ಪ್ರಧಾನ ಮಂತ್ರಿಯವರ ಕಛೇರಿ

ಸ್ಟಾಕ್ ಹೋಂನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

Posted On: 18 APR 2018 12:34AM by PIB Bengaluru

ಸ್ಟಾಕ್ ಹೋಂನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಟಾಕ್ ಹೋಂನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು. ಅವರು ಸ್ವೀಡನ್ ಸರ್ಕಾರಕ್ಕೆ ಅದರಲ್ಲೂ ವಿಶೇಷವಾಗಿ ಘನತೆವೆತ್ತ ಸ್ವೀಡನ್ ದೊರೆ ಹಾಗೂ ಸಮಾರಂಭದಲ್ಲಿ ಹಾಜರಿದ್ದ ಸ್ವೀಡನ್ ಪ್ರಧಾನಿ ಶ್ರೀ ಸ್ಟೀಫೆನ್ ಲಾಫ್ವೆನ್ ಅವರಿಗೆ ಅವರು ನೀಡಿದ ಆತ್ಮೀಯ ಸ್ವಾಗತಕ್ಕೆ ಧನ್ಯವಾದ ಅರ್ಪಿಸಿದರು. 

ಭಾರತ ಇಂದು ಬೃಹತ್ ಪರಿವರ್ತನೆಯ ಮೂಲಕ ಸಾಗುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ಕೇಂದ್ರ ಸರ್ಕಾರ ಎಲ್ಲರೊಂದಿಗೆ ಎಲ್ಲರ ವಿಕಾಸದ ಜನಾದೇಶದ ಮೇಲೆ ಆಯ್ಕೆಯಾಗಿದೆ ಎಂದರು. ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಹೊಂದಿದ ಮತ್ತು ಸಮಗ್ರ ಭಾರತದತ್ತ ಕಾರ್ಯೋನ್ಮುಖವಾಗಿದೆ ಎಂದರು. 2022ರ ಹೊತ್ತಿಗೆ ನವ ಭಾರತದ ನಿರ್ಮಾಣಕ್ಕಾಗಿ ಈ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು. 

ಅಂತಾರಾಷ್ಟ್ರೀಯ ಯೋಗ ದಿನದ ಉಪಕ್ರಮದ ಮೂಲಕ ಭಾರತ ಮತ್ತೊಮ್ಮೆ ಜಾಗತಿಕ ಗುರುವಾಗಿ ಹೊರ ಹೊಮ್ಮುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಜಗತ್ತು ಸಂಪೂರ್ಣ ವಿಶ್ವಾಸದೊಂದಿಗೆ ಭಾರತದತ್ತ ನೋಡುತ್ತಿದೆ ಎಂದ ಅವರು, ಈ ನಿಟ್ಟಿನಲ್ಲಿ ಮಾನವೀಯ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳು, ಅಂತಾರಾಷ್ಟ್ರೀಯ ಸೌರ ಸಹಯೋಗ ಮತ್ತು ಎಂ.ಟಿ.ಸಿ.ಆರ್, ವಸ್ಸೇನ್ನಾರ್ ಒಪ್ಪಂದ ಮತ್ತು ಆಸ್ಟ್ರೇಲಿಯಾ ಗುಂಪುಗಳ ಪ್ರಮುಖ ಆಡಳಿತದಲ್ಲಿ ಸದಸ್ಯತ್ವದ ಬಗ್ಗೆ ಅವರು ಉಲ್ಲೇಖಿಸಿದರು. ವಿಶ್ವವು ಇಂದು ಬಾಹ್ಯಾಕಾಶ ಕಾರ್ಯಕ್ರಮ ಸೇರಿದಂತೆ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಗುರುತಿಸಿದೆ ಎಂದರು. 

ಡಿಜಿಟಲ್ ಮೂಲಸೌಕರ್ಯದ ಕಾರಣದಿಂದಾಗಿ, ಸರ್ಕಾರ ಮತ್ತು ನಾಗರಿಕರ ನಡುವಿನ ಕಾರ್ಯಕ್ರಮದ ಸ್ವರೂಪವೇ ಬದಲಾಗುತ್ತಿದೆ ಎಂದು ಹೇಳಿದರು. ತಂತ್ರಜ್ಞಾನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಕೂಡಿದೆ ಎಂದು ಅವರು ಹೇಳಿದರು. ಸರ್ಕಾರದೊಂದಿಗೆ ಸಂಪರ್ಕ ಇಂದು ಹೆಮ್ಮೆಯಾಗಿಲ್ಲ ಬದಲಾಗಿ ಅಭ್ಯಾಸವಾಗಿದೆ ಎಂದರು. ಈ ನಿಟ್ಟಿನಲ್ಲಿ ತ್ವರಿತವಾಗಿ ಕಡತಗಳ ವಿಲೇವಾರಿ, ಸುಗಮ ವಾಣಿಜ್ಯ, ಜಿಎಸ್ಟಿ, ನೇರ ಸವಲತ್ತು ವರ್ಗಾವಣೆ, ಉಜ್ವಲ ಯೋಜನೆಯ ಮೂಲಕ ಅಡುಗೆ ಅನಿಲ ಇತ್ಯಾದಿಯ ಪ್ರಸ್ತಾಪ ಮಾಡಿದರು. 

ಮುದ್ರಾ ಯೋಜನೆಯ ಮೂಲಕ, ಉದ್ಯಮಶೀಲರಿಗೆ ಹೊಸ ಅವಕಾಶಗಳು ಲಭಿಸುತ್ತಿವೆ. ಮುದ್ರಾ ಯೋಜನೆಯಡಿಯಲ್ಲಿ ಈವರೆಗೆ ಶೇಕಡ 74ರಷ್ಟು ಮಹಿಳಾ ಫಲಾನುಭವಿಗಳಿದ್ದಾರೆ ಎಂದರು. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಅಟಲ್ ನಾವಿನ್ಯ ಅಭಿಯಾನದ ಪ್ರಸ್ತಾಪವನ್ನೂ ಅವರು ಮಾಡಿದರು. 

ಭಾರತವು ನಾವಿನ್ಯತೆಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ಕಟ್ಟುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಅವರು ಸ್ವೀಡನ್ ನೊಂದಿಗಿನ ನಾವಿನ್ಯ ಪಾಲುದಾರಿಕೆ ಹಾಗೂ ಇಸ್ರೇಲ್ ನೊಂದಿಗೆ ಅದೇ ಸ್ವರೂಪದ ಪಾಲುದಾರಿಕೆಯ ಪ್ರಸ್ತಾಪ ಮಾಡಿದರು. ಸರ್ಕಾರದವು ಸುಗಮವಾಗಿ ಜೀವನ ಸಾಗಿರುವುದರತ್ತ ಗಮನ ಹರಿಸಿದೆ ಎಂದು ತಿಳಿಸಿದ ಪ್ರಧಾನಿ, ಈ ನಿಟ್ಟಿನಲ್ಲಿ, ಆಯುಷ್ಮಾನ್ ಭಾರತ ಯೋಜನೆಯ ಪ್ರಸ್ತಾಪ ಮಾಡಿದರು. ಇದು ಜಗತ್ತಿನ ಅತಿ ದೊಡ್ಡ ಆರೋಗ್ಯ ಆರೈಕೆಯ ನೆರವು ಯೋಜನೆ ಎಂದು ಬಣ್ಣಿಸಿದರು. 

ಈ ಎಲ್ಲ ಕ್ರಮಗಳೂ ಭಾರತದ ಪರಿವರ್ತನೆಯ ಸೂಚಕಗಳಾಗಿವೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಸ್ವೀಡನ್ ನೊಂದಿಗಿನ ಹಾಗೂ ಇತರ ನಾರ್ಡಿಕ್ ರಾಷ್ಟ್ರಗಳೊಂದಿಗಿನ ಪಾಲುದಾರಿಕೆ ಅತ್ಯಂತ ಮಹತ್ವದ್ದೆಂದರು. 

ಭಾರತದೊಂದಿಗೆ ಕೇವಲ ಭಾವನಾತ್ಮಕವಾಗಿ ಮಾತ್ರವೇ ತಮ್ಮ ಸಂಪರ್ಕ ಸೀಮಿತಗೊಳಿಸದಂತೆ ಸಭಿಕರಿಗೆ ಪ್ರಧಾನಿ ಮನವಿ ಮಾಡಿದರು. ಹೊರ ಹೊಮ್ಮುತ್ತಿರುವ ನವ ಭಾರತ, ಅವರಿಗೆ ಹಲವು ನಾವಿನ್ಯ, ವಾಣಿಜ್ಯ ಮತ್ತು ಹೂಡಿಕೆಯ ಅಪಾರ ಅವಕಾಶವನ್ನು ನೀಡುತ್ತದೆ ಎಂದೂ ತಿಳಿಸಿದರು. 
 

*****



(Release ID: 1529647) Visitor Counter : 78