ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

10ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ್ 2025-26 ಪ್ರಶಸ್ತಿಗಳ ಪ್ರದಾನ ಮಾಡಲಿರುವ ಭಾರತದ ರಾಷ್ಟ್ರಪತಿ


ಭಾರತದ ಸ್ವಚ್ಛ ನಗರಗಳನ್ನು ಗೌರವಿಸಲು ನಾಡಿದ್ದು ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ

2025-26ರ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳಲ್ಲಿ ಅಗ್ರ ಸಾಧಕರಿಗೆ 'ಸ್ವಚ್ಛ್ ಶೆಹರ್ ಜೋಡಿ' ಗೌರವ ಪ್ರದಾನ

ಪ್ರಕಟಣಾ ದಿನಾಂಕ: 09 NOV 2026 1:15PM by PIB Bengaluru

 

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2026ರ ನವೆಂಬರ್ 11ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

'ಸ್ವಚ್ಛತಾ ಕಿ ನಯೀ ಪೆಹೆಲ್ - ಬದಯೇಯಿನ್ ಹಾಥ್, ಕರೇನ್ ಸಫಾಯಿ ಸಾಥ್' ಎಂಬ ವಿಷಯದ ಮೇಲಿನ ಸ್ವಚ್ಛ ಸರ್ವೇಕ್ಷಣ್‌ನ 10ನೇ ಆವೃತ್ತಿಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ನಗರಾಭಿವೃದ್ಧಿ ಇಲಾಖೆಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ, ಸ್ವಚ್ಛ ಸರ್ವೇಕ್ಷಣ (ಎಸ್ ಎಸ್) ಪ್ರಶಸ್ತಿಗಳು 2025-26 ರಡಿ ಸ್ವಚ್ಛ ಭಾರತ ಮಿಷನ್-ನಗರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ನಗರಗಳನ್ನು ಸ್ವಚ್ಛ ನಗರಗಳನ್ನು ಗೌರವಿಸುತ್ತದೆ. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ವಸತಿ ಮತ್ತು ನಗರ  ವ್ಯವಹಾರಗಳ ಮತ್ತು ಇಂಧನ ಸಚಿವರಾದ ಶ್ರೀ ಮನೋಹರ್ ಲಾಲ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಖಾತೆ  ರಾಜ್ಯ ಸಚಿವರಾದ ಶ್ರೀ ತೋಖನ್ ಸಾಹು ಅವರ ಸಮ್ಮುಖದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಎಸ್ ಎಸ್ 2025-26 ಪ್ರಶಸ್ತಿಗಳು ಕಳೆದ ದಶಕದಲ್ಲಿ ನಗರಗಳು ಮತ್ತು ರಾಜ್ಯಗಳ ಸಾಮೂಹಿಕ ಸಾಧನೆಗಳ ಆಚರಣೆಯಾಗಿ ಮತ್ತು ತಳಮಟ್ಟದ ಸಾಧನೆಗಳನ್ನು ಉಳಿಸಿಕೊಳ್ಳಲು ಹೊಸತನದ ಬದ್ಧತೆಯಾಗಿ ಗುರುತಿಸಲ್ಪಟ್ಟಿವೆ.

ಎಸ್ ಬಿ ಎಂ-ಯು ನ ಪ್ರಮುಖ ಸ್ವಚ್ಛತಾ ಮೌಲ್ಯಮಾಪನವಾದ ಸ್ವಚ್ಛ ಸರ್ವೇಕ್ಷಣ್, 2016 ರಲ್ಲಿ 73 ನಗರ ಸ್ಥಳೀಯ ಸಂಸ್ಥೆಗಳಿಂದ ಅದರ ಇತ್ತೀಚಿನ ಆವೃತ್ತಿಯಲ್ಲಿ 4,751 ನಗರಗಳ ಭಾಗವಹಿಸುವ ಮಟ್ಟಿಗೆ ಬೃಹತ್  ಪ್ರಮಾಣದಲ್ಲಿ ಬೆಳೆದಿದೆ. ಸ್ವಚ್ಛ ಸರ್ವೇಕ್ಷಣ್ 2025-26 ಹಲವು ಪ್ರಮುಖ ಹೊಸ ಅಂಶಗಳನ್ನು ಪರಿಚಯಿಸುತ್ತದೆ, ಅವುಗಳಲ್ಲಿ ನಾಗರಿಕರ ಪ್ರತಿಕ್ರಿಯೆಗೆ ಹೆಚ್ಚಿನ ಒತ್ತು ನೀಡುವುದು, ನಗರ ನದಿ ದಂಡೆಗಳು, ಕರಾವಳಿಗಳು ಮತ್ತು ಜಲಮೂಲಗಳ ವಿಸ್ತೃತ ವ್ಯಾಪ್ತಿ ಮತ್ತು ಮುಕ್ತ ಮಾಲಿನ್ಯ ಮತ್ತು ಬಯಲು ಬಹಿರ್ದೆಸೆ  ತಡೆಗಟ್ಟುವ ಮೇಲೆ ಕೇಂದ್ರೀಕೃತ ಸೂಚಕಗಳು, ಪ್ರವಾಸಿ ಮತ್ತು ಪರಂಪರೆಯ ತಾಣಗಳ ಸ್ವಚ್ಛತೆ ಮತ್ತು ಶಾಲೆಗಳಲ್ಲಿ ನಡವಳಿಕೆ ಬದಲಾವಣೆಯ ಉಪಕ್ರಮಗಳು ಒಳಗೊಂಡಿವೆ.

ಎಸ್ ಎಸ್ ನ 10ನೇ ಆವೃತ್ತಿಯ ಭಾಗವಾಗಿ, ನಗರ ಸ್ಥಳೀಯ ಸಂಸ್ಥೆಗಳನ್ನು (ಯು ಎಲ್ ಬಿ) 10 ಪ್ರಮುಖ ಮೌಲ್ಯಮಾಪನ ಕ್ಷೇತ್ರಗಳನ್ನು ಒಳಗೊಂಡ 43 ಸೂಚಕಗಳಲ್ಲಿ ಮೌಲ್ಯಮಾಪನ ಮಾಡಲಾಯಿತು - ಅವುಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹಣೆ ಮತ್ತು ಸಾಗಣೆ, ಘನತ್ಯಾಜ್ಯ ನಿರ್ವಹಣೆ, ಸ್ವಚ್ಛತೆ, ನೈರ್ಮಲ್ಯ, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣ, ಪರಿಸರ ವ್ಯವಸ್ಥೆಯ ಬಲವರ್ಧನೆ ಮತ್ತು ಸಾಂಸ್ಥಿಕ ಮಾನದಂಡಗಳು, ಬಳಸಿದ ನೀರಿನ ನಿರ್ವಹಣೆ, ಸ್ವಚ್ಛತೆಗಾಗಿ ವಕಾಲತ್ತು, ನೈರ್ಮಲ್ಯ ಕಾರ್ಮಿಕರ ಒಟ್ಟಾರೆ ಕಲ್ಯಾಣ ಮತ್ತು ನಾಗರಿಕ ಪ್ರತಿಕ್ರಿಯೆ ಮತ್ತು ಕುಂದುಕೊರತೆ ಪರಿಹಾರ ಸೇರಿವೆ. 3 ಸಾವಿರಕ್ಕೂ ಅಧಿಕ ತರಬೇತಿ ಪಡೆದ ಮೌಲ್ಯಮಾಪಕರು ದೇಶಾದ್ಯಂತ ವ್ಯಾಪಕವಾಗಿ ತಳಮಟ್ಟದಲ್ಲಿ ಮೌಲ್ಯಮಾಪನಗಳನ್ನು ನಡೆಸಿದರು, ಇದನ್ನು ನೈಜ-ಸಮಯದ ಜಿಪಿಎಸ್ ಆಧರಿಸಿದ ಮೇಲ್ವಿಚಾರಣೆಯಿಂದ ಬೆಂಬಲಿಸಲಾಯಿತು. ಸಾಕ್ಷಿಗಳ ಸಲ್ಲಿಕೆಯಿಂದ ಪರಿಶೀಲನೆಯವರೆಗೆ, ಮೌಲ್ಯಮಾಪನ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್, ಪಾರದರ್ಶಕ ಮತ್ತು ಪ್ರತಿ ಹಂತದಲ್ಲೂ ಕಠಿಣ ಗುಣಮಟ್ಟದ ಪರಿಶೀಲನೆಗಳಿಗೆ ಒಳಪಟ್ಟಿತ್ತು.

ಉನ್ನತ ಸ್ವಚ್ಛ ನಗರಗಳಲ್ಲದೆ, ಈ ವರ್ಷದ ಪ್ರಶಸ್ತಿಗಳು 'ಸ್ವಚ್ಛ ಶೇಹರ್ ಜೋಡಿ' ಉಪಕ್ರಮದಿಂದ ಉನ್ನತ ಪ್ರದರ್ಶಕರನ್ನು ಗುರುತಿಸುತ್ತವೆ, ಇದು ನಗರ ತ್ಯಾಜ್ಯ ನಿರ್ವಹಣಾ ಶ್ರೇಷ್ಠತೆ ವೇಗಗೊಳಿಸಲು 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 70 ಮಾರ್ಗದರ್ಶಿ ನಗರಗಳು ಮತ್ತು 191 ಮಾರ್ಗದರ್ಶಿ ನಗರಗಳ ನಡುವೆ ಸಹ ಕಲಿಕೆಯನ್ನು ಬೆಳೆಸಲಿದೆ. 'ಸ್ವಚ್ಛ ಶೇಹರ್ ಜೋಡಿ' ಉಪಕ್ರಮವನ್ನು ಮಾನ್ಯ ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ 2025ರ ಸೆಪ್ಟೆಂಬರ್ 27 ರಂದು ಮೊದಲ ನಗರ ತ್ಯಾಜ್ಯ ನಿರ್ವಹಣಾ ಮಾರ್ಗದರ್ಶನ ಮತ್ತು ಸಹ-ಕಲಿಕೆ ಕಾರ್ಯಕ್ರಮವಾಗಿ ಆರಂಭಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಮಾರ್ಗದರ್ಶಕ ಮತ್ತು ಮಾರ್ಗದರ್ಶಕ ನಗರಗಳ ನಡುವೆ ಈ ಉಪಕ್ರಮವನ್ನು ಆರಂಭಿಸಲು ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಯಿತು.

ಸ್ವಚ್ಛ ಸರ್ವೇಕ್ಷಣ 2024 ಮತ್ತು 2025ರ ನಡುವಿನ ಪ್ರಮುಖ ಸ್ವಚ್ಛತಾ ಸೂಚಕಗಳಲ್ಲಿ ಮಾರ್ಗದರ್ಶಕ ನಗರಗಳ ಕಾರ್ಯಕ್ಷಮತೆಯು ಗಮನಾರ್ಹ ಸುಧಾರಣೆ ಕಂಡಿದೆ. ಮಾರ್ಗದರ್ಶಕ ನಗರಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳು ಸ್ವಚ್ಛ ಸರ್ವೇಕ್ಷಣ 2025-26 ರ ಇತ್ತೀಚಿನ ಆವೃತ್ತಿಯಲ್ಲಿ ದಾಖಲಾಗಿವೆ. 'ಸ್ವಚ್ಛತೆಯ ಗೋಚರ’ ನಿಯತಾಂಕದಲ್ಲಿ ಮಾರ್ಗದರ್ಶಕ ನಗರಗಳು ಎಸ್ ಎಸ್ 2024 ರಲ್ಲಿ ಶೇ.48 ರಿಂದ ಇತ್ತೀಚಿನ ಆವೃತ್ತಿಯಲ್ಲಿ ಶೇ.70 ಕ್ಕೆ ಏರಿವೆ. 'ಮನೆ-ಮನೆಗೆ-ಮನೆ ಸಂಗ್ರಹಣೆ'ಗಾಗಿ, ಮಾರ್ಗದರ್ಶಕ ನಗರಗಳು ಎಸ್ ಎಸ್ 2024ರಲ್ಲಿ ಶೇ.52 ರಷ್ಟಿದ್ದವು ಮತ್ತು ಈಗ ಒಟ್ಟಾರೆಯಾಗಿ ಶೇ.74 ತಲುಪಿವೆ. ಮಾರ್ಗದರ್ಶನ ನೀಡುವ ನಗರಗಳು ಪ್ರಮುಖ ನಿಯತಾಂಕಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಸಾಧಿಸಿವೆ, ಅವುಗಳೆಂದರೆ: ಮೂಲದಲ್ಲೇ ತ್ಯಾಜ್ಯ ವಿಂಗಡಣೆ (ಶೇ.16 ರಿಂದ ಶೇ.30), ನೈರ್ಮಲ್ಯ ಲಭ್ಯತೆ (ಶೇ.11 ರಿಂದ ಶೇ.38), ಬಳಸಿದ ನೀರಿನ ನಿರ್ವಹಣೆ (ಶೇ.32 ರಿಂದ ಶೇ.53), ಮತ್ತು ಸ್ವಚ್ಛತಾಗಾಗಿ ವಕಾಲತ್ತು (ಶೇ.48 ರಿಂದ ಶೇ.66), ಇದು ಹೆಚ್ಚಿನ ಕಾರ್ಯಕ್ಷಮತೆಯ ನಗರಗಳಿಂದ ಸಮರ್ಪಿತ ಮಾರ್ಗದರ್ಶನದ ಮೂಲಕ ಬಲಪಡಿಸಿದ ನೈರ್ಮಲ್ಯ ವ್ಯವಸ್ಥೆಗಳು ಮತ್ತು ಸುಧಾರಿತ ಸೇವಾ ವಿತರಣಾ ಫಲಿತಾಂಶಗಳನ್ನು ಪ್ರತಿಬಿಂಬಿಸುತ್ತದೆ.

ಒಂದು ವರ್ಷದ ಬದ್ಧತೆಯ ಪ್ರಯತ್ನಗಳು, ಆರೋಗ್ಯಕರ ಸ್ಪರ್ಧೆ ಮತ್ತು ಸ್ವಚ್ಛತಾಗೆ ಸ್ಥಿರ ಬದ್ಧತೆಯ ನಂತರ, ದೇಶಾದ್ಯಂತದ ನಗರಗಳು ಈಗ 2026ರ ನವೆಂಬರ್ 11 ರಂದು ಸ್ವಚ್ಛ ಸರ್ವೇಕ್ಷಣ್ 2025-26 ಪ್ರಶಸ್ತಿ ವಿಜೇತರ ಘೋಷಣೆಗಾಗಿ ಕಾತರದಿಂದ ಕಾಯುತ್ತಿವೆ.

 

*****


(ಪ್ರಕಟಣೆ ಐ.ಡಿ.: 2334328) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Malayalam