ಸಂಪುಟ

ವರ್ಷಾಂತ್ಯದ ಪರಾಮರ್ಶೆ 2017 – ಸಂಪುಟದ ತೀರ್ಮಾನಗಳು ಪುಟದ ತೀರ್ಮಾನಗಳು 2017

Posted On: 27 DEC 2017 12:47PM by PIB Bengaluru

ವರ್ಷಾಂತ್ಯದ ಪರಾಮರ್ಶೆ 2017 – ಸಂಪುಟದ ತೀರ್ಮಾನಗಳು 
 

ಪುಟದ ತೀರ್ಮಾನಗಳು 2017

 

04 ಜನವರಿ  2017

 ಉದ್ದೇಶಿತ ಎರಡನೇ ರಾಜತಾಂತ್ರಿಕ ಎನ್ ಕ್ಲೇವ್ ಗಾಗಿ  ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ 34.87 ಹೆಕ್ಟೇರ್ ಜಮೀನನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಮತ್ತು ಅಭಿವೃದ್ಧಿ ಇಲಾಖೆಯ ಕಚೇರಿಗೆ ಹಸ್ತಾಂತರಿಸಲು ಸಚಿವ ಸಂಪುಟದ ಸಮ್ಮತಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎರಡನೇ ರಾಜತಾಂತ್ರಿಕ ಎನ್ ಕ್ಲೇವ್ ಗಾಗಿ  ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ 34.87 ಹೆಕ್ಟೇರ್ ಜಮೀನನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಮತ್ತು ಅಭಿವೃದ್ಧಿ ಇಲಾಖೆ (ಎಲ್.ಅಂಡ್ ಡಿಓ)ಯ ಕಚೇರಿಗೆ ಹಸ್ತಾಂತರಿಸಲು ತನ್ನ ಅನುಮೋದನೆ ನೀಡಿದೆ.

 

ಸೀಮಾಸುಂಕ ವಿಚಾರದಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಉರುಗ್ವೆಗಳ ನಡುವೆ ಒಪ್ಪಂದಕ್ಕೆ ಸಚಿವ ಸಂಪುಟದ ಸಮ್ಮತಿ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಂಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ಉರುಗ್ವೆಯೊಂದಿಗೆ ಭಾರತ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ಕೀನ್ಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕೀನ್ಯಾ ನಡುವೆ ಕೃಷಿ ಮತ್ತು ಪೂರಕ ಕ್ಷೇತ್ರಗಳ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಸಹಿ ಮಾಡಲು ತನ್ನ ಅನುಮೋದನೆ ನೀಡಿದೆ.

 

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿ ಭಾರತ ಮತ್ತು ಪೋರ್ಚುಗಲ್ ನಡುವೆ ಎಂ.ಓ.ಯು.ಗೆ ಅಂಕಿತ ಹಾಕಲು ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ಭಾರತ ಮತ್ತು ಪೋರ್ಚುಗಲ್ ನಡುವೆ ಕೃಷಿ ಮತ್ತು ಅದಕ್ಕೆ ಪೂರಕ ವಲಯಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

18 ಜನವರಿ 2017

 ಹಳೆಯ ಮತ್ತು ಅಧಿಕವಾಗಿರುವ ಕಾನೂನುಗಳನ್ನು ರದ್ದು ಪಡಿಸಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 105 ಕಾಯಿದೆಗಳನ್ನು ರದ್ದು ಮಾಡಲು  ರದ್ಧತಿ ಮತ್ತು ತಿದ್ದುಪಡಿ ವಿಧೇಯಕ 2017ನ್ನು ಮಂಡಿಸಲು ತನ್ನ ಅನುಮೋದನೆ ನೀಡಿದೆ.

 

ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿನ ದ್ವಿಪಕ್ಷೀಯ ಸಹಕಾರಕ್ಕೆ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಯು.ಎ.ಇ.ಯ– ಭೂ ಮತ್ತು ಸಮುದ್ರ ಕುರಿತ ಫೆಡರಲ್ ಸಾರಿಗೆ ಪ್ರಾಧಿಕಾರ ಸಹಿ ಹಾಕಲಿರುವ  ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವಿನ ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿನ ದ್ವಿಪಕ್ಷೀಯ ಸಹಕಾರದ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

 

1-04-2016ರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಹೂಡಿಕೆಯಿಂದ ರಾಜ್ಯಗಳನ್ನು ಹೊರಗಿಡುವುದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅರುಣಾಚಲ ಪ್ರದೇಶ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶ ಹೊರತುಪಡಿಸಿ ಎಲ್ಲ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶ(ಶಾಸನ ಸಭೆ ಇರುವ)ಗಳನ್ನು 01.04.2016ರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ (ಎನ್.ಎಸ್.ಎಸ್.ಎಫ್) ಹೂಡಿಕೆಯಿಂದ ಹೊರಗಿಡುವುದಕ್ಕೆ ತನ್ನ ಅನುಮೋದನೆ ನೀಡಿದೆ. ಅಲ್ಲದೆ ಸಂಪುಟವು ತನ್ನ ಆಹಾರ ಸಬ್ಸಿಡಿ ಅಗತ್ಯಗಳನ್ನು ಪೂರೈಸಲು ಒಂದು ಬಾರಿಯ ಸಾಲವಾಗಿ 45,000 ಕೋಟಿ ರೂಪಾಯಿಗಳನ್ನು ಎನ್.ಎಸ್.ಎಸ್.ಎಫ್. ನಿಂದ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ಗೆ ಒದಗಿಸಲೂ ತನ್ನ ಸಮ್ಮತಿ ಸೂಚಿಸಿದೆ.

 

ಗುಣಮಟ್ಟದ ತರಬೇತಿ, ಪ್ರಮಾಣೀಕರಣ ಮತ್ತು ನಿಗಾ ಇಡುವುದು (ಎಸ್.ಟಿ.ಸಿ.ಡಬ್ಲ್ಯು,78) ನಿಯಮಗಳು ಮತ್ತು ನಂತರದ ತಿದ್ದುಪಡಿಗಳನ್ವಯ  ಸಾಮರ್ಥ್ಯದ ಪ್ರಮಾಣಪತ್ರಗಳಿಗೆ ಪರಸ್ಪರ ಮಾನ್ಯತೆ ನೀಡಲು ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮರ್ಥ್ಯದ ಪ್ರಮಾಣಪತ್ರಗಳನ್ನು ಪರಸ್ಪರ ಮಾನ್ಯ ಮಾಡುವ ಕುರಿತಂತೆ ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಭಾರತದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.

 

ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ಸಾಗರ ಸಾರಿಗೆಯಲ್ಲಿ ಸಾಂಸ್ಥಿಕ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಗರ ಸಾರಿಗೆಯಲ್ಲಿ ಸಾಂಸ್ಥಿಕ ಸಹಕಾರಕ್ಕಾಗಿ ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.

 

ಪರಿಷ್ಕೃತ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಯೋಜನೆಯಲ್ಲಿ ತಿದ್ದುಪಡಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿದ್ಯುನ್ಮಾನ ಕ್ಷೇತ್ರದಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು ಮತ್ತು 2020ರ ವೇಳೆಗೆ “ನಿವ್ವಳ ಶೂನ್ಯ ಆಮದು’ ಗುರಿಯತ್ತ ಸಾಗಲು ಪರಿಷ್ಕೃತ ವಿಶೇಷ ಪ್ರೋತ್ಸಾಹಧನ ಪ್ಯಾಕೇಜ್ ಯೋಜನೆ (ಎಂ.-ಎಸ್.ಐ.ಪಿ.ಎಸ್)ಗೆ ತಿದ್ದುಪಡಿ ತರಲು ತನ್ನ ಅನುಮೋದನೆ ನೀಡಿದೆ

 

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ಕೃಷಿ ಮತ್ತು ಅದಕ್ಕೆ ಪೂರಕವಾದ ಕ್ಷೇತ್ರಗಳಲ್ಲಿ ಸಹಕಾರ(ಎಂ.ಓ.ಯು)ಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ನಾವಿನ್ಯತೆಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ನಾವಿನ್ಯತೆಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ಜಾರ್ಖಂಡ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್.ಐ) – ಜಾರ್ಖಂಡ್ ಸ್ಥಾಪನೆಗೆ  12ನೇ ಯೋಜನೆಯ ಡಿಎಆರ್.ಇ/ಐಸಿಎಆರ್  ಯೋಜನಾ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಅಂದಾಜು 200.78 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯದಾಗಿದ್ದು,  (ಶೇ.100 ಐ.ಸಿ.ಎ.ಆರ್. ಪಾಲು) ಜಾರ್ಖಂಡ್ ಸರ್ಕಾರ, 1000 ಎಕರೆ ಜಮೀನನ್ನು ಹಜಾರಿಭಾಗ್ ನ ಬಾರ್ಹಿ ಬ್ಲಾಕ್ ನ ಗೌರಿಯ ಕರ್ಮ ಗ್ರಾಮದಲ್ಲಿ ನೀಡಲಿದೆ.

 

ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ (ಎಂ.ಎಸ್.ಇ.ಗಳು) ಬೆಂಬಲ ನೀಡುವ ಪ್ಯಾಕೇಜ್ ಗೆ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗಾಗಿ ಸಾಲ ಖಾತ್ರಿ ಟ್ರಸ್ಟ್ ನಿಧಿಯ ಸಂಚಯ ವೃದ್ಧಿ- (ಸಿಜಿಟಿಎಂಎಸ್ಇ)ಗೆ   ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ (ಎಂ.ಎಸ್.ಇ.ಗಳು) ಬೆಂಬಲ ನೀಡುವ ಪ್ಯಾಕೇಜ್ -ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಖಾತ್ರಿ ಟ್ರಸ್ಟ್ ನಿಧಿಯ ಸಂಚಯ ವೃದ್ಧಿ-(ಸಿಜಿಟಿಎಂಎಸ್ಇ)ಗೆ   ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಪೆರುವಿನೊಂದಿಗೆ ವಾಣಿಜ್ಯ ಒಪ್ಪಂದ ಮಾತುಕತೆಗೆ ಅನುಮೋದನೆ ನೀಡಿದ ಸಂಪುಟ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪೆರುವಿನೊಂದಿಗೆ ಸರಕು, ಸೇವೆಗಳು ಮತ್ತು ಹೂಡಿಕೆಯ ವಾಣಿಜ್ಯ ಕುರಿತಂತೆ ವಾಣಿಜ್ಯ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ತನ್ನ ಅನುಮೋದನೆ ನೀಡಿದೆ.

 

ಸೈಬರ್ ಭದ್ರತೆ ಕ್ಷೇತ್ರದಲ್ಲಿ ವಿಯಟ್ನಾಂ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಭಾರತ ಮತ್ತು ವಿಯಟ್ನಾಂ ನಡುವಿನ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ ಭಾರತದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ಟಿ –ಇನ್), ಮತ್ತು ವಿಯಟ್ನಾಂನ ಸಾರ್ವಜನಿಕ ಸುರಕ್ಷತೆ ಸಚಿವಾಲಯದ ಸೈಬರ್ ಭದ್ರತೆ ಇಲಾಖೆ 2016ರ ಸೆಪ್ಟೆಂಬರ್ 3ರಂದು ಹನೋಯ್ ನಲ್ಲಿ ಅಂಕಿತ ಹಾಕಿದ್ದವು.

 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನಿನ ಏರೋ ಸ್ಪೇಸ್ ಎಕ್ಸ್ ಪ್ಲೊರೇಷನ್ ಸಂಸ್ಥೆ (ಜೆಎಎಕ್ಸ್ಎ) ನಡುವಿನ ಬಾಹ್ಯಾಕಾಶ ಕ್ಷೇತ್ರದ ಸಹಕಾರದ ತಿಳಿವಳಿಕೆ ಒಪ್ಪಂದದ ಬಗ್ಗೆ  ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಜಪಾನೀಸ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ (ಜೆಎಎಕ್ಸ್ಎ) ನಡುವೆ ಬಾಹ್ಯಾಕಾಶ ಕ್ಷೇತ್ರದ ಸಹಕಾರಕ್ಕಾಗಿ ಟೋಕಿಯೋದಲ್ಲಿ 2016ರ ನವೆಂಬರ್ 11ರಂದು ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.

 

ಭಾರತ ಮತ್ತು ರಷ್ಯಾ ನಡುವೆ ಯುವ ವ್ಯವಹಾರಗಳ ಸಹಕಾರಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಭಾರತ ಮತ್ತು ರಷ್ಯಾ ನಡುವೆ ಯುವ ವ್ಯವಹಾರಗಳ ಕ್ಷೇತ್ರದಲ್ಲಿ ಕಾರ್ಯಕ್ರಮಗಳ ವಿನಿಮಯವು ಎರಡೂ ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧವನ್ನು ಒಗ್ಗೂಡಿಸಲು ಮತ್ತು ಜನರೊಂದಿಗಿನ ಸಂಪರ್ಕ ಸ್ಥಾಪಿಸುವ ಮೂಲಕ ಕಲ್ಪನೆಗಳು, ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಯುವ ಜನರೊಂದಿಗೆ ಹಂಚಿಕೊಳ್ಳಲು ಉತ್ತೇಜನ ನೀಡುತ್ತದೆ.

 

ದಕ್ಷಿಣ ಕೊರಿಯಾದ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ (ಐ.ವಿ.ಐ.)ಯಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತವು, ಅಂತಾರಾಷ್ಟ್ರೀಯ  ಲಸಿಕೆ ಸಂಸ್ಥೆ (ಐ.ವಿ.ಐ.) ಆಡಳಿತ ಮಂಡಳಿಯಲ್ಲಿ ಪೂರ್ಣ ಸದಸ್ಯತ್ವ ಪಡೆಯುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ನಡೆಯು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿನ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆಗೆ ವಾರ್ಷಿಕ 5,00,000 ಅಮೆರಿನ್ ಡಾಲರ್ ಕೊಡುಗೆ ಪಾವತಿಯನ್ನೂ ಒಳಗೊಂಡಿದೆ.

 

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸೆರ್ಬಿಯಾ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿನ ಸಹಕಾರದ ಉತ್ತೇಜನಕ್ಕಾಗಿ ಸೆರ್ಬಿಯಾ ಮತ್ತು ಭಾರತ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಪೂರ್ವನ್ವಯವಾಗಿ ತನ್ನ ಅನುಮೋದನೆ ನೀಡಿದೆ.

 

ದೇಶದಲ್ಲಿ ಗ್ರಾಮೀಣ ವಸತಿ ಉತ್ತೇಜನಕ್ಕೆ ಹೊಸ ಯೋಜನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶದಲ್ಲಿ ಗ್ರಾಮೀಣ ವಸತಿಯನ್ನು ಉತ್ತೇಜಿಸಲು ಹೊಸ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಸರ್ಕಾರ ಬಡ್ಡಿ ಸಬ್ಸಿಡಿಯನ್ನು ಒದಗಿಸಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ), ಪಿಎಂಎವೈ(ಜಿ) ಅಡಿಯಲ್ಲಿ ಬಾರದ ಎಲ್ಲ ಕುಟುಂಬಗಳೂ ಈ ಬಡ್ಡಿ ಸಬ್ಸಿಡಿ ಲಾಭ ಪಡೆಯಬಹುದು

 

24 ಜನವರಿ 2017

 

 ಐಐಎಂಗಳು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸಲು  ಭಾರತೀಯ ಮೇನೇಜ್ಮೆಂಟ್ ಸಂಸ್ಥೆ ವಿಧೇಯಕ 2017ಕ್ಕೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಮೇನೇಜ್ಮೆಂಟ್ ಸಂಸ್ಥೆ (ಐಐಎಂ) ಮಸೂದೆ 2017ಗೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಐಐಎಂಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸಬಹುದಾಗಿದೆ, ಇದು ಐಐಎಂಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಅವಕಾಶ ನೀಡುತ್ತದೆ.

 

ರೈತರು ಸಹಕಾರಿ ಬ್ಯಾಂಕ್ ಗಳಿಂದ ಪಡೆದಿರುವ ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿಯನ್ನು 2016ರ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳುಗಳಿಗೆ ಮನ್ನಾ ಮಾಡಲು ಮತ್ತು ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗಳಿಗೆ ಹೆಚ್ಚುವರಿ ಮರು ಸಾಲ ನೀಡಿಕೆಗಾಗಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ಗೆ ಬಡ್ಡಿ ರಿಯಾಯಿತಿ ಒದಗಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರೈತರು ಸಹಕಾರಿ ಬ್ಯಾಂಕ್ ಗಳಿಂದ ಪಡೆದಿರುವ ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿಯನ್ನು 2016ರ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳುಗಳಿಗೆ ಮನ್ನಾ ಮಾಡಲು ಪೂರ್ವಾನ್ವಯ ಅನುಮೋದನೆ ನೀಡಿದೆ.  ಈ ನಿರ್ಧಾರವು ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗಳಿಗೆ ಹೆಚ್ಚುವರಿ ಮರು ಸಾಲ ನೀಡಿಕೆಗಾಗಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ಗೆ ಬಡ್ಡಿ ರಿಯಾಯಿತಿ ಒದಗಿಸಲಿದೆ.

 

ಪಾಟ್ನಾದ ಜೈಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಸ್ತರಣೆ ಮತ್ತು ಅಭಿವೃದ್ಧಿ ಉದ್ದೇಶಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ 11.35 ಎಕರೆ ಅಳತೆಯ ಜಮೀನನ್ನು ಅದಕ್ಕೆ ಸಮಾನವಾದ ಬಿಹಾರ ಸರ್ಕಾರಕ್ಕೆ ಸೇರಿದ  ಭೂಮಿಯೊಂದಿಗೆ ವಿನಿಮಯ ಮಾಡಿಕೊಳ್ಳಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅನಿಸಾಬಾದ್ ನಲ್ಲಿ ಎಎಐಗೆ ಸೇರಿದ ಜಮೀನಿಗೆ ಸಮನಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ 11.35 ಎಕರೆ ಅಳತೆಯ ಜಮೀನನ್ನು ವಿನಿಮಯದ ಮೂಲಕ ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ. ಪಟ್ನಾ ವಿಮಾನ ನಿಲ್ದಾಣದಲ್ಲಿನ ಉದ್ದೇಶಿತ ಜಮೀನನ್ನು ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಇತರ ಪೂರಕ ಮೂಲಸೌಕರ್ಯದೊಂದಿಗೆ ನೂತನ ಟರ್ಮಿನಲ್ ನಿರ್ಮಾಣಕ್ಕೆ ಬಳಸಲಾಗುತ್ತದೆ.  ರಾಜ್ಯ ಸರ್ಕಾರ ಕೂಡ  ಭೂಮಿಯನ್ನು ವರ್ಗಾವಣೆ ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.

 

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಒಪ್ಪಂದದ ಕ್ಯೋಟೋ ಶಿಷ್ಟಾಚಾರದ ಎರಡನೇ ಬದ್ಧತೆಯ ಅವಧಿಯ ಸ್ಥಿರೀಕರಣಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಸಿರು ಮನೆ ಅನಿಲ(ಸಿಎಚ್ ಜಿಗಳು) ಹೊರಸೂಸುವಿಕೆ ಒಳಗೊಂಡ  ಕ್ಯೋಟೋ ಶಿಷ್ಟಾಚಾರದ ಎರಡನೇ ಬದ್ಧತೆ ಅವಧಿಯ ಸ್ಥಿರೀಕರಣಕ್ಕೆ ತನ್ನ ಅನುಮೋದನೆ ನೀಡಿದೆ. ಕ್ಯೋಟೋ ಶಿಷ್ಟಾಚಾರದ ಎರಡನೇ ಬದ್ಧತೆಯ ಅವಧಿಯನ್ನು 2012ರನ್ನು ಅಂಗೀಕರಿಸಲಾಗಿತ್ತು. ಈವರೆಗೆ 75 ರಾಷ್ಟ್ರಗಳು ಎರಡನೇ ಬದ್ಧತೆಯ ಅವಧಿಯನ್ನು ಸ್ಥಿರೀಕರಿಸಿವೆ.

 

 ವರಿಷ್ಠ ಪಿಂಚಣಿ ಬಿಮಾ ಯೋಜನೆ -2017

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವರಿಷ್ಠ ಪಿಂಚಣಿ ಬಿಮಾ ಯೋಜನೆ 2017(ವಿಪಿಬಿವೈ 2017)ರ ಆರಂಭಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಇದು ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಹಣಕಾಸು ಪೂರಣ ಬದ್ಧತೆಯ ಭಾಗವಾಗಿದೆ.

 

ಸಹಕಾರಿ ಬ್ಯಾಂಕ್ ಗಳಿಗೆ ಸಾಲ ನೀಡಲು ನಬಾರ್ಡ್ ನಿಂದ ಮಾರುಕಟ್ಟೆಯಿಂದ ಅಲ್ಪಾವಧಿ ಸಾಲ ಪಡೆಯಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ನಿರ್ಧಾರಗಳಿಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

01 ಫೆಬ್ರವರಿ 2017

 

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿ.ಎಂ.ಎ.ವೈ) ಅಡಿಯಲ್ಲಿ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್) ಅವಧಿಯನ್ನು 15ರಿಂದ 20 ವರ್ಷಗಳಿಗೆ ವಿಸ್ತರಿಸಲು ಸಂಪುಟದ ಅನುಮೋದನೆ 

 

ಸಂಸತ್ತಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ತಿದ್ದುಪಡಿ) ಮಸೂದೆ  2017  ಮಂಡಿಸಲು ಸಂಪುಟದ ಅನುಮೋದನೆ
 

 

(i) ಒಡಿಶಾ ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮಾರ್ಪಾಡು ಮಾಡಲು ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ, 1950ಕ್ಕೆ ಮತ್ತು (ii)  ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಹೆಸರನ್ನು ಆದೇಶದಲ್ಲಿ ಪುದುಚೇರಿ ಎಂದು ಬದಲಾವಣೆ ಮಾಡಲು ಸಂವಿಧಾನದ (ಪಾಂಡಿಚೆರಿ) ಪರಿಶಿಷ್ಟ ಜಾತಿ ಆದೇಶ, 1964 ಆದೇಶಕ್ಕೆ  ತಿದ್ದುಪಡಿ ಮಾಡಲು ಸಂಪುಟದ ಅನುಮೋದನೆ

 

08  ಫೆಬ್ರವರಿ 2017

 ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ಸಂಪುಟಕ್ಕೆ ವಿವರಣೆ

 

6 ಕೋಟಿ ಗ್ರಾಮೀಣ ಕುಟುಂಬಗಳನ್ನು  'ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ' ವ್ಯಾಪ್ತಿಗೆ ತರಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 6 ಕೋಟಿ ಗ್ರಾಮೀಣ ಕುಟುಂಬಗಳನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲು  'ಪ್ರಧಾನಮಂತ್ರಿ   ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ' (ಪಿಎಂಜಿಡಿಐಎಸ್ಎಚ್ಎ)ಕ್ಕೆ ತನ್ನ ಅನುಮೋದನೆ ನೀಡಿದೆ.  2019ರ ಮಾರ್ಚ್ ವೇಳೆಗೆ  ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ತರಲು ಈ ಯೋಜನೆಗೆ 2,351.38 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುತ್ತಿದೆ.  ಇದು ಹಣಕಾಸು ಸಚಿವರು 2016-17ನೇ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿದ ಕಾರ್ಯಕ್ರಮಕ್ಕೆ ಅನುಗುಣವಾಗಿದೆ.

 

15  ಫೆಬ್ರವರಿ 2017

ಅಂಕಿಅಂಶಗಳ ಸಂಗ್ರಹಣೆ ಕಾಯಿದೆ, 2008 (2009ರ 7) ತಿದ್ದುಪಡಿಗೆ ಸಂಪುಟದ ಅನುಮೋದನೆ

 

ಒಣ ಪ್ರದೇಶದಲ್ಲಿ ಕೃಷಿ ಸಂಶೋಧನೆ ಕುರಿತ ಅಂತಾರಾಷ್ಟ್ರೀಯ ಕೇಂದ್ರ (ಐಸಿಎಆರ್.ಡಿಎ) ದಿಂದ ಪಶ್ಚಿಮ ಬಂಗಾಳ ಮತ್ತು ರಾಜಾಸ್ಥಾನದಲ್ಲಿ ಉಪಗ್ರಹ ತಾಣಗಳನ್ನು ಒಳಗೊಂಡಂತೆ ಮಧ್ಯಪ್ರದೇಶದ ಸೆಹೋರೆಯ ಅಮಲಾಹಾದಲ್ಲಿ ದ್ವಿದಳ ಧಾನ್ಯ ಆಹಾರ ಸಂಶೋಧನೆ ವೇದಿಕೆ (ಎಫ್.ಎಲ್.ಆರ್.ಪಿ.) ಸ್ಥಾಪನೆಗೆ ಸಂಪುಟದ ಅನುಮೋದನೆ 

 

 

22 ಫೆಬ್ರವರಿ 2017

 

ನಾಗರಿಕ ವಿಮಾನಯಾನ ಭದ್ರತೆ ಸಹಕಾರದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆಸಂಪುಟದ ಅನುಮೋದನೆ

 

ಭಾರತ ಮತ್ತು ಗ್ರೀಸ್ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

05 ಮಾರ್ಚ್ 2017

 

ಟಿ.ಐ.ಆರ್.  ಕಾರ್ನೆಟ್ ಅಡಿಯಲ್ಲಿ (ಟಿಐಆರ್ ಒಪ್ಪಂದ)  ಅಂತಾರಾಷ್ಟ್ರೀಯ ಸರಕು ಸಾಗಣೆ ಕುರಿತ ಕಸ್ಟಂಮ್ಸ್ ಒಪ್ಪಂದದಲ್ಲಿ ಭಾರತದ ಪ್ರವೇಶಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಟಿ.ಐ.ಆರ್. ಕಾರ್ನೆಟ್ ಅಡಿಯಲ್ಲಿ (ಟಿಐಆರ್ ಒಪ್ಪಂದ)  ಅಂತಾರಾಷ್ಟ್ರೀಯ ಸರಕು ಸಾಗಣೆ ಕುರಿತ ಕಸ್ಟಂಮ್ಸ್ ಒಪ್ಪಂದದಲ್ಲಿ ಭಾರತದ ಪ್ರವೇಶಕ್ಕೆ ಮತ್ತು ಅದರ ಪ್ರವೇಶದ ಅನುಷ್ಠಾನಕ್ಕೆ ಬರಲು ಸ್ಥಿರೀಕರಣಕ್ಕಾಗಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು  ತನ್ನ ಅನುಮೋದನೆ ನೀಡಿದೆ.

 

 ಪಂಜಾಬ್ ಗೆ ಆಹಾರ ಸಂಗ್ರಹಣೆ ಕಾರ್ಯಾಚರಣೆಗಾಗಿ ಆಹಾರ ನಗದು ಸಾಲಕ್ಕೆ – ಲೆಗಸಿ ಖಾತೆಗಳ  ಇತ್ಯರ್ಥದ ನಿರ್ಣಯಕ್ಕೆ (2014-15ರ ಬೆಳೆ ಅವಧಿವರೆಗೆ)   ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಂಜಾಬ್ ಸರ್ಕಾರದ ಆಹಾರ ದಾಸ್ತಾನು ಕಾರ್ಯಾಚರಣೆಗಾಗಿ ಲೆಗಸಿ ಆಹಾರ ನಗದು ಸಾಲ ಖಾತೆಗಳ (2014-15ನೇ ಬೆಳೆ ಅವಧಿವರೆಗೆ) ಇತ್ಯರ್ಥಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ವೆಚ್ಚ ಇಲಾಖೆಯ ಈ ಪ್ರಸ್ತಾಪಕ್ಕೆ 2.1.2017ರಂದು ಪ್ರಧಾನ ಮಂತ್ರಿಯವರು ನಿಯಮ 12 (ಕಲಾಪ ನಿರ್ವಹಣೆ) ಕಾನೂನು 1961ರ ಅಡಿಯಲ್ಲಿ ಅನುಮೋದನೆ ನೀಡಿದ್ದರು.

 

ಭಾರತೀಯ ಕಾರ್ಯತಂತ್ರಾತ್ಮಕ ತೈಲೋತ್ಪನ್ನ ದಾಸ್ತಾನು ನಿಯಮಿತ (ಐ.ಎಸ್.ಪಿ.ಆರ್.ಎಲ್.) ಮತ್ತು ಯುಎಇಯ ಅಬು ಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್ಓಸಿ) ನಡುವೆ ತೈಲ ದಾಸ್ತಾನು ಮತ್ತು ನಿರ್ವಹಣೆಗಾಗಿ ನಿರ್ಧಾರಕ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

 

 ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕೇಂದ್ರೀಯ ಎಂಜಿನಿಯರಿಂಗ್ ಸೇವೆ (ರಸ್ತೆಗಳು)ಯ ಗುಂಪು ಎ ಕೇಡರ್ ಪರಾಮರ್ಶೆಗೆ ಸಂಪುಟದ ಅನುಮೋದನೆ

 

15 ಮಾರ್ಚ್ 2017

 

ಜನವರಿ 2017ರಿಂದ ಬಾಕಿ ಇರುವ ಹೆಚ್ಚುವರಿ ಶೇ.2ರ ತುಟ್ಟಿ ಭತ್ಯೆ/ತುಟ್ಟಿ ಪರಿಹಾರಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಿಣಿದಾರರಿಗೆ ತುಟ್ಟಿ ಪರಿಹಾರವನ್ನು 01.01.2017ರಿಂದ ಅನ್ವಯವಾಗುವಂತೆ ಹೆಚ್ಚುವರಿ ಕಿಂತಿನ ಬಿಡುಗಡೆಗೆ ತನ್ನ ಅನುಮೋದನೆ ನೀಡಿದೆ. ದರ ಏರಿಕೆಯನ್ನು ಸರಿದೂಗಿಸಲು ಪ್ರಸ್ತುತ ಇರುವ ಮೂಲ ವೇತನ/ಪಿಚಣಿಯ ಶೇ.2 ದರದ ಮೇಲೆ ಶೇ.2ರಷ್ಟು ಏರಿಕೆ ಮಾಡಲಾಗಿದೆ.

 

ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ಐಐಐಟಿಗಳ) ಘೋಷಣೆ.

 

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ಸಾರ್ವಜನಿಕ-ಖಾಸಗಿ ಪಾಲುದಾರಿಕೆ) ವಿಧೇಯಕ 2017ಕ್ಕೆ ಸಂಪುಟದ ಅನುಮೋದನೆ

 

ಬಾಹ್ಯ ಬೆಂಬಲಿತ ಯೋಜನೆ (ಇಎಪಿಗಳು)ಯ ವಿಶೇಷ ಆರ್ಥಿಕ ನೆರವು ಹಂಚಿಕೆ ಮತ್ತು ಪೋಲಾವರಂ ನೀರಾವರಿ ಯೋಜನೆಗೆ ಹಣ ನೀಡಿಕೆಯ ಮೂಲಕ  ಆಂಧ್ರಪ್ರದೇಶಕ್ಕೆ ವಿಶೇಷ ನೆರವಿನ ಕ್ರಮ

 

ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡಮಿ (ಎಲ್.ಬಿ.ಎಸ್.ಎನ್.ಎ.ಎ.), ಮುಸ್ಸೂರಿ ಮತ್ತು ನಮೀಬಿಯಾದ ನಮೀಬಿಯಾ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ನಿರ್ವಹಣೆ (ಎನ್.ಐ.ಪಿ.ಎ.ಎಂ.) ನಡುವೆ ಸಾಮರ್ಥ್ಯ ವರ್ಧನೆ ಕುರಿತ ತಿಳಿವಳಿಕೆ ಒಪ್ಪಂದ

 

ಪಥದರ್ಶನಕ್ಕೆ ನೆರವಾಗಲು (ಎಟಿಓಎನ್.ಎಸ್.) ಭಾರತ- ಬಾಂಗ್ಲಾ ದೇಶಗಳ ನಡುವೆ ತಿಳಿವಳಿಕೆ  ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಸರ್ಕಾರದ ಶಿಪ್ಪಿಂಗ್ ಸಚಿವಾಲಯದ  ಲೈಟ್ ಹೌಸ್ ಗಳು ಮತ್ತು ಹಗುರ ಹಡಗುಗಳ ಮಹಾ ನಿರ್ದೇಶನಾಲಯ (ಡಿಜಿಎಲ್.ಎಲ್.) ಮತ್ತು ಬಾಂಗ್ಲಾದೇಶ ಸರ್ಕಾರದ ಶಿಪ್ಪಿಂಗ್ ಇಲಾಖೆಯ  ನಡುವೆ ಪಥದರ್ಶನಕ್ಕೆ ನೆರವು ನೀಡುವ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

20 ಮಾರ್ಚ್ 2017

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಜಿಎಸ್ಟಿ ಸಂಬಂಧಿತ ನಾಲ್ಕು ಮಸೂದೆಗಳಿಗೆ ತನ್ನ ಅನುಮೋದನೆ ನೀಡಿದೆ:

ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ 2017 (ಸಿಜಿಎಸ್ಟಿ ವಿಧೇಯಕ) 

ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ 2017 (ಐಜಿಎಸ್ಟಿ ವಿಧೇಯಕ) 

ಕೇಂದ್ರಾಡಳಿತ ಪ್ರದೇಶಗಳ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ 2017 (ಯುಟಿಜಿಎಸ್ಟಿ ವಿಧೇಯಕ) 

ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ಮಸೂದೆ 2017 (ಪರಿಹಾರ ವಿಧೇಯಕ) 

 

22 ಮಾರ್ಚ್ 2017

 

'ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ, 2009'ರ ತಿದ್ದುಪಡಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ (ಆರ್.ಟಿ.ಇ.), 2009ರ ತಿದ್ದುಪಡಿಗೆ ತನ್ನ ಅನುಮೋದನೆ ನೀಡಿದೆ. 2015ರ ಮಾರ್ಚ್ 31ರವರೆಗೆ ಉದ್ಯೋಗದಲ್ಲಿರುವ ಎಲ್ಲ ಶಿಕ್ಷಕರಿಗೂ ಶೈಕ್ಷಣಿಕ ಪ್ರಾಧಿಕಾರ ನಿಗದಿ ಮಾಡಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪಡೆದುಕೊಳ್ಳುವ ಖಾತ್ರಿ ಒದಗಿಸುತ್ತದೆ, ಮತ್ತು ಅಂತ ತರಬೇತಿ ಪಡೆಯುವ ನಾಲ್ಕುವರ್ಷಗಳಿಗೆ  ಅಂದರೆ 2019ರ ಮಾರ್ಚ್ 31ರವರೆಗೆ ವಿಸ್ತರಿಸಿದೆ.

 

ಭಾರತೀಯ ವಾಣಿಜ್ಯ ಸೇವೆ (ಐಟಿಎಸ್)ಯ ಅಧಿಕಾರಿಗಳಿಗೆ ಹಿರಿಯ ಆಡಳಿತಾತ್ಮಕ ದರ್ಜೆ(ಎಸ್.ಎ.ಜಿ.)ಗೆ ಸಿತು ಪದೋನ್ನತಿ ನೀಡಲು ಸಂಪುಟ ಸಮ್ಮತಿ

 

ನವೋದ್ಯಮಗಳಿಗೆ ನಿಧಿಯ ನಿಧಿ (ಎಫ್.ಎಫ್.ಎಸ್) ಸ್ಥಾಪಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಳೆದ ಜೂನ್ ನಲ್ಲಿ 1,000 ಕೋಟಿ ರೂಪಾಯಿ ಕಾಪು ನಿಧಿಯೊಂದಿಗೆ ಸ್ಥಾಪಿಸಲಾದ  ನವೋದ್ಯಮಗಳ ನಿಧಿಯ ನಿಧಿ (ಎಫ್.ಎಫ್.ಎಸ್.)ಗೆ ಸಂಬಂಧಿಸಿದ ಈ ಕೆಳಗಿನ ಪ್ರಸ್ತಾವಗಳಿಗೆ ತನ್ನ ಅನುಮೋದನೆ ನೀಡಿದೆ. 

ಜಿಎಸ್ಟಿ ವ್ಯವಸ್ಥೆಯ ಜಾರಿಗೆ ಅನುಕೂಲ ಮಾಡಿಕೊಡಲು, ವಿವಿಧ ಸರಕು ಮತ್ತು ಸೇವೆಗಳ ಮೇಲಿನ ಮೇಲ್ತೆರಿಗೆ ಮತ್ತು ಉಪಕರ ತೆಗೆದುಹಾಕುವ ಕುರಿತಂತೆ ಸೀಮಾಸುಂಕ ಮತ್ತು ಅಬಕಾರಿ ಕಾಯಿದೆಯಲ್ಲಿ ತಿದ್ದುಪಡಿಗೆ ಸಂಪುಟದ ಅನುಮೋದನೆ

 

31 ಮಾರ್ಚ್ 2017

 

ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ, 2009ರ ತಿದ್ದುಪಡಿಗೆ ಸಂಪುಟದ ಅನುಮೋದನೆ

 

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ.)ದ  ಕನಿಷ್ಠ ವಯಸ್ಸಿನ ವಿಧ್ಯುಕ್ತ ಸಭೆ 1973 (ನಂ.138) ಮತ್ತು ಅತಿ ಕೆಟ್ಟ ಸ್ವರೂಪದ ಬಾಲ ಕಾರ್ಮಿಕರ ವಿಧ್ಯುಕ್ತ ಸಭೆ, 1999 (ನಂ.182) ರ ಸ್ಥಿರೀಕರಣಕ್ಕೆ ಸಂಪುಟದ ಅನುಮೋದನೆ 

 

ಸಂಸತ್ತಿನಲ್ಲಿ ಮಂಡಿಸಲಾಗುವ ಕಂಪನಿಗಳ (ತಿದ್ದುಪಡಿ) ವಿಧೇಯಕ 2016ಕ್ಕೆ ಅಧಿಕೃತ ತಿದ್ದುಪಡಿ ಮಂಡನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕಂಪನಿಗಳ (ತಿದ್ದುಪಡಿ) ವಿಧೇಯಕ 2016ಕ್ಕೆ ಅಧಿಕೃತ ತಿದ್ದುಪಡಿ ಮಂಡಿಸಲು ತನ್ನ ಅನುಮೋದನೆ ನೀಡಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.

 

05 ಏಪ್ರಿಲ್  2017

 

ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ ಬೆಂಬಲ ನೀಡಲು ಸಹಯೋಗ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಫ್ರೆಂಚ್ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎ.ಎನ್.ಆರ್.), ಫ್ರಾನ್ಸ್ ನೊಂದಿಗೆ ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ 2015-ಜನವರಿಯಿಂದ 2017ರ ಡಿಸೆಂಬರ್ ವರೆಗೆ ಒಟ್ಟು 40,000 ಯೂರೋ ಅಂದಾಜು ವೆಚ್ಚದೊಂದಿಗೆ ಬೆಂಬಲ ನೀಡಲು ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಒಪ್ಪಿಗೆ ನೀಡಿದೆ. ಸಂಪುಟವು 2017ರ ನಂತರವೂ ಬೆಲ್ಮಾಂಟ್ ಫೋರಂ ಸೆಕ್ರೇಟರಿಯೆಟ್ ಗೆ ಆರ್ಥಿಕ ಬೆಂಬಲ ಮುಂದುವರಿಸಲೂ ತನ್ನ ಸಮ್ಮತಿ ಸೂಚಿಸಿದೆ.

 

 

ಮಹಾತ್ಮಾಗಾಂಧಿ ಪ್ರವಾಸಿ ಸುರಕ್ಷಾ ಯೋಜನೆ ಮುಚ್ಚಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉದ್ಯೋಗಕ್ಕಾಗಿ ಇ.ಸಿ.ಆರ್.  ರಾಷ್ಟ್ರಗಳಿಗೆ ಹೋಗುವ ವಲಸೆ ಪರಿಶೀಲನೆ ಅಗತ್ಯ ಇರುವ (ಇ.ಸಿ.ಆರ್).-ವರ್ಗದ ನೌಕರರ ಸಾಮಾಜಿಕ ಭದ್ರತೆ – ಸಂಬಂಧಿತ ವಿಷಯಗಳನ್ನು ನಿಭಾಯಿಸಲು 2012ರಲ್ಲಿ ಸ್ಥಾಪಿಸಲಾಗಿದ್ದು ಮಹಾತ್ಮಾಗಾಂಧಿ ಪ್ರವಾಸಿ ಸುರಕ್ಷಾ ಯೋಜನೆ (ಎಂ.ಜಿ.ಪಿ.ಎಸ್.ವೈ.) ಮುಚ್ಚಲು ತನ್ನ ಅನುಮೋದನೆ ನೀಡಿದೆ.

 

ಭಾರತ- ಬಾಂಗ್ಲಾದೇಶದ ಶಿಷ್ಟಾಚಾರ ಮಾರ್ಗದ ಕುಶಿಯಾರಾ ನದಿಯ ಆಶುಗಂಜ್ –ಜಾಕಿಗಂಜ್ ಮಾರ್ಗದಲ್ಲಿ ಮತ್ತು ಜಮುನಾ ನದಿಯ ಸಿರಾಜ್ ಗಂಜ್ – ದೈಖಾವ ಮಾರ್ಗದಲ್ಲಿ ಜಲ ಮಾರ್ಗ ಅಭಿವೃದ್ಧಿಗಾಗಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ ಎಸ್.ಪಿ.ವಿ.) ಎಂದು ಕರೆಯಲಾಗುವ ವಿಶೇಷ ಉದ್ದೇಶದ ವಾಹಕ (ಸ್ಪೆಷಲ್ ಪರ್ಸಸ್ ವೆಹಿಕಲ್) ಸ್ಥಾಪನೆಗೆ ಸಂಪುಟದ ಅನುಮೋದನೆ

 

 

12 ಏಪ್ರಿಲ್  2017

 

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರತೀಯ ಪೆಟ್ರೋಲಿಯಂ ಮತ್ತು ಇಂಧನ ಸಂಸ್ಥೆ (ಐಐಪಿಇ) ಸ್ಥಾಪನೆಗೆ ಸಂಪುಟದ ಅನುಮೋದನೆ

 

 

ಕಾನ್ಪುರದ ವಾಯು ಪಡೆ ಸ್ಟೇಷನ್ ನಲ್ಲಿ  ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 6.5628 ಎಕರೆ ರಕ್ಷಣಾ ಇಲಾಖೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೇಂದ್ರೀಯ ವಿದ್ಯಾಲಯ ಸಂಘಟನ್ ಗೆ ವರ್ಗಾಯಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾನ್ಪುರದ ವಾಯು ಪಡೆ ಸ್ಟೇಷನ್ (ಎ.ಎಫ್.ಎಸ್., ಕಾನ್ಪುರ) ನಲ್ಲಿ  ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 6.5628 ಎಕರೆ ರಕ್ಷಣಾ ಇಲಾಖೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೇಂದ್ರೀಯ ವಿದ್ಯಾಲಯ ಸಂಘಟನ್(ಕೆ.ವಿ.ಎಸ್) ಗೆ ವರ್ಗಾಯಿಸಲು ತನ್ನ ಅನುಮೋದನೆ ನೀಡಿದೆ. ಈ ಜಮೀನನ್ನು 16.6.2011ರ ಮುಂಚಿನ ನಿರ್ಧಾರಕ್ಕೆ ಭಾಗಶಃ ಮಾರ್ಪಾಡು ಮಾಡಿ ಶಾಲಾ ಕಟ್ಟಡ ಮತ್ತು ಇತರ ಪೂರಕ ಮೂಲಸೌಕರ್ಯ ನಿರ್ಮಾಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮುನ್ನ ಎ.ಎಫ್.ಎಸ್. ಕಾನ್ಪುರದ 8.90 ಎಕರೆ ರಕ್ಷಣಾ ಭೂಮಿಯನ್ನು ಕೆ.ವಿ.ಎಸ್.ಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿತ್ತು.

 

ಭಾರತ ಮತ್ತು ಟುನೇಷಿಯಾ ನಡುವೆ ನ್ಯಾಯ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

 

19 ಏಪ್ರಿಲ್  2017

 

 ದ್ವಿತೆರಿಗೆ ತಪ್ಪಿಸಲು ಪೋರ್ಚುಗಲ್ ಮತ್ತು ಭಾರತ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

 

ಕನಿಷ್ಠ 15 ವರ್ಷಕ್ಕೆ ಕಡಿಮೆ ಇಲ್ಲದೆ ಸೇವೆ ಸಲ್ಲಿಸಿರುವ 1991ರ ಡಿಸೆಂಬರ್ ನಿಂದ 1999ರ ನವೆಂಬರ್ 29ರವರೆಗಿನ ಅವಧಿಯಲ್ಲಿ ಮೃತಪಟ್ಟ ಅಥವಾ ಸೇವೆಯಿಂದ ಅನೂರ್ಜಿತಗೊಂಡ ರಕ್ಷಣಾ ಸಿಬ್ಬಂದಿಗೆ 180 ದಿನಗಳವರೆಗೆ ಸಂಚಯಿತ ರಜೆ ನಗದೀಕರಣಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕನಿಷ್ಠ 15 ವರ್ಷಗಳಿಗೆ ಕಡಿಮೆ ಇಲ್ಲದೆ ಸೇವೆ ಸಲ್ಲಿಸಿರುವ ಮತ್ತು30.12.1991ರಿಂದ 29.11.1999ರ ಅವಧಿಯಲ್ಲಿ ಮೃತಪಟ್ಟ ಅಥವಾ ಸೇವೆಯಿಂದ ಅನೂರ್ಜಿತಗೊಂಡ ರಕ್ಷಣಾ ಸಿಬ್ಬಂದಿಯ 180 ದಿನಗಳವರೆಗಿನ ಸಂಚಯಿತ ರಜೆಯನ್ನು ನಗದೀಕರಿಸಿಕೊಳ್ಳಲು ತನ್ನ ಅನುಮೋದನೆ ನೀಡಿದೆ.  

 

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲು ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಯುನಿಟ್ ಗಳ ದಾಸ್ತಾನಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲು ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟ್) ಯುನಿಟ್ ಗಳ ದಾಸ್ತಾನಿಗೆ  ಮತ್ತು ಈ ಕೆಳಗಿನ ಅಂಶಗಳಿಗೆ ತನ್ನ ಅನುಮೋದನೆ ನೀಡಿದೆ.

 

ಪ್ರಮುಖ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ದ್ವಿಪಕ್ಷೀಯ ಸಂಸ್ಥೆಗಳಿಂದ ರಾಜ್ಯ ಸರ್ಕಾರದ ಕಾಯಗಳು ಬಾಹ್ಯ ನೆರವು ಪಡೆದುಕೊಳ್ಳಲು ಅನುಮತಿ ನೀಡಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

 

 

03 ಮೇ 2017

ಭಾರತ ಮತ್ತು ಜಪಾನ್ ನಡುವೆ ರೈಲ್ವೆ ಸುರಕ್ಷತೆ ಸಹಕಾರಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರೈಲ್ವೆ ಸುರಕ್ಷತೆ ಕುರಿತಂತೆ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದ(ಎಂ.ಓ.ಸಿ.)ದ ಅಂಕಿತಕ್ಕೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ಈ ಎಂ.ಓ.ಸಿ.ಗೆ ಈಗಾಗಲೇ 2017ರ ಫೆಬ್ರವರಿಯಲ್ಲಿ ಅಂಕಿತ ಹಾಕಲಾಗಿದೆ. 

 

ವೇತನ ಹಾಗೂ ಪಿಂಚಣಿ ಸೌಲಭ್ಯ ಕುರಿತ 7ನೇ ಸಿಪಿಸಿ ಶಿಫಾರಸುಗಳ ಮಾರ್ಪಾಡಿಗೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವೇತನ ಹಾಗೂ ಪಿಂಚಣಿ ಸೌಲಭ್ಯ ಕುರಿತ 7ನೇ ಸಿಪಿಸಿ (ಕೇಂದ್ರೀಯ ವೇತನ ಆಯೋಗ) ಶಿಫಾರಸುಗಳ ಜಾರಿಯ ಪ್ರಕ್ರಿಯೆಯಲ್ಲಿ ಅವುಗಳಿಗೆ ಸಂಬಂಧಿಸಿದ ಮಾರ್ಪಾಡಿನ ಮಹತ್ವದ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ. ಇದಕ್ಕೂ ಮುನ್ನ 2016ರ ಜೂನ್ ನಲ್ಲಿ ಸಂಪುಟವು 2016-17ನೇ ಸಾಲಿಗಾಗಿ (2015-16ರ ಸಾಲಿನ 2ತಿಂಗಳ ಬಾಕಿಯೂ ಸೇರಿ) 84,933 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ವೆಚ್ಚದ ಶಿಫಾರಸುಗಳಿಗೆ ತನ್ನ ಅನುಮೋದನೆ ನೀಡಿತ್ತು.

 

ಮಲೇಷಿಯಾದಲ್ಲಿ ಯೂರಿಯಾ ಉತ್ಪಾದನೆ ಘಟಕ ಕುರಿತ ಎಂ.ಓ.ಯುಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ಮಲೇಷಿಯಾದೊಂದಿಗೆ ಮಲೇಷಿಯಾದಲ್ಲಿ ಯೂರಿಯಾ ಮತ್ತು ಅಮೋನಿಯಾ ಉತ್ಪಾದನೆ ಘಟಕ ಅಭಿವೃದ್ಧಿ ಹಾಗೂ ಭಾರತಕ್ಕೆ ಯೂರಿಯಾ ಪೂರೈಕೆ ಮತ್ತು/ಅಥವಾ ಹಾಲಿ ಹೆಚ್ಚುವರಿ ಯೂರಿಯಾವನ್ನು ಮಲೇಷಿಯಾದಿಂದ ಭಾರತಕ್ಕೆ ಪೂರೈಕೆ ಮಾಡುವ ಕುರಿತಂತೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ದೇಶೀಯವಾಗಿ ತಯಾರಿಸಲಾದ ಉಕ್ಕು ಮತ್ತು ಕಬ್ಬಿಣದ ಉತ್ಪನ್ನಗಳಿಗೆ ಸರ್ಕಾರಿ ದಾಸ್ತಾನಿನಲ್ಲಿ ಆದ್ಯತೆ ನೀಡುವ ನೀತಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶೀಯವಾಗಿ ತಯಾರಿಸಲಾದ ಉಕ್ಕು ಮತ್ತು ಕಬ್ಬಿಣದ ಉತ್ಪನ್ನಗಳಿಗೆ ಸರ್ಕಾರಿ ದಾಸ್ತಾನಿನಲ್ಲಿ ಆದ್ಯತೆ ನೀಡುವ ನೀತಿಗೆ ತನ್ನ ಅನುಮೋದನೆ ನೀಡಿದೆ.

 

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನ ತಂತ್ರಜ್ಞಾನದ ಉನ್ನತ ಕಾಲೇಜುಗಳ ನಡುವಿನ ತಿಳಿವಳಿಕೆ ಒಪ್ಪಂದದ ನವೀಕರಣಕ್ಕೆ ಮತ್ತು  2011ರಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನ ತಂತ್ರಜ್ಞಾನದ ಉನ್ನತ ಕಾಲೇಜು (ಎಚ್.ಸಿ.ಟಿ.)ಗಳೊಂದಿಗಿನ ತಿಳಿವಳಿಕೆ ಒಪ್ಪಂದದ ನವೀಕರಣಕ್ಕೆ ಮತ್ತು  2011ರಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಕೇರಳದ (ತ್ರಿಚೂರ್) ತ್ರಿಸ್ಸೂರ್ ನಲ್ಲಿನ ಅಂಚೆ ಇಲಾಖೆಗೆ ಸೇರಿದ ಜಮೀನು ಮತ್ತು ಕಟ್ಟಡವನ್ನು ಪಟ್ಟಾಲಂ ರಸ್ತೆ ಅಗಲೀಕರಣಕ್ಕಾಗಿ ತ್ರಿಸ್ಸೂರ್ ಮುನಿಸಿಪಲ್ ಕಾರ್ಪೊರೇಷನ್ ಗೆ ಹಸ್ತಾಂತರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇರಳದ (ತ್ರಿಚೂರ್) ತ್ರಿಸ್ಸೂರ್ ನಲ್ಲಿನ ಅಂಚೆ ಇಲಾಖೆಗೆ ಸೇರಿದ 16.5 ಗುಂಟೆ ಜಮೀನು ಮತ್ತು ಕಟ್ಟಡವನ್ನು ಸಾರ್ವಜನಿಕ ಹಿತದಲ್ಲಿ ಜಮೀನಿಗೆ ಪರ್ಯಾಯವಾಗಿ ಜಮೀನು ನೀತಿಯಡಿ ಪಟ್ಟಾಲಂ ರಸ್ತೆ ಅಗಲೀಕರಣಕ್ಕಾಗಿ ತ್ರಿಸ್ಸೂರ್ ಮುನಿಸಿಪಲ್ ಕಾರ್ಪೊರೇಷನ್ ಗೆ ಹಸ್ತಾಂತರಿಸಲು ತನ್ನ ಅನುಮೋದನೆ ನೀಡಿದೆ.

 

ನಾಗರಿಕ ವಿಮಾನಯಾನ ಕ್ಷೇತ್ರದ ಸಹಕಾರಕ್ಕಾಗಿ ಭಾರತ ಮತ್ತು ಸ್ಪೇನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸ್ಪೇನ್ ನಡುವೆ ನಾಗರಿಕ ವಿಮಾನಯಾನ ರಂಗದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 ವಿಜಯವಾಡ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಸಂಪುಟ ಸಮ್ಮತಿ 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2014ರ ಆಂಧ್ರಪ್ರದೇಶ ಪುನಾರಚನೆ ಕಾಯಿದೆಯ ನಿಯಮಗಳ ಅನುಸಾರವಾಗಿ ವಿಜಯವಾಡ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಲು ತನ್ನ ಅನುಮೋದನೆ ನೀಡಿದೆ.

 

ರಕ್ಷಣಾ ಸೇವೆಗಳ  ಸಿಬ್ಬಂದಿ ಕಾಲೇಜು, ವೆಲ್ಲಿಂಗ್ಟನ್ ಮತ್ತು ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು, ಮಿರ್ ಪುರ, ಢಾಕಾ ನಡುವೆ ಸೇನಾ ಶಿಕ್ಷಣದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸೇವೆಗಳ  ಸಿಬ್ಬಂದಿ ಕಾಲೇಜು, ವೆಲ್ಲಿಂಗ್ಟನ್ ಮತ್ತು ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು, ಮಿರ್ ಪುರ, ಢಾಕಾ ನಡುವೆ ವ್ಯೂಹಾತ್ಮಕ ಮತ್ತು ಕಾರ್ಯಾಚರಣೆ ಅಧ್ಯಯನ ಕ್ಷೇತ್ರದಲ್ಲಿನ ಸೇನಾ ಶಿಕ್ಷಣದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

 ರಾಷ್ಟ್ರೀಯ ಉಕ್ಕು ನೀತಿ 2017ಕ್ಕೆ ಸಂಪುಟದ ಅನುಮೋದನೆ, ಹೊಸ ನೀತಿ- ದೀರ್ಘ ಕಾಲೀನ ಮುನ್ನೋಟದ ಪ್ರತಿಬಿಂಬ 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಉಕ್ಕು ನೀತಿ (ಎಸ್.ಎಸ್.ಪಿ.) 2017ಕ್ಕೆ ತನ್ನ ಅನುಮೋದನೆ ನೀಡಿದೆ. 

 

ಅಭಿವೃದ್ಧಿ ಯೋಜನೆಗಳ ಜಾರಿಗೆ ಬಾಂಗ್ಲಾದೇಶಕ್ಕೆ 4.5 ಶತಕೋಟಿ ಅಮೆರಿಕನ್ ಡಾಲರ್ ಮೂರನೇ ಲೈನ್ ಆಫ್ ಕ್ರೆಡಿಟ್  ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಭಿವೃದ್ಧಿ ಯೋಜನೆಗಳ ಜಾರಿಗೆ ಬಾಂಗ್ಲಾದೇಶಕ್ಕೆ 4.5 ಶತಕೋಟಿ ಅಮೆರಿಕನ್ ಡಾಲರ್ ಮೂರನೇ ಲೈನ್ ಆಫ್ ಕ್ರೆಡಿಟ್  ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ  ಅನುಮೋದನೆ ನೀಡಿದೆ.

 

 17 ಮೇ 2017

ಭಾರತದಿಂದ ಮೂಲದಲ್ಲೇ ವಂಚನೆ ಮತ್ತು ಲಾಭ ಬದಲಾವಣೆ ತಪ್ಪಿಸಲು ತೆರಿಗೆ ಒಪ್ಪಂದ ಸಂಬಂಧಿತ ಕ್ರಮಗಳಿಗಾಗಿ ಬಹುಪಕ್ಷೀಯ ಸಮಾವೇಶದ ಅಂಕಿತಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೂಲದಲ್ಲೇ ವಂಚನೆ ಮತ್ತು ಲಾಭ ಬದಲಾವಣೆ ತಪ್ಪಿಸಲು ತೆರಿಗೆ ಒಪ್ಪಂದ ಸಂಬಂಧಿತ ಕ್ರಮಗಳಿಗಾಗಿ ಬಹುಪಕ್ಷೀಯ ಸಮಾವೇಶದ ಅಂಕಿತಕ್ಕೆ ತನ್ನ ಅನುಮೋದನೆ ನೀಡಿದೆ.

 

ಭಾರತದ ದೇಶೀಯ 10  ಒತ್ತಡದ  ಭಾರ ಜಲ ರಿಯಾಕ್ಟರ್ (ಪಿ.ಎಚ್.ಡಬ್ಲ್ಯು.ಆರ್) ಘಟಕಗಳ ನಿರ್ಮಾಣಕ್ಕೆ  ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ದೇಶೀಯ ಪರಮಾಣು ಇಂಧನ ಕಾರ್ಯಕ್ರಮವನ್ನು ತ್ವರಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತದಲ್ಲಿ ದೇಶೀಯವಾಗಿ 10 ಒತ್ತಡದ ಭಾರಜಲ ರಿಯಾಕ್ಟರ್ ಘಟಕ (ಪಿ.ಎಚ್.ಡಬ್ಲ್ಯು.ಆರ್) ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿದೆ. ಈ ಘಟಕಗಳ ಸ್ಥಾಪಿತ ಸಾಮರ್ಥ್ಯ 7 ಮೆ.ವ್ಯಾ. ಆಗಿದೆ. 10 ಪಿ.ಎಚ್.ಡಬ್ಲ್ಯು.ಆರ್. ಯೋಜನೆಯು ಪರಮಾಣು ಇಂಧನ ಉತ್ಪಾದನೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.

 

 ಭಯೋತ್ಪಾದನೆ ನಿಗ್ರಹ ಮತ್ತು ಸಂಘಟಿತ ಬಹುರಾಷ್ಟ್ರೀಯ ಅಪರಾಧ ತಡೆ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಯೋತ್ಪಾದನೆ ನಿಗ್ರಹ ಮತ್ತು ಸಂಘಟಿತ ಬಹುರಾಷ್ಟ್ರೀಯ ಅಪರಾಧ ತಡೆ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ನವದೆಹಲಿಯ ರಾಷ್ಟ್ರೀಯ ಸೇನಾ ಕಾಲೇಜು ಮತ್ತು ಬಾಂಗ್ಲಾದೇಶದ ಢಾಕಾದ ರಾಷ್ಟ್ರೀಯ ಸೇನಾ ಕಾಲೇಜಿನ ನಡುವೆ ಬೋಧಕರ ವಿನಿಮಯ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವದೆಹಲಿಯ ರಾಷ್ಟ್ರೀಯ ಸೇನಾ ಕಾಲೇಜು ಮತ್ತು ಬಾಂಗ್ಲಾದೇಶದ ಢಾಕಾದ ರಾಷ್ಟ್ರೀಯ ಸೇನಾ ಕಾಲೇಜುಗಳ  ನಡುವೆ ಅಂಕಿತ ಹಾಕಲಾಗಿರುವ ಬೋಧಕರ ವಿನಿಮಯ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಸಮ್ಮತಿ ನೀಡಿದೆ.

 

ದೇಶಾದ್ಯಂತ ಹೆರಿಗೆ ಸವಲತ್ತು ಕಾರ್ಯಕ್ರಮ ಜಾರಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 01.01.2017ರಿಂದ  ಅನ್ವಯವಾಗುವಂತೆ ದೇಶದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಗಿರುವ  ಹೆರಿಗೆ ಸೌಲಭ್ಯ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಕಸ್ಟಮ್ಸ್ ವಿಚಾರದಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ತಾನ್ ನಡುವೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ತಜಕಿಸ್ತಾನಗಳ ನಡುವೆ ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

ವಸತಿ ಸೌಕರ್ಯಗಳಿಂದ ಹೊರಹಾಕುವಿಕೆ ಪ್ರಕ್ರಿಯೆಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ 1971ಕ್ಕೆ ತಿದ್ದುಪಡಿಗೆ  ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾರ್ವಜನಿಕ ಸ್ಥಳಗಳ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ 1971 (ಪಿಪಿಇ ಕಾಯಿದೆ, 1971)ರ ಸೆಕ್ಷನ್ 2ರಲ್ಲಿ ಹೊಸ ಉಪವಾಕ್ಯ ‘ವಸತಿ ಸೌಕರ್ಯದ ನಿವಾಸಗಳು’ ಎಂಬ ವ್ಯಾಖ್ಯೆ ಸೇರ್ಪಡೆ ಮತ್ತು ಕಾಯಿದೆಯ ಸೆಕ್ಷನ್ 3ರಡಿ ಹೊಸ ಉಪ ಸೆಕ್ಷನ್ 3ಬಿಯ ಅಡಿ  ಉಪ ಸೆಕ್ಷನ್ 3ಎಯಲ್ಲಿ ‘ವಸತಿ ಸೌಕರ್ಯದ ನಿವಾಸಗಳಿಂದ’ತೆರವಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸೇರಿಸುವುದರೊಂದಿಗೆ ಸೆಕ್ಷನ್ 2 ಮತ್ತು ಸೆಕ್ಷನ್ 3ರ  ತಿದ್ದುಪಡಿ ತರಲು  ಸಂಪುಟದ ಅನುಮೋದನೆ ನೀಡಿದೆ.

 

ಪುರಾತನ ಸ್ಮಾರಕ ಮತ್ತು ಪುರಾತತ್ವ ತಾಣಗಳು ಮತ್ತು ರಕ್ಷಣೆ ಕಾಯಿದೆ 1958ರ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುರಾತನ ಸ್ಮಾರಕ ಮತ್ತು ಪುರಾತತ್ವ ತಾಣಗಳ ರಕ್ಷಣೆ (ತಿದ್ದುಪಡಿ) ಕಾಯಿದೆ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.

 

 24 ಮೇ 2017

 

ಕೇಂದ್ರೀಯ ರಸ್ತೆ ನಿಧಿ ಕಾಯಿದೆ 2000ಕ್ಕೆ ತಿದ್ದುಪಡಿ ತರುವ ಮೂಲಕ ರಾಷ್ಟ್ರೀಯ ಜಲ ಮಾರ್ಗ (ಎನ್.ಡಬ್ಲ್ಯು.ಗಳು) ಅಭಿವೃದ್ಧಿ ಮತ್ತು ನಿರ್ವಹಣೆಗೆ ಕೇಂದ್ರೀಯ ರಸ್ತೆ ನಿಧಿಯ ಶೇ.2.5ರಷ್ಟು ಹಂಚಿಕೆ ಮಾಡಲು ಸಂಪುಟದ ಅನುಮೋದನೆ

 ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರೀಯ ರಸ್ತೆ ನಿಧಿ (ಸಿಆರ್.ಎಫ್.) ಉತ್ಪತ್ತಿಯಲ್ಲಿ ಶೇ.2.5ರಷ್ಟನ್ನು ರಾಷ್ಟ್ರೀಯ ಜಲ ಮಾರ್ಗ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಹಂಚಿಕೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒದಗಿಸುವ ಪಾಲು ಕಡಿಮೆ ಮಾಡಲು ಶಿಪ್ಪಿಂಗ್ ಸಚಿವಾಲಯ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂ.ಓ.ಆರ್.ಟಿ.ಎಚ್) ಜಂಟಿಯಾಗಿ ಕೇಂದ್ರೀಯ ರಸ್ತೆ ನಿಧಿ ಕಾಯಿದೆ 2000ಕ್ಕೆ ತಿದ್ದುಪಡಿ ತರಲು ಮಂಡಿಸಿದ್ದ ಪ್ರಸ್ತಾವನೆಗೆ ಇಂದು ತನ್ನ ಅನುಮೋದನೆ ನೀಡಿದೆ.

 

ಅಸ್ಸಾಂನ ಕಾಮರೂಪ್ ನಲ್ಲಿ ನೂತನ ಏಮ್ಸ್ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾಮರೂಪ (ಉತ್ತರ ಗುವಾಹಟಿಯ ಕಂದಾಯ ವೃತ್ತ)ದಲ್ಲಿ ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚ 1123 ಕೋಟಿ ರೂಪಾಯಿ ಮತ್ತು ಇದನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ) ಅಡಿಯಲ್ಲಿ ಸ್ಥಾಪಿಸಲಾಗುತ್ತದೆ.

 

ಅಂಗಾಂಗ ಕಸಿ ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸ್ಪೇನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸ್ಪೇನ್ ನ ಆರೋಗ್ಯ, ಸಾಮಾಜಿಕ ಸೇವೆ ಮತ್ತು ಸಮಾನತೆ ಸಚಿವಾಲಯದ ರಾಷ್ಟ್ರೀಯ ಕಸಿ ಸಂಸ್ಥೆ ಮತ್ತು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದ ನಡುವೆ ಅಂಗಾಂಗ ಕಸಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.

 

ಹೂಡಿಕೆ ಉತ್ತೇಜನ ಮಂಡಳಿಯನ್ನು ಹಂತ ಹಂತವಾಗಿ ವಿಸರ್ಜಿಸಲು ಸಂಪುಟದ ಅನುಮೋದಿಸಿದೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿದೇಶೀ ಹೂಡಿಕೆ ಉತ್ತೇಜನ ಮಂಡಳಿ (ಎಫ್.ಐ.ಪಿ.ಬಿ.)ಯನ್ನು ಹಂತ ಹಂತವಾಗಿ ವಿಸರ್ಜಿಸಲು ತನ್ನ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯು ಎಫ್.ಐ.ಪಿ.ಬಿ.ಯನ್ನು ತೆಗೆದುಹಾಕಲು ಮತ್ತು ಸರ್ಕಾರದ ಅನುಮೋದನೆ ಅಗತ್ಯವಿರುವ ಎಫ್.ಡಿ.ಐ. ಅರ್ಜಿಗಳಿಗೆ ಆಡಳಿತಾತ್ಮಕ ಸಚಿವಾಲಯ/ಇಲಾಖೆಗಳೇ ಪ್ರಕ್ರಿಯೆ ನಡೆಸಲು ಅವಕಾಶ ನೀಡುತ್ತದೆ.

 

 

ಭಾರತ ಮತ್ತು ಜರ್ಮನಿ ನಡುವೆ ಪರ್ಯಾಯ ವೈದ್ಯಕೀಯ ವಲಯದ ಸಹಕಾರ ಉದ್ದೇಶಕ್ಕೆ ಸಂಬಂಧಿಸಿದ ಜಂಟಿ ಘೋಷಣೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜರ್ಮನಿಯ ನಡುವೆ ಪರ್ಯಾಯ ವೈದ್ಯಕೀಯ ವಲಯದ ಸಹಕಾರ ಉದ್ದೇಶ(ಜೆಡಿಐ)ಕ್ಕೆ ಸಂಬಂಧಿಸಿದ ಜಂಟಿ ಘೋಷಣೆಗೆ ತನ್ನ ಅನುಮೋದನೆ ನೀಡಿದೆ.

 

ನವೀಕರಿಸಬಹುದಾದ ಇಂಧನಕ್ಕಾಗಿ 2360 ಕೋಟಿ ರೂಪಾಯಿಗಳ ಬಾಂಡ್  ಎತ್ತುವಳಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವೀಕರಿಸಬಹುದಾದ ಇಂಧನಕ್ಕಾಗಿ 2360 ಕೋಟಿ ರೂಪಾಯಿ ಬ್ಯಾಂಡ್ ಗಳ ಎತ್ತುವಳಿಗೆ ತನ್ನ ಅನುಮೋದನೆ ನೀಡಿದೆ.

 

ಮೆಟ್ರೋ ರೈಲು ಸಂಪರ್ಕಕ್ಕೆ ಉತ್ತೇಜನ, ನೋಯಿಡಾ- ಬೃಹತ್ ನೋಯಿಡಾ ಮೆಟ್ರೋ ರೈಲು ಯೋಜನೆಗೆ ಸಂಪುಟ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೋಯಿಡಾ- ಬೃಹತ್ ನೋಯಿಡಾ ನಡುವಿನ 29.707 ಕಿ.ಮೀ ಮೆಟ್ರೋ ರೈಲು ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಯೋಜನೆಯ ಸಂಪೂರ್ಣ ವೆಚ್ಚ 5,503 ಕೋಟಿ ರೂಪಾಯಿಯಾಗಿದೆ.

 

ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕೆ ಭಾರತ ಮತ್ತು ಬಾಂಗ್ಲಾದೇಶದ  ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕೆ ಭಾರತ ಮತ್ತು ಬಾಂಗ್ಲಾದೇಶದ  ನಡುವಿನ ತಿಳಿವಳಿಕೆ ಒಪ್ಪಂದ ಕುರಿತು ವಿವರಿಸಲಾಯಿತು. ಈ ಒಪ್ಪಂದಕ್ಕೆ 2017ರ ಏಪ್ರಿಲ್ ನಲ್ಲಿ ದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

 

ಸರ್ಕಾರಿ ದಾಸ್ತಾನಿನಲ್ಲಿ 'ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡುವ ನೀತಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರ್ಕಾರಿ ದಾಸ್ತಾನಿನಲ್ಲಿ ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡುವ ನೀತಿಗೆ ತನ್ನ ಅನುಮೋದನೆ ನೀಡಿದೆ. ಈ ಹೊಸ ನೀತಿಯು ದೇಶೀಯ ಉತ್ಪಾದನೆ ಮತ್ತು ಸೇವಾ ಪೂರೈಕೆದಾರರಿಗೆ ಸುಸ್ಥಿರ ಉತ್ತೇಜನ ನೀಡುತ್ತದೆ ಮತ್ತು ಆ ಮೂಲಕ ಉದ್ಯೋಗ ಸೃಷ್ಟಿಸುತ್ತದೆ. ಇದು ದೇಶೀಯ ಉತ್ಪಾದನೆ ಮತ್ತು ಸೇವೆಗಳಿಗೆ ತಂತ್ರಜ್ಞಾನ ಮತ್ತು ಬಂಡವಾಳದ ಹರಿವಿಗೂ ಉತ್ತೇಜನ ನೀಡುತ್ತದೆ. ಅಲ್ಲದೆ ಮೇಕ್ ಇನ್ ಇಂಡಿಯಾ ದೃಷ್ಟಿಕೋನದ ನಿಟ್ಟಿನಲ್ಲಿ ಬಿಡಿಭಾಗ, ಉಪಕರಣ, ಸಲಕರಣೆ ಇತ್ಯಾದಿ ಉತ್ಪಾದನೆಗೂ ಇದು ಇಂಬು ನೀಡುತ್ತದೆ.

 

ಜೂನ್ 2017

 

ಗುಜರಾತ್ ನ ವಸದ್ ನಲ್ಲಿನ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ (ಐ.ಐ.ಎಸ್.ಡಬ್ಲ್ಯು.ಸಿ.) ಸಂಶೋಧನಾ ಕೇಂದ್ರಕ್ಕೆ ಸೇರಿದ 4.64 ಹೆಕ್ಟೇರ್ ಭೂಮಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗುಜರಾತ್ ನ ಆನಂದ್ ಜಿಲ್ಲೆಯ, ವಸದ್ ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ ಬರುವ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ (ಐಐಎಸ್.ಡಬ್ಲ್ಯು.ಸಿ) ಸಂಶೋಧನಾ ಕೇಂದ್ರಕ್ಕೆ ಸೇರಿದ 4.64 ಹೆಕ್ಟೇರ್ (46384 ಚದರ ಮೀಟರ್) ಭೂಮಿಯನ್ನು ಎನ್.ಎಚ್-8ರಲ್ಲಿ ಆರು ಪಥದ ಅಹಮದಾಬಾದ್ – ವಡೋದರಾ ಹೆದ್ದಾರಿಗಾಗಿ, 12.67 ಕೋಟಿ ರೂಪಾಯಿಗಳ ಪರಿಹಾರ ಮೊತ್ತಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ.

 

ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ ಹಾಗೂ ಐರೋಪ್ಯ ಸೆಕ್ಯೂರಿಟೀಸ್ ಮತ್ತು ಮಾರುಕಟ್ಟೆ ಪ್ರಾಧಿಕಾರದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಹಾಗೂ ಐರೋಪ್ಯ ಸೆಕ್ಯೂರಿಟೀಸ್ ಮತ್ತು ಮಾರುಕಟ್ಟೆ ಪ್ರಾಧಿಕಾರ(ಎಸ್ಮಾ)ದ ನಡುವೆ ಪರಸ್ಪರ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆ ಕುರಿತಂತೆ ಭಾರತ ಮತ್ತು ಸೋಮಾಲಿಯಾ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೋಮಾಲಿಯಾ ನಡುವೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಹಸ್ತಾಂತರ ಕುರಿತ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ತದನಂತರ ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

ಭಾರತ ಮತ್ತು ಮಾಲಿ ನಡುವೆ ಪ್ರಮಾಣೀಕರಣ ಮತ್ತು ಅನುಸರಣೆ ನಿರ್ಧರಣೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಭಾರತೀಯ ಮಾನಕ ಸಂಸ್ಥೆ (ಬಿ.ಐ.ಎಸ್.) ಮತ್ತು ಮಾಲಿ ಗಣರಾಜ್ಯದ ಡೈರಕ್ಷನ್ ನ್ಯಾಷನೇಲ್ ಡಿ ಇಂಡಸ್ಟ್ರೀಸ್  (ಎಂಎಲ್ಐಎನ್.ಡಿ.ಐ)ನಡುವಿನ ಪ್ರಮಾಣೀಕರ ಮತ್ತು ಅನುಸರಣೆ ನಿರ್ಧರಣೆಯ ತಿಳಿವಳಿಕೆ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಭಾರತ ಮತ್ತು ಇರಾನ್ ನಡುವೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸೆಕ್ಯೂರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಸೆಕ್ಯೂರಿಟೀಸ್ ಮತ್ತು ವಿನಿಮಯ ಸಂಸ್ಥೆ (ಎಸ್.ಇ.ಓ), ಇರಾನ್ ನಡುವೆ ಸೆಕ್ಯೂರಿಟಿ ಮಾರುಕಟ್ಟೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನ ಅನುಮೋದನೆ ನೀಡಿದೆ.

 

 

ಮರ್ಚೆಂಟ್ ಶಿಪ್ಪಿಂಗ್ ಕುರಿತಂತೆ ಭಾರತ ಮತ್ತು ಸೈಪ್ರಸ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೈಪ್ರೆಸ್ ನಡುವೆ ಮರ್ಚೆಂಟ್ ಶಿಪ್ಪಿಂಗ್ ಕುರಿತಂತೆ 2017ರ ಏಪ್ರಿಲ್ ನಲ್ಲಿ ಅಂಕಿತ ಹಾಕಲಾದ ಒಪ್ಪಂದಕ್ಕೆ ಪೂರ್ವಾನ್ವಯವಾಗಿ ತನ್ನ ಒಪ್ಪಿಗೆ ನೀಡಿದೆ.

 

ಶತಕೋಟಿ ಅಮೆರಿಕನ್ ಡಾಲರ್ ರಫ್ತು ಕ್ರೆಡಿಟ್ ಗಾಗಿ ಭಾರತ ಮತ್ತು ಕೊರಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 9 ಶತಕೋಟಿ ಅಮೆರಿಕನ್ ಡಾಲರ್ ಎಕ್ಸ್ ಪೋರ್ಟ್ ಕ್ರೆಡಿಟ್ ನೀಡಲು ಮತ್ತು ಮೂರನೇ ದೇಶದಲ್ಲಿನ ಯೋಜನೆಯ ಭಾಗವಾಗಿ ಸರಕು ಮತ್ತು ಸೇವೆಗಳನ್ನು ಪೂರೈಸಲು ಭಾರತದ ರಫ್ತು ಮತ್ತು ಆಮದು ಬ್ಯಾಂಕ್ (ಎಕ್ಸಿಮ್ ಬ್ಯಾಂಕ್) ಮತ್ತು ಕೊರಿಯಾದ ರಫ್ತು-ಆಮದು ಬ್ಯಾಂಕ್ (ಕೆಎಕ್ಸಿಮ್) ನಡುವಿನ ಉದ್ದೇಶಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

 

 

 

ಗುವಾಹಾಟಿಯ ಡಾ. ಬಿ. ಬರೂಚಾ ಕ್ಯಾನ್ಸರ್ ಸಂಸ್ಥೆಯನ್ನು ಅಣು ಶಕ್ತಿ ಇಲಾಖೆ ವಹಿಸಿಕೊಳ್ಳಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ:

 

(i)  ಗುವಾಹಟಿಯ ಡಾ. ಬಿ. ಬರೂಚಾ ಕ್ಯಾನ್ಸರ್ ಸಂಸ್ಥೆಯನ್ನು ಅಣುಶಕ್ತಿ ಇಲಾಖೆ (ಡಿ.ಎ.ಇ.) ವಹಿಸಿಕೊಳ್ಳಲು ಮತ್ತು ಇದನ್ನು ಡಿಎಇಯ ಅನುದಾನಿತ ಸಂಸ್ಥೆಯಾದ ಟಾಟಾ ಸ್ಮಾರಕ ಕೇಂದ್ರದ ಆಡಿತಾತ್ಮಕ ನಿಯಂತ್ರಣಕ್ಕೆ ಒಳಪಡಿಸಲು;

(ii)  ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಪೂರಕ ಸ್ಥಾನಗಳಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ವರ್ಧನೆಗಾಗಿ

 

 

(14-ಜೂನ್ 2017)

 

ರೈತರಿಗೆ ಅಲ್ಪಾವಧಿ ಬೆಳೆ ಸಾಲ ನೀಡಲು ಬ್ಯಾಂಕ್ ಗಳಿಗೆ ಬಡ್ಡಿ ಸಹಾಯಧನ ನೀಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ನೇ ಸಾಲಿನಲ್ಲಿ ರೈತರಿಗೆ ಬಡ್ಡಿ ಸಹಾಯಧನ ಯೋಜನೆ (ಐ.ಎಸ್.ಎಸ್.)ಗೆ ತನ್ನ ಅನುಮೋದನೆ ನೀಡಿದೆ. ಇದು ರೈತರಿಗೆ ಒಂದು ವರ್ಷದ ಅವಧಿಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಅಲ್ಪಾವಧಿ ಬೆಳೆ ಸಾಲವನ್ನು ಪಡೆಯಲು ನೆರವಾಗುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ 20,339 ಕೋಟಿ ರೂಪಾಯಿಗಳ ಹಣವನ್ನು ತೆಗೆದಿರಿಸಿದೆ.

 

 

 

ಭಾರತ ಮತ್ತು ಪ್ಯಾಲಸ್ಟೀನ್ ನಡುವೆ ಕೃಷಿ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೃಷಿ ಸಹಕಾರಕ್ಕಾಗಿ ಪ್ಯಾಲಸ್ತೀನ್ ನ ಕೃಷಿ ಸಚಿವಾಲಯ ಹಾಗೂ ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

ಆರ್ಥಿಕ ಪರಿಹಾರ ಮತ್ತು ಠೇವಣಿ ವಿಮೆ ವಿಧೇಯಕ 2017ರ ಮಂಡನೆಯ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರ್ಥಿಕ ಪರಿಹಾರ (ಫೈನಾನ್ಷಿಯಲ್ ರೆಸಲ್ಯೂಷನ್) ಮತ್ತು ಠೇವಣಿ ವಿಮೆ ವಿಧೇಯಕ 2017ರ ಮಂಡನೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ವಿಧೇಯಕವು ನಿರ್ದಿಷ್ಟ ಹಣಕಾಸು ವಲಯದ ಕಾಯಗಳಿಗೆ ಬ್ಯಾಂಕ್, ವಿಮಾ ಕಂಪನಿಗಳು ಮತ್ತು ಹಣಕಾಸು ವಲಯದ ಕಾಯಗಳಲ್ಲಿ ದಿವಾಳಿ ಸ್ಥಿತಿಯನ್ನು ಎದುರಿಸಲು ಸಮಗ್ರ ಪರಿಹಾರದ ಚೌಕಟ್ಟನ್ನು ಒದಗಿಸುತ್ತದೆ.

 

ಯುವಜನರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಆರ್ಮೆನಿಯಾ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಅರ್ಮೇನಿಯಾ ನಡುವೆ ಯುವಜನರ ವಿಚಾರಕ್ಕೆ ಸಂಬಂಧಿಸಿದ ಸಹಕಾರ ಕುರಿತಂತೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

 

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿನ ಸಹಕಾರದ ಉತ್ತೇಜನಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ (ಐಟಿ ಮತ್ತು ಇ) ಸಹಕಾರದ ಉತ್ತೇಜನಕ್ಕಾಗಿ ಈಗಾಗಲೇ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ ಕುರಿತಂತೆ ವಿವರಿಸಲಾಯಿತು.

 

 (22-ಜೂನ್ 2017)

 

ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಸಾಮಾಜಿಕ ಭದ್ರತೆ ಒಪ್ಪಂದದ ತಿದ್ದುಪಡಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ದ್ವಿಪಕ್ಷೀಯ ಸಾಮಾಜಿಕ ಭದ್ರತಾ ಒಪ್ಪಂದದಲ್ಲಿ (ಎಸ್ಎಸ್ಎ) "ನಿವಾಸಿ ದೇಶ" ಎಂಬ ತಾತ್ವಿಕ ಸೇರ್ಪಡೆ ಕುರಿತ ಎಸ್ಎಸ್ಎ ತಿದ್ದುಪಡಿಗೆ ತನ್ನ ಅನುಮೋದನೆ ನೀಡಿದೆ.

 

 

ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯ ಹಾಗೂ ನೆದರ್ಲ್ಯಾಂಡ್ಸ್ ಸಾಮ್ರಾಜ್ಯದ ಪರಿಸರ ಮತ್ತು ಮೂಲಸೌಕರ್ಯ ಸಚಿವಾಲಯದೊಂದಿಗೆ ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.  

 

 

ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆ ಕ್ಷೇತ್ರದ ಸಹಕಾರಕ್ಕಾಗಿ ಪೋರ್ಚುಗಲ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಮತ್ತು ಪೋರ್ಚುಗಲ್ ಗಣರಾಜ್ಯದ ಪ್ರೆಸಿಡೆನ್ಸಿ ಮತ್ತು ಆಡಳಿತ ಆಧುನೀಕರಣ ಸಚಿವಾಲಯದ ನಡುವೆ ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆ ಕುರಿತ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಭಾರತೀಯ ನೌಕಾ ಸಾಮಗ್ರಿ ನಿರ್ವಹಣೆ ಸೇವೆ (ಐ.ಎನ್.ಎಂ.ಎಂ.ಎಸ್.)ಯನ್ನು ಸಂಘಟಿತ ಗುಂಪು  ಎಂಜಿನಿಯರಿಂಗ್ ಸೇವೆಯಾಗಿ ನಿರ್ಮಾಣ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತೀಯ ನೌಕಾ ಸಾಮಗ್ರಿ ನಿರ್ವಹಣೆ ಸೇವೆ (ಐ.ಎನ್.ಎಂ.ಎಂ.ಎಸ್.) ಹೆಸರಿನಲ್ಲಿ ಸಂಘಟಿತ ‘ಎ’ ಗುಂಪಿನ ಎಂಜಿನಿಯರಿಂಗ್ ಸೇವೆಗಳ ನಿರ್ಮಾಣ ಮತ್ತು ಹಾಲಿ ಭಾರತೀಯ ನೌಕಾಪಡೆಯ ನೌಕಾ ಸಂಗ್ರಹಾಗಾರದ ಅಧಿಕಾರಿಗಳ  ‘ಎ’ ಗುಂಪಿನ ಕೇಡರ್ ಸ್ವರೂಪ ಬದಲಾವಣೆಗೆ ತನ್ನ ಅನುಮೋದನೆ ನೀಡಿದೆ.

 

ಜವಳಿ, ವಸ್ತ್ರ ಮತ್ತು ಫ್ಯಾಷನ್ ವಲಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಜವಳಿ, ವಸ್ತ್ರ ಮತ್ತು ಪ್ಯಾಷನ್ ವಲಯದಲ್ಲಿನ ಸಹಕಾರಕ್ಕಾಗಿ ಜವಳಿ ಸಚಿವಾಲಯ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಅನುಮೋದನೆ ನೀಡಿದೆ.

 

 

ಭಾರತ ಮತ್ತು ಆರ್ಮೇನಿಯಾ ನಡುವೆ ಬಾಹ್ಯಾಕಾಶದ ಶಾಂತಿಯುತ ಬಳಕೆಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಆರ್ಮೇನಿಯಾ ನಡುವಿನ ಬಾಹ್ಯಾಕಾಶದ ಶಾಂತಿಯುತ ಬಳಕೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು.

 

 

ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರಕ್ಕಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹೋಮಿಯೋಪತಿ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರಕ್ಕಾಗಿ ಭಾರತ ಗಣರಾಜ್ಯ ಸರ್ಕಾರದ ಆಯುಷ್ ಸಚಿವಾಲಯ  ಮತ್ತು ಪ್ರಜಾಪ್ರಭುತ್ವ ಸಮಾಜವಾದಿ ಗಣರಾಜ್ಯ ಶ್ರೀಲಂಕಾ ಸರ್ಕಾರದ ಆರೋಗ್ಯ, ಪೌಷ್ಟಿಕತೆ ಮತ್ತು ದೇಶೀಯ ಔಷಧ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಜಿಎಸ್ಟಿಯ ಜಾರಿ ಮಾಡಲು ಸಹಕಾರ ನೀಡಿದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರಿಗೆ ಕೃತಜ್ಞತೆ ಸಲ್ಲಿಸಿದ ಸಂಪುಟ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಜಿಎಸ್ಪಿ ಪರಿಚಯಿಸಲು ಸಹಕಾರ ನೀಡಿದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರಿಗೆ ಕೃತಜ್ಞತೆ ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸಿದೆ.

 

 (28-ಜೂನ್ 2017)

 

ಭಾರತದಲ್ಲಿ ಜಲ ಸಂರಕ್ಷಣೆಯ ರಾಷ್ಟ್ರೀಯ ಅಭಿಯಾನಕ್ಕಾಗಿ ಭಾರತ ಮತ್ತು ಇಸ್ರೇಲ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಜಲ ಸಂರಕ್ಷಣೆ ಕುರಿತ ರಾಷ್ಟ್ರೀಯ ಅಭಿಯಾನಕ್ಕಾಗಿ ಭಾರತ ಮತ್ತು ಇಸ್ರೇಲ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ಮಾತೃಭೂಮಿಯ ಸುರಕ್ಷತೆ ಸಹಕಾರಕ್ಕಾಗಿ ಭಾರತ ಮತ್ತು ಅಮೆರಿಕ ನಡುವೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾತೃಭೂಮಿಯ ಸುರಕ್ಷತೆ ಕುರಿತಂತೆ ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

(12-ಜುಲೈ 2017)

 

ವಾರಾಣಸಿಯ ರಾಷ್ಟ್ರೀಯ ಬೀಜ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಎನ್ಎಸ್ಆರ್.ಟಿ.ಸಿ)ದ ಆವರಣದಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್.ಆರ್.ಐ)ಯದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಐಎಸ್ಎಆರ್.ಸಿ) ಸ್ಥಾಪಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಾರಾಣಸಿಯ ರಾಷ್ಟ್ರೀಯ ಬೀಜ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಎನ್ಎಸ್ಆರ್.ಟಿ.ಸಿ)ದ ಆವರಣದಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್.ಆರ್.ಐ)ಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಐಎಸ್ಎಆರ್.ಸಿ) ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.

 

 

ಭಾರತ ಮತ್ತು ಪ್ಯಾಲಸ್ತೀನ್ ನಡುವೆ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪ್ಯಾಲಸ್ತೀನ್ ನಡುವೆ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ 16ರಂದು ಅಂಕಿತ ಹಾಕಲಾಗಿತ್ತು.

 

 

ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಜರ್ಮನಿಯ ನಡುವೆ ನಿರ್ದಿಷ್ಟ ಉದ್ದೇಶದ ಜಂಟಿ ಘೋಷಣೆ (ಜೆಡಿಐ)ಗೆ  ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜರ್ಮನಿಯ ನಡುವೆ ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ನಿರ್ದಿಷ್ಟ ಉದ್ದೇಶದ ಜಂಟಿ ಘೋಷಣೆ (ಜೆಡಿಐ)ಯ ಅಂಕಿತಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಜೆಡಿಐಗೆ 2017ರ ಜೂನ್ 1ರಂದು ಅಂಕಿತ ಹಾಕಲಾಗಿತ್ತು.

 

 

 

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೂಡಿಕೆಯ ಉತ್ತೇಜನ ಮತ್ತು ರಕ್ಷಣೆ ಕುರಿತ ಒಪ್ಪಂದದ ಬಗೆಗಿನ ಜಂಟಿ ವಿವರಣಾತ್ಮಕ ಟಿಪ್ಪಣಿಗಳಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹೂಡಿಕೆಯ ಉತ್ತೇಜನ ಮತ್ತು ರಕ್ಷಣೆ ಕುರಿತ ಒಪ್ಪಂದದ ವಿವರಣಾತ್ಮಕ ಟಿಪ್ಪಣಿ (ಜೆಐಎನ್)ಗಳಿಗೆ ತನ್ನ ಅನುಮೋದನೆ ನೀಡಿದೆ.

 

 

 

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ನ ವೈದ್ಯಕೀಯ ಅಧಿಕಾರಿಗಳ ನಿವೃತ್ತಿಯ ವಯಸ್ಸನ್ನು ಹೆಚ್ಚಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಗಿನ ಅಧಿಕಾರಿಗಳ ನಿವೃತ್ತಿಯ ವಯಸ್ಸನ್ನು ಹೆಚ್ಚಳಕ್ಕೆ ಸಂಬಂಧಿಸಿದಂತೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

(i) ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ನ ಸಾಮಾನ್ಯ ಸೇವೆಯ ವೈದ್ಯಾಧಿಕಾರಿಗಳಿಗೆ 60ರಿಂದ 65 ವರ್ಷಗಳು, ಮತ್ತು

(ii) ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ನ ತಜ್ಞ ವೈದ್ಯಾಧಿಕಾರಿಗಳಿಗೆ 60ರಿಂದ 65 ವರ್ಷಗಳು.

 

 

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸೈಬರ್ ಭದ್ರತೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ,  ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಸೈಬರ್ ಭದ್ರತೆ ಕುರಿತಂತೆ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್.ಟಿ.-ಇನ್) ಮತ್ತು ಬಾಂಗ್ಲಾದೇಶ ಸರ್ಕಾರದ ಕಂಪ್ಯೂಟರ್ ಘಟನೆ ಸ್ಪಂದನಾ ತಂಡ (ಬಿಜಿಡಿ ಇ-ಗೌ ಸಿಐಆರ್.ಟಿ) ಬಾಂಗ್ಲಾದೇಶದ ಅಂಚೆ, ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ  ಬಾಂಗ್ಲಾದೇಶ ಕಂಪ್ಯೂಟರ್ ಮಂಡಳಿಯೊಂದಿಗೆ ಆಗಿರುವ  ತಿಳಿವಳಿಕೆ ಒಪ್ಪಂದ (ಎಂ.ಓಯು)ದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಏಪ್ರಿಲ್ 8ರಂದು ಸಹಿ ಹಾಕಲಾಗಿತ್ತು.

 

 

ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳ ಮೂರು ಹೊಸ ಏಮ್ಸ್ ಗಳಿಗಾಗಿ ಮೂವರು ನಿರ್ದೇಶಕರುಗಳ ಹುದ್ದೆಗಳನ್ನು ಸೃಷ್ಟಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ಆಂಧ್ರಪ್ರದೇಶದ ಗುಂಟೂರು ಬಳಿಯ ಮಂಗಳಗಿರಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿನ ಮೂರು ಹೊಸ ಏಮ್ಸ್ ಗಳಿಗಾಗಿ ಮೂವರು ನಿರ್ದೇಶಕರುಗಳ ಹುದ್ದೆಗಳನ್ನು ಪರಿಷ್ಕರಣೆ –ಪೂರ್ವ ವೇತನ ಶ್ರೇಣಿ ರೂ.80,000 (ನಿಶ್ಚಿತ) {ಮತ್ತು ಎನ್.ಪಿ.ಎ. ಗರಿಷ್ಠ ಮಿತಿ 85,000}ದಂತೆ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.

 

 

 

ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಭಾರತ ಮತ್ತು ಪ್ಯಾಲಿಸ್ತೀನ್ ನಡುವಿನ ಸಹಕಾರದ ತಿಳಿವಳಿಕೆ ಒಪ್ಪಂದದ  ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಪ್ಯಾಲಿಸ್ತೀನ್ ನಡುವೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ (ಐಟಿ ಮತ್ತು ಇ) ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

 

(19-ಜುಲೈ 2017)

 

ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಚೈನ ಮತ್ತು ದಕ್ಷಿಣ ಆಫ್ರಿಕಾ ನಡುವೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಎಂ.ಓ.ಸಿ.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ ಒಕ್ಕೂಟ, ಚೈನಾ ಮತ್ತು ದಕ್ಷಿಣ ಆಫ್ರಿಕಾದ ಕಂದಾಯ ಆಡಳಿತಗಳ ನಡುವೆ ತೆರಿಗೆ ವಿಚಾರಗಳಿಗೆ ಸಂಬಂಧಿಸಿದಂತೆ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆಯ ಕೇಡರ್ ಪರಾಮರ್ಶೆ, ಐಡಿಎಎಸ್ ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆ (ಐಡಿಎಎಸ್) ಕೇಡರ್ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ. ಈ ನಿರ್ಧಾರವು 23 (ಇಪ್ಪತ್ತ ಮೂರು) ಹುದ್ದೆಗಳ ಹೆಚ್ಚಳಕ್ಕೆ ಅವಕಾಶ ಒದಗಿಸುತ್ತದೆ, 

 

 

ಬಾಹ್ಯಾಕಾಶ ತಂತ್ರಜ್ಞಾನ ಸಹಕಾರಕ್ಕಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಆಗಿರುವ ಎಂ.ಓ.ಯು ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಬಾಹ್ಯಾಕಾಶದ ಶೋಧನೆ ಮತ್ತು ಶಾಂತಿಯುತ ಉದ್ದೇಶದ ಬಳಕೆಯ ಸಹಕಾರಕ್ಕಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ 11 ಮತ್ತು 22ರಂದು ಬೆಂಗಳೂರಿನಲ್ಲಿ ಮತ್ತು ಹೇಗ್ ನಲ್ಲಿ ಅನುಕ್ರಮವಾಗಿ ಅಂಕಿತ ಹಾಕಲಾಗಿತ್ತು.

 

 

ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘ (ಐಎಐಎಸ್)ಕ್ಕೆ ಐ.ಆರ್.ಡಿ.ಎ.ಐ ಅನ್ನು ಸಹಿದಾರನಾಗಿ ಸೇರಿಸಿಕೊಳ್ಳಲು, ಬಹುಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಎಂಓಯು)ಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಮಾ ಮೇಲ್ವಿಚಾರಕರ ಅಂತಾರಾಷ್ಟ್ರೀಯ ಸಂಘ (ಐಎಐಎಸ್)ಕ್ಕೆ ಐ.ಆರ್.ಡಿ.ಎ.ಐ ಅನ್ನು ಸಿಗ್ನೇಟರಿಯಾಗಿ ಸೇರಿಸಿಕೊಳ್ಳಲು,ಬಹುಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಎಂಓಯು)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

2017-18ರಲ್ಲಿ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಐಐ)ದಿಂದ ಭಾರತ ಸರ್ಕಾರದ ಬಾಂಡ್  ಮೂಲಕ  660 ಕೋಟಿ ರೂ. ಹೆಚ್ಚುವರಿ ಬಜೆಟ್ ಸಂಪನ್ಮೂಲ (ಇಬಿಆರ್) ಎತ್ತುವಳಿ ಅನುಮತಿಯ ಪುನರುಜ್ಜೀವನಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ರಲ್ಲಿ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಐಐ)ದಿಂದ ಭಾರತ ಸರ್ಕಾರದ ಬಾಂಡ್  ಮೂಲಕ  660 ಕೋಟಿ ರೂ.ಹೆಚ್ಚುವರಿ ಬಜೆಟ್ ಸಂಪನ್ಮೂಲ (ಇಬಿಆರ್) ಎತ್ತುವಳಿ ಅನುಮತಿಯ ಪುನರುಜ್ಜೀವನಕ್ಕೆ ತನ್ನ ಅನುಮೋದನೆ ನೀಡಿದೆ.

 

 

ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 2017ಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಸುಗ್ರೀವಾಜ್ಞೆ 2017ರ ಘೋಷಣೆ ಮಾಡಲು ಮತ್ತು ಸುಗ್ರೀವಾಜ್ಞೆಯನ್ನು ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ 2017ರ ಮೂಲಕ ಬದಲಾಯಿಸಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 2017ಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಸುಗ್ರೀವಾಜ್ಞೆ 2017ರ ಘೋಷಣೆ ಮಾಡಲು ಮತ್ತು ಸುಗ್ರೀವಾಜ್ಞೆಯನ್ನು ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ 2017ರ ಮೂಲಕ ಬದಲಾಯಿಸಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

ಭಾರತೀಯ ಸಮುದಾಯ ಕಲ್ಯಾಣ ನಿಧಿಯ ಮಾರ್ಗಸೂಚಿಗಳ ಪರಿಷ್ಕರಣೆಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಸಮುದಾಯ ಕಲ್ಯಾಣ ನಿಧಿ (ಐಸಿಡಬ್ಲ್ಯುಎಫ್) ಮಾರ್ಗಸೂಚಿಗಳ ಪರಿಷ್ಕರಣೆಗೆ ತನ್ನ ಸಮ್ಮತಿ ಸೂಚಿಸಿದೆ.

 

(26-ಜುಲೈ 2017)

 

ಸಂಪುಟದಿಂದ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶ, 1954 ರ ಸಂವಿಧಾನ ತಿದ್ದುಪಡಿಗೆ ಪೂರ್ವಾನ್ವಯ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ತಿದ್ದುಪಡಿ ಆದೇಶ 2017ರ ಮೂಲಕ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶ, 1954ಕ್ಕೆ ಸಂವಿಧಾನ ತಿದ್ದುಪಡಿಗೆ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

 

ಯುವ ವ್ಯವಹಾರ ಮತ್ತು  ಕ್ರೀಡಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಪ್ಯಾಲಿಸ್ತೀನ್ ನಡುವೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಪ್ಯಾಲಿಸ್ತೀನ್ ನಡುವೆ ಯುವ ವ್ಯವಹಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ದ ಬಗ್ಗೆ ವಿವರಣೆ ನೀಡಲಾಯಿತು.

 

ಭಾರತ- ಜರ್ಮನಿ ಸುಸ್ಥಿರತೆ ಕೇಂದ್ರ ಕುರಿತಂತೆ  ಭಾರತ ಮತ್ತು ಜರ್ಮನಿ ನಡುವಿನ ಉದ್ದೇಶಿತ ಜಂಟಿ ಘೋಷಣೆಯ ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ- ಜರ್ಮನಿ ಸುಸ್ಥಿರತೆ ಕೇಂದ್ರ (ಐಜಿಸಿಎಸ್) ಕುರಿತಂತೆ  ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (ಡಿಎಸ್ಟಿ), ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆಯ ಒಕ್ಕೂಟ ಸಚಿವಾಲಯ (ಬಿಎಂಬಿಎಫ್) ನಡುವಿನ ಉದ್ದೇಶಿತ ಜಂಟಿ ಘೋಷಣೆ(ಜೆಡಿಐ)ಯ ಬಗ್ಗೆ ವಿವರಣೆ ನೀಡಲಾಯಿತು. ಬರ್ಲಿನ್ ನಲ್ಲಿ 2017ರ ಮೇ30ರಂದು ಭಾರತದ ಪ್ರಧಾನಮಂತ್ರಿ ಹಾಗೂ ಜರ್ಮನಿ ಒಕ್ಕೂಟದ ಛಾನ್ಸಲರ್ ನಡುವಿನ ನಾಲ್ಕನೇ ಅಂತರ ಸರ್ಕಾರೀಯ ಸಮಾಲೋಚನೆ (ಐಜಿಸಿ) ಸಂದರ್ಭದಲ್ಲಿ  ಜೆಡಿಐ ಪೂರ್ಣಗೊಂಡಿತ್ತು. ಈ ಜೆಡಿಐಗೆ ಭಾರತದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಡಾ. ಹರ್ಷ ವರ್ಧನ್ ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆಯ ಸಚಿವ ಪ್ರೊ. ಡಾ. ಜೋಹನ್ನಾ ವ್ಯಾಂಕಾ ಅವರು ಸಹಿ ಹಾಕಿದ್ದರು.

 

 

ಸಾವರೀನ್ ಗೋಲ್ಡ್  ಬಾಂಡ್ ಗಳ ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ನಿರೀಕ್ಷಿತ ಉದ್ದೇಶದ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಸಾವರೀನ್ ಗೋಲ್ಡ್ ಬಾಂಡ್ (ಎಸ್.ಜಿ.ಬಿ.) ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ.

 

 

(30- ಆಗಸ್ಟ್ 2017)

ಇತರ  ರಾಷ್ಟ್ರಗಳು/ಅಂತಾರಾಷ್ಟ್ರೀಯ ಸಂಸ್ಥೆಗಳ ಚುನಾವಣಾ ನಿರ್ವಹಣಾ ಪ್ರಾಧಿಕಾರಗಳೊಂದಿಗೆ ಮತ್ತು ಭಾರತದ ಚುನಾವಣಾ ಆಯೋಗದ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚುನಾವಣಾ ವ್ಯವಸ್ಥಾಪನೆ ಮತ್ತು ಆಡಳಿತ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇತರ ರಾಷ್ಟ್ರಗಳು/ಅಂತಾರಾಷ್ಟ್ರೀಯ ಸಂಸ್ಥೆಗಳ ಚುನಾವಣಾ ವ್ಯವಸ್ಥಾಪನಾ ಪ್ರಾಧಿಕಾರಗಳೊಂದಿಗೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಮಾಡಿಕೊಳ್ಳುವ ಭಾರತದ ಚುನಾವಣಾ ಆಯೋಗದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

 

ಬಗಾನ್ ನ ಭೂಕಂಪದಿಂದ ಹಾನಿಯಾದ ಪಗೋಡಗಳ   ಸಂರಕ್ಷಣೆಗೆ ಮ್ಯಾನ್ಮಾರ್ ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮ್ಯಾನ್ಮಾರ್ ನಡುವೆ ಮ್ಯಾನ್ಮಾರ್ ನ ಬಗಾನ್ ನಲ್ಲಿ ಭೂಕಂಪ-ಹಾನಿ ಪಗೋಡಗಳ ಸಂರಕ್ಷಣೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2017ರ ಸೆಪ್ಟೆಂಬರ್ 6-7ರಂದು ಮ್ಯಾನ್ಮಾರ್ ಭೇಟಿ ನೀಡುವ ವೇಳೆ ಅಂಕಿತ ಹಾಕಲಾಗುವುದು.

 

 ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳ ಪರಿಹಾರ) ಅಧ್ಯಾದೇಶ 2017 ಹೊರಡಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳ ಪರಿಹಾರ) ಕಾಯಿದೆ 2017ಕ್ಕೆ ಸೂಕ್ತ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರಡಿಸುವ ಹಣಕಾಸು ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.  

 

ಭಾರತ – ಇಸ್ರೇಲ್ ಆರ್ ಮತ್ತು ಡಿ ಹಾಗೂ ತಾಂತ್ರಿಕ ನಾವಿನ್ಯ ನಿಧಿ ಕುರಿತ ಎಂಓಯುಗೆ ಸಂಪುಟದ ಸಮ್ಮತಿ 

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇಸ್ರೇಲ್ ನಡುವೆ ಭಾರತ – ಇಸ್ರೇಲ್ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ನಾವಿನ್ಯತೆ ನಿಧಿ (ಐ4ಎಫ್) ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದವನ್ನು 2017ರ ಜುಲೈನಲ್ಲಿ ಆಖೈರುಗೊಳಿಸಲಾಗಿತ್ತು.

 

 

 

ಜೆಬು ದನಗಳ ಜೆನೊಮಿಕ್ಸ್ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಜೆಬು ದನಗಳ(ಪಶು) ಜೆನೊಮಿಕ್ಸ್ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2016ರ ಅಕ್ಟೋಬರ್ ನಲ್ಲಿ ಅಂಕಿತ ಹಾಕಲಾಗಿತ್ತು.

       

 

 ಭಾರತ ಮತ್ತು ಕೆನಡಾ ನಡುವೆ ಜಂಟಿಯಾಗಿ ಅಂಚೆ ಚೀಟಿ ಬಿಡುಗಡೆ ಕುರಿತು ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ಭಾರತ – ಕೆನಡಾ ನಡುವೆ ದೀಪಾವಳಿ ವಿಷಯದ ಮೇಲೆ ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಜಂಟಿಯಾಗಿ ಬಿಡುಗಡೆ ಮಾಡುವ ಪರಸ್ಪರ ಒಪ್ಪಂದದ ಬಗ್ಗೆ ವಿವರಿಸಲಾಯಿತು. 2017ರ ಸೆಪ್ಟೆಂಬರ್ 21ರಂದು ಈ ಜಂಟಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ಈ ಜಂಟಿ ಬಿಡುಗಡೆಗಾಗಿ ಭಾರತೀಯ ಅಂಚೆ ಇಲಾಖೆ ಮತ್ತು ಕೆನಡಾ ಅಂಚೆ ನಡುವೆ ಈಗಾಗಲೇ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

 

 

 

ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿ.ಎಸ್.ಯು.ಗಳು)ಬ್ಯಾಂಕುಗಳು, ವಿಮಾ ಸಂಸ್ಥೆಗಳಲ್ಲಿ  ಸರ್ಕಾರದ ಹುದ್ದೆಗಳೊಂದಿಗೆ ಸಮಾನವಾಗಿ ಪರಿಗಣಿಲು ಸಂಪುಟದ ಅನುಮೋದನೆ;ಇದರಿಂದಾಗಿ ಪಿಎಸ್.ಯು. ಮತ್ತು ಇತರ ಸಂಸ್ಥೆಗಳಲ್ಲಿ ಕೆಳವರ್ಗದ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳು ಒಬಿಸಿ ಮೀಸಲಾತಿಗಳ ಪ್ರಯೋಜನ ಪಡೆಯಬಹುದಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು,  ಓಬಿಸಿ ಮೀಸಲು ಸೌಲಭ್ಯ ಕೋರಲು ಅನುವಾಗುವಂತೆ ಪಿ.ಎಸ್.ಯು., ಪಿ.ಎಸ್.ಬಿ. ಇತ್ಯಾದಿಗಳಲ್ಲಿನ ಹುದ್ದೆಗಳನ್ನು ಸರ್ಕಾರದ ಹುದ್ದೆಗಳೊಂದಿಗೆ ಸಮಾನಗೊಳಿಸಲು ನಿಯಮಗಳಿಗೆ ತನ್ನ ಅನುಮೋದನೆ ನೀಡಿದೆ. ಇದರಿಂದಾಗಿ ಸುಮಾರು 24 ವರ್ಷಗಳಷ್ಟು ದೀರ್ಘ ಕಾಲದಿಂದ ಬಾಕಿ ಇದ್ದ  ಬೇಡಿಕೆ ಈಡೇರಲಿದೆ. ಇದು ಪಿ.ಎಸ್.ಯು. ಮತ್ತು ಇತರ ಸಂಸ್ಥೆಗಳಲ್ಲಿ ಕೆಳ ಹಂತದಲ್ಲಿ ಉದ್ಯೋಗ ಮಾಡುವವರು ಸರ್ಕಾರದ ಕೆಳ ಹಂತದ ಹುದ್ದೆಗಳಲ್ಲಿ ಸೇವೆ ಸಲ್ಲಿಸುವವರು ಪಡೆಯುತ್ತಿರುವ ಮೀಸಲಿಗೆ ಸಮಾನವಾಗಿ ತಮ್ಮ ಮಕ್ಕಳಿಗೂ ಓಬಿಸಿ ಮೀಸಲು ಸೌಲಭ್ಯ ಪಡೆಯುವುದನ್ನು ಖಾತ್ರಿ ಪಡಿಸುತ್ತದೆ. ಆದಾಯದ ಮಟ್ಟದ ಆಧಾರದ ಮೇಲಿನ ತಪ್ಪು ವ್ಯಾಖ್ಯಾನದಿಂದಾಗಿ, ಹುದ್ದೆಗಳ ಸಮಾನತೆಯಿಲ್ಲದ ಹಿನ್ನೆಲೆಯಲ್ಲಿ ಅಂಥ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳು ಓಬಿಸಿ ವರ್ಗದಲ್ಲಿನ ಮೀಸಲು ಹುದ್ದೆಗಳನ್ನು ಪಡೆಯುವುದನ್ನು ಮತ್ತು ನಿಜವಾದ ಕೆನೆಪದರರಹಿತ ಅಭ್ಯರ್ಥಿಗಳು ದುರ್ಲಾಭ ಪಡೆಯುವುದನ್ನು  ತಡೆಯುತ್ತದೆ

 

 

 (23-August 2017)

 

 

ಪರ್ಯಾಯ ವ್ಯವಸ್ಥೆ (ಎ.ಎಂ) ಮೂಲಕ ವಿಲೀನಗೊಳ್ಳಲು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ತಾತ್ವಿಕ  ಸಮ್ಮತಿ ನೀಡಿದ ಸಂಪುಟ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಪರ್ಯಾಯ ವ್ಯವಸ್ಥೆ (ಎ.ಎಂ.) ಮೂಲಕ ವಿಲೀನವಾಗಲು ತನ್ನ ತಾತ್ವಿಕ ಅನುಮೋದನೆ ನೀಡಿದೆ. ಈ ನಿರ್ಧಾರವು, ಸದೃಢವಾದ ಮತ್ತು ಸ್ಪರ್ಧಾತ್ಮಕವಾದ ಬ್ಯಾಂಕುಗಳನ್ನು ರೂಪಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅವಕಾಶ ಕಲ್ಪಿಸಲಿದೆ.

 

 

ದೆಹಲಿಯಲ್ಲಿ ರಾಜ್ಯದ ಅತಿಥಿಗೃಹ ನಿರ್ಮಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ಭೂಮಿ ಮಂಜೂರು ಮಾಡಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವದೆಹಲಿಯ ಚಾಣಕ್ಯಪುರಿಯ ಡಾ.ರಾಧಾಕೃಷ್ಣನ್ ಮಾರ್ಗದೊಂದಿಗೆ ಹೊಂದಿಕೊಂಡ ಜೀಸಸ್ ಮತ್ತು ಮೇರಿ ಮಾರ್ಗದಲ್ಲಿನ ಟಿ – ಜಂಕ್ಷನ್ ನಲ್ಲಿ ನಿವೇಶನ ಸಂಖ್ಯೆ 29-ಸಿ ಮತ್ತು 29-ಡಿಯಲ್ಲಿ  5882.96 ಚದರ ಮೀಟರ್ ಗಳ ಅಥವಾ 1.478 ಎಕರೆ ಭೂಮಿಯನ್ನು  ಹಾಲಿ ಇರುವ ದರ ಹಾಗೂ ಕೆಳಕಂಡ ಷರತ್ತುಗಳೊಂದಿಗೆ ಮಧ್ಯಪ್ರದೇಶ ಸರ್ಕಾರಕ್ಕೆ ದೆಹಲಿಯಲ್ಲಿ ತನ್ನ ರಾಜ್ಯದ ಅತಿಥಿಗೃಹ ನಿರ್ಮಾಣಕ್ಕಾಗಿ ಮಂಜೂರು ಮಾಡಲು ತನ್ನ ಅನುಮೋದನೆ ನೀಡಿದೆ.

(i)                ಮಧ್ಯಪ್ರದೇಶ ಸರ್ಕಾರವು ತನಗೆ ಮಂಜೂರಾಗಿರುವ ನಿವೇಶನದಲ್ಲಿ ರಾಜ್ಯದ ಅತಿಥಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಂಡ ತರುವಾಯ ನವದೆಹಲಿಯ, ಚಾಣಕ್ಯಪುರಿಯ, ಗೋಪಿನಾಥ್ ಬಾರ್ದೋಲಯ್ ಮಾರ್ಗ್ ದ 2ನೇ ನಂಬರ್ ನಲ್ಲಿರುವ 0.89 ಎಕರೆ ಜಮೀನನ್ನು ಎಲ್ ಮತ್ತು ಡಿಓ/ಎಂಓಎಚ್.ಯು.ಎ. ವಶಕ್ಕೆ ನೀಡಲಿದೆ.

(ii)             ಮಧ್ಯಪ್ರದೇಶ ಸರ್ಕಾರವು ಎರಡೂ ಜಮೀನು ಒಂದೇ ಭೂದರದ ವಲಯದಲ್ಲಿರುವ ಕಾರಣ, 0.59 ಎಕರೆ ಭೂ ಪ್ರದೇಶದ ವ್ಯತ್ಯಾಸದ ಮೊತ್ತವನ್ನು ಹಾಲಿ ಇರುವ ದರದಂತೆ ಪಾವತಿ ಮಾಡಲಿದೆ.

(iii)           ಮಧ್ಯಪ್ರದೇಶ ಸರ್ಕಾರವು ಹಾಲಿ ಸ್ವಾಧಿನದಲ್ಲಿರುವ 0.89 ಎಕರೆ ಜಮೀನನ್ನು ಸರ್ಕಾರಕ್ಕೆ ಮರಳಿಸುವವರೆಗೆ ವಸತಿ ವೆಚ್ಚವನ್ನು ಹಾಲಿ ದರದಂತೆ ಎಲ್ ಮತ್ತು ಡಿಓ/ಎಂಓಎಚ್.ಯು.ಎಗೆ ಪಾವತಿ ಮಾಡಲಿದೆ.

 

 

ದಹಿಸಾರ್ ನ ಆರ್.ಆರ್. ನಿಲ್ದಾಣದ 40 ಎಕರೆ ಎ.ಎ.ಐ. ಭೂಮಿಯನ್ನು  ಎಂ.ಎಂ.ಆರ್.ಡಿ.ಎ.ಗೆ ತನ್ನ ಮೆಟ್ರೋ ಶೆಡ್ ಗಾಗಿ ರಾಜ್ಯ ಸರ್ಕಾರಕ್ಕೆ ಸೇರಿದ ಮುಂಬೈನ ಗೋರೈನ 40 ಎಕರೆ ಭೂಮಿಯೊಂದಿಗೆ ವಿನಿಮಯದೊಂದಿಗೆ ವರ್ಗಾವಣೆ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮುಂಬೈ ಬೃಹತ್ ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ.)ನ ಮೆಟ್ರೋ ಶೆಡ್ ಗಾಗಿ, ರಾಜ್ಯ ಸರ್ಕಾರಕ್ಕೆ ಸೇರಿದ ಮುಂಬೈನ ಗೋರೈನಲ್ಲಿನ 40 ಎಕರೆ ಭೂಮಿಯ ವಿನಿಮಯದೊಂದಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ಕ್ಕೆ ಸೇರಿದ ದಹಿಸಾರ್, ಆರ್.ಆರ್. ನಿಲ್ದಾಣದ ಭೂಮಿಯನ್ನು ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಭೂಮಿಯ ವಹಿವಾಟಿನಿಂದ ಎಂ.ಎಂ.ಆರ್.ಡಿ.ಎ.ಗೆ ಮುಂಬೈನಲ್ಲಿ ಮೆಟ್ರೋ ರೈಲು ಯೋಜನೆ ಪೂರ್ಣಗೊಳಿಸಲು ಅವಕಾಶ ನೀಡಲಿದೆ.

 

 

 

ಮಾದಕ ದ್ರವ್ಯಗಳ ಕುರಿತ ಜನರ ಅಪೇಕ್ಷೆ ತಗ್ಗಿಸುವುದು ಮತ್ತು  ಅಮಲೇರಿಸುವ ವಸ್ತುಗಳ ಅಕ್ರಮ ಸಾಗಣೆ ತಡೆ ಹಾಗೂ ಪೂರ್ವಗಾಮಿ ರಾಸಾಯನಿಕಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾದಕ ದ್ರವ್ಯಗಳ ಕುರಿತ ಜನರ ಅಪೇಕ್ಷೆ ತಗ್ಗಿಸುವುದು ಮತ್ತು ನಶೆ ತರಿಸುವ ವಸ್ತುಗಳ ಅಕ್ರಮ ಸಾಗಣೆ ತಡೆ ಹಾಗೂ ಪೂರ್ವಗಾಮಿ ರಾಸಾಯನಿಕಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ  ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಭಾರತ-ನೇಪಾಳ ಗಡಿಯಲ್ಲಿ ಮೆಚಿ ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲು ಅನುಷ್ಠಾನ ವ್ಯವಸ್ಥೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ – ನೇಪಾಳ ಗಡಿಯಲ್ಲಿ ಮೇಚಿ ನದಿಯ ಮೇಲೆ ನೂತನ ಸೇತುವೆ ನಿರ್ಮಿಸುವ ಸಲುವಾಗಿ ವೆಚ್ಚ ಹಂಚಿಕೆ, ಕಾಲಮಿತಿ ಮತ್ತು ಸುರಕ್ಷತಾ ವಿಷಯಗಳ ಕುರಿತಂತೆ ಅನುಷ್ಠಾನ ವ್ಯವಸ್ಥೆ ಸಿದ್ಧಪಡಿಸಲು ಭಾರತ ಮತ್ತು ನೇಪಾಳ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ.

 

 

 

ಓಬಿಸಿಗಳ ಒಳಗೆ ಉಪ-ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ಆಯೋಗ ಸ್ಥಾಪಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ (ಓಬಿಸಿಗಳ)ಲ್ಲಿನ ಉಪ –ವರ್ಗೀಕರಣ ವಿಚಾರದ ಪರಿಶೀಲನೆಗಾಗಿ ಸಂವಿಧಾನದ ವಿಧಿ 340ರ ಅಡಿಯಲ್ಲಿ ಆಯೋಗವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

 

(16-ಆಗಸ್ಟ್ 2017)

 

 

ದೀರ್ಘಕಾಲೀನ ನೀರಾವರಿ ನಿಧಿಗಾಗಿ 2017-18ನೇ ವರ್ಷದ ಅವಧಿಯಲ್ಲಿ 9020 ಕೋಟಿ ರೂಪಾಯಿಗಳವರೆಗೆ ಹೆಚ್ಚುವರಿ ಆಯವ್ಯಯ ಸಂಪನ್ಮೂಲ ಹೆಚ್ಚಳಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಿ.ಎಂ.ಕೆ.ಎಸ್.ವೈ. ಅಡಿಯಲ್ಲಿ ಅಚ್ಚುಕಟ್ಟು ಪ್ರದೇಶದ ಅಚ್ಚುಕಟ್ಟು ಅಭಿವೃದ್ಧಿ (ಸಿ.ಎ.ಡಿ.) ಸೇರಿದಂತೆ ಹಾಲಿ ಪ್ರಗತಿಯಲ್ಲಿರುವ 99 ಆದ್ಯತೆಯ ನೀರಾವರಿ ಯೋಜನೆಗಳ ತ್ವರಿತ ನೀರಾವರಿ ಸೌಲಭ್ಯ ಕಾರ್ಯಕ್ರಮ (ಎಐಬಿಪಿ) ಕಾಮಗಾರಿಗಳಿಗೆ ನೀಡುವ ಸಾಲಕ್ಕೆ ವಾರ್ಷಿಕ ಶೇ.6ರ ಬಡ್ಡಿ ದರದ ಖಾತ್ರಿಪಡಿಸಲು 2017-18ನೇ ಸಾಲಿನ ಅಗತ್ಯಗಳಿಗೆ ಅನುಗುಣವಾಗಿ 9020 ಕೋಟಿ ರೂಪಾಯಿಗಳವರೆಗೆ ಹೆಚ್ಚುವರಿ ಆಯವ್ಯಯ ಸಂಪನ್ಮೂಲ ಹೆಚ್ಚಳಕ್ಕೆ ನಬಾರ್ಡ್ ಮೂಲಕ ಬಾಂಡ್ ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ.

 

 

ಸಶಸ್ತ್ರ ಪಡೆಗಳ ಕೇಂದ್ರ ಕಚೇರಿಯ ನಾಗರಿಕ ಸೇವೆಯಲ್ಲಿ ಪ್ರಧಾನ ನಿರ್ದೇಶಕರ 7 ಹುದ್ದೆ ಮತ್ತು ನಿರ್ದೇಶಕರ 36 ಹುದ್ದೆಗಳನ್ನು ನಿಯಮಿತವಾದ ಆಧಾರದಲ್ಲಿ ಸೃಷ್ಟಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸಚಿವಾಲಯದ ಸಶಸ್ತ್ರ ಪಡೆಗಳ ಕೇಂದ್ರ ಕಚೇರಿಯ (ಎಎಫ್.ಎಚ್.ಕ್ಯು)ನಾಗರಿಕ ಸೇವೆಯ ಪುನಾರಚನೆ ಅಂಗವಾಗಿ ಪ್ರಧಾನ ನಿರ್ದೇಶಕರ 7 ಹುದ್ದೆ ಮತ್ತು ನಿರ್ದೇಶಕರ 36ಹುದ್ದೆಗಳನ್ನು ನಿಯಮಿತವಾದ ಆಧಾರದಲ್ಲಿ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.

ಉತ್ತರ ಕೋಯೆಲ್ ಅಣೆಕಟ್ಟೆ ಯೋಜನೆಯ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾರ್ಖಂಡ್ ಮತ್ತು ಬಿಹಾರದ ಉತ್ತರ ಕೋಯೆಲ್ ಅಣೆಕಟ್ಟೆ ಯೋಜನೆಯ ಉಳಿಕೆ ಕಾಮಗಾರಿಯನ್ನು ಯೋಜನೆ ಆರಂಭವಾದ ನಂತರದ ಮೂರು ಹಣಕಾಸು ವರ್ಷಗಳಲ್ಲಿ ಭರಿಸಲಾಗುವ  ಅಂದಾಜು 1622.27 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲು ತನ್ನ ಅನುಮೋದನೆ ನೀಡಿದೆ.

 

 

ಭಾರತ ಮತ್ತು ಸ್ವೀಡನ್ ನಡುವೆ ಐಪಿಆರ್  ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಸಮ್ಮತಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸ್ವೀಡನ್ ನಡುವೆ ಬೌದ್ಧಿಕ ಆಸ್ತಿ (ಐಪಿಆರ್) ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. 

 

 

ಹಣಕಾಸು ಕಾಯಿದೆ 2007ರ ಸೆಕ್ಷನ್ 136ರ ಅಡಿಯಲ್ಲಿ ವಿಧಿಸಲಾಗುವ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಉಪ ಕರದಿಂದ ಬರುವ ಹಣದಿಂದ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಕೈತಪ್ಪದ ಏಕೈಕ ಕಾಪು ನಿಧಿ ರಚನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾರ್ವಜನಿಕ ಲೆಕ್ಕಪತ್ರ ಇಲಾಖೆಯಲ್ಲಿನ ಮಾಧ್ಯಮಿಕ ಮತ್ತು ಉಚ್ಚತರ್ ಶಿಕ್ಷಣ ಕೋಶ (ಎಂ.ಯು.ಎಸ್.ಕೆ.) ಎಂದು ಕರೆಯಲಾಗುವ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಕೈತಪ್ಪದ ಏಕೈಕ ಕಾಪು ನಿಧಿ ರಚನೆಗೆ ಮತ್ತು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಉಪ ಕರವನ್ನು ಅದಕ್ಕೆ ಜಮೆ ಮಾಡಲು ತನ್ನ ಅನುಮೋದನೆ ನೀಡಿದೆ.

 

 

ಆಂಧ್ರಪ್ರದೇಶದ ಎನ್.ಐ.ಟಿಯಲ್ಲಿ ಒಂದು ನಿರ್ದೇಶಕರ ಹುದ್ದೆ ಮತ್ತು ಮೂರು ಬೋಧಕೇತರ ಹುದ್ದೆ ಸೃಷ್ಟಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆಂಧ್ರಪ್ರದೇಶದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್.ಐ.ಟಿ.)ಯಲ್ಲಿ ಮೂಲ ವೇತನ ರೂ. 75,000/- + 5000 ರೂ. ವಿಶೇಷ ಭತ್ಯೆ ಒಳಗೊಂಡ ಒಂದು ನಿರ್ದೇಶಕರ ಹುದ್ದೆ ಮತ್ತು ಮೂರು ಬೋಧಕೇತರ ಹುದ್ದೆ (ರಿಜಿಸ್ಟ್ರಾರ್, ಗ್ರಂಥಪಾಲಕ ಮತ್ತು ವಿದ್ಯಾರ್ಥಿ ಚಟುವಟಿಕೆ ಮತ್ತು ಕ್ರೀಡೆ (ಎಸ್.ಎ.ಎಸ್.) ಪ್ರಧಾನ ಅಧಿಕಾರಿ ) ಹುದ್ದೆಯನ್ನು 10,000 ರೂ. ಗ್ರೇಡ್ ಪೇಯೊಂದಿಗೆ ರಚಿಸಲು ತನ್ನ ಅನುಮೋದನೆ ನೀಡಿದೆ.

 

 

ಸಮಗ್ರ ನಗರಾಭಿವೃದ್ಧಿ, ವೆಚ್ಚ ಕಡಿತ ಮತ್ತು ಬಹು ಮಾದರಿ ಸಮನ್ವಯತೆಯ ಮೇಲೆ ಗಮನವಿಟ್ಟು, ನೂತನ ಮೆಟ್ರೋ ರೈಲು ನೀತಿಗೆ ಸಂಪುಟದ ಅನುಮೋದನೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೊಡ್ಡ ಸಂಖ್ಯೆಯ ನಗರಗಳಲ್ಲಿ ಹೆಚ್ಚುತ್ತಿರುವ ಮೆಟ್ರೋ ರೈಲು ಕನಸನ್ನು  ನನಸು ಮಾಡಲು ನೂತನ ಮೆಟ್ರೋ ರೈಲು ನೀತಿಗೆ ತನ್ನ ಅನುಮೋದನೆ ನೀಡಿದೆ.

 

(02-ಆಗಸ್ಟ್ 2017)

 

 ನವೀಕರಿಸಬಹುದಾದ ಇಂಧನದಲ್ಲಿ ಭಾರತ –ಸ್ಪೇನ್ ಸಹಕಾರಕ್ಕಾಗಿ ಭಾರತ ಮತ್ತು ಸ್ಪೇನ್ ನಡುವೆ ಆಗಿರುವ ಎಂ.ಓ.ಯು. ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಸ್ಪೇನ್ ನಡುವೆ ಭಾರತ-ಸ್ಪೇನ್ ನವೀಕರಿಸಬಹುದಾದ ಇಂಧನ ಸಹಕಾರ ಕುರಿತಂತೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ 30ರಂದು ಸ್ಪೇನ್ ನಲ್ಲಿ ಸಹಿ ಹಾಕಲಾಗಿತ್ತು.

 

 

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗಾಗಿ ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಆಗಿರುವ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ವಿವಿಧ ಬ್ರಿಕ್ಸ್ ರಾಷ್ಟ್ರಗಳ ನಡುವೆ ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ (ಬ್ರಿಕ್ಸ್ –ಎ.ಆರ್.ಪಿ.) ಸ್ಥಾಪನೆಗಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.


 

 

 

 

12-ಸೆಪ್ಟೆಂಬರ್ 2017

 

01.07.2017 ರಿಂದ ಅನ್ವಯವಾಗುವಂತೆ ಹೆಚ್ಚುವರಿಯಾಗಿ ಶೇ..1ರಷ್ಟು ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಪಿಂಚಣಿದಾರರಿಗೆ   ಬಿಡುಗಡೆ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹೆಚ್ಚುವರಿಯಾಗಿ ಶೇ.1ರಷ್ಟು ತುಟ್ಟಿಭತ್ಯೆ(ಡಿಎ)ಯನ್ನು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ತುಟ್ಟಿಭತ್ಯೆ ಪರಿಹಾರ(ಡಿಆರ್)ವನ್ನು ಪಿಂಚಣಿದಾರರಿಗೆ   ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ. ಇದು 01.07.2017 ರಿಂದ ಅನ್ವಯವಾಗುತ್ತದೆ.

 

 

ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಾಕ್ಕೋ ನಡುವೆ ಎಂ.ಓ.ಯು.ಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಭಾರತ ಸಂಚಾರ ನಿಗಮ ನಿಯಮಿತದ ಮೊಬೈಲ್ ಗೋಪುರಗಳ ಸ್ವತ್ತುಗಳನ್ನು ಬಿಎಸ್ಎನ್ಎಲ್ ಒಡೆತನದ ಪ್ರತ್ಯೇಕ ಕಂಪೆನಿಯಾಗಿ   ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಭಾರತ ಸಂಚಾರ ನಿಗಮ ನಿಯಮಿತದ ಮೊಬೈಲ್ ಗೋಪುರಗಳ ಸ್ವತ್ತುಗಳನ್ನು ಬಿಎಸ್ಎನ್ಎಲ್ ಒಡೆತನದ ಪ್ರತ್ಯೇಕ ಕಂಪೆನಿಯಾಗಿ  ಮಾಡಲು ತನ್ನ ಅನುಮೋದನೆ ನೀಡಿದೆ.

 

 

ರೇಷ್ಮೆಹುಳು ಮತ್ತು ರೇಷ್ಮೆ ಕೈಗಾರಿಕೆ ಕ್ಷೇತ್ರದಲ್ಲಿನ ಸಹಯೋಗದ ಸಂಶೋಧನೆಗಾಗಿ ಭಾರತ ಮತ್ತು ಜಪಾನ್ ನಡುವೆ ಆಗಿರುವ ಎಂ.ಓ.ಯು. ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ರೇಷ್ಮೆಹುಳು ಮತ್ತು ರೇಷ್ಮೆ ಕೈಗಾರಿಕೆ ಕ್ಷೇತ್ರದಲ್ಲಿನ ಸಹಯೋಗದ ಸಂಶೋಧನೆಗಾಗಿ ಭಾರತದ ಕೇಂದ್ರೀಯ ರೇಷ್ಮೆ ಮಂಡಳಿ (ಸಿ.ಎಸ್.ಬಿ.) ಮತ್ತು ಜಪಾನ್ ನ ಕೃಷಿಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎ.ಎಸ್.) ನಡುವೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ದ ಬಗ್ಗೆ ವಿವರಣೆ ನೀಡಲಾಯಿತು.

 

 

ಸಂಸತ್ತಿನಲ್ಲಿ  ಗ್ಯಾಚ್ಯುಯಿಟಿ ಪಾವತಿ (ತಿದ್ದುಪಡಿ) ಮಸೂದೆ 2017ನ್ನು ಮಂಡಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಗ್ರಾಚ್ಯುಯಿಟಿ ಪಾವತಿ (ತಿದ್ದುಪಡಿ) ವಿಧೇಯಕ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.

 

 

 

(20- ಸೆಪ್ಟೆಂಬರ್ 2017)

 

ಪರಿಷ್ಕೃತ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18 ರಿಂದ 2019-20ರ ಅವಧಿಗಾಗಿ 1,756ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಿಷ್ಕೃತ ಖೇಲೋ ಇಂಡಿಯಾ (ಆಟವಾಡು ಭಾರತ) ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ವಿಶಿಷ್ಠ ಕ್ಷಣವಾಗಿದ್ದು, ಈ ಕಾರ್ಯಕ್ರಮವು ವೈಯಕ್ತಿಕ ವಿಕಾಸ, ಸಮುದಾಯ ಅಭಿವೃದ್ದಿ,ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರದ ಪ್ರಗತಿಗೆ  ಕ್ರೀಡೆಯನ್ನು ಒಂದು ಪ್ರಧಾನ ಸಾಧನವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.

 

 

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಗಿರುವ ಪ್ರಗತಿ ಮತ್ತು  ಸಬಲೀಕರಣ ಕಾರ್ಯಕ್ರಮ ಸಮಿತಿ ಮತ್ತು ಎನ್ಎಚ್ಎಂನ  ಅಭಿಯಾನದ ಚುಕ್ಕಾಣಿ ಗುಂಪಿನ ನಿರ್ಧಾರಗಳ ಕುರಿತು ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.)ದ ಪ್ರಗತಿಯ ಕುರಿತು ವಿವರಣೆ ನೀಡಲಾಯಿತು. ಸಂಪುಟಕ್ಕೆ ಸಬಲೀಕರಣ ಕಾರ್ಯಕ್ರಮ ಸಮಿತಿ (ಇಪಿಸಿ) ಮತ್ತು ಎನ್ಎಚ್ಎಂನ  ಅಭಿಯಾನದ ಚುಕ್ಕಾಣಿ ಗುಂಪಿನ (ಎಂ.ಎಸ್.ಜಿ.) ನಿರ್ಧಾರಗಳ ಬಗ್ಗೆಯೂ ತಿಳಿಸಲಾಯಿತು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಆರ್.ಎಚ್.ಎಂ.) ಅನ್ನು 2005ರ ಏಪ್ರಿಲ್ ನಲ್ಲಿ ಆರಂಭಿಸಲಾಗಿತ್ತು ಮತ್ತು ಅದನ್ನು 2013ರಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್.ಯು.ಎಚ್.ಎಂ.) ಆರಂಭದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ವಾಗಿ ಪರಿವರ್ತಿಸಲಾಗಿತ್ತು. ಆ ಬಳಿಕ ಎನ್.ಆರ್.ಎಚ್.ಎಂ. ಮತ್ತು ಎನ್.ಯು.ಎಚ್.ಎಂ. ಎರಡೂ ಎನ್.ಎಚ್.ಎಂ. ಅಡಿಯಲ್ಲಿ ಎರಡು ಉಪ ಅಭಿಯಾನಗಳಾಗಿ ಬದಲಾದವು.

 

 

ಭಾರತ ಸರ್ಕಾರದ ಮುದ್ರಣಾಲಯ (ಜಿಐಪಿಗಳು)ಗಳ ವಿಲೀನ/ತರ್ಕಬದ್ಧೀಕರಣ ಮತ್ತು ಅದರ ಆಧುನೀಕರಣಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 17 ಭಾರತ ಸರ್ಕಾರದ ಮುದ್ರಣಾಲಯ (ಜಿ.ಐ.ಪಿ.ಗಳ)ಗಳು/ಘಟಕಗಳನ್ನು ರಾಷ್ಟ್ರಪತಿಭವನ, ಮಿಂಟೋ ರಸ್ತೆ ಮತ್ತು ಮಾಯಾಪುರಿ, ನವದೆಹಲಿ; ನಾಸಿಕ್ ಮಹಾರಾಷ್ಟ್ರ ಮತ್ತು ದೇವಸ್ಥಾನ ರಸ್ತೆ, ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿನ 5 ಭಾರತ ಸರ್ಕಾರದ ಮುದ್ರಣಾಲಯಗಳಾಗಿ  ವಿಲೀನ/ತರ್ಕಬದ್ಧೀಕರಣ ಮತ್ತು ಆಧುನೀಕರಣಗೊಳಿಸಲು ತನ್ನ ಅನುಮೋದನೆ ನೀಡಿದೆ.

 

 

ದಂತ ವೈದ್ಯರ (ತಿದ್ದುಪಡಿ) ವಿಧೇಯಕ 2017 ಮಂಡನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದಂತವೈದ್ಯರ ಕಾಯಿದೆ 1948 (1948ರ 16)ಯ ತಿದ್ದುಪಡಿಗೆ ಶಾಸಕಾಂಗ ಇಲಾಖೆ ಅಗತ್ಯವೆಂದು ಪರಿಗಣಿಸುವ ಕರಡು  ಮಾರ್ಪಾಡು ಅಥವಾ ಪರಿಣಾಮಕಾರಿ ಸ್ವರೂಪದ ತಿದ್ದುಪಡಿಗಳೊಂದಿಗೆ ದಂತವೈದ್ಯ (ತಿದ್ದುಪಡಿ) ಮಸೂದೆ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.  ಈ ತಿದ್ದುಪಡಿಯು ಅಗತ್ಯಕ್ಕಿಂತಲೂ ಹೆಚ್ಚಾಗಿರುವುದನ್ನು ಕಡಿಮೆ ಮಾಡುತ್ತದೆ.

 

 

 

ರೈಲ್ವೆಯ ಸಾಮರ್ಥ್ಯ ಮತ್ತು ಉತ್ಪಾದಕತೆಯ ಸುಧಾರಣೆ ಮಾಡಲು ರೈಲ್ವೆ ನೌಕರರಿಗೆ  ದಸರಾ/ಪೂಜಾಗೂ ಮುನ್ನ ಹಬ್ಬದ ಋತುವಿನ ಪ್ರೋತ್ಸಾಹಕವಾಗಿ ಉತ್ಪಾದಕತೆ ಸಂಪರ್ಕಿತ ಬೋನಸ್ ನೀಡಿಕೆಗೆ   ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17ನೇ ಸಾಲಿಗಾಗಿ ಅರ್ಹ ಗೆಜೆಟೆಡೇತರ  ರೈಲ್ವೆ ನೌಕರರಿಗೆ (ಆರ್.ಪಿ.ಎಫ್/ಆರ್.ಪಿ.ಎಸ್.ಎಫ್. ಸಿಬ್ಬಂದಿ ಹೊರತುಪಡಿಸಿ)  78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಸಂಪರ್ಕಿತ ಬೋನಸ್ (ಪಿ.ಎಲ್.ಬಿ) ನೀಡಿಕೆಗೆ ತನ್ನ ಅನುಮೋದನೆ ನೀಡಿದೆ. ಸುಮಾರು 12.30 ಲಕ್ಷ ಗೆಜೆಟೆಡೇತರ ರೈಲ್ವೆ ನೌಕರರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ. ಹಬ್ಬದ ಋತುವಿಗೂ ಮುನ್ನ ಲಕ್ಷಾಂತರ ಕುಟುಂಬಗಳಲ್ಲಿ ಸಂತಸ ಮೂಡಿಸಲು ಇದನ್ನು ದಸರಾ/ಪೂಜಾ ರಜಾದಿನಗಳಿಗೂ ಮುನ್ನ ಪಾವತಿ ಮಾಡಲಾಗುತ್ತಿದೆ.

 

 

(27-ಸೆಪ್ಟೆಂಬರ್ 2017)

 

ಕೇಂದ್ರೀಯ ಆರೋಗ್ಯ ಸೇವೆ (ಸಿಎಚ್ಎಸ್) ವೈದ್ಯರನ್ನು ಹೊರತುಪಡಿಸಿ ವೈದ್ಯರುಗಳ ನಿವೃತ್ತಿ ವಯಸ್ಸನ್ನು 65ವರ್ಷಗಳಿಗೆ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರೀಯ ಆರೋಗ್ಯ ಸೇವೆ (ಸಿಎಚ್ಎಸ್) ವೈದ್ಯರುಗಳನ್ನು ಹೊರತುಪಡಿಸಿ, ಉಳಿದ ವೈದ್ಯರ ನಿವೃತ್ತಿಯ ವಯಸ್ಸನ್ನು65 ವರ್ಷಗಳಿಗೆ ಈ ಕೆಳಕಂಡ ಮಾದರಿಯಲ್ಲಿ ಏರಿಕೆ ಮಾಡಲು ತನ್ನ ಅನುಮೋದನೆ ನೀಡಿದೆ:

 

 

 

ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯಡಿಯಲ್ಲಿ (i) ಅಂತರ ಬ್ಯಾಂಕ್ ಪ್ರಾದೇಶಿಕ ಕರೆನ್ಸಿ ಕ್ರೆಡಿಟ್ ಲೈನ್ ಒಪ್ಪಂದ ಮತ್ತು (ii) ಎಕ್ಸಿಂ ಬ್ಯಾಂಕ್ ಸಾಲ ಶ್ರೇಣೀಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಒಪ್ಪಂದಗಳಿಗೆ ಅಂಕಿತ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು (i) ಅಂತರ ಬ್ಯಾಂಕ್ ಪ್ರಾದೇಶಿಕ ಕರೆನ್ಸಿ ಕ್ರೆಡಿಟ್ ಲೈನ್ ಒಪ್ಪಂದ ಮತ್ತು (ii) ಎಕ್ಸಿಂ ಬ್ಯಾಂಕ್ ಸಾಲ ಶ್ರೇಣೀಕರಣಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯಡಿಯಲ್ಲಿ ಭಾಗವಹಿಸುವ ಸದಸ್ಯ ಬ್ಯಾಂಕ್ ಗಳ ಸಹಕಾರ ಒಪ್ಪಂದಗಳಿಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ಎರಡೂ ಒಪ್ಪಂದ ಮತ್ತು ತಿಳಿವಳಿಕೆ ಒಪ್ಪಂದಗಳು ಏಕಛತ್ರಿ ಒಪ್ಪಂದಗಳಾಗಿವೆ ಮತ್ತು ಸ್ವಾಭಾವಿಕವಾಗಿ ಬಂಧಮುಕ್ತವಾಗಿವೆ, ಎಕ್ಸಿಮ್ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಈ ಸಂಬಂಧ ಮಾತುಕತೆ ನಡೆಸಲು ಮತ್ತು ಯಾವುದೇ ವೈಯಕ್ತಿಕ ಒಪ್ಪಂದ ಹಾಗೂ ಬದ್ಧತೆಯನ್ನು ತಮ್ಮದೇ ಚೌಕಟ್ಟಿನಲ್ಲಿ ಆಖೈರುಗೊಳಿಸಲು ಅಧಿಕಾರ ನೀಡಲಾಗಿದೆ.  

 

 

ಭಾರತ ಮತ್ತು ಇಥಿಯೋಪಿಯ ನಡುವೆ "ಮಾಹಿತಿಸಂವಹನ ಮತ್ತು ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ" ಕುರಿತ ಒಪ್ಪಂದಕ್ಕೆ ಸಂಪುಟದ  ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು,  ಭಾರತ ಮತ್ತು ಇಥಿಯೋಫಿಯಾ ನಡುವೆ ‘ಮಾಧ್ಯಮ ಮತ್ತು ಸಂವಹನ ಹಾಗೂ ಮಾಹಿತಿ ಕ್ಷೇತ್ರದಲ್ಲಿನ ಸಹಕಾರ’ಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 1899 ಚದರ ಮೀಟರ್ ಅಳತೆಯ ಜಮೀನನ್ನು ಎ.ಎ.ಐ.ನಿಂದ ಲಖನೌ ಮೆಟ್ರೋ ರೈಲು ನಿಗಮ (ಎಲ್.ಎಂ.ಆರ್.ಸಿ.)ಕ್ಕೆ ಶಾಶ್ವತವಾಗಿ ಹಸ್ತಾಂತರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಲಖನೌನಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 1899ಚದರ ಮೀಟರ್ ಅಳತೆಯ ಜಮೀನನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಲಖನೌ ಮೆಟ್ರೋ ರೈಲು ನಿಗಮ (ಎನ್.ಎಂ.ಆರ್.ಸಿ.)ಗೆ ಹಸ್ತಾಂತರ ಮಾಡಲು ತನ್ನ ಅನುಮೋದನೆ ನೀಡಿದೆ.

 

 

 

ವಿಮಾನ ನಿಲ್ದಾಣದ ಸುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣದ ಉದ್ದೇಶಕ್ಕಾಗಿ ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿರುವ 10.25 ಎಕರೆ  ಎಎಐ ಭೂಮಿಗೆ ಸಮಾನವಾಗಿ ಆಂಧ್ರಪ್ರದೇಶ ಸರ್ಕಾರ ನೀಡಲು ಉದ್ದೇಶಿಸಿರುವ ಭೂಮಿಯೊಂದಿಗೆ ವಿನಿಮಯಕ್ಕೆ  ಕೇಂದ್ರ ಸಚಿವ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ.)ಗೆ ಸೇರಿದ 10.25 ಎಕರೆ ಜಮೀನನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಸೇರಿದ ಸಮಾನ ಅಳತೆಯ ಜಮೀನಿನೊಂದಿಗೆ ವಿನಿಮಯ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ. ರಾಜಮಂಡ್ರಿ ವಿಮಾನ ನಿಲ್ದಾಣದ ಸುತ್ತಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಮತ್ತು ಅಲ್ಲಿನ ಶ್ರೀ ಸಾಮಾನ್ಯರಿಗೆ ಸುಲಭವಾದ ಪ್ರವೇಶಾವಕಾಶ ಕಲ್ಪಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ.

 

 

 

ಪೊಲೀಸ್ ಪಡೆಗಳ ಆಧುನೀಕರಣಕ್ಕೆ ಏಕಛತ್ರಿ ಯೋಜನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2017-18 ರಿಂದ 2019-20ರ ಅವಧಿಗಾಗಿ ಪೊಲೀಸ್ ಪಡೆಗಳ ಆಧುನೀಕರಣಕ್ಕೆ (ಎಂ.ಪಿ.ಎಫ್.)  ತನ್ನ ಅನುಮೋದನೆ ನೀಡಿದೆ. ಮೂರು ವರ್ಷಗಳ ಅವಧಿಗಾಗಿ ಯೋಜನೆಗೆ 25,060 ಕೋಟಿ ರೂಪಾಯಿ ಹಣಕಾಸು ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರದ ಪಾಲು 18,636 ಕೋಟಿ ರೂಪಾಯಿ ಮತ್ತು ರಾಜ್ಯದ ಪಾಲು 6,424 ಕೋಟಿ ರೂಪಾಯಿಗಳಾಗಿವೆ.

 

 

ತೈಲ ಮತ್ತು ಅನಿಲ ವಲಯದಲ್ಲಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತೈಲ ಮತ್ತು ಅನಿಲ ವಲಯದಲ್ಲಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. 2017ರ ಸೆಪ್ಟೆಂಬರ್ 12ರಂದು ಬೆಲಾರಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.

 

 

ಹೂಡಿಕೆ ಕುರಿತಂತೆ ಭಾರತ ಮತ್ತು ಬೆಲಾರಸ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಹೂಡಿಕೆ ಕುರಿತಂತೆ ಭಾರತ ಮತ್ತು ಬೆಲಾರಸ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ)ಗೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

 

 

ಪೊಲೀಸ್ ತರಬೇತಿ ಮತ್ತು ಅಭಿವೃದ್ಧಿ ಕುರಿತಂತೆ ತಾಂತ್ರಿಕ ಸಹಕಾರಕ್ಕಾಗಿ  ಭಾರತ ಮತ್ತು ಆಫ್ಘಾನಿಸ್ತಾನಗಳ ನಡುವೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪೊಲೀಸ್ ತರಬೇತಿ ಮತ್ತು ಅಭಿವೃದ್ಧಿ ಕುರಿತ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಆಫ್ಘಾನಿಸ್ತಾನಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಸಂವಹನ ಕಾರ್ಯನಿರ್ವಹಣೆದಾರರಿಗಾಗಿ ಹಂಚಿಕೆಯ ಸಂವಹನ ಗೋಪುರಗಳ ಮತ್ತು ಪೂರಕ ಮೂಲಸೌಕರ್ಯ ನಿರ್ಮಾಣಕ್ಕಾಗಿ   ರಕ್ಷಣಾ ಭೂಮಿಯನ್ನು ಒದಗಿಸಲು ನೀತಿ ಪರಿಷ್ಕರಣೆಗೆ ಸಂಪುಟ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಕ್ಷಣಾ ಭೂಮಿಯನ್ನು ಮೊಬೈಲ್ ಗೋಪುರ ಸ್ಥಾಪನೆಗಾಗಿ ತೆರವುಗೊಳಿಸುವಿಕೆಗೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ (ಡಿ.ಓ.ಟಿ) ನೀಡಿದ ನೀತಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನಗೊಳಿಸುವಲ್ಲಿನ ಅನುಭವದ ಆಧಾರದ ಮೇಲೆ ಸಂವಹನ ಕಾರ್ಯನಿರ್ವಹಣೆದಾರರಿಗೆ ಹಂಚಿಕೆಯ ಸಂವಹನ ಗೋಪುರ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿ ಒದಗಿಸಲು ರಕ್ಷಣಾ ಸಚಿವಾಲಯದ ನೀತಿ ಪರಿಷ್ಕರಣೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

 

(04-ಅಕ್ಟೋಬರ್ 2017)

 

ಭಾರತ ಮತ್ತು ಲಿಥುವೇನಿಯಾ ನಡುವೆ ಕೈದಿಗಳ ಹಸ್ತಾಂತರ ಕುರಿತ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಲಿಥುವೇನಿಯಾ ನಡುವೆ ಕೈದಿಗಳ ಹಸ್ತಾಂತರ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

 

ರೈಲು ವಲಯದಲ್ಲಿನ ತಾಂತ್ರಿಕ ಸಹಕಾರಕ್ಕಾಗಿ ಸ್ವಟ್ಜರ್ ಲ್ಯಾಂಡ್ ಮತ್ತು ಭಾರತ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಮತ್ತು ಸ್ವಿಸ್ ಒಕ್ಕೂಟದ ಪರಿಸರ, ಸಾರಿಗೆ, ಇಂಧನ ಮತ್ತು ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಸಂವಹನಗಳ ಒಕ್ಕೂಟ ಇಲಾಖೆ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ಕ್ಕೆ ಆಗಸ್ಟ್ 31ರಂದು ಅಂಕಿತ ಹಾಕಲಾಗಿತ್ತು.

 

 

 

ಮ್ಯಾನ್ಮಾರ್ ನ ಯಮೇಥಿನ್ ನ ಮಹಿಳಾ ಪೊಲೀಸ್ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮ್ಯಾನ್ಮಾರ್ ನಡುವೆ ಮ್ಯಾನ್ಮಾರ್ ನ ಯಮೇಥಿನ್ ಮಹಿಳಾ ಪೊಲೀಸ್ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಸೆಪ್ಟೆಂಬರ್ 6ರಂದು ಅಂಕಿತ ಹಾಕಲಾಗಿತ್ತು.

 

 

 

 ಕಾಂಡ್ಲಾ ಬಂದರಿಗೆ ದೀನ್ ದಯಾಳ್ ಬಂದರು ಎಂದು ಪುನರ್ ನಾಮಕರಣ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾಂಡ್ಲಾ ಬಂದರನ್ನು ದೀನ್ ದಯಾಳ್ ಬಂದರು ಎಂದು ಪುನರ್ ನಾಮಕರಣ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

 

 

(11-ಅಕ್ಟೋಬರ್ 2017)

 

 

 "ತಾಂತ್ರಿಕ ಇನ್ಟರ್ನ್ ತರಬೇತಿ ಕಾರ್ಯಕ್ರಮ (ಟಿಐಟಿಪಿ)" ಕುರಿತಂತೆ ಭಾರತ ಮತ್ತು ಜಪಾನ್ ನಡುವೆ ಎಂ.ಓ.ಸಿ.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,  ತಾಂತ್ರಿಕ ಇನ್ಟರ್ನ್ ತರಬೇತಿ ಕಾರ್ಯಕ್ರಮ (ಟಿಐಟಿಪಿ)ಗಾಗಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಒಪ್ಪಂದ (ಎಂ.ಓ.ಸಿ.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ದ್ರವೀಯ, ಹೊಂದಿಕೊಳ್ಳುವ ಮತ್ತು ಜಾಗತಿಕ ಎಲ್.ಎನ್.ಜಿ. ಮಾರುಕಟ್ಟೆ ಸ್ಥಾಪಿಸಲು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ರವೀಯ, ಹೊಂದಿಕೊಳ್ಳುವ ಮತ್ತು ಜಾಗತಿಕ ಎಲ್.ಎನ್.ಜಿ. ಮಾರುಕಟ್ಟೆ ಸ್ಥಾಪಿಸಲು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ಸೆಬಿ ಮತ್ತು ಎಫ್.ಎಸ್.ಸಿ. ನಡುವಿನ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಗಿರ್ಬಾಲ್ಟರ್ ನ ಹಣಕಾಸು ಸೇವೆಗಳ ಆಯೋಗ (ಎಫ್.ಎಸ್.ಸಿ.) ನಡುವೆ ಪರಸ್ಪರ ಸಹಕಾರ ಮತ್ತು ತಾಂತ್ರಿಕ ನೆರವಿನ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ವೃತ್ತಿಪರ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವೃತ್ತಿಪರ ತರಬೇತಿ ಮತ್ತು ಶಿಕ್ಷಣ ಕ್ಷೇತ್ರ (ವಿಇಟಿ)ದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಬೆಲಾರಸ್ ಅಧ್ಯಕ್ಷ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಲುಕಶೆಂಕೋ ಅವರು 2017ರ ಸೆಪ್ಟೆಂಬರ್ 12ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ವೇಳೆ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.

 

 

ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಕುವೈತ್ ನ ಬಂಡವಾಳ ಮಾರುಕಟ್ಟೆ ಪ್ರಾಧಿಕಾರ (ಸಿಎಂಎ)ದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಹಾಗೂ ಕುವೈಟ್ ನ ಬಂಡವಾಳ ಮಾರುಕಟ್ಟೆ ಪ್ರಾಧಿಕಾರ (ಸಿಎಂಎ) ನಡುವೆ ಪರಸ್ಪರ ಸಹಕಾರ ಮತ್ತು ತಾಂತ್ರಿಕ ನೆರವಿಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 ಐ.ಎ.ಎಲ್.ಎ. ಸ್ಥಾನಮಾನವನ್ನು ಸರ್ಕಾರೇತರ ಸಂಘಟನೆಯಿಂದ ಅಂತರ –ಸರ್ಕಾರೀಯ ಸಂಸ್ಥೆಯಾಗಿ ಬದಲಾಯಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಥದರ್ಶಕ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ಸಾಗರ ನೆರವು ನೀಡುವ ಅಂತಾರಾಷ್ಟ್ರೀಯ ಸಂಘ (ಐಎಎಲ್ಎ)ಯ ಸ್ಥಾನಮಾನವನ್ನು ಸರ್ಕಾರೇತರ ಸಂಘಟನೆ (ಎನ್.ಜಿ.ಓ.)ದಿಂದ ಅಂತರ ಸರ್ಕಾರೀಯ ಸಂಸ್ಥೆ (ಐಜಿಓ)ಆಗಿ ಪರಿವರ್ತಿಸಲು ತನ್ನ ಅನುಮೋದನೆ ನೀಡಿದೆ.

 

 

 ಜಲ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲ ಸಂಪನ್ಮೂಲ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಮೊರಕ್ಕೋ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

ವಿಶ್ವವಿದ್ಯಾಲಯಗಳು/ ಕಾಲೇಜುಗಳು ಮತ್ತು ಕೇಂದ್ರದ ಆರ್ಥಿಕ ನೆರವಿನ ತಾಂತ್ರಿಕ ಸಂಸ್ಥೆಗಳ  ಬೋಧಕರು ಮತ್ತು ಸಮನಾದ ಶೈಕ್ಷಣಿಕ ಸಿಬ್ಬಂದಿಯ ಪರಿಷ್ಕೃತ ವೇತನಶ್ರೇಣಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಕೇಂದ್ರದ ಆರ್ಥಿಕ ನೆರವಿನ ತಾಂತ್ರಿಕ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟ  ವಿಶ್ವವಿದ್ಯಾಲಯಗಳು/ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸುಮಾರು 8 ಲಕ್ಷ ಬೋಧಕರು ಮತ್ತು ಇತರ ಸಮನಾದ ಶೈಕ್ಷಣಿಕ ಸಿಬ್ಬಂದಿಯ ಪರಿಷ್ಕೃತ ವೇತನಶ್ರೇಣಿಗೆ ತನ್ನ ಅನುಮೋದನೆ ನೀಡಿದೆ.

 

 01 ನವೆಂಬರ್ 2017

 ಆರ್ಥಿಕ ಮತ್ತು ವಾಣಿಜ್ಯ ಸಹಕಾರ ಉತ್ತೇಜನ ಮತ್ತು ಬಲವರ್ಧನೆಗೆ ಭಾರತ ಮತ್ತು ಇಥಿಯೋಪಿಯಾ ನಡುವೆ ವಾಣಿಜ್ಯ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಉತ್ತೇಜಿಸಲು ಮತ್ತು ಬಲವರ್ಧನೆ ಮಾಡಲು ಭಾರತ ಮತ್ತು ಇಥಿಯೋಪಿಯಾ ನಡುವೆ ವಾಣಿಜ್ಯ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.  ಈ ವಾಣಿಜ್ಯ ಒಪ್ಪಂದಕ್ಕೆ  ಭಾರತದ ರಾಷ್ಟ್ರಪತಿಯವರು 2017ರ ಅಕ್ಟೋಬರ್ 4ರಿಂದ 6ರವರೆಗೆ ಕೈಗೊಂಡಿದ್ದ ಇಥಿಯೋಪಿಯಾ ಪ್ರವಾಸದ ವೇಳೆ 2017ರ ಅಕ್ಟೋಬರ್ 5ರಂದು  ಅಂಕಿತ ಹಾಕಲಾಗಿತ್ತು. 

 

ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಆರ್ಮೇನಿಯಾ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಆರ್ಮೇನಿಯಾ ನಡುವೆ ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಅದನ್ನು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿಯ ಕಾಯಿದೆ 1993ರ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎನ್.ಸಿ.ಟಿ.ಇ. ಅನುಮತಿ ಇಲ್ಲದೆ ಶಿಕ್ಷಕರ ಶಿಕ್ಷಣ ಕೋರ್ಸ್ ನಡೆಸುತ್ತಿರುವ ಕೇಂದ್ರ/ರಾಜ್ಯ/ವಿಶ್ವವಿದ್ಯಾಲಯಗಳಿಗೆ ಪೂರ್ವಾನ್ವಯವಾಗಿ ಮಾನ್ಯತೆ ನೀಡಲು ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ ಕಾಯಿದೆ 1993ಕ್ಕೆ ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ (ತಿದ್ದುಪಡಿ) ಕಾಯಿದೆ 2017 ಹೆಸರಿನಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ. 

 

 

10 ನವೆಂಬರ್ 2017

ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪಿಲಿಪ್ಪೀನ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ  ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಕಿರ್ಗಿಜ್ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ತನ್ನ ಅನುಮೋದನೆ ನೀಡಿದೆ.  

 

 ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಚೀನಾ ವಿಶೇಷ ಆಡಳಿತಾತ್ಮಕ ವಲಯ ಹಾಂಕಾಂಗ್ ನಡುವೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ಚೈನಾ ವಿಶೇಷ ಆಡಳಿತಾತ್ಮಕ ವಲಯ ಹಾಂಗ್ ಕಾಂಗ್ (ಎಚ್.ಕೆ.ಎಸ್.ಎ.ಆರ್.)ನಡುವೆ ಒಪ್ಪಂದ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ. 

 

 

 ನವದೆಹಲಿಯ ದ್ವಾರಕಾದಲ್ಲಿ ವಸ್ತುಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ ಅಭಿವೃದ್ಧಿಪಡಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಗೆ ಸೇರಿದ ಈ ಕೆಳಕಂಡ ಪ್ರಸ್ತಾಪಗಳಿಗೆ ತನ್ನ ಅನುಮೋದನೆ ನೀಡಿದೆ:

 

(a)  ವಸ್ತು ಪ್ರದರ್ಶನ ಸಹಿತ ಸಮ್ಮೇಳನ ಕೇಂದ್ರ (ಇಸಿಸಿ), ದ್ವಾರಕ ಮತ್ತು ಪೂರಕ ಮೂಲಸೌಕರ್ಯವನ್ನು ಪಿಪಿಪಿ ಮತ್ತು ಪಿಪಿಪಿಯೇತರ ಮಾದರಿಯಲ್ಲಿ (ವಸ್ತುಪ್ರದರ್ಶನ ಮತ್ತು ಸಮ್ಮೇಳನಕ್ಕೆ ಜಾಗ,ಆಸನ ಸಹಿತ ಸಾರ್ವಜನಿಕ ಕಾರ್ಯಕ್ರಮ ಪ್ರದೇಶ (ಅರೇನಾ), ಟ್ರಂಕ್ – ಮೂಲಸೌಕರ್ಯ, ಮೆಟ್ರೋ/ಎನ್.ಎಚ್.ಎ.ಐ. ಸಂಪರ್ಕ, ಹೊಟೆಲ್, ಕಚೇರಿ ಮತ್ತು ಚಿಲ್ಲರೆ ಪ್ರದೇಶ ಇತ್ಯಾದಿ.) 2025ರೊಳಗೆ ಅಂದಾಜು 25,703 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲು.

(b)  ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಶೇ.100ರಷ್ಟು ಈಕ್ವಿಟಿಯೊಂದಿಗೆ ಯೋಜನೆಗಳ ಅಭಿವೃದ್ಧಿ ಮತ್ತು ಜಾರಿಗಾಗಿ ವಿಶೇಷ ಉದ್ದೇಶದ ವಾಹಕವಾಗಿ (ಸ್ಪೆಷಲ್ ಪರ್ಪಸ್ ವೆಹಿಕಲ್ –ಎಸ್.ಪಿವಿ.) ಹೊಸ ಸರ್ಕಾರಿ ಕಂಪನಿ ಸ್ಥಾಪನೆ.  ಭಾರತ ಸರ್ಕಾರವು 2037.39 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು ಈ ಎಸ್.ಪಿ.ವಿ.ಗೆ ಈಕ್ವಿಟಿಯ ರೂಪದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಡಿಡಿಎಯಿಂದ ಭೂಮಿ ಮತ್ತು ವೆಚ್ಚ, ನೀರು ಮತ್ತು ಒಳಚರಂಡಿ ಮೂಲಸೌಕರ್ಯ, ಮೆಟ್ರೋ ಸಂಪರ್ಕಕ್ಕಾಗಿ ರೈಲ್ವೆ ಭೂಮಿ ಮತ್ತು ಪಿಪಿಪಿಯೇತರ ಇತರ ವೆಚ್ಚಗಳು ಸೇರಿದಂತೆ ಟ್ರಂಕ್ ಮೂಲಸೌಕರ್ಯ,ವಸ್ತುಪ್ರದರ್ಶನ ಕೇಂದ್ರದ ಭಾಗ, ವಿಶ್ರಾಂತಿ ಕೊಠಡಿ, ಸಮ್ಮೇಳನ ಕೇಂದ್ರ, ಮೆಟ್ರೋ ಸಂಪರ್ಕ, ಎನ್ಎಚ್ಎಐ ರಸ್ತೆ ಸಂಪರ್ಕಕ್ಕಾಗಿ ಒದಗಿಸಲಿದೆ.

(c)     ಸರಕಾರವು ಖಾತರಿಯೊಂದಿಗೆ ಮಾರುಕಟ್ಟೆಯಿಂದ ರೂ. 1,381 ಕೋಟಿ ರೂ. ಸಾಲ ಮತ್ತು ಸರ್ಕಾರಿ ಸ್ವಾಮ್ಯದ ಭೂಮಿ ಬಳಕೆಯ ಆದಾಯ ಮತ್ತು ಎಸ್ಪಿವಿಯ ವಾರ್ಷಿಕ ಯೋಜನಾ ಆದಾಯದ ಮೂಲಕ 4,000 ಕೋಟಿ ರೂ. ಕ್ರೋಡೀಕರಣಕ್ಕಾಗಿ. ಭೂಮಿಯ ಬಳಕೆಯ ಆದಾಯ ಮತ್ತು ಎಸ್.ಪಿ.ವಿ.ಯಿಂದ ಪಡೆವ ವಾರ್ಷಿಕ ಆದಾಯವನ್ನು ಯೋಜನೆಯ ಪಿಪಿಪಿಯೇತರ ಅಂಶಗಳಿಗೆ ಹಣ ಒದಗಿಸಲು ಬಳಸಲಾಗುವುದು.

(d)   ಡಿ.ಎಂ.ಐ.ಸಿ.ಡಿ.ಸಿ. ಆರಂಭದಲ್ಲಿ 10 ವರ್ಷಗಳ ಅವಧಿಗೆ ವಾರ್ಷಿಕ ಕನಿಷ್ಠ 5 ಕೋಟಿ ರೂಪಾಯಿ ಮತ್ತು ಗರಿಷ್ಠ 10 ಕೋಟಿ ರೂಪಾಯಿಗಳಿಗೆ ಒಳಪಟ್ಟು ಆಂತರಿಕ ಆರ್ಥಿಕ ಸಂಚಯದ ಶೇಕಡ 1ರ ವಾರ್ಷಿಕ ಶುಲ್ಕ ಪಾವತಿಯೊಂದಿಗೆ  ಜ್ಞಾನ ಪಾಲುದಾರನಂತೆ ಕಾರ್ಯ ನಿರ್ವಹಿಸಲಿದೆ.

(e)    ಯೋಜನೆಯ ವಿವಿಧ ಹಂತಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ, ಒಟ್ಟಾರೆ ಅನುಮೋದಿತ ಹಣಕಾಸಿನ ಮಿತಿಗಳಲ್ಲಿ .ವಿವರವಾದ ವೆಚ್ಚದ ಅಂದಾಜುಗಳ ಪರಿಷ್ಕರಣೆ, ಯೋಜನೆಯ ಘಟಕಗಳ ಪ್ರಮಾಣದ ನಿರ್ದಿಷ್ಟ ಭಾಗದ ನಿರ್ಧರಣೆ, ಯೋಜನೆಯನ್ನು ಮುಂದೂಡುವ, ವ್ಯಾಪ್ತಿಯಲ್ಲಿ ಬದಲಾವಣೆ ತರುವುದು ಇತ್ಯಾದಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಎಸ್.ಪಿ.ವಿ ಮಂಡಳಿ ಹೊಂದಿರುತ್ತದೆ.

 

 

 

 

ಹೂಡಿಕೆಯ ಪ್ರೊತ್ಸಾಹ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 2009ರ ನವೆಂಬರ್ 10ರಂದು ಅಂಕಿತ ಹಾಕಲಾದ ಭಾರತ ಮತ್ತು ಕೊಲಂಬಿಯಾ ನಡುವಿನ ಒಪ್ಪಂದದ ಜಂಟಿ ವಿವರಣಾತ್ಮಕ ಘೋಷಣೆಗೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೂಡಿಕೆಯ ಪ್ರೊತ್ಸಾಹ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 2009ರ ನವೆಂಬರ್ 10ರಂದು ಅಂಕಿತ ಹಾಕಲಾದಭಾರತ ಮತ್ತು ಕೊಲಂಬಿಯಾ ನಡುವೆ ಹಾಲಿ ಇರುವ ಒಪ್ಪಂದದ  ಜಂಟಿ ವಿವರಣಾತ್ಮಕ ಘೋಷಣೆಗೆ (ಜೆಐಡಿ) ತನ್ನ ಅನುಮೋದನೆ ನೀಡಿದೆ. 

 

ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ ನೇಮಕ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶದ ಅಧೀನ ನ್ಯಾಯಾಂಗಕ್ಕಾಗಿ ಎರಡನೇ ನ್ಯಾಯಾಂಗ ವೇತನ ಆಯೋಗ (ಎಸ್.ಎನ್.ಜೆ.ಪಿ.ಸಿ.) ನೇಮಕ ಮಾಡಲು ಸಂಪುಟದ ಅನುಮೋದನೆ ನೀಡಿದೆ.

 

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿ ಯೋಜನೆಯ ಪುನರ್ ವಿನ್ಯಾಸ ಮತ್ತು ಮುಂದುವರಿಕೆಗೆ ಸಂಪುಟದ ಅನುಮೋದನೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ (ಎನ್.ಆರ್.ಡಿ.ಡಬ್ಲ್ಯು.ಪಿ) ವನ್ನು ಮುಂದುವರಿಸಲು ಮತ್ತು ಫಲಶ್ರುತಿ ಆಧಾರಿತ, ಸ್ಪರ್ಧಾತ್ಮಕ ಹಾಗೂ ಸುಸ್ಥಿರತೆ (ಕಾರ್ಯನಿರ್ವಹಣೆ)ಯ ಮೇಲೆ ಹೆಚ್ಚಿನ ಗಮನದೊಂದಿಗೆ ನಿಗಾ ಇಡಲು ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಪೂರೈಕೆಯ ಖಾತ್ರಿಗಾಗಿ ಅದನ್ನು ಪುನರ್ ವಿನ್ಯಾಸಗೊಳಿಸಲು ತನ್ನ ಅನುಮೋದನೆ ನೀಡಿದೆ.

 

ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ರಚಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರವೇಶ ಪರೀಕ್ಷೆ ನಡೆಸಲು ಭಾರತೀಯ ಸೊಸೈಟಿಗಳ ನೋಂದಣಿ ಕಾಯಿದೆ 1860ರ ಅಡಿಯಲ್ಲಿ ಸೊಸೈಟಿಯಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮತ್ತು ಸ್ವಾಯತ್ತ ಹಾಗೂ ಸ್ವಯಂ ಸುಸ್ಥಿರವಾದ ಪ್ರಧಾನ ಪರೀಕ್ಷಾ ಸಂಸ್ಥೆಯಾಗಿ ರೂಪಿಸಲು ತನ್ನ ಅನುಮೋದನೆ ನೀಡಿದೆ.

 

 

 

16 ನವೆಂಬರ್ 2017

 

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿಮತ್ತು ಇತರ ಸಚಿವಾಲಯಗಳ “ ಶ್ರೇಣಿಯ ಅಧಿಕಾರಿಗಳನ್ನು  ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆ ನಿಯೋಜನೆ ಮೇಲೆ ಕಳುಹಿಸಲು  ಸಂಪುಟದ ಅನುಮೋದನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ)ಮತ್ತು ಇತರ ಸಚಿವಾಲಯಗಳ “ಎ” ಶ್ರೇಣಿಯ ಅಧಿಕಾರಿಗಳನ್ನು  ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆ ಈ ಕೆಳಗಿನ ವಿವರಗಳ ಆಧಾರದ ಮೇಲೆ ನಿಯೋಜನೆ ಮೇಲೆ ಕಳುಹಿಸಲು  ಅನುಮೋದನೆ ನೀಡಿದೆ: 


 


ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಮಧ್ಯಮ ಆದಾಯದ ಗುಂಪುಗಳಿಗೆ ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆಯಡಿಯಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಹವಾದ ಮನೆಗಳ ಕಾರ್ಪೆಟ್ ಪ್ರದೇಶವನ್ನು ಹೆಚ್ಚಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನಮಂತ್ರಿ ವಸತಿ ಯೋಜನೆ (ನಗರ) ಅಡಿಯಲ್ಲಿ ಮಧ್ಯಮ ಆದಾಯದ ಗುಂಪು (ಎಂ.ಐ.ಜಿ.)ಗಳಿಗೆ ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆ (ಸಿ.ಎಲ್.ಎಸ್.ಎಸ್.)ಯಡಿಯಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಹವಾದ ಮನೆಗಳ ಕಾರ್ಪೆಟ್ ಪ್ರದೇಶವನ್ನು ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.

 

ವಿಜ್ಞಾನ, ತಂತ್ರಜ್ಞಾನ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಪರಸ್ಪರರ ಪ್ರಯೋಜನಕ್ಕಾಗಿ ಭಾರತ ಮತ್ತು ಬೆಲಾರಸ್ ನಡುವೆ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ (ಐ.ಎನ್.ಎಸ್.ಎ) ಮತ್ತು ಬೆಲಾಸರ್ ನ ರಾಷ್ಟ್ರೀಯ ವಿಜ್ಞಾನ ಅಕಾಡಮಿ (ಎನ್.ಎ.ಎಸ್.ಬಿ.) ನಡುವೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಇತ್ಯಾದಿ ಕ್ಷೇತ್ರದಲ್ಲಿ ಪರಸ್ಪರರ ಪ್ರಯೋಜನಕ್ಕಾಗಿ ಆಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದದ ಬಗ್ಗೆ  ವಿವರಿಸಲಾಯಿತು.

 

ನ್ಯಾಯಾಂಗಕ್ಕೆ ಮೂಲಸೌಕರ್ಯಗಳ ಹೆಚ್ಚಳ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನ್ಯಾಯಾಂಗದ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ದಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.)ಯನ್ನು 12ನೇ ಪಂಚ ವಾರ್ಷಿಕ ಯೋಜನೆಯ ನಂತರವೂ ಅಂದರೆ 01.04.2017 ರಿಂದ 31.03.2020ರವರೆಗೆ, ಅಭಿಯಾನದೋಪಾದಿಯಲ್ಲಿ ಅಂದಾಜು 3,320 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ರಾಷ್ಟ್ರೀಯ ನ್ಯಾಯದಾನ ಮತ್ತು ಕಾನೂನು ಸುಧಾರಣೆ ಅಭಿಯಾನದ ಮೂಲಕ ಅನುಷ್ಠಾನಗೊಳಿಸಲು ತನ್ನ ಸಮ್ಮತಿ ನೀಡಿದೆ.

 

 

ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ  ಲಾಭಕೋರತನ ವಿರೋಧಿ ಪ್ರಾಧಿಕಾರ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮೂಹಿಕವಾಗಿ ಬಳಸುವ ದೊಡ್ಡ ಸಂಖ್ಯೆಯ ಪದಾರ್ಥಗಳ ಮೇಲಿನ ಜಿಎಸ್ಟಿ ದರಗಳನ್ನು ನಿನ್ನೆಯಿಂದ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ತತ್ ಕ್ಷಣದಿಂದ ಅದರ ಅನುಸರಣೆಗಾಗಿ

ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರ (ಎನ್.ಎ.ಎ.)ದ ಅಧ್ಯಕ್ಷರು ಮತ್ತು ತಾಂತ್ರಿಕ ಸದಸ್ಯ ಹುದ್ದೆ ಸೃಷ್ಟಿಗೆ ತನ್ನ ಅನುಮೋದನೆ ನೀಡಿದೆ. ಇದು ಈ ಸರ್ವೋಚ್ಚ ಕಾಯವನ್ನು ತತ್ ಕ್ಷಣವೇ ಸ್ಥಾಪಿಸಲು ದಾರಿ ಮಾಡಿಕೊಡಲಿದ್ದು, ಸರಕು ಅಥವಾ ಸೇವೆಗಳಲ್ಲಿ ಕಡಿತ ಮಾಡಿರುವ ಜಿಎಸ್ಟಿ ದರದ ಲಾಭ ಕಟ್ಟ ಕಡೆಯ ಗ್ರಾಹಕನಿಗೆ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲಿದೆ.

 

ನಾಗರಿಕ ವಿಮಾನ ಯಾನ ಸಹಕಾರ ಉತ್ತೇಜನಕ್ಕಾಗಿ ಭಾರತ ಮತ್ತು ಪೋಲ್ಯಾಂಡ್ ನಡುವೆ ಎಂ.ಓ.ಯು.ಗೆ ಸಂಪುಟ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋಲ್ಯಾಂಡ್ ನಡುವೆ ನಾಗರಿಕ ವಿಮಾನಯಾನ ಸಹಕಾರ ಉತ್ತೇಜನಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಎರಡೂ ಸರ್ಕಾರಗಳ ಅನುಮೋದನೆಯ ಬಳಿಕ ಎರಡೂ ದೇಶಗಳ ಪರಿವಾಗಿ ಅಂಕಿತ ಹಾಕಲಾಗುತ್ತದೆ. ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಅವಧಿಯದಾಗಿರುತ್ತದೆ.

 

"2016-17ನೇ ಸಾಲಿನಲ್ಲಿ ಸಾಮಾನ್ಯ ಆದಾಯ ಇಲಾಖೆಗೆ ರೈಲ್ವೆಯಿಂದ ಪಾವತಿ ಮಾಡಬೇಕಾದ ಲಾಭಾಂಶ ದರ ಮತ್ತು ಇತರ  ಪೂರಕ ವಿಷಯಗಳು " ಕುರಿತಂತೆ ತನ್ನ ಆರನೇ ವರದಿ ಒಳಗೊಂಡ ರೈಲ್ವೆ ಕನ್ವೆನ್ಷನ್ ಸಮಿತಿ (2014)ರ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ಕುರಿತಾದ ನಿರ್ಣಯಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17 ಸಾಲಿಗಾಗಿ ರೈಲ್ವೆ ಇಲಾಖೆಯು ಸಾಮಾನ್ಯ ಆದಾಯ ಇಲಾಖೆಗೆ ಪಾವತಿಸಬೇಕಾದ ಲಾಭಾಂಶ ದರವನ್ನು ಖಚಿತವಾಗಿ ಒಂದೇ ಒಂದು ಬಾರಿಗೆ ಮಾತ್ರ ಮನ್ನಾ ಮಾಡುವ ಕುರಿತಂತೆ ರೈಲ್ವೆ ಕನ್ವೆನ್ಷನ್ ಸಮಿತಿ (2014)ರ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ಸಂಸತ್ತಿನ ಉಭಯ ಸದನಗಳಲ್ಲಿ ನಿರ್ಣಯ ಮಂಡಳಿಸಲು ತನ್ನ ಒಪ್ಪಿಗೆ ನೀಡಿದೆ.

 

22 ನವೆಂಬರ್ 2017

 ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಕಾರ್ಮಿಕರಿಗಾಗಿ 8ನೇ ಸುತ್ತಿನ ವೇತನ ಹೆಚ್ಚಳ ಮಾತುಕತೆಗಾಗಿ ವೇತನ ನೀತಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್.ಇ.ಗಳು) ಕಾರ್ಮಿಕರ ವೇತನ ಹೆಚ್ಚಳದ 8ನೇ ಸುತ್ತಿನ ಮಾತುಕತೆಗಾಗಿ ವೇತನ ನೀತಿಗೆ ತನ್ನ ಅನುಮೋದನೆ ನೀಡಿದೆ.

 

15ನೇ ಹಣಕಾಸು ಆಯೋಗದ ರಚನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಂವಿಧಾನಾತ್ಮಕ  ಹೊಣೆಗಾರಿಕೆಯಲ್ಲಿ ಸಂವಿಧಾನದ ವಿಧಿ 280(1) ಅಡಿಯಲ್ಲಿ 15ನೇ ಹಣಕಾಸು ಆಯೋಗದ ರಚನೆಗೆ ತನ್ನ ಅನುಮೋದನೆ ನೀಡಿದೆ. 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳನ್ನು ಸೂಕ್ತ ಸಮಯದಲ್ಲಿ ಅಧಿಸೂಚಿಸಲಾಗುವುದು.

 

 

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನಗ್ರಾಚ್ಯುಯಿಟಿ ಭತ್ಯೆಗಳು ಮತ್ತು  ಪಿಂಚಣಿಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ಹಾಗೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳ ನಿವೃತ್ತ ನ್ಯಾಯಮೂರ್ತಿಗಳ  ವೇತನ, ಗ್ರಾಚ್ಯುಯಿಟಿ,  ಭತ್ಯೆಗಳು ಮತ್ತು  ಪಿಂಚಣಿ ಇತ್ಯಾದಿಗಳ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ. ನಾಗರಿಕ ಸೇವೆಯಲ್ಲಿರುವವರಿಗೆ 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ ಬಳಿಕ ಈ ಅನುಮೋದನೆ ನೀಡಲಾಗಿದೆ.



 

12ನೇ ಯೋಜನೆಯ ಅವಧಿಯ ನಂತರವೂ ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆಯ ಕುರಿತ ಯೋಜನೆಯನ್ನು ಮುಂದುವರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟಸಭೆ, ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆ (ಐಐಸಿಎ)ಯ ಕುರಿತ ಯೋಜನೆಯನ್ನು ಮತ್ತೆ ಮೂರು ಆರ್ಥಿಕ ವರ್ಷಗಳ ಕಾಲ (2017-18ರಿಂದ 2019-20ರ ವಿತ್ತೀಯ ವರ್ಷ) ಮುಂದುವರಿಸಲು ಮತ್ತು ಸಂಸ್ಥೆಗೆ 18 ಕೋಟಿ ರೂಪಾಯಿಗಳ ಅನುದಾನ ಒದಗಿಸಲು ತನ್ನ ಅನುಮೋದನೆ ನೀಡಿದೆ. ಇದು 2019-20ರ ಆರ್ಥಿಕ ವರ್ಷದ ಹೊತ್ತಿಗೆ ಸಂಸ್ಥೆಯನ್ನು ಸ್ವಾವಲಂಬಿಯನ್ನಾಗಿಸಲಿದೆ. 

 

ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯುರೋಪಿಯನ್ ಬ್ಯಾಂಕ್ ನಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುನರ್ನಿರ್ಮಾಣ ಮತ್ತು ಅಭಿವೃದ್ಧಿ (ಇಬಿಆರ್.ಡಿ) ಕುರಿತ ಐರೋಪ್ಯ ಬ್ಯಾಂಕ್ ನ ಭಾರತೀಯ ಸದಸ್ಯತ್ವಕ್ಕೆ ತನ್ನ ಅನುಮೋದನೆ ನೀಡಿದೆ.

 

ಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಸ್ಟಮ್ಸ್ (ಸೀಮಾ ಸುಂಕ) ವಿಚಾರಗಳಲ್ಲಿ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವಿನ ಒಪ್ಪಂದಕ್ಕೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 

 

30 ನವೆಂಬರ್ 2017

 ಹಿಂದೂಸ್ತಾನ್  ತರಕಾರಿ ತೈಲ ನಿಗಮ ನಿಯಮಿತ ಹೊಂದಿರುವ ಭೂಮಿ ಆಸ್ತಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿಂದೂಸ್ತಾನ್ ತರಕಾರಿ ತೈಲ ನಿಗಮ ನಿಯಮಿತ (ಎಚ್.ವಿ.ಓ.ಸಿ.) ಹೊಂದಿರುವ ಎಲ್ಲ ಜಮೀನು ಆಸ್ತಿಯನ್ನು ಸೂಕ್ತ ಬಳಕೆ/ವಿಲೇವಾರಿಗಾಗಿ ವಸತಿ ಮತ್ತು ನಗರ ವ್ಯವಹಾರಗಳ (ಎಂ.ಓ. ಎಚ್.ಯು.ಎ.)ಗೆ ಅಥವಾ ಅದರ ಅಧಿಕೃತ ಸಂಸ್ಥೆಗಳಿಗೆ  ವರ್ಗಾವಣೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ.

 

ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬ್ರೆಜಿಲ್ ನಡುವೆ ಹೂಡಿಕೆಯ ಸಹಕಾರ ಮತ್ತು ಅದನ್ನು ಸುಗಮಗೊಳಿಸುವ ಒಪ್ಪಂದಕ್ಕೆ (ಐಸಿಎಫ್ಟಿ) ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.

 


 

 ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಇಟಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇಟಲಿಯ ನಡುವೆ ಕೃಷಿ ಮತ್ತು ಬೆಳೆ ರೋಗ ವಿಷಯಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಇದು 2018ರ ಜನವರಿಯಲ್ಲಿ ಅವಧಿ ಮುಗಿಯಲಿರುವ ಹಾಗೂ 2008ರ ಜನವರಿಯಲ್ಲಿ ಅಂಕಿತ ಹಾಕಲಾಗಿದ್ದ ತಿಳಿವಳಿಕೆ ಒಪ್ಪಂದವನ್ನು ಬದಲಾಯಿಸಲಿದೆ.



01 ಡಿಸೆಂಬರ್ 2017

 

 ರಾಷ್ಟ್ರೀಯ ಪೌಷ್ಟಿಕ ಅಭಿಯಾನ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ರಿಂದ ಆರಂಭವಾಗುವಂತೆ ಮೂರು ವರ್ಷಗಳ ಅವಧಿಗೆ 9046.17 ಕೋಟಿ ರೂಪಾಯಿಗಳ ಆಯವ್ಯಯದ ರಾಷ್ಟ್ರೀಯ ಪೌಷ್ಟಿಕ ಅಭಿಯಾನ (ಎನ್.ಎನ್.ಎಂ.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.

 

 

 15 ಡಿಸೆಂಬರ್ 2017

 

ಈಶಾನ್ಯಕ್ಕಾಗಿ ಮಾರ್ಚ್ 2020ರವರೆಗೆ ಎನ್.ಎಲ್.ಸಿ.ಪಿ.ಆರ್. ಯೋಜನೆ ಮುಂದುವರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹಾಲಿ ಇರುವ ಕೈತಪ್ಪದ ಕೇಂದ್ರೀಯ ಸಂಪನ್ಮೂಲ ನಿಧಿ (ಎನ್.ಎಲ್.ಸಿ.ಪಿ.ಆರ್.) ಯೋಜನೆಯನ್ನು 2020ರವರೆಗೆ 5300 ಕೋಟಿ ರೂಪಾಯಿ ಹಂಚಿಕೆಯೊಂದಿಗೆ 90:10ಅನುಪಾತದಲ್ಲಿ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಇದು ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ.

 

ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಮಿಷನ್ (ನಾಮ್)  ಅನ್ನು  01.04.2017 ರಿಂದ 31.03.2020ರವರೆಗೆ ಮುಂದುವರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2400 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಆಯುಷ್ ಅಭಿಯಾನ (ನಾಮ್) ಅನ್ನು 01.04.2017 ರಿಂದ 31.03.2020ರವರೆಗೆ ಮೂರು ವರ್ಷಗಳ ಅವಧಿಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಈ ಅಭಿಯಾನವನ್ನು 2014ರ ಸೆಪ್ಟೆಂಬರ್ ನಲ್ಲಿ ಆರಂಭಿಸಲಾಗಿತ್ತು.

 

2000 ರೂ.ಗಿಂತ ಕಡಿಮೆ ಮೌಲ್ಯದ  ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್  ವಹಿವಾಟುಗಳ ಮೇಲಿನ ಎಂ.ಡಿ.ಆರ್. ಶುಲ್ಕಕ್ಕೆ ಸಹಾಯಧನ ನೀಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಡೆಬಿಟ್ ಕಾರ್ಡ್ /ಭೀಮ್ ಯುಪಿಐ/ ಆಧಾರ್ ಸಂಪರ್ಕಿತ ಪಾವತಿ ವ್ಯವಸ್ಥೆ (ಎಇಪಿಎಸ್)ಗಳ ಮೂಲಕ ನಡೆಸುವ 2000 ರೂ. ಸೇರಿದಂತೆ ಆ ಮೌಲ್ಯದವರೆಗಿನ ವಹಿವಾಟಿನ ಮೇಲೆ ವ್ಯಾಪಾರಿಗಳ ರಿಯಾಯಿತಿ ದರ (ಎಂ.ಡಿ.ಆರ್.) ಶುಲ್ಕ ಅನ್ವಯವಾಗಲಿದ್ದು, ಅದನ್ನು ಬ್ಯಾಂಕ್ ಗಳಿಗೆ ಹಿಂತಿರುಗಿಸುವ ಮೂಲಕ ಜನವರಿ 1 2018ರಿಂದ ಎರಡು ವರ್ಷಗಳ ಅವಧಿಗೆ  ಸರ್ಕಾರವೇ ಭರಸಲು ತನ್ನ ಅನುಮೋದನೆ ನೀಡಿದೆ.

 

ಮೆಟ್ರೋ ರೈಲು ಸುರಕ್ಷತೆ ಅನುಷ್ಠಾನ ಕಾರ್ಯಗಳನ್ನು ಕೈಗೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಮೆಟ್ರೋ ರೈಲು ಸುರಕ್ಷತೆ ಆಯುಕ್ತರ ಒಂದು ವೃತ್ತ ಕಚೇರಿ ರಚನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ರೈಲ್ವೆ "ಮೆಟ್ರೊ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ, 2002" ಅಡಿಯಲ್ಲಿ ರೂಪಿಸಲಾದ  ಮೆಟ್ರೋ ರೈಲು ಸುರಕ್ಷತೆಯ ಆಯೋಗದ ಕಾರ್ಯಗಳನ್ನು ನಿರ್ವಹಿಸಲು ಎಲ್ಲಾ ಪೂರಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಮೆಟ್ರೊ ರೈಲು ಸುರಕ್ಷತೆ ಆಯುಕ್ತರ ಒಂದು ವೃತ್ತ ಕಚೇರಿ(ಸಿಎಂಆರ್.ಎಸ್) ಯನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.

 

ಭಾರತ ಮತ್ತು ಕೊಲಂಬಿಯಾ ನಡುವೆ ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿನ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಭಾರತ ಮತ್ತು ಕೊಲಂಬಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

 

 

ಹೈದ್ರಾಬಾದ್ ನಲ್ಲಿ  ಸಾಗರ ಶಾಸ್ತ್ರ ಕಾರ್ಯಕಾಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರ ಸ್ಥಾಪನೆಗಾಗಿ ಯುನೆಸ್ಕೋದೊಂದಿಗಿನ ಒಪ್ಪಂದಕ್ಕೆಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹೈದ್ರಾಬಾದ್ ನಲ್ಲಿ ಯುನೆಸ್ಕೋದ ಪ್ರವರ್ಗ-2 ಕೇಂದ್ರ (ಸಿ 2 ಸಿ) ಆಗಿ ಸಮುದ್ರಶಾಸ್ತ್ರ ಕಾರ್ಯಚರಣೆಯ ಅಂತಾರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ.

 

 

ಚರ್ಮ ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಪ್ಯಾಕೇಜ್ ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚರ್ಮ ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಪ್ಯಾಕೇಜ್ ಗೆ ತನ್ನ ಅನುಮೋದನೆ ನೀಡಿದೆ. ಈ ಪ್ಯಾಕೇಜ್ ಕೇಂದ್ರ ವಲಯದ ಯೋಜನೆ ‘ಭಾರತೀಯ ಪಾದರಕ್ಷೆ, ಚರ್ಮ ಮತ್ತು ಪರಿಕರಗಳ ಅಭಿವೃದ್ಧಿ ಕಾರ್ಯಕ್ರಮ’ವನ್ನು 2600 ಕೋಟಿ ರೂಪಾಯಿ ವೆಚ್ಚದಲ್ಲಿ 2017-18ರಿಂದ 2019-20ರ ಅವಧಿಯ ಮೂರು ಹಣಕಾಸು ವರ್ಷದಲ್ಲಿ ಜಾರಿಗೊಳಿಸುವುದನ್ನೂ ಒಳಗೊಂಡಿದೆ.

 

20 ಡಿಸೆಂಬರ್ 2017

 

ಕೇಂದ್ರೀಯ ಗ್ರೂಪ್ 'ಎ' ಸೇವೆ ಮತ್ತು ಸಶಸ್ತ್ರ ಸೀಮಾ ಬಲದ ಗ್ರೂಪ್ 'ಎ' ಕಾರ್ಯನಿರ್ವಾಹಕ ಅಧಿಕಾರಿಗಳ ಕೇಡರ್ ಪರಾಮರ್ಶೆಯ ಸಮಾಲೋಚನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರೀಯ ಗ್ರೂಪ್ 'ಎ' ಸೇವೆ ಮತ್ತು ಸಶಸ್ತ್ರ ಸೀಮಾ ಬಲ (ಎಸ್.ಎಸ್.ಬಿ.)ದ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸಾಮರ್ಥ್ಯವರ್ಧನೆಗಾಗಿ ಸಹಾಯಕ ಕಮಾಂಡೆಂಟ್ ಇಂದ ಹಿಡಿದು ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ಹುದ್ದೆಯವರೆಗೆ  ಒಟ್ಟು 19 ಹುದ್ದೆಗಳ ಸೃಷ್ಟಿಯೊಂದಿಗೆ ಎಸ್.ಎಸ್.ಬಿ.ಯ ಗ್ರೂಪ್ 'ಎ' ಕಾರ್ಯನಿರ್ವಾಹಕ ಅಧಿಕಾರಿಗಳ ಕೇಡರ್ ಪರಾಮರ್ಶೆಯ ಸಮಾಲೋಚನೆಗೆ ತನ್ನ ಅನುಮೋದನೆ ನೀಡಿದೆ.

 

ಆರೋಗ್ಯ ಮತ್ತು ವೈದ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯವಿಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಇಟಲಿ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ನವೆಂಬರ್ 29ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

 

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ಎಂ.ಓ.ಯು.ಗೆ. ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕ್ಯೂಬಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಡಿಸೆಂಬರ್ 6ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

 

ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ಹನ್ನೆರೆಡು ವಾರಗಳ ಕಾಲ ಅಂದರೆ 2018ರ ಏಪ್ರಿಲ್ 2ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ. ಅವಧಿ ವಿಸ್ತರಣೆಯು ಓಬಿಸಿಗಳ ಉಪ ವರ್ಗೀಕರಣ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಆಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ.

ವಡೋದರದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟದ ಅನುಮೋದನೆ

·    ತಂತ್ರಜ್ಞಾನ ಮತ್ತು ಮೂಲಸೌಕರ್ಯದ ವ್ಯಾಪಕ ಮೇಲ್ದರ್ಜೆ ಮೂಲಕ ಆಧುನೀಕರಣದ ಪಥದಲ್ಲಿ ಭಾರತೀಯ ರೈಲ್ವೆ.

·    ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ನೆರವಾಗುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಮತ್ತು ಕೌಶಲ ಭಾರತಕ್ಕೂ ಕೊಡುಗೆ.

·    ನಾವಿನ್ಯಪೂರ್ಣ ಉದ್ಯಮಶೀಲತೆಗೆ ವೇಗ ಮತ್ತು ನವೋದ್ಯಮ ಉಪಕ್ರಮಗಳಿಗೆ ಬೆಂಬಲ.

·    ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳ ಬಳಕೆ: ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡಲು ಇತ್ತೀಚಿನ ಶಿಕ್ಷಣ ಮತ್ತು ತಂತ್ರಜ್ಞಾನದ ಅನ್ವಯಿಕೆಗಳನ್ನು ಬಳಸಿಕೊಳ್ಳುವ ಅತ್ಯುತ್ತಮ-ದರ್ಜೆಯ ಸಂಸ್ಥೆ ಎಂದು ಪರಿಗಣಿಸಲಾಗಿದೆ.

·    ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲಪೂರ್ಣ ಮಾನವಶಕ್ತಿಯ ಮೂಲಕ ಸಾಗಣೆಯ ಕ್ಷೇತ್ರದಲ್ಲಿ ವಿಶ್ವದ ನಾಯಕನಾಗಿ ಹೊರ ಹೊಮ್ಮುತ್ತಿರುವ ಭಾರತ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತನ್ನ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವರ್ಧನೆಗಾಗಿ ವಡೋದರದಲ್ಲಿ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ (ಎನ್.ಆರ್.ಟಿ.ಯು) ಸ್ಥಾಪಿಸುವ  ರೈಲ್ವೆ ಸಚಿವಾಲಯದ ಪರಿವರ್ತನಾತ್ಮಕ ಉಪಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಈ ನಾವಿನ್ಯಪೂರ್ಣ ಕಲ್ಪನೆಗೆ ಪ್ರಧಾನಮಂತ್ರಿಯವರ ಪ್ರೇರಣೆ ಕಾರಣವಾಗಿದ್ದು, ನವ ಭಾರತಕ್ಕೆ ರೈಲ್ವೆ ಮತ್ತು ಸಾರಿಗೆ ವಲಯವನ್ನು ಪರಿವರ್ತಿಸುವ ವೇಗವರ್ಧಕವಾಗಿದೆ.

 

ಎಫ್.ಎಂ. III ನೇ ಹಂತದ III ನೇ ತಂಡದ ಇ- ಹರಾಜು ನಡೆಸಲು ಸಂಪುಟದ ಅನುಮೋದನೆ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 236 ನಗರಗಳಲ್ಲಿ ನಂತರದ ಬ್ಯಾಚ್ ಗಳಲ್ಲಿ 683 ವಾಹಿನಿಗಳ ಹರಾಜನ್ನು ನಡೆಸುವುದಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಅಧಿಕ ನಗರಗಳಲ್ಲಿ ಎಫ್.ಎಂ. ರೇಡಿಯೋದ ಹೊಸ/ಹೆಚ್ಚಿನ ಅನುಭವ ನೀಡುತ್ತದೆ.

2011ರಲ್ಲಿ  ಸಂಪುಟವು ನೀಡಿದ ಅನುಮೋದನೆಯಂತೆ ಬ್ಯಾಚ್ –I ಮತ್ತು ಬ್ಯಾಚ್ –IIರ ಖಾಸಗಿ ಎಫ್.ಎಂ. ರೇಡಿಯೋ ಕೇಂದ್ರಗಳನ್ನು ಎಫ್.ಎಂ. ನೀತಿಯ ಮಾರ್ಗಸೂಚಿಯಂತೆ 3ನೇ ಹಂತದಲ್ಲಿ ಅನುಕ್ರಮವಾಗಿ 2015 ಮತ್ತು 2016ರಲ್ಲಿ ನಡೆಸಲಾಗಿತ್ತು. 56 ನಗರಗಳಲ್ಲಿ 97 ವಾಹಿನಿಗಳನ್ನು ಬ್ಯಾಚ್ Iರಲ್ಲಿ ಮಾರಾಟ ಮಾಡಲಾಗಿತ್ತು. 66 ವಾಹಿನಿಗಳನ್ನು 48 ನಗರಗಳಲ್ಲಿ ಬ್ಯಾಚ್ II ರಲ್ಲಿ ವಿಕ್ರಯ ಮಾಡಲಾಗಿತ್ತು.
 

2017-18ರಿಂದ  2019-20ರವರೆಗಿನ ಅವಧಿಗಾಗಿಜವಳಿ ವಲಯದಲ್ಲಿನ ಸಾಮರ್ಥ್ಯ ವರ್ಧನೆಗಾಗಿ ಯೋಜನೆಗೆ ಸಂಪುಟದ ಅನುಮೋದನೆ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯು, ಸಂಘಟಿತ ವಲಯದ ನೂಲುವುದು ಮತ್ತು ನೇಯುವುದನ್ನು ಹೊರತುಪಡಿಸಿ ಸಂಪೂರ್ಣ ಜವಳಿ ವಲಯದ ಮೌಲ್ಯ ಸರಪಣಿ ವ್ಯಾಪ್ತಿಯಲ್ಲಿ  2017-18ರಿಂದ 2019-20ರ ಸಾಲಿನವರೆಗೆ 1300 ಕೋಟಿ ರೂಪಾಯಿಗಳ ವೆಚ್ಚದಲ್ಲಿ “ಜವಳಿ ವಲಯದಲ್ಲಿ ಸಾಮರ್ಥ್ಯ ವರ್ಧನೆ ಯೋಜನೆ’’(ಎಸ್.ಸಿ.ಬಿ.ಟಿ.ಎಸ್.) ಎಂಬ ಹೆಸರಿನ ಹೊಸ ಕೌಶಲ ಅಭಿವೃದ್ಧಿ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯು ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟು (ಎನ್ಎಸ್.ಕ್ಯು.ಎಫ್) ಕಂಪ್ಲೈಂಟ್ ತರಬೇತಿ ಕೋರ್ಸುಗಳನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂ.ಎಸ್.ಡಿ.ಇ) ಸಚಿವಾಲಯ ನಮೂದಿಸಿರುವ ಸಾಮಾನ್ಯ ನಿಯಮಗಳ ಪ್ರಕಾರ ಆರ್ಥಿಕ ನೆರವಿನ ನಿಯಮಗಳನ್ನು ಹೊಂದಿದೆ.

 

 



(Release ID: 1514949) Visitor Counter : 269


Read this release in: English , Urdu , Telugu