ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 21 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಐಐಟಿ ಖರಗ್ಪುರದ ಪ್ಲಾಟಿನಂ ಮಹೋತ್ಸವ ಆಚರಣೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ

ಲಕ್ನೋದಲ್ಲಿ ನಡೆಯಲಿರುವ 5ನೇ “ಕೌಶಲ್ ದೀಕ್ಷಾಂತ್ ಸಮರೋಹ್ “ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ

ಕೈಗಾರಿಕಾ ತರಬೇತಿ ಸಂಸ್ಥೆಗಳು, ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು ಮತ್ತು ತರಬೇತುದಾರರ ತರಬೇತಿ ಸಂಸ್ಥೆಗಳಿಂದ ರಾಷ್ಟ್ರೀಯ ಮಟ್ಟದ ಅಗ್ರಶ್ರೇಣಿ 52 ಸಂಸ್ಥೆಗಳನ್ನು ಅವರುಗಳ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಗುವುದು

ಪ್ರಕಟಣಾ ದಿನಾಂಕ: 20 NOV 2026 4:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 21, 2026 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9:45ರ ಸುಮಾರಿಗೆ, ಪ್ರಧಾನಮಂತ್ರಿಯವರು ಐಐಟಿ ಖರಗ್ಪುರದ ಪ್ಲಾಟಿನಂ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದರ ನಂತರ, ಅವರು ಬಿಹಾರದ ವೈಶಾಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲು ಬಿಹಾರಕ್ಕೆ ಪ್ರಯಾಣಿಸಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ಉತ್ತರ ಪ್ರದೇಶಕ್ಕೆ ಪ್ರಯಾಣಿಸಲಿದ್ದಾರೆ. ಸಂಜೆ 5:30 ರ ಸುಮಾರಿಗೆ, ಪ್ರಧಾನಮಂತ್ರಿಯವರು ಲಕ್ನೋದ ಗೋಮತಿ ನಗರದಲ್ಲಿರುವ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ 5 ನೇ “ಕೌಶಲ್ ದೀಕ್ಷಾಂತ್ ಸಮರೋಹ್“ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಖರಗ್ಪುರದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಐಐಟಿ ಖರಗ್ ಪುರದ ಪ್ಲಾಟಿನಂ ಜುಬಿಲಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಐಐಟಿ ಖರಗ್ ಪುರದ 75 ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ, ಇದು ಸಂಸ್ಥೆಯ 75 ವರ್ಷಗಳ ಪ್ರಯಾಣವನ್ನು ಸಂಕೇತಿಸುತ್ತದೆ.

1951ರಲ್ಲಿ ಸ್ಥಾಪನೆಯಾದ ಐಐಟಿ ಖರಗ್ ಪುರವು ದೇಶದಲ್ಲಿ ಸ್ಥಾಪನೆಯಾದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆಯಾಗಿದೆ. ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಗುರುತಿಸಲ್ಪಟ್ಟ ಇದು ಭಾರತದಲ್ಲಿ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಮುನ್ನಡೆಸುವಲ್ಲಿ ಪ್ರವರ್ತಕ ಪಾತ್ರವನ್ನು ವಹಿಸಿದೆ.

ಲಕ್ನೋದಲ್ಲಿ ಪ್ರಧಾನಮಂತ್ರಿ 

ಪ್ರಧಾನಮಂತ್ರಿ ಅವರು 5ನೇ “ಕೌಶಲ್ ದೀಕ್ಷಾಂತ್ ಸಮರೋಹ್ “ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 2021-22ರ ಶೈಕ್ಷಣಿಕ ಅಧಿವೇಶನದಲ್ಲಿ ಸ್ಥಾಪಿಸಲಾದ “ಕೌಶಲ್ ದೀಕ್ಷಾಂತ್ ಸಮರೋಹ್ “ಕಾರ್ಯಕ್ರಮವು ಕೌಶಲ್ಯ ಅಭಿವೃದ್ಧಿಯಲ್ಲಿ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಕೌಶಲ್ಯಪೂರ್ಣ ಯುವಕರು ತರಬೇತಿಯಿಂದ ಕೆಲಸದ ಪ್ರಪಂಚಕ್ಕೆ ಪರಿವರ್ತನೆಗೊಳ್ಳುವುದನ್ನು ಆಚರಿಸಲು ವಾರ್ಷಿಕ ರಾಷ್ಟ್ರೀಯ ವೇದಿಕೆಯಾಗಿ ಹೊರಹೊಮ್ಮಿದೆ. ಪ್ರಾರಂಭದಿಂದಲೂ, ಸಮಾರಂಭವು ಅಖಿಲ ಭಾರತ ಅಗ್ರಸ್ಥಾನದಲ್ಲಿರುವವರನ್ನು ಮತ್ತು ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆಯಿಂದ ಉನ್ನತ ಸಾಧಕರನ್ನು ಸನ್ಮಾನಿಸಿದೆ, ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯಪೂರ್ಣ ವೃತ್ತಿಜೀವನದ ಸುತ್ತ ಹೆಮ್ಮೆ, ಸಾಧನೆ ಮತ್ತು ಆಕಾಂಕ್ಷೆಯ ಸಂಸ್ಕೃತಿಯನ್ನು ಬೆಳೆಸಿದೆ.

ಈ ವರ್ಷ, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐ.ಗಳು), ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು (ಎನ್.ಎಸ್.ಟಿ.ಐ.ಗಳು) ಮತ್ತು ತರಬೇತುದಾರರ ತರಬೇತಿ ಸಂಸ್ಥೆಗಳಿಂದ (ಐ.ಟಿ.ಒ.ಟಿ.ಗಳು) ರಾಷ್ಟ್ರಮಟ್ಟದ ಅಗ್ರಶ್ರೇಣಿಯ  52  ಸಂಸ್ಥೆಗಳನ್ನು ಅವರುಗಳ ಅತ್ಯುತ್ತಮ ಸಾಧನೆಗಳಿಗಾಗಿ ಸನ್ಮಾನಿಸಲಾಗುವುದು.

 

*****


(ಪ್ರಕಟಣೆ ಐ.ಡಿ.: 2339213) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati