ಪ್ರಕಟಣಾ ದಿನಾಂಕ:
17 NOV 2026 7:22PM by PIB Bengaluru
ದಾಖಲೆಗಳು:
1. ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಕುರಿತು ಆಸಿಯಾನ್-ಭಾರತ ಜಂಟಿ ಹೇಳಿಕೆ
2. ಆನ್ಲೈನ್ ವಂಚನೆಗಳು ಮತ್ತು ಸಂಬಂಧಿತ ಅಪರಾಧಗಳ ವಿರುದ್ಧ ಸಹಕಾರ ಬಲಪಡಿಸುವ ಕುರಿತು ಪೂರ್ವ ಏಷ್ಯಾ ಶೃಂಗಸಭೆ ನಾಯಕರ ಹೇಳಿಕೆ
3. 'ನಮ್ಮ ಭವಿಷ್ಯದತ್ತ ಒಟ್ಟಾಗಿ ಸಾಗುವುದು: ಸ್ಥಿರತೆ ಮತ್ತು ನವೀಕರಣ' ಕುರಿತ ಪೂರ್ವ ಏಷ್ಯಾ ಶೃಂಗಸಭೆಯ ಘೋಷಣೆ.
ಪ್ರಕಟಣೆಗಳು:
1. 23ನೇ ಭಾರತ - ಆಸಿಯಾನ್ ಶೃಂಗಸಭೆ
1. ಸಂಪರ್ಕ, ವೈಜ್ಞಾನಿಕ ಸಂಶೋಧನೆ, ವಿಪತ್ತು ನಿರ್ವಹಣೆ, ಕರಾವಳಿ ರಕ್ಷಣಾ ಸಹಕಾರ, ಕಡಲ ಕ್ಷೇತ್ರದ ಅರಿವು ಮತ್ತು ನಾವಿಕರ ಸುರಕ್ಷತೆ ಹೆಚ್ಚಿಸುವ ಕುರಿತು ದೀರ್ಘಾವಧಿಯ ಆಸಿಯಾನ್-ಭಾರತ ಕಡಲ ಸಹಕಾರ ಯೋಜನೆ
2. ಪ್ರದೇಶದಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಜಂಟಿ ಸೈಬರ್ ಫೋರೆನ್ಸಿಕ್ಸ್ ತರಬೇತಿ ಕಾರ್ಯಕ್ರಮ
3. ಆಸಿಯಾನ್-ಭಾರತ ಪರಮಾಣು ಇಂಧನ ತಾಂತ್ರಿಕ ವಿನಿಮಯಗಳು
4. ಆಸಿಯಾನ್-ಭಾರತ ಬಾಹ್ಯಾಕಾಶ ಹ್ಯಾಕಥಾನ್
5. ಗಣಿಗಾರಿಕೆ ಮತ್ತು ನಿರ್ಣಾಯಕ ಖನಿಜಗಳ ಕುರಿತು ಆಸಿಯಾನ್-ಭಾರತ ಸಹಕಾರ
6. ಯುವ ಶೃಂಗಸಭೆ, ಯುವ ಸಂಸದೀಯ ವಿನಿಮಯಗಳು ಮತ್ತು ಸ್ಟಾರ್ಟಪ್ ಹ್ಯಾಕಥಾನ್ಗಳ ಮೂಲಕ ಆಸಿಯಾನ್-ಭಾರತ ಯುವ ಸಂಪರ್ಕ
7. ನಳಂದ ವಿಶ್ವವಿದ್ಯಾಲಯದಲ್ಲಿ ಆಸಿಯಾನ್ ದೇಶಗಳಿಗೆ ವಿದ್ಯಾರ್ಥಿವೇತನ ಹೆಚ್ಚಿಸುವುದು
8. ವೇವ್ಸ್ 2027ರಲ್ಲಿ ಆಸಿಯಾನ್-ಭಾರತ ಸೃಜನಶೀಲ ಪಾಲುದಾರಿಕೆ ವೇದಿಕೆ(ಮಂಟಪ) ಮತ್ತು
9. ಆಸಿಯಾನ್ ದೇಶಗಳ ಪ್ರವಾಸಿಗರಿಗೆ ಉಚಿತ ಇ-ವೀಸಾ.
2. 21ನೇ ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್)
1. ಜಂಟಿ ತರಬೇತಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸ್ಪಂದನೆ ಸಹಕಾರಕ್ಕಾಗಿ 'ಸಮುದ್ರಯಾನಿಗಳ ಸುರಕ್ಷತಾ ಉಪಕ್ರಮ'.
2. ಆನ್ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳಂತಹ ಗಡಿಯಾಚೆಗಿನ ಅಪರಾಧಗಳಿಂದ ಉಂಟಾಗುವ ಹೊಸ ಬಗೆಯ ಬೆದರಿಕೆಗಳನ್ನು ಎದುರಿಸಲು ನ್ಯಾಷನಲ್ ಫೋರೆನ್ಸಿಕ್ ಸೈನ್ಸ್ ಯೂನಿವರ್ಸಿಟಿಯಲ್ಲಿ(ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ) 'ಇಎಎಸ್ ಸೈಬರ್ ಅಪರಾಧ ಸಮ್ಮೇಳನ'.
3. ಲೋಥಲ್ನಲ್ಲಿ 'ಇಎಎಸ್ ಕಡಲ ಪರಂಪರೆ ಉತ್ಸವ'.
4. ಇಎಎಸ್ ರಾಷ್ಟ್ರಗಳೊಂದಿಗೆ ಶೈಕ್ಷಣಿಕ ಸಹಕಾರ ಹೆಚ್ಚಿಸಲು ನಳಂದದಲ್ಲಿ 'ಇಎಎಸ್ ವಿಶ್ವವಿದ್ಯಾಲಯ ಸಮಾವೇಶ'.
*****