• Skip to Content
  • Sitemap
  • Advance Search
Economy

ರಫ್ತುಗಳ ಏರಿಕೆ: ಜಾಗತಿಕ ವೇದಿಕೆಯಲ್ಲಿ ಭಾರತದ ದೊಡ್ಡ ಹೆಜ್ಜೆ

ಏಪ್ರಿಲ್-ಆಗಸ್ಟ್‌ 2024ಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್‌ 2025ರಲ್ಲಿ ರಫ್ತುಗಳು 5.19% ರಷ್ಟು ಹೆಚ್ಚಳ ಕಂಡಿದ್ದು, ಇದು ವ್ಯಾಪಾರದ ವಿಶ್ವಾಸವನ್ನು ಹೆಚ್ಚಿಸಿದೆ

Posted On: 07 OCT 2025 1:10PM

ಪ್ರಮುಖ ಮಾರ್ಗಸೂಚಿಗಳು

  • 2024ರ ಆಗಸ್ಟ್‌ಗೆ  ಹೋಲಿಸಿದಲ್ಲಿ 2025ರ ಆಗಸ್ಟ್‌ನಲ್ಲಿ ಭಾರತದ ರಫ್ತುಗಳು ಶೇ.4.77ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ.
  • 2024 ಏಪ್ರಿಲ್- ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ 2025 ಏಪ್ರಿಲ್- ಆಗಸ್ಟ್‌ ತಿಂಗಳಲ್ಲಿ ರಫ್ತು 5.19ರಷ್ಟು ಅಂದರೆ 346.10 ಶತಕೋಟಿ ಡಾಲರ್ಗಳಿಗೆ ಏರಿದೆ.
  • 2025 ಏಪ್ರಿಲ್- ಆಗಸ್ಟ್‌ನಲ್ಲಿ ಸರಕುಗಳ ರಫ್ತು ಶೇ.2. 31ರಷ್ಟು ಮತ್ತು ಸೇವೆಗಳ ರಫ್ತು ಶೇ.8.65ರಷ್ಟು ಏರಿತು.
  • ಏಪ್ರಿಲ್- ಆಗಸ್ಟ್‌ 2024ಕ್ಕೆ ಹೋಲಿಸಿದರೆ ಏಪ್ರಿಲ್- ಆಗಸ್ಟ್‌ 2025ರಲ್ಲಿ ಹಾಂಗ್ ಕಾಂಗ್, ಚೀನಾ, ಯು.ಎಸ್.., ಜರ್ಮನಿ, ಕೊರಿಯಾ, ಯು..., ನೇಪಾಳ, ಬೆಲ್ಜಿಯಂ, ಬಾಂಗ್ಲಾದೇಶ ಮತ್ತು ಬ್ರೆಜಿಲ್ಗಳಿಗೆ ಭಾರತದ ರಫ್ತುಗಳು ಏರಿಕೆ ಕಂಡಿವೆ.

ಪರಿಚಯ

ಭಾರತದ ರಫ್ತುಗಳ ಈ ಪಯಣವು ಜಾಗತಿಕ ಏಕೀಕರಣದೊಂದಿಗೆ ಆದ ನಾವೀನ್ಯತೆಯ ಫಲಿತಾಂಶವಾಗಿದೆ. ರೇಷ್ಮೆ ಮಾರ್ಗದಿಂದ ಪ್ರಾರಂಭಿಸಿ ಉದಾರೀಕರಣದ ನಂತರದ ಉತ್ಕರ್ಷದವರೆಗೆ, ಭಾರತದ ರಫ್ತುಗಳು, ಮಸಾಲೆ ಪದಾರ್ಥಗಳು ಮತ್ತು ಜವಳಿಗಳಿಂದ ತಂತ್ರಜ್ಞಾನ, ಔಷಧೀಯ ಮತ್ತು ಎಂಜಿನಿಯರಿಂಗ್ ಸರಕುಗಳವರೆಗೆ ವೈವಿಧ್ಯಮಯವಾಗಿವೆ. ವಿಶ್ವ ಬ್ಯಾಂಕ್‌ನ ದತ್ತಾಂಶಗಳ ಪ್ರಕಾರ, ವಿಶ್ವದ ರಫ್ತು ಬೆಳವಣಿಗೆಯು ಶೇ.2.5 ರಷ್ಟು ದರವಲ್ಲಿದ್ದರೆ, ಭಾರತದ ರಫ್ತು ಬೆಳವಣಿಗೆಯು ಶೇ.7.1 (2024) ರಷ್ಟಿದೆ. ಇದು ಜಾಗತಿಕ ಬೆಳವಣಿಗೆಯನ್ನು ಮೀರಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಗತಿಯನ್ನು ಸೂಚಿಸುತ್ತದೆ. ಭಾರತದ ಜಿಡಿಪಿಯಲ್ಲಿ ರಫ್ತುಗಳ ಪಾಲು 2015 ರಲ್ಲಿ ಶೇ.19.8 ರಷ್ಟಿದ್ದರೆ, 2024 ರಲ್ಲಿ ಅದು ಶೇ. 21.2 ಕ್ಕೆ ಏರಿದೆ. ಇದು ಭಾರತೀಯ ಆರ್ಥಿಕತೆಯಲ್ಲಿ ರಫ್ತುಗಳ ಹೆಚ್ಚುತ್ತಿರುವ ಮಹತ್ವವನ್ನು ಸೂಚಿಸುತ್ತದೆ (ವಿಶ್ವ ಬ್ಯಾಂಕ್). 2025-26 ರ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿಯೂ ಭಾರತದ ವ್ಯಾಪಾರ ನಿರ್ವಹಣೆಯು ತನ್ನ ಬೆಳವಣಿಗೆಯ ಪ್ರವೃತ್ತಿಯನ್ನು ಮುಂದುವರೆಸಿದೆ.

A graph of a graph showing the growth of exporting goodsDescription automatically generated

  • ಏಪ್ರಿಲ್- ಆಗಸ್ಟ್‌ 2024 ಕ್ಕೆ ಹೋಲಿಸಿದರೆ, ಏಪ್ರಿಲ್- ಆಗಸ್ಟ್‌ 2025 ರಲ್ಲಿ ಒಟ್ಟು ರಫ್ತುಗಳಲ್ಲಿ (ಸರಕು ಮತ್ತು ಸೇವಾ ರಫ್ತುಗಳು ಸೇರಿ) ಶೇ. 5.19 ರಷ್ಟು ಬೆಳವಣಿಗೆ
  • ಏಪ್ರಿಲ್- ಆಗಸ್ಟ್‌ 2024 ರಲ್ಲಿ ಅಮೆರಿಕ ಡಾಲರ್‌ (USD)  ಶೇ. 329.03 ಶತಕೋಟಿ ಇದ್ದ ಒಟ್ಟು ರಫ್ತು ಮೌಲ್ಯವು, ಏಪ್ರಿಲ್- ಆಗಸ್ಟ್‌ 2025 ರ ಅವಧಿಯಲ್ಲಿ ಅಮೆರಿಕ ಡಾಲರ್‌  (USD) 346.10 ಶತಕೋಟಿ ತಲುಪಿದೆ.
  • 2025 ರ ಅವಧಿಯಲ್ಲಿ, ಸರಕು ರಫ್ತುಗಳ ಪಾಲು ಶೇ. 53.09 ರಷ್ಟು ಇದೆ.
  • ಏಪ್ರಿಲ್-ಆಗಷ್ಟ್ 2025ರ ಅವಧಿಯಲ್ಲಿ, ಸೇವಾ ರಫ್ತುಗಳ ಪಾಲುಶೇ. 46.91 ರಷ್ಟು ಇದೆ.
  • ಆಗಸ್ಟ್‌ 2024 ಹೋಲಿಸಿದರೆ, ಆಗಸ್ಟ್‌ 2025 ರಲ್ಲಿ ರಫ್ತುಗಳಲ್ಲಿ ಶೇ. 4.77 ರಷ್ಟು ಬೆಳವಣಿಗೆ ಕಂಡುಬಂದಿದೆ.

ಈ ಬೆಳವಣಿಗೆಯ ಪಥವನ್ನು ಗುರುತಿಸಿರುವ ಸರ್ಕಾರವು, ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ USD 1 ಟ್ರಿಲಿಯನ್ ರಫ್ತು ಗುರಿಯನ್ನು ನಿಗದಿಪಡಿಸಿದೆ, ಇದರಲ್ಲಿ ಮೊದಲ ಐದು ತಿಂಗಳಲ್ಲಿ ಈಗಾಗಲೇ ಶೇ. 34.61 ರಷ್ಟು ಸಾಧಿಸಲಾಗಿದೆ.

ಸರ್ಕಾರದ ಸುಧಾರಣೆಗಳು, ಡಿಜಿಟಲ್ ಪರಿವರ್ತನೆ ಮತ್ತು ಉದ್ಯಮಶೀಲತಾ ಮನೋಭಾವದಿಂದ ಉತ್ತೇಜಿಸಲ್ಪಟ್ಟಿರುವ ಭಾರತದ ರಫ್ತು ವಲಯವು ಹೊಸ ಸಾಧ್ಯತೆಗಳ ಅಂಚಿನಲ್ಲಿ ಇದ್ದು, ಇದು ವಿಶ್ವದ ಗಮನ ಸೆಳೆಯುತ್ತಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಆತ್ಮನಿರ್ಭರ ಭಾರತದ ಕಥೆಯನ್ನು ಮರುರೂಪಿಸುತ್ತಿದೆ.

ಸರಕು ರಫ್ತು ಬೆಳವಣಿಗೆಯ ಹಿಂದಿನ ಪ್ರಮುಖ ಚಾಲಕಶಕ್ತಿಗಳ ಅನಾವರಣ

A graph of a marketDescription automatically generated with medium confidence

2025 ರಲ್ಲಿ ಭಾರತದ ಸರಕು ರಫ್ತು ಏರುಗತಿಯಲ್ಲಿದೆ. ಏಪ್ರಿಲ್- ಆಗಸ್ಟ್‌ 2024ರ ಅವಧಿಯಲ್ಲಿ USD 179.60 ಶತಕೋಟಿ ಇದ್ದ ರಫ್ತು, ಏಪ್ರಿಲ್- ಆಗಸ್ಟ್‌ 2025 ರಲ್ಲಿ USD 183.74 ಶತಕೋಟಿಗೆ ತಲುಪುವ ಮೂಲಕ ಶೇ. 2.31 ರಷ್ಟು ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ.

ಆದಾಗ್ಯೂ, ಈ ಐದು ತಿಂಗಳುಗಳ ಅವಧಿಯಲ್ಲಿ, ಕೇವಲ ಆಗಸ್ಟ್‌ 2025 ರಲ್ಲೇ ಒಟ್ಟು ಸರಕು ರಫ್ತಿನಲ್ಲಿ ಶೇ. 19 ರಷ್ಟು ನಡೆದಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 6.65 ರಷ್ಟು ಏರಿಕೆಯಾಗಿದೆ.

ಕಳೆದ ವರ್ಷದ ಏಪ್ರಿಲ್- ಆಗಸ್ಟ್‌ ಅವಧಿಯ ಭಾರತದ ಪೆಟ್ರೋಲಿಯಂರಹಿತ ಮತ್ತು ರತ್ನ ಹಾಗೂ ಆಭರಣ ರಹಿತ ರಫ್ತುಗಳು USD 136.13 ಶತಕೋಟಿಯಿಂದ ಏಪ್ರಿಲ್- ಆಗಸ್ಟ್‌ 2025  ರಲ್ಲಿ USD 146.70 ಶತಕೋಟಿಗೆ ಏರಿಕೆಯಾಗಿದ್ದು, ಶೇ. 7.76 ರಷ್ಟು ಪ್ರಬಲ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧೀಯ ವಸ್ತುಗಳು, ರಾಸಾಯನಿಕಗಳು ಮತ್ತು ಇತರೆಗಳಿಂದ ಪ್ರೇರಿತವಾದ ಭಾರತದ ರಫ್ತು ಸಾಮರ್ಥ್ಯವನ್ನು ಈ ವರ್ಗವು ಉಲ್ಲೇಖಿಸುತ್ತದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಎಲೆಕ್ಟ್ರಾನಿಕ್ ಸರಕುಗಳು, ಚಹಾ, ಮೈಕಾ ಮತ್ತು ಕಲ್ಲಿದ್ದಲು, ಜವಳಿ ಮುಂತಾದ ಸರಕುಗಳು ಏಪ್ರಿಲ್- ಆಗಸ್ಟ್‌ 2025 ರಲ್ಲಿ ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿವೆ.

ಎಲೆಕ್ಟ್ರಾನಿಕ್ ಸರಕುಗಳು

ಕಳೆದ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್- ಆಗಸ್ಟ್‌ 2025 ರಲ್ಲಿ ಮೈಕಾ, ಕಲ್ಲಿದ್ದಲು ಮತ್ತು ಇತರ ಅದಿರುಗಳು, ಸಂಸ್ಕರಿಸಿದ ಖನಿಜಗಳು ಸೇರಿದಂತೆ ಖನಿಜಗಳ ರಫ್ತು ಶೇ. 16.60 ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್‌-2025 ರಲ್ಲಿಯೂ ಸಹ ಈ ಸರಕುಗಳಿಗೆ ಶೇ. 24.57 ರಷ್ಟು ಬೆಳವಣಿಗೆಯೊಂದಿಗೆ ಬೇಡಿಕೆ ಹೆಚ್ಚಿರುವುದು ಕಂಡುಬಂದಿದೆ. ಭಾರತವು ಸಂಸ್ಕರಿಸಿದ ಖನಿಜಗಳು ಮತ್ತು ಅವುಗಳ ಉಪ-ಉತ್ಪನ್ನಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಚೀನಾ, ಯುಎಸ್‌ಎ (ಅಮೇರಿಕಾ), ಯುಕೆ, ಓಮನ್ ಮತ್ತು ಬಾಂಗ್ಲಾದೇಶ ಸೇರಿವೆ.

ಇತರ ಧಾನ್ಯಗಳು

ಭಾರತದ ಇತರೆ ಧಾನ್ಯಗಳ ರಫ್ತು ಏಪ್ರಿಲ್–ಆಗಸ್ಟ್ 2024ಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025 ರಲ್ಲಿ ಶೇ. 21.95 ರಷ್ಟು ಹೆಚ್ಚಾಗಿದೆ. ಇದು ಗೋಧಿ, ಅಕ್ಕಿ, ಮೆಕ್ಕೆಜೋಳ ಮತ್ತು ಸಿರಿಧಾನ್ಯಗಳನ್ನು ಹೊರತುಪಡಿಸಿ ರೈ, ಬಾರ್ಲಿ , ಓಟ್ಸ್, ಫೋನಿಯೊ, ಕ್ವಿನೋವಾ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಪೌಷ್ಟಿಕಾಂಶ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಜಾಗತಿಕವಾಗಿ ಇತರೆ ಧಾನ್ಯಗಳಿಗೆ ಬೇಡಿಕೆ ಹೆಚ್ಚಲು ಒಂದು ಕಾರಣವಾಗಿದೆ. ಭಾರತದ ಸಮೃದ್ಧ ಕೃಷಿ ಪರಂಪರೆಯೊಂದಿಗೆ, ಈ ಧಾನ್ಯಗಳು ಕೃಷಿ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ, ಆಹಾರ ಭದ್ರತೆಯನ್ನು ಬಲಪಡಿಸುತ್ತವೆ ಮತ್ತು ಹೊಸ ರಫ್ತು ಅವಕಾಶಗಳನ್ನು ಒದಗಿಸುತ್ತವೆ. ನೇಪಾಳ, ಶ್ರೀಲಂಕಾ, ಯುಎಇ, ಬಾಂಗ್ಲಾದೇಶ ಮತ್ತು ಭೂತಾನ್ ಪ್ರಮುಖ ರಫ್ತು ತಾಣಗಳಾಗಿವೆ.

ಮಾಂಸ, ಡೈರಿ ಮತ್ತು ಕೋಳಿ ಉತ್ಪನ್ನಗಳು

ಕಳೆದ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025 ರಲ್ಲಿ ಮಾಂಸ, ಡೈರಿ ಮತ್ತು ಕೋಳಿ ಉತ್ಪನ್ನಗಳುಶೇ. 20.29 ರಷ್ಟು ಬೆಳವಣಿಗೆಯನ್ನು ಕಂಡಿವೆ. ಆಗಸ್ಟ್ 2024 ಕ್ಕೆ ಹೋಲಿಸಿದರೆ ಆಗಸ್ಟ್ 2025 ರ ಅವಧಿಯಲ್ಲಿಯೂ ಸಹ ಶೇ. 17.69 ರಷ್ಟು ಏರಿಕೆ ಕಂಡುಬಂದಿದೆ. ವಿಯೆಟ್ನಾಂ, ಯುಎಇ, ಈಜಿಪ್ಟ್, ಮಲೇಷ್ಯಾ ಮತ್ತು ಸೌದಿ ಅರೇಬಿಯಾ ಭಾರತದ ಮಾಂಸ, ಡೈರಿ ಮತ್ತು ಕೋಳಿ ಉತ್ಪನ್ನಗಳ ಆಮದುದಾರ ರಾಷ್ಟ್ರಗಳಲ್ಲಿ ಸೇರಿವೆ.

ವಿವಿಧ ಸರ್ಕಾರಿ ಉಪಕ್ರಮಗಳಿಂದಾಗಿ ರಫ್ತುಗಳ ಹೆಚ್ಚಳಕ್ಕೆ ವೇಗ ದೊರೆತಿದೆ. ಉದಾಹರಣೆಗೆ, ಕೃಷಿ ರಫ್ತು ನೀತಿ ಮಾರುಕಟ್ಟೆ ಪ್ರವೇಶಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ನೀಡುತ್ತದೆ ಮತ್ತು ರಫ್ತು ಅವಕಾಶಗಳನ್ನು ಬಳಸಿಕೊಳ್ಳಲು ರೈತರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು ಉತ್ತೇಜನ ಯೋಜನೆಯು ರಫ್ತು ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟದ ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿಯಲ್ಲಿ ವ್ಯವಹಾರಗಳಿಗೆ ನೆರವು ನೀಡುತ್ತದೆ.

ಚಹಾ

ಕಳೆದ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025 ರಲ್ಲಿ ಚಹಾ ರಫ್ತುಶೇ.18.20 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆಗಸ್ಟ್ 2024 ಕ್ಕೆ ಹೋಲಿಸಿದರೆ ಆಗಸ್ಟ್ 2025 ರಲ್ಲಿ ಚಹಾ ರಫ್ತು ಶೇ. 20.50 ರಷ್ಟು ಏರಿಕೆ ಕಂಡಿದ್ದು, ಒಟ್ಟಾರೆ ಚಹಾ ರಫ್ತು ಬೆಳವಣಿಗೆಗೆ ಮತ್ತಷ್ಟು ವೇಗ ನೀಡಿದೆ.

ಜಾಗತಿಕ ಚಹಾ ಉದ್ಯಮದಲ್ಲಿ ಭಾರತವು ಒಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು, 2024 ರಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಚಹಾ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಅಸ್ಸಾಂ, ಡಾರ್ಜಿಲಿಂಗ್ ಮತ್ತು ನೀಲಗಿರಿ ಚಹಾಗಳು ವಿಶ್ವದ ಅತ್ಯುತ್ತಮ ಚಹಾಗಳಲ್ಲಿ ಸ್ಥಾನ ಪಡೆದಿವೆ. ಬ್ಲ್ಯಾಕ್‌ ಟೀ ದೇಶದ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು, ಒಟ್ಟು ಸಾಗಣೆಯಲ್ಲಿ ಶೇ. 96 ರಷ್ಟಿದೆ. ಇದರ ಜೊತೆಗೆ ಗ್ರೀನ್ ಟೀ, ಹರ್ಬಲ್, ಮಸಾಲಾ ಮತ್ತು ಲೆಮನ್ ಟೀ ಯಂತಹ ವಿಧಗಳು ಜಾಗತಿಕವಾಗಿ ಭಾರತದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿವೆ.

ಭಾರತವು ಹಲವಾರು ದೇಶಗಳಿಗೆ ಚಹಾವನ್ನು ರಫ್ತು ಮಾಡುತ್ತದೆ, ಇದರಲ್ಲಿ ಯುಎಇ, ಇರಾಕ್, ಯುಎಸ್‌ಎ (ಅಮೇರಿಕಾ), ರಷ್ಯನ್ ಫೆಡರೇಶನ್ ಮತ್ತು ಇರಾನ್ ಪ್ರಮುಖ ದೇಶಗಳಾಗಿವೆ.

ಅಭ್ರಕ (ಮೈಕ), ಕಲ್ಲಿದ್ದಲು ಮತ್ತು ಇತರ ಅದಿರುಗಳು, ಖನಿಜಗಳು ಸೇರಿದಂತೆ ಸಂಸ್ಕರಿಸಿದ ಖನಿಜಗಳು

ಕಳೆದ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025 ರಲ್ಲಿ ಮೈಕಾ, ಕಲ್ಲಿದ್ದಲು ಮತ್ತು ಇತರ ಅದಿರುಗಳು, ಸಂಸ್ಕರಿಸಿದ ಖನಿಜಗಳು ಸೇರಿದಂತೆ ಖನಿಜಗಳ ರಫ್ತು ಶೇ. 16.60 ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್-2025 ರಲ್ಲಿಯೂ ಸಹ ಈ ಸರಕಿನ ರಫ್ತು ಶೇ. 24.57 ರಷ್ಟು ಬೆಳವಣಿಗೆಯೊಂದಿಗೆ ಬೇಡಿಕೆ ಹೆಚ್ಚಿರುವುದು ಕಂಡುಬಂದಿದೆ. ಭಾರತವು ಸಂಸ್ಕರಿಸಿದ ಖನಿಜಗಳು ಮತ್ತು ಅವುಗಳ ಉಪ-ಉತ್ಪನ್ನಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಚೀನಾ, ಅಮೇರಿಕಾ, ಯುಕೆ, ಓಮನ್ ಮತ್ತು ಬಾಂಗ್ಲಾದೇಶ ಸೇರಿವೆ

ಇತರ ಗಮನಾರ್ಹ ಸರಕುಗಳು/ವಲಯ

ಏಪ್ರಿಲ್- ಆಗಸ್ಟ್2024 vs  ಏಪ್ರಿಲ್- ಆಗಸ್ಟ್ 2025 ರಲ್ಲಿನ ಶೇ. ಬದಲಾವಣೆ

ಎಂಜಿನಿಯರಿಂಗ್ ಸರಕುಗಳು

ಔಷಧಿಗಳು ಮತ್ತು ಔಷಧೀಯ ಉತ್ಪನ್ನಗಳು

ಜವಳಿ ಉದ್ಯಮಗಳ ಸಿದ್ಧ ಉಡುಪುಗಳು

https://static.pib.gov.in/WriteReadData/userfiles/image/image0127S1W.gif5.86%

https://static.pib.gov.in/WriteReadData/userfiles/image/image0127S1W.gif7.30%

https://static.pib.gov.in/WriteReadData/userfiles/image/image0127S1W.gif5.78%

 

ಭಾರತದ ಸಾಂಪ್ರದಾಯಿಕ ರಫ್ತು ಆಧಾರವಾಗಿರುವ ಇಂಜಿನಿಯರಿಂಗ್ ಸರಕುಗಳು ಸಹ ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿದ್ದು, ಏಪ್ರಿಲ್-ಆಗಸ್ಟ್ 2024ರಲ್ಲಿ ಅಮೆರಿಕನ್ ಡಾಲರ್ 46.52 ಶತಕೋಟಿಯಿಂದ ಏಪ್ರಿಲ್-ಆಗಸ್ಟ್ 2025 ರಲ್ಲಿ 5.86% ಏರಿಕೆಯೊಂದಿಗೆ ಅಮೆರಿಕನ್ ಡಾಲರ್ 49.24 ಶತಕೋಟಿಗೆ ತಲುಪಿವೆ. ಯುಎಇ, ಜರ್ಮನಿ, ಯುಕೆ ಮತ್ತು ಸೌದಿ ಅರೇಬಿಯಾ ಜೊತೆಗೆ, ಯುಎಸ್ಎ (ಅಮೇರಿಕಾ) ಪ್ರಮುಖ  ಗಮ್ಯಸ್ಥಾನವಾಗಿ ಉಳಿದಿದೆ. ಕೈಗಾರಿಕಾ ಯಂತ್ರೋಪಕರಣಗಳ ವಿಭಾಗದ ಅಡಿಯಲ್ಲಿ ರಫ್ತು ಮಾಡಲಾಗುವ ಪ್ರಮುಖ ಸರಕುಗಳೆಂದರೆ ಐಸಿ (ಆಂತರಿಕ ದಹನ) ಇಂಜಿನ್‌ಗಳು ಮತ್ತು ಬಿಡಿಭಾಗಗಳು, ಡೈರಿ, ಆಹಾರ ಸಂಸ್ಕರಣೆ, ಜವಳಿಗಳಿಗೆ ಸಂಬಂಧಿಸಿದ ಕೈಗಾರಿಕಾ ಯಂತ್ರೋಪಕರಣಗಳು, ಬಾಯ್ಲರ್‌ಗಳಂತಹ ಯಂತ್ರೋಪಕರಣಗಳು, ಬಿಡಿಭಾಗಗಳು, ಇಂಜೆಕ್ಷನ್ ಮೋಲ್ಡಿಂಗ್‌ಗೆ ಯಂತ್ರಗಳು, ಕವಾಟಗಳು ಮತ್ತು ಎಟಿಎಂಗಳು. ಎಂಜಿನಿಯರಿಂಗ್ ಸರಕುಗಳ ರಫ್ತನ್ನು ಸದೃಢವಾಗಿಡಲು ಭಾರತ ಸರ್ಕಾರವು ಝೀರೋ ಡ್ಯೂಟಿ ಎಕ್ಸ್‌ಪೋರ್ಟ್ ಪ್ರಮೋಷನ್ ಕ್ಯಾಪಿಟಲ್ ಗೂಡ್ಸ್ ಮತ್ತು ಮಾರ್ಕೆಟ್ ಆಕ್ಸೆಸ್ ಇನಿಶಿಯೇಟಿವ್ ನಂತಹ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಈ ಉಪಕ್ರಮಗಳು ರಫ್ತುದಾರರನ್ನು ಪ್ರೋತ್ಸಾಹಿಸಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ಗುರಿ ಹೊಂದಿವೆ.

ಔಷಧಗಳು ಮತ್ತು ಔಷಧೀಯ ವಸ್ತುಗಳ ರಫ್ತು ಏಪ್ರಿಲ್-ಆಗಸ್ಟ್ 2024 ರಲ್ಲಿ ಅಮೆರಿಕನ್ ಡಾಲರ್ 11.89 ಶತಕೋಟಿಯಿಂದ ಏಪ್ರಿಲ್-ಆಗಸ್ಟ್ 2025 ರಲ್ಲಿ ಅಮೆರಿಕನ್ ಡಾಲರ್ 12.76 ಶತಕೋಟಿಗೆ ಏರಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಅಮೆರಿಕನ್ ಡಾಲರ್ 0.87 ಶತಕೋಟಿ (ಶೇ. 7.30) ಹೆಚ್ಚಳವಾಗಿದೆ. ಕೈಗೆಟುಕುವ ದರದಲ್ಲಿ ಜೆನೆರಿಕ್ ಮತ್ತು ವಿಶೇಷ ಔಷಧಿಗಳನ್ನು ಪೂರೈಸುವ ಭಾರತದ ಸಾಮರ್ಥ್ಯವು ಮುಂದುವರಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಂದ ಬೇಡಿಕೆಯನ್ನು ಉಳಿಸಿಕೊಂಡಿದೆ. ಅಮೆರಿಕ, ಯುಕೆ, ಬ್ರೆಜಿಲ್, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖ ಖರೀದಿದಾರರಾಗಿವೆ. ಈ ವಲಯದ ಬೆಳವಣಿಗೆಗೆ ಸ್ಪಷ್ಟವಾಗಿ ಕೊಡುಗೆ ನೀಡುವ, ಗುಣಮಟ್ಟ ನಿಯಂತ್ರಣ ಮತ್ತು ರಫ್ತು ಉತ್ತೇಜನಕ್ಕಾಗಿ ಸರ್ಕಾರದ ಉಪಕ್ರಮಗಳು ಯೂನಿಫಾರ್ಮ್ ಕೋಡ್ ಫಾರ್ ಫಾರ್ಮಾಸ್ಯುಟಿಕಲ್ ಮಾರ್ಕೆಟಿಂಗ್ ಪ್ರಾಕ್ಟೀಸಸ್ 2024 ಮತ್ತು ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ, 2023 ಅನ್ನು ಒಳಗೊಂಡಿವೆ.

ಭಾರತವು ಜಾಗತಿಕವಾಗಿ ಜವಳಿ ಮತ್ತು ಸಿದ್ಧ ಉಡುಪುಗಳ 6ನೇ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿದ್ದು, 2024ರ ಕ್ಯಾಲೆಂಡರ್ ವರ್ಷದಲ್ಲಿ 4.1% ರಷ್ಟು ಪಾಲನ್ನು ಹೊಂದಿದೆ. ಶ್ರಮ-ಆಧಾರಿತ ವಲಯವಾಗಿರುವ ಎಲ್ಲಾ ಜವಳಿಗಳ ಸಿದ್ಧ ಉಡುಪುಗಳು ಭಾರತದ ರಫ್ತಿಗೆ ಕೊಡುಗೆ ನೀಡುತ್ತಿವೆ. ಉತ್ತಮ ಗುಣಮಟ್ಟದ ಜವಳಿ ಪೂರೈಕೆದಾರನಾಗಿ ಭಾರತದ ಬ್ರ್ಯಾಂಡ್ ಈ ವಲಯದ ಬೆಳವಣಿಗೆಯನ್ನು ಹೆಚ್ಚಿಸುತ್ತಲೇ ಇದೆ.

ಭಾರತದ ಆಯಕಟ್ಟಿನ ವ್ಯಾಪಾರ ಸಂಬಂಧಗಳು: ಪ್ರಮುಖ ಸರಕು ರಫ್ತು ತಾಣಗಳು

ಭಾರತದ ಆಯಕಟ್ಟಿನ ವ್ಯಾಪಾರ ಸಂಬಂಧಗಳು ಜಾಗತಿಕ ಆರ್ಥಿಕತೆಯಲ್ಲಿ ಅದರ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತವೆ. ಸರಕುಗಳ ರಫ್ತು ವೈವಿಧ್ಯಮಯ ಪ್ರದೇಶಗಳಲ್ಲಿ ಸ್ಥಿರವಾಗಿ ವಿಸ್ತರಿಸುತ್ತಿದೆ. ಏಪ್ರಿಲ್-ಆಗಸ್ಟ್ 2024ಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025ರ ಅವಧಿಯಲ್ಲಿ ಹಲವಾರು ದೇಶಗಳಿಗೆ ಭಾರತದ ಸರಕು ರಫ್ತು ಹೆಚ್ಚಾಗಿದೆ.

ಹಾಂಗ್ ಕಾಂಗ್ ಒಂದು ಪ್ರವೇಶದ್ವಾರವಾಗಿ: 2024-25ರ ಆರ್ಥಿಕ ವರ್ಷದಲ್ಲಿ ಹಾಂಗ್ ಕಾಂಗ್‌ಗೆ ಭಾರತದ ಸರಕು ರಫ್ತು ಸುಮಾರು 6.07 ಶತಕೋಟಿ ಡಾಲರ್ ನಷ್ಟಿತ್ತು. ಈ ರಫ್ತುಗಳು ಭಾರತದ ವೈವಿಧ್ಯಮಯ ವ್ಯಾಪಾರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ. ಇದು ರತ್ನಗಳು ಮತ್ತು ಆಭರಣಗಳಂತಹ ಐಷಾರಾಮಿ ವಸ್ತುಗಳಿಂದ ಹಿಡಿದು ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ಸರಕುಗಳವರೆಗೆ ವಿಸ್ತರಿಸಿದೆ. ಏಪ್ರಿಲ್-ಆಗಸ್ಟ್ 2025ರ ಅವಧಿಯಲ್ಲಿ ಹಾಂಗ್ ಕಾಂಗ್‌ಗೆ ಸರಕು ರಫ್ತು ಶೇ. 26.19ರಷ್ಟು* ಹೆಚ್ಚಳ ಕಂಡು 2.62 ಶತಕೋಟಿ ಡಾಲರ್ ತಲುಪಿದೆ. ದೀರ್ಘಕಾಲದಿಂದ “ಚೀನಾಕ್ಕೆ ಪ್ರವೇಶದ್ವಾರ" ಎಂದು ಪರಿಗಣಿಸಲ್ಪಟ್ಟಿದ್ದ ಹಾಂಗ್ ಕಾಂಗ್, ಭಾರತ-ಚೀನಾ ಆರ್ಥಿಕ ಸಂಬಂಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗ "ಭಾರತಕ್ಕೆ ಪ್ರವೇಶದ್ವಾರ" ಆಗುವ ಸಾಮರ್ಥ್ಯ ಹೊಂದಿದೆ. 2024ರಲ್ಲಿ ಹಾಂಗ್ ಕಾಂಗ್ ಮೂಲಕ ಭಾರತ ಮತ್ತು ಚೀನಾ ನಡುವಿನ ಮರು-ರಫ್ತು ವ್ಯಾಪಾರವು ಹಾಂಕಾಂಗ್ ಡಾಲರ್ 97.9 ಶತಕೋಟಿ* ಮೊತ್ತಕ್ಕೆ ತಲುಪಿದೆ. ಇದು ಜಾಗತಿಕ ವ್ಯಾಪಾರದಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರ ಮತ್ತು ಅದರ ರಫ್ತು ವಲಯಗಳ ಬಲವನ್ನು ಪ್ರತಿಬಿಂಬಿಸುತ್ತದೆ.

ಏಷ್ಯಾದ ನೆರೆಯ ರಾಷ್ಟ್ರ ಚೀನಾದೊಂದಿಗಿನ ವ್ಯಾಪಾರ: ಚೀನಾಕ್ಕೆ ಭಾರತದ ಸರಕು ರಫ್ತು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ. ಇದು ಆರ್ಥಿಕ ವರ್ಷ 2024-25ರಲ್ಲಿ ಸುಮಾರು ಅಮೆರಿಕನ್ ಡಾಲರ್ 14.25 ಶತಕೋಟಿ ತಲುಪಿದೆ. ಜೊತೆಗೆ, ಏಪ್ರಿಲ್-ಆಗಸ್ಟ್ 2025ರ ಅವಧಿಯಲ್ಲಿ ಶೇ. 19.65ರಷ್ಟು ಬಲವಾದ ವರ್ಷದಿಂದ ವರ್ಷಕ್ಕೆ ಹೆಚ್ಚಳ ದಾಖಲಾಗಿದೆ. ಭಾರತದಿಂದ ಚೀನಾಕ್ಕೆ ರಫ್ತಾಗುವ ಪ್ರಮುಖ ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಇಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ ಸರಕುಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕ ಉತ್ಪನ್ನಗಳು, ಕಬ್ಬಿಣದ ಅದಿರು ಮತ್ತು ಕಡಲ ಉತ್ಪನ್ನಗಳು ಸೇರಿವೆ. ಇದು ಭಾರತದ ವಿಸ್ತರಿಸುತ್ತಿರುವ ಕೈಗಾರಿಕಾ ಸಾಮರ್ಥ್ಯಗಳು ಮತ್ತು ಚೀನಾದ ಉತ್ಪಾದನಾ ವಲಯಕ್ಕೆ ಕಚ್ಚಾ ವಸ್ತುಗಳು ಹಾಗೂ ಮಧ್ಯಂತರ ಸರಕುಗಳ ಪೂರೈಕೆದಾರನಾಗಿ ಭಾರತದ ಪಾತ್ರವನ್ನು ತೋರಿಸುತ್ತದೆ.

ಅಮೆರಿಕಕ್ಕೆ ಭಾರತದ ರಫ್ತು:ಆಗಸ್ಟ್ 2025ರಲ್ಲಿ ಅಮೆರಿಕಕ್ಕೆ ಭಾರತದ ಸರಕು ರಫ್ತು  ಅಮೆರಿಕನ್ ಡಾಲರ್ 6.87 ಶತಕೋಟಿ ಇತ್ತು. ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಪ್ರಮುಖ ಸರಕುಗಳು ಎಲೆಕ್ಟ್ರಾನಿಕ್ ಸರಕುಗಳು, ಎಂಜಿನಿಯರಿಂಗ್ ಸರಕುಗಳು, ಔಷಧಗಳು ಮತ್ತು ಫಾರ್ಮಾಸ್ಯುಟಿಕಲ್ಸ್, ರತ್ನಗಳು ಮತ್ತು ಆಭರಣಗಳು ಹಾಗೂ ಜವಳಿ ವಸ್ತುಗಳಾಗಿವೆ.

ಅಮೆರಿಕಾಕ್ಕೆ  ಭಾರತದ ಸರಕು ರಫ್ತು Vs ಇತರ ದೇಶಗಳು

ಭಾರತದ ರಫ್ತು ಗಮ್ಯಸ್ಥಾನಗಳು

ಜುಲೈ 2025 (USD ಮಿಲಿಯನ್‌ಗಳಲ್ಲಿ)

ಆಗಸ್ಟ್‌ 2025 (USD ಮಿಲಿಯನ್‌ಗಳಲ್ಲಿ)

ಯುಎಸ್‌ಎ

8012.45

6865.47    ↓

ಯುಎಇ

2984.66

3245.26   ↑

ನೆದರ್ಲ್ಯಾಂಡ್ಸ್

1668.92

1829.77    ↑

ಆಸ್ಟ್ರೇಲಿಯಾ

495.65

554.67     ↑

ನೇಪಾಳ

600.85

617.26     ↑

ದಕ್ಷಿಣ ಆಫ್ರಿಕಾ

611.28

654.58     ↑

ಹಾಂಗ್ ಕಾಂಗ್

548.15

584.70      ↑

ಜಾಗತಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆ ಮತ್ತು ಕ್ರಿಯಾತ್ಮಕ ಮಾರುಕಟ್ಟೆಗೆ ಉನ್ನತ-ಮೌಲ್ಯದ ಉತ್ಪನ್ನಗಳನ್ನು ಪೂರೈಸುವ ಸಾಮರ್ಥ್ಯವನ್ನು ಅಮೆರಿಕಕ್ಕೆ ಸ್ಥಿರವಾಗಿ ನಡೆಯುತ್ತಿರುವ ರಫ್ತುಗಳು ಪ್ರತಿಬಿಂಬಿಸುತ್ತವೆ. ಭಾರತದ ಆಮದುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ್ದರೂ, ಈ ಪರಿಸ್ಥಿತಿ ಎದುರಿಸಲು ಭಾರತದ ಸಿದ್ಧತೆಯನ್ನು ಬಿಂಬಿಸುತ್ತದೆ.  ಜುಲೈ 2025 ರಿಂದ ಆಗಸ್ಟ್ 2025ರ ಅವಧಿಯಲ್ಲಿ ಅಮೆರಿಕಕ್ಕೆ ರಫ್ತು ಇಳಿಕೆಯಾಗಿದ್ದು, ಅದೇ ಸಮಯದಲ್ಲಿ ಇತರ ದೇಶಗಳಿಗೆ ರಫ್ತು ಏರಿಕೆ ಕಂಡಿದೆ. ವೈವಿಧ್ಯೀಕರಣಕ್ಕೆ ಒತ್ತು ನೀಡುತ್ತಿರುವ ಭಾರತವು ಉತ್ಪನ್ನದ ಗುಣಮಟ್ಟವನ್ನು ಉನ್ನತೀಕರಿಸುತ್ತಿದೆ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸಿದ್ಧವಾಗುತ್ತಿದೆ, ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತಿದೆ ಮತ್ತು ಹೊಸ ಮಾರುಕಟ್ಟೆಗಳನ್ನು ತೆರೆಯುತ್ತಿದೆ. ರಫ್ತು ಹೆಚ್ಚಳದ ಜೊತೆಗೆ, ದೇಶವು ತನ್ನ ರಫ್ತು ತಾಣಗಳನ್ನು ವೈವಿಧ್ಯಗೊಳಿಸುತ್ತಿದ್ದು, ಭಾರತೀಯ ಉತ್ಪನ್ನಗಳ ಜಾಗತಿಕ ಭವಿಷ್ಯವನ್ನು ಬಲಪಡಿಸುತ್ತಿದೆ.

ಐರೋಪ್ಯ ರಾಷ್ಟ್ರಗಳು, ಜರ್ಮನಿಯೊಂದಿಗೆ ವ್ಯಾಪಾರ: 2024-25ರ ಆರ್ಥಿಕ ವರ್ಷದಲ್ಲಿ ಜರ್ಮನಿಗೆ ಭಾರತದ ಸರಕು ರಫ್ತಿನ ಮೌಲ್ಯ ಸುಮಾರು ₹94,347 ಕೋಟಿ ಆಗಿತ್ತು. ಪ್ರಮುಖ ರಫ್ತು ವಸ್ತುಗಳಲ್ಲಿ ಒಟ್ಟು ರಫ್ತಿನ ಶೇ. 40 ರಷ್ಟಿರುವ ಇಂಜಿನಿಯರಿಂಗ್ ಸರಕುಗಳು, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಭಾರತೀಯ ಜವಳಿ ಮತ್ತು ಔಷಧಗಳು ಸೇರಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್-ಆಗಸ್ಟ್ 2025ರಲ್ಲಿ ಜರ್ಮನಿಗೆ ಭಾರತದ ಸರಕು ರಫ್ತು ಶೇ. 11.73ರಷ್ಟು ಬೆಳೆದಿದೆ. ಇದು ಯುರೋಪಿನ ಅತಿದೊಡ್ಡ ಆರ್ಥಿಕತೆ ಮತ್ತು ಐರೋಪ್ಯ ಒಕ್ಕೂಟ ಮಾರುಕಟ್ಟೆಗೆ ಪ್ರಮುಖ ಕೇಂದ್ರವಾಗಿರುವ ಜರ್ಮನಿಯೊಂದಿಗೆ ಹೆಚ್ಚುತ್ತಿರುವ ವ್ಯಾಪಾರವನ್ನು ಸೂಚಿಸುತ್ತದೆ.

ಪೂರ್ವ ಏಷ್ಯಾ, ಕೊರಿಯಾದಲ್ಲಿ ಭಾರತದ ಉಪಸ್ಥಿತಿ: ಕೊರಿಯಾದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿದ್ದು, ಆರ್ಥಿಕತೆಯ ವಿವಿಧ ಕ್ಷೇತ್ರಗಳನ್ನು ಒಳಗೊಂಡ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಆರ್ಥಿಕ ವರ್ಷ 2024-25ರಲ್ಲಿ, ಇಂಜಿನಿಯರಿಂಗ್ ಸರಕುಗಳು (ಕೊರಿಯಾಕ್ಕೆ ಒಟ್ಟು ರಫ್ತಿನ ಶೇ. 40ಕ್ಕಿಂತ ಹೆಚ್ಚು), ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಸಾವಯವ ಹಾಗೂ ಅಜೈವಿಕ ರಾಸಾಯನಿಕಗಳು ಕೊರಿಯಾಕ್ಕೆ ಮಾಡಿದ ಒಟ್ಟು ರಫ್ತಿನ ಶೇ. 70ಕ್ಕಿಂತ ಹೆಚ್ಚು ಪಾಲನ್ನು ಆಕ್ರಮಿಸಿಕೊಂಡಿವೆ. ಏಪ್ರಿಲ್-ಆಗಸ್ಟ್ 2025ರ ಅವಧಿಯಲ್ಲಿ, ಕೊರಿಯಾಕ್ಕೆ ಸರಕು ರಫ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 9.69ರಷ್ಟು ಅಂದರೆ ಅಮೆರಿಕಾ ಡಾಲರ್‌ 2.63 ಶತ ಕೋಟಿಯಷ್ಟು ಹೆಚ್ಚಾಗಿದೆ. ಇದು ಭಾರತೀಯ ಉತ್ಪನ್ನಗಳ ಮೇಲಿನ ಕೊರಿಯಾದ ಗ್ರಾಹಕರ ವಿಶ್ವಾಸ ಸೂಚಿಸುತ್ತದೆ. ಈ ರಫ್ತುಗಳಿಗೆ ಭಾರತ-ಕೊರಿಯಾ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಹೆಚ್ಚಿನ ಬೆಂಬಲ ನೀಡಿದೆ. ಈ ಒಪ್ಪಂದದಿಂದಾಗಿ ಸುಂಕಗಳು ಕಡಿಮೆಯಾಗಿ ಭಾರತೀಯ ವ್ಯವಹಾರಗಳಿಗೆ ಮಾರುಕಟ್ಟೆ ಪ್ರವೇಶ ಸುಧಾರಿಸಿದೆ.

A graph of a service exportDescription automatically generated

ಸೇವಾ ರಫ್ತುಗಳು: ಭಾರತದ ರಫ್ತು ಬೆಳವಣಿಗೆಯ ಹೊಸ ಚಾಲಕ ಶಕ್ತಿ

ಸೇವಾ ವಲಯವನ್ನು ಆರ್ಥಿಕ ಸಮೀಕ್ಷೆ 2024-25 ರಲ್ಲಿ 'ದೀರ್ಘಕಾಲದ ಬಲದ ಆಧಾರ' (Old War Horse) ಎಂದು ಉಲ್ಲೇಖಿಸಲಾಗಿದೆ. ಇದು ವಲಯದ ಸ್ಥಿರ ಶಕ್ತಿ ಮತ್ತು ಆರ್ಥಿಕತೆಯನ್ನು ಮುನ್ನಡೆಸುವ ಪಾತ್ರವನ್ನು ಪ್ರದರ್ಶಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್-ಆಗಸ್ಟ್ 2025ರ ಅವಧಿಯಲ್ಲಿ ಶೇ. 8.65 ರಷ್ಟು ಬೆಳವಣಿಗೆಯೊಂದಿಗೆ, ಭಾರತದ ಸೇವಾ ರಫ್ತುಗಳು ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆ ಮುಂದುವರೆಸಿವೆ. ಇದು ಜಾಗತಿಕ ಸೇವಾ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತದೆ.

ಮಾಹಿತಿ ತಂತ್ರಜ್ಞಾನ (IT), ವ್ಯವಹಾರ ಪ್ರಕ್ರಿಯೆ ನಿರ್ವಹಣೆ, ಹಣಕಾಸು ಸೇವೆಗಳು, ಪ್ರವಾಸೋದ್ಯಮ ಮತ್ತು ವೃತ್ತಿಪರ ಸಲಹಾ ಕ್ಷೇತ್ರಗಳಲ್ಲಿನ ಬಲವಾದ ಪ್ರದರ್ಶನದಿಂದಾಗಿ, ಸೇವಾ ವಲಯವು ಭಾರತದ ವಿದೇಶಿ ವಿನಿಮಯ ಗಳಿಕೆಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಏಪ್ರಿಲ್-ಆಗಸ್ಟ್ 2025 ರಲ್ಲಿ ಸೇವಾ ವಲಯವು USD 79.97 ಶತಕೋಟಿಯಷ್ಟು ವ್ಯಾಪಾರ ಹೆಚ್ಚುವರಿಯನ್ನು (Trade Surplus) ಹೊಂದಿದೆ. ಈ ಸೇವಾ ವಲಯದ ಹೆಚ್ಚುವರಿಯು ಒಟ್ಟಾರೆ ವ್ಯಾಪಾರ ಕೊರತೆಯನ್ನು (Trade Deficit) ಕಡಿಮೆ ಮಾಡುವಲ್ಲಿಯೂ ಪ್ರಮುಖ ಕೊಡುಗೆ ನೀಡುತ್ತದೆ. 2025ರಲ್ಲಿ ಭಾರತದ ಸೇವಾ ರಫ್ತಿನಲ್ಲಿನ ಹೆಚ್ಚಳಕ್ಕೆ ನಿರಂತರ ಬೆಳವಣಿಗೆಗೆ ಕಾರಣವಾಗುವ ಪ್ರಮುಖ ಅಂಶಗಳು ಇಲ್ಲಿವೆ:

ಬೆಳವಣಿಗೆಯ ಪ್ರಮುಖ ಅಂಶಗಳು

ತಂತ್ರಜ್ಞಾನ ವಲಯ

ಹಣಕಾಸು ವರ್ಷ (FY) 2024ರಲ್ಲಿ ಭಾರತದ ಟೆಕ್ ವಲಯವು ಒಟ್ಟು GDP ಯ ಶೇ. 7.3 ರಷ್ಟಿತ್ತು. 2030ರ ವೇಳೆಗೆ, ಭಾರತದ ಡಿಜಿಟಲ್ ಆರ್ಥಿಕತೆಯು ದೇಶದ ಒಟ್ಟಾರೆ ಆರ್ಥಿಕತೆಯ ಸುಮಾರು ಐದನೇ ಒಂದು ಭಾಗದಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ.

ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI), ಮತ್ತು ಫಿನ್‌ಟೆಕ್ (FinTech) ಸೇರಿದಂತೆ ತಾಂತ್ರಿಕ ಪ್ರಗತಿಗಳು ಮತ್ತು ಡಿಜಿಟಲ್ ಪರಿಹಾರಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದು, ಉನ್ನತ-ಮೌಲ್ಯದ ಡಿಜಿಟಲ್ ಸೇವೆಗಳಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ವಿಸ್ತರಿಸಿದೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್‌ಅಪ್ ಇಂಡಿಯಾದಂತಹ ಯೋಜನೆಗಳು ಸಹ ಈ ವಲಯಕ್ಕೆ ಬೆಂಬಲ ನೀಡುತ್ತಿವೆ.

ಜನಸಂಖ್ಯಾ ಲಾಭಾಂಶ

 ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದೆ, ಸುಮಾರು ಶೇ. 65 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ಇತರ ದೇಶಗಳಿಗಿಂತ ಭಾರತಕ್ಕೆ ಸ್ಪರ್ಧಾತ್ಮಕ ಅನುಕೂಲತೆಯನ್ನು ಒದಗಿಸುತ್ತದೆ.

ಯುವ ಜನಸಂಖ್ಯೆಯು ಸುಧಾರಿತ ಉತ್ಪಾದಕತೆ ಮತ್ತು ಹೆಚ್ಚಿದ ಗ್ರಾಹಕ ಬೇಡಿಕೆಯ ಸಾಮರ್ಥ್ಯದೊಂದಿಗೆ ದೊಡ್ಡ ಕಾರ್ಯಪಡೆಯನ್ನು ಪ್ರತಿನಿಧಿಸುತ್ತದೆ. ಸ್ಕಿಲ್ ಇಂಡಿಯಾ ಕಾರ್ಯಕ್ರಮದಂತಹ ಕೌಶಲ್ಯ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನವು, ಸೇವಾ ವಲಯಕ್ಕೆ ನುರಿತ ಕಾರ್ಯಪಡೆ ಲಭ್ಯತೆಯನ್ನು ಖಚಿತಪಡಿಸುತ್ತದೆ.

ವಿದೇಶಿ ನೇರ ಹೂಡಿಕೆ (FDI) ನಿಯಮಗಳ ಉದಾರೀಕರಣ

ನಿಯಂತ್ರಣ ಅಡೆತಡೆಗಳನ್ನು ತೆಗೆದುಹಾಕುವುದು, ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು, ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಮತ್ತು ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ಭಾರತ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ.ಕೇಂದ್ರ ಬಜೆಟ್ 2025 ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ  ಮಿತಿಯನ್ನು ಶೇ. 74 ರಿಂದ ಶೇ. 100ಕ್ಕೆ ಹೆಚ್ಚಿಸುವುದನ್ನು ಘೋಷಿಸಿದೆ. ತಮ್ಮ ಸಂಪೂರ್ಣ ಪ್ರೀಮಿಯಂ ಅನ್ನು ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಈ ಹೆಚ್ಚಿಸಿದ ಮಿತಿ ಲಭ್ಯವಿದೆ.

ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳು

ಅದೇ ರೀತಿ, ಭಾರತ-ಯುಕೆ ಸಿಇಟಿಎ ಒಪ್ಪಂದದಲ್ಲಿ, ಭಾರತವು ಯುಕೆ ನಿಂದ ವ್ಯಾಪಕ ಶ್ರೇಣಿಯ ಬದ್ಧತೆಗಳನ್ನು ಪಡೆದುಕೊಂಡಿದೆ. ಡಿಜಿಟಲ್ ಮೂಲಕ ವಿತರಿಸಲಾದ ಸೇವೆಗಳಲ್ಲಿನ ಯುಕೆ ಬದ್ಧತೆಗಳು, ಐಟಿ ಮತ್ತು ವ್ಯವಹಾರ ಸೇವೆಗಳಲ್ಲಿ ಬಲವಾದ ಬೆಳವಣಿಗೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಯುಕೆ ಆಮದುಗಳ ಸುಮಾರು $200 ಶತಕೋಟಿ  ಮಾರುಕಟ್ಟೆಯಲ್ಲಿ ಭಾರತದ ಪಾಲು ವಿಸ್ತರಿಸಲಿದೆ. ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳು ಮತ್ತು ಸೇವಾ ವಲಯದ ಅಭಿವೃದ್ಧಿಗಾಗಿ ಸರ್ಕಾರದ ನಿರಂತರ ಪ್ರಯತ್ನಗಳು ಈ ವಲಯದ ಸ್ಥಿರ ಬೆಳವಣಿಗೆಗೆ ಕಾರಣವಾಗುತ್ತಿವೆ.

ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸರ್ಕಾರದ ಉಪಕ್ರಮಗಳು

ಭಾರತದ ರಫ್ತು ಉತ್ತೇಜನ ಯೋಜನೆಗಳು ಎಂದರೆ, ಮೂಲಸೌಕರ್ಯದ ಅಸಮರ್ಥತೆಗಳನ್ನು ಸರಿಪಡಿಸಲು, ವೆಚ್ಚಗಳನ್ನು ಕಡಿಮೆ ಮಾಡಲು, ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ರಫ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರೂಪಿಸಲಾದ ಸಮಗ್ರ ಸರ್ಕಾರಿ ಉಪಕ್ರಮಗಳಾಗಿವೆ. ಈ ಉಪಕ್ರಮಗಳ ಫಲಿತಾಂಶವಾಗಿ, ಆಮದು ಮಾಡಿಕೊಳ್ಳುವ ದೇಶಗಳಿಂದ ಭಾರತೀಯ ರಫ್ತು ಉತ್ಪನ್ನಗಳನ್ನು ತಿರಸ್ಕರಿಸುವ ಪ್ರಮಾಣವು ಜೂನ್ 2024ಕ್ಕೆ ಹೋಲಿಸಿದರೆ ಜೂನ್ 2025 ರಲ್ಲಿ ಶೇ. 12.5 ರಷ್ಟು ಕಡಿಮೆಯಾಗಿದೆ.

ಭಾರತವು ವಿದೇಶಿ ವ್ಯಾಪಾರ ನೀತಿ 2023ರ ಮೂಲಕ ವಿದೇಶಿ ವ್ಯಾಪಾರ ಮತ್ತು ರಫ್ತುಗಳನ್ನು ಉತ್ತೇಜಿಸುತ್ತಿದೆ. ಈ ನೀತಿಯು ರಿಯಾಯಿತಿಗಳು, ವ್ಯಾಪಾರ ಮಾಡುವ ಸುಲಭತೆ, ಸಹಯೋಗ ಮತ್ತು ಹೊಸ ಮಾರುಕಟ್ಟೆಗಳನ್ನು ಬೆಂಬಲಿಸುತ್ತದೆ. ಇದು ರಫ್ತುದಾರರಿಗೆ ಬಾಕಿ ಉಳಿದಿರುವ ಹಳೆಯ ಅಧಿಕಾರಪತ್ರಗಳನ್ನು ಮುಕ್ತಾಯಗೊಳಿಸಿ, ಹೊಸದಾಗಿ ಪ್ರಾರಂಭಿಸಲು ಅವಕಾಶ ನೀಡುತ್ತದೆ. ಆರ್‌ಒಡಿಟಿಇಪಿ (Rebate of Duties and Taxes on Exported Products) ಯೋಜನೆಯು ರಫ್ತುದಾರರಿಗೆ, ಯಾವುದೇ ಇತರ ಅಸ್ತಿತ್ವದಲ್ಲಿರುವ ಯೋಜನೆಯ ಅಡಿಯಲ್ಲಿ ಮರುಪಾವತಿ ಮಾಡದ ಅಂತರ್ಗತ ಸುಂಕಗಳು, ತೆರಿಗೆಗಳು ಮತ್ತು ಲೆವಿಗಳನ್ನು ಮರುಪಾವತಿಸುತ್ತದೆ. ಮಾರ್ಚ್ 2025 ರ ವೇಳೆಯಲ್ಲಿ, ಈ ಯೋಜನೆಯು ಸುಮಾರು ₹58,000 ಕೋಟಿ ಮರುಪಾವತಿ ಮಾಡಿದೆ.

ಜಿಲ್ಲೆಗಳು ರಫ್ತು ಕೇಂದ್ರಗಳಾಗಿ ಉಪಕ್ರಮಗಳು ರಾಜ್ಯಗಳು ಮತ್ತು ಜಿಲ್ಲೆಗಳನ್ನು ವ್ಯಾಪಾರದಲ್ಲಿ ಸಕ್ರಿಯ ಪಾತ್ರಧಾರಿಗಳನ್ನಾಗಿ ಮಾಡುತ್ತಿವೆ. ರಫ್ತು ಸಾಮರ್ಥ್ಯ ಹೊಂದಿರುವ 734 ಜಿಲ್ಲೆಗಳನ್ನು ಗುರುತಿಸಲಾಗಿದೆ ಮತ್ತು 590 ಜಿಲ್ಲೆಗಳಿಗೆ ಜಿಲ್ಲಾ ರಫ್ತು ಕ್ರಿಯಾ ಯೋಜನೆಗಳನ್ನುಸಿದ್ಧಪಡಿಸಲಾಗಿದೆ.

ಟಿಐಇಎಸ್‌ (Trade Infrastructure for Export Scheme) ಈ ಯೋಜನೆಯು ರಫ್ತು-ಕೇಂದ್ರಿತ ಮೂಲಸೌಕರ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ: ಪರೀಕ್ಷಾ ಪ್ರಯೋಗಾಲಯಗಳು, ಗೋದಾಮುಗಳು ಮತ್ತು ಸರಕು ಸಾಗಣೆ ಸೌಲಭ್ಯಗಳು. ಪಿಎಂ ಗತಿಶಕ್ತಿ ಯೋಜನೆ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಸಾರಿಗೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಹು-ಮಾದರಿ ಸಂಪರ್ಕದ ಮೂಲಕ ಸಾಗಣೆಯನ್ನು ವೇಗವಾಗಿ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುತ್ತಿವೆ. ಇದರ ಪರಿಣಾಮವಾಗಿ, ಭಾರತದ ಜಾಗತಿಕ ಲಾಜಿಸ್ಟಿಕ್ಸ್ ಶ್ರೇಣಿಯು 2018 ರಲ್ಲಿ 44 ರಿಂದ 2023 ರಲ್ಲಿ 38 ಕ್ಕೆ ಏರಿದೆ. ಇದೇ ವೇಳೆ, 2020 ರಲ್ಲಿ ಪ್ರಾರಂಭಿಸಲಾದ ಪಿಎಲ್‌ಐ ಯೋಜನೆ (ಉತ್ಪಾದನೆಗೆ-ಸಂಬಂಧಿಸಿದ ಪ್ರೋತ್ಸಾಹಕ ಯೋಜನೆ) ಯು 14 ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಇದು ಮಾರ್ಚ್ 2025 ರ ವೇಳೆಗೆ ₹1.76 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ, ₹16.5 ಲಕ್ಷ ಕೋಟಿ ಮೌಲ್ಯದ ಉತ್ಪಾದನೆಯನ್ನು ಸೃಷ್ಟಿಸಿದೆ ಮತ್ತು 12 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ.

ವ್ಯಾಪಾರ ಮಾಡುವ ಸುಲಭತೆ ವಿಚಾರದಲ್ಲಿ ಭಾರತವು ದೊಡ್ಡ ಹೆಜ್ಜೆಗಳನ್ನು ಇಟ್ಟಿದೆ. 2014 ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತವು 2020 ರಲ್ಲಿ 63ನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಪ್ರಮುಖ ಕೊಡುಗೆ ನೀಡಿದ ಸುಧಾರಣೆಗಳೆಂದರೆ, 2014 ರಿಂದ 42,000 ಅನುಸರಣೆಗಳನ್ನು ರದ್ದುಗೊಳಿಸುವುದು ಮತ್ತು 3,700 ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ಅಪರಾಧೀಕರಣದಿಂದ ತೆಗೆದುಹಾಕುವುದು.

ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ: ಅನುಮೋದನೆಗಳನ್ನು ಸರಳಗೊಳಿಸುತ್ತದೆ. ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾಮ್‌ ರಫ್ತುದಾರರಿಗೆ ವ್ಯಾಪಾರ ಪ್ರಶ್ನೆಗಳನ್ನು ಪರಿಹರಿಸಲು ಮಾರ್ಗದರ್ಶನ ನೀಡುತ್ತದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತದೆ. ಇ-ಕಾಮರ್ಸ್ ರಫ್ತು ಕೇಂದ್ರಗಳು: ಕಸ್ಟಮ್ಸ್, ಪ್ರಮಾಣೀಕರಣ, ಪ್ಯಾಕೇಜಿಂಗ್ ಮತ್ತು ಗೋದಾಮುಗಳಂತಹ ಸಂಯೋಜಿತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಣ್ಣ ನಗರಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತವೆ. ICEGATE (Indian Customs Electronic Gateway): ಇ-ಫೈಲಿಂಗ್, ಇ-ಪಾವತಿಗಳು, ಐಪಿಆರ್‌  ಗಾಗಿ ಆನ್‌ಲೈನ್ ನೋಂದಣಿ, ಕಸ್ಟಮ್ಸ್ ಇಡಿಐಯಲ್ಲಿ ದಾಖಲೆ ಟ್ರ್ಯಾಕಿಂಗ್ ಸ್ಥಿತಿ, ಆನ್‌ಲೈನ್ ಪರಿಶೀಲನೆ ಮತ್ತು ಇತರ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ಇದು 24x7 ಸಹಾಯವಾಣಿ ಸೌಲಭ್ಯವಾಗಿದೆ.

ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹೊಸ ಕ್ರಮಗಳು

ಮುಂದಿನ ಪೀಳಿಗೆಯ GST ಸುಧಾರಣೆಗಳು

  • ಶೂನ್ಯ-ದರದ ಸರಬರಾಜುಗಳಿಗೆ ಶೇ. 90 ರಷ್ಟು ತಾತ್ಕಾಲಿಕ ಮರುಪಾವತಿ: ನವೆಂಬರ್ 1, 2025 ರಿಂದ ವ್ಯವಸ್ಥೆ-ಚಾಲಿತ ಅಪಾಯ ಪರಿಶೀಲನೆಗಳ ಆಧಾರದ ಮೇಲೆ ಶೂನ್ಯ-ದರದ ಸರಬರಾಜುಗಳಿಗೆ ಶೇ. 90 ರಷ್ಟು ತಾತ್ಕಾಲಿಕ ಮರುಪಾವತಿ ನೀಡಲಾಗುತ್ತದೆ.
  • ರಫ್ತುಗಳ ಮೇಲಿನ ಜಿಎಸ್‌ಟಿ ಮರುಪಾವತಿಗೆ ಮೌಲ್ಯ-ಆಧಾರಿತ ಮಿತಿಯನ್ನು ತೆಗೆದುಹಾಕಲಾಗಿದೆ, ಇದರಿಂದಾಗಿ, ಸಣ್ಣ ರಫ್ತುದಾರರು ಸಹ ತಮ್ಮ ಸಣ್ಣ ಮೌಲ್ಯದ ಸರಕುಗಳ ಮೇಲೂ ಮರುಪಾವತಿಯನ್ನು ಕ್ಲೈಮ್ ಮಾಡಬಹುದು, ಇದು ಸಣ್ಣ ರಫ್ತುದಾರರಿಗೆ ದೊಡ್ಡ ಬೆಂಬಲ ನೀಡುತ್ತದೆ.
  • ಕಾಗದದ ಪ್ಯಾಕೇಜಿಂಗ್, ಜವಳಿ, ಚರ್ಮ ಮತ್ತು ಮರದ ಮೇಲಿನ ಜಿಎಸ್‌ಟಿಯನ್ನು ಶೇ. 12–18 ರಿಂದ ಶೇ. 5 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಉತ್ಪಾದನಾ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ರಫ್ತುದಾರರು ಹೆಚ್ಚು ಸ್ಪರ್ಧಾತ್ಮಕ ಬೆಲೆಗಳನ್ನು ನೀಡಲು ಸಾಧ್ಯವಾಗುತ್ತದೆ.  ಟ್ರಕ್‌ಗಳು ಮತ್ತು ಡೆಲಿವರಿ ವ್ಯಾನ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಲಾಗಿದೆ. ಪ್ಯಾಕೇಜಿಂಗ್ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದ್ದು, ಇದು ಸಾಗಣೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಆಟಿಕೆಗಳು ಮತ್ತು ಕ್ರೀಡಾ ಸರಕುಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಇದು ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ, ಅಗ್ಗದ ಆಮದುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
  • ಮಧ್ಯವರ್ತಿ ಸೇವೆಗಳ' ಪೂರೈಕೆಯ ಸ್ಥಳದ ನಿರ್ಧಾರ: ಮಧ್ಯವರ್ತಿ ಸೇವೆಗಳ ಪೂರೈಕೆಯ ಸ್ಥಳವನ್ನು ಆ ಸೇವೆಗಳ ಸ್ವೀಕರಿಸುವವರ ಸ್ಥಳದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಇಂತಹ ಸೇವೆಗಳ ಭಾರತೀಯ ರಫ್ತುದಾರರಿಗೆ ರಫ್ತು ಪ್ರಯೋಜನಗಳನ್ನು ಕ್ಲೈಮ್ ಮಾಡಲು ಸಹಾಯ ಮಾಡುತ್ತದೆ.
  • ಜವಳಿ ಮತ್ತು ಆಹಾರ ಸಂಸ್ಕರಣಾ ವಲಯಗಳಲ್ಲಿನ ಇನ್ವರ್ಟೆಡ್‌ ಸುಂಕ ರಚನೆಗಳನ್ನು (ಕಚ್ಚಾ ವಸ್ತುಗಳ ಮೇಲಿನ ತೆರಿಗೆ ದರವು ಸಿದ್ದಪಡಿಸಿದ ಉತ್ಪನ್ನಗಳ ಮೇಲಿನ ದರಕ್ಕಿಂತ ಹೆಚ್ಚಿಗೆ) ಸರಿಪಡಿಸುವುದರಿಂದ ಕಾರ್ಯನಿರತ ಬಂಡವಾಳದ ಮೇಲಿನ ಒತ್ತಡ ಕಡಿಮೆಯಾಗುತ್ತದೆ, ಮರುಪಾವತಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
  • ಇನ್ವರ್ಟೆಡ್‌ ಸುಂಕ ರಚನೆಗಳ ಕ್ಲೈಮ್‌ಗಳಿಗೆ ಶೇ. 90ರಷ್ಟು ತಾತ್ಕಾಲಿಕ ಮರುಪಾವತಿ ನೀಡಲಾಗುತ್ತದೆ.

ರಫ್ತು ಉತ್ತೇಜನ ಮಿಷನ್

2025-26 ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ರಫ್ತು ಉತ್ತೇಜನ ಮಿಷನ್ ಅನ್ನು ವಾಣಿಜ್ಯ ಇಲಾಖೆ ಯೊಂದಿಗೆ, ಎಂಎಸ್‌ಎಂಇ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳು ಸಮನ್ವಯಗೊಳಿಸುತ್ತಿವೆ. ಈ ಮಿಷನ್ ಅಡಿಯಲ್ಲಿ, ₹2,250 ಕೋಟಿ ಮೊತ್ತದ ಉಪಕ್ರಮವನ್ನು ಪ್ರಸ್ತಾಪಿಸಲಾಗಿದೆ. ರಫ್ತು ಸಾಲದ ಲಭ್ಯತೆ, ಗಡಿಯಾಚೆಗಿನ ಸಂಬಂಧಿಸಿದ ಅಂಶಗಳು ಮತ್ತು ಸುಂಕೇತರ ಅಡೆತಡೆಗಳನ್ನು ನಿವಾರಿಸುವಂತಹ ಸವಾಲುಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ನೀಡುವುದರ ಮೇಲೆ ಈ ಮಿಷನ್ ಗಮನಹರಿಸುತ್ತದೆ.

ಹೊಸ ವ್ಯಾಪಾರ ಒಪ್ಪಂದಗಳು

ವ್ಯಾಪಾರ ಒಪ್ಪಂದಗಳು ಎಂದರೆ, ವ್ಯಾಪಾರವನ್ನು ಹೆಚ್ಚಿಸುವ ದೃಷ್ಟಿಯಿಂದ ಪರಸ್ಪರ ಮಾತುಕತೆಗಳ ಮೂಲಕ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ದೇಶಗಳು ಅಥವಾ ಪ್ರಾದೇಶಿಕ ಬ್ಲಾಕ್‌ಗಳ ನಡುವೆ ಮಾಡಿಕೊಳ್ಳುವ ಒಪ್ಪಂದಗಳಾಗಿವೆ. ಪ್ರಸ್ತುತ ಚರ್ಚೆಯಲ್ಲಿರುವ ಅಥವಾ ಬಿಡುಗಡೆಯಾಗಿರುವ ಕೆಲವು ಹೊಸ ವ್ಯಾಪಾರ ಒಪ್ಪಂದಗಳು ಇಲ್ಲಿವೆ:

  • ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ
  • ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ
  • ಭಾರತ-ಆಸ್ಟ್ರೇಲಿಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ
  • ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ
  • ಭಾರತ ಮತ್ತು ಒಮಾನ್ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ
  • ಭಾರತ-ಪೆರು ಮುಕ್ತ ವ್ಯಾಪಾರ ಒಪ್ಪಂದ
  • ಭಾರತ-ಚಿಲಿ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ
  • ಭಾರತ-ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ

ಉಪಸಂಹಾರ

ಸರಕು ಮತ್ತು ಸೇವೆಗಳು ಎರಡರಲ್ಲೂ ಭಾರತದ ಬಲಿಷ್ಠ ರಫ್ತು ಕಾರ್ಯಕ್ಷಮತೆಯು ಜಾಗತಿಕ ಮಾರುಕಟ್ಟೆಯಲ್ಲಿ ರಾಷ್ಟ್ರದ ಬೆಳೆಯುತ್ತಿರುವ ಸ್ಪರ್ಧಾತ್ಮಕತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸುತ್ತದೆ. ಎಲೆಕ್ಟ್ರಾನಿಕ್ ಸರಕುಗಳು, ಇತರೆ ಧಾನ್ಯಗಳು, ಚಹಾ, ಹೈನುಗಾರಿಕೆ, ಮೈಕಾ ಉತ್ಪನ್ನಗಳಂತಹ ಉನ್ನತ-ಕಾರ್ಯಕ್ಷಮತೆಯ ಸರಕುಗಳಲ್ಲಿನ ಗಣನೀಯ ಬೆಳವಣಿಗೆ, ಮತ್ತು ಪ್ರಮುಖ ತಾಣ ರಾಷ್ಟ್ರಗಳಿಗೆ ಹೆಚ್ಚಿದ ಸರಕು ರಫ್ತು, ಭಾರತದ ರಫ್ತು ಉಪಕ್ರಮಗಳು ಮತ್ತು ಯೋಜನೆಗಳ ಪರಿಣಾಮಕಾರಿತ್ವವನ್ನು ಉಲ್ಲೇಖಿಸುತ್ತದೆ. ಸರ್ಕಾರದ ನೀತಿ ಮಧ್ಯಸ್ಥಿಕೆಗಳು ರಫ್ತುದಾರರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ, ನಾವೀನ್ಯತೆಯನ್ನು ಬೆಂಬಲಿಸಿವೆ, ವ್ಯವಹಾರಕ್ಕೆ ಮಾರುಕಟ್ಟೆಯನ್ನು ಸುಗಮಗೊಳಿಸಿವೆ ಮತ್ತು ವಿಸ್ತೃತ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಿವೆ. ಭಾರತದ ವ್ಯಾಪಾರ ಮಾನದಂಡಗಳು ಬಲಗೊಳ್ಳುತ್ತಾ ಹೋದಂತೆ, ರಫ್ತಿನಲ್ಲಿನ ಈ ಹೆಚ್ಚಳವು ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಭಾರತದ ಪ್ರಭಾವಶಾಲಿ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಿದ್ಧವಾಗಿದೆ.

References:

PIB

https://www.pib.gov.in/PressReleasePage.aspx?PRID=1868284

https://static.pib.gov.in/WriteReadData/specificdocs/documents/2025/aug/doc2025814608701.pdf

https://www.pib.gov.in/FactsheetDetails.aspx?Id=149107

https://www.pib.gov.in/PressNoteDetails.aspx?NoteId=154945&ModuleId=3

https://www.pib.gov.in/PressNoteDetails.aspx?id=155151&NoteId=155151&ModuleId=3

Ministry of Textiles

https://www.pib.gov.in/PressReleasePage.aspx?PRID=2156220

https://www.pib.gov.in/PressReleasePage.aspx?PRID=2162261

Ministry of Finance

https://www.pib.gov.in/PressReleasePage.aspx?PRID=2097911

https://www.pib.gov.in/PressReleasePage.aspx?PRID=2108360

https://www.pib.gov.in/PressReleasePage.aspx?PRID=2149736

https://www.pib.gov.in/PressReleasePage.aspx?PRID=2163555

https://gstcouncil.gov.in/sites/default/files/2025-09/press_release_press_information_bureau.pdf

Niti Aayog

https://www.niti.gov.in/sites/default/files/2024-12/Trade-Watch.pdf

World Bank

https://data.worldbank.org/indicator/NE.EXP.GNFS.ZS?locations=IN

https://lpi.worldbank.org/international/global

DD News

https://ddnews.gov.in/en/indias-exports-to-surpass-last-year-despite-tariffs-piyush-goyal/

https://ddnews.gov.in/en/pli-schemes-see-actual-investment-of-rs-1-76-lakh-crore-create-over-12-lakhs-jobs-minister/

https://ddnews.gov.in/en/indias-transformative-decade-landmark-reforms-drive-ease-of-doing-business/

https://ddnews.gov.in/en/india-oman-agree-to-speed-up-talks-on-signing-bilateral-economic-pact/

Twitter

https://x.com/AshwiniVaishnaw/status/1967496528135889375?ref_src=twsrc%5Egoogle%7Ctwcamp%5Eserp%7Ctwgr%5Etweet

Sansad

https://sansad.in/getFile/loksabhaquestions/annex/185/AU2737_MAtnjv.pdf?source=pqals

Niryat.gov.in

https://niryat.gov.in/#?start_date=202404&end_date=202503&sort_table=export_achieved-sort-desc

IBEF

https://www.ibef.org/exports/coffee-industry-in-india

https://www.ibef.org/exports/agriculture-and-food-industry-india

https://ibef.org/news/india-surpasses-china-in-smartphone-exports-to-united-states-us

Invest India

https://www.investindia.gov.in/team-india-blogs/5-key-factors-driving-indias-growth-tech-investment-destination

 

*****

(Backgrounder ID: 155388) Visitor Counter : 14
Provide suggestions / comments
Link mygov.in
National Portal Of India
STQC Certificate