ಪ್ರಧಾನ ಮಂತ್ರಿಯವರ ಕಛೇರಿ

ಎಸ್.ಯು-30ಎಂ.ಕೆ.ಐ.ನಿಂದ ಬ್ರಹ್ಮೋಸ್ ಎ.ಎಲ್.ಸಿ.ಎಂ.ನ ಪ್ರಥಮ ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ

Posted On: 22 NOV 2017 7:29PM by PIB Bengaluru

ಎಸ್.ಯು-30ಎಂ.ಕೆ.ಐ.ನಿಂದ ಬ್ರಹ್ಮೋಸ್ ಎ.ಎಲ್.ಸಿ.ಎಂ.ನ ಪ್ರಥಮ ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಸ್.ಯು-30ಎಂ.ಕೆ.ಐ. ಯುದ್ಧ ವಿಮಾನದಿಂದ ಬ್ರಹ್ಮೋಸ್ ಎ.ಎಲ್.ಸಿ.ಎಂ. 

(ಬಾನಿನಿಂದ ಉಡಾಯಿಸಬಹುದಾದ ಕ್ರೂಸ್ ಕ್ಷಿಪಣಿ) ಪ್ರಥಮ ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಅಸಾಮಾನ್ಯ ಸಾಧನೆಯಲ್ಲಿ ತೊಡಗಿಸಿಕೊಂಡ ಎಲ್ಲರನ್ನೂ ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ.

“ಎಸ್.ಯು-30ಎಂ.ಕೆ.ಐ.ನಿಂದ ಬ್ರಹ್ಮೋಸ್ ಎ.ಎಲ್.ಸಿ.ಎಂ.ನ ಪ್ರಥಮ ಯಶಸ್ವೀ ಪರೀಕ್ಷಾರ್ಥ ಪ್ರಯೋಗದಿಂದ ಹರ್ಷಿತನಾಗಿದ್ದೇನೆ. ಈ ಗಮನಾರ್ಹ ಹೆಜ್ಜೆಯಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು”, ಎಂದು ಪ್ರಧಾನಿ ತಿಳಿಸಿದ್ದಾರೆ.
 

****


(Release ID: 1510578) Visitor Counter : 69


Read this release in: English , Gujarati , Tamil