ಆಯುಷ್

ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ವಲಯದಲ್ಲಿ ಸಹಕಾರ ತತ್ವ ಸಿದ್ದಾಂತಕ್ಕೆ ಭಾರತ ಮತ್ತು ಸಾವೂ ಟೋಮ್ ನಡುವಿನ ಒಡಂಬಡಿಕೆಗೆ ಕೇಂದ್ರ ಸಂಪುಟ ಅನುಮೋದನೆ 

Posted On: 25 APR 2018 1:19PM by PIB Bengaluru

ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ವಲಯದಲ್ಲಿ ಸಹಕಾರ ತತ್ವ ಸಿದ್ದಾಂತಕ್ಕೆ ಭಾರತ ಮತ್ತು ಸಾವೂ ಟೋಮ್ ನಡುವಿನ ಒಡಂಬಡಿಕೆಗೆ ಕೇಂದ್ರ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ವಲಯದಲ್ಲಿ ಭಾರತ ಮತ್ತು ಸಾವೂ ಟೋಮ್ ನಡುವೆ ಸಹಕಾರ ತತ್ವ ಸಿದ್ಧಾಂತದ ಒಡಂಬಡಿಕೆಗೆ ಘಟನೋತ್ತರ ಅನುಮೋದನೆ ನೀಡಲಾಯಿತು. ಈ ಒಡಂಬಡಿಕೆಗೆ 2018ರ ಮಾರ್ಚ್ ನಲ್ಲಿ ಸಹಿ ಹಾಕಲಾಯಿತು. 

ಪ್ರಮುಖ ಪರಿಣಾಮ: 

ಈ ಒಪ್ಪಂದದಿಂದ ಎರಡೂ ದೇಶಗಳ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ. ಉಭಯ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದರೆ, ಇದರಿಂದ ಎರಡೂ ದೇಶಗಳಿಗೂ ಸಾಕಷ್ಟು ಪ್ರಾಮುಖ್ಯತೆ ದೊರಕಲಿದೆ. 

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ: 

ಸಹಿ ಮಾಡಿದ ಒಪ್ಪಂದದ ಪ್ರತಿ ಸ್ವೀಕರಿಸಿದ ಬಳಿಕ ಉಭಯ ದೇಶಗಳಲ್ಲೂ ಒಪ್ಪಂದದ ಅನುಷ್ಠಾನ ಕಾರ್ಯ ಆರಂಭವಾಗಲಿದೆ. ಸಹಿ ಮಾಡಲಾದ ಒಪ್ಪಂದದಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಅನುಗುಣವಾಗಿ ಎರಡೂ ದೇಶಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಈ ಒಪ್ಪಂದದ ಅನುಷ್ಠಾನ ಒಡಂಬಡಿಕೆ ಜಾರಿಯಲ್ಲಿರುವವರೆಗೂ ಮುಂದುವರಿಯಲಿದೆ. 

ಹಿನ್ನೆಲೆ: 

ಭಾರತ ತಾನೇ ಅಭಿವೃದ್ಧಿಪಡಿಸಿರುವ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಬಳಸುವ ಗಿಡಮೂಲಿಕೆಗಳಿಂದ ಸಂಪದ್ಭರಿತ ದೇಶವಾಗಿದೆ. ಜಾಗತಿಕ ಆರೋಗ್ಯ ಚಿತ್ರಣದಲ್ಲಿ ಇದೀಗ ಅಂತಹ ಗಿಡಮೂಲಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. 

ಹೋಮಿಯೋಪತಿ, ಸೌವ್ವಾ-ರಿಗ್ಪ, ಸಿದ್ದ, ಯುನಾನಿ, ನ್ಯಾಚುರೋಪತಿ, ಯೋಗ ಮತ್ತು ಆಯುರ್ವೇದ ಸೇರಿದಂತೆ ಹಲವು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲು ಹಾಗೂ ಅವುಗಳನ್ನು ಜನಪ್ರಿಯಗೊಳಿಸುವ ಕಡ್ಡಾಯ ಕಾರ್ಯಕ್ರಮವನ್ನು ಭಾರತ ಗಣರಾಜ್ಯದ ಆಯುಷ್ ಸಚಿವಾಲಯ ಹಾಕಿಕೊಂಡಿದೆ. ಅದಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಚಿವಾಲಯ ಮಲೇಷ್ಯಾ ಸರ್ಕಾರ, ಟ್ರಿನಿಡಾಡ್ ಮತ್ತು ಟೊಬಾಗೊ ಸರ್ಕಾರ, ಹಂಗೇರಿ ಸರ್ಕಾರ, ಬಾಂಗ್ಲಾದೇಶ ಸರ್ಕಾರ, ನೇಪಾಳ ಸರ್ಕಾರ, ಮಾರಿಷಸ್ ಸರ್ಕಾರ, ಮಂಗೋಲಿಯಾ ಸರ್ಕಾರ ಮತ್ತು ಇರಾನ್ ಸರ್ಕಾರಗಳ ಜತೆ ಸಾಂಪ್ರದಾಯಿಕ ಔಷಧ ವಲಯದಲ್ಲಿ ಸಹಕಾರಕ್ಕಾಗಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಶ್ರೀಲಂಕಾ ಸರ್ಕಾರದೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವವಿದೆ. (Release ID: 1530413) Visitor Counter : 87


Read this release in: English , Tamil , Telugu