ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳು ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು


ದೆಹಲಿ ರೈಲ್ವೆ ಪ್ರದೇಶವು ಪ್ರತಿದಿನ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತದೆ, ಹಬ್ಬದ ಸಮಯದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಜನರ ಆಗಮನ ಹೆಚ್ಚಾಗುತ್ತದೆ

ಮೀಸಲಾದ ಕಾಯ್ದಿರಿಸಿದ ಪ್ರದೇಶಗಳು, ಹೆಚ್ಚುವರಿ ವಿಶೇಷ ರೈಲುಗಳು, ಆರ್‌.ಪಿ.ಎಫ್ ನಿಯೋಜನೆ ಮತ್ತು ಹೆಚ್ಚುವರಿ ಎಐ ಕ್ಯಾಮೆರಾಗಳು ಹಬ್ಬದ ಋತುವಿನ ವ್ಯವಸ್ಥೆಗಳನ್ನು ಬಲಪಡಿಸುತ್ತವೆ

ಪ್ರಕಟಣಾ ದಿನಾಂಕ: 06 NOV 2026 7:24PM by PIB Bengaluru

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿ ರೈಲು ನಿಲ್ದಾಣದಲ್ಲಿ ಸಮಗ್ರ ಪರಿಶೀಲನೆಯನ್ನು ಕೈಗೊಂಡರು, ಪ್ರಯಾಣಿಕರ ಸೌಲಭ್ಯಗಳು, ಭದ್ರತಾ ವ್ಯವಸ್ಥೆಗಳು ಮತ್ತು ದೀಪಾವಳಿ ಮತ್ತು ಛತ್ ಹಬ್ಬದ ಋತುವಿನಲ್ಲಿ ಹೆಚ್ಚಿದ ಜನದಟ್ಟಣೆಯನ್ನು ನಿರ್ವಹಿಸುವ ಸಿದ್ಧತೆಗಳನ್ನು ಪರಿಶೀಲಿಸಿದರು. ಭೇಟಿಯ ಸಮಯದಲ್ಲಿ, ಸೌಲಭ್ಯಗಳ ಕುರಿತು ಪ್ರತಿಕ್ರಿಯೆ ಪಡೆಯಲು ಅವರು ಪ್ರಯಾಣಿಕರೊಂದಿಗೆ ಸಂವಹನ ನಡೆಸಿದರು, ಪ್ರಯಾಣಿಕರು ನಿಲ್ದಾಣದಲ್ಲಿ ಮಾಡಲಾದ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ವೃತ ಸೇರಿದಂತೆ ಹಬ್ಬದ ಋತುವಿನಲ್ಲಿ ಪ್ರತಿ ವರ್ಷ ಗರಿಷ್ಠ ಪ್ರಯಾಣಿಕರ ದಟ್ಟಣೆ ಕಂಡುಬರುತ್ತದೆ ಎಂದು ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು ಹೇಳಿದರು. ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು, ಸೇವೆಗಳನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ಭಾರತೀಯ ರೈಲ್ವೆ ಪ್ರತಿದಿನ ನಿರಂತರ ಸುಧಾರಣೆಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಹೆಚ್ಚಿದ ಪ್ರಯಾಣಿಕರ ಸಂಚಾರವನ್ನು ನಿರ್ವಹಿಸಲು ಹೆಚ್ಚುವರಿ ವಿಶೇಷ ರೈಲುಗಳು ಮತ್ತು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯ ವರ್ಧಿತ ನಿಯೋಜನೆಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕಣ್ಗಾವಲು  ಮತ್ತು ಭದ್ರತೆಯನ್ನು ಬಲಪಡಿಸಲು ಹೆಚ್ಚುವರಿ 700 ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಸಹ ಸ್ಥಾಪಿಸಲಾಗಿದೆ. ಪ್ರಯಾಣಿಕರು ನಿಲ್ದಾಣಕ್ಕೆ ಬಂದ ನಂತರ ಕಡಿಮೆ ಸಮಯದಲ್ಲಿ ತಮ್ಮ ರೈಲುಗಳನ್ನು ತಲುಪಬಹುದೆಂದು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ನೀಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು ಮತ್ತು ಪ್ರಯಾಣ ವ್ಯವಸ್ಥೆಗಳನ್ನು ಸುಧಾರಿಸಲು ಭಾರತೀಯ ರೈಲ್ವೆ ವ್ಯಾಪಕ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಮೀಸಲಾದ ಕಾಯ್ದಿರಿಸಿದ ಸೌಲಭ್ಯಗಳು, ಹೆಚ್ಚುವರಿ ಟಿಕೆಟ್ ವ್ಯವಸ್ಥೆಗಳು, ಲಗೇಜ್ ಸ್ಕ್ರೀನಿಂಗ್, ಕುಡಿಯುವ ನೀರಿನ ಸೌಲಭ್ಯಗಳು ಮತ್ತು ಪ್ರಮುಖ ನಿಲ್ದಾಣಗಳಲ್ಲಿ ಸ್ವಚ್ಛವಾದ ಶೌಚಾಲಯಗಳು ಸೇರಿವೆ. ಭಾರೀ ಜನದಟ್ಟಣೆಯ ಅವಧಿಯಲ್ಲಿ ಪ್ರಯಾಣಿಕರಿಗೆ ಹೆಚ್ಚು ಸಂಘಟಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಈ ವ್ಯವಸ್ಥೆಗಳು ಹೊಂದಿವೆ.

ನವದೆಹಲಿ ರೈಲು ನಿಲ್ದಾಣದಲ್ಲಿ ಸುಧಾರಿತ ವಿಶೇಷ ಕಾಯ್ದಿರಿಸಿದ ಪ್ರದೇಶ ವ್ಯವಸ್ಥೆಗಳು

ನವದೆಹಲಿ ರೈಲು ನಿಲ್ದಾಣದಲ್ಲಿ, ಕಳೆದ ವರ್ಷ ಪರಿಚಯಿಸಲಾದ ಕಾಯ್ದಿರಿಸದ ಪ್ರಯಾಣಿಕರಿಗೆ ಸೌಲಭ್ಯದ ಜೊತೆಗೆ, ಕಾಯ್ದಿರಿಸದ ಟಿಕೆಟ್‌ ಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಮೀಸಲಾದ ಹೋಲ್ಡಿಂಗ್ ಪ್ರದೇಶವನ್ನು ರಚಿಸಲಾಗಿದೆ. ಪ್ರವೇಶ ಮತ್ತು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು ಈಗ ಸಾಮಾನ್ಯ ಹೋಲ್ಡಿಂಗ್ ಪ್ರದೇಶವನ್ನು ರಚಿಸಲಾಗಿದೆ. ಲಗೇಜ್ ತಪಾಸಣೆ ಸೌಲಭ್ಯಗಳನ್ನು ನಿಲ್ದಾಣದ ಕಟ್ಟಡದ ಹೊರಗೆ ಸ್ಥಳಾಂತರಿಸಲಾಗಿದೆ. ಪರಿಣಾಮವಾಗಿ, ನಿಲ್ದಾಣದ ಒಳಗೆ ಟಿಕೆಟ್ ಖರೀದಿಸಲು ಹಿಂದೆ ಬಳಸಲಾಗುತ್ತಿದ್ದ ಸ್ಥಳವನ್ನು ಆರಾಮದಾಯಕ ಕಾಯುವ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ. ಈ ವ್ಯವಸ್ಥೆಗಳು ದಟ್ಟಣೆಯನ್ನು ಕಡಿಮೆ ಮಾಡಲು, ಪ್ರಯಾಣಿಕರ ಚಲನೆಯನ್ನು ಸರಳಗೊಳಿಸಲು ಮತ್ತು ಪ್ರಯಾಣಿಕರು ತಮ್ಮ ಪ್ಲಾಟ್‌ ಫಾರ್ಮ್‌ ಗಳಿಗೆ ಹೋಗುವ ಮೊದಲು ಹೆಚ್ಚು ಅನುಕೂಲಕರ ಕಾಯುವ ಅನುಭವವನ್ನು ಒದಗಿಸಲು ಸಹಾಯ ಮಾಡುತ್ತದೆ.

ಪ್ರಮುಖ ರೈಲು ನಿಲ್ದಾಣಗಳಲ್ಲಿ ಗಮನಾರ್ಹ ಪ್ರಯಾಣಿಕರ ಸಂಖ್ಯೆ

ನವದೆಹಲಿ (ಎನ್.ಡಿ.ಎಲ್.ಎಸ್.), ಹಳೆ ದೆಹಲಿ, ಆನಂದ್ ವಿಹಾರ್ ಟರ್ಮಿನಲ್ (ಎ.ಎನ್.ವಿ.ಟಿ), ಹಜರತ್ ನಿಜಾಮುದ್ದೀನ್ ಮತ್ತು ಸರೈ ರೋಹಿಲ್ಲಾ ಸೇರಿದಂತೆ ದೆಹಲಿಯ ಪ್ರಮುಖ ರೈಲು ನಿಲ್ದಾಣಗಳು 2026 ರ ಅಕ್ಟೋಬರ್ 1 ರಿಂದ 5 ರವರೆಗೆ ಸುಮಾರು 2 ಕೋಟಿ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ. ದಿನಕ್ಕೆ ಸುಮಾರು 5 ಲಕ್ಷ ಪ್ರಯಾಣಿಕರ ಸಾಮಾನ್ಯ ಸರಾಸರಿಗೆ ಬದಲಾಗಿ, 2026 ರ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಗರಿಷ್ಠ ಅವಧಿಯಲ್ಲಿ ಸರಾಸರಿ ದೈನಂದಿನ ಸಂಚಾರ ಸುಮಾರು 8 ಲಕ್ಷಕ್ಕೆ ಏರಿದೆ.

ಬಾಂದ್ರಾ ಟರ್ಮಿನಸ್, ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್.ಟಿ.ಟಿ) ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿ.ಎಸ್.ಎಂ.ಟಿ) ಸೇರಿದಂತೆ ಮುಂಬೈ ಪ್ರದೇಶದ ಪ್ರಮುಖ ರೈಲು ನಿಲ್ದಾಣಗಳು 2026 ರ ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಒಟ್ಟಾರೆಯಾಗಿ ಸುಮಾರು 1.5 ಕೋಟಿ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ. 2026 ರ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಗರಿಷ್ಠ ಅವಧಿಯಲ್ಲಿ ಸುಮಾರು 4 ಲಕ್ಷದ ಸಾಮಾನ್ಯ ದೈನಂದಿನ ಸಂಚಾರ ಸುಮಾರು 5 ಲಕ್ಷಕ್ಕೆ ಏರಿದೆ.

ಸಿಕಂದರಾಬಾದ್, ಕಾಚೆಗುಡ ಮತ್ತು ಚರ್ಲಪಲ್ಲಿ ಸೇರಿದಂತೆ ಹೈದರಾಬಾದ್ ಪ್ರದೇಶದ ರೈಲ್ವೆ ನಿಲ್ದಾಣಗಳು ಸುಮಾರು 90 ಲಕ್ಷ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ.  2026 ರ ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗಿನ ಗರಿಷ್ಠ ಅವಧಿಯಲ್ಲಿ, ಸರಾಸರಿ ದೈನಂದಿನ ಸಂಚಾರ ಸುಮಾರು 2.5 ಲಕ್ಷವಾಗಿದ್ದು, ಇದು ದಿನಕ್ಕೆ ಸುಮಾರು 4 ಲಕ್ಷ ಪ್ರಯಾಣಿಕರಿಗೆ ಏರಿದೆ.

ಸಿಕಂದರಾಬಾದ್, ಕಾಚೆಗುಡ ಮತ್ತು ಚರ್ಲಪಲ್ಲಿ ಸೇರಿದಂತೆ ಹೈದರಾಬಾದ್ ಪ್ರದೇಶದ ರೈಲು ನಿಲ್ದಾಣಗಳು 2026 ರ ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಸುಮಾರು 90 ಲಕ್ಷ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ. 2026 ರ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಗರಿಷ್ಠ ಅವಧಿಯಲ್ಲಿ ಸರಾಸರಿ ದೈನಂದಿನ ಸಂಚಾರ ಸುಮಾರು 2.5 ಲಕ್ಷವಾಗಿದ್ದು, ದಿನಕ್ಕೆ ಸುಮಾರು 4 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಏರಿದೆ.

ಬೆಂಗಳೂರು ನಗರ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್.ಎಂ. ವಿ. ಟಿ.), ಯಶವಂತಪುರ ಮತ್ತು ಯಲಹಂಕ ಸೇರಿದಂತೆ ಬೆಂಗಳೂರು ಪ್ರದೇಶದ ರೈಲು ನಿಲ್ದಾಣಗಳು 2026 ರ ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಒಟ್ಟಾರೆಯಾಗಿ ಸುಮಾರು 1 ಕೋಟಿ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ. 2026 ರ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ  ಅವಧಿಯಲ್ಲಿ ಇದ್ದ ಗರಿಷ್ಠ ಸುಮಾರು 2.5 ಲಕ್ಷದಷ್ಟು ಸಾಮಾನ್ಯ ದೈನಂದಿನ ಸಂಚಾರವು, ಗರಿಷ್ಠ ಸುಮಾರು 3.5 ಲಕ್ಷಕ್ಕೆ ಏರಿದೆ.

ಸೂರತ್ ಮತ್ತು ಉಧ್ನಾ ರೈಲು ನಿಲ್ದಾಣಗಳು ಅಕ್ಟೋಬರ್ 1 ರಿಂದ ನವೆಂಬರ್ 5 ರವರೆಗೆ ಒಟ್ಟಾರೆಯಾಗಿ ಸುಮಾರು 50 ಲಕ್ಷ ಪ್ರಯಾಣಿಕರ ಸಂಚಾರವನ್ನು ದಾಖಲಿಸಿವೆ. ಈ ಅವಧಿಯಲ್ಲಿ ಸುಮಾರು 1 ಲಕ್ಷದಷ್ಟು ಸಾಮಾನ್ಯ ದೈನಂದಿನ ಸಂಚಾರ ಸುಮಾರು 1.6 ಲಕ್ಷಕ್ಕೆ ಏರಿದೆ.  2026 ರ ನವೆಂಬರ್ 1-5 ರ ಗರಿಷ್ಠ ಸಂಚಾರ ಕಾಲಾವಧಿ ಆಗಿದೆ.

ಭಾರತೀಯ ರೈಲ್ವೆ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವುದು, ಭದ್ರತಾ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಅನುಭವ ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ಕಾರ್ಯಾಚರಣೆಯ ಸುಧಾರಣೆಗಳನ್ನು ಪರಿಚಯಿಸುವತ್ತ ಹೆಚ್ಚಿನ ಗಮನಹರಿಸುವುದನ್ನು ಮುಂದುವರೆಸಿದೆ. ಹಬ್ಬದ ಋತುವಿನಲ್ಲಿ ಸುರಕ್ಷಿತ, ಅನುಕೂಲಕರ ಮತ್ತು ತೊಂದರೆ-ಮುಕ್ತ ಪ್ರಯಾಣಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಪ್ರಯತ್ನಗಳು ಹೊಂದಿವೆ.

 

*****


(ಪ್ರಕಟಣೆ ಐ.ಡಿ.: 2333809) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Odia , Tamil