ಕುಡಿಯುವ ನೀರು ಮತ್ತು ಸ್ವಚ್ಚತೆ ಸಚಿವಾಲಯ
ಚಂಪಾರಣ್ ನಲ್ಲಿ ನಾಳೆ ಸ್ವಚ್ಛಗ್ರಹಿಗಳನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
09 APR 2018 8:10PM by PIB Bengaluru
ಚಂಪಾರಣ್ ನಲ್ಲಿ ನಾಳೆ ಸ್ವಚ್ಛಗ್ರಹಿಗಳನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬಿಹಾರದಲ್ಲಿ ನಡೆಯಲಿರುವ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮೋತಿಹಾರಿಯಲ್ಲಿ ಅವರು 20 ಸಾವಿರ ಸ್ವಚ್ಛಗ್ರಹಿಗಳು ಅಥವಾ ಸ್ವಚ್ಛತೆಯ ರಾಯಭಾರಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಗ್ರಾಮಮಟ್ಟದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯಿಂದಾಗಿ ನೈರ್ಮಲ್ಯ(ಸಿಎಎಸ್) ಅನುಷ್ಠಾನಕ್ಕೆ ಸ್ವಚ್ಛಗ್ರಹಿಗಳು ಕಾಲಾಳುವಿನಂತೆ ಮತ್ತು ಉತ್ತೇಜಕರಾಗಿ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಬಯಲುಶೌಚ ಮುಕ್ತಗೊಳಿಸುವ ಗುರಿ ಸಾಧನೆ ನಿಟ್ಟಿನಲ್ಲಿ ಸ್ವಚ್ಛಗ್ರಹಿಗಳ ಪಾತ್ರ ಅತ್ಯಂತ ಪ್ರಮುಖವಾದುದು.
ಇಂಡಿಗೋ (ಕೃತಕ ಬಣ್ಣ ತಯಾರಿಸುವ) ನೀಲಿ ಬೆಳೆಯನ್ನು ಬೆಳೆಯುವಂತೆ ಬ್ರಿಟೀಷರು ರೈತರ ಮೇಲೆ ಒತ್ತಡ ಹೇರುವುದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿ ಅವರು ಶತಮಾನದ ಹಿಂದೆ 1917ರ ಏಪ್ರಿಲ್ 10ರಂದು ಚಂಪಾರಣ್ ಸತ್ಯಾಗ್ರಹವನ್ನು ಆರಂಭಿಸಿದ್ದರು. 2018ರ ಏಪ್ರಿಲ್ 10ರಂದು ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ, ಇದನ್ನು 'ಸತ್ಯಾಗ್ರಹದಿಂದ ಸ್ವಚ್ಛಾಗ್ರಹ'ದ ವರೆಗೆ ಅಭಿಯಾನದ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
(Release ID: 1528439)