ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಗೇಮ್ಸ್ ನ ಪುರುಷರ 97 ಕೆ.ಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದೀಪಕ್ ಪೂನಿಯಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು
ಪ್ರಕಟಣಾ ದಿನಾಂಕ:
03 OCT 2026 7:31PM by PIB Bengaluru
ಏಷ್ಯನ್ ಗೇಮ್ಸ್ ನ ಪುರುಷರ 97 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿಯ ನಂತರ ಕಂಚಿನ ಪದಕ ಗೆದ್ದ ದೀಪಕ್ ಪುನಿಯಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಆರು ದಶಕಗಳ ನಂತರ, ಏಷ್ಯನ್ ಗೇಮ್ಸ್ ನಲ್ಲಿ ಪುರುಷರ 97 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಮತ್ತೆ ವೇದಿಕೆಗೆ ಮರಳಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ದೀಪಕ್ ಪೂನಿಯಾ ಅವರ ಸಾಧನೆಯು ಭಾರತದ ಕುಸ್ತಿ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರ ಕಾರ್ಯಾಲಯ;
"ಆರು ದಶಕಗಳ ನಂತರ, ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ 97 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಮತ್ತೆ ವೇದಿಕೆಗೆ ಮರಳಿದೆ!
ತೀವ್ರ ಪೈಪೋಟಿಯ ನಂತರ ದೀಪಕ್ ಪೂನಿಯಾ ಅವರು ಕಂಚಿನ ಪದಕವನ್ನು ಮನೆಗೆ ತಂದಿದ್ದು, ಭಾರತದ ಕುಸ್ತಿ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಸಾಧಿಸಲಿ: ಪ್ರಧಾನಮಂತ್ರಿ @narendramodi" ಎಂದು ಹೇಳಿದ್ದಾರೆ.
******
(ಪ್ರಕಟಣೆ ಐ.ಡಿ.: 2319093)
ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam