ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಟರ್ಕಿಯ ಅಂಟಾಲ್ಯದಲ್ಲಿ ನಡೆಯುತ್ತಿರುವ ‘ಯುಎನ್‌ಎಫ್‌ಸಿಸಿಸಿ ಸಿಒಪಿ 31’ ಸಮ್ಮೇಳನದಲ್ಲಿ (ಹವಾಮಾನ ಶೃಂಗಸಭೆ) ಹವಾಮಾನ ಬಹುಪಕ್ಷೀಯತೆ ಮತ್ತು ನ್ಯಾಯಸಮ್ಮತ, ಮಹತ್ವಾಕಾಂಕ್ಷೆಯ ಫಲಿತಾಂಶಕ್ಕಾಗಿ ಭಾರತವು ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ


ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದದ ಅನುಚ್ಛೇದ 9.1 ರ ಅಡಿಯಲ್ಲಿ ಹವಾಮಾನ ಹಣಕಾಸು ಬಾಧ್ಯತೆಗಳನ್ನು ಪೂರೈಸುವ ಅಗತ್ಯವಿದೆ ಎಂದು ಭಾರತ ಒತ್ತಿ ಹೇಳಿದೆ

ಹವಾಮಾನ ಬದಲಾವಣೆಯನ್ನು ಪರಿಹರಿಸಲು, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಸಮಾನತೆ, ನ್ಯಾಯಯುತ ಪರಿವರ್ತನೆ ಮತ್ತು ಹೊಂದಾಣಿಕೆ ಮುಖ್ಯವೆಂದು ಒತ್ತಿ ಹೇಳಲಾಗಿದೆ

ಪ್ರಕಟಣಾ ದಿನಾಂಕ: 10 NOV 2026 1:11PM by PIB Bengaluru

ಟರ್ಕಿಯ ಅಂಟಾಲ್ಯದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಸಮಾವೇಶದ (ಯುಎನ್ಎಫ್‌ಸಿಸಿಸಿ) 31ನೇ ಸಮ್ಮೇಳನದಲ್ಲಿ (ಸಿಒಪಿ31) (ಹವಾಮಾನ ಶೃಂಗಸಭೆ) ಭಾರತವು ಹವಾಮಾನ ಬಹುಪಕ್ಷೀಯತೆ ಹಾಗೂ ಸಮಾನತೆ ಮತ್ತು 'ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ'  ತತ್ವಗಳ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಜೊತೆಗೆ ನ್ಯಾಯಸಮ್ಮತ ಮತ್ತು ಮಹತ್ವಾಕಾಂಕ್ಷೆಯ ಫಲಿತಾಂಶಕ್ಕಾಗಿ ಕರೆ ನೀಡಿದೆ.

‘ಸಿಒಪಿ 31’ರಲ್ಲಿ ಭಾರತದ ಆರಂಭಿಕ ಹೇಳಿಕೆಯನ್ನು ನೀಡಿದ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಶ್ರೀ ನರೇಂದ್ರ ಭೂಷಣ್ ಅವರು ‘ಸಿಒಪಿ31’ರ ನಾಯಕತ್ವಕ್ಕಾಗಿ ಟರ್ಕಿ ಮತ್ತು ಆಸ್ಟ್ರೇಲಿಯಾಕ್ಕೆ ಕೃತಜ್ಞತೆ ಸಲ್ಲಿಸಿದರು. ಹವಾಮಾನ ಬಹುಪಕ್ಷೀಯತೆಯನ್ನು ಬಲಪಡಿಸುವ ಪ್ರಯತ್ನಗಳಿಗಾಗಿ ಅವರು ಎಲ್ಲಾ ಪಕ್ಷಗಳು ಮತ್ತು ಸಮಾಲೋಚನಾ ಗುಂಪುಗಳನ್ನು ಶ್ಲಾಘಿಸಿದರು. ಜೊತೆಗೆ ಜಿ 77 ಮತ್ತು ಚೀನಾ, ಎಲ್ಎಂಡಿಸಿ ಮತ್ತು ‘ಬೇಸಿಕ್’ ನೀಡಿದ ಹೇಳಿಕೆಗಳೊಂದಿಗೆ ಭಾರತವು ತಾನು ಹೊಂದಿಕೊಳ್ಳುತ್ತದೆ ಎಂದು ಹೇಳಿದರು.

ಬಹುಪಕ್ಷೀಯತೆಯ ಮಹತ್ವವನ್ನು ಒತ್ತಿ ಹೇಳಿದ ಭಾರತ, ಯುಎನ್‌ಎಫ್‌ಸಿಸಿಸಿ ಮತ್ತು ಅದರ ಪ್ಯಾರಿಸ್ ಒಪ್ಪಂದವು ಪ್ರತಿಯೊಂದು ದೇಶವೂ ಧ್ವನಿಯನ್ನು ಹೊಂದಿರುವ ಅತ್ಯಂತ ಅಂತರ್ಗತ ವೇದಿಕೆಗಳಾಗಿವೆ ಎಂದು ಒತ್ತಿಹೇಳಿತು. ಸಮಾನತೆ ಮತ್ತು ಸಿಬಿಡಿಆರ್-ಆರ್‌ಸಿ ತತ್ವದಲ್ಲಿ ಬೇರೂರಿರುವ ಈ ಪ್ರಕ್ರಿಯೆಯಲ್ಲಿ ಭಾರತವು ತನ್ನ ನಂಬಿಕೆಯನ್ನು ಪುನರುಚ್ಚರಿಸಿತು. ಮಾತುಕತೆ, ಒಮ್ಮತ ಮತ್ತು ಕ್ರಿಯೆಯಿಂದ ಮಾರ್ಗದರ್ಶಿಸಲ್ಪಟ್ಟ 'ಸಿಒಪಿ ಅನುಷ್ಠಾನ'ದ ಅಧ್ಯಕ್ಷತೆಯ ದೃಷ್ಟಿಕೋನವನ್ನು ಸ್ವಾಗತಿಸಿದ ಭಾರತ, ಸಂವಾದವು ನಂಬಿಕೆಯನ್ನು ನಿರ್ಮಿಸುತ್ತದೆ, ಒಮ್ಮತವು ಫಲಿತಾಂಶಗಳ ಸಾಮೂಹಿಕ ಮಾಲೀಕತ್ವವನ್ನು ಖಾತ್ರಿಪಡಿಸುತ್ತದೆ ಮತ್ತು ಕ್ರಮವು ಬದ್ಧತೆಗಳನ್ನು ನೆಲದ ಪ್ರಗತಿಗೆ ಪರಿವರ್ತಿಸುತ್ತದೆ ಎಂದು ಗಮನಿಸಿತು.

ಬಹುಪಕ್ಷೀಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಭಾರತ, ‘ಯುಎನ್‌ಎಫ್‌ಸಿಸಿಸಿ’  ಮತ್ತು ಅದರ ಪ್ಯಾರಿಸ್ ಒಪ್ಪಂದವು ಪ್ರತಿಯೊಂದು ದೇಶವೂ ತನ್ನ ಧ್ವನಿಯನ್ನು ಹೊಂದಿರುವ ಅತ್ಯಂತ ಅಂತರ್ಗತ ವೇದಿಕೆಗಳಾಗಿ ಉಳಿದಿವೆ ಎಂದು ಪ್ರತಿಪಾದಿಸಿತು. ಸಮಾನತೆ ಮತ್ತು ‘ಸಿಬಿಡಿಆರ್‌-ಆರ್‌ಸಿ’ ತತ್ವದಲ್ಲಿ ಬೇರೂರಿರುವ ಈ ಪ್ರಕ್ರಿಯೆಯಲ್ಲಿ ಭಾರತವು ತನ್ನ ನಂಬಿಕೆಯನ್ನು ಪುನರುಚ್ಚರಿಸಿದೆ. 'ಸಂವಾದ, ಒಮ್ಮತ ಮತ್ತು ಕ್ರಿಯೆ'ಯಿಂದ ಮುನ್ನಡೆಸಲ್ಪಡುವ 'ಅನುಷ್ಠಾನದ ಸಿಒಪಿ’  ಎಂಬ ಅಧ್ಯಕ್ಷತೆಯ ದೃಷ್ಟಿಕೋನವನ್ನು ಸ್ವಾಗತಿಸಿದ ಭಾರತ, ಸಂವಾದವು ನಂಬಿಕೆಯನ್ನು ಬೆಳೆಸುತ್ತದೆ, ಒಮ್ಮತವು ಫಲಿತಾಂಶಗಳ ಸಾಮೂಹಿಕ ಮಾಲೀಕತ್ವವನ್ನು ಖಚಿತಪಡಿಸುತ್ತದೆ ಮತ್ತು ಕ್ರಿಯೆಯು ಬದ್ಧತೆಗಳನ್ನು ವಾಸ್ತವದಲ್ಲಿ ಪ್ರಗತಿಯಾಗಿ ಪರಿವರ್ತಿಸುತ್ತದೆ ಎಂದು ಪ್ರತಿಪಾದಿಸಿದೆ.

1.5 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಿತಿಯನ್ನು ದಾಟುವ ಸಾಧ್ಯತೆಯಿಂದ ಎದುರಾಗುತ್ತಿರುವ ಹೆಚ್ಚುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಭಾರತ, ಹವಾಮಾನ ಬದಲಾವಣೆಯನ್ನು ಪರಿಹರಿಸುವ ಸಾಮೂಹಿಕ ಪ್ರಯತ್ನದಲ್ಲಿ ಯಾರೂ ಹಿಂದೆ ಬೀಳದಂತೆ ನೋಡಿಕೊಳ್ಳಲು ಸಮಾನತೆಯು ನಿರ್ದಿಷ್ಟವಾಗಿ ತುರ್ತು ಅಗತ್ಯವಾಗಿದೆ ಎಂದು ಒತ್ತಿಹೇಳಿತು. ತನ್ನ ಜನರ ಅಭಿವೃದ್ಧಿ ಮತ್ತು ಯೋಗಕ್ಷೇಮವನ್ನು ಸಾಧಿಸುತ್ತಲೇ, ಜಾಗತಿಕ ಹವಾಮಾನ ಕ್ರಿಯೆಗೆ ತನ್ನ ನ್ಯಾಯಯುತ ಪಾಲನ್ನು ನೀಡುವ ಬದ್ಧತೆಯನ್ನು ಭಾರತವು ಪುನರುಚ್ಚರಿಸಿದೆ. ನ್ಯಾಯಯುತ ಪರಿವರ್ತನೆ ಮತ್ತು ಹೊಂದಾಣಿಕೆಯ ಅಗತ್ಯಗಳನ್ನು ಪೂರೈಸುವುದು ಗಮನಾರ್ಹ ಸವಾಲುಗಳಾಗಿ ಉಳಿದಿವೆ, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಇದು ಅಭಿವೃದ್ಧಿಯ ಸವಾಲಿನೊಂದಿಗೆ ನಿಕಟವಾಗಿ ಹೆಣೆದುಕೊಂಡಿದೆ ಎಂದು ಅದು ಒತ್ತಿಹೇಳಿತು.

ಹವಾಮಾನ ಹಣಕಾಸು ಸಂಬಂಧಿಸಿದಂತೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹವಾಮಾನ ಕ್ರಮವನ್ನು ವೇಗಗೊಳಿಸಲು ಮತ್ತು ಅವುಗಳ ದುರ್ಬಲತೆಗಳನ್ನು ಪರಿಹರಿಸಲು ಹೊಂದಾಣಿಕೆ ಹಣಕಾಸು ಹರಿವನ್ನು ಬಲಪಡಿಸಲು ಅಭಿವೃದ್ಧಿ ಹೊಂದಿದ ದೇಶಗಳ ಸಾರ್ವಜನಿಕ ಹಣಕಾಸು ಕೇಂದ್ರಬಿಂದುವಾಗಿದೆ ಎಂದು ಭಾರತ ಒತ್ತಿ ಹೇಳಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಾಧ್ಯತೆಯನ್ನು ಸ್ಥಾಪಿಸುವ ಪ್ಯಾರಿಸ್ ಒಪ್ಪಂದದ ಅನುಚ್ಛೇದ 9.1 ರ ಮೂಲಭೂತ ಮಹತ್ವವನ್ನು ಭಾರತ ಒತ್ತಿಹೇಳಿದೆ. ‘ಸಿಒಪಿ 31’ ರಲ್ಲಿ ತನ್ನ ರಚನಾತ್ಮಕ ತೊಡಗಿಸಿಕೊಳ್ಳುವಿಕೆಯನ್ನು ಪುನರುಚ್ಚರಿಸಿದ ಭಾರತ, ನ್ಯಾಯಯುತ, ಸಮಾನ ಮತ್ತು ಮಹತ್ವಾಕಾಂಕ್ಷೆಯ ಫಲಿತಾಂಶವನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಗಿ ಹೇಳಿದೆ.

 

*****


(ಪ್ರಕಟಣೆ ಐ.ಡಿ.: 2334599) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Gujarati