ಪ್ರಕಟಣಾ ದಿನಾಂಕ:
02 NOV 2026 12:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಸೌರಶಕ್ತಿಯ ಪ್ರಯಾಣವು ಹೇಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘರ್ ಮತ್ತು ಪಿಎಂ-ಕುಸುಮ್ ನಂತಹ ಉಪಕ್ರಮಗಳಿಂದ ಪ್ರೇರಿತವಾದ ಭಾರತದಲ್ಲಿ ಸೌರಶಕ್ತಿಯ ಬೆಳವಣಿಗೆಯನ್ನು ಲೇಖನವು ಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು.
"ಭಾರತವು ತನ್ನ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯತ್ತ ಕೆಲಸ ಮಾಡುತ್ತಿರುವಾಗ ಸೌರಶಕ್ತಿ ಚಾಲಿತ ಕೃಷಿ ಮತ್ತು ಇಂಧನ ಸಂಗ್ರಹಣೆಯಿಂದ ಉತ್ಪಾದನೆ ಮತ್ತು ಹಸಿರು ಉದ್ಯೋಗಗಳವರೆಗೆ ಮುಂದೆ ಏನಿದೆ ಎಂಬುದನ್ನು ಅವರು ನೋಡುತ್ತಾರೆ" ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
ಭಾರತದ ಸೌರಶಕ್ತಿಯ ಪ್ರಯಾಣವು ಹೊಸ ಅವಕಾಶಗಳನ್ನು ತೆರೆಯುತ್ತಿದೆ!
ಪ್ರಧಾನಮಂತ್ರಿ ಸೂರ್ಯ ಘರ್ ಮತ್ತು ಪಿಎಂ-ಕುಸುಮ್ ನಂತಹ ಉಪಕ್ರಮಗಳಿಂದ ಪ್ರೇರಿತವಾದ ಭಾರತದಲ್ಲಿ ಸೌರಶಕ್ತಿಯ ಬೆಳವಣಿಗೆಯ ಬಗ್ಗೆ ಕೇಂದ್ರ ಸಚಿವರಾದ ಶ್ರೀ @JoshiPralhad ಅವರು ಬರೆದಿದ್ದಾರೆ.
ಭಾರತವು ತನ್ನ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯತ್ತ ಕೆಲಸ ಮಾಡುತ್ತಿರುವಾಗ ಸೌರಶಕ್ತಿ ಚಾಲಿತ ಕೃಷಿ ಮತ್ತು ಇಂಧನ ಸಂಗ್ರಹಣೆಯಿಂದ ಉತ್ಪಾದನೆ ಮತ್ತು ಹಸಿರು ಉದ್ಯೋಗಗಳವರೆಗೆ ಮುಂದಿರುವ ಅವಕಾಶಗಳತ್ತಲೂ ಅವರು ಗಮನ ಹರಿಸಿದ್ದಾರೆ.
*****