ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪ್ರಮೋದ್‌ ಭಗತ್‌ ಮತ್ತು ಮನೀಷಾ ರಾಮದಾಸ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 22 OCT 2026 6:01PM by PIB Bengaluru

ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಮಿಶ್ರ ಡಬಲ್ಸ್‌ ಎಸ್‌ಎಲ್‌3-ಎಸ್ ಯು 5 ಪ್ಯಾರಾ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಪ್ರಮೋದ್‌ ಭಗತ್‌ ಮತ್ತು ಮನೀಷಾ ರಾಮದಾಸ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಅವರ ತಂಡದ ಕೆಲಸ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಪಂದ್ಯಾವಳಿಯುದ್ದಕ್ಕೂ ಸ್ಪಷ್ಟವಾಗಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಪ್ರತಿಭಾವಂತ ಜೋಡಿಯನ್ನು ಅವರ ಪ್ರದರ್ಶನಕ್ಕಾಗಿ ಅಭಿನಂದಿಸಿದರು, ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಎಕ್ಸ್‌ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

‘‘ಪ್ರಮೋದ್‌ ಭಗತ್‌ ಮತ್ತು ಮನೀಷಾ ರಾಮದಾಸ್‌ ಅವರ ಶ್ಲಾಘನೀಯ ಪ್ರಯತ್ನ!

ಪ್ರತಿಭಾವಂತ ಜೋಡಿ ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಮಿಶ್ರ ಡಬಲ್ಸ್‌ ಎಸ್‌ಎಲ್‌ 3-ಎಸ್‌ ಯು 5 ಪ್ಯಾರಾ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದೆ.

ಅವರ ಸಂಘಟಿತ ಹೋರಾಟ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಪಂದ್ಯಾವಳಿಯುದ್ದಕ್ಕೂ ಸ್ಪಷ್ಟವಾಗಿದೆ.

ಇಬ್ಬರೂ ಕ್ರೀಡಾಪಟುಗಳ ಪ್ರದರ್ಶನಕ್ಕಾಗಿ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’ 

 

*****


(ಪ್ರಕಟಣೆ ಐ.ಡಿ.: 2327044) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil