ಸಂಪುಟ

ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 16 MAY 2018 3:46PM by PIB Bengaluru

ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರ ಕುರಿತ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಏಪ್ರಿಲ್ 9ರಂದು ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದ ಈ ಕೆಳಕಂಡ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ:-

i)ಔಷಧ ಮತ್ತು ಔಷಧೀಯ ಉತ್ಪನ್ನಗಳು;

ii)ವೈದ್ಯಕೀಯ ಬಳಕೆ ಉತ್ಪನ್ನಗಳು;

iii)  ವೈದ್ಯಕೀಯ ಸಂಶೋಧನೆ;

iv)ವೈದ್ಯಕೀಯ ಸಲಕರಣೆ;

v)ಸಾರ್ವಜನಿಕ ಆರೋಗ್ಯ;

vi)ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಿಗಾ;

vii)  ಆರೋಗ್ಯ ಪ್ರವಾಸೋದ್ಯಮ; ಮತ್ತು

viii) ಪರಸ್ಪರರು ಸಮ್ಮತಿಸುವ ಇತರೆ ಯಾವುದೇ ಕ್ಷೇತ್ರ.

ಸಹಕಾರದ ವಿವರಗಳನ್ನು ಮತ್ತಷ್ಟು ವಿವರಿಸಲು ಮತ್ತು ತಿಳಿವಳಿಕೆ ಒಪ್ಪಂದದ ಅನುಷ್ಠಾನದ ಕಣ್ಗಾವಲಿಗಾಗಿ ಕಾರ್ಯ ಗುಂಪಿನ ರಚನೆಯನ್ನೂ ಮಾಡಲಾಗುವುದು.

 

*****



(Release ID: 1532354) Visitor Counter : 79