ಸಂವಹನ ಸಚಿವಾಲಯ
azadi ka amrit mahotsav

ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ 'ಟೆಲಿಕಾಂ ಸ್ಟಾರ್ಟ್ ಅಪ್ಸ್ ಮತ್ತು ಎಂಎಸ್ಎಂಇ ಸಮಾವೇಶ 2026'ರ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ


ದೇಶದ ದೂರಸಂಪರ್ಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ದೂರಸಂಪರ್ಕ ನವೋದ್ಯಮಗಳು, ಎಂಎಸ್ಎಂಇಗಳು, ಉದ್ಯಮದ ನಾಯಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಇತರ ಪಾಲುದಾರರನ್ನು ಒಗ್ಗೂಡಿಸುವ ಗುರಿಯನ್ನು ಈ ಸಮಾವೇಶ ಹೊಂದಿದೆ

ಪ್ರಕಟಣಾ ದಿನಾಂಕ: 23 NOV 2026 5:09PM by PIB Bengaluru

ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ, ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು (ಡಿಒಟಿ) ನವೆಂಬರ್ 24, 2026ರಂದು ನವದೆಹಲಿಯ ಲೀಡರ್ಸ್ ಲೌಂಜ್ ಭಾರತ್ ಮಂಡಪಂನಲ್ಲಿ 'ಟೆಲಿಕಾಂ ನವೋದ್ಯಮಗಳು  ಮತ್ತು ಎಂಎಸ್ಎಂಇ ಸಮಾವೇಶ 2026' ಅನ್ನು ಆಯೋಜಿಸುತ್ತಿದೆ.

ದೇಶದ ದೂರಸಂಪರ್ಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲು,  ದೇಶದ ನಾವೀನ್ಯಕಾರರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಮತ್ತು ಸ್ವದೇಶಿ ದೂರಸಂಪರ್ಕ ಪರಿಹಾರಗಳನ್ನು ವಿಸ್ತರಿಸುವ ಹಾಗೂ ವಾಣಿಜ್ಯೀಕರಣಗೊಳಿಸುವ ಅವಕಾಶಗಳನ್ನು ಅನ್ವೇಷಿಸಲು ಟೆಲಿಕಾಂ ನವೋದ್ಯಮಗಳು, ಎಂಎಸ್ಎಂಇಗಳು, ಉದ್ಯಮದ ನಾಯಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಇತರ ಪಾಲುದಾರರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ.

ಈ ಕಾರ್ಯಕ್ರಮದಲ್ಲಿ ದೂರಸಂಪರ್ಕ ತಂತ್ರಜ್ಞಾನದ ಐದು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಾದ  ರ‍್ಯಾನ್ ಮತ್ತು ಕೋರ್ (RAN & Core), ಅಪ್ಲಿಕೇಶನ್ ಗಳು, ಚಿಪ್ ಸೆಟ್ ಗಳು, ಭದ್ರತೆ  ಮತ್ತು ಮಾನದಂಡಗಳ ಕುರಿತು ಪ್ರಸ್ತುತಿಗಳು ನಡೆಯಲಿವೆ. ಅಲ್ಲದೆ, ಸ್ಟಾರ್ಟ್ಅಪ್ಗಳು ಮತ್ತು ಎಂಎಸ್ಎಂಇಗಳು ತಮ್ಮ ನವೀನ ಉತ್ಪನ್ನಗಳು ಹಾಗೂ ಪರಿಹಾರಗಳನ್ನು ಪ್ರದರ್ಶಿಸಲು ಪ್ರತ್ಯೇಕ ಪ್ರದರ್ಶನ ಮಳಿಗೆಗಳ ಮೂಲಕ ಅವಕಾಶ ಕಲ್ಪಿಸಲಾಗುವುದು.

ದೂರಸಂಪರ್ಕ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಪೋಷಿಸಲು, ದೇಶದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಹಾಗೂ ನವೋದ್ಯಮಗಳು ಮತ್ತು ಎಂಎಸ್ಎಂಇಗಳ ಬೆಳವಣಿಗೆಗೆ ಅನುಕೂಲ ಕಲ್ಪಿಸಲು ದೂರಸಂಪರ್ಕ ಇಲಾಖೆಯು ಕೈಗೊಂಡಿರುವ ವಿವಿಧ ಸರ್ಕಾರಿ ಉಪಕ್ರಮಗಳು ಮತ್ತು ನೀತಿ ಸುಧಾರಣೆಗಳನ್ನು ಈ ಕಾರ್ಯಕ್ರಮವು ಎತ್ತಿ ತೋರಿಸಲಿದೆ. ಉದ್ಯಮದ ಸಂಪರ್ಕ ಮತ್ತು ನವೀನ ದೂರಸಂಪರ್ಕ ತಂತ್ರಜ್ಞಾನಗಳ ಪರೀಕ್ಷೆಗೆ ಪೂರಕ ವಾತಾವರಣವನ್ನು ಒದಗಿಸುವ 'ದೂರಸಂಪರ್ಕ ಕಾಯ್ದೆ, 2023'ರ ಅಡಿಯಲ್ಲಿ ಅಧಿಸೂಚಿಸಲಾದ ಕ್ಯಾಪ್ಟಿವ್ ನಾನ್-ಪಬ್ಲಿಕ್ ನೆಟ್ ವರ್ಕ್ ಗಳು (ಸಿಎನ್ ಪಿಎನ್) ಮತ್ತು ʻರೆಗ್ಯುಲೇಟರಿ ಸ್ಯಾಂಡ್ಬಾಕ್ಸ್ʼಗೆ ಸಂಬಂಧಿಸಿದ ನೀತಿ ಚೌಕಟ್ಟುಗಳ ಬಗ್ಗೆ ಸಹ ವಿಶೇಷ ಗೋಷ್ಠಿಗಳಲ್ಲಿ ಚರ್ಚಿಸಲಾಗುವುದು.

'ವಿಕಸಿತ ಭಾರತ@2047'ರ ದೂರದೃಷ್ಟಿಗೆ ಅನುಗುಣವಾಗಿ ದೃಢವಾದ ದೇಶೀಯ ದೂರಸಂಪರ್ಕ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ, ಉದ್ಯಮ, ಶಿಕ್ಷಣ ಕ್ಷೇತ್ರ ಮತ್ತು ಹೂಡಿಕೆದಾರರ ನಡುವಿನ ಸಹಯೋಗವನ್ನು ಬಲಪಡಿಸಲು ಈ ಸಮಾವೇಶವು ಒಂದು ಪ್ರಮುಖ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ.

Follow DoT Handles for more: -

X - https://x.com/DoT_India

Insta-  https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://youtube.com/@departmentoftelecom?si=DALnhYkt89U5jAaa

 

*****


(ಪ್ರಕಟಣೆ ಐ.ಡಿ.: 2340616) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Tamil