ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜ್ಞಾನ, ವಿವೇಕ ಮತ್ತು ಸದಾಚಾರದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 30 OCT 2026 11:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವ್ಯಕ್ತಿಯೊಬ್ಬರ ಜೀವನದಲ್ಲಿ ಶಾಸ್ತ್ರಜ್ಞಾನ, ವಿವೇಕ, ಕ್ರಿಯೆ ಮತ್ತು ಸದಾಚಾರಗಳನ್ನು ಅಳವಡಿಸಿಕೊಳ್ಳುವುದರ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ:

शास्त्रं कर्म तथा प्रज्ञा शीलं क्रिययान्वितम्।

लक्ष्यलक्षणयुक्तार्थशास्त्रनिष्ठो नरो भवेत्॥

ಈ ಸುಭಾಷಿತವು ಜ್ಞಾನವು ವಿವೇಕ, ಶಿಸ್ತು ಮತ್ತು ಧರ್ಮಯುಕ್ತ ಕಾರ್ಯಗಳೊಂದಿಗೆ ಸೇರಿದಾಗ, ಅದು ಪ್ರಬುದ್ಧ ಹಾಗೂ ಅರ್ಥಪೂರ್ಣ ಜೀವನಕ್ಕೆ ಭದ್ರವಾದ ಅಡಿಪಾಯ ಹಾಕಿಕೊಡುತ್ತದೆ ಎಂಬುದನ್ನು ಒತ್ತಿಹೇಳುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ :

शास्त्रं कर्म तथा प्रज्ञा शीलं क्रिययान्वितम्।

लक्ष्यलक्षणयुक्तार्थशास्त्रनिष्ठो नरो भवेत्॥

 

*****


(ಪ್ರಕಟಣೆ ಐ.ಡಿ.: 2330372) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , Marathi , हिन्दी , Assamese , Bengali , Manipuri , Gujarati , Telugu , Malayalam