Social Welfare
ಪಿಎಂ- ಎ.ಬಿ.ಹೆಚ್.ಐ.ಎಂ
ಸಾಂಕ್ರಾಮಿಕ ರೋಗಕ್ಕೆ ಸಿದ್ಧವಿರುವ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸುವುದು
Posted On:
24 OCT 2025 2:30PM
ಪ್ರಮುಖ ಮಾರ್ಗಸೂಚಿಗಳು
ಸಾಂಕ್ರಾಮಿಕ ಸಿದ್ಧತೆ ಮತ್ತು ತುರ್ತು ಪ್ರತಿಕ್ರಿಯೆಗಾಗಿ ಭಾರತದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಪಿಎಂ-ಎಬಿಹೆಚ್‌ಐಎಂ ಯೋಜನೆಯಡಿ ₹ 64,180 ಕೋಟಿಗಳನ್ನು (2021-26) ಹಂಚಿಕೆ ಮಾಡಲಾಗಿದೆ
ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾದ ಈ ಅಭಿಯಾನವು, ರಾಷ್ಟ್ರವ್ಯಾಪಿ ಆರೋಗ್ಯ ಮೂಲಸೌಕರ್ಯವನ್ನು, ಪ್ರಾಥಮಿಕ ಹಂತದಿಂದ ತೃತೀಯ ಹಂತದವರೆಗೆ ಮೇಲ್ದರ್ಜೆಗೇರಿಸುತ್ತದೆ. ಇದು ಆಯುಷ್ಮಾನ್ ಆರೋಗ್ಯ ಮಂದಿರಗಳು (AAMs), ಪ್ರಯೋಗಾಲಯಗಳು, ಕ್ರಿಟಿಕಲ್ ಕೇರ್ ಬ್ಲಾಕ್‌ಗಳು ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಒಳಗೊಂಡಿದೆ."
ಈ ಮಿಷನ್, ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಗಳನ್ನು ಸಾಧಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿ-3 (SDG-3) ರ ಉದ್ದೇಶಗಳೊಂದಿಗೆ ಹೊಂದಾಣಿಕೆ ಮಾಡಲು ಸಹಕಾರಿಯಾಗಿದೆ.
ಪರಿಚಯ
ಭವಿಷ್ಯದ ರೋಗಗಳ ಏಕಾಏಕಿ ಹರಡುವಿಕೆ, ತುರ್ತು ಪರಿಸ್ಥಿತಿಗಳು ಮತ್ತು ಬದಲಾಗುತ್ತಿರುವ ಸಾರ್ವಜನಿಕ ಆರೋಗ್ಯ ಪ್ರವೃತ್ತಿಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು, ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತಗಳಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯನ್ನು ಈ ಸಾಂಕ್ರಾಮಿಕವು ಉಲ್ಲೇಖಿಸಿತು.
|
ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ಒಪ್ಪಂದ
ಕೋವಿಡ್-19 ಗೆ ಪ್ರತಿಕ್ರಿಯೆಯಾಗಿ, ಮೂರು ವರ್ಷಗಳ ಮಾತುಕತೆಗಳ ನಂತರ, ಮೇ 2025 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ವಿಶ್ವದ ಮೊದಲ ಸಾಂಕ್ರಾಮಿಕ ರೋಗ ಒಪ್ಪಂದವನ್ನು ಅಳವಡಿಸಿಕೊಂಡವು. ಈ ಒಪ್ಪಂದವು ಸಾಂಕ್ರಾಮಿಕ ಪ್ರತಿಕ್ರಿಯೆಗಳನ್ನು ಹೆಚ್ಚು ಸಮಾನವಾಗಿಸಲು ಮತ್ತು ತಡೆಗಟ್ಟುವಿಕೆ, ಸಿದ್ಧತೆ ಹಾಗೂ ಪ್ರತಿಕ್ರಿಯೆಯಲ್ಲಿ ಜಾಗತಿಕ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ—ಇದು ಲಸಿಕೆಗಳು, ರೋಗ ಪತ್ತೆ ಸಾಧನಗಳು ಮತ್ತು ಚಿಕಿತ್ಸಾ ವಿಧಾನಗಳಿಗೆ ನ್ಯಾಯಯುತ ಪ್ರವೇಶವನ್ನು ಖಚಿತಪಡಿಸುತ್ತದೆ.
ಈ ನಿರ್ಣಯವು ಒಪ್ಪಂದದ ಅನುಷ್ಠಾನಕ್ಕೆ ಬೇಕಾದ ಹಂತಗಳನ್ನು ರೂಪಿಸುತ್ತದೆ, ಇದರಲ್ಲಿ ಅಂತರ-ಸರಕಾರಿ ಕಾರ್ಯನಿರತ ಗುಂಪಿನ (IGWG) ಮೂಲಕ ರೋಗಕಾರಕ ಪ್ರವೇಶ ಮತ್ತು ಪ್ರಯೋಜನ-ಹಂಚಿಕೆ (PABS) ವ್ಯವಸ್ಥೆಯನ್ನು ಸ್ಥಾಪಿಸಲು ಒಂದು ಅನುಬಂಧವನ್ನು ರಚಿಸುವುದು ಸೇರಿದೆ. ಒಮ್ಮೆ ವಿಶ್ವ ಆರೋಗ್ಯ ಅಸೆಂಬ್ಲಿಯಿಂದ ಅಂಗೀಕರಿಸಲ್ಪಟ್ಟು ಮತ್ತು 60 ದೇಶಗಳಿಂದ ಅನುಮೋದನೆಗೊಂಡರೆ, ಈ ಒಪ್ಪಂದವು ಜಾರಿಗೆ ಬರಲಿದೆ.
ಸದಸ್ಯ ರಾಷ್ಟ್ರಗಳು ಸಾಂಕ್ರಾಮಿಕ ತಡೆಗಟ್ಟುವಿಕೆ, ಸಿದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಸಮನ್ವಯ ಹಣಕಾಸು ಕಾರ್ಯವಿಧಾನ ಮತ್ತು ಸಾಂಕ್ರಾಮಿಕಗಳ ಸಮಯದಲ್ಲಿ ಆರೋಗ್ಯ ಉತ್ಪನ್ನಗಳಿಗೆ ಸಮಯಕ್ಕೆ ಸರಿಯಾದ ಮತ್ತು ಕೈಗೆಟುಕುವ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ಪೂರೈಕೆ ಸರಪಳಿ ಮತ್ತು ಸಾಮಗ್ರಿ ನಿರ್ವಹಣಾ ಜಾಲವನ್ನು ಸ್ಥಾಪಿಸಲು IGWG ಗೆ ನಿರ್ದೇಶನ ನೀಡಿವೆ. ಈ ಒಪ್ಪಂದವು, ಜಾಗತಿಕ ರೋಗಗಳ ಏಕಾಏಕಿ ಪತ್ತೆ ಮತ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಕಳೆದ ವರ್ಷ ತಿದ್ದುಪಡಿ ಮಾಡಿದ ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳಿಗೆ ಪೂರಕವಾಗಿದೆ.
|
ಅಕ್ಟೋಬರ್ 25, 2021 ರಂದು ಪ್ರಾರಂಭವಾದ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (PM-ABHIM), ಆರೋಗ್ಯ, ಸಂಶೋಧನೆ ಮತ್ತು ಕಣ್ಗಾವಲು ಕ್ಷೇತ್ರಗಳ ಮೂಲಸೌಕರ್ಯಗಳ ಮೇಲೆ ಗಮನ ಹರಿಸುತ್ತದೆ.
2021-26ರ ಅವಧಿಗೆ ₹ 64,180 ಕೋಟಿ ಹೂಡಿಕೆಯೊಂದಿಗೆ, ಈ ಯೋಜನೆಯು ಭಾರತದ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಗಳನ್ನು ಸಾಧಿಸುವತ್ತ ಕೆಲಸ ಮಾಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ:ಪ್ರಾಥಮಿಕ ಆರೋಗ್ಯ ಸಂಸ್ಥೆಗಳನ್ನು ವಿಸ್ತರಿಸಿ ಬಲಪಡಿಸುವುದು, ರೋಗ ಕಣ್ಗಾವಲು ವ್ಯವಸ್ಥೆಗಳನ್ನು ವಿಸ್ತರಿಸುವುದು, ಆರೋಗ್ಯ ಸಂಶೋಧನೆಗೆ ಬೆಂಬಲ ನೀಡುವುದು, ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಸಿದ್ಧತೆಯನ್ನು ನಿರ್ಮಿಸುವುದು.ಈ ಮಿಷನ್ ಅನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳು, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಕ್ರಿಟಿಕಲ್ ಕೇರ್ ಸೌಲಭ್ಯಗಳ ನಿರ್ಮಾಣದ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.
ನೀತಿ ಚೌಕಟ್ಟು
ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (PM-ABHIM), ರಾಷ್ಟ್ರೀಯ ಆರೋಗ್ಯ ನೀತಿ 2017ರ ಮೇಲೆ ಆಧಾರಿತವಾಗಿ ನಿರ್ಮಿಸಲ್ಪಟ್ಟಿದೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳೊಂದಿಗೆ ಒಮ್ಮುಖವಾಗಿ ಕಾರ್ಯನಿರ್ವಹಿಸುವ ಮೂಲಕ ಭಾರತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇವು ಭಾರತ ಸರ್ಕಾರದ ಪ್ರಮುಖ ಆರೋಗ್ಯ ಉಪಕ್ರಮಗಳಾಗಿವೆ. ಅವು ವಿಭಿನ್ನ ಕಾರ್ಯಕ್ರಮಗಳಾಗಿದ್ದರೂ, ಅವು ತಮ್ಮ ಗುರಿಗಳಲ್ಲಿ ನಿಕಟ ಸಂಬಂಧ ಹೊಂದಿವೆ ಮತ್ತು ಪರಸ್ಪರ ಪೂರಕವಾಗಿವೆ.
ನೀತಿ ಅಡಿಪಾಯ: ರಾಷ್ಟ್ರೀಯ ಆರೋಗ್ಯ ನೀತಿ 2017
ರಾಷ್ಟ್ರೀಯ ಆರೋಗ್ಯ ನೀತಿ 2017 ಸಮುದಾಯ ಆರೋಗ್ಯ ವ್ಯವಸ್ಥೆಗಳ ಮಹತ್ವವನ್ನು ಒತ್ತಿಹೇಳುತ್ತದೆ. ತರಬೇತಿ ಪಡೆದ ಪ್ರಥಮ ಸ್ಪಂದಕರು ಸ್ಥಳೀಯ ಸ್ವಯಂ-ಸರ್ಕಾರಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವುದನ್ನು ಇದು ಪ್ರೋತ್ಸಾಹಿಸುತ್ತದೆ. ಇದು ವಿಪತ್ತು ಸನ್ನದ್ಧತೆ ಮತ್ತು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಬಹಳ ನಿರ್ಣಾಯಕವಾಗಿದೆ.
2005 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಆರೋಗ್ಯ ಮಿಷನ್ (NHM), ಸಮುದಾಯ-ಮಾಲೀಕತ್ವದ ಮತ್ತು ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆಗಳನ್ನು ಸ್ಥಾಪಿಸುತ್ತದೆ. ಇದು ದುರ್ಬಲ ಜನಸಂಖ್ಯೆಗೆ ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ಬೆಲೆಯ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎನ್‌ಎಚ್‌ಎಂ, ತಾಯಿ ಮತ್ತು ಮಕ್ಕಳ ಆರೋಗ್ಯ, ರೋಗ ನಿರ್ಮೂಲನೆ ಮತ್ತು ಆರೋಗ್ಯ ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ದೇಶಾದ್ಯಂತ ಹೆಚ್ಚು ಸುಲಭವಾಗಿ ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಎನ್‌ಎಚ್‌ಎಂನ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಸಮುದಾಯ ಆಧಾರಿತ ಆರೋಗ್ಯ ಸೇವೆಗಳ ವಿತರಣೆಗೆ ಅಡಿಪಾಯ ಹಾಕಿದರೂ, 2017ರ ರಾಷ್ಟ್ರೀಯ ಆರೋಗ್ಯ ನೀತಿಯು ಈ ಆದ್ಯತೆಗಳನ್ನು ಇನ್ನಷ್ಟು ಬಲಪಡಿಸಿತು. ಈ ಮೂಲಕ, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಮತ್ತಷ್ಟು ವರ್ಧನೆಗೆ ವೇದಿಕೆ ಸಿದ್ಧವಾಯಿತು. ಈ ಅಡಿಪಾಯದ ಮೇಲೆ ಈಗ ಪಿಎಂ-ಎಬಿಎಚ್ಐಎಂ ಯೋಜನೆಯು ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿದೆ.
ಆಯುಷ್ಮಾನ್ ಭಾರತ್ ಯೋಜನೆ
2018 ರಲ್ಲಿ ಪ್ರಾರಂಭವಾದ ಆಯುಷ್ಮಾನ್ ಭಾರತ್ ಯೋಜನೆಯು, ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಡಿಪಾಯದ ಮೇಲೆ ನಿರ್ಮಾಣಗೊಂಡು, ಕೆಳಗಿನ ನಾಲ್ಕು ಪ್ರಮುಖ ಸ್ತಂಭಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳ ವಿತರಣೆಯನ್ನು ಬಲಪಡಿಸುತ್ತದೆ:
ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ: (ಆರ್ಥಿಕ ರಕ್ಷಣೆ ಒದಗಿಸುವ ವಿಮೆ ಆಧಾರಿತ ಯೋಜನೆ)
ಆಯುಷ್ಮಾನ್ ಆರೋಗ್ಯ ಮಂದಿರಗಳು: (ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು)
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್: (ಡಿಜಿಟಲ್ ಆರೋಗ್ಯ ಗುರುತಿನ ರಚನೆ)
ಪಿಎಂ–ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್: (ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ)

ಆಯುಷ್ಮಾನ್ ಭಾರತ್ ಯೋಜನೆಯು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಈ ಮೂರೂ ಹಂತಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಸುಲಭವಾಗಿ ಲಭ್ಯವಾಗಿಸುತ್ತದೆ.
ಪಿಎಂ-ಎಬಿಎಚ್ಐಎಂ: ಪ್ರಮುಖ ಉದ್ದೇಶಗಳು ಮತ್ತು ಘಟಕಾಂಶಗಳು
2021 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ–ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್, ಭಾರತದ ಅತಿದೊಡ್ಡ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದು ಒಂದು ದೃಢವಾದ, ಸುಲಭವಾಗಿ ಲಭ್ಯವಿರುವ ಮತ್ತು ಸ್ವಾವಲಂಬಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಈ ಮಿಷನ್, ತಳಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರತಿ ಜಿಲ್ಲೆಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳ ಸ್ಥಾಪನೆ ಮತ್ತು ಉನ್ನತೀಕರಣ, ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳು, ಸಮಗ್ರ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ಗಳ ನಿರ್ಮಾಣದ ಮೂಲಕ ಇದನ್ನು ಸಾಧಿಸುತ್ತದೆ. ಈ ಸೌಲಭ್ಯಗಳು ಸೇವಾ ವಿತರಣೆಯಲ್ಲಿರುವ ಅಂತರವನ್ನು ಕಡಿಮೆ ಮಾಡಲು ಮತ್ತು ಸಮುದಾಯಗಳಿಗೆ ಹತ್ತಿರದಲ್ಲಿಯೇ ಸಮಗ್ರ ಪ್ರಾಥಮಿಕ, ದ್ವಿತೀಯ ಮತ್ತು ತೀವ್ರ ನಿಗಾ (critical care) ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಗುರಿಯಿಡುತ್ತವೆ.
ಪಿಎಂ-ಎಬಿಎಚ್‌ಐಎಂ ಸಹ ಸಾಂಕ್ರಾಮಿಕ ಮತ್ತು ವಿಪತ್ತು ಸಿದ್ಧತೆಗೆ ಆದ್ಯತೆ ನೀಡುತ್ತದೆ. ಇದು ರೋಗಗಳ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು, ತನಿಖೆ ಮಾಡಲು ಮತ್ತು ತಡೆಯಲು ಬ್ಲಾಕ್, ಜಿಲ್ಲೆ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಪ್ರಯೋಗಾಲಯಗಳನ್ನು ಸಂಯೋಜಿಸುವ ಒಂದು ಮಾಹಿತಿ ತಂತ್ರಜ್ಞಾನ ಆಧಾರಿತ, ನೈಜ-ಸಮಯದ ರೋಗ ಕಣ್ಗಾವಲು ಜಾಲವನ್ನು ವಿಸ್ತರಿಸುತ್ತದೆ.
ಹೆಚ್ಚುವರಿಯಾಗಿ, ಈ ಮಿಷನ್ 'ಒಂದು ಆರೋಗ್ಯ ವಿಧಾನವನ್ನು' ಉತ್ತೇಜಿಸುವ ಮೂಲಕ ಆರೋಗ್ಯ ಸಂಶೋಧನೆ ಮತ್ತು ಆವಿಷ್ಕಾರವನ್ನು ಬೆಂಬಲಿಸುತ್ತದೆ. ಈ ವಿಧಾನವು ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯದ ಪರಸ್ಪರ ಅವಲಂಬನೆಯನ್ನು ಗುರುತಿಸುತ್ತದೆ, ವಿಶೇಷವಾಗಿ ಕೋವಿಡ್-19 ಮತ್ತು ಇತರ ಸಾಂಕ್ರಾಮಿಕ ರೋಗಗಳ ಮೇಲೆ ಗಮನಹರಿಸುತ್ತದೆ.
ಈ ಮಿಷನ್ ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿನ ಪ್ರಮುಖ ಅಂತರಗಳನ್ನು ತುಂಬುವ ಗುರಿಯನ್ನು ಹೊಂದಿದೆ. ಇದು ಕೊಳಚೆ ಪ್ರದೇಶಗಳಲ್ಲಿ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ರಚಿಸುವುದು ಮತ್ತು ಉಪ-ಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಪರಿವರ್ತಿಸುವುದರ ಮೂಲಕ ಸಾಧ್ಯವಾಗುತ್ತದೆ.
ಸಮಗ್ರವಾಗಿ, ಪಿಎಂ-ಎಬಿಎಚ್ಐಎಂ ಯೋಜನೆಯು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಾಗೂ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುವ ದೃಢವಾದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

ಸಂವಹನೀಯ ರೋಗಗಳ ಸಾಂಕ್ರಾಮಿಕಗಳನ್ನು 2030 ರೊಳಗೆ ಕೊನೆಗೊಳಿಸುವುದು, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವುದು ಮತ್ತು ಎಲ್ಲರಿಗೂ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಔಷಧಿಗಳು ಮತ್ತು ಲಸಿಕೆಗಳನ್ನು ಒದಗಿಸುವುದು—ಇವು ಸುಸ್ಥಿರ ಅಭಿವೃದ್ಧಿ ಗುರಿ – 3 ರ ಕೆಲವು ಉದ್ದೇಶಗಳಾಗಿವೆ.

ಪಿಎಂ-ಎ.ಬಿ.ಎಚ್.ಐ.ಎಂ: ಪ್ರಮುಖ ಉಪಕ್ರಮಗಳು
ಪ್ರಧಾನ ಮಂತ್ರಿ–ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ತನ್ನ ಕೇಂದ್ರ ಪ್ರಾಯೋಜಿತ ಯೋಜನೆ ಘಟಕದ ಅಡಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಈ ಘಟಕವು 2021–22 ನೇ ಆರ್ಥಿಕ ವರ್ಷದಿಂದ 2025–26 ನೇ ಆರ್ಥಿಕ ವರ್ಷದ ಅವಧಿಯಲ್ಲಿ, ಎಲ್ಲಾ ಹಂತಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವತ್ತ ಗಮನ ಹರಿಸುತ್ತದೆ.
ಇತ್ತೀಚಿನ ದತ್ತಾಂಶಗಳ ಪ್ರಕಾರ, ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಉನ್ನತೀಕರಿಸಲು 17,788 ಕಟ್ಟಡರಹಿತ ಉಪ-ಆರೋಗ್ಯ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ, ಕೊಳಚೆ ಪ್ರದೇಶಗಳು ಮತ್ತು ಸೂಕ್ತ ಸೇವೆ ಇಲ್ಲದ ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ವಿಸ್ತರಿಸಲು 11,024 ನಗರ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗುತ್ತಿದೆ. 3,382 ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಬ್ಲಾಕ್ ಮಟ್ಟದಲ್ಲಿ ಆರೋಗ್ಯ ಆಡಳಿತ ಮತ್ತು ಸೇವಾ ವಿತರಣೆಯನ್ನು ಬಲಪಡಿಸುತ್ತದೆ. ರೋಗನಿರ್ಣಯ ಮತ್ತು ಕಣ್ಗಾವಲು ಸಾಮರ್ಥ್ಯಗಳನ್ನು ಹೆಚ್ಚಿಸಲು, ಪ್ರತಿ ಜಿಲ್ಲೆಯಲ್ಲಿ ಒಂದರಂತೆ 730 ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ತೃತೀಯ ಹಂತದ ಆರೈಕೆಯನ್ನು ಬಲಪಡಿಸಲು, ಐದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ 602 ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ಗಳನ್ನು ಸ್ಥಾಪಿಸಲಾಗುತ್ತಿದೆ.
ಆಡಳಿತಾತ್ಮಕ ಅನುಮೋದನೆಗಳ ಸಾರಾಂಶ
ಒಟ್ಟಾರೆಯಾಗಿ, ಈ ಉಪಕ್ರಮಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹32,928.82 ಕೋಟಿ ಮೌಲ್ಯದ ಆಡಳಿತಾತ್ಮಕ ಅನುಮೋದನೆಗಳನ್ನು ನೀಡಲಾಗಿದೆ.
ಈ ಅನುಮೋದನೆಗಳು ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿವೆ:9,519 ಆಯುಷ್ಮಾನ್ ಆರೋಗ್ಯ ಮಂದಿರಗಳು, 5,456 ನಗರ ಆಯುಷ್ಮಾನ್ ಆರೋಗ್ಯ ಮಂದಿರಗಳು, 2,151 ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳು, 744 ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು,621 ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ಗಳು ಈ ಎಲ್ಲಾ ಪ್ರಯತ್ನಗಳು ಒಟ್ಟಾಗಿ, ದೇಶದಾದ್ಯಂತ ಸಮಯೋಚಿತ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಲು ಸಮರ್ಥವಾಗಿರುವ ದೃಢವಾದ ವಿಕೇಂದ್ರೀಕೃತ ಮತ್ತು ಸುಲಭವಾಗಿ ಲಭ್ಯವಿರುವ ಸಾರ್ವಜನಿಕ ಆರೋಗ್ಯ ಜಾಲವನ್ನು ನಿರ್ಮಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ಸಂಪನ್ಮೂಲ ಹಂಚಿಕೆ
ಪಿಎಂ-ಎಬಿಎಚ್‌ಐಎಂ: ಆರ್ಥಿಕ ವರ್ಷವಾರು ಸಂಪನ್ಮೂಲ ಹಂಚಿಕೆ (ಕೋಟಿ ರೂ.ಗಳಲ್ಲಿ)
|
ಘಟಕದ ಪ್ರಕಾರ
|
2021-22
|
2022-23
|
2023-24
|
2024-25
|
2025-26
|
ಒಟ್ಟು
|
|
ಕೇಂದ್ರ ಪ್ರಾಯೋಜಿತ ಯೋಜನೆ (CSS) - ಕೇಂದ್ರ ಪಾಲು
|
2412.91
|
3942.80
|
3361.67
|
4495.12
|
7914.89
|
22127.39
|
|
ಕೇಂದ್ರ ಪ್ರಾಯೋಜಿತ ಯೋಜನೆ (CSS) - ರಾಜ್ಯ ಪಾಲು
|
1388.16
|
2276.34
|
1962.40
|
2655.64
|
4522.42
|
12804.95
|
|
15ನೇ ಹಣಕಾಸು ಆಯೋಗದ ಪಾಲು
|
2026.98
|
2965.34
|
4000.04
|
4743.88
|
5536.19
|
19272.43
|
|
CSS ಘಟಕಗಳ ಉಪ-ಒಟ್ಟು
|
5828.04
|
9184.48
|
9324.11
|
11894.64
|
17973.50
|
54204.78
|
|
ಕೇಂದ್ರೀಯ ವಲಯದ ಘಟಕಗಳು
|
3327.92
|
1280.61
|
1691.69
|
1656.65
|
1382.89
|
9339.78
|
|
ಒಟ್ಟು ಹಂಚಿಕೆ (Grand Total)
|
9155.97
|
10465.09
|
11014.80
|
13551.30
|
19356.40
|
63544.56
|
|
ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಹಾಗೂ ಯೋಜನಾ ನಿರ್ವಹಣಾ ಸಲಹಾ ಸಂಸ್ಥೆಗೆ ಯೋಜನೆಯ ಒಟ್ಟು ಮೊತ್ತದ 1% ನ್ನು ಸೇರಿಸಿದ ಅಂತಿಮ ಮೊತ್ತ
|
64180
|
ಉಪಸಂಹಾರ
ಪ್ರಾರಂಭವಾದ ನಾಲ್ಕು ವರ್ಷಗಳ ನಂತರ, ಪಿಎಂ-ಎಬಿಎಚ್ಐಎಂ ಯೋಜನೆಯು ₹ 64,180 ಕೋಟಿ ಹೂಡಿಕೆಯೊಂದಿಗೆ ಭಾರತದ ಆರೋಗ್ಯ ಮೂಲಸೌಕರ್ಯವನ್ನು ಪರಿವರ್ತಿಸಿದೆ. ಇದು ಸಾಂಕ್ರಾಮಿಕ ಸನ್ನದ್ಧತೆ ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಬಲಪಡಿಸಿದೆ. ಪ್ರಾಥಮಿಕ ಹಂತದಿಂದ ತೃತೀಯ ಹಂತದವರೆಗಿನ ಆರೋಗ್ಯ ಸೌಲಭ್ಯಗಳನ್ನು ಉನ್ನತೀಕರಿಸುವ ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಹೆಚ್ಚಿಸುವುದರ ಮೂಲಕ, ಈ ಯೋಜನೆಯು ಹೆಚ್ಚು ದೃಢವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿದೆ. ಭಾರತವು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ-3 (SDG-3) ರ ಗುರಿಗಳತ್ತ ಸಾಗುತ್ತಿರುವಾಗ, ಪಿಎಂ-ಎಬಿಎಚ್‌ಐಎಂ ನ ಸಮುದಾಯ-ಕೇಂದ್ರಿತ ವಿಧಾನವು - ಇದು ಆಯುಷ್ಮಾನ್ ಭಾರತ್ ಉಪಕ್ರಮಗಳೊಂದಿಗೆ ಸಂಯೋಜಿತವಾಗಿದೆ ಮತ್ತು ಜಾಗತಿಕ ಆರೋಗ್ಯ ಚೌಕಟ್ಟುಗಳೊಂದಿಗೆ ಜೋಡಿಸಲ್ಪಟ್ಟಿದೆ— ಬಿಕ್ಕಟ್ಟಿನ ಸಮಯದಲ್ಲಿ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ರಾಷ್ಟ್ರವನ್ನು ಉತ್ತಮವಾಗಿ ಸಿದ್ಧಪಡಿಸುತ್ತದೆ.
References
Press Information Bureau:
Ministry of Health and Family Welfare:
Others:
Click here to see PDF
*****
(Backgrounder ID: 155703)
Visitor Counter : 4
Provide suggestions / comments