ಅವಕಾಶಗಳನ್ನು ಅನ್ವೇಷಿಸುವ ಆವಶ್ಯಕತೆಯೂ ಇದ್ದು ಆ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.

ಎಂ.ಇ.ಐ.ಟಿ, ವೈ.ಯು ಇ-ಆಡಳಿತ,ಮಾಹಿತಿ ತಂತ್ರಜ್ಞಾನ ಶಿಕ್ಷಣಕ್ಕೆ  ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ಭದ್ರತೆ, ಇಲೆಕ್ಟ್ರಾನಿಕ್ಸ್ ಹಾರ್ಡ್ ವೇರ್ ತಯಾರಿಕೆ, ಮಾಹಿತಿ ತಂತ್ರಜ್ಞಾನ ಆಧಾರಿತ ಸಾಫ್ಟ್ ವೇರ್ ಉದ್ಯಮ, ಟೆಲಿ ವೈದ್ಯಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಆದ್ಯತೆಯಾಧಾರದ ಸಮಗ್ರ ತಿಳುವಳಿಕಾ ಒಡಂಬಡಿಕೆಯನ್ನು ರೂಪಿಸುತ್ತದೆ. ಪರಸ್ಪರ ಮಾತುಕತೆಯ ಬಳಿಕ ಕರಡು ತಿಳುವಳಿಕಾ ಒಡಂಬಡಿಕೆ ಅಂತಿಮಗೊಳಿಸಲ್ಪಟ್ಟು ಅದಕ್ಕೆ ಭಾರತ ಸರಕಾರದ ಗೌರವಾನ್ವಿತ ವಿದೇಶೀ ವ್ಯವಹಾರಗಳ ಸಹಾಯಕ  ಸಚಿವರಾದ ಎಂ.ಜೆ. ಅಕ್ಬರ್ ಅವರು ತಮ್ಮ  ಭೇಟಿಯ ಸಂಧರ್ಭದಲ್ಲಿಎಂ.ಇ.ಐ.ಟಿ, ವೈ.ಯ ಪರವಾಗಿ ಮತ್ತು ಅಂಗೋಲಾ ಸರಕಾರದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವರ ಪರವಾಗಿ ಅಲ್ಲಿಯ ಅಂಗೋಲನ್ ಸಮುದಾಯಗಳು ಮತ್ತು ಅಂತಾರಾಷ್ಟ್ರೀಯ ಸಹಕಾರದ ಕಾರ್ಯದರ್ಶಿಯವರಾದ ಡೊಮಿಂಗೋ ಕಸ್ಟೋಡಿಯೋ ಅಂಕಿತ ಹಾಕಿರುತ್ತಾರೆ.



(Release ID: 1533453) Visitor Counter : 78