ಪ್ರಕಟಣಾ ದಿನಾಂಕ:
11 NOV 2026 3:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು, ನೋಯ್ಡಾ ಮೆಟ್ರೋ ರೈಲು ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ 5 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿರುವ 8.449 ಕಿ.ಮೀ. ಉದ್ದಕ್ಕೆ ವಿಸ್ತರಿಸಲು ಅನುಮೋದನೆ ನೀಡಿದೆ. ಈ ಮಾರ್ಗವು ಕಾರ್ಯಾಚರಣೆಗೆ ಬಂದ ನಂತರ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರಗಳು ಒಟ್ಟು 71.878 ಕಿಮೀ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಲಿವೆ.
ಪ್ರಯೋಜನಗಳು ಮತ್ತು ಅಭಿವೃದ್ಧಿಗೆ ಉತ್ತೇಜನ:
ನೋಯ್ಡಾ ಮೆಟ್ರೋ ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ ವಿಸ್ತರಿಸುವುದು, ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಈ ಯೋಜನೆಯು ನಗರದಲ್ಲಿನ ಮೆಟ್ರೋ ರೈಲು ಜಾಲದ ಬೃಹತ್ ವಿಸ್ತರಣೆಯಾಗಿ ಕಾರ್ಯನಿರ್ವಹಿಸಲಿದೆ.
ಹೆಚ್ಚುವ ಸಂಪರ್ಕ ಸೌಲಭ್ಯ:
ನೋಯ್ಡಾ ಮೆಟ್ರೋ ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ ವಿಸ್ತರಿಸುವುದರಿಂದ, ಸುಮಾರು 8.449 ಕಿ.ಮೀ. ಉದ್ದದ ಹೊಸ ಮೆಟ್ರೋ ಮಾರ್ಗಗಳು ಸೇರ್ಪಡೆಯಾಗಲಿವೆ. ಇದು ಪ್ರಸ್ತುತ ಸಮರ್ಥ ಸಂಪರ್ಕದ ಕೊರತೆಯನ್ನು ಎದುರಿಸುತ್ತಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸಲಿದೆ. ಜೊತೆಗೆ, ಇದು ನೋಯ್ಡಾ ಸೆಕ್ಟರ್-61 ಬ್ಲೂ ಲೈನ್ ಇಂಟರ್ಚೇಂಜ್ (ಸಂಪರ್ಕ ನಿಲ್ದಾಣ) ಸೇರಿದಂತೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳೊಂದಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.
ಈ ಹಂತವು ನೋಯ್ಡಾದ ಪ್ರಮುಖ ವಲಯಗಳನ್ನು ಸುಗಮವಾಗಿ ಜೋಡಿಸುವ ಗುರಿಯನ್ನು ಹೊಂದಿದೆ, ಇವುಗಳಲ್ಲಿ ಈ ಕೆಳಗಿನವು ಸೇರಿವೆ:
- ಗೌರ್ ಸಿಟಿ ಮಾಲ್, ಎಚ್&ಎಸ್ ಮಾಲ್ & ಕಚೇರಿ ಸಂಕೀರ್ಣ, ಗ್ರೇಟರ್ ನೋಯ್ಡಾ ಸೆಕ್ಟರ್-04 ರಲ್ಲಿನ ಬ್ಲೂ ಸಫೈರ್ ಮಾಲ್ & ವಾಣಿಜ್ಯ ಸಂಕೀರ್ಣ, ನೋಯ್ಡಾ ಸೆಕ್ಟರ್-51 ರಲ್ಲಿನ ಐಕಿಯಾ ಮತ್ತು ನೋಯ್ಡಾ ಸೆಕ್ಟರ್-73 ರಲ್ಲಿನ ಆಂಥೂರಿಯಂ ಮಾಲ್ನಂತಹ ವಾಣಿಜ್ಯ ಕೇಂದ್ರಗಳು.
- ನೋಯ್ಡಾ ಸೆಕ್ಟರ್-60 ರಲ್ಲಿನ ಟೆಕ್ ಮಹೀಂದ್ರಾ ಕಚೇರಿ, ಟಿಸಿಎಲ್ ಟೆಕ್ ಕಚೇರಿ, ನೋಯ್ಡಾ ಸೆಕ್ಟರ್-73 ರಲ್ಲಿನ ತೈಲ ಉದ್ಯಮ ಅಭಿವೃದ್ಧಿ ಮಂಡಳಿ ಮತ್ತು ಗ್ರೇಟರ್ ನೋಯ್ಡಾ ಸೆಕ್ಟರ್-04 ರಲ್ಲಿನ ಗೋಲ್ಡನ್ ಐ ಕಚೇರಿ & ವಾಣಿಜ್ಯ ಸಂಕೀರ್ಣದಂತಹ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು (MNCs) ಮತ್ತು ಐಟಿ ಕೇಂದ್ರಗಳು.
- ನೋಯ್ಡಾ ಸೆಕ್ಟರ್-122 ರಲ್ಲಿನ ದೆಹಲಿ ಪಬ್ಲಿಕ್ ಸ್ಕೂಲ್ನಂತಹ ಶಿಕ್ಷಣ ಸಂಸ್ಥೆಗಳು.
- ನೋಯ್ಡಾ ಸೆಕ್ಟರ್-70 ರಲ್ಲಿನ ಕೈಲಾಶ್ ಆಸ್ಪತ್ರೆ ಮತ್ತು ರಾಮಾ ಆಸ್ಪತ್ರೆ, ನೋಯ್ಡಾ ಸೆಕ್ಟರ್-51 ರಲ್ಲಿನ ಕ್ಲೌಡ್9 ಆಸ್ಪತ್ರೆ ಹಾಗೂ ನೋಯ್ಡಾ ಸೆಕ್ಟರ್-62 ರಲ್ಲಿನ ರಾಮಾ ಆಸ್ಪತ್ರೆಯಂತಹ ಪ್ರಮುಖ ಆರೋಗ್ಯ ರಕ್ಷಣಾ ಸೌಲಭ್ಯಗಳು.
- ನೋಯ್ಡಾ ಸೆಕ್ಟರ್-122 ರಲ್ಲಿನ ಕ್ಲಿಯೋ ಕೌಂಟಿ ರೆಸಿಡೆನ್ಸೀಸ್ ಮತ್ತು ಗ್ರೇಟರ್ ನೋಯ್ಡಾ ಸೆಕ್ಟರ್-04 ರಲ್ಲಿನ ಗೌರ್ ಸಿಟಿ 1 & 2 ರಂತಹ ಪ್ರಮುಖ ವಸತಿ ಸಮುಚ್ಚಯಗಳು.
ಈ ಪ್ರಮುಖ ಪ್ರದೇಶಗಳನ್ನು ಮೆಟ್ರೋ ಜಾಲದೊಂದಿಗೆ ಜೋಡಿಸುವ ಮೂಲಕ, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗದ ವಿಸ್ತರಣೆಯು, ಸಂಪರ್ಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆರ್ಥಿಕ ಚಟುವಟಿಕೆಯನ್ನೂ ಉತ್ತೇಜಿಸಲಿದೆ ಹಾಗೂ ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಸಾಮಾನ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ, ನಿವಾಸಿಗಳು ಮತ್ತು ಪ್ರಯಾಣಿಕರ ನಗರ ಸಂಚಾರವನ್ನು ಸುಗಮಗೊಳಿಸಲಿದೆ.
- ಸಂಚಾರ ದಟ್ಟಣೆ ಇಳಿಕೆ: ಸಮರ್ಥ ಪರ್ಯಾಯ ರಸ್ತೆ ಸಾರಿಗೆಯಾಗಿ ಮೆಟ್ರೋ ರೈಲು ಕಾರ್ಯನಿರ್ವಹಿಸಲಿದ್ದು, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರದಲ್ಲಿನ ಮೆಟ್ರೋ ರೈಲು ಜಾಲದ ವಿಸ್ತರಣೆಯಾಗಿ ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗದ ವಿಸ್ತರಣೆಯು ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿರೀಕ್ಷೆಯಿದೆ. ರಸ್ತೆ ಸಂಚಾರದಲ್ಲಿನ ಇಳಿಕೆಯು ವಾಹನಗಳ ಸುಗಮ ಸಂಚಾರಕ್ಕೆ, ಪ್ರಯಾಣದ ಸಮಯದ ಕಡಿತಕ್ಕೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆಯ ಹೆಚ್ಚಳಕ್ಕೆ ಕಾರಣವಾಗಬಹುದು.
- ಪರಿಸರ ಪ್ರಯೋಜನಗಳು: ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗದ ವಿಸ್ತರಣೆಯ ಸೇರ್ಪಡೆ ಮತ್ತು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ನಗರದಲ್ಲಿ ಒಟ್ಟಾರೆ ಮೆಟ್ರೋ ರೈಲು ಜಾಲದ ಹೆಚ್ಚಳವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಸಾರಿಗೆಗೆ ಹೋಲಿಸಿದರೆ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
- ಆರ್ಥಿಕ ಬೆಳವಣಿಗೆ: ಕಡಿಮೆಯಾದ ಪ್ರಯಾಣದ ಸಮಯ ಮತ್ತು ನಗರದ ವಿವಿಧ ಭಾಗಗಳಿಗೆ ಹಾಗೂ ದೆಹಲಿಯ ವಿಮಾನ ನಿಲ್ದಾಣ, ದೆಹಲಿಯ ರೈಲು ನಿಲ್ದಾಣಗಳು ಮತ್ತು ವಿವಿಧ ಬಸ್ ಡಿಪೋಗಳಂತಹ ಸಾರಿಗೆ ಕೇಂದ್ರಗಳಿಗೆ ಸುಧಾರಿತ ಪ್ರವೇಶವು ವ್ಯಕ್ತಿಗಳು ತಮ್ಮ ಕೆಲಸದ ಸ್ಥಳಗಳು ಮತ್ತು ತಲುಪಬೇಕಾದ ಸ್ಥಳಗಳನ್ನು ಹೆಚ್ಚು ಸಮರ್ಥವಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಹೆಚ್ಚಿದ ಸಂಪರ್ಕವು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ, ವಿಶೇಷವಾಗಿ ಹೊಸ ಮೆಟ್ರೋ ನಿಲ್ದಾಣಗಳ ಬಳಿಯ ಪ್ರದೇಶಗಳಲ್ಲಿ, ಇದು ಹಿಂದೆ ಕಡಿಮೆ ಸಂಪರ್ಕ ಹೊಂದಿದ್ದ ಪ್ರದೇಶಗಳಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯನ್ನು ಆಕರ್ಷಿಸುತ್ತದೆ.
- ಸಾಮಾಜಿಕ ಪರಿಣಾಮ: ನೋಯ್ಡಾದಲ್ಲಿ ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗದ ವಿಸ್ತರಣೆಯು ಸಾರ್ವಜನಿಕ ಸಾರಿಗೆಗೆ ಹೆಚ್ಚು ಸಮಾನ ಪ್ರವೇಶವನ್ನು ಒದಗಿಸುತ್ತದೆ, ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಾರಿಗೆ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ. ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಅತ್ಯಗತ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ಉತ್ತಮ ಗುಣಮಟ್ಟದ ಜೀವನಕ್ಕೆ ಕೊಡುಗೆ ನೀಡುತ್ತದೆ.
- ನೋಯ್ಡಾ ಮೆಟ್ರೋ ರೈಲು ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ ವಿಸ್ತರಿಸುವುದು ನಗರಕ್ಕೆ ಪರಿವರ್ತನಾತ್ಮಕ ಅಭಿವೃದ್ಧಿಯಾಗಲಿದೆ. ಇದು ಸುಧಾರಿತ ಸಂಪರ್ಕ, ಸಂಚಾರ ದಟ್ಟಣೆ ಇಳಿಕೆ, ಪರಿಸರ ಪ್ರಯೋಜನಗಳು, ಆರ್ಥಿಕ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟವನ್ನು ನೀಡುವ ಭರವಸೆ ನೀಡುತ್ತದೆ. ಪ್ರಮುಖ ನಗರ ಸವಾಲುಗಳನ್ನು ಪರಿಹರಿಸುವ ಮೂಲಕ ಮತ್ತು ಭವಿಷ್ಯದ ವಿಸ್ತರಣೆಗೆ ಅಡಿಪಾಯವನ್ನು ಒದಗಿಸುವ ಮೂಲಕ, ಇದು ನಗರದ ಅಭಿವೃದ್ಧಿಯ ಪಥ ಮತ್ತು ಸುಸ್ಥಿರತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

*****