ಪ್ರಕಟಣಾ ದಿನಾಂಕ:
18 NOV 2026 7:39PM by PIB Bengaluru
ಡೈವರ್ಸಿ ಫಾರ್ಮ್-ಭಾರತ ಸಂಸ್ಥೆಯು ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತವು ಕನಿಷ್ಠ 1,000 ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.) ಗಳನ್ನು ಹೊಂದಿದೆ. ಯೋಜನೆಯ ಡಿಜಿಟಲ್ ಭೂಗೊಳ ನಕ್ಷೆಯಲ್ಲಿ ಈಗಾಗಲೇ ಈ ಸಮುದಾಯ-ನೇತೃತ್ವದ 652 ಸಂಸ್ಥೆಗಳನ್ನು ಗುರುತಿಸಿ ನಕ್ಷೆ ಮಾಡಿದೆ, ಇದು ಭಾರತದ ವೈವಿಧ್ಯಮಯ ಸಮುದಾಯ ಬೀಜ ಬ್ಯಾಂಕ್ ಗಳನ್ನು ಅರ್ಥಮಾಡಿಕೊಳ್ಳಲು, ಬಲಪಡಿಸಲು ಮತ್ತು ಬೆಂಬಲಿಸಲು ಪ್ರಮುಖ ಅಡಿಪಾಯವನ್ನು ಒದಗಿಸುತ್ತದೆ. ನವೆಂಬರ್ 17 ಮತ್ತು 18, 2026 ರಂದು ನವದೆಹಲಿಯ ಎನ್ ಎಂ ಎಸ್ ಸಿ. ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆದ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.) ಗಳ ಪ್ರಗತಿಗಾಗಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಫಲಿತಾಂಶಗಳನ್ನು ಹಂಚಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.) ಗಳ ಸ್ಥಾನೀಯ ಪರಿಚಯ (ಪ್ರೊಫೈಲ್/ ಗಳೊಂದಿಗೆ ಜಿಐಎಸ್ -ಆಧಾರಿತ ಅಟ್ಲಾಸ್, ಸಮುದಾಯ ಬೀಜ ಬ್ಯಾಂಕ್ ಗಳನ್ನು (ಸಿ.ಎಸ್.ಬಿ.) ಟೈಪೋಲಾಜಿಗಳ ಕುರಿತು ನೀತಿ ಸಂಕ್ಷಿಪ್ತ ವಿವರಣೆ, ಒಡಿಶಾದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.) ಗಳಿಗೆ ಮಾರ್ಗಸೂಚಿ ಮತ್ತು ಹೊಸ ಸಾಮರ್ಥ್ಯ-ನಿರ್ಮಾಣ ಮುಂತಾದ ವಿಷಯಗಳು ಕೈಪಿಡಿ ಸೇರಿವೆ.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನವದೆಹಲಿಯಲ್ಲಿರುವ ರಾಯಲ್ ನಾರ್ವೇಜಿಯನ್ ರಾಯಭಾರಿ ಕಚೇರಿಯ ರಾಯಭಾರಿ ಶ್ರೀಮತಿ ಮೇ-ಎಲಿನ್ ಸ್ಟೆನರ್ ಅವರು, ಭಾರತದಾದ್ಯಂತ ಸಮುದಾಯ ಬೀಜ ಬ್ಯಾಂಕುಗಳಿಗೆ ಯೋಜನೆಯ ವ್ಯಾಪಕ ನಕ್ಷೆ ಮತ್ತು ಬೆಂಬಲವನ್ನು ರಾಯಭಾರ ಕಚೇರಿ ಸ್ವಾಗತಿಸುತ್ತದೆ ಎಂದು ಹೇಳಿದರು. ಈ ಯೋಜನೆಯು ಭಾರತ ಮತ್ತು ನಾರ್ವೆ ನಡುವಿನ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು.
ಡೈವರ್ಸಿಫಾರ್ಮ್-ಭಾರತದ ಪ್ರಮುಖ ಪಾಲುದಾರರಾಗಿ ನಾರ್ವೆಯ ಫ್ರಿಡ್ಟ್ಜಾಫ್ ನ್ಯಾನ್ಸೆನ್ ಇನ್ಸ್ಟಿಟ್ಯೂಟ್ (ಎಫ್.ಎನ್.ಐ.) ಮತ್ತು ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (ಎಂ.ಎಸ್.ಎಸ್.ಆರ್.ಎಫ್.) ನಡುವಿನ ಮೂರು ವರ್ಷಗಳ ಸಹಯೋಗದ ಕಾರ್ಯಚಟುವಟಿಕೆಗಳ ಹಲವಾರು ಫಲಿತಾಂಶಗಳನ್ನು ನಾರ್ವೆಯ ಫ್ರಿಡ್ಟ್ಜಾಫ್ ನ್ಯಾನ್ಸೆನ್ ಇನ್ಸ್ಟಿಟ್ಯೂಟ್ (ಎಫ್.ಎನ್.ಐ.) ಸಂಸ್ಥೆಯ ಸಂಶೋಧನಾ ಪ್ರಾಧ್ಯಾಪಕಿ ಡಾ. ರೆಜಿನ್ ಆಂಡರ್ಸನ್ ಅವರು ಮಾತನಾಡಿ, ಭಾರತದಾದ್ಯಂತ ಕೆಲಸ ಮಾಡುವ ಸಮುದಾಯ ಬೀಜ ಬ್ಯಾಂಕುಗಳನ್ನು ನಮ್ಮ ಸಂಸ್ಥೆಯು ಒಟ್ಟುಗೂಡಿಸುತ್ತದೆ ಮತ್ತು ಅವುಗಳ ಸಾಮರ್ಥ್ಯ ಮತ್ತು ಸಾಮೂಹಿಕ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಅವರು ಹೇಳಿದರು.
ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (ಎಂ.ಎಸ್. ಎಸ್.ಆರ್.ಎಫ್.) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ರೆಂಗಲಕ್ಷ್ಮಿ ಆರ್, ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳು ಉಗ್ರಾಣಗಳಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿವೆ ಎಂದು ಹೇಳಿದರು. ರೈತರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಸ್ಥಳದಲ್ಲೇ ಸಂರಕ್ಷಣೆಗಾಗಿ ಮಾಡುವ ಜೀವಂತ ವ್ಯವಸ್ಥೆಯ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.
ಡೈವರ್ಸಿಫಾರ್ಮ್-ಭಾರತದ ಎಂಬುದು ಫ್ರಿಡ್ಟ್ಜಾಫ್ ನ್ಯಾನ್ಸೆನ್ ಸಂಸ್ಥೆ (ಎಫ್.ಎನ್.ಐ.) ಮತ್ತು ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (ಎಂ.ಎಸ್. ಎಸ್.ಆರ್. ಎಫ್.) ಸಂಸ್ಥೆಯ ನೇತೃತ್ವದ ಯೋಜನೆಯಾಗಿದ್ದು, ಸಮುದಾಯ ಬೀಜ ಬ್ಯಾಂಕುಗಳ ಮೂಲಕ ಬೀಜ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಸಣ್ಣ ರೈತರಿಗೆ ಆಹಾರ, ಪೋಷಣೆ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಸರಿಯಾದ ನೀತಿಯನ್ನು ಮಾರ್ಗದರ್ಶಿಸಲು ಆರು ವಿಧಗಳು; ಹಾಗೂ, ಒಡಿಶಾದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳ ಭವಿಷ್ಯವನ್ನು ರೂಪಿಸಲು ಒಂದು ಮಾರ್ಗಸೂಚಿ
ಸಮಗ್ರ ಅಧ್ಯಯನವು ನಿರ್ವಹಣಾ ರಚನೆಗಳ ಆಧಾರದ ಮೇಲೆ ಆರು ಸಮುದಾಯ ಬೀಜ ಬ್ಯಾಂಕ್ ಗಳ (ಸಿ.ಎಸ್.ಬಿ.) ವಿಧಗಳನ್ನು ಗುರುತಿಸಿದೆ. ಈ ಸಾಂಸ್ಥಿಕ ವ್ಯತ್ಯಾಸಗಳ ಗುರುತಿಸುವುದು ಯೋಜನೆಯ ಗುರಿ ಮತ್ತು ಪರಿಣಾಮಕಾರಿ ನೀತಿ ಬೆಂಬಲಕ್ಕಾಗಿ ನಿರ್ಣಾಯಕವಾಗಿದೆ.
ಯೋಜನೆಯ ಅಡಿಯಲ್ಲಿ ಮತ್ತೊಂದು ನೀತಿ ಸಂಕ್ಷಿಪ್ತ ವಿವರಣೆಯು ಒಡಿಶಾದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳಿಗೆ 10-ಅಂಶಗಳ ಮಾರ್ಗಸೂಚಿಯನ್ನು ಪಟ್ಟಿ ಮಾಡುತ್ತದೆ. ರಾಜ್ಯದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳನ್ನು ಸಕ್ರಿಯಗೊಳಿಸುವ ಪರಿಸರಗಳನ್ನು ರೂಪಿಸಲು ಮತ್ತು ಉಳಿಸಿಕೊಳ್ಳಲು ಕೃಷಿ ಮತ್ತು ರೈತರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಒಂದು ಸಚಿವಾಲಯವನ್ನು ಇದು ಶಿಫಾರಸು ಮಾಡುತ್ತದೆ.
ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.) ಗಳನ್ನು ಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಈ ಕೈಪಿಡಿಯು ಪ್ರಾಯೋಗಿಕ ಮಾರ್ಗದರ್ಶಿ ಸಹಾಯವನ್ನು ನೀಡುತ್ತದೆ
ಪ್ರಾಯೋಗಿಕ ರಾಜ್ಯವಾದ ಒಡಿಶಾದಲ್ಲಿ ನಡೆಸಿದ ಆಳವಾದ ಪ್ರಕರಣ ಅಧ್ಯಯನಗಳ ಆಧಾರದ ಮೇಲೆ ಸಾಮರ್ಥ್ಯ-ನಿರ್ವಹಣೆ ಕೈಪಿಡಿಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ತಾಂತ್ರಿಕ ಮಾರ್ಗದರ್ಶನ, ಸಾಂಸ್ಥಿಕ ವಿಧಾನಗಳು ಮತ್ತು ನೀತಿ ಪ್ರಸ್ತುತತೆಯನ್ನು ಒಟ್ಟುಗೂಡಿಸಿ, ಇದು ಭಾರತದಲ್ಲಿ ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳನ್ನು ಸ್ಥಾಪಿಸಲು, ನಿರ್ವಹಿಸಲು ಮತ್ತು ಉಳಿಸಿಕೊಳ್ಳಲು ಪ್ರಾಯೋಗಿಕ ಹಾಗೂ ಸಹಾಯಕ ಮಾರ್ಗದರ್ಶಿಯಾಗಿದೆ.
ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ, ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (ಪಿ.ಪಿ.ವಿ.ಎಫ್. ಆರ್.ಎ) ಇದರ ಅಧ್ಯಕ್ಷರಾದ ಡಾ. ತ್ರಿಲೋಚನ್ ಮೊಹಾಪಾತ್ರ ಅವರು ಈ ಕೈಪಿಡಿಯನ್ನು ಬಿಡುಗಡೆ ಮಾಡಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸಮುದಾಯ ಬೀಜ ಬ್ಯಾಂಕ್ ಗಳನ್ನು (ಸಿ.ಎಸ್.ಬಿ.)ಗಳಿಗೆ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು (ಪಿ.ಪಿ.ವಿ.ಎಫ್.ಆರ್.ಎ) ನೀಡಿರುವ ಬೆಂಬಲವನ್ನು ಗಮನಿಸಿದ ಅವರು, ಸರ್ಕಾರದ ಬೆಂಬಲ ಈಗ ಬೆಳೆಯುತ್ತಿರುವುದರಿಂದ, ಸಮುದಾಯ ಬೀಜ ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತವೆ ಎಂದು ಖಚಿತ ಎಂದು ಹೇಳಿದರು.
ಕಾನೂನು ಮತ್ತು ನೀತಿ ಭೂ ಚೌಕಟ್ಟು
ಡೈವರ್ಸಿಫಾರ್ಮ್-ಭಾರತದ ಯೋಜನೆಯು ಸಮುದಾಯ ಬೀಜ ಬ್ಯಾಂಕ್ ಗಳನ್ನು (ಸಿ.ಎಸ್.ಬಿ.) ಗಳಿಗೆ ಇರುವ ಅಡಚಣೆಗಳು ಮತ್ತು ಅವಕಾಶಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಭಾರತದಲ್ಲಿನ ಕಾನೂನು ಮತ್ತು ನೀತಿ ಭೂಚೌಕಟ್ಪನ್ನು ಸಹ ಪರಿಶೀಲಿಸಲಾಯಿತು. ಸಮುದಾಯ ಬೀಜ ಬ್ಯಾಂಕ್ (ಸಿ.ಎಸ್.ಬಿ.)ಗಳನ್ನು ಬಲಪಡಿಸುವಲ್ಲಿ ಅವುಗಳ ಪ್ರದರ್ಶಿತ ಸಾಮರ್ಥ್ಯಕ್ಕಾಗಿ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕು ಕಾಯ್ದೆ ಮತ್ತು ರಾಷ್ಟ್ರೀಯ ಜೀವವೈವಿಧ್ಯ ಕಾಯ್ದೆಯನ್ನು ಸಹ ಈ ಸಂದರ್ಭದಲ್ಲಿ ಗುರುತಿಸಲಾಗಿದೆ.
ಪಿ.ಪಿ.ವಿ.ಎಫ್.ಆರ್.ಎ ಮತ್ತು ಎನ್.ಬಿ.ಎ.ಗಳ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಪಿ. ಎಲ್. ಗೌತಮ್ ಅವರು ರೈತರಿಗೆ ಮತ್ತಷ್ಟು ಪ್ರಯೋಜನವನ್ನು ನೀಡಲು, ಎರಡು ಕಾನೂನುಗಳ ನಡುವೆ ಏಕರೂಪತೆ ಯನ್ನು ಸ್ಥಾಪಿಸುವ ಅಗತ್ಯವು ಚರ್ಚೆಗಳಲ್ಲಿ ಹೊರಹೊಮ್ಮಿತು ಎಂದು ಹೇಳಿದರು. ಜೀವವೈವಿಧ್ಯವು ಮಾನವಕುಲದ ಸಾಮಾನ್ಯ ಪರಂಪರೆಯಾಗಿದ್ದು, ಕಾನೂನುಗಳ ಸ್ಥಾಪಕ ತತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಐಸಿಎಆರ್-ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ ಮತ್ತು ಐಸಿಎಆರ್ನ ಡಿಡಿಜಿ (ಕ್ರಾಪ್ ಸೈನ್ಸ್) ನಿರ್ದೇಶಕ ಡಾ. ದೇವೇಂದ್ರ ಕುಮಾರ್ ಯಾದವ, ಸಮುದಾಯ ಜೀನ್ ಬ್ಯಾಂಕ್ ಗಳು ಮತ್ತು ರಾಷ್ಟ್ರೀಯ ಜೀನ್ ಬ್ಯಾಂಕ್ ಗಳನ್ನು ಸಹಯೋಗದಿಂದ ಬಲಪಡಿಸಬಹುದು ಎಂದು ಉಲ್ಲೇಖಿಸಿದರು. ಅವರ ಶಿಫಾರಸನ್ನು ಪ್ರತಿಧ್ವನಿಸುತ್ತಾ, ಪದ್ಮಶ್ರೀ ಡಾ. ಪಿ. ಎಲ್. ಗೌತಮ್ ಅವರು ಬದ್ಧ ಹಣಕಾಸು ಮತ್ತು ಸಾಮರ್ಥ್ಯ ವೃದ್ಧಿ ಈ ಸಮಯದ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.
ಸಿ.ಎಸ್.ಬಿ ಕೈಪಿಡಿ, ಡಿಜಿಟಲ್ ಅಟ್ಲಾಸ್ ಮತ್ತು ಸಿ.ಎಸ್.ಬಿ ಟೈಪೊಲಾಜಿಗಳ ಕುರಿತು ನೀತಿ ಸಂಕ್ಷಿಪ್ತ ವಿವರಣೆಗಾಗಿ, ದಯವಿಟ್ಟು https://communityseedbanks.in/ ಅನ್ನು ವೀಕ್ಷಿಸಿ
*****