ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ರಾವನ್ನಿ ವಲಸಾನಿನಿ ಅವರಿಗೆ ಅಭಿನಂದನೆಗಳನ್ನು ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 22 OCT 2026 9:52PM by PIB Bengaluru

2026ರ ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಮಹಿಳೆಯರ 400 ಮೀಟರ್ ಟಿ 11 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾವನ್ನಿ ವಲಸಾನಿನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದರು.

ಅವರ ಪ್ರದರ್ಶನವು ಅವರ ಪ್ರತಿಭೆ ಮತ್ತು ಗಮನದ ಅದ್ಭುತ ಪ್ರತಿಬಿಂಬವಾಗಿದೆ ಎಂದು ಶ್ರೀ ಮೋದಿಯವರು ಅವರು ಉಲ್ಲೇಖಿಸಿದರು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದೆ:

"2026 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀಟರ್ ಟಿ11 ಸ್ಪರ್ಧೆಯಲ್ಲಿ ರಾವನ್ನಿ ವಲಸಾನಿನಿ ಅವರು ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಕ್ರೀಡಾ ಪ್ರದರ್ಶನವು, ಅವರ ಪ್ರತಿಭೆ ಮತ್ತು ಏಕಾಗ್ರಗಮನಗಳ ಅದ್ಭುತ ಪ್ರತಿಬಿಂಬವಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು: ಪ್ರಧಾನಮಂತ್ರಿ @narendramodi"

 

*****

 


(ಪ್ರಕಟಣೆ ಐ.ಡಿ.: 2327033) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu