ಪ್ರಧಾನ ಮಂತ್ರಿಯವರ ಕಛೇರಿ

ಡಬ್ಲ್ಯು.ಟಿ.ಓ ಡಿಜಿಯಿಂದ ಪ್ರಧಾನಿ ಭೇಟಿ

Posted On: 19 MAR 2018 10:39PM by PIB Bengaluru

ಡಬ್ಲ್ಯು.ಟಿ.ಓ ಡಿಜಿಯಿಂದ ಪ್ರಧಾನಿ ಭೇಟಿ 
 

ಡಬ್ಲ್ಯು.ಟಿ.ಓ ಸಚಿವರುಗಳ ಅನೌಪಚಾರಿಕ ಸಭೆಯಲ್ಲಿ ಭಾಗಿಯಾಗಲು ನವದೆಹಲಿಯಲ್ಲಿರುವ ಡಬ್ಲ್ಯು.ಟಿ.ಓ. ಮಹಾ ನಿರ್ದೇಶಕ (ಡಿಜಿ) ಶ್ರೀ ರಾಬರ್ಟೊ ಅಝ್ವೆದೋ ಅವರು ಇಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದರು. 

ಬಹು ಪಕ್ಷೀಯ ವಾಣಿಜ್ಯ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಮಾರ್ಗೋಪಾಯಗಳನ್ನು ಅನ್ವೇಷಣೆಗಾಗಿ ಮಾತುಕತೆ ಪ್ರಾರಂಭಿಸಲು ಕ್ರಮ ಕೈಗೊಂಡಿರುವುದಕ್ಕಾಗಿ ಭಾರತ ಸರ್ಕಾರಕ್ಕೆ ಡಿಜಿ ಅಭಿನಂದನೆ ಸಲ್ಲಿಸಿದರು. 

ಭಾರತವು ಬಹು ಪಕ್ಷೀಯ ವಾಣಿಜ್ಯ ವ್ಯವಸ್ಥೆಯ ಬಲವಾದ ಸಮರ್ಥಕ ಎಂದು ಪ್ರಧಾನಿ ಪುನರುಚ್ಚರಿಸಿದರು. ಡಬ್ಲ್ಯು.ಟಿ.ಓ ದ ಚಟುವಟಿಕೆಗಳನ್ನು ಆದ್ಯತೀಕರಣಗೊಳಿಸುವುದು ಕಡ್ಡಾಯವಾಬೇಕು, ಹಾಗಾದಾಗ ಅದು ಅಭಿವೃದ್ಧಿಶೀಲ ರಾಷ್ಟ್ರಗಳ ಕಳಕಳಿಗಳನ್ನು ಈಡೇರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ವಿಶೇಷ ಪ್ರಯತ್ನ ಮಾಡುವಂತೆ ಡಬ್ಲ್ಯು.ಟಿ.ಓ ಡಿ.ಜಿ.ಗೆ ಒತ್ತಾಯಿಸಿದ ಪ್ರಧಾನಿ, ಇದರಿಂದ ಮುಕ್ತ ವಾಣಿಜ್ಯ ಮತ್ತು ಜಾಗತೀಕರಣದ ಪ್ರಯೋಜನಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಕಾಣಿಸುತ್ತವೆ ಎಂದ ಪ್ರಧಾನಿ, ಡಬ್ಲ್ಯು.ಟಿ.ಓ ಸಚಿವರುಗಳ ಅನೌಪಚಾರಿಕ ಸಭೆಯ ಯಶಸ್ಸಿಗೆ ಶುಭ ಕೋರಿದರು. 
 

****



(Release ID: 1525567) Visitor Counter : 110