ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಸೆಪ್ಟೆಂಬರ್ 25, 2026 ರಂದು ಐ ಐ ಎಸ್ ಸಿ (IISc) ಬೆಂಗಳೂರಿನಲ್ಲಿ ಆಯಕಟ್ಟಿನ ಸಂಸ್ಥೆಗಳ ಸಹಭಾಗಿತ್ವದ ಮೂಲಕ ತನ್ನ ಮೂಲಸೌಕರ್ಯ, ಉದ್ಯಮಶೀಲತೆ ಮತ್ತು ಮೇಲ್ವಿಚಾರಣಾ ಅಭಿಯಾನವನ್ನು ಬಲಪಡಿಸಿದೆ


ಅಲ್ಪಸಂಖ್ಯಾತ ಸಮುದಾಯಗಳಿಗೆ ಗುಣಮಟ್ಟ ಮೌಲ್ಯಮಾಪನ, ಸ್ವತಂತ್ರ ಮೇಲ್ವಿಚಾರಣೆ, ಉದ್ಯಮಶೀಲತೆ, ನಾವೀನ್ಯತೆ ಮತ್ತು ಆರ್ಥಿಕ ಅವಕಾಶಗಳನ್ನು ಬಲಪಡಿಸಲು CUBE, IIT ಮದ್ರಾಸ್, IISc-FSID, IIM ಬೆಂಗಳೂರು ಮತ್ತು IIMB ಇನ್ನೋವೇಶನ್ಸ್‌ನೊಂದಿಗೆ ಸಹಯೋಗಗಳು

ಪ್ರಕಟಣಾ ದಿನಾಂಕ: 25 SEP 2026 6:26PM by PIB Bengaluru

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡಾ. ಶ್ರೀವತ್ಸ ಕೃಷ್ಣ ಮತ್ತು ಸಚಿವಾಲಯ ಹಾಗೂ ಸಂಸ್ಥೆಗಳ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಭಾರತ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು, 25 ಸೆಪ್ಟೆಂಬರ್ 2026 ರಂದು ಐ ಐ ಎಸ್ ಸಿ (IISc) ಬೆಂಗಳೂರಿನಲ್ಲಿ ಪ್ರಮುಖ ಶೈಕ್ಷಣಿಕ, ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಥೆಗಳೊಂದಿಗೆ ಹಲವಾರು ತಿಳುವಳಿಕಾ ಒಪ್ಪಂದಗಳಿಗೆ (MoUs) ಸಹಿ ಹಾಕಿತು. ಇವುಗಳ ಮೂಲಕ, ಸಚಿವಾಲಯವು ಮೂಲಸೌಕರ್ಯ ಗುಣಮಟ್ಟ, ಸ್ವತಂತ್ರ ಮೇಲ್ವಿಚಾರಣೆ, ಉದ್ಯಮಶೀಲತೆ, ನಾವೀನ್ಯತೆ, ಕೌಶಲ್ಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸುಸ್ಥಿರ ಆರ್ಥಿಕ ಅವಕಾಶಗಳ ಮೇಲೆ ಗಮನ ಹರಿಸುವುದರೊಂದಿಗೆ ಸಚಿವಾಲಯದ ಪ್ರಮುಖ ಉಪಕ್ರಮಗಳ ಅನುಷ್ಠಾನ ಮತ್ತು ಪ್ರಭಾವವನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಈ ಸಹಯೋಗಗಳು ಐಐಟಿ ಮದ್ರಾಸ್‌ನ ಸೆಂಟರ್ ಫಾರ್ ಅರ್ಬನೈಸೇಶನ್, ಬಿಲ್ಡಿಂಗ್ಸ್ & ಎನ್ವಿರಾನ್‌ಮೆಂಟ್ (CUBE); ಐಐಎಸ್ಸಿ ಬೆಂಗಳೂರಿನ ಫೌಂಡೇಶನ್ ಫಾರ್ ಸೈನ್ಸ್ ಇನ್ನೋವೇಶನ್ ಅಂಡ್ ಡೆವಲಪ್‌ಮೆಂಟ್ (FSID); ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM ಬೆಂಗಳೂರು); ಮತ್ತು IIMB ಇನ್ನೋವೇಶನ್ಸ್ (NSRCEL) ಸಂಸ್ಥೆಗಳ ಸಾಂಸ್ಥಿಕ ಶಕ್ತಿಗಳನ್ನು ಒಂದೆಡೆ ತರುತ್ತವೆ.

ಈ ಸಹಭಾಗಿತ್ವಗಳು ಸಚಿವಾಲಯಕ್ಕೆ ವಿಶೇಷ ತಾಂತ್ರಿಕ ಮತ್ತು ಶೈಕ್ಷಣಿಕ ಪರಿಣತಿಯನ್ನು ಪಡೆಯಲು, ಆಧಾರ-ಸಹಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಬಲಪಡಿಸಲು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥೆಗಳನ್ನು ಸುಧಾರಿಸಲು, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸಲು ಹಾಗೂ ಸಾಮರ್ಥ್ಯ ವರ್ಧನೆ ಮತ್ತು ಉದ್ಯಮ ಅಭಿವೃದ್ಧಿಗೆ ಬಲವಾದ ಸಾಂಸ್ಥಿಕ ಮಾರ್ಗಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತವೆ.

ಪಿಎಂ ವಿಕಾಸ್ (PM VIKAS) ತರಬೇತಿಯ ಸ್ವತಂತ್ರ ತೃತೀಯ ಪಕ್ಷದ ಮೇಲ್ವಿಚಾರಣೆ

ಪ್ರಧಾನಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) ಯೋಜನೆಯಡಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವ ಯತ್ನದಲ್ಲಿ, ಭಾರತ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ದಕ್ಷಿಣ ವಲಯದಾದ್ಯಂತ ಪಿಎಂ ವಿಕಾಸ್ ತರಬೇತಿಯ ಸ್ವತಂತ್ರ ತೃತೀಯ ಪಕ್ಷದ ಮೇಲ್ವಿಚಾರಣೆಗಾಗಿ (independent third-party monitoring) ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಸಹಭಾಗಿತ್ವದ ಅಡಿಯಲ್ಲಿ, ಐಐಎಂಬಿ (IIMB) ಕ್ಷೇತ್ರ ಮಟ್ಟದ ತಪಾಸಣೆಗಳು ಮತ್ತು ಸಮಕಾಲೀನ ಮೇಲ್ವಿಚಾರಣೆಯನ್ನು ನಡೆಸಲಿದ್ದು, ಸ್ಥಳದಲ್ಲೇ ಪರಿಶೀಲನೆ ಮತ್ತು ಭಾಗಿದಾರರ ಸಮಾಲೋಚನೆಗಳ ಮೂಲಕ ತರಬೇತಿ ವಿತರಣೆ, ಮೂಲಸೌಕರ್ಯ, ಫಲಾನುಭವಿಗಳು ಮತ್ತು ತರಬೇತುದಾರರ ಭಾಗಿತ್ವ, ಹಾಜರಾತಿ, ಪ್ರಮಾಣೀಕರಣ ಮತ್ತು ಉದ್ಯೋಗ ನಿಯೋಜನೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುತ್ತದೆ.

ಈ ಸಹಭಾಗಿತ್ವದ ಮೂಲಕ ಉತ್ಪತ್ತಿಯಾಗುವ ಸಾಕ್ಷ್ಯಾಧಾರಿತ ಒಳನೋಟಗಳು ಸಚಿವಾಲಯಕ್ಕೆ ಅನುಷ್ಠಾನದ ಗುಣಮಟ್ಟವನ್ನು ಬಲಪಡಿಸಲು, ನ್ಯೂನತೆಗಳನ್ನು ಗುರುತಿಸಿ ಬಗೆಹರಿಸಲು, ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ಪಿಎಂ ವಿಕಾಸ್ ಅಡಿಯಲ್ಲಿ ಫಲಿತಾಂಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಪಿಎಂಜೆವಿಕೆ (PMJVK) ಮೂಲಸೌಕರ್ಯ ಯೋಜನೆಗಳ ಸ್ವತಂತ್ರ ತೃತೀಯ ಪಕ್ಷದ ಮೌಲ್ಯಮಾಪನ

ಪ್ರಧಾನಮಂತ್ರಿ ಜನ್ ವಿಕಾಸ್ ಕಾರ್ಯಕ್ರಮದ (PMJVK) ಅಡಿಯಲ್ಲಿ ಮೂಲಸೌಕರ್ಯ ಯೋಜನೆಗಳ ಸ್ವತಂತ್ರ ತೃತೀಯ ಪಕ್ಷದ ಗುಣಮಟ್ಟದ (ತಾಂತ್ರಿಕ ಮತ್ತು ಸಾಮಾಜಿಕ) ಮೌಲ್ಯಮಾಪನಕ್ಕಾಗಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಕ್ಯೂಬ್ (CUBE), ಐಐಟಿ ಮದ್ರಾಸ್‌ನೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಮೌಲ್ಯಮಾಪನವು ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಲಯಗಳಾದ್ಯಂತ ಪೂರ್ಣಗೊಂಡ ಮತ್ತು ಪ್ರಸ್ತುತ ನಡೆಯುತ್ತಿರುವ ಆಯ್ಕೆಮಾಡಿದ ಪಿಎಂಜೆವಿಕೆ ಯೋಜನೆಗಳನ್ನು ಒಳಗೊಳ್ಳುತ್ತದೆ. ಇದು ಮೂಲಸೌಕರ್ಯ ಗುಣಮಟ್ಟ, ಕ್ರಿಯಾತ್ಮಕತೆ, ಪ್ರವೇಶಿಸುವಿಕೆ, ಬಳಕೆ, ನಿರ್ವಹಣೆ ಮತ್ತು ಸುಸ್ಥಿರತೆ ಸೇರಿದಂತೆ ಪ್ರಮುಖ ನಿಯತಾಂಕಗಳ ಮೇಲೆ ಗಮನ ಹರಿಸುತ್ತದೆ.

ಈ ಸಹಭಾಗಿತ್ವವು ಸಚಿವಾಲಯಕ್ಕೆ ಸ್ವತಂತ್ರ, ಆಧಾರ-ಸಹಿತ ಮೌಲ್ಯಮಾಪನಗಳು ಮತ್ತು ಕಾರ್ಯಸಾಧ್ಯವಾದ ಶಿಫಾರಸುಗಳನ್ನು ಒದಗಿಸುತ್ತದೆ, ಇದು ಉತ್ತಮ ಆಸ್ತಿ ನಿರ್ವಹಣೆ, ಅನುಷ್ಠಾನದ ನ್ಯೂನತೆಗಳ ಗುರುತಿಸುವಿಕೆ ಮತ್ತು ಭವಿಷ್ಯದ ಪಿಎಂಜೆವಿಕೆ ಯೋಜನೆಗಳಿಗೆ ಹೆಚ್ಚು ವಿವರವಾದ ಯೋಜನೆಯನ್ನು ಸಕ್ರಿಯಗೊಳಿಸುತ್ತದೆ. ಇದು ಮೂಲಸೌಕರ್ಯ ಆಸ್ತಿಗಳ ಕ್ರಿಯಾತ್ಮಕತೆ ಮತ್ತು ಬಳಕೆಯ ತಿಳುವಳಿಕೆಯನ್ನು ಆಳವಾಗಿಸುತ್ತದೆ ಮತ್ತು ಹೆಚ್ಚು ಸುಸ್ಥಿರ ಫಲಿತಾಂಶಗಳಿಗೆ ಕೊಡುಗೆ ನೀಡುತ್ತದೆ.

ಉದ್ಯಮಶೀಲತೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಿಗೆ ಪುಷ್ಟಿ ನೀಡುವುದು

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (NMDFC) ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರು ಪ್ರವರ್ತಿತ ಫೌಂಡೇಶನ್ ಫಾರ್ ಸೈನ್ಸ್ ಇನ್ನೋವೇಶನ್ ಅಂಡ್ ಡೆವಲಪ್‌ಮೆಂಟ್ (FSID) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಉದ್ಯಮಶೀಲತೆ ಮತ್ತು ಇನ್ಕ್ಯುಬೇಷನ್ ಕೇಂದ್ರವಾದ (incubation centre) IIMB ಇನ್ನೋವೇಶನ್ಸ್ (NSRCEL) ನಡುವೆ ಸಹಿ ಹಾಕಲಾದ ಎರಡು ತ್ರಿಪಕ್ಷೀಯ ತಿಳುವಳಿಕಾ ಒಪ್ಪಂದಗಳು, ನವೋದ್ಯಮ (startup) ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರದ ಚೌಕಟ್ಟನ್ನು ಸ್ಥಾಪಿಸುತ್ತವೆ.

ಐಐಎಸ್ಸಿ ಬೆಂಗಳೂರಿನ ಎಫ್‌ಎಸ್‌ಐಡಿ (FSID) ಜೊತೆಗಿನ ಸಹಯೋಗವು ನವೋದ್ಯಮ ಪರಿಸರ ವ್ಯವಸ್ಥೆಯ ಅಭಿವೃದ್ಧಿ, ನಾವೀನ್ಯತೆ ಪ್ರೋತ್ಸಾಹ ಮತ್ತು ತಂತ್ರಜ್ಞಾನ ನಗದೀಕರಣ (technology commercialisation), ಜೊತೆಗೆ ದತ್ತಾಂಶ ಆಡಳಿತ, ಡಿಜಿಟಲ್ ರೂಪಾಂತರ ಮತ್ತು ಸಾರ್ವಜನಿಕ ಹಿತಾಸಕ್ತಿ ತಂತ್ರಜ್ಞಾನದ ಮೇಲೆ ಗಮನ ಹರಿಸುತ್ತದೆ.

IIMB ಇನ್ನೋವೇಶನ್ಸ್ (NSRCEL) ಜೊತೆಗಿನ ತಿಳುವಳಿಕಾ ಒಪ್ಪಂದವು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಜೊತೆಗೆ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆ ಪ್ರೋತ್ಸಾಹ, ಸಂಶೋಧನಾ ಅಧ್ಯಯನಗಳು, ನೀತಿ ಬೆಂಬಲ ಮತ್ತು ಆಧಾರ-ಸಹಿತ ನಿರ್ಧಾರ ಕೈಗೊಳ್ಳುವಿಕೆಯ ಮೇಲೆ ಗಮನ ಹರಿಸುತ್ತದೆ.

ಪ್ರಧಾನಮಂತ್ರಿ ಅಲ್ಪಸಂಖ್ಯಾತ ವೆಂಚರ್ ಫಂಡ್ (PM-MVF) ಚೌಕಟ್ಟಿನ ಅಡಿಯಲ್ಲಿ, ಈ ಸಹಯೋಗಗಳು ಉದ್ಯಮಶೀಲತೆ ಜಾಗೃತಿ ಮತ್ತು ಸಾಮರ್ಥ್ಯ-ವರ್ಧನೆ ಕಾರ್ಯಕ್ರಮಗಳು, ನಾವೀನ್ಯತೆ ಸವಾಲುಗಳು ಮತ್ತು ನವೋದ್ಯಮಗಳ ಗುರುತಿಸುವಿಕೆ, ಕಾವು ನೀಡುವಿಕೆ (incubation) ಮತ್ತು ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕ, ಮಾರುಕಟ್ಟೆ ಪ್ರವೇಶ ಮತ್ತು ಉದ್ಯಮ ಅಭಿವೃದ್ಧಿಯನ್ನು ಪರಿಭಾವಿಸುತ್ತವೆ. ಇವು ಅಳೆಯಬಹುದಾದ, ಸುಸ್ಥಿರ ಮತ್ತು ನಾವೀನ್ಯತೆ-ಾಲಿತ ಉದ್ಯಮಗಳನ್ನು ಅಭಿವೃದ್ಧಿಪಡಿಸುವ ಗಮನದೊಂದಿಗೆ ಜ್ಞಾನ ಜಾಲಗಳು, ಸಾಂಸ್ಥಿಕ ಬೆಂಬಲ, ಉದ್ಯಮ ಸಂಪರ್ಕಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳ ಪ್ರವೇಶವನ್ನು ಒದಗಿಸುತ್ತವೆ.

ಈ ಎರಡು ಸಹಯೋಗಗಳು ಆಳ-ವಿಜ್ಞಾನ (deep-science) ಮತ್ತು ಆಳ-ತಂತ್ರಜ್ಞಾನದ ಇನ್ಕ್ಯುಬೇಷನ್, ತಂತ್ರಜ್ಞಾನ ನಗದೀಕರಣ ಮತ್ತು ನಾವೀನ್ಯತೆ ಪ್ರೋತ್ಸಾಹದಲ್ಲಿ IISc-FSID ಯ ಪೂರಕ ಶಕ್ತಿಗಳನ್ನು ಹಾಗೂ ಉದ್ಯಮಶೀಲತೆ, ಇನ್ಕ್ಯುಬೇಷನ್, ಮಾರುಕಟ್ಟೆ-ಆಧಾರಿತ ಅವಕಾಶಗಳು ಮತ್ತು ಫಿನ್‌ಟೆಕ್‌ನಲ್ಲಿ IIMB-NSRCEL ನ ಶಕ್ತಿಗಳನ್ನು ಒಂದೆಡೆ ತರುತ್ತವೆ. ಒಟ್ಟಾಗಿ, ಇವು ಅಲ್ಪಸಂಖ್ಯಾತ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ನವೋದ್ಯಮ ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಗಳಿಗೆ ಅವರ ಪ್ರವೇಶವನ್ನು ಬಲಪಡಿಸಲು ಶ್ರಮಿಸುತ್ತವೆ.

ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಸಹಯೋಗದ ವಿಧಾನ

ಈ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿರುವುದು ತಾಂತ್ರಿಕ ಪರಿಣತಿ, ಶೈಕ್ಷಣಿಕ ಜ್ಞಾನ, ಸಂಶೋಧನಾ ಸಾಮರ್ಥ್ಯಗಳು ಮತ್ತು ಸ್ಥಾಪಿತ ಉದ್ಯಮಶೀಲತೆ ಪರಿಸರ ವ್ಯವಸ್ಥೆಗಳನ್ನು ಒಂದೆಡೆ ತರುವ ಮೂಲಕ ಸಚಿವಾಲಯದ ಉಪಕ್ರಮಗಳ ಪ್ರಭಾವವನ್ನು ಬಲಪಡಿಸುವ ಸಹಯೋಗದ ವಿಧಾನವನ್ನು ಪ್ರತಿನಿಧಿಸುತ್ತದೆ.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಶ್ರೀವತ್ಸ ಕೃಷ್ಣ ಅವರು, “ಸರ್ಕಾರದ ಗಮನವು ಉದ್ಯಮಶೀಲತೆಯ ಮೂಲಕ ಉದ್ಯೋಗವನ್ನು ಸಕ್ರಿಯಗೊಳಿಸುವ 'EEE' (Employment through Entrepreneurship) ಮೇಲಿದೆ. ದೇಶದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಾದ:

- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು

- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನ 'ಕ್ಯೂಬ್' (CUBE)

ಜೊತೆಗಿನ ತಿಳುವಳಿಕಾ ಒಪ್ಪಂದಗಳ ಪ್ರಮುಖ ಉದ್ದೇಶವೆಂದರೆ ಈ ಮಿಷನ್ ಅನ್ನು ಸಾಕಾರಗೊಳಿಸಲು ಅವರ ಪರಿಣತಿಯನ್ನು ಒಗ್ಗೂಡಿಸುವುದು ಮತ್ತು ಸಂಯೋಜಿಸುವುದಾಗಿದೆ.

ಉದ್ಯಮಶೀಲತೆಯ ಮೂಲಕ ಉದ್ಯೋಗವನ್ನು ಸೃಷ್ಟಿಸಬಲ್ಲ ನವೋದ್ಯಮಗಳನ್ನು ಆಯ್ಕೆ ಮಾಡುವುದು, ಸಿದ್ಧಪಡಿಸುವುದು ಮತ್ತು ನಿಧಿ ಒದಗಿಸುವುದು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ನಿರ್ಮಿಸಲಾದ ಆಸ್ತಿಗಳ ಗುಣಮಟ್ಟ ಮತ್ತು ಅವುಗಳ ಬಳಕೆ ಅತ್ಯುತ್ತಮ ಮಟ್ಟದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಂತಿಮ ಗುರಿಯಾಗಿದೆ," ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಐಐಎಂ ಬೆಂಗಳೂರಿನ ಉಸ್ತುವಾರಿ ನಿರ್ದೇಶಕರಾದ ಪ್ರೊಫೆಸರ್ ಯು. ದಿನೇಶ್ ಕುಮಾರ್ ಅವರು, “ಐಐಎಂಬಿ (IIMB) ಇಂತಹ ಶ್ರಮಗಳ ಮೂಲಕ ತನ್ನ ಮೇಲೆ ಇರಿಸಲಾದ ಜವಾಬ್ದಾರಿಯನ್ನು ಗೌರವಿಸುತ್ತದೆ, ವಿಶೇಷವಾಗಿ ತನ್ನ ಪರಿಣತಿಯು ಸಾರ್ವಜನಿಕ ಕಾರ್ಯಕ್ರಮಗಳನ್ನು ಮತ್ತು ಅವುಗಳ ಫಲಿತಾಂಶಗಳನ್ನು ಬಲಪಡಿಸಲು ಸಹಾಯ ಮಾಡುವ ಸ್ಥಳಗಳಲ್ಲಿ ಇದು ಮುಖ್ಯವಾಗಿದೆ. ನೆಲಮಟ್ಟದಲ್ಲಿ ಪ್ರಭಾವ ಬೀರಲು 25 ಕ್ಕೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿರುವ ನಮ್ಮ ಎರಡೂ ಶ್ರೇಷ್ಠತಾ ಕೇಂದ್ರಗಳ (Centres of Excellence) ಮೂಲಕ, ಅಲ್ಪಸಂಖ್ಯಾತ ಸಮುದಾಯಗಳಿಗೆ ಅವಕಾಶಗಳನ್ನು ವಿಸ್ತರಿಸುವ ಹಾಗೂ ಉದ್ಯಮಕ್ಕೆ ಮಾರ್ಗಗಳನ್ನು ಸಕ್ರಿಯಗೊಳಿಸುವ ಉಪಕ್ರಮಗಳಿಗೆ ನಮ್ಮ ತಿಳುವಳಿಕೆ, ಜ್ಞಾನ ಮತ್ತು ಸಾಮರ್ಥ್ಯಗಳನ್ನು ತರಲು ನಾವು ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.

ಐಐಟಿ ಮದ್ರಾಸ್‌ನ 'ಕ್ಯೂಬ್' (CUBE) ಜೊತೆಗಿನ ಸಹಭಾಗಿತ್ವವು ಪಿಎಂಜೆವಿಕೆ (PMJVK) ಮೂಲಸೌಕರ್ಯದ ಸ್ವತಂತ್ರ ಮೌಲ್ಯಮಾಪನ ಮತ್ತು ಆಧಾರ-ಸಹಿತ ಸುಧಾರಣೆಯನ್ನು ಬಲಪಡಿಸಿದರೆ, ಐಐಎಂ ಬೆಂಗಳೂರು, ಐಐಎಸ್ಸಿ-ಎಫ್‌ಎಸ್‌ಐಡಿ (IISc-FSID) ಮತ್ತು IIMB ಇನ್ನೋವೇಶನ್ಸ್ (NSRCEL) ಜೊತೆಗಿನ ಸಹಯೋಗಗಳು ಉದ್ಯಮಶೀಲತೆ, ನಾವೀನ್ಯತೆ, ಇನ್ಕ್ಯುಬೇಷನ್, ಕೌಶಲ್ಯ ಮತ್ತು ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ ಮಾರ್ಗಗಳನ್ನು ಸೃಷ್ಟಿಸುತ್ತವೆ.

ಈ ಸಹಭಾಗಿತ್ವಗಳ ಮೂಲಕ, ಸಚಿವಾಲಯವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸುಸ್ಥಿರ ಆರ್ಥಿಕ ಅವಕಾಶಗಳನ್ನು ಬೆಂಬಲಿಸುವ ಸೂಕ್ತ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವ ಜೊತೆಗೆ, ಗುಣಮಟ್ಟದ ಮೌಲ್ಯಮಾಪನ, ಸ್ವತಂತ್ರ ಮೇಲ್ವಿಚಾರಣೆ, ದತ್ತಾಂಶ-ಾಲಿತ ನಿರ್ಧಾರ ಕೈಗೊಳ್ಳುವಿಕೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯಮ ಅಭಿವೃದ್ಧಿಗಾಗಿ ತನ್ನ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಮತ್ತೊಂದು ಧನಾತ್ಮಕ ಹೆಜ್ಜೆಯನ್ನು ಇಟ್ಟಿದೆ.


*****


(ಪ್ರಕಟಣೆ ಐ.ಡಿ.: 2315113) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी