|
ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಕೌಶಲ್ಯಾಭಿವೃದ್ಧಿ ಅಭಿವೃದ್ಧಿ ಮತ್ತು ಯುವ ಉದ್ಯೋಗಾರ್ಹತೆಗೆ ಪುಷ್ಟಿ ನೀಡಲು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಸ್ಯಾಮ್ಸಂಗ್ ಇಂಡಿಯಾ ನಡುವೆ ಸಹಭಾಗಿತ್ವ
ಯುವಜನರಲ್ಲಿ ತಾಂತ್ರಿಕ ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಎಂಎಸ್ಎಂಇ ತಂತ್ರಜ್ಞಾನ ಕೇಂದ್ರಗಳನ್ನು ಬಳಸಿಕೊಳ್ಳಲು ತಿಳುವಳಿಕಾ ಒಡಂಬಡಿಕೆಗೆ ಸಹಿ
ಪ್ರಕಟಣಾ ದಿನಾಂಕ:
05 NOV 2026 8:31PM by PIB Bengaluru
ಉದ್ಯಮ-ಆಧಾರಿತ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಹಾಗೂ ಯುವಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು, ಎಂಎಸ್ಎಂಇ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಕಮಿಷನರ್ ಡಾ. ರಜನೀಶ್ ಅವರ ಉಪಸ್ಥಿತಿಯಲ್ಲಿ ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಿದೆ.
ಈ ತಿಳಿವಳಿಕೆ ಒಪ್ಪಂದವು ಪ್ರಾರಂಭದಲ್ಲಿ 3 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ ಹಾಗೂ ದೇಶಾದ್ಯಂತ 15 ಎಂಎಸ್ಎಂಇ ತಂತ್ರಜ್ಞಾನ ಕೇಂದ್ರಗಳಲ್ಲಿ (TCs) ಕಾರ್ಯಗತಗೊಳ್ಳುತ್ತದೆ.
15 ಎಂಎಸ್ಎಂಇ ತಂತ್ರಜ್ಞಾನ ಕೇಂದ್ರಗಳ ಪಟ್ಟಿ:
|
ಕ್ರ. ಸಂ.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ
|
ಕ್ರ. ಸಂ.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ
|
|
1.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಸೆಂಟ್ರಲ್ ಟೂಲ್ ರೂಮ್), ಲೂಧಿಯಾನ, ಪಂಜಾಬ್
|
9.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಟೂಲ್ ಡಿಸೈನ್), ಚೆನ್ನೈ, ತಮಿಳುನಾಡು
|
|
2.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಟೂಲ್ ಡಿಸೈನ್), ಹೈದರಾಬಾದ್, ತೆಲಂಗಾಣ
|
10.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (IDTR), ಜಮ್ಶೆಡ್ಪುರ ವಿಸ್ತರಣಾ ಕೇಂದ್ರ, ಶಾಖೆ ಎಂಎಸ್ಎಂಇ-DFO, ವಾರಣಾಸಿ, ಉತ್ತರ ಪ್ರದೇಶ
|
|
3.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಸೆಂಟ್ರಲ್ ಟೂಲ್ ರೂಮ್ & ಟ್ರೈನಿಂಗ್ ಸೆಂಟರ್), ಕೋಲ್ಕತ್ತಾ, ಪಶ್ಚಿಮ ಬಂಗಾಳ
|
11.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಇಂಡೋ ಡ್ಯಾನಿಶ್ ಟೂಲ್ ರೂಮ್), ಜಮ್ಶೆಡ್ಪುರ, ಜಾರ್ಖಂಡ್
|
|
4.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಸೆಂಟ್ರಲ್ ಟೂಲ್ ರೂಮ್ & ಟ್ರೈನಿಂಗ್ ಸೆಂಟರ್), ಭುವನೇಶ್ವರ, ಒಡಿಶಾ
|
12.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (IDEMI ಮುಂಬೈ), ವಿಸ್ತರಣಾ ಕೇಂದ್ರ, ಬೆಂಗಳೂರು, ಕರ್ನಾಟಕ
|
|
5.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಇಂಡೋ ಜರ್ಮನ್ ಟೂಲ್ ರೂಮ್), ಅಹಮದಾಬಾದ್, ಗುಜರಾತ್
|
13.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ, ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ
|
|
6.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಇನ್ಸ್ಟಿಟ್ಯೂಟ್ ಫಾರ್ ಡಿಸೈನ್ ಆಫ್ ಎಲೆಕ್ಟ್ರಿಕಲ್ ಮೆಷರಿಂಗ್ ಇನ್ಸ್ಟ್ರುಮೆಂಟ್ಸ್), ಮುಂಬೈ, ಮಹಾರಾಷ್ಟ್ರ
|
14.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ, ಬಡ್ಡಿ, ಹಿಮಾಚಲ ಪ್ರದೇಶ
|
|
7.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ಇಂಡೋ ಜರ್ಮನ್ ಟೂಲ್ ರೂಮ್), ಔರಂಗಾಬಾದ್, ಮಹಾರಾಷ್ಟ್ರ
|
15.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ, ಕಾನ್ಪುರ, ಉತ್ತರ ಪ್ರದೇಶ
|
|
8.
|
ಎಂಎಸ್ಎಂಇ ತಂತ್ರಜ್ಞಾನ ಕೇಂದ್ರ (ESTC), ರಾಮ್ನಗರ ವಿಸ್ತರಣಾ ಕೇಂದ್ರ, ದೆಹಲಿ
|
|
|


ತಿಳುವಳಿಕಾ ಒಡಂಬಡಿಕೆಯ ಉದ್ದೇಶಗಳು:
- ಈ ಸಹಯೋಗದ ಅಡಿಯಲ್ಲಿ, ಗುರುತಿಸಲಾದ ತಂತ್ರಜ್ಞಾನ ಕೇಂದ್ರಗಳಲ್ಲಿ ಅನ್ವಯವಾಗುವ ಟಿಸಿಗಳಿಂದ ಸ್ಥಾಪಿಸಲಾದ ಅತ್ಯಾಧುನಿಕ ತರಬೇತಿ ಸೌಲಭ್ಯಗಳ ಮೂಲಕ ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್ಗಳು, ಗೃಹೋಪಯೋಗಿ ಉಪಕರಣಗಳು, ಅಳವಡಿಕೆ, ಸೇವೆ ಮತ್ತು ದುರಸ್ತಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF)-ಅನುಸರಣೆಯ, ಉದ್ಯಮ-ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
- ಗುಣಮಟ್ಟದ ತರಬೇತಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಯಾಮ್ಸಂಗ್ ವಿಶೇಷ ತರಬೇತಿ, ತರಬೇತುದಾರರ ತರಬೇತಿ (ToT), ತಾಂತ್ರಿಕ ಬೆಂಬಲ ಮತ್ತು ನಿರಂತರ ಮಾರ್ಗದರ್ಶನವನ್ನು ಸಹ ಒದಗಿಸುತ್ತದೆ.
- ಈ ಉಪಕ್ರಮವು ಯುವಜನರಿಗೆ ಪ್ರಾಯೋಗಿಕ ತರಬೇತಿ, ಉದ್ಯಮದ ಮಾನ್ಯತೆ, ವೃತ್ತಿಜೀವನದ ಆಪ್ತಸಮಾಲೋಚನೆ (career counselling), ಇಂಟರ್ನ್ಶಿಪ್ಗಳು ಮತ್ತು ಉದ್ಯೋಗ ನಿಯೋಜನೆ ಸುಗಮಗೊಳಿಸುವಿಕೆಯನ್ನು ಒದಗಿಸುತ್ತದೆ. ಯಶಸ್ವಿ ತರಬೇತುದಾರರಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಪ್ರತಿ ತಿಂಗಳು ₹12,000 ಸ್ಟೈಪೆಂಡ್ನೊಂದಿಗೆ ಮೂರು ತಿಂಗಳ ಇಂಟರ್ನ್ಶಿಪ್ ಒದಗಿಸಲಾಗುವುದು. ಅರ್ಹ ಮಹಿಳೆಯರು ಮತ್ತು ದಿವ್ಯಾಂಗ ತರಬೇತುದಾರರಿಗೆ ವಿದ್ಯಾರ್ಥಿವೇತನಗಳು ಹಾಗೂ ಅತ್ಯುತ್ತಮ ಸಾಧನೆ ಮಾಡಿದವರಿಗೆ ಮೆರಿಟ್ ಆಧಾರಿತ ಬಹುಮಾನಗಳ ಬೆಂಬಲವನ್ನು ಸಹ ನೀಡಲಾಗುವುದು.


- ಈ ಕಾರ್ಯಕ್ರಮವು ಮೊದಲ ವರ್ಷದಲ್ಲಿ 1,600 ತರಬೇತುದಾರರನ್ನು ಗುರಿಯಾಗಿಸಿಕೊಂಡಿದ್ದು, ಮುಂದಿನ ವರ್ಷಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು.
- ಕೌಶಲ್ಯಪೂರ್ಣ ಮತ್ತು ಉದ್ಯಮ-ಸಜ್ಜಿತ ಮಾನವಶಕ್ತಿಯ ಸಮೂಹವನ್ನು ಸೃಷ್ಟಿಸುವುದರ ಜೊತೆಗೆ, ಈ ಸಹಯೋಗವು ಉದ್ಯಮ-ಸಂಸ್ಥೆಗಳ ಲಿಂಕ್ಗಳನ್ನು ಬಲಪಡಿಸುತ್ತದೆ ಹಾಗೂ ಉದ್ಯಮಗಳಿಗೆ/ಎಂಎಸ್ಎಂಇಗಳಿಗೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಸೇವಾ ವಲಯಗಳಲ್ಲಿ ಕೌಶಲ್ಯಪೂರ್ಣ ಮಾನವಶಕ್ತಿ ಮತ್ತು ತಾಂತ್ರಿಕ ಸಾಮರ್ಥ್ಯಗಳ ಅಗತ್ಯತೆಗಳನ್ನು ಪೂರೈಸಲು ಬೆಂಬಲಿಸುತ್ತದೆ.
*****
(ಪ್ರಕಟಣೆ ಐ.ಡಿ.: 2333419)
|